Tag: ಜನ ಸ್ವರಾಜ್ ಯಾತ್ರೆ

  • ಕಾಂಗ್ರೆಸ್‍ನವರಿಗೆ ಜನ ಬೆಂಬಲವಿಲ್ಲ: ಸಿ.ಟಿ.ರವಿ

    ಕಾಂಗ್ರೆಸ್‍ನವರಿಗೆ ಜನ ಬೆಂಬಲವಿಲ್ಲ: ಸಿ.ಟಿ.ರವಿ

    -ಕಾಂಗ್ರೆಸ್‍ನಲ್ಲಿರುವವರೆಲ್ಲಾ ನಾಯಕರು, ವೇದಿಕೆ ಕೆಳಗೆ ಕುಳಿತುಕೊಳ್ಳಲು ಕಾರ್ಯಕರ್ತರೇ ಇಲ್ಲ

    ಶಿವಮೊಗ್ಗ: ಕಾಂಗ್ರೆಸ್‍ನವರಿಗೆ ಜನ ಬೆಂಬಲವಿಲ್ಲ. ಹೀಗಾಗಿಯೇ ಬಿಜೆಪಿಯ ಜನ ಸ್ವರಾಜ್ ಯಾತ್ರೆಯನ್ನು ಕಾಂಗ್ರೆಸ್‍ನವರು ಟೀಕಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜನ ಸ್ವರಾಜ್ ಯಾತ್ರೆಯಲ್ಲಿ ದೊರೆತ ಜನ ಬೆಂಬಲ ಗಮನಿಸಿದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ಕ್ಕು ಹೆಚ್ಚು ಸ್ಥಾನ ಗೆಲ್ಲಲ್ಲಿದೆ. ಇದರಿಂದಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. ಈಗಾಗಿಯೇ ಸಿದ್ದರಾಮಯ್ಯ ಅವರು ಅಸಂಬದ್ದವಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಪರಿಷತ್‌ ಚುನಾವಣೆ- ಕಾಂಗ್ರೆಸ್‌ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ

    ರಾಜ್ಯದಲ್ಲಿ ಬಿಜೆಪಿ ನಾಲ್ಕು ತಂಡಗಳಲ್ಲಿ ರಾಜ್ಯದ ಉದ್ದಗಲಕ್ಕೂ ಜನ ಸ್ವರಾಜ್ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಿದೆ. ಜನ ಸ್ವರಾಜ್ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಈ ಜನ ಬೆಂಬಲ ಕಾಂಗ್ರೆಸ್‍ನವರಿಗೆ ಸಹಿಸಲು ಆಗುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ದ ಕಿಡಿ ಕಾರಿದರು. ಇದನ್ನೂ ಓದಿ: ಆರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಅಲ್ಲ, ಕೇವಲ ತೀರ್ಥಹಳ್ಳಿಗೆ ಮಾತ್ರ ಗೃಹ ಸಚಿವ: ಕಿಮ್ಮನೆ ರತ್ನಾಕರ್

    ಕಾಂಗ್ರೆಸ್‍ನವರಿಗೆ ಜನ ಬೆಂಬಲ ಇಲ್ಲ. ಹೀಗಾಗಿ ಬಿಜೆಪಿಯ ಜನ ಸ್ವರಾಜ್ ಯಾತ್ರೆ ಬಗ್ಗೆ ಕಾಂಗ್ರೆಸ್ ವಿರೋಧ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‍ನಲ್ಲಿ ಖುರ್ಚಿಗಾಗಿ ಜಗಳ ನಡೆಯುತ್ತಿದೆ. ವೇದಿಕೆ ಮೇಲೆ ಯಾರು ಯಾರು ಕುಳಿತುಕೊಳ್ಳಬೇಕು. ಬಲಭಾಗದಲ್ಲಿ ಯಾರು ಕುಳಿತುಕೊಳ್ಳಬೇಕು. ಎಡ ಭಾಗದಲ್ಲಿ ಯಾರು ಕುಳಿತುಕೊಳ್ಳಬೇಕು ಎಂಬ ಬಗ್ಗೆ ಅವರಲ್ಲಿಯೇ ಗೊಂದಲ ಇದೆ. ಅಲ್ಲದೇ ಕಾಂಗ್ರೆಸ್‍ನಲ್ಲಿ ಇರುವವರೆಲ್ಲಾ ನಾಯಕರು, ವೇದಿಕೆ ಕೆಳಗೆ ಕುಳಿತುಕೊಳ್ಳಲು ಕಾರ್ಯಕರ್ತರೇ ಇಲ್ಲ. ಇದಕ್ಕಾಗಿಯೇ ವೇದಿಕೆ ಮೇಲೆ ಯಾರು ಕುಳಿತುಕೊಳ್ಳಬಾರದು. ಎಲ್ಲರೂ ಕೆಳಗಡೆಯೇ ಕುಳಿತುಕೊಳ್ಳಬೇಕು ಎಂಬ ಹೊಸ ನಿಯಮವನ್ನು ಕಾಂಗ್ರೆಸ್‍ನವರು ಜಾರಿಗೊಳಿಸಿದ್ದಾರೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.