Tag: ಜನ ನಾಯಗನ್‌

  • ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

    ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

    ಕಾಲಿವುಡ್‌ನ ನಟ ವಿಜಯ್ ದಳಪತಿಗೆ (Vijay Thalapathy) ಇಂದು (ಜೂನ್-22) ಹುಟ್ಟುಹಬ್ಬದ ಸಂಭ್ರಮ. 51ನೇ ವಸಂತಕ್ಕೆ ಕಾಲಿಟ್ಟಿರುವ ನಟ ವಿಜಯ್ ದಳಪತಿ ತಮ್ಮ ಕೊನೆಯ ಸಿನಿಮಾ ʻಜನ ನಾಯಗನ್ʼ ಫಸ್ಟ್ ಲುಕ್ ಟೀಸರ್ (Jana Nayagan Teaser) ರಿಲೀಸ್ ಆಗಿದೆ. ವಿಜಯ್ ದಳಪತಿ ಖಾಕಿ ತೊಟ್ಟು ಕೊಡುವ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ವಿಜಯ್ ದಳಪತಿ ಜನ ನಾಯಗನ್ ಸಿನಿಮಾ ಮೂಲಕ ತಮ್ಮ ಸಿನಿಮಾ ಕೆರಿಯರ್‌ಗೆ ಬ್ರೇಕ್ ತೆಗೆದುಕೊಳ್ತಿದ್ದಾರೆ. ನಂತರ ರಾಜಕೀಯದಲ್ಲೇ ತಮ್ಮನ್ನ ತೊಡಗಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. 2026ರ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಾರ್ಟಿ ಮೂಲಕ ಜನಸೇವೆಗೆ ಇಳಿಯಲು ಸಕಲ ಸಿದ್ಧತೆಯ ಜೊತೆಗೆ ಕೊನೆಯ ಸಿನಿಮಾ ಮೇಲೂ ಗಮನಹರಿಸಿದ್ದಾರೆ.

    ಜನ ನಾಯಗನ್ ಸಿನಿಮಾಗೆ ಎಚ್.ವಿನೋದ್ ನಿರ್ದೇಶನ ಮಾಡಿದ್ದಾರೆ. ವಿಜಯ್ ದಳಪತಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ತೆರೆಹಂಚಿಕೊಂಡಿದ್ದಾರೆ. ಅನಿರುದ್ಧ್ ಮ್ಯೂಸಿಕಲ್ ಮ್ಯಾಜಿಕ್ ಈ ಚಿತ್ರಕ್ಕಿರಲಿದೆ. ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಮಮಿತಾ ಬೈಜು, ಪ್ರಕಾಶ್ ರಾಜ್ ಮುಂತಾದವ್ರು ಚಿತ್ರದ ತಾರಾಗಣದಲ್ಲಿದ್ದಾರೆ.

    ವಿಜಯ್ ದಳಪತಿ ನಟನೆಯ 69ನೇ ಸಿನಿಮಾ ಇದಾಗಿದ್ದು, ಜನ ನಾಯಗನ್ ಸಿನಿಮಾ 2026ರ ಜನವರಿ 09 ರಂದು ತೆರೆಗೆ ಬರಲಿದೆ. ಬರುವ ವರ್ಷ ಸಂಕ್ರಾಂತಿ ವಿಜಯ್ ಅಭಿಮಾನಿಗಳಿಗೆ ಡಬಲ್ ಧಮಾಕಾ ಸೃಷ್ಟಿಸಲಿದೆ. ಕೆವಿಎನ್ ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ. ಒಟ್ಟಿನಲ್ಲಿ ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳ ಸಂಭ್ರಮ ದುಪ್ಪಟ್ಟು ಮಾಡಿದ್ದಾರೆ ವಿಜಯ್.

  • ಅಭಿಮಾನಿ ಕಡೆ ಗನ್ ಇಟ್ಟ ದಳಪತಿ ವಿಜಯ್ ಬಾಡಿಗಾರ್ಡ್!

    ಅಭಿಮಾನಿ ಕಡೆ ಗನ್ ಇಟ್ಟ ದಳಪತಿ ವಿಜಯ್ ಬಾಡಿಗಾರ್ಡ್!

    ಳಪತಿ ವಿಜಯ್ (Thalapathy Vijay) ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ (Jana Nayagan) ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ವಿಜಯ್ ಭೇಟಿಗೆ ಬಂದ ಅಭಿಯಾನಿಯತ್ತ ಬಾಡಿಗಾರ್ಡ್ ಗನ್ ಇಟ್ಟಿರುವ ವಿಡಿಯೋವೊಂದು ಸಖತ್ ವೈರಲ್ ಆಗ್ತಿದೆ. ಅಭಿಮಾನಿ ಜೊತೆಗಿನ ವಿಜಯ್ ಬಾಡಿಗಾರ್ಡ್ ವರ್ತನೆ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಬೇಬಿ ಬಂಪ್‌ನೊಂದಿಗೆ ‘ಮೆಟ್ ಗಾಲಾ’ದಲ್ಲಿ ಹೆಜ್ಜೆ ಹಾಕಿದ ಕಿಯಾರಾ ಅಡ್ವಾಣಿ

    ಕೊಡೈಕೆನಾಲ್‌ನಲ್ಲಿ ಚಿತ್ರೀಕರಣ ಮುಗಿಸಿ ಮಧುರೈ ವಿಮಾನ ನಿಲ್ದಾಣಕ್ಕೆ ವಿಜಯ್ ಆಗಮಿಸಿದ್ದರು. ಈ ವೇಳೆ ಅಪಾರ ಸಂಖ್ಯೆ ಫ್ಯಾನ್ಸ್ ಜಮಾಯಿಸಿದ್ದರು. ಅಲ್ಲಿದ್ದ ವಯಸ್ಸಾದ ಅಭಿಮಾನಿಯೊಬ್ಬರು ಬಾಡಿಗಾರ್ಡ್ ಕಣ್ಣು ತಪ್ಪಿಸಿ ಭೇಟಿ ಮಾಡುವ ಪ್ರಯತ್ನ ಮಾಡಿದ್ದಾರೆ. ಆಗ ಅವರಿಗೆ ಗನ್ ತೋರಿಸಿ ಹೆದರಿಸಿದ್ದಾರೆ. ಆ ನಂತರ ಬಾಡಿಗಾರ್ಡ್ ಗನ್ ಅನ್ನು ಜೇಬಿಗೆ ಇಳಿಸಿದ್ದಾರೆ. ಇದನ್ನೂ ಓದಿ:ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ಯಾಕೆ?- ಪ್ರಚಾರದ ಗಿಮಿಕ್ ಎಂದವರಿಗೆ ನಟಿ ಸ್ಪಷ್ಟನೆ

    ಈ ಘಟನೆ ನಡೆದ ಸಂದರ್ಭದಲ್ಲಿ ವಿಜಯ್‌ಗೆ ಗಮನಕ್ಕೆ ಬಂದಿಲ್ಲ. ಹೀಗಾಗಿ ಈ ವಿಡಿಯೋ ನೋಡಿದ ಅಭಿಮಾನಿಗಳು ಬಾಡಿಗಾರ್ಡ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವಿಜಯ್ ಅವರು ಕನ್ನಡದ ಸಂಸ್ಥೆ ಕೆವಿಎನ್ ನಿರ್ಮಿಸುತ್ತಿರುವ ‘ಜನ ನಾಯಗನ್’ (Jana Nayagan) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಪೂಜಾ ಹೆಗ್ಡೆ ಜೋಡಿಯಾಗಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಜ.9ರಂದು ಚಿತ್ರ ರಿಲೀಸ್ ಆಗಲಿದೆ.

  • ಸಂಕ್ರಾಂತಿಗೆ ಸ್ಟಾರ್ ವಾರ್- ವಿಜಯ್ ನಟನೆಯ ‘ಜನ ನಾಯಗನ್’ ಎದುರು ಅಬ್ಬರಿಸಲಿದೆ ಜ್ಯೂ.ಎನ್‌ಟಿಆರ್ ಸಿನಿಮಾ

    ಸಂಕ್ರಾಂತಿಗೆ ಸ್ಟಾರ್ ವಾರ್- ವಿಜಯ್ ನಟನೆಯ ‘ಜನ ನಾಯಗನ್’ ಎದುರು ಅಬ್ಬರಿಸಲಿದೆ ಜ್ಯೂ.ಎನ್‌ಟಿಆರ್ ಸಿನಿಮಾ

    ವಿಜಯ್ (Vijay Thalapathy) ಸಿನಿಮಾ ಎದುರು ಅಬ್ಬರಿಸಲು ಜ್ಯೂ.ಎನ್‌ಟಿಆರ್ (Jr.Ntr) ರೆಡಿಯಾಗಿದ್ದಾರೆ. ಒಂದೇ ದಿನ ಇಬ್ಬರೂ ಸ್ಟಾರ್ ನಟರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಚಿತ್ರದ ಮುಂದೆ ಪ್ರಶಾಂತ್ ನೀಲ್ ಹಾಗೂ ಜ್ಯೂ.ಎನ್‌ಟಿಆರ್ ನಟನೆಯ ಚಿತ್ರ ರಿಲೀಸ್ ಆಗಲಿದೆ. ಇದರಿಂದ ಮುಂದಿನ ವರ್ಷ ಸಂಕ್ರಾಂತಿಗೆ ಸ್ಟಾರ್ ವಾರ್ ಶುರುವಾಗಲಿದ್ಯಾ? ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.‌

    ಜ್ಯೂ.ಎನ್‌ಟಿಆರ್ ನಟನೆಯ ಹೊಸ ಸಿನಿಮಾ ಮುಂದಿನ ವರ್ಷ ಜ.9ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ. ಇದೇ ದಿನ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಕೂಡ ರಿಲೀಸ್ ಆಗ್ತಿದೆ. ಹಾಗಾಗಿ ಸ್ಟಾರ್ ವಾರ್ ನಡೆಯುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ರಾಮ್ ಚರಣ್ ಸಿನಿಮಾಗೆ ‘ಪೆಡ್ಡಿ’ ಟೈಟಲ್ ಫಿಕ್ಸ್- ಮಾಸ್ ಗೆಟಪ್‌ನಲ್ಲಿ ನಟ

    ಈ ಹಿಂದೆ ವಿಜಯ್ ನಟನೆಯ ‘ಬೀಸ್ಟ್’ (Beast) ಸಿನಿಮಾ ಮುಂದೆ ಯಶ್ ನಟನೆಯ ‘ಕೆಜಿಎಫ್ 2’ (KGF 2) ರಿಲೀಸ್ ಭರ್ಜರಿ ಯಶಸ್ಸು ಕಂಡಿತ್ತು. ಬೀಸ್ಟ್ ಚಿತ್ರ ಹೀನಾಯವಾಗಿ ಸೋಲು ಕಂಡಿತ್ತು. ಈಗ ಮತ್ತೆ ಪ್ರಶಾಂತ್ ನೀಲ್ ನಿರ್ದೇಶನದ ಜ್ಯೂ.ಎನ್‌ಟಿಆರ್ ಸಿನಿಮಾ ಬರುತ್ತಿದೆ. ಈ ಎರಡು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕ್ಲ್ಯಾಶ್ ಆಗೋ ಸಾಧ್ಯತೆ ಇದೆ. ಹಾಗಾಗಿ ಇಬ್ಬರಲ್ಲಿ ಒಬ್ಬರಾದರು ರಿಲೀಸ್ ಡೇಟ್ ಮುಂದಕ್ಕೆ ಹಾಕ್ತಾರಾ? ಎಂದು ಈಗ ಚರ್ಚೆ ನಡೆಯುತ್ತಿದೆ.

    ಅಂದಹಾಗೆ, ‘ಜನ ನಾಯಗನ್’ ಚಿತ್ರವನ್ನು ಕನ್ನಡದ ಖ್ಯಾತ ಸಂಸ್ಥೆ ಕೆವಿಎನ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಗೆ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ನಟಿಸುತ್ತಿದ್ದಾರೆ.