Tag: ಜನ್ಮ

  • ವರಮಹಾಲಕ್ಷ್ಮಿ ಹಬ್ಬದಂದೇ ಜನನ- 2ನೇ ಹೆರಿಗೆಯಲ್ಲಿ 3 ಮಕ್ಕಳಿಗೆ ಜನ್ಮ

    ವರಮಹಾಲಕ್ಷ್ಮಿ ಹಬ್ಬದಂದೇ ಜನನ- 2ನೇ ಹೆರಿಗೆಯಲ್ಲಿ 3 ಮಕ್ಕಳಿಗೆ ಜನ್ಮ

    ಮೈಸೂರು: ವರಮಹಾಲಕ್ಷ್ಮಿ ಹಬ್ಬದಂದೇ ತಾಯಿಯೊಬ್ಬರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ವಿಜಯನಗರ ನಿವಾಸಿ ಪ್ರೇಮ್ ಕುಮಾರ್ ಅವರ ಪತ್ನಿ ಸವಿತಾಗೆ 3 ಮಕ್ಕಳ ಜನ್ಮವಾಗಿದೆ. ಸವಿತಾ ತಮ್ಮ 2ನೇ ಹೆರಿಗೆಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು ಆಪರೇಷನ್ ಮೂಲಕ ಮೂರು ಮಕ್ಕಳನ್ನು ಯಶಸ್ವಿಯಾಗಿ ಡೆಲಿವರಿ ಮಾಡಿಸಿದ್ದಾರೆ.

    ಮೂರು ಮಕ್ಕಳಲ್ಲಿ ಎರಡು ಗಂಡು ಮಕ್ಕಳು, ಒಂದು ಹೆಣ್ಣು ಮಗುವಾಗಿದೆ. ಪತ್ನಿಗೆ ಮೂರು ಮಕ್ಕಳಾದ ಹಿನ್ನಲೆಯಲ್ಲಿ ಪತಿ ಪ್ರೇಮ್ ಕುಮಾರ್ ಸಂತಸ ವ್ಯಕ್ತಪಡಿಸಿದರು. ಸದ್ಯ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮೂವರು ಮಕ್ಕಳೂ ಕ್ಷೇಮವಾಗಿದ್ದಾರೆ.

    ಈ ಹಿಂದೆ ಬಳ್ಳಾರಿಯಲ್ಲಿ ಮಹಿಳೆಯೊಬ್ಬರು 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಸಿರಗುಪ್ಪ ಪಟ್ಟಣದ ಸದಾಶಿವನಗರದ ಆಸ್ಪತ್ರೆಯಲ್ಲಿ ಸೀಮಾಂದ್ರದ ಕೌತಾಳಂನ ಮಾರಮ್ಮ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮದುವೆಯಾಗಿ 10 ವರ್ಷದ ನಂತರ ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಕುಟುಂಬದವರಿಗೆ ತ್ರಿವಳಿ ಧಮಾಕಾ ಎನ್ನುವಂತಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗದಗದಲ್ಲಿ ಮತ್ಸ್ಯ ರೂಪದ ಮಗು ಜನನ!

    ಗದಗದಲ್ಲಿ ಮತ್ಸ್ಯ ರೂಪದ ಮಗು ಜನನ!

    ಗದಗ: ಮತ್ಸ್ಯ ರೂಪದ ಅಪರೂಪದ ಮಗುವೊಂದು ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಿಕಿ ಆಸ್ಪತ್ರೆಯಲ್ಲಿ ಜನನವಾಗಿದೆ. ಆದರೆ ಈ ಮಗು ಜನಿಸಿದ ಮೂರು ಗಂಟೆಯೊಳಗೆ ಮೃತಪಟ್ಟಿದೆ. ಈ ಮಗುವನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಹಾಗೂ ಪೋಷಕರು ಕಂಡು ದಿಗ್ಭ್ರಮೆಗೊಂಡಿದ್ದಾರೆ.

    ವೈಜ್ಞಾನಿಕವಾಗಿ ಈ ರೀತಿಯ ಮಗುವನ್ನು ಸಿರೆನೋಮೆಲಿಯಾ ಅಥವಾ ಮತ್ಸ್ಯಕನ್ಯೆ ಎಂದು ಕರೆಯುತ್ತಾರೆ. ಪ್ರಪಂಚದಲ್ಲಿ ತೀರಾ ಅಪರೂಪವಾಗಿ ಈ ರೀತಿಯ ಮಗು ಜನನವಾಗುತ್ತೆ ಎಂದು ಹೇಳಲಾಗುತ್ತದೆ.

    ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮತ್ಸ್ಯಕನ್ಯೆಯ ರೀತಿಯಲ್ಲೇ ಎರಡೂ ಕಾಲುಗಳು ಒಟ್ಟಿಗೆ ಜೋಡಿಕೊಂಡಿರುವ ಶಿಶುವಿಗೆ 23 ವರ್ಷದ ಮಹಿಳೆಯೊಬ್ಬರು ಕೋಲ್ಕತ್ತಾದಲ್ಲಿ ಜನ್ಮ ನೀಡಿದ್ದರು.

    ಮುಸ್ಕರಾ ಬಿಬಿ(23) ಎಂಬ ಮಹಿಳೆ ಮತ್ಸ್ಯಕನ್ಯೆ ಅಥವಾ ಸಿರೆನೋಮೆಲಿಯಾ ಮಗುವನ್ನು ಚಿತ್ತರಂಜನ್ ದೇವ ಸದನ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಆದರೆ ಹುಟ್ಟಿದ ನಾಲ್ಕು ಗಂಟೆಯಲ್ಲಿ ಈ ಮಗು ಸಾವನ್ನಪ್ಪಿತ್ತು. ಮಗುವಿನ ಅರ್ಧ ದೇಹ ಸರಿಯಾಗಿ ಬೆಳೆಯದ ಕಾರಣ ಮಗುವಿನ ಲಿಂಗ ಯಾವುದು ಎಂದು ಕಂಡು ಹಿಡಿಯುವುದು ಕಷ್ಟವಾಯಿತು ಎಂದು ವೈದ್ಯರು ತಿಳಿಸಿದ್ದರು.

    ಭಾರತದಲ್ಲಿ 2ನೇ ಮತ್ಸ್ಯಕನ್ಯೆಯಾಗಿ ಜನಿಸಿದ ಮಗು ಇದಾಗಿತ್ತು. ಹುಟ್ಟು ಪ್ರತಿ 1 ಲಕ್ಷ ಮಗುವಿನಲ್ಲಿ ಒಂದು ಮಗುವಿನ ದೇಹ ಈ ರೀತಿಯಾಗಿ ಬೆಳವಣಿಗೆಯಾಗುತ್ತದೆ. 2016 ರಲ್ಲಿ ಉತ್ತರ ಪ್ರದೇಶದಲ್ಲಿ ಈ ರೀತಿ ಮಗುವಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯದಲ್ಲಿ 4 ಕಾಲಿನ ಕೋಳಿ ಮರಿ ಜನನ: ವಿಡಿಯೋ

    ಮಂಡ್ಯದಲ್ಲಿ 4 ಕಾಲಿನ ಕೋಳಿ ಮರಿ ಜನನ: ವಿಡಿಯೋ

    ಮಂಡ್ಯ: 4 ಕಾಲಿನ ಕೋಳಿಮರಿಯೊಂದು ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿ ಮೊಟ್ಟೆಯಿಂದ ಹೊರಬಂದಿದೆ.

    ಸುಧಾ ಮಹಾದೇವು ಎಂಬವರ ಮನೆಯಲ್ಲಿ 4 ಕಾಲಿನ ಕೋಳಿ ಮರಿ ಜನ್ಮ ಪಡೆದಿದ್ದು, ಈ ಅಪರೂಪದ 4 ಕಾಲಿನ ಕೋಳಿ ಮರಿ ನೋಡಿ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

    21 ದಿನಗಳ ಕಾಲ ಕೋಳಿ ಕಾವು ನೀಡಿದ್ದು, ಮಂಗಳವಾರ 4 ಕಾಲಿನ ಕೋಳಿ ಮರಿ ಮೊಟ್ಟೆಯಿಂದ ಹೊರಬಂದಿದೆ. ಸದ್ಯ ಕೋಳಿಮರಿ ನಿಶ್ಯಕ್ತಿಯಿಂದ ಬಳಲುತ್ತಿದೆ.

    https://www.youtube.com/watch?v=YTBNkY3vu14&feature=youtu.be

  • ಆನೆಯನ್ನು ಹೋಲುವ ಮರಿಗೆ ಜನ್ಮ ನೀಡಿದ ಹಂದಿ!

    ಆನೆಯನ್ನು ಹೋಲುವ ಮರಿಗೆ ಜನ್ಮ ನೀಡಿದ ಹಂದಿ!

    ಮಡಿಕೇರಿ: ಈ ಸೃಷ್ಟಿ ತನ್ನೊಡಲಲ್ಲಿ ಅದ್ಯಾವ ವಿಚಿತ್ರವನ್ನು ಅಡಗಿಸಿಟ್ಟುಕೊಂಡಿದೆಯೋ ಗೊತ್ತಿಲ್ಲ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹುದಿಕೇರಿ ಸಮೀಪದ ಕಾಲೋನಿಯೊಂದರಲ್ಲಿ ಸಾಕಿದ ಹಂದಿಯೊಂದು ಆನೆಯನ್ನು ಹೋಲುವ ಮರಿಗೆ ಜನ್ಮ ನೀಡುವ ಮೂಲಕ ಆಶ್ಚರ್ಯ ಸೃಷ್ಟಿಸಿದೆ.

    ಕಾಲೋನಿ ನಿವಾಸಿ ಕುಳ್ಳ ಎಂಬವರ ಮನೆಯ ಹಂದಿ ಈ ವಿಚಿತ್ರ ಪ್ರಾಣಿಗೆ ಜನ್ಮ ನೀಡಿದೆ. ಮರಿ ಜನ್ಮ ಪಡೆಯುತ್ತಿದಂತೆ ಮೃತಪಟ್ಟಿದ್ದು ಕಿವಿ, ಸೊಂಡಿಲುಗಳಿದ್ದು ಮುಖದ ಭಾಗ ಆನೆಯನ್ನು ಹೋಲುತ್ತಿತ್ತು.

    ಹಂದಿ 12 ಮರಿಗಳಿಗೆ ಜನ್ಮ ನೀಡಿದ್ದು ಒಂದು ಮರಿ ಈ ರೀತಿ ಜನ್ಮ ಪಡೆದಿದ್ದು ಮೃತಪಟ್ಟಿದೆ.

  • 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಬಳ್ಳಾರಿ: ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಂದಿರನ್ನ ನೋಡಿರಬಹುದು, ಆದರೆ ಜಿಲ್ಲೆಯಲ್ಲಿ ಮಹಿಳೆಯೊಬ್ಬರು 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಸಿರಗುಪ್ಪ ಪಟ್ಟಣದ ಸದಾಶಿವನಗರದ ಆಸ್ಪತ್ರೆಯಲ್ಲಿ ಸೀಮಾಂದ್ರದ ಕೌತಾಳಂನ ಮಾರಮ್ಮ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮಕ್ಕಳು ಆರೋಗ್ಯವಾಗಿದ್ದಾರೆ.

    ಮದುವೆಯಾಗಿ ಹತ್ತು ವರ್ಷದ ನಂತರ ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಕುಟುಂಬದವರಿಗೆ ತ್ರಿವಳಿ ಧಮಾಕ ಎನ್ನುವಂತಾಗಿದೆ. ಮೂವರು ಮಕ್ಕಳು ಆರೋಗ್ಯವಾಗಿರುವ ಪರಿಣಾಮ ಕುಟುಂಬದ ಸದಸ್ಯರಲ್ಲಿ ಹರ್ಷ ಮೂಡಿದೆ.

     

  • ಆರು ಮರಿಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ ಮೇಕೆ

    ಆರು ಮರಿಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ ಮೇಕೆ

    ಕೋಲಾರ: ಮೇಕೆಯೊಂದು 6 ಮರಿಗಳಿಗೆ ಜನ್ಮ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕನ್ನಸಂದ್ರ ಗ್ರಾಮದಲ್ಲಿ ನಡೆದಿದೆ.

    ಕನ್ನಸಂದ್ರ ಗ್ರಾಮದ ನಿವಾಸಿ ರೈತ ಸುಬ್ಬಣ್ಣ ಎಂಬುವರಿಗೆ ಸೇರಿದ ಮೇಕೆ ಇಂದು ಮುಂಜಾನೆ ಆರು ಮೇಕೆ ಮರಿಗಳಿಗೆ ಜನ್ಮ ನೀಡಿದೆ. ಮೇಕೆ ಆರು ಮರಿಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದರಿಂದ ಅಪರೂಪ ಎಂಬಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೇಕೆ ಮರಿಗಳನ್ನ ನೋಡಲು ಗುಂಪು ಗುಂಪಾಗಿ ಆಗಮಿಸುತ್ತಿದ್ದಾರೆ.

    ಸಾಮಾನ್ಯವಾಗಿ ಮೇಕೆ 2 ಅಥವಾ 3 ಮರಿಗಳಿಗೆ ಜನ್ಮ ನೀಡುತ್ತದೆ. ಆದರೆ ಈ ಮೇಕೆ 6 ಮರಿಗಳಿಗೆ ಜನ್ಮ ನೀಡಿದೆ. ಜನ್ಮ ನೀಡಿದ ಮರಿಗಳಲ್ಲಿ ನಾಲ್ಕು ಹೆಣ್ಣು ಹಾಗೂ ಎರಡು ಗಂಡು ಮರಿಗಳಾಗಿದ್ದು, ಆರು ಮರಿಗಳಿಗೆ ಜನ್ಮ ನೀಡಿರುವುದು ಅಚ್ಚರಿಯ ಸಂಗತಿಯಾಗಿದೆ.

    ಆರು ಮರಿಗಳಿಗೆ ಜನ್ಮ ನೀಡಿದ್ದರಿಂದ ಸುಬ್ಬಣ್ಣ ಪಶು ವೈದ್ಯರಿಗೆ ತಿಳಿಸಿ ಪರೀಕ್ಷೆ ಮಾಡಲು ಕರೆದುಕೊಂಡು ಬಂದಿದ್ದಾರೆ. ವೈದ್ಯರು ಸದ್ಯಕ್ಕೆ ಮೇಕೆ ಸೇರಿದಂತೆ ಎಲ್ಲಾ ಆರು ಮೇಕೆ ಮರಿಗಳು ಆರೋಗ್ಯವಾಗಿವೆ ಎಂದು ದೃಢಪಡಿಸಿದ್ದಾರೆ.

     

  • 2ನೇ ಹೆರಿಗೆ- 2 ಹೆಣ್ಣು, 2 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    2ನೇ ಹೆರಿಗೆ- 2 ಹೆಣ್ಣು, 2 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಬಳ್ಳಾರಿ: ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಬಳ್ಳಾರಿ ತಾಲೂಕಿನ ಎಮ್ಮಿಗನೂರು ಗ್ರಾಮದ 26 ವರ್ಷದ ಗುಂಡೂರು ಹುಲಿಗೆಮ್ಮ ತನ್ನ ಎರಡನೇ ಹೆರಿಗೆಯಲ್ಲಿ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ.

    ಆರೋಗ್ಯ ದೃಷ್ಟಿಯಿಂದ ಮಕ್ಕಳನ್ನು ಎನ್‍ಐಸಿಯುನಲ್ಲಿ ಆರೈಕೆ ಮಾಡಲಾಗುತ್ತಿದೆ. ಹುಲಿಗೆಮ್ಮ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿರುವಾಗಲೇ ಗರ್ಭದಲ್ಲಿ ನಾಲ್ಕು ಮಕ್ಕಳು ಬೆಳೆಯುತ್ತಿರುವ ಬಗ್ಗೆ ವೈದ್ಯರಿಂದ ಮಾಹಿತಿ ತಿಳಿದಿತ್ತು. ಮೊದಲನೇ ಹೆರಿಗೆಯಲ್ಲಿ ಅವರಿಗೆ ಗಂಡು ಮಗು ಜನಿಸಿತ್ತು.

    ಹೀಗಾಗಿ ಹೆರಿಗೆಗೆ ಒಂದು ತಿಂಗಳ ಮುಂಚೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ತಿಂಗಳಿಂದ ವಿಮ್ಸ್ ನಲ್ಲಿ ಆರೈಕೆ ಬಳಿಕ ಶುಕ್ರವಾರ ಸಂಜೆ ಹೆರಿಗೆಯಾಗಿದೆ.

     

     

     

  • ರಾಮನಗರ: ಮೂರು ಕಣ್ಣು ಎರಡು ತಲೆಯ ಕರು ಜನನ

    ರಾಮನಗರ: ಮೂರು ಕಣ್ಣು ಎರಡು ತಲೆಯ ಕರು ಜನನ

    ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನಿಡಗೋಡಿ ಗ್ರಾಮದಲ್ಲಿ ಸೀಮೆ ಹಸುವೊಂದು ಮೂರು ಕಣ್ಣು ಹಾಗೂ ಎರಡು ತಲೆಯ ಕರುವೊಂದಕ್ಕೆ ಜನ್ಮ ನೀಡಿದೆ.

    ನಿಡಗೋಡಿ ಗ್ರಾಮದ ನಿವಾಸಿ ಪುಟ್ಟೇಗೌಡ ಹಾಗೂ ಗುಂಡಮ್ಮ ಎಂಬವರಿಗೆ ಸೇರಿದ ಸೀಮೆಹಸು ಮೂರು ಕಣ್ಣು ಹಾಗು ಎರಡು ತಲೆಯ ಕರುವಿಗೆ ಜನ್ಮ ನೀಡಿದ್ದು ಕರು ಸದ್ಯಕ್ಕೆ ಆರೋಗ್ಯವಾಗಿದೆ.

    ಕರು ಜನನವಾಗುವ ವೇಳೆ ಎರಡು ತಲೆ ಒಳಗೊಂಡಿದ್ರಿಂದ ಹೆರಿಗೆ ಮಾಡಿಸಲು ಸ್ವಲ್ಪ ಕಷ್ಟವಾಯ್ತು. ಇಂತಹ ವಿಚಿತ್ರ ಕರುವನ್ನು ನಾವು ನೋಡಿರಲಿಲ್ಲ. ಸದ್ಯಕ್ಕೆ ಕರುವಿಗೆ ಬಾಟಲ್ ಮೂಲಕ ಹಾಲು ನೀಡಲಾಗ್ತಿದ್ದು ಮುಂದಿನ ದಿನಗಳಲ್ಲಿ ಅದು ಬೆಳೆದಂತೆ ಬೆಳೆಯಲಿ ಎಂದು ಹಸುವಿನ ಮಾಲೀಕರಾದ ಗುಂಡಮ್ಮ ತಿಳಿಸಿದ್ದಾರೆ.

    ಮೂರು ಕಣ್ಣು, ಎರಡು ತಲೆಯ ಕರುವನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ರು. ಮೂರು ಕಣ್ಣು ಒಳಗೊಂಡಿದ್ರಿಂದ ಪರಶಿವನಾದ ಮುಕ್ಕಣ್ಣನ ಸ್ವರೂಪಿ ಎಂದು ಸಾರ್ವಜನಿಕರು ಕರುವನ್ನು ವೀಕ್ಷಣೆ ಮಾಡಿದ್ರು. ಮೂರು ಕಣ್ಣು ಹಾಗು ಎರಡು ತಲೆ ಹೊಂದಿರುವ ಕರು ಆರೋಗ್ಯವಾಗಿ ಬೆಳೆದ್ರೆ ಚೆನ್ನಾಗಿ ಸಾಕಿ ಅದನ್ನು ಯಾವುದಾದ್ರೂ ದೇವಾಲಯಕ್ಕೆ ನೀಡುವುದಾಗಿ ಮಾಲೀಕ ಪುಟ್ಟೇಗೌಡ ಹೇಳಿದ್ದಾರೆ.

    ಈ ವಿಚಿತ್ರ ಕರುವನ್ನ ಗ್ರಾಮದ ಮಹಿಳೆಯರು ಪೂಜೆ ಸಹ ಮಾಡಿದ್ದಾರೆ.

     

  • 35 ಸಾವಿರ ಅಡಿ ಎತ್ತರದದಲ್ಲಿ ಮಗುವಿಗೆ ಜನ್ಮ ನೀಡಿದ್ಳು ತಾಯಿ!

    35 ಸಾವಿರ ಅಡಿ ಎತ್ತರದದಲ್ಲಿ ಮಗುವಿಗೆ ಜನ್ಮ ನೀಡಿದ್ಳು ತಾಯಿ!

    ನವದೆಹಲಿ: ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಯೊಬ್ಬರು ಜೆಟ್ ಏರ್‍ವೇಸ್ ವಿಮಾನದಲ್ಲಿ ಮಾರ್ಗ ಮಧ್ಯ ಅನಿರೀಕ್ಷಿತವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಹೌದು. ಭಾನುವಾರ ಬೆಳಗ್ಗೆ 2.55ಕ್ಕೆ ಜೆಟ್ ಏರ್‍ವೇಸ್ 9 ಡಬ್ಲ್ಯು 569 ವಿಮಾನ ದಮ್ಮಾಮ್‍ನಿಂದ ಕೊಚ್ಚಿಗೆ ಆಗಮಿಸುತಿತ್ತು. ಮಾರ್ಗ ಮಧ್ಯೆ ವಿಮಾನದಲ್ಲಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಎಂದು ವಿಮಾನದ ಸಿಬ್ಬಂದಿ ತುರ್ತು ಘೋಷಣೆ ನೀಡಿದರು. ತಕ್ಷಣವೇ ವಿಮಾನವನ್ನು ಮುಂಬೈ ಕಡೆಗೆ ತಿರುಗಿಸಲಾಯಿತು.

    ಅರಬ್ಬಿ ಸಮುದ್ರದ ಮೇಲೆ ಪ್ರಯಾಣಿಸುತ್ತಿದ್ದಾಗಲೇ ವಿಮಾನದಲ್ಲಿ ತಾಯಿ ಮಗುವಿಗೆ ಜನ್ಮ ನೀಡಿದ್ದು, ವಿಮಾನದ ಸಿಬ್ಬಂದಿ ಮತ್ತು ಕೇರಳಕ್ಕೆ ಪ್ರಯಾಣಿಸುತ್ತಿದ್ದ ನರ್ಸ್ ಸಹಾಯಕಿಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

    ವಿಮಾನವು ಮುಂಬೈನಲ್ಲಿ ಇಳಿದಿದ್ದು, ತಕ್ಷಣ ತಾಯಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಚ್ಚಿಗೆ  12.45ಕ್ಕೆ ತಲುಪಬೇಕಿದ್ದ ವಿಮಾನ 90 ನಿಮಿಷ ತಡವಾಗಿ ತಲುಪಿದೆ.

    ಕಂಪೆನಿಯ ವಿಮಾನದಲ್ಲಿ ಈ ಮಗು ಜನಿಸಿದ್ದಕ್ಕೆ,  ಜೀವಿತಾವಧಿಯಲ್ಲಿ ಈ ಗಂಡು ಮಗುವಿಗೆ ವಿಮಾನದಲ್ಲಿ ಉಚಿತವಾಗಿ ಪ್ರಯಾಣಿಸುವ ಉಡುಗೊರೆಯನ್ನು ದಂಪತಿಗೆ ಏರ್‍ವೇಸ್ ನೀಡಿದೆ.