Tag: ಜನ ನಾಯಗನ್‌ ಸಿನಿಮಾ

  • 2026ರ ಸಂಕ್ರಾಂತಿಯಂದು ರಿಲೀಸ್‌ ಆಗಲಿದೆ ವಿಜಯ್‌ ನಟನೆಯ ಕೊನೆಯ ಸಿನಿಮಾ

    2026ರ ಸಂಕ್ರಾಂತಿಯಂದು ರಿಲೀಸ್‌ ಆಗಲಿದೆ ವಿಜಯ್‌ ನಟನೆಯ ಕೊನೆಯ ಸಿನಿಮಾ

    ಮಿಳು ನಟ ವಿಜಯ್ (Vijay) ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ (Jana Nayagan) ರಿಲೀಸ್ ಡೇಟ್ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಇದನ್ನೂ ಓದಿ:ಮಾ.27ಕ್ಕೆ ಸಂಸತ್ತಿನಲ್ಲಿ `ಛಾವಾ’ ಸಿನಿಮಾ ವೀಕ್ಷಿಸಲಿರುವ ಪ್ರಧಾನಿ ಮೋದಿ

    ಕೊನೆಗೂ ವಿಜಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ವಿಜಯ್ ಕೊನೆಯ ಚಿತ್ರ ಮುಂದಿನ ವರ್ಷ ಜನವರಿ 9ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ಅಪ್‌ಡೇಟ್‌ ಹಂಚಿಕೊಂಡಿದೆ. ಸಂಕ್ರಾಂತಿ ಹಬ್ಬದ ಸಡಗರದ ನಡುವೆ ವಿಜಯ್‌ ಕೊನೆಯ ಚಿತ್ರದ ಅಬ್ಬರ ಕೂಡ ಇರಲಿದೆ.

     

    View this post on Instagram

     

    A post shared by KVN Productions (@kvn.productions)

    ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ‘ಜನ ನಾಯಗನ್‌’ ರಾಜಕೀಯಕ್ಕೆ ಸಂಬಂಧಪಟ್ಟ ಚಿತ್ರವಾಗಿದೆ. ಈಗಾಗಲೇ ಚಿತ್ರದ ಪೋಸ್ಟರ್‌ನಿಂದ ಕುತೂಹಲ ಮೂಡಿಸಿದೆ. ‘ಬೀಸ್ಟ್‌’ ಚಿತ್ರದ ನಂತರ ‘ಜನ ನಾಯಗನ್‌’ ಚಿತ್ರದ ಮೂಲಕ 2ನೇ ಬಾರಿ ವಿಜಯ್ ಮತ್ತು ಪೂಜಾ ಹೆಗ್ಡೆ (Pooja Hegde) ಜೊತೆಯಾಗ್ತಿದ್ದಾರೆ.

    ಇನ್ನೂ ಈ ಚಿತ್ರದ ಬಳಿಕ ಮತ್ತೆ ತಾವು ನಟಿಸುವುದಿಲ್ಲ. ರಾಜಕೀಯದಲ್ಲಿ ಇರೋದಾಗಿ ವಿಜಯ್ ಈಗಾಗಲೇ ತಿಳಿಸಿದ್ದಾರೆ. ಹಾಗಾಗಿ ನಟನ ಕೊನೆಯ ಸಿನಿಮಾ ಸಂಭ್ರಮಿಸಲು ಫ್ಯಾನ್ಸ್ ಕಾಯ್ತಿದ್ದಾರೆ.

  • ‘ಜನ ನಾಯಗನ್’ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಮೂವರು ಸ್ಟಾರ್ ನಿರ್ದೇಶಕರು

    ‘ಜನ ನಾಯಗನ್’ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಮೂವರು ಸ್ಟಾರ್ ನಿರ್ದೇಶಕರು

    ಕಾಲಿವುಡ್‌ನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾದಲ್ಲಿ ತಮಿಳಿನ ಖ್ಯಾತ ನಿರ್ದೇಶಕರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿ- ಕನ್ನಡಕ್ಕೆ ಬಂದ ‘ಹನುಮಾನ್’ ಖ್ಯಾತಿಯ ಅಮೃತಾ ಅಯ್ಯರ್

    ‘ಜನ ನಾಯಗನ್’ ಸಿನಿಮಾದಲ್ಲಿ ಲೋಕೇಶ್ ಕನಕರಾಜ್ (Lokesh Kanagaraj), ನೆಲ್ಸನ್ ದಿಲೀಪ್ ಕುಮಾರ್ (Nelson Dileep Kumar), ‘ಜವಾನ್’ ಡೈರೆಕ್ಟರ್ ಅಟ್ಲಿ (Atlee Kumar) ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವಿಶೇಷ ಗೀತೆಯೊಂದರಲ್ಲಿ ಈ ಮೂರು ಮಂದಿ ಸ್ಟಾರ್ ನಿರ್ದೇಶಕರು ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

    ವಿಜಯ್ ಆಪ್ತರಾಗಿರುವ ಈ ನಿರ್ದೇಶಕರು ನಟನ ಕೊನೆಯ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ. ಕೆವಿಎನ್‌ ಸಂಸ್ಥೆ ನಿರ್ಮಾಣದ ಈ ಚಿತ್ರಕ್ಕೆ ಹೆಚ್. ವಿನೋದ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕರಾವಳಿ ಬೆಡಗಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ವಿಜಯ್‌ಗೆ 2ನೇ ಬಾರಿ ಜೋಡಿಯಾಗಿ ನಟಿಸುತ್ತಿದ್ದಾರೆ. 2026ರಲ್ಲಿ ಚಿತ್ರ ರಿಲೀಸ್ ಆಗಲಿದೆ.