Tag: ಜಪಾನ್

  • ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಬಲಪಂಥೀಯ ನಾಯಕಿ ಸನೆ ತಾಕೈಚಿ ಆಯ್ಕೆ

    ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಬಲಪಂಥೀಯ ನಾಯಕಿ ಸನೆ ತಾಕೈಚಿ ಆಯ್ಕೆ

    ಟೋಕಿಯೊ: ಜಪಾನ್ ಇತಿಹಾಸದಲ್ಲಿ ಮೊದಲ ಬಾರಿ ಮಹಿಳೆಯೊಬ್ಬರು ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ. ಬಲಪಂಥೀಯ ನಾಯಕಿ ಸನೆ ತಾಕೈಚಿ (Sanae Takaichi) ಜಪಾನಿನ (Japan) ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

    ಆಡಳಿತರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ (LDP) ಕಟ್ಟಾ ಸಂಪ್ರದಾಯವಾದಿಯಾಗಿರುವ 64 ವರ್ಷದ ಸನೆ ತಾಕೈಚಿ ಅವರನ್ನು ಪ್ರಧಾನಿಯನ್ನಾಗಿ ಸಂಸತ್ತು ಆಯ್ಕೆ ಮಾಡಿದೆ.

    ಶಿಂಜೊ ಅಬೆ ಅವರ ಶಿಷ್ಯೆಯಾಗಿದ್ದ ತಕೈಚಿ, ಅಬೆ ಅವರ ಪ್ರಧಾನಿ ಅವಧಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಅಕ್ಟೋಬರ್‌ 4ರಂದು ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸನೆ ತಾಕೈಚಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ದೇಶದ ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯ್ಚುಮಿ ಅವರ ಪುತ್ರ ಹಾಗೂ ಕೃಷಿ ಸಚಿವ ಶಿಂಜಿರೊ ಕೊಯ್ಚುಮಿ ಅವರನ್ನು ಸನೆ ಸೋಲಿಸಿದ್ದರು.

    ಜಪಾನ್ ಮೊದಲು ವಿದೇಶಾಂಗ ನೀತಿಯನ್ನು ಪ್ರತಿಪಾದಿಸುತ್ತಿರುವ ಇವರು ಅಮೆರಿಕದ ವ್ಯಾಪಾರ ನಿಯಮಗಳನ್ನು ಟೀಕಿಸಿದ್ದರು. ತೈವಾನ್ ಪರ ಒಲವು ಹೊಂದಿರುವ ಇವರು ಚೀನಾದ ಗಿಡುಗ ಎಂದು ಪ್ರಖ್ಯಾತಿ ಪಡೆದಿದ್ದಾರೆ.

    ತಮ್ಮ ಪ್ರಚಾರ ಭಾಷಣದಲ್ಲಿ ಇಸ್ಲಾಮಿಸ್ಟ್‌ಗಳು ಅಥವಾ ಅಕ್ರಮ ವಲಸಿಗರನ್ನು ಜಪಾನ್‌ ಸ್ವೀಕರಿಸುವುದಿಲ್ಲ. ಜಪಾನ್‌ ದೇಶವಾಗಿ ಉಳಿಯಬೇಕಾದರೆ ನಕಲಿ ನಿರಾಶ್ರಿತರನ್ನು ಹೊರಗೆ ಕಳುಹಿಸಬೇಕು ಗುಡುಗಿದ್ದರು.

    ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸನೆ ತಾಕೈಚಿ ದೂರದರ್ಶನ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಸಲಿಂಗ ವಿವಾಹ ಮತ್ತು ವಿವಾಹಿತ ದಂಪತಿಗಳಿಗೆ ಪ್ರತ್ಯೇಕ ಉಪನಾಮಗಳನ್ನು ನೀಡುವುದಕ್ಕೆ ದೀರ್ಘಕಾಲೀನ ವಿರೋಧಿಯಾಗಿದ್ದಾರೆ.

    ಸನೆ ತಾಕೈಚಿ ಅಯ್ಕೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

  • ಕೊಪ್ಪಳದಲ್ಲಿ 2,345 ಕೋಟಿ ವೆಚ್ಚದ ಉಕ್ಕು ಘಟಕ ಸ್ಥಾಪನೆ

    ಕೊಪ್ಪಳದಲ್ಲಿ 2,345 ಕೋಟಿ ವೆಚ್ಚದ ಉಕ್ಕು ಘಟಕ ಸ್ಥಾಪನೆ

    ಕೊಪ್ಪಳ: ಬಜಾಜ್ ಗ್ರೂಪ್ ಜೊತೆಗಿನ ಸಹಭಾಗಿತ್ವದ ಮುಕಂದ ಸುಮಿ ಕಂಪನಿ ಮೂಲಕ ಕೊಪ್ಪಳದಲ್ಲಿನ (Koppal) ಉಕ್ಕು ತಯಾರಿಕಾ ಘಟಕದಲ್ಲಿ 2,345 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದನ್ನು ಸುಮಿಟೊಮೊ ಖಚಿತಪಡಿಸಿದೆ.

    ಈ ಕುರಿತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಮಾಹಿತಿ ನೀಡಿದ್ದು, ಈ ಘಟಕವು 2028ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ವಾರ್ಷಿಕ 3,50,000 ಟನ್‌ಗಳಷ್ಟು ಕಬ್ಬಿಣ, ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದೆ. ಶೀಘ್ರದಲ್ಲಿಯೇ ರಾಜ್ಯದಲ್ಲಿ ಬಯೊಮಾಸ್ ಘಟಕವನ್ನು ಸ್ಥಾಪಿಸುವ ಬಗ್ಗೆಯೂ ಸುಮಿಟೊಮೊ ಆಸಕ್ತಿ ವ್ಯಕ್ತಪಡಿಸಿದೆ ಎಂದು ಸಚಿವರು ವಿವರಿಸಿದ್ದಾರೆ.ಇದನ್ನೂ ಓದಿ: Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

    ಬೆಂಗಳೂರಿನಲ್ಲಿ ತನ್ನ ಮೋಷನ್ ಕಂಟ್ರೋಲ್ ಮತ್ತು ವೇರಿಯೇಬಲ್ ಫ್ರಿಕ್ವೆನ್ಸಿ ಡ್ರೈವ್ಸ್ ಘಟಕ ಸ್ಥಾಪಿಸುವ ಸಂಬಂಧದ ಬಂಡವಾಳ ಹೂಡಿಕೆಯನ್ನು ಯಸ್ಕಾವಾ ಕಂಪನಿಯು ರಾಜ್ಯದ ನಿಯೋಗಕ್ಕೆ ಖಚಿತಪಡಿಸಿದೆ. ಇದು ಅತ್ಯಾಧುನಿಕ ತಯಾರಿಕಾ ತಂತ್ರಜ್ಞಾನದ ಕೇಂದ್ರವಾಗಿ ಬೆಳೆಯುವ ಮೂಲಕ ಕರ್ನಾಟಕದ ಸ್ಥಾನವನ್ನು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ.

    ಪಾಲುದಾರಿಕೆಯಡಿ ಹುಬ್ಬಳ್ಳಿಯಲ್ಲಿರುವ ಪ್ರತಿಷ್ಠಿತ ಎನ್‌ಜಿಇಎಫ್ ಕಾರ್ಖಾನೆ ಪುನ:ಶ್ಚೇತನದ ಸಾಧ್ಯತೆಗಳ ಕುರಿತು ಜಪಾನಿನ ಜೆಎಫ್‌ಇ ಷೋಜಿ ಕಂಪನಿ ಜೊತೆ ಸಚಿವರು ಮಾತುಕತೆ ನಡೆಸಿದ್ದು, ಕಾರ್ಖಾನೆಗೆ ಆಹ್ವಾನ ನೀಡಿದ್ದಾರೆ.

    ಬಂಡವಾಳ ಹೂಡಿಕೆ ಆಕರ್ಷಿಸಲು ಜಪಾನ್‌ಗೆ ಭೇಟಿ ನೀಡಿರುವ ರಾಜ್ಯ ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿರುವ ಸಚಿವರು, ಕಂಪನಿಯ ಉನ್ನತಾಧಿಕಾರಿಗಳ ಜೊತೆ ಬುಧವಾರ (ಸೆ.10) ನಡೆದ ಸಭೆಯಲ್ಲಿ ಹುಬ್ಬಳ್ಳಿ ಎನ್‌ಜಿಇಎಫ್ ಪುನಶ್ಚೇತನದ ಪ್ರಸ್ತಾವ ಮುಂದಿಟ್ಟಿದ್ದಾರೆ. ವಿದ್ಯುತ್ ಪರಿವರ್ತಕಗಳ ತಯಾರಿಕೆಯಲ್ಲಿ ಜೆಎಫ್‌ಇ ಮುಂಚೂಣಿಯಲ್ಲಿದೆ. ಹುಬ್ಬಳ್ಳಿಯಲ್ಲಿ ಇರುವ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿರುವ ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿಯನ್ನು (ಎನ್‌ಜಿಇಎಫ್) ರಾಜ್ಯ ಸರ್ಕಾರದ ಪಾಲುದಾರಿಕೆಯಡಿ ಪುನಶ್ಚೇತನಗೊಳಿಸುವ ಸಂಬಂಧ ಪೂರ್ವಭಾವಿ ಮಾತುಕತೆ ನಡೆಸಲು ಕಂಪನಿಯ ಉನ್ನತಾಧಿಕಾರಿಗಳು ಹುಬ್ಬಳ್ಳಿಯ ಘಟಕಕ್ಕೆ ಭೇಟಿ ನೀಡಲು ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಚಿವರ ಜೊತೆಗಿನ ಸಭೆಯಲ್ಲಿ ಕಂಪನಿಯ ಜೆಎಫ್‌ಇ ಷೋಜಿ ಕಂಪನಿಯ ಯಂತ್ರೋಪಕರಣಗಳ ವಿಭಾಗದ ಜನರಲ್ ಮ್ಯಾನೇಜರ್ ಹಿರೋಶಿ ಲಿಜಿಮಾ, ಎಲೆಕ್ಟ್ರಿಕಲ್ ಅಪ್ಲೈಯನ್ಸಸ್ ಸ್ಟೀಲ್ ಪ್ಲ್ಯಾನಿಂಗ್ ವಿಭಾಗದ ಮ್ಯಾನೇಜರ್ ಹಿಡೆಕಸು ಯೋಶಿಒಕೊ ಮತ್ತಿತರರು ಭಾಗವಹಿಸಿದ್ದರು. ಇದನ್ನೂ ಓದಿ: ಪ್ರತಾಪ್ ತಂದೆ-ತಾಯಿ ದೈವ ಭಕ್ತರಿರಬೇಕು, ಇಲ್ಲಂದ್ರೆ ಕೋತಿ ಅಂತ ಹೆಸರಿಡ್ತಿದ್ರು: ಪ್ರದೀಪ್ ಈಶ್ವರ್

    ಜಪಾನ್ ಭೇಟಿಯ ಮೂರನೇ ದಿನ, ರಾಜ್ಯದ ನಿಯೋಗವು ಸುಮಿಟೊಮೊ, ಯಸ್ಕಾವಾ, ಜೆಎಫ್‌ಇ ಶೋಜಿ ಕಂಪನಿಗಳ ಉನ್ನತಾಧಿಕಾರಿಗಳ ಜೊತೆ ಮಾತುಕತೆ ನಡೆಸಿತು. ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ (ಬಿಇವಿ) ಮತ್ತು ವಿದ್ಯುತ್ ಚಾಲಿತ ವಾಹನಗಳ (ಇವಿ) ತಯಾರಿಕೆಯಲ್ಲಿ ಬಳಸಲಾಗುವ ಮೋಟರ್ ಕೋರ್ಸ್ ತಯಾರಿಸುವ 400 ಕೋಟಿ ರೂ. ವೆಚ್ಚದ ಯೋಜನೆಯು ಶೀಘ್ರದಲ್ಲಿಯೇ ಕಾರ್ಯಗತಗೊಳ್ಳಲಿದೆ ಎಂದು ಕಂಪನಿಯು ರಾಜ್ಯದ ನಿಯೋಗಕ್ಕೆ ಭರವಸೆ ನೀಡಿದೆ.

    ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ, ಮತ್ತಿತರರು ಇದ್ದರು.ಇದನ್ನೂ ಓದಿ: ಐಫೋನ್‌ 17 ಬಿಡುಗಡೆ – ಯಾವ ದೇಶದಲ್ಲಿ ಎಷ್ಟು ದರ? ಕಡಿಮೆ ದರ ಎಲ್ಲಿ?

  • Blood Moon Photo Gallery | ವಿದೇಶಗಳಲ್ಲೂ ರಕ್ತಚಂದ್ರನ ಚಮತ್ಕಾರ – ನೀವೂ ಕಣ್ತುಂಬಿಕೊಳ್ಳಿ

    Blood Moon Photo Gallery | ವಿದೇಶಗಳಲ್ಲೂ ರಕ್ತಚಂದ್ರನ ಚಮತ್ಕಾರ – ನೀವೂ ಕಣ್ತುಂಬಿಕೊಳ್ಳಿ

    ಬೆಂಗಳೂರು: ಭಾರತ ಸೇರಿದಂತೆ ವಿಶ್ವದ ಕೋಟ್ಯಂತರ ಜನ ನಭೋಮಂಡಲದ ಕೌತುಕ ಕಣ್ತುಂಬಿಕೊಂಡಿದ್ದಾರೆ. ಈ ವರ್ಷದ ಕೊನೆಯ ಚಂದ್ರಗ್ರಹಣ ಹಾಗೂ 2ನೇ ರಕ್ತಚಂದ್ರ ಗ್ರಹಣ ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ. ರಾತ್ರಿ 9:57ರಿಂದ ಗ್ರಹಣ ಪ್ರಕ್ರಿಯೆ ಶುರುವಾಗಿದೆ. ಮೊದಲು ಬಿಳಿ ಬಣ್ಣದಲ್ಲಿ ಪೂರ್ಣಚಂದ್ರ ಗೋಚರವಾದ ಬಳಿಕ ಕಿತ್ತಳೆ, ಬಳಿಕ ಕೆಂಪು ವರ್ಣಕ್ಕೆ ತಿರುಗಿದ್ದಾನೆ. ಇಸ್ರೇಲ್‌, ಜಪಾನ್‌, ಕೀನ್ಯಾ, ನಮೀಬಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ರಕ್ತಚಂದ್ರನ ದರ್ಶನವಾಗಿದೆ. ಈ ಕುರಿತ ಚಿತ್ರಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ…

    ಟೊಕಿಯೊ
    ಜಪಾನ್
    ಇಸ್ರೇಲ್‌
    ಗ್ರೀಸ್‌ನ ಅಥೆನ್ಸ್‌
    ಕೀನ್ಯಾ
    ದಕ್ಷಿಣ ಆಫ್ರಿಕಾ
    ನಮೀಬಿಯಾ
  • ಬಿಸಿಲು, ಗಾಳಿ ಇಲ್ಲದೆ ಉಪ್ಪುನೀರಿಂದ ವಿದ್ಯುತ್ ಉತ್ಪಾದಿಸಿದ ಜಪಾನ್!

    ಬಿಸಿಲು, ಗಾಳಿ ಇಲ್ಲದೆ ಉಪ್ಪುನೀರಿಂದ ವಿದ್ಯುತ್ ಉತ್ಪಾದಿಸಿದ ಜಪಾನ್!

    ಷ್ಟೋ ವರ್ಷಗಳಿಂದ ಜಾಗತಿಕ ಪಾರಂಪರಿಕ ಶುದ್ಧ ಶಕ್ತಿಗಳಾದ ಹೊಂದಿರುವ ಸೂರ್ಯಶಕ್ತಿ, ಗಾಳಿಶಕ್ತಿಯ ಮೇಲೆ ಅವಲಂಬಿತವಾಗಿದ್ದೇವೆ. ಜಪಾನ್‌ನಲ್ಲಿ ಇತ್ತೀಚೆಗೆ ಉದ್ಭವಿಸಿರುವ ಉಪ್ಪು ನೀರು ಬಳಸಿ ಆಸ್ಮೋಟಿಕ್ ಶಕ್ತಿ (Osmotic Power) ಎಂಬ ಹೊಸ ಅಲೆಯನ್ನೇ ಸೃಷ್ಟಿಸುತ್ತದೆ.

    ಈ ಹೊಸ ವಿಧಾನವು ಗಾಳಿಯಿಲ್ಲದೆ, ಬೆಳಕಿಲ್ಲದೆ, ನೀರಿನ ರೂಪಾಂತರದಿಂದ ಮಾತ್ರ ಶಕ್ತಿ ಉತ್ಪಾದನೆಯನ್ನು ಮಾಡುತ್ತದೆ. ಇತ್ತೀಚೆಗೆ ಭಾರತದಲ್ಲಿ ಸೌರ ಶಕ್ತಿಯ ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಆದರೆ ಜಪಾನ್ (Japan) ದೇಶವು ಇವೆಲ್ಲವನ್ನು ಬಿಟ್ಟು ಉಪ್ಪು ನೀರಿನಿಂದ ವಿದ್ಯುತ್ ಅನ್ನ ಉತ್ಪಾದಿಸುವ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ. ಇದನ್ನು ಸಾಗರ ಶಕ್ತಿ ಎಂದೂ ಸಹ ಕರೆಯಲಾಗುತ್ತದೆ.

    ಈ ಆಸ್ಮೋಟಿಕ್ ಶಕ್ತಿ ಅನ್ನು ಜಪಾನ್‌ನ ಫುಕೋಓಕಾ ನಗರದಲ್ಲಿ 2025ರಲ್ಲೇ ಪ್ರಾರಂಭ ಮಾಡಲಾಗಿದೆ. ಇದು ಏಷ್ಯಾದಲ್ಲಿ ಮೊದಲ ಜಗತ್ತಿನಲ್ಲಿ ಎರಡನೇ ಆಸ್ಮೋಟಿಕ್ ಶಕ್ತಿ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶವಾಗಿದೆ.

    ಸಾಗರ ಶಕ್ತಿಯ ಉತ್ಪಾದನೆ ಹೇಗೆ?
    ಫಿಲ್ಟರ್ ಮಾಡಿದ ಸಿಹಿ ನೀರು ಮತ್ತು ಸಮುದ್ರದ ನೀರನ್ನು ಬಿಡಲಾಗುತ್ತದೆ. ಮೆಂಬರೇನ್ ಮಾಡ್ಯೂಲ್‌ಗಳನ್ನು ಪ್ರವೇಶಿಸುವ ಮೊದಲು ಸಮುದ್ರದ ನೀರನ್ನು ಸರಿಸುಮಾರು ಅರ್ಧದಷ್ಟು ಆಸ್ಮೋಟಿಕ್ ಒತ್ತಡಕ್ಕೆ ಒಳಪಡಿಸಲಾಗುತ್ತದೆ.

    ಸಿಹಿ ನೀರನ್ನು ಮತ್ತು ಉಪ್ಪು ನೀರನ್ನು ಬೇರೆ ಬೇರೆಯಾಗಿ ಹಾಕಲಾಗುತ್ತದೆ. ಈ ಮೂರನೇ ಒಂದು ಭಾಗವನ್ನು ಜಲವಿದ್ಯುತ್ ಟರ್ಬೈನ್‌ನಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ಉಳಿದ ಭಾಗವು ಒಳಬರುವ ಸಮುದ್ರದ ನೀರನ್ನು ಒತ್ತಡಕ್ಕೆ ಒಳಪಡಿಸಲು ಒತ್ತಡ ವಿನಿಮಯಕಾರಕದ ಮೂಲಕ ಹಾದುಹೋಗುತ್ತದೆ.

    ಶಕ್ತಿ ಉತ್ಪಾದನಾ ಸಾಮರ್ಥ್ಯ
    ವರ್ಷಕ್ಕೆ ಸುಮಾರು 8,80,000 ಕಿಲೋವಾಟ್‌-ಗಂಟೆ (kWh) ಶಕ್ತಿ ಉತ್ಪನೆಯಾಗುತ್ತದೆ. ಇದು ಸುಮಾರು 220ರಿಂದ 290 ಮನೆಗಳಿಗೆ ಸಮನಾದ ಶಕ್ತಿಯನ್ನು ಒದಗಿಸಲು ಯೋಗ್ಯವಾಗಿದೆ.

    ಇದರ ಪ್ರಯೋಜನಗಳೇನು?
    ನವೀಕರಿಸಬಹುದಾದ ಶಕ್ತಿ:
    ತರಂಗ ಶಕ್ತಿ ಮತ್ತು ಉಬ್ಬರವಿಳಿತದ ಶಕ್ತಿ ಎರಡೂ ಹೇರಳವಾದ ಸಾಗರದ ನೈಸರ್ಗಿಕ ಚಲನಶೀಲತೆಯನ್ನು ಬಳಸುತ್ತವೆ. ಅಲ್ಲದೆ ಇದು ವಿದ್ಯುತ್ ಉತ್ಪಾದಿಸಲು ಯಾವುದೇ ನವೀಕರಿಸಲಾಗದ ಇಂಧನಗಳನ್ನು ಬಳಸುವುದಿಲ್ಲ.

    ತ್ಯಾಜ್ಯಗಳನ್ನು ಉತ್ಪಾದಿಸಲ್ಲ:
    ಅವು ಕಾರ್ಯನಿರ್ವಹಿಸುವಾಗ ಹಸಿರುಮನೆ ಅನಿಲಗಳು ಅಥವಾ ಇತರ ಮಾಲಿನ್ಯವನ್ನು ಉತ್ಪಾದಿಸುವುದಿಲ್ಲ. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ. ಸಾಗರ ವಿದ್ಯುತ್ ಉತ್ಪಾದನೆಯಿಂದ ಯಾವುದೇ ತ್ಯಾಜ್ಯ ಉತ್ಪನ್ನಗಳು ಸೃಷ್ಟಿಯಾಗುವುದಿಲ್ಲ.

    ಕಡಲತೀರದ ದೇಶಗಳಿಗೆ ಹೆಚ್ಚು ಉಪಯುಕ್ತ:
    ಕರಾವಳಿ ತೀರಗಳಲ್ಲಿ ಅಲೆ ಮತ್ತು ಉಬ್ಬರವಿಳಿತದ ವಿದ್ಯುತ್ ಉತ್ಪಾದಕಗಳನ್ನು ನಿರ್ಮಿಸಲಾಗಿರುವುದರಿಂದ, ವಿಶೇಷವಾಗಿ ಉದ್ದವಾದ ಕರಾವಳಿಗಳನ್ನು ಹೊಂದಿರುವ ದೇಶಗಳಲ್ಲಿ ಅಪಾರ ಸಾಮರ್ಥ್ಯವಿದೆ.

    ಕಡಿಮೆ ವೆಚ್ಚಗಳು:
    ಸಾಗರ ಇಂಧನ ಸ್ಥಾವರವು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ, ಅದರ ಚಾಲನಾ ವೆಚ್ಚವು ಸಾಕಷ್ಟು ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ತೈಲ ಮತ್ತು ಕಲ್ಲಿದ್ದಲು ಸ್ಥಾವರಗಳು ಹಾಗೂ ಪರಮಾಣು ವಿದ್ಯುತ್‌ನಂತಹ ಹೆಚ್ಚು ಪ್ರಬಲವಾದ ವಿದ್ಯುತ್ ಉತ್ಪಾದನೆಗೆ ಹೋಲಿಸಿದರೆ ಇದರ ವೆಚ್ಚ ಕಡಿಮೆ ಎನ್ನಲಾಗುತ್ತಿದೆ.

  • ಜಪಾನ್‌ ಪ್ರಧಾನಿ, ಅವರ ಪತ್ನಿಗೆ ವಿಶೇಷ ಗಿಫ್ಟ್‌ ಕೊಟ್ಟ ಮೋದಿ – ಚಂದ್ರಶಿಲೆಯ ಬಟ್ಟಲು, ಪಶ್ಮಿನಾ ಶಾಲಿನ ವಿಶೇಷತೆ ಏನು?

    ಜಪಾನ್‌ ಪ್ರಧಾನಿ, ಅವರ ಪತ್ನಿಗೆ ವಿಶೇಷ ಗಿಫ್ಟ್‌ ಕೊಟ್ಟ ಮೋದಿ – ಚಂದ್ರಶಿಲೆಯ ಬಟ್ಟಲು, ಪಶ್ಮಿನಾ ಶಾಲಿನ ವಿಶೇಷತೆ ಏನು?

    ಟೊಕಿಯೊ: ಎರಡು ದಿನಗಳ ಜಪಾನ್ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಿದರು. ತಮ್ಮ ಭೇಟಿಯ ಸಮಯದಲ್ಲಿ, ಭಾರತ ಮತ್ತು ಜಪಾನ್ ನಡುವೆ 13 ಪ್ರಮುಖ ಒಪ್ಪಂದಗಳು ಮತ್ತು ಘೋಷಣೆಗಳನ್ನು ಮಾಡಿಕೊಂಡಿದ್ದು ಹಲವಾರು ಪರಿವರ್ತನಾ ಉಪಕ್ರಮಗಳ ಪ್ರಾರಂಭವನ್ನ ಘೋಷಿಸಲಾಯಿತು.

    ಇನ್ನೂ ಜಪಾನ್‌ಗೆ (Japan) ಭೇಟಿ ನೀಡಿದ್ದ ವೇಳೆ ಮೋದಿ ಅವರು ಜಪಾನ್ ಪ್ರಧಾನಿ ಶಿಗೇರು ಇಶಿಬಾ (Shigeru Ishiba) ಮತ್ತು ಅವರ ಪತ್ನಿ ಯೋಶಿಕೊ ಇಶಿಬಾಗೆ ವಿಶೇಷ ಉಡುಗೊರೆಯನ್ನ ನೀಡಿದ್ದಾರೆ. ಯೋಶಿಕೊ ಇಶಿಬಾ ಅವರಿಗೆ ಪಶ್ಮಿನಾ ಶಾಲು ನೀಡಿದ್ದಾರೆ. ಹಾಗೆಯೇ ಶಿಗೇರು ಇಶಿಬಾ ಅವರಿಗೆ ಚಾಪ್‌ಸ್ಟಿಕ್‌ಗಳೊಂದಿಗೆ ರಾಮೆನ್ ಬೌಲನ್ನ ಉಡುಗೊರೆಯಾಗಿ ನೀಡಿದ್ದಾರೆ.

    ಈ ಉಡುಗೊರೆಯ ವಿಶೇಷತೆ ಏನು?
    ಸಿಲ್ವರ್ ಚಾಪ್‌ಸ್ಟಿಕ್‌ಗಳೊಂದಿಗೆ ನೀಡಲಾದ ವಿಂಟೇಜ್ ಪ್ರೆಷಸ್ ಸ್ಟೋನ್‌ ರಾಮೆನ್‌ ಬೌಲ್‌ಗಳು (Ramen Bowls) ಭಾರತೀಯ ಕಲಾತ್ಮಕತೆ ಮತ್ತು ಜಪಾನೀಸ್ ಪಾಕಪದ್ಧತಿಯ ಪ್ರತೀಕವಾಗಿದೆ. 4 ಸಣ್ಣ ಚಾಪ್‌ಸ್ಟಿಕ್‌ಗಳು ಮತ್ತು ಬೆಳ್ಳಿ ಚಾಪ್‌ಸ್ಟಿಕ್‌ಗಳೊಂದಿಗೆ ದೊಡ್ಡ ಕಂದು ಚಂದ್ರಶಿಲೆಯ ಬಟ್ಟಲನ್ನು ಒಳಗೊಂಡಿರುವ ಇದು ಜಪಾನ್‌ನ ಡಾನ್‌ಬುರಿ ಮತ್ತು ಸೋಬಾ ಆಚರಣೆಗಳಿಂದ ಸ್ಫೂರ್ತಿ ಪಡೆದಿದೆ.

    ಆಂಧ್ರಪ್ರದೇಶದಿಂದ ತರಲಾದ ಈ ಚಂದ್ರಶಿಲೆಯು ಸುಂದರ ಹೊಳಪು ನೀಡುತ್ತದೆ. ಪ್ರೀತಿ, ಸಮತೋಲನ ಮತ್ತು ರಕ್ಷಣೆಯನ್ನು ಇದು ಸಂಕೇತಿಸುತ್ತದೆ. ಇನ್ನೂ ಯೋಶಿಕೊ ಇಶಿಬಾ ಅವರಿಗೆ ಪಶ್ಮಿನಾ ಶಾಲು ಲಡಾಖ್‌ನಲ್ಲಿರುವ ಚಾಂಗ್‌ಥಂಗಿ ಆಡಿನ ಉತ್ತಮ ಉಣ್ಣೆಯಿಂದ ತಯಾರಿಸಲಾಗುತ್ತದೆ. ಇದು ಹಗುರ, ಮೃದುವಾಗಿರುತ್ತದೆ. ಕಾಶ್ಮೀರಿ ಕುಶಲಕರ್ಮಿಗಳು ಕೈಯಿಂದ ನೇಯ್ದಿರುತ್ತಾರೆ. ಇದು ಶತಮಾನಗಳಷ್ಟು ಹಳೆಯದಾದ ಸಂಪ್ರದಾಯದವನ್ನು ಸಂಕೇತಿಸುತ್ತದೆ. ಶಾಲು ಮತ್ತು ಪೆಟ್ಟಿಗೆ ಒಟ್ಟಾಗಿ ಕಾಶ್ಮೀರದ ಕಲಾತ್ಮಕತೆ, ಪರಂಪರೆ ಮತ್ತು ಕಾಲಾತೀತ ಸೊಬಗನ್ನು ಪ್ರತಿನಿಧಿಸುತ್ತವೆ.

    ಇದಕ್ಕೂ ಮುನ್ನ ಟೋಕಿಯೊದ ದೇವಾಲಯದ ಅರ್ಚಕರೊಬ್ಬರು ಪ್ರಧಾನಿ ಮೋದಿ ಅವರಿಗೆ ದರುಮಾ ಗೊಂಬೆಯನ್ನ ಉಡುಗೊರೆಯಾಗಿ ನೀಡಿದರು, ಇದನ್ನು ಜಪಾನ್‌ನಲ್ಲಿ ವಿಶೇಷವೆಂದು ಪರಿಗಣಿಸಲಾಗಿದೆ.

  • ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ

    ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ

    ಟೋಕಿಯೊ: ಎರಡು ದಿನಗಳ ಜಪಾನ್‌ (Japan) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ಹೈ-ಸ್ಪೀಡ್‌ ಬುಲೆಟ್‌ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಟೋಕಿಯೊದಿಂದ ಸೆಂಡೈಗೆ ಮೋದಿ (PM Modi) ಪ್ರಯಾಣಿಸಿದ್ದಾರೆ.

    ಸೆಂಡೈಗೆ ತೆರಳುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಟೋಕಿಯೊದಲ್ಲಿ 16 ಜಪಾನಿನ ಪ್ರಾಂತ್ಯಗಳ ರಾಜ್ಯಪಾಲರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಅಡಿಯಲ್ಲಿ ರಾಜ್ಯ-ಪ್ರಾಂತ್ಯ ಸಹಕಾರವನ್ನು ಬಲಪಡಿಸಲು ಅವರು ಕರೆ ನೀಡಿದರು. ಇದನ್ನೂ ಓದಿ: ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಪ್ರಮುಖ ಪಾಲುದಾರ: ಮೋದಿ ಬಣ್ಣನೆ

    ಬುಲೆಟ್ ಟ್ರೈನ್ ಟ್ರೇನಿಂಗ್‌ನಲ್ಲಿರುವ ಭಾರತೀಯ ಮೂಲದ ಲೊಕೊ ಪೈಲಟ್‌ಗಳನ್ನು ಭೇಟಿಯಾಗಿ ಮೋದಿ ಮಾತುಕತೆ ನಡೆಸಿದರು. ಬುಲೆಟ್ ಟ್ರೈನ್ ಕೋಚ್‌ ತಯಾರಿಕಾ ಘಟಕ ಇರುವ ಟೋಕಿಯೊದ ಎಲೆಕ್ಟ್ರಾನ್ ಕಾರ್ಖಾನೆ ಮತ್ತು ಸೆಂಡೈನಲ್ಲಿರುವ ಟೊಹೊಕು ಶಿಂಕನ್ಸೆನ್ ಸ್ಥಾವರಕ್ಕೂ ಮೋದಿ ಭೇಟಿ ನೀಡಲಿದ್ದಾರೆ. ಬಳಿಕ ಚೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

    ಇದಕ್ಕೂ ಮೊದಲು ಟೋಕಿಯೊದಲ್ಲಿ, ಪ್ರಧಾನಿ ಮೋದಿ 16 ಜಪಾನಿನ ಪ್ರಾಂತ್ಯಗಳ ಗವರ್ನರ್‌ಗಳೊಂದಿಗೆ ಚರ್ಚೆ ನಡೆಸಿದರು. 15 ನೇ ವಾರ್ಷಿಕ ಭಾರತ-ಜಪಾನ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ದೀರ್ಘಕಾಲೀನ ನಾಗರಿಕ ಬಾಂಧವ್ಯದ ಮೇಲೆ ನಿರ್ಮಿಸಲಾದ ಭಾರತ-ಜಪಾನ್ ಸಂಬಂಧಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

  • ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಪ್ರಮುಖ ಪಾಲುದಾರ: ಮೋದಿ ಬಣ್ಣನೆ

    ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಪ್ರಮುಖ ಪಾಲುದಾರ: ಮೋದಿ ಬಣ್ಣನೆ

    – ವ್ಯಾಪಾರದಿಂದ ತಂತ್ರಜ್ಞಾನದ ವರೆಗೆ, ಭಾರತ-ಜಪಾನ್ ಏಷ್ಯನ್ ಶತಮಾನವನ್ನು ಮುನ್ನಡೆಸಲಿವೆ ಎಂದ ಪ್ರಧಾನಿ

    ಟೋಕಿಯೊ: ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಪ್ರಮುಖ ಪಾಲುದಾರ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಬಣ್ಣಿಸಿದ್ದಾರೆ.

    ಜಪಾನ್ (Japan) ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ-ಜಪಾನ್ ಸಂಬಂಧಗಳನ್ನು ಬಲಪಡಿಸಲು ಸಮಗ್ರ 5 ಅಂಶಗಳ ಮಾರ್ಗಸೂಚಿಯನ್ನು ವಿವರಿಸಿದ್ದಾರೆ.

    ಭಾರತದ ಬೆಳವಣಿಗೆಯ ಪ್ರಯಾಣದಲ್ಲಿ ಜಪಾನ್ ಪ್ರಮುಖ ಪಾಲುದಾರ. ಉತ್ಪಾದನೆ, ತಂತ್ರಜ್ಞಾನ, ಹಸಿರು ಇಂಧನ, ಮೂಲಸೌಕರ್ಯ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಉಭಯ ದೇಶಗಳ ಪಾಲುದಾರಿಕೆ ಬಗ್ಗೆ ಮೋದಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

    ಜಪಾನ್ ತಂತ್ರಜ್ಞಾನದಲ್ಲಿ ಶಕ್ತಿ ಕೇಂದ್ರವಾಗಿದ್ದರೆ, ಭಾರತ ಪ್ರತಿಭೆಯ ಶಕ್ತಿ ಕೇಂದ್ರವಾಗಿದೆ. ತಂತ್ರಜ್ಞಾನ ಮತ್ತು ಪ್ರತಿಭೆ ಮಾತ್ರ ಅಭಿವೃದ್ಧಿಗೆ ಕಾರಣವಾಗಬಹುದು. ಭಾರತ ಮತ್ತು ಜಪಾನ್ ನಡುವೆ ಸಹಕಾರದ ಅಪಾರ ಸಾಧ್ಯತೆಗಳಿವೆ. ವ್ಯಾಪಾರ ಜಗತ್ತಿನ ದೈತ್ಯರೊಂದಿಗೆ ಪ್ರಾರಂಭವಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

    ಮೆಟ್ರೋದಿಂದ ಉತ್ಪಾದನೆಯ ವರೆಗೆ, ಸೆಮಿಕಂಡಕ್ಟರ್‌ನಿಂದ ಸ್ಟಾರ್ಟ್‌ಅಪ್‌ಗಳ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ನಮ್ಮ ಪಾಲುದಾರಿಕೆ ಪರಸ್ಪರ ನಂಬಿಕೆಯ ಸಂಕೇತವಾಗಿದೆ. ಜಪಾನಿನ ಕಂಪನಿಗಳು ಭಾರತದಲ್ಲಿ 40 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಹೂಡಿಕೆ ಮಾಡಿವೆ. ಕಳೆದ 2 ವರ್ಷಗಳಲ್ಲಿ ಮಾತ್ರ 30 ಶತಕೋಟಿ ಡಾಲರ್‌ಗಳ ಖಾಸಗಿ ಹೂಡಿಕೆ ನಡೆದಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಬಂದ ರಹಸ್ಯ ಪತ್ರದಿಂದ ಭಾರತ, ಚೀನಾ ಸಂಬಂಧ ಸುಧಾರಣೆ!

    ಭಾರತವು ರಾಜಕೀಯ ಸ್ಥಿರತೆ, ಆರ್ಥಿಕ ಸ್ಥಿರತೆ, ನೀತಿಗಳಲ್ಲಿ ಪಾರದರ್ಶಕತೆ ಮತ್ತು ಭವಿಷ್ಯವಾಣಿಯನ್ನು ಹೊಂದಿದೆ. ಇಂದು ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಭಾರತವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ರಕ್ಷಣಾ ಮತ್ತು ಬಾಹ್ಯಾಕಾಶದಂತಹ ಸೂಕ್ಷ್ಮ ಕ್ಷೇತ್ರಗಳನ್ನು ಈಗಾಗಲೇ ಖಾಸಗಿ ವಲಯಕ್ಕೆ ಮುಕ್ತಗೊಳಿಸಲಾಗಿದೆ. ಈಗ ನಾವು ಪರಮಾಣು ಇಂಧನ ವಲಯವನ್ನೂ ತೆರೆಯುತ್ತಿದ್ದೇವೆ. ಈ ಸುಧಾರಣೆಗಳ ಹಿಂದೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಸಂಕಲ್ಪವಿದೆ. ಆಟೋ ವಲಯದಲ್ಲಿ ನಮ್ಮ ಪಾಲುದಾರಿಕೆ ಅತ್ಯಂತ ಯಶಸ್ವಿಯಾಗಿದೆ. ಬ್ಯಾಟರಿಗಳು, ರೊಬೊಟಿಕ್ಸ್, ಸೆಮಿ-ಕಂಡಕ್ಟರ್‌ಗಳು, ಹಡಗು ನಿರ್ಮಾಣ ಮತ್ತು ಪರಮಾಣು ಶಕ್ತಿಯಲ್ಲಿ ನಾವು ಒಟ್ಟಾಗಿ ಅದೇ ಮ್ಯಾಜಿಕ್ ಅನ್ನು ಪುನರಾವರ್ತಿಸಬಹುದು. ಭಾರತದಲ್ಲಿ ಹೂಡಿಕೆ ಮಾಡುವಂತೆ ಕರೆ ನೀಡಿದ್ದಾರೆ.

  • ಬೆಂಗ್ಳೂರಿನಿಂದ ಒಸಾಕಾ, ನಗೋಯ ನಗರಗಳಿಗೆ ನೇರ ವಿಮಾನ ಸೇವೆ ಕುರಿತು ಚರ್ಚೆ: ಎಂ.ಬಿ ಪಾಟೀಲ್

    ಬೆಂಗ್ಳೂರಿನಿಂದ ಒಸಾಕಾ, ನಗೋಯ ನಗರಗಳಿಗೆ ನೇರ ವಿಮಾನ ಸೇವೆ ಕುರಿತು ಚರ್ಚೆ: ಎಂ.ಬಿ ಪಾಟೀಲ್

    ಬೆಂಗಳೂರು: ಜಪಾನ್ (Japan) ದೇಶದ ಪ್ರಮುಖ ಕೈಗಾರಿಕಾ ನಗರಗಳಾಗಿರುವ ಒಸಾಕಾ (Osaka) ಮತ್ತು ನಗೋಯಾ (Nagoya) ನಗರಗಳಿಗೆ ಬೆಂಗಳೂರಿನಿಂದ (Bengaluru) ನೇರ ವಿಮಾನಸೇವೆ ಆರಂಭಿಸುವ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಅವರು ಜಪಾನ್‌ನ ಕಾನ್ಸುಲ್ ಜನರಲ್ ನಕಾನೆ ಸುಟೋಮು (Nakane Tsutomu) ಅವರೊಂದಿಗೆ ಚರ್ಚೆ ನಡೆಸಿದರು.

    ಬೆಂಗಳೂರಿನಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಜಪಾನ್ ಜೊತೆ ಬಂಡವಾಳ ಹೂಡಿಕೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಬಂಧ ಹಾಗೂ ಭಾಷಾ ಕಲಿಕೆಯಂತಹ ಕೌಶಲ್ಯ ಬಲವರ್ಧನೆಗೆ ರಾಜ್ಯ ಸರ್ಕಾರದ ಮೂಲಕ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಸೆ.6ರಿಂದ ಹತ್ತು ದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಇದನ್ನೂ ಓದಿ: ಜೀವನದಲ್ಲಿ ಜಿಗುಪ್ಸೆ; ಸಶಸ್ತ್ರ ಮೀಸಲು ಪಡೆಯ ಪೇದೆ ಆತ್ಮಹತ್ಯೆ

    ಸದ್ಯಕ್ಕೆ ಬೆಂಗಳೂರಿನಿಂದ ಜಪಾನ್‌ನ ರಾಜಧಾನಿ ಟೋಕಿಯೋಗೆ ಮಾತ್ರ ನೇರ ವಿಮಾನ ಸೌಲಭ್ಯ ಇದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಪಾನಿನ ಹಲವು ಕಂಪನಿಗಳು ಡೇಟಾ ಸೆಂಟರ್, ಮ್ಯಾನುಫ್ಯಾಕ್ಚರಿಂಗ್, ಲಾಜಿಸ್ಟಿಕ್ಸ್ ಮುಂತಾದ ವಲಯಗಳಲ್ಲಿ ರಾಜ್ಯದಲ್ಲಿ 7,500 ಕೋಟಿ ರೂ. ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿವೆ. ಹೀಗಾಗಿ ಅಲ್ಲಿನ ಕೈಗಾರಿಕಾ ನಗರಗಳಾದ ಒಸಾಕಾ ಮತ್ತು ನಗೋಯಾಗೆ ನಮ್ಮಲ್ಲಿಂದ ನೇರವಿಮಾನ ಸೇವೆ ಆರಂಭಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

    ನಮ್ಮಲ್ಲಿ ಹಲವರಿಗೆ ಜಪಾನಿನ ಕಂಪನಿಗಳು ಕೆಲಸ ಕೊಡುತ್ತಿವೆ. ಇದಕ್ಕೆ ಪೂರಕವಾಗಿ ನಮ್ಮಲ್ಲಿರುವ ವಿಟಿಯು ತರಹದ ವಿಶ್ವವಿದ್ಯಾಲಯಗಳಲ್ಲಿ ಜಪಾನಿ ಭಾಷೆ ಕಲಿಕೆಗೆ ಒಡಂಬಡಿಕೆ ಮಾಡಿಕೊಳ್ಳುವುದು ಪರಿಣಾಮಕಾರಿಯಾಗಲಿದೆ. ಆದ್ದರಿಂದ ಜಪಾನ್ ಭೇಟಿಯ ಸಮಯದಲ್ಲಿ ಅಲ್ಲಿನ ಒಂದು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದರು.

    ಭಾರತದಲ್ಲಿ ಜಪಾನಿನ 1,400 ಕಂಪನಿಗಳಿವೆ. ಇದರಲ್ಲಿ ಅರ್ಧದಷ್ಟು ಕಂಪನಿಗಳು ತಯಾರಿಕೆ ವಲಯವೊಂದರಲ್ಲೇ ಸಕ್ರಿಯವಾಗಿವೆ. ಭಾರತದಲ್ಲಿನ ಎಫ್.ಡಿ.ಐ ಹೂಡಿಕೆಯಲ್ಲಿ ಜಪಾನ್ ಐದನೆಯ ಸ್ಥಾನದಲ್ಲಿದ್ದು, ಕಳೆದ ಎರಡು ವರ್ಷಗಳಲ್ಲಿ ಎರಡೂ ದೇಶಗಳ ನಡುವೆ 13 ಬಿಲಿಯನ್ ಡಾಲರ್ ಮೊತ್ತದ 170 ಒಡಂಬಡಿಕೆಗಳಾಗಿವೆ. ಜಪಾನ್ ಮತ್ತು ರಾಜ್ಯದ ನಡುವಿನ ವ್ಯವಹಾರ ಪ್ರಕ್ರಿಯೆಗಳ ನಿರ್ವಹಣೆಗೆ ಟೋಕಿಯೋದಲ್ಲಿ ಪ್ರಪ್ರಥಮ ಬಿಸಿಐಸಿ ಕಚೇರಿ ಆರಂಭಿಸಲಾಗಿದೆ ಎಂದು ವಿವರಿಸಿದರು.

    ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದನ್ನೂ ಓದಿ: IMF ಕಾರ್ಯನಿರ್ವಾಹಕ ನಿರ್ದೇಶಕರಾಗಿ RBIನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ನೇಮಕ

  • ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

    ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

    ಟೋಕಿಯೊ: ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಪಾನ್‌ಗೆ 2 ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಶುಕ್ರವಾರ ಟೋಕಿಯೊಗೆ ಬಂದಿಳಿದಿದ್ದಾರೆ.

    ಇಂದು ಮತ್ತು ನಾಳೆ ಜಪಾನ್‌ಗೆ ಎರಡು ದಿನಗಳ ಅಧಿಕೃತ ಭೇಟಿಗಾಗಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ವಾಸ್ತವ್ಯದ ಸಮಯದಲ್ಲಿ 15 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಪಾನಿನ ಪ್ರಧಾನಿ ಶಿಗೇರು ಇಶಿಬಾ ಅವರನ್ನು ಸಹ ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ

    ಇಂದು ಬೆಳಗ್ಗೆ 10:30 ರಿಂದ 11:10 ರ ವರೆಗೆ ಮೋದಿ ಅವರು ಜಪಾನ್ ಮತ್ತು ಭಾರತೀಯ ಕೈಗಾರಿಕೆಗಳ ನಾಯಕರೊಂದಿಗೆ ವ್ಯಾಪಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11:30 ರಿಂದ ಮಧ್ಯಾಹ್ನ 1:10 ರ ವರೆಗೆ ಜಪಾನಿನ ಗಣ್ಯರನ್ನು ಭೇಟಿ ಮಾಡಲಿದ್ದಾರೆ. ನಂತರ ಮಧ್ಯಾಹ್ನ 2:30 ರಿಂದ ಸಂಜೆ 5:15 ರ ವರೆಗೆ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

    ಇದು ಎರಡೂ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ. ಎರಡು ದಿನಗಳ ಭೇಟಿಯ ಸಮಯದಲ್ಲಿ ಅವರು ಮುಂದಿನ ಪೀಳಿಗೆಯ E10 ಶಿಂಕನ್ಸೆನ್ ಬುಲೆಟ್ ರೈಲುಗಳನ್ನು ಭಾರತದಲ್ಲಿ ತಯಾರಿಸಲು ಪಾಲುದಾರಿಕೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಜಪಾನ್ ಬಳಿಕ ಚೀನಾಗೆ ಮೋದಿ ತೆರಳಲಿದ್ದಾರೆ. ಇದನ್ನೂ ಓದಿ: ಇಂದೇ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎ‌ 324 ಸ್ಥಾನ ಗೆಲ್ಲುವ ಸಾಧ್ಯತೆ

    ಪ್ರಧಾನಿಯವರ ಪ್ರವಾಸದ ಮೊದಲ ದಿನದಂದು ನಡೆಯಲಿರುವ ಮಾತುಕತೆಯಲ್ಲಿ, ಭಾರತದಲ್ಲಿ ಜಪಾನ್ ತನ್ನ ಹೂಡಿಕೆ ಗುರಿಯನ್ನು ದ್ವಿಗುಣಗೊಳಿಸುವ ಪ್ರತಿಜ್ಞೆ ಮಾಡುವ ನಿರೀಕ್ಷೆಯಿದೆ. ವ್ಯಾಪಾರ, ಹೂಡಿಕೆ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಎರಡೂ ಕಡೆಯವರು ಹಲವಾರು ಒಪ್ಪಂದಗಳನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಟೋಕಿಯೊದಲ್ಲಿ ಜಪಾನಿನ ಕೈಗಾರಿಕೋದ್ಯಮಿಗಳು ಮತ್ತು ರಾಜಕೀಯ ನಾಯಕರನ್ನು ಭೇಟಿ ಮಾಡಲಿದ್ದಾರೆ.

    ಪ್ರವಾಸದ ಎರಡನೇ ದಿನದಂದು, ಪ್ರಧಾನ ಮಂತ್ರಿ ಮೋದಿ ಮತ್ತು ಇಶಿಬಾ ಅವರು ಸೆಂಡೈ ನಗರಕ್ಕೆ ಹೈಸ್ಪೀಡ್ ರೈಲಿನಲ್ಲಿ ಪ್ರಯಾಣಿಸಿ ಸೆಮಿಕಂಡಕ್ಟರ್ ಸೌಲಭ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಭೇಟಿಯ ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಆ.31 ಮತ್ತು ಸೆ.1 ರಂದು ಶಾಂಘೈ ಸಹಕಾರ ಸಂಘಟನೆಯ (SCO) ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾದ ಟಿಯಾಂಜಿನ್ ನಗರಕ್ಕೆ ಪ್ರಯಾಣಿಸಲಿದ್ದಾರೆ.

    ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಮತ್ತು ಸುಂಕಗಳ ನೀತಿಗಳಿಂದಾಗಿ ಭಾರತ-ಯುಎಸ್ ಸಂಬಂಧಗಳಲ್ಲಿ ಬಿಕ್ಕಟ್ಟಿನ ನಡುವೆಯೇ ಪ್ರಧಾನಿ ಮೋದಿ ಅವರು ಜಪಾನ್‌ಗೆ ಭೇಟಿ ನೀಡಿದ್ದಾರೆ.

  • ಆ.29ರಿಂದ ಸೆ.1ರವರೆಗೆ ಮೋದಿ ಜಪಾನ್, ಚೀನಾ ಪ್ರವಾಸ

    ಆ.29ರಿಂದ ಸೆ.1ರವರೆಗೆ ಮೋದಿ ಜಪಾನ್, ಚೀನಾ ಪ್ರವಾಸ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಆ.29ರಿಂದ ಸೆ.1ರವರೆಗೆ ಜಪಾನ್ (Japan) ಮತ್ತು ಚೀನಾಕ್ಕೆ (China) ಭೇಟಿ ನೀಡಲಿದ್ದಾರೆ.

    ಶುಕ್ರವಾರದಿಂದ (ಆ.28) ಪ್ರಾರಂಭವಾಗುವ ಪ್ರಧಾನಿ ಮೋದಿಯವರ ಈ ವಿದೇಶ ಪ್ರವಾಸದಲ್ಲಿ ಇಂಡೋ-ಪೆಸಿಫಿಕ್ ಪ್ರದೇಶ, ಅದರಾಚೆಗೆ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯ ಬಗ್ಗೆ ಚರ್ಚೆ ನಡೆಯಲಿದೆ.ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಬಿಗ್ ಬಾಸ್ ಸ್ಪರ್ಧಿ

    ಪ್ರಧಾನಿ ಭೇಟಿಯ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಪ್ರಧಾನಿ ಮೋದಿಯವರು ಆ.28ರ ಸಂಜೆ ಜಪಾನ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಆ.29 ಮತ್ತು 30ರಂದು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಹಲವು ಕಾರಣಗಳಿಗಾಗಿ ಪ್ರಮುಖ ಭೇಟಿಯಾಗಿದೆ. ಪ್ರಧಾನಿ ಮೋದಿಯವರು ಹಾಗೂ ಪ್ರಧಾನಿ ಇಶಿಬಾ ಅವರೊಂದಿಗೆ ನಡೆಸುತ್ತಿರುವ ಮೊದಲ ವಾರ್ಷಿಕ ಶೃಂಗಸಭೆ ಇದಾಗಿದೆ. ಸುಮಾರು 7 ವರ್ಷಗಳಲ್ಲಿ ಜಪಾನ್ ಜೊತೆಗಿನ ಮೊದಲ ಏಕವ್ಯಕ್ತಿ ಭೇಟಿಯಾಗಿದೆ. ಅವರು ಕೊನೆಯ ಬಾರಿಗೆ 2018ರಲ್ಲಿ ವಾರ್ಷಿಕ ಶೃಂಗಸಭೆಗಾಗಿ ಜಪಾನ್‌ಗೆ ಭೇಟಿ ನೀಡಿದ್ದರು. 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಜಪಾನ್‌ಗೆ ಪ್ರಧಾನಿ ಮೋದಿಯವರ ಎಂಟನೇ ಭೇಟಿಯಾಗಿದೆ. ಇದೇ ವೇಳೆ ಜಪಾನ್‌ನ ಇತರ ಹಲವಾರು ರಾಜಕೀಯ ನಾಯಕರೊಂದಿಗೆ ಪ್ರಧಾನಿ ಮೋದಿ ಸಂವಾದವನ್ನೂ ನಡೆಸಲಿದ್ದಾರೆ. ಈ ಸಂವಾದಗಳು ಎರಡೂ ದೇಶಗಳ ನಡುವಿನ ಪ್ರಮುಖ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಗಾಢವಾಗಿಸುವ ಗುರಿಯನ್ನು ಹೊಂದಿವೆ.

    ಪ್ರಧಾನಿ ಮೋದಿ ಆ.31 ಮತ್ತು ಸೆ.1ರಂದು ಶಾಂಘೈ ಸಹಕಾರ ಮಂಡಳಿ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ 25ನೇ ಸಭೆಗಾಗಿ ಚೀನಾದ ಟಿಯಾಂಜಿನ್‌ಗೆ ಭೇಟಿ ನೀಡಲಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಮೋದಿ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. SCO ದಲ್ಲಿ ಭಾರತವನ್ನು ಹೊರತುಪಡಿಸಿ 10 ಸದಸ್ಯರನ್ನು ಹೊಂದಿದೆ. ಬೆಲಾರಸ್, ಚೀನಾ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಇದರಲ್ಲಿ ಸೇರಿವೆ.

    ಟಿಯಾಂಜಿನ್‌ನಲ್ಲಿ ನಡೆಯಲಿರುವ ಮುಂಬರುವ 25ನೇ SCO ಶೃಂಗಸಭೆಯ ಕಾರ್ಯಕ್ರಮವು ಆ.31ರ ಸಂಜೆ ಸ್ವಾಗತ ಔತಣಕೂಟವನ್ನು ಒಳಗೊಂಡಿದೆ ಮತ್ತು ಮುಖ್ಯ ಶೃಂಗಸಭೆಯು ಸೆ.1ರಂದು ನಡೆಯಲಿದೆ. SCO ಶೃಂಗಸಭೆಯ ಸಮಯದಲ್ಲಿ ಪ್ರಧಾನಿ ಕೆಲವು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.ಇದನ್ನೂ ಓದಿ: ಸುದೀಪ್ ಹುಟ್ಟುಹಬ್ಬಕ್ಕೆ `ಬಿಗ್’ ಸರ್‌ಪ್ರೈಸ್