Tag: ಜನ್ಮದಿನಾಚರಣೆ

  • ಧೋನಿ ಹುಟ್ಟು ಹಬ್ಬಕ್ಕೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

    ಧೋನಿ ಹುಟ್ಟು ಹಬ್ಬಕ್ಕೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

    ರಾಯಚೂರು: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹುಟ್ಟು ಹಬ್ಬವನ್ನು ರಾಯಚೂರಿನ ಅಭಿಮಾನಿಯೊಬ್ಬ ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕವಗಿ ಸುದ್ದಿಯಗಿದ್ದಾರೆ.

    ಜುಲೈ 7 ಕ್ಕೆ 39 ವರ್ಷ ಪೂರೈಸಿ 40 ಕ್ಕೆ ಕಾಲಿಡುತ್ತಿರುವ ಧೋನಿಗೆ ನೇರವಾಗಿ ಉಡುಗೊರೆ ಕೊಡಲು ಆಗುತ್ತಿಲ್ಲ. ಹೀಗಾಗಿ ಧೋನಿ ಚಿತ್ರವನ್ನ ಕೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ವಿಜಯನಗರ ಜಿಲ್ಲೆ ಕೂಡ್ಲಿಗಿಯ ವೆಂಕಟೇಶ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅಪ್ಪಟ ಅಭಿಮಾನಿಯಾಗಿದ್ದಾರೆ. ರಾಯಚೂರಿನ ಸಿಂಧನೂರು ಮೂಲದ ಟ್ಯಾಟೂ ಕಲಾವಿದ ಶಂಕರ್ ಬದಿ ಧೋನಿ ಚಿತ್ರವನ್ನೂ ಟ್ಯಾಟೂ ಹಾಕಿದ್ದಾರೆ.  ಇದನ್ನೂ ಓದಿ:  ಅಪ್ರಾಪ್ತೆ ಜೊತೆ ಪ್ರೀತಿ, ಗರ್ಭಿಣಿಯಾದ ಬಳಿಕ ತಾಳಿ ಕಟ್ಟಿದವಗೆ 10 ವರ್ಷ ಜೈಲು ಶಿಕ್ಷೆ

    ಈ ಹಿಂದೆ ಮೋದಿ, ಉಪೇಂದ್ರ, ಯಶ್ ಸೇರಿದಂತೆ ನಾನಾ ಗಣ್ಯ ವ್ಯಕ್ತಿಗಳ ಸುಂದರ ಟ್ಯಾಟೂಗಳ ಮೂಲಕ ಪ್ರಸಿದ್ಧಿಯಾಗಿರುವ ಶಂಕರ್ ಬದಿಯನ್ನ ಹುಡುಕಿಕೊಂಡು ಬಂದು ಬೆಂಗಳೂರಿನ ಸ್ವಾಗತ್ ಟ್ಯಾಟೂ ಸ್ಟುಡಿಯೋದಲ್ಲಿ ವೆಂಕಟೇಶ್ ಧೋನಿಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಧೋನಿ ಹುಟ್ಟು ಹಬ್ಬವನ್ನ ಕೇವಲ ಕೇಕ್ ಕತ್ತರಿಸುವ ಮೂಲಕ ಆಚರಿಸದರೆ ಮುಗಿಯುವುದಿಲ್ಲ. ಹೀಗಾಗಿ ಕೊನೆಯವರೆಗೂ ಧೋನಿ ಜೊತೆಯಲ್ಲಿರಬೇಕು ಅಂತ ಅಭಿಮಾನಿ ವೆಂಕಟೇಶ್ ತಮ್ಮ ಬಲ ಗೈ ಮೇಲೆ ಎಂ.ಎಸ್.ಧೋನಿ ಟ್ಯಾಟೂ ಹಾಕಿಸಿಕೊಂಡೆ. ಧೋನಿ ಕೇವಲ ಉತ್ತಮ ನಾಯಕ ಮಾತ್ರವಲ್ಲ ಉತ್ತಮ ಗೇಮ್ ಫಿನಿಶರ್ ಆಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆದ್ದಿದೆ. ಟೀಂ ಇಂಡಿಯಾ ಟಿ20 ವಲ್ರ್ಡ್ ಕಪ್ ಗೆದ್ದಿದೆ. ಹೀಗಾಗಿ ಧೋನಿ ಮೇಲಿನ ಅಭಿಮಾನಕ್ಕೆ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದಾಗಿದೆ ವೆಂಕಟೇಶ್ ಹೇಳಿದ್ದಾರೆ.

  • ಕೂಡಿಟ್ಟ ಹಣವನ್ನು ಬಡರೋಗಿಗಳ ಚಿಕಿತ್ಸೆಗೆ ನೀಡಿ ಹುಟ್ಟುಹಬ್ಬ ಆಚರಿಸಿದ ಪುತ್ತೂರಿನ ಬಾಲಕಿ

    ಕೂಡಿಟ್ಟ ಹಣವನ್ನು ಬಡರೋಗಿಗಳ ಚಿಕಿತ್ಸೆಗೆ ನೀಡಿ ಹುಟ್ಟುಹಬ್ಬ ಆಚರಿಸಿದ ಪುತ್ತೂರಿನ ಬಾಲಕಿ

    ಮಂಗಳೂರು: ಪಾಕೇಟ್ ಮನಿಯನ್ನು ಬಡ ರೋಗಿಗಳಿಗೆ ನೀಡಿ ಬರ್ತ್ ಡೇಯನ್ನು ಪುತ್ತೂರಿನ 3 ವರ್ಷದ ಪೋರಿ ಆಚರಿಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಖ್ಯಾತ ಯಕ್ಷಗಾನ ಕಲಾವಿದರಾಗಿದ್ದ ದಿ.ಶ್ರೀಧರ್ ಭಂಡಾರಿ ಅವರ ಮೊಮ್ಮಗಳು, ದೀಪಕ್ ಶೆಟ್ಟಿ ಹಾಗೂ ಡಾ.ಅನಿಲಾ ದಂಪತಿಯ ಪುತ್ರಿ, ವೀವೆಕಾನಂದ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ದಿಶಾರವರು ತನ್ನ ಹುಟ್ಟಿದಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.

    ತನ್ನ ತಾತ, ಅಜ್ಜಿ, ಮಾವ, ಅಪ್ಪ, ಅಮ್ಮ ನೀಡಿದ್ದ ಸುಮಾರು 10 ಸಾವಿರದಷ್ಟು ಪಾಕೆಟ್ ಮನಿಯನ್ನು ಕೂಡಿಟ್ಟಿದ್ದ ಪುತ್ತೂರಿನ ವಿದ್ಯಾರ್ಥಿನಿಯೊಬ್ಬರು ಈ ಹಣದಿಂದ ವೈದ್ಯರ ಮೂಲಕ ಬಡರೋಗಿಗಳ ಚಿಕಿತ್ಸೆಗೆ ಬಳಕೆಯಾಗಬೇಕೆಂದು ಪುತ್ತೂರಿನ ಆದರ್ಶ ಆಸ್ಪತ್ರೆಯ ಡಾ. ಎಂ.ಕೆ.ಪ್ರಸಾದ್ ಅವರಿಗೆ ಹಸ್ತಾಂತರ ಮಾಡುವ ಮೂಲಕ ತನ್ನ ಹುಟ್ಟಿದ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ.

    ಕೋವಿಡ್ ಹಿನ್ನಲೆಯಲ್ಲಿ ತನ್ನ ಜನ್ಮದಿನವನ್ನು ಸಿಂಪಲ್ ಆಗಿ ಆಚರಿಸಲು ನಿರ್ಧರಿಸಿದ್ದ ದಿಶಾ, ಕೋವಿಡ್ ನಿಂದ ತತ್ತರಿಸಿ ಬಡವರ ಬವಣೆಗಳನ್ನು ಮಾಧ್ಯಮಗಳ ಮೂಲಕ ಅರಿತಿದ್ದರು. ಹೀಗಾಗಿ ದಿಶಾ ತನ್ನ ಸ್ವ ಇಚ್ಛೆಯಿಂದ ಬಡ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡಿದ್ದು, ಪುಟ್ಟ  ಪೋರಿಯ ವಿಶಾಲ ಹೃದಯಕ್ಕೆ ಭಾರೀ ಜನ ಮೆಚ್ಚುಗೆ ವ್ಯಕ್ತವಾಗಿದೆ.

  • ಹುಟ್ಟುಹಬ್ಬದ ಸಂಭ್ರಮದಲ್ಲಿ ಜಗ್ಗೇಶ್, ಪುನೀತ್

    ಹುಟ್ಟುಹಬ್ಬದ ಸಂಭ್ರಮದಲ್ಲಿ ಜಗ್ಗೇಶ್, ಪುನೀತ್

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಸೊಶೀಯಲ್ ಮೀಡಿಯಾದಲ್ಲಿ ಇಬ್ಬರು ಚಿತ್ರತಾರೆಯರಿಗೂ ಶುಭ ಕೋರುತ್ತಿದ್ದಾರೆ.

    ಜಗ್ಗೇಶ್ ಅವರು 58ನೇ ವಸಂತಕ್ಕೆ ಕಾಲಿಟ್ಟರೆ, ಪುನೀತ್ ರಾಜ್‍ಕುಮಾರ್ 47ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಚಂದನವನದ ಇಬ್ಬರೂ ಸ್ಟಾರ್‍ಗಳು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

    ಪುನೀತ್ ರಾಜ್‍ಕುಮಾರ್ ಪ್ರತಿವರ್ಷ ತಮ್ಮ ಅಭಿಮಾನಿಗಳ ಜತೆ ಕೇಕ್ ಕತ್ತರಿಸಿ ಬರ್ತ್‍ಡೇ ಮಾಡಿಕೊಳ್ಳುತ್ತಿದ್ದರು. ಆದರೆ ಈ ಸಲ ಕೊರೊನಾ ಕಾರಣದಿಂದಾಗಿ ಅಭಿಮಾನಿಗಳಿಗೆ ಮನೆಯ ಬಳಿ ಬಾರದಂತೆ ಅಪ್ಪು ಮನವಿ ಮಾಡಿದ್ದಾರೆ. ಕಳೆದ ವರ್ಷವೂ ಇದೇ ಕಾರಣದಿಂದ ಪುನೀತ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ.

    ಮಾತೃಪಿತಾಶ್ರೀ ನಂಜಮ್ಮಶಿವಲಿಂಗಪ್ಪ ರವರ ಉದರದಲ್ಲಿ ಜನಿಸಿ 58 ವರ್ಷ. ಕನ್ನಡಿಗರ ಮಡಿಲಲ್ಲಿ 40 ವರ್ಷ. ತಂದೆ-ತಾಯಿ, ರಾಯರು, ಕನ್ನಡಿಗರ ಆಶೀರ್ವಾದ ಹಾಗೂ ಮಾಧ್ಯಮಮಿತ್ರರ ಭುಜತಟ್ಟುವಿಕೆ ಇಲ್ಲಿಯವರೆಗೂ ನಡೆದು ಬಂದಿದ್ದೇನೆ. ನಿಮ್ಮ ಶುಭಹಾರೈಕೆ ನನ್ನ ಶ್ರೀರಕ್ಷೆಯಾಗಿದೆ. ಇಂದು ನಾ ಬಲ್ಲೆ, ನಾಳೆ ರಾಯರು ಬಲ್ಲರು, ಆಶಾದಾಯಕ ಹೆಜ್ಜೆ ಇಡುತ್ತಿರುವೆ ಎಂದು ಬರೆದುಕೊಂಡು ಕೆಲವು ಫೊಟೋಗಳನ್ನು ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ ಜೇಮ್ಸ್ ಕಡೆಯಿಂದ ಇಂದು ಹೊಸ ಪೋಸ್ಟರ್ ಅಭಿಮಾನಿಗಳಿಗೆ ಉಡುಗೊರೆಯಾಗಿ ಸಿಕ್ಕಿದೆ. ಅಲ್ಲದೆ ಬಿಡುಗಡೆಗೆ ಸಿದ್ಧವಾಗಿ ಎಲ್ಲಡೆ ಸಿನಿಮಾದ ಪ್ರಮೋಶನ್ ಮಾಡುತ್ತಿರುವ ಚಿತ್ರವಾದ ಯುವರತ್ನ ಸಿನಿಮಾ ತಂಡದಿಂದ ಒಂದು ಸಾಂಗ್ ಕೂಡಾ ರಿಲೀಸ್ ಆಗಿದ್ದು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಟ್ವೀಟ್‍ರನಲ್ಲಿ ಪುನೀತ್ ಹಂಚಿಕೊಂಡಿದ್ದಾರೆ.

    ಜಗ್ಗೇಶ್ ಹಾಗೂ ಪುನೀತ್ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಹುಟ್ಟುಹಬ್ಬದಂದು ಉಡುಗೊರೆಯಾಗಿ ಸಿನಿಮಾ ಕುರಿತಾದ ಹೊಸ ಅಪ್ಡೇಟ್ ನೀಡುತ್ತಿದ್ದಾರೆ. ಈ ಇಬ್ಬರೂ ನಟರಿಗೆ ಅಭಿಮಾನಿಗಳು ಹಾಗೂ ಸ್ಟಾರ್‍ಗಳು, ರಾಜಕೀಯನಾಯಕರು ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.

  • ಮಡಿಕೇರಿಯಲ್ಲಿ ವೀರಯೋಧ ಅಜ್ಜಮಾಡ ದೇವಯ್ಯ ಜನ್ಮ ದಿನಾಚರಣೆ

    ಮಡಿಕೇರಿಯಲ್ಲಿ ವೀರಯೋಧ ಅಜ್ಜಮಾಡ ದೇವಯ್ಯ ಜನ್ಮ ದಿನಾಚರಣೆ

    ಮಡಿಕೇರಿ: ಕೊಡವ ಮಕ್ಕಡ ಕೂಟ, ಅಜ್ಜಮಾಡ ಕುಟುಂಬ ಹಾಗೂ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಟ್ರಸ್ಟ್‍ನ ಜಂಟಿ ಆಶ್ರಯದಲ್ಲಿ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ ಅವರ 88ನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

    ನಗರದ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ದೇವಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಎಂ.ಸಿ.ನಾಣಯ್ಯ, 1965ರ ಸೆ.7 ರಂದು ನಡೆದ ಭಾರತ, ಪಾಕಿಸ್ತಾನ ನಡುವಿನ ಯುದ್ಧದಲ್ಲಿ ದೇವಯ್ಯ ಅವರು ಸೇನಾ ಸಾಹಸ ಮೆರೆದು ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರು. ಇವರ ಸಾಹಸಗಾಥೆಯನ್ನು ಬ್ರಿಟಿಷ್ ಪತ್ರಕರ್ತ ತಮ್ಮ ಬರವಣಿಗೆ ಮೂಲಕ ವಿವರಿಸದೇ ಇದ್ದಿದ್ದರೆ ಇಂದು ಸ್ಕ್ವಾ.ಲೀ.ದೇವಯ್ಯ ಅವರ ಬಲಿದಾನದ ಬಗ್ಗೆ ಯಾರಿಗೂ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ವೀರಯೋಧರ ಸ್ಮರಣೆಯ ಮೂಲಕ ಗೌರವ ಸಲ್ಲಿಸುವುದರೊಂದಿಗೆ ಪ್ರತಿಯೊಬ್ಬರು ದೇಶಾಭಿಮಾನ ಮೆರೆಯಬೇಕೆಂದು ಕರೆ ನೀಡಿದರು.

    ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ಟ್ರಸ್ಟ್ ನ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಮಾತನಾಡಿ, 1920 ಡಿ.24 ರಂದು ಶ್ರೀಮಂಗಲನಾಡು ಕುರ್ಚಿಗ್ರಾಮದಲ್ಲಿ ಅಜ್ಜಮಾಡ ಬೋಪಯ್ಯ ಅವರ ಪುತ್ರರಾಗಿ ಜನಿಸಿದ ಸ್ಕ್ವಾ.ಲೀ.ದೇವಯ್ಯ ಅವರು ಭಾರತದ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶಕ್ಕಾಗಿ ಬಲಿದಾನಗೈದರು. ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ಮರಣೋತ್ತರವಾಗಿ ಪಡೆದ ದೇವಯ್ಯ ಅವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಅಜ್ಜಮಾಡ ಕುಟುಂಬದ ಅಧ್ಯಕ್ಷ ಅಜ್ಜಮಾಡ ಲವಕುಶಾಲಪ್ಪ, ಕಾರ್ಯದರ್ಶಿ ಅಜ್ಜಮಾಡ ಬೋಪಣ್ಣ, ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಪ್ರಮುಖರಾದ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ, ತೆನ್ನಿರ ಮೈನಾ ಸೇರಿದಂತೆ ಅಜ್ಜಮಾಡ ಕುಟುಂಬಸ್ಥರು, ನಿವೃತ್ತ ಯೋಧರು ಹಾಜರಿದ್ದು ವೀರಯೋಧನಿಗೆ ಗೌರವ ಅರ್ಪಿಸಿದರು.

  • ಮಹಾತ್ಮಾ ಗಾಂಧಿ, ಲಾಲ್‍ಬಹದ್ದೂರ್ ಶಾಸ್ತ್ರಿ ಜನ್ಮದಿನ – ಮೋದಿ, ಕೋವಿಂದ್ ನಮನ

    ಮಹಾತ್ಮಾ ಗಾಂಧಿ, ಲಾಲ್‍ಬಹದ್ದೂರ್ ಶಾಸ್ತ್ರಿ ಜನ್ಮದಿನ – ಮೋದಿ, ಕೋವಿಂದ್ ನಮನ

    ನವದೆಹಲಿ: ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 151ನೇ ಜನ್ಮದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಗೆ ಹೂವಿನ ಗೌರವ ಸಲ್ಲಿಸಿದ್ದಾರೆ.

    ರಾಜ್‍ಘಾಟ್‍ಗೆ ತೆರಳಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ಮೋದಿ ಅವರು ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ. ರಾಷ್ಟ್ರಪಿತ ಗಾಂಧೀಜಿ ಅವರ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮೋದಿ, “ಮಹಾತ್ಮಾ ಗಾಂಧೀಜಿಯವರ ಜೀವನ ಮತ್ತು ಆಲೋಚನೆಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಸಮೃದ್ಧ ಮತ್ತು ಸಹಾನುಭೂತಿಯುಳ್ಳ ಭಾರತವನ್ನು ರಚಿಸಲು ಬಾಪು ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡಲಿ” ಎಂದು ಮೋದಿ ಹೇಳಿದ್ದಾರೆ.

    ರಾಷ್ಟ್ರಪಿತ ಗಾಂಧಿಯವರ ಸತ್ಯ, ಅಹಿಂಸೆ ಮತ್ತು ಪ್ರೀತಿಯ ಸಂದೇಶವು ಸಮಾಜದಲ್ಲಿ ಸಾಮರಸ್ಯವನ್ನು ತುಂಬುತ್ತದೆ. ವಿಶ್ವದ ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತದೆ. ಅವರು ಮಾನವೀಯತೆಯ ಪ್ರತೀಕವಾಗಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದ್ದಾರೆ.

    ಇಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 116ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹೀಗಾಗಿ ವಿಜಯ್ ಘಾಟ್‍ಗೆ ಹೋಗಿ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು.

    https://twitter.com/narendramodi/status/1311843987532050437

    ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಅವರು ಸ್ಥಿರ ಮತ್ತು ಅತ್ಯಂತ ದೃಢ ನಿಲುವಿನ ವ್ಯಕ್ತಿಯಾಗಿದ್ದರು. ಸರಳತೆಯನ್ನು ನಿರೂಪಿಸಿದ್ದರು. ಅಲ್ಲದೇ ರಾಷ್ಟ್ರದ ಕಲ್ಯಾಣಕ್ಕಾಗಿ ಬದುಕಿದ್ದರು. ಅಷ್ಟೇ ಅಲ್ಲದೇ ಅವರು ಭಾರತಕ್ಕಾಗಿ ಮಾಡಿದ ಎಲ್ಲದಕ್ಕೂ ಆಳವಾದ ಕೃತಜ್ಞತೆಗಳೊಂದಿಗೆ ಅವರ ಜಯಂತಿಯಲ್ಲಿ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ” ಎಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಗೆ ಶುಭಾಶಯ ಕೋರಿದ್ದಾರೆ.