Tag: ಜನ್ಮ ದಿನ

  • ಶಂಕರ್ ನಾಗ್ ಜನ್ಮದಿನದಂದು ಸರ್ಕಾರ ಚಾಲಕರ ದಿನ ಆಚರಿಸಲಿ: ಸೋಮಶೇಖರ

    ಶಂಕರ್ ನಾಗ್ ಜನ್ಮದಿನದಂದು ಸರ್ಕಾರ ಚಾಲಕರ ದಿನ ಆಚರಿಸಲಿ: ಸೋಮಶೇಖರ

    ಬೆಳಗಾವಿ: ಸರ್ಕಾರ ಓಲಾ ಹಾಗೂ ಕ್ಯಾಬ್ ಡ್ರೈವರ್ ಹಿತ ಕಾಯುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ ಎಂದು ನಮ್ಮ ಚಾಲಕರ ಟ್ರೆಂಡ್ ಯೂನಿಯನ್‍ನ ಉಪಾಧ್ಯಕ್ಷ ಕೆ. ಸೋಮಶೇಖರ ಹೇಳಿದರು.

    ಸೋಮವಾರ ಸಾಹಿತ್ಯ ಭವನದಲ್ಲಿ ನಮ್ಮ ಚಾಲಕರ ಟ್ರೆಂಡ್ ಯೂನಿಯನ್ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸಾಕಷ್ಟು ಜನ ಡ್ರೈವರ್ ಗಳು ನಮ್ಮ ಸೌಲಭ್ಯವನ್ನು ಪಡೆಯಲು ಹೋರಾಟ ಮಾಡಬೇಕಿದೆ. ಮುಂಬೈ ಮಾದರಿಯಲ್ಲಿ ರಾಜ್ಯದಲ್ಲಿಯೂ ಕ್ಯಾಬ್ ಗಳಿಗೆ ದರ ನಿಗದಿ ಮಾಡಿದ್ದಾರೆ. ಆದರೆ ಅದನ್ನು ಕಾರ್ಯ ರೂಪಕಕ್ಕೆ ತರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಓಲಾ ಕ್ಯಾಬ್ ಚಾಲಕರ ಸಿಬ್ಬಂದಿ ಕೊರತೆಯಿದೆ ಎಂದು ಕೆಲವರು ಸುದ್ದಿ ಹರಡಿಸುತ್ತಿದ್ದಾರೆ. ಆ ರೀತಿಯ ಕೊರತೆ ನಮ್ಮಲ್ಲಿ ಇಲ್ಲ. ಹೊರ ರಾಜ್ಯದಿಂದ ಬಂಡವಾಳ ಶಾಹಿಗಳು ಬಂದು ರಾಜಭಾರ ಮಾಡುತ್ತಾರೆ. ಆದರೆ ನಮ್ಮವರಿಗೆ ಸರ್ಕಾರ ರಕ್ಷಣೆ ನೀಡುತ್ತಿಲ್ಲ ಎಂದರು.

    ಆಲ್ ಇಂಡಿಯಾ ಅನುಮತಿಯನ್ನು ಕ್ಯಾಬ್ ಡ್ರೈವರ್ ಪಡೆಯಬೇಕು. ಸರ್ಕಾರವೇ ಕ್ಯಾಬ್‍ಗಳಿಗೆ ದರ ನಿಗದಿಪಡಿಸಿ ಅವುಗಳಿಗೆ ಮೀಟರ್ ಅಳವಡಿಕೆ ಮಾಡಬೇಕು ಎಂದಾಗ ಮಾತ್ರ ಕ್ಯಾಬ್ ಡ್ರೈವರ್ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಆದರೆ ಸರ್ಕಾರ ಮಾತ್ರ ಈ ಕುರಿತು ಚಿಂತನೆ ನಡೆಸುತ್ತಿಲ್ಲ ಎಂದು ಹೇಳಿದರು.

    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚಾಲಕರ ದಿನಾಚಾರಣೆ ಎಂದು ನಿಗದಿ ಮಾಡಬೇಕು. ಪ್ರತಿ ವರ್ಷ ಹತ್ತು ಚಾಲಕರಿಗೆ ತಲಾ ಹತ್ತು ಸಾವಿರ ಪ್ರೋತ್ಸಾಹ ಧನ ನೀಡಬೇಕೆಂದು ನಿರ್ಣಯ ತೆಗೆದುಕೊಂಡಿದ್ದರೂ ಅದನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

    ದಿವಂಗತ ಚಿತ್ರ ನಟ ಶಂಕರ್ ನಾಗ್ ಜನ್ಮ ದಿನಾಚರಣೆಯಂದೆ ಚಾಲಕರ ದಿನಾಚರಣೆ ಆಚರಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಈ ಕುರಿತು ಡಿಸಿಎಂ ಅಶ್ವಥ ನಾರಾಯಣ ಅವರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು. ಈ ವೇಳೆ ಪದ್ಮರಾಜ್ ಜೈನ್, ಉಮೇಶ, ಶಿವಾನಂದ, ರಮೇಶ, ನಾಗರಾಜ್ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  • ಕೊಡವ ಭಾಷೆಯಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪರನ್ನು ಸ್ಮರಿಸಿದ ರಾಷ್ಟ್ರಪತಿ

    ಕೊಡವ ಭಾಷೆಯಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪರನ್ನು ಸ್ಮರಿಸಿದ ರಾಷ್ಟ್ರಪತಿ

    ಬೆಂಗಳೂರು: ಇಂದು ಭಾರತೀಯ ಸೇನೆಯ ಮಹಾದಂಡ ನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ 120ನೇ ಜನ್ಮ ದಿನಾಚರಣೆ. ಹೀಗಾಗಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಕಾರ್ಯಪ್ಪ ಅವರನ್ನು ಸ್ಮರಿಸಿದ್ದಾರೆ.

    ಕನ್ನಡ ಲಿಪಿಯಲ್ಲಿ ಕೊಡವ ಭಾಷೆಯಲ್ಲಿಯೇ ಟ್ವೀಟ್ ಮಾಡುವ ಮೂಲಕ ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರ ಎಂದು ನೆನಪಿಸಿಕೊಳ್ಳುವ ಮೂಲಕ ಜನ್ಮದಿನಾಚರಣೆಗೆ ಶುಭಾಶಯ ತಿಳಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ..?:
    “ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಆಯಿಂಗಡ ಪುಟ್ಟ ನ ದಿನತ್ ರ ಒರ್ ಸ್ಮರಣೆ. ಕೊಡ ಗ್ ರ , ಕರ್ನಾಟಕ ತ್ ರ, ಆಂಡ ಮೀದ ಭಾರತ ದೇಶ ತ್ ರ ಕೊದಿಮೋಂವ ನಾನ ಇಯಂಗ ನಂಗಡ ಕೇಳಿ ಪೋನ ಮಹದಂಡ ನಾಯಕ ಅಲ್ಲತೆ ಪ್ರೀತಿರ ರಾಷ್ಟ್ರನಾಯಕ. ಇಯಂಗಡ ದೇಶ ಸೇವೆನ ನಂಗ ಎಕ್ಕಲೂ ಗೇ ನ ಬೆಚ್ಚೋ ವ. – ರಾಷ್ಟ್ರಪತಿ ಕೋವಿಂದ್”

    ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರ ಜನ್ಮದಿನದ ಸ್ಮರಣೆ. ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರು ನಮ್ಮ ಅತ್ತ್ಯುತ್ತಮ ಸೇನಾ ದಂಡನಾಯಕರಲ್ಲಿ ಒಬ್ಬರು ಹಾಗೂ ಅತ್ಯಂತ ನೆಚ್ಚಿನ ರಾಷ್ಟ್ರ ನಾಯಕರಾಗಿ ಉಳಿದಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.

    ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ(ಕಾರ್ಯಪ್ಪ) ಅವರು 1899ರ ಜನವರಿ 28 ರಂದು ಕೊಡಗು ಜಿಲ್ಲೆಯ ಶನಿವಾರ ಸಂತೆಯಲ್ಲಿ ತಂದೆ ಕೊಡಂದೆರ ಮಾದಪ್ಪ ಕಾರಿಯಪ್ಪ ಹಾಗೂ ತಾಯಿ ಕಾವೇರಿಯ ಪುತ್ರನಾಗಿ ಜನಿಸಿದ್ದರು. ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ (ಮಹಾದಂಡನಾಯಕ) ಪದವಿಯನ್ನು ಪಡೆದ ಮೊದಲ ವ್ಯಕ್ತಿ. 1993 ಮೇ 15 ರಂದು ಕಾರ್ಯಪ್ಪ ನಿಧನರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv