Tag: ಜನ

  • ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಆಸರೆ ನೀಡುವುದು ನಮ್ಮ ಕರ್ತವ್ಯ : ವಿ.ಸೋಮಣ್ಣ

    ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಆಸರೆ ನೀಡುವುದು ನಮ್ಮ ಕರ್ತವ್ಯ : ವಿ.ಸೋಮಣ್ಣ

    ಬೆಂಗಳೂರು: ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಆಸರೆ ನೀಡುವುದು ನಮ್ಮ ಕರ್ತವ್ಯ. ನಿಮ್ಮ ಜೊತೆಯಲ್ಲಿ ನಾವಿದ್ದೇವೆ ಎಂದು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ಮಾರುತಿ ಮಂದಿರ ವಾರ್ಡ್ ಸಂಗೊಳ್ಳಿ ರಾಯಣ್ಣ ಉದ್ಯಾನವನ ಆವರಣದಲ್ಲಿ ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಧನ ಚಕ್ಕು ಮತ್ತು ಮಂಜೂರಾತಿ ಆದೇಶ ಪತ್ರವನ್ನು ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಯುವ ನಾಯಕರಾದ ಅರುಣ್ ಸೋಮಣ್ಣ ಅವರು ವಿತರಿಸಿದರು. ಇದನ್ನೂ ಓದಿ: ಮತದಾನ ಮಾಡಿದ ಸದಸ್ಯರಿಂದ ಮತ ಪತ್ರ ಬಹಿರಂಗ- ಚುನಾವಣಾಧಿಕಾರಿಗೆ ದೂರು

    ಇದೇ ವೇಳೆ ಭಾರತೀಯ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಮತ್ತು ದುರಂತದಲ್ಲಿ ಮಡಿದ ಎಲ್ಲರಿಗೂ ಶ್ರದ್ದಾಂಜಲಿ ಸಲ್ಲಿಸಿ 2 ನಿಮಿಷ ಮೌನಚರಣೆ ಮಾಡಿ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆ ಮತ್ತು ರಾಜ್ಯ ಸರ್ಕಾರದ ದಿಟ್ಟ ನಿಲುವು ಕ್ರಮಗಳಿಂದ ಕೊರೊನಾ ಸಾಂಕ್ರಮಿಕ ರೋಗ ಹತೋಟಿಯಲ್ಲಿದೆ. ಕೊರೊನಾ ಸಾಂಕ್ರಮಿಕ ರೋಗದ ಭಯ ಮತ್ತು ಅಂಜಿಕೆಪಟ್ಟು ಸಾಕಷ್ಟು ಜನರು ಮೃತಪಟ್ಟರು. ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದರು. ನೋವಿನಲ್ಲಿ ಕಣ್ಣಿರಿನಲ್ಲಿ ಜೀವನ ಸಾಗಿಸುವ ಕುಟುಂಬಕ್ಕೆ ಆಸರೆಯಾಗಬೇಕು ಮತ್ತು ನಿಮ್ಮ ಕುಟುಂಬದ ಜೊತೆಯಲ್ಲಿ ನಾವಿದ್ದು, ಸಹಾಯ ಮಾಡುತ್ತೇವೆ ಎಂದು ಹೇಳಿದರು.

    modi

    ಬಿಪಿಎಲ್ ಕಾರ್ಡ್‍ದಾರರ ಕುಟುಂಬಕ್ಕೆ 1.50ಲಕ್ಷ ರೂ. ಚಕ್ಕು ಮತ್ತು ಎಪಿಎಲ್ ಕುಟುಂಬದವರಿಗೆ 50 ಸಾವಿರ ರೂ. ಮಂಜೂರಾತಿ ಆದೇಶ ಪತ್ರ ವಿತರಿಸಲಾಗಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 65 ಹಾಸಿಗೆ ಸಾಮ್ಯರ್ಥವುಳ್ಳ ಐಸಿಯು ಆಸ್ಪತ್ರೆ ನಿರ್ಮಿಸಲಾಗಿದೆ ಮತ್ತು ಕಿಡ್ನಿ ಸಂಬಂದಿಸಿದ ರೋಗಿಗಳಿಗೆ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ: ಮುಂಬೈನಲ್ಲಿ 144 ಸೆಕ್ಷನ್ ಜಾರಿ- ರ‍್ಯಾಲಿ, ಮೆರವಣಿಗೆಗೆ ನಿಷೇಧ

    ಕೊರೋನ ಎರಡನೇಯ ಲಾಕ್ ಡೌನ್ ಸಂದರ್ಭದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎಂದು 70 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಸೋಂಕಿತರ ಮನೆಗಳಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು. ಕೋವಿಡ್-19ನಿಂದ ಮೃತಪಟ್ಟ ತಂದೆ, ತಾಯಿ ಇಲ್ಲದಿರುವ ಮಕ್ಕಳ ಪಾಲನೆ ಮತ್ತು ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು.

    ಕೋವಿಡ್ ಪರಿಹಾರ ಧನ ವಿತರಣಾ ಕಾರ್ಯಕ್ರಮದಲ್ಲಿ ಸಂಬಂದಿಕರು, ಸ್ನೇಹಿತರು, ಕ್ಷೇತ್ರದ ಹಲವಾರು ಜನರು ಕೋವಿಡ್ ಸೋಂಕಿನಿಂದ ಮೃತಪಟ್ಟಿರುವುದನ್ನು ನೆನದು ವಸತಿ ಕಣ್ಣಿರು ಹಾಕಿದರು. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್

    ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ವಾಗೀಶ್ ರಾಮಪ್ಪ, ದಾಸೇಗೌಡ, ಜಯರತ್ನ, ರೂಪ ಲಿಂಗೇಶ್ವರ್ ಮತ್ತು ಸ್ಲಂ ಬೋರ್ಡ್ ನಿರ್ದೇಶಕರಾದ ಕ್ರಾಂತಿರಾಜು ಪಾಲ್ಗೊಂಡಿದ್ದರು.

  • ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ ಪೊಲೀಸ್ – ಡಿಕ್ಕಿ ಹೊಡೆದು ಇಬ್ಬರಿಗೆ ಗಾಯ

    ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ ಪೊಲೀಸ್ – ಡಿಕ್ಕಿ ಹೊಡೆದು ಇಬ್ಬರಿಗೆ ಗಾಯ

    ಭೋಪಾಲ್: ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಡಿಕ್ಕಿ ಹೊಡೆದು ಇಬ್ಬರಿಗೆ ಗಾಯಗೊಳಿಸಿದ್ದ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಪೊಲೀಸ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಘಟನೆ ಭಾನುವಾರ ರಾತ್ರಿ ನೆರೆಯ ಖಾರ್ಗೋನ್ ಜಿಲ್ಲೆಯ ಭಿಕಂಗಾವ್ ಪಟ್ಟಣದಲ್ಲಿ ನಡೆದಿದ್ದು, ಪಂಧಾನ ಪೊಲೀಸ್ ಠಾಣೆಯ ಉಸ್ತುವಾರಿಯಾಗಿದ್ದ ಆಂತಿಮ್ ಪವಾರ್ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಕ್ಷೇತ್ರ ಕರ್ತವ್ಯದಿಂದ ತೆಗೆದುಹಾಕಲಾಗಿದೆ ಎಂದು ಖಾಂಡ್ವಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್ ಸೋಮವಾರ ಹೇಳಿದ್ದಾರೆ. ಇದನ್ನೂ ಓದಿ:  ಅಫ್ಘಾನ್ ಹುಡುಗಿಯರ ಪರ ನಿಂತ ಮಲಾಲಾ ಯೂಸುಫ್ ಝಾಯಿ

    POLICE JEEP

    ಪ್ರಕರಣ ಕುರಿತಂತೆ ವೈದ್ಯಕೀಯ ಪರೀಕ್ಷೆಯಲ್ಲಿ ಆತ ಮದ್ಯದ ಅಮಲಿನಲ್ಲಿದ್ದ ಎಂಬ ವಿಚಾರ ದೃಢಪಟ್ಟಿದೆ. ಅಲ್ಲದೇ ಸಮವಸ್ತ್ರ ಧರಿಸಿದ್ದ ಪವಾರ್ ನಿಯಂತ್ರಣ ತಪ್ಪಿ ಎಸ್‍ಯುವಿ ಭಿಕಾಂಗಾವ್‍ನ ವಿವಿಧ ಸ್ಥಳಗಳಲ್ಲಿ ಜನರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಹಲವಾರು ಮಂದಿ ಓಡಿ ಹೋಗಿ ತಮ್ಮ ಪ್ರಾಣ ರಕ್ಷಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಿಕಿತ್ಸೆ ನೆಪದಲ್ಲಿ ರೋಗಿಗೆ ಲೈಂಗಿಕ ಕಿರುಕುಳ – ಸರ್ಕಾರಿ ವೈದ್ಯನ ಅಮಾನತು

    ಇದೀಗ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಸಾರ್ವಜನಿಕ ರಸ್ತೆಯಲ್ಲಿ ಅವಸರದ ಚಾಲನೆ) ಮತ್ತು 337 (ಜೀವಕ್ಕೆ ಅಪಾಯವನ್ನುಂಟುಮಾಡುವುದು ಅಥವಾ ಇತರರ ವೈಯಕ್ತಿಕ ಸುರಕ್ಷತೆ) ಅಡಿಯಲ್ಲಿ ಪವಾರ್ ವಿರುದ್ಧ ಭಿಕಂಗಾವ್‍ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ವಿದೇಶಗಳಲ್ಲಿ ಓಮಿಕ್ರಾನ್ ಅಬ್ಬರ – ರಾಜ್ಯದಲ್ಲಿ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತ ಜನ

    ವಿದೇಶಗಳಲ್ಲಿ ಓಮಿಕ್ರಾನ್ ಅಬ್ಬರ – ರಾಜ್ಯದಲ್ಲಿ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತ ಜನ

    ಬೆಂಗಳೂರು: ವಿದೇಶಗಳಲ್ಲಿ ಕೊರೊನಾ ಹೊಸ ರೂಪಾಂತರ ತಳಿ ಓಮಿಕ್ರಾನ್ ತನ್ನ ಆರ್ಭಟ ಶುರು ಮಾಡಿದೆ. ಈ ನಡುವೆ ರಾಜ್ಯದಲ್ಲಿ 3ನೇ ಅಲೆ ಭೀತಿಯಿಂದಾಗಿ ಜನ ವ್ಯಾಕ್ಸಿನ್ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

    ದೇಶದಲ್ಲಿ ಕೊರೊನಾ ಎರಡನೇ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಮೂರನೇ ಅಲೆ ಇಲ್ಲ ಅಂದುಕೊಂಡಿದ್ದ ಜನತೆಗೆ ಇದೀಗ ಕೊರೊನಾ ಹೊಸ ರೂಪಾಂತರ ತಳಿ ಓಮಿಕ್ರಾನ್ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ, ನೃತ್ಯ ನಿರ್ದೇಶಕ ಶಿವಶಂಕರ್ ಕೊರೊನಾದಿಂದ ಸಾವು

    vaccine

    ಈಗಾಗಲೇ ಒಮಿಕ್ರಾನ್ ರೂಪಾಂತರಿ ವೈರಸ್ ನಿಧಾನವಾಗಿ ಅನೇಕ ದೇಶಗಳಲ್ಲಿ ಕಾಣಿಸಿಕೊಂಡು ತನ್ನ ಅಬ್ಬರವನ್ನ ಶುರು ಮಾಡಿಕೊಳ್ಳುತ್ತಿದೆ. ದಕ್ಷಿಣ ಆಪ್ರಿಕಾ, ಲಂಡನ್, ಹಾಂಕಾಂಗ್, ಕೆನಡಾ ಸೇರಿದಂತೆ ಹಲವೆಡೆ ರೂಪಾಂತರಿ ವೈರಸ್ ರೂಪ ತಾಳಿ ಅನೇಕ ಸಾವು ನೋವುಗಳನ್ನು ಉಂಟುಮಾಡುತ್ತಿದೆ.

    vaccine

    ಈಗ ಭಾರತವೂ ಹೈ ಅಲರ್ಟ್ ಆಗಿದ್ದು ನಮ್ಮ ದೇಶಕ್ಕೆ ಈ ರೂಪಾಂತರಿ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಮೂರನೇ ಅಲೆ ಶುರುವಾಗಿರುವ ಸಾಧ್ಯತೆ ಹೆಚ್ಚಾಗಿದ್ದು, ಕೊರೊನಾ ತಡೆಯಲು ಇರುವ ಮಾರ್ಗದಲ್ಲಿ ವ್ಯಾಕ್ಸಿನ್ ಕೂಡ ಬಹಳ ಪ್ರಮುಖವಾದ ಅಸ್ತ್ರ. ಇಷ್ಟು ದಿನ ಖಾಲಿ, ಖಾಲಿಯಾಗಿದ್ದ ವ್ಯಾಕ್ಸಿನ್ ಸೆಂಟರ್‌ಗಳು ಈಗ ಹೌಸ್ ಪುಲ್ ಆಗಿದ್ದು, ಜನ ಮೂರನೇ ಅಲೆಯ ಭೀತಿಯಿಂದ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತು ಕಾಯುತ್ತಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ತಡೆಗೆ ರಾಜ್ಯದಲ್ಲಿ ಕಟ್ಟೆಚ್ಚರ – ಇಂದು ಸುಧಾಕರ್ ನೇತೃತ್ವದಲ್ಲಿ ಸಭೆ

    vaccine

    ಚಾಮರಾಜಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಷ್ಟು ದಿನ 50 ರಿಂದ 60 ಜನ ಬಂದು ವ್ಯಾಕ್ಸಿನ್ ಪಡೆಯುತ್ತಿದ್ದರು. ಒಮಿಕ್ರಾನ್ ಆತಂಕ ಶುರುವಾಗಿರುವ ಕಾರಣ ಇಂದು ವ್ಯಾಕ್ಸಿನ್ ಡ್ರೈವ್ ಶುರುವಾಗಿ ಕೇವಲ 2 ಗಂಟೆಯೊಳಗೆ 120ಕ್ಕೂ ಹೆಚ್ಚು ಜನ ವ್ಯಾಕ್ಸಿನ್ ಪಡೆದಿದ್ದಾರೆ. ಇನ್ನೂ ನೂರಾರು ಜನ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತು ಕಾಯುತ್ತಿದ್ದಾರೆ.

  • ಬೆಂಗಳೂರಲ್ಲಿ ಮಳೆ ಅನಾಹುತ – ರಾಜಕಾಲುವೆ ಒಡೆದು ರಸ್ತೆ, ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರಲ್ಲಿ ಮಳೆ ಅನಾಹುತ – ರಾಜಕಾಲುವೆ ಒಡೆದು ರಸ್ತೆ, ಮನೆಗಳಿಗೆ ನುಗ್ಗಿದ ನೀರು

    ಬೆಂಗಳೂರು: ನಗರದಲ್ಲಿ ತಡರಾತ್ರಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಂದು ಕಡೆ ಮಳೆ ಸಮಸ್ಯೆಯಾದರೆ ಮತ್ತೊಂದೆಡೆ ರಾಜಕಾಲುವೆ ಒಡೆದು ರಸ್ತೆಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿದೆ.

    ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‍ಮೆಂಟ್‍ಗೆ ಅಮಾನಿಕೆರೆಯ ನೀರು ತುಂಬಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಈ ಅಪಾರ್ಟ್‍ಮೆಂಟ್ ಜಲಾವೃತಗೊಂಡಿದೆ. ಅಲ್ಲದೇ ಕಾರು, ಬೈಕ್‍ಗಳು ಕೂಡ ಮುಳುಗಡೆ ಆಗಿವೆ. ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ, ನಾಗಸಂದ್ರ, ರುಕ್ಮಿಣಿ ಬಡಾವಣೆ, ಗುಂಡಪ್ಪ ಬಡಾವಣೆ, ಬೆಲ್ಮರ್ ಬಡಾವಣೆ, ರಾಯಲ್ ಎನ್‍ಕ್ಲೇವ್, ಬಿಟಿಎಸ್ ಬಡಾವಣೆಯಲ್ಲಿ ನೀರು ನುಗ್ಗಿದ್ದು, ಚಿಕ್ಕಬಾಣಾವರದಲ್ಲಿ ಬೈಕ್ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದಾರೆ. ಇದನ್ನೂ ಓದಿ:  ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ CoWIN ವೆಬ್‍ಸೈಟ್‍ನಲ್ಲಿ ಚೆಕ್ ಮಾಡಿ

    ಯಶವಂತಪುರದ ಮೋಹನ್‍ಕುಮಾರ್ ನಗರದಲ್ಲಿ ಕಾಂಪೌಂಡ್ ಗೋಡೆ ಕುಸಿದು ಎರಡು ಆಟೋ, ಬೈಕ್ ಜಖಂಗೊಂಡಿದ್ದು, ಯಶವಂತಪುರದ ಆಂಜನೇಯ ದೇವಸ್ಥಾನಕ್ಕೂ ಸಹ ನೀರು ನುಗ್ಗಿದೆ. ಅಲ್ಲದೇ ಬಿಡಿಎ ಕಚೇರಿ ಸಮೀಪದ ಅಂಡರ್‌ಪಾಸ್‌ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ. ವಿದ್ಯಾರಣ್ಯಪುರದ ವೆಂಕಟಸ್ವಾಮಪ್ಪ ಬಡಾವಣೆಯ ರಸ್ತೆ, ಅಂಗಡಿ, ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಈ ಕುರಿತಂತೆ `ಶಾಸಕರು, ಅಧಿಕಾರಿಗಳಿಗೆ ಫೋನ್ ಮಾಡಿದರೆ ಇಂದು ಭಾನುವಾರ ನಾವು ಬರಲ್ಲ ಅಂತ ಹೇಳುತ್ತಾರೆ’ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಯಲಹಂಕದ ಅಂಡರ್‍ಪಾಸ್‍ನಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು ಮತ್ತು ಮೂರ್ನಾಲ್ಕು ಬಿಎಂಟಿಸಿ ಬಸ್ ಸಿಲುಕಿ ಕೊನೆಗೆ ಅಂಡರ್‍ಪಾಸ್‍ನಲ್ಲಿ ಸಂಚಾರ ಬಂದ್ ಮಾಡಲಾಯಿತು. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

  • ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ

    ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ

    ಬೆಂಗಳೂರು: ಅಕಾಲಿಕ ಹಿಂಗಾರು ಮಳೆ ಅಬ್ಬರದಿಂದ ರಾಜ್ಯ ತತ್ತರಿಸಿದೆ. ನವೆಂಬರ್ 23 ಅಂದರೆ ಮಂಗಳವಾರದವರೆಗೂ ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    RAIN

    ಇಂದು ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಇವತ್ತು ಧಾರಾಕಾರ ಮಳೆಯಾಗಬಹುದು. ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮಳೆ ಅಬ್ಬರದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿಲ್ಲ. ಆದರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇದನ್ನೂ ಓದಿ: ದೇಶದ ಮೊದಲ ಬಾಸ್ಕೆಟ್‌ಬಾಲ್‌ ಲೀಗ್‍ಗೆ ಅದ್ಧೂರಿ ಚಾಲನೆ

    RAIN

    ಈ ಬಾರಿ ಅಕಾಲಿಕ ಹಿಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಆಗಿರುವ ಅನಾಹುತ ಅಷ್ಟಿಷ್ಟಲ್ಲ. ಕಳೆದ ಬಾರಿಯ ಹಿಂಗಾರಿಗೆ ಹೋಲಿಸಿದರೆ ಈ ಬಾರಿ ಶೇಕಡಾ 390ರಷ್ಟು ಅಧಿಕ ಮಳೆ ಆಗಿದೆ. 1,400 ಹೆಚ್ಚು ಮನೆಗಳು ಕುಸಿದಿವೆ. 6 ಜಿಲ್ಲೆಗಳಲ್ಲಿ 92,088 ಹೆಕ್ಟೇರ್‍ನ್ನಷ್ಟು ಬೆಳೆ ನಾಶವಾಗಿದೆ. 30ಕ್ಕೂ ಹೆಚ್ಚು ಜಾನುವಾರುಗಳು ಜೀವ ಕಳೆದುಕೊಂಡಿವೆ. 193 ತಾಲೂಕುಗಳಲ್ಲಿ ಭಾರೀ ಮಳೆ ಆಗಿದೆ. ಕಟಾವಿಗೆ ಸಿದ್ಧವಾಗಿದ್ದ ಬೆಳೆಗಳು ಜಮೀನಿನಲ್ಲಿ ಕೊಳೆತು ಹೋಗಿವೆ. ಇದನ್ನೂ ಓದಿ: ವಿದರ್ಭ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ – ಫೈನಲ್‍ಗೆ ಲಗ್ಗೆ

  • ಆಂಧ್ರಪ್ರದೇಶದಲ್ಲಿ ವರುಣನ ಆರ್ಭಟ – 14 ಮಂದಿ ಸಾವು, 18ಕ್ಕೂ ಹೆಚ್ಚು ಮಂದಿ ನಾಪತ್ತೆ

    ಆಂಧ್ರಪ್ರದೇಶದಲ್ಲಿ ವರುಣನ ಆರ್ಭಟ – 14 ಮಂದಿ ಸಾವು, 18ಕ್ಕೂ ಹೆಚ್ಚು ಮಂದಿ ನಾಪತ್ತೆ

    ಹೈದರಾಬಾದ್: ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಗೆ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ ಮತ್ತು 18ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

    ಕಡಪ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಚಿತ್ತೂರು ಜಿಲ್ಲೆಯಲ್ಲಿಯೂ ಕೂಡ ಮಳೆಯಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಕಟ್ಟಡ ಕುಸಿತ – ಇಬ್ಬರು ಮಕ್ಕಳ ಸಾವು

    ಮಳೆಯಿಂದಾಗಿ ಹಲವಾರು ನದಿಗಳು ಉಕ್ಕಿ ಹರಿಯುತ್ತಿದ್ದು, ರಾಯಲಸೀಮಾ ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಕೆಲವು ಸ್ಥಳಗಳಲ್ಲಿ ರಸ್ತೆ ಸಂಚಾರ ವ್ಯವಸ್ಥೆಯನ್ನು ಸಹ ಕಡಿತಗೊಳಿಸಲಾಗಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಂಡಿದೆ. ಹಲವೆಡೆ ರಸ್ತೆಗಳು ರಾಜಕಾಲುವೆಗಳಾಗಿ ಮಾರ್ಪಡುಗೊಂಡು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

    ಭಾರೀ ಮಳೆಗೆ 1,544 ಮನೆಗಳಿಗೆ ಹಾನಿಯಾಗಿದ್ದು, 3.4 ಹೆಕ್ಟರ್ ಕೃಷಿ ಕ್ಷೇತ್ರಗಳು ಮುಳುಗಡೆಯಾಗಿವೆ ಮತ್ತು ನೂರಾರು ಜಾನುವಾರುಗಳು ಸಾವನ್ನಪ್ಪಿವೆ. ಕಡಪ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಸುಮಾರು 8,206.57 ಲಕ್ಷ ಸಾರ್ವಜನಿಕ ಆಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಕಡಪಾ ಜಿಲ್ಲೆಯ ರಾಜಂಪೇಟಯ ಚೆಯ್ಯೆರು ಹಳ್ಳದ ಪ್ರವಾಹದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದು, 12 ಮಂದಿ ಪತ್ತೆಯಾಗಿಲ್ಲ. ಎಸ್‍ಡಿಆರ್‍ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಡಪ ಮತ್ತು ಚಿತ್ತೂರಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹತ್ತಾರು ಮಂದಿಯನ್ನು ರಕ್ಷಿಸಿದ್ದಾರೆ. ಪ್ರವಾಹದಿಂದಾಗಿ ಕಡಿತಗೊಂಡಿದ್ದ ಆರು ಗ್ರಾಮಗಳಿಗೆ ಎನ್‍ಡಿಆರ್‍ಎಫ್ ತಂಡ ಸಂಪರ್ಕವನ್ನು ಮರುಸ್ಥಾಪಿಸಿದೆ. ಕೊನೆಯದಾಗಿ ಉಳಿದಿರುವ ಒಂದು ಹಳ್ಳಿಯೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಸಿದು ಬಿದ್ದ ಮನೆ ಗೋಡೆ- ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

    ರಾಜ್ಯದ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ರಾಜ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಜಗನ್ ಮೋಹನ್ ರೆಡ್ಡಿ ಅವರು ಶನಿವಾರ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ ಎಂದು  ಹೇಳಲಾಗುತ್ತಿದೆ.

  • ಆಟೋ, ಟ್ರಕ್ ನಡುವೆ ಭೀಕರ ಅಪಘಾತ – 9 ಮಂದಿ ಸಾವು

    ಆಟೋ, ಟ್ರಕ್ ನಡುವೆ ಭೀಕರ ಅಪಘಾತ – 9 ಮಂದಿ ಸಾವು

    ದಿಸ್ಪುರ್: ಆಟೋ ರಿಕ್ಷಾ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಮೂವರು ಅಪ್ರಾಪ್ತರು ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಗುರುವಾರ ಬೆಳಿಗ್ಗೆ 7.30ರ ಸುಮಾರಿಗೆ ಜರುಗಿದ್ದು, ಮೃತರು ಛಠ್ ಪೂಜಾ ವಿಧಿವಿಧಾನಗಳನ್ನು ಮುಗಿಸಿ ಹಿಂದಿರುಗುತ್ತಿದ್ದರು. ಈ ವೇಳೆ ಕರೀಂಗಂಜ್‍ನ ಅಸ್ಸಾಂ-ತ್ರಿಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 8 ರಲ್ಲಿ ಆಟೋ-ರಿಕ್ಷಾ ಮತ್ತು ಸಿಮೆಂಟ್ ಸಾಗಿಸುವ ಲಾರಿ ಮುಖಾಮುಖಿ ಡಿಕ್ಕಿಹೊಡೆದಿದೆ. ಇದನ್ನೂ ಓದಿ: ಯಮುನಾ ನದಿಯಲ್ಲಿ ವಿಷಕಾರಿ ನೊರೆ – ಜನರಲ್ಲಿ ಆತಂಕ

    ಮೃತರನ್ನು ದುಜಾ ಬಾಯಿ ಪಣಿಕಾ, ಸಾಲು ಬಾಯಿ ಪಣಿಕಾ, ಗರುವ್ ದಾಸ್ ಪಣಿಕಾ, ಶಂಭು ದಾಸ್ ಪಣಿಕಾ, ಲಾಲೋನ್ ಗುಸ್ವಾಮಿ, ಪೂಜಾ ಗೋರ್ಹ್, ದೇಬ್ ಗೋರ್ಹ್, ಸಾನು ರೀ, ಮಾಂಗ್ಲೇ ಕರ್ಮಾಕರ್ ಮತ್ತು ತೂಪು ಕರ್ಮಾಕರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕಾನ್ಪುರದಲ್ಲಿ ಝಿಕಾ ವೈರಸ್ ಪತ್ತೆ – ಮತ್ತೆ 3 ಪ್ರಕರಣ, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ

    ಈ ಕುರಿತಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಟ್ವಿಟರ್‌ನಲ್ಲಿ, ಇಂದು ಬೆಳಿಗ್ಗೆ ಪಾಥರ್‍ಖಂಡಿಯ ಬೈತಖಾಲ್‍ನಲ್ಲಿ ಸಂಭವಿಸಿದ ಅಪಘಾತದಲ್ಲಿ 9 ಜನರ ದುರಂತ ಸಾವಿಗೆ ನಾನು ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಗೊಂಡ ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋಗೆ ಡಿಕ್ಕಿ ಹೊಡೆದು ನಂತರ ಸ್ಥಳದಿಂದ ಪರಾರಿಯಾಗಿದ್ದ ಟ್ರಕ್‍ನ ಚಾಲಕನನ್ನು ಪತ್ತೆಹಚ್ಚಲು ಇದೀಗ ಅಸ್ಸಾಂ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

  • ಕಾನ್ಪುರದಲ್ಲಿ ಝಿಕಾ ವೈರಸ್ ಪತ್ತೆ – ಮತ್ತೆ 3 ಪ್ರಕರಣ, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ

    ಕಾನ್ಪುರದಲ್ಲಿ ಝಿಕಾ ವೈರಸ್ ಪತ್ತೆ – ಮತ್ತೆ 3 ಪ್ರಕರಣ, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ

    ಲಕ್ನೋ: ಕಾನ್ಪುರದಲ್ಲಿ ಮತ್ತೆ ಮೂವರು ಮಂದಿಗೆ ಝಿಕಾ ವೈರಸ್ ದೃಢಪಟ್ಟಿದೆ.

    ಕಾನ್ಪುರದಲ್ಲಿ ದಿನೇ ದಿನೇ ಜಿಕಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆಯ ಪ್ರಕಾರ, ಇಲ್ಲಿಯವರೆಗೂ 17 ಮಂದಿ ಝಿಕಾ ವೈರಸ್‍ನಿಂದ ಚೇತರಿಸಿಕೊಂಡಿದ್ದಾರೆ. ಮತ್ತು ಒಟ್ಟು 91 ಸಕ್ರಿಯ ಪ್ರಕರಣಗಳು ವರದಿಯಾಗಿದೆ.

    ಭಾನುವಾರ ಮೂವರು ಭಾರತೀಯ ವಾಯುಪಡೆ ಸಿಬ್ಬಂದಿ ಸೇರಿದಂತೆ ಇನ್ನೂ 10 ಮಂದಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿತ್ತು. ಒಟ್ಟು 89 ಪ್ರಕರಣಗಳಿದ್ದ ಝಿಕಾ ವೈರಸ್ ಇದೀಗ 91ಕ್ಕೆ ಏರಿಕೆಯಾಗಿದೆ. ಶನಿವಾರ 13 ಮಂದಿಯಲ್ಲಿ ಝಿಕಾ ವೈರಸ್ ಪಾಸಿಟಿವ್ ದೃಢಪಟ್ಟಿತ್ತು. ಜೊತೆಗೆ ಕನ್ನೌಜ್ ಜಿಲ್ಲೆಯಿಂದಲೂ ಒಂದು ಪ್ರಕರಣ ವರದಿಯಾಗಿತ್ತು. ಇದನ್ನೂ ಓದಿ: ವಿಚಾರಣೆ ವೇಳೆ ನ್ಯಾಯಾಧೀಶರಿಗೆ ಚಪ್ಪಲಿ ಎಸೆದ ಕೊಲೆ ಆರೋಪಿ!

    ಒಟ್ಟು 89 ಸೋಂಕಿತರಲ್ಲಿ 55 ಮಂದಿ ಪುರುಷರಾಗಿದ್ದು, 34 ಮಂದಿ ಮಹಿಳೆಯರಾಗಿದ್ದಾರೆ. ಇವರಲ್ಲಿ 23 ಮಂದಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅಲ್ಲದೇ ಸೋಂಕಿತರಲ್ಲಿ 12 ಮಂದಿ ಭಾರತೀಯ ವಾಯುಪಡೆ (ಐಎಎಫ್) ಸಿಬ್ಬಂದಿಯರಿದ್ದು, ಇದರಲ್ಲಿ 11 ಪುರುಷರು ಮತ್ತು ಓರ್ವ ಮಹಿಳೆಯಾಗಿದ್ದಾರೆ ಎಂದು ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಕ್ ಜಿ ಅಯ್ಯರ್ ಹೇಳಿದ್ದಾರೆ.

    Mosquito

    ಆರೋಗ್ಯ ತಂಡಗಳು ಗುರುವಾರ, ಶುಕ್ರವಾರ ಮತ್ತು ಶನಿವಾರ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 525 ಮಂದಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ವೈರಾಲಜಿ ಲ್ಯಾಬ್ ಮತ್ತು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಪರೀಕ್ಷೆಗಾಗಿ ಕಳುಹಿಸಿದೆ. ಇದನ್ನೂ ಓದಿ: ವಿವಾಹವಾಗಲು ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕುವಿನಿಂದ 18 ಬಾರಿ ಇರಿದ ಪ್ರಿಯಕರ!

    ಅಕ್ಟೋಬರ್ 23 ಐಎಎಫ್‍ನ ವಾರಂಟ್ ಅಧಿಕಾರಿಯೊಬ್ಬರಲ್ಲಿ ಝಿಕಾ ವೈರಸ್ ಮೊದಲ ಬಾರಿಗೆ ಪತ್ತೆಯಾಯಿತು. ಇದೀಗ ನಗರದಲ್ಲಿ ಒಟ್ಟು 3,283 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅವುಗಳನ್ನು ಲಕ್ನೋದ ಕೆಜಿಎಂಯು ಮತ್ತು ಪುಣೆಯ ಎನ್‍ಐವಿಯ ವೈರಾಲಜಿ ಲ್ಯಾಬ್‍ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.

    ರೋಗದ ಹರಡುವಿಕೆಯನ್ನು ಪರಿಶೀಲಿಸಲು, ಆರೋಗ್ಯ ತಂಡಗಳು ಆಂಟಿ-ಲಾರ್ವಾ ಸಿಂಪರಣೆ ಮತ್ತು ಜ್ವರ ರೋಗಿಗಳನ್ನು ಗುರುತಿಸುವುದು, ಗಂಭೀರವಾಗಿ ಅನಾರೋಗ್ಯ ಪೀಡಿತರು ಮತ್ತು ಗರ್ಭಿಣಿಯರನ್ನು ಪರೀಕ್ಷಿಸುವುದು ಸೇರಿದಂತೆ ನೈರ್ಮಲ್ಯ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿವೆ. ಕಣ್ಗಾವಲು ಹೆಚ್ಚಿಸಲು ಮತ್ತು ಝಿಕಾ ವೈರಸ್‍ಗಾಗಿ ಮನೆ-ಮನೆಗೆ ಮಾದರಿ ಮತ್ತು ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಅಧಿಕಾರಿಗಳನ್ನು ಕೇಳಲಾಗಿದೆ.

  • ಪುನೀತ್ ಸಾವಿನ ಬೆನ್ನಲ್ಲೇ ಹೆಚ್ಚಾಯ್ತು ಇಸಿಜಿ, ಹೃದಯಸಂಬಂಧಿ ಟೆಸ್ಟ್‌ಗಳು

    ಪುನೀತ್ ಸಾವಿನ ಬೆನ್ನಲ್ಲೇ ಹೆಚ್ಚಾಯ್ತು ಇಸಿಜಿ, ಹೃದಯಸಂಬಂಧಿ ಟೆಸ್ಟ್‌ಗಳು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ ಬೆನ್ನಲ್ಲೇ ಇಸಿಜಿ, ಹೃದಯಸಂಬಂಧಿ ಟೆಸ್ಟ್ ಗಳನ್ನು ಮಾಡಿಸಿಕೊಳ್ಳಲು ಜನ ಆಸ್ಪತ್ರೆಗಳಿಗೆ ಮುಗಿಬೀಳುತ್ತಿದ್ದಾರೆ.

    ಪುನೀತ್ ರಾಜ್ ಕುಮಾರ್ ಸಾವು ಎಲ್ಲರನ್ನು ಆತಂಕಕ್ಕೆ ದೂಡಿದೆ. ಅಷ್ಟು ಆರೋಗ್ಯವಾಗಿದ್ದ ವ್ಯಕ್ತಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದು ಆತಂಕ ಹೆಚ್ಚು ಮಾಡಿದೆ. ಇದರಿಂದಾಗಿ ಬೆಂಗಳೂರಿನ ಜನ ಲ್ಯಾಬ್, ಆಸ್ಪತ್ರೆಗಳಿಗೆ ಬಂದು ಹೃದಯ ಸಂಬಂಧಿ ಟೆಸ್ಟ್‌ಗಳಿಗೆ ಒಳಗಾಗುತ್ತಿದ್ದಾರೆ.  ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

    ಕೇವಲ ಒಂದು ವಾರದಲ್ಲಿ 50% ರಷ್ಟು ಮಂದಿ ಇಸಿಜಿ ಪರೀಕ್ಷೆಗೆ ಒಳಗಾಗಿದ್ದು, ಇದರಲ್ಲಿ 20% ರಿಂದ 30% ರಷ್ಟು ಜನರಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆಗಳಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಆಸ್ಪತ್ರೆ ಹಾಗೂ ಲ್ಯಾಬ್‍ಗಳಲ್ಲಿ ಕ್ಯೂಗಟ್ಟಲೆ ಜನ ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದರಿಂದ ತಜ್ಞರು ಸಮಸ್ಯೆಗಳಿದ್ದರೆ ಅಷ್ಟೇ ಪರೀಕ್ಷೆ ಮಾಡಿಸಿಕೊಳ್ಳಿ, ಸುಖಾಸುಮ್ಮನೆ ಆತಂಕ ಬೇಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುನೀತ್ ಸಾವಿಗೂ 46 ಸಂಖ್ಯೆಗೂ ಸಂಬಂಧವೇನು?

  • ವಿಜಯಪುರದಲ್ಲಿ ನಿಲ್ಲದ ಭೂ ಕಂಪನದ ಭಯ – ಜನರಲ್ಲಿ ಆತಂಕ

    ವಿಜಯಪುರದಲ್ಲಿ ನಿಲ್ಲದ ಭೂ ಕಂಪನದ ಭಯ – ಜನರಲ್ಲಿ ಆತಂಕ

    ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

    ತಡರಾತ್ರಿ 1.50 ಸುಮಾರಿಗೆ ಜಿಲ್ಲೆಯ ತಿಕೋಟಾ ತಾಲೂಕಿನ ಕೆ.ಸಿದ್ದಾಪುರ, ಧನ್ನರ್ಗಿ ಗ್ರಾಮಗಳಲ್ಲಿ ಭೂಮಿ ನಡುಗಿದಂತೆ ಜೋರಾದ ಶಬ್ಧದ ಅನುಭವಾಗಿದೆ. ಇದರಿಂದ ಅಲ್ಲಿನ ಜನರು ಭಯಭೀತರಾಗಿದ್ದಾರೆ. ಬುಧವಾರ ರಾತ್ರಿ 8.26 ರ ಸುಮಾರಿಗೆ ಕಳ್ಳಟಕವಟಗಿ, ಟಕ್ಕಳಕಿ, ಸೋಮದೇವರಹಟ್ಟಿ ಭಾಗದಲ್ಲಿ ಭೂಮಿ ಕಂಪಿಸಿದ್ದ ಅನುಭವವಾಗಿದೆ. ಇದನ್ನೂ ಓದಿ: ವಿಜಯಪುರದ ಸಿಂದಗಿಯಲ್ಲಿ ಭೂಕಂಪನ ಅನುಭವ – ಜನರಲ್ಲಿ ಆತಂಕ

    ಈ ಮುನ್ನ ಸೆಪ್ಟೆಂಬರ್ 4 ರಂದು ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ 3.9 ತೀವ್ರತೆಯಲ್ಲಿ ಭೂಕಂಪನ ಉಂಟಾಗಿತ್ತು. ಮಹಾರಾಷ್ಟ್ರದ ಕೊಲ್ಲಾಪುರ ಭೂಕಂಪನದ ಕೇಂದ್ರವಾಗಿತ್ತು. ಹೀಗಾಗಿ ಸಿಂದಗಿ ಪಟ್ಟಣದಲ್ಲಿ ಇದು ಭೂಕಂಪನ ಎನ್ನುವ ಆತಂಕ ಜನರಲ್ಲಿ ಮನೆ ಮಾಡಿತ್ತು. ಇದರ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಜನರಿಗೆ ಸತ್ಯ ತಿಳಿಸಿದರೆ, ಆತಂಕ ದೂರವಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ಇದೀಗ ಮತ್ತೆ ವಿಜಯಪುರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದನ್ನೂ ಓದಿ: ಕೋವ್ಯಾಕ್ಸಿನ್‌ ಲಸಿಕೆ ಪಡೆದವರು ತಮ್ಮ ದೇಶಕ್ಕೆ ಪ್ರಯಾಣಿಸಬಹುದು: ಯುಎಸ್‌ ಅನುಮತಿ