Tag: ಜನ್ಮ

  • ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

    ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಆಂಬ್ಯುಲೆನ್ಸ್‌ನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.

    ಮುಂಡಗೋಡು ತಾಲೂಕಿನ ಇಂದೂರ ಗ್ರಾಮದ ದಾವಲಬಿ ಮಹಬೂಬಷಾ ಹನಕನಹಳ್ಳಿ(19) ಹೆಣ್ಣು ಮಗುವಿಗೆ ಜನ್ಮನೀಡಿದ ಗರ್ಭಿಣಿಯಾಗಿದ್ದಾಳೆ. ಈ ಘಟನೆ ಇಂದು ರಾತ್ರಿ ನಡೆಯಿತು.

    ಇದು ಗರ್ಭಿಣಿಯ ಮೊದಲನೇ ಹೆರಿಗೆಯಾಗಿದ್ದು, ಅಧಿಕ ರಕ್ತದೊತ್ತಡ ಹಾಗೂ ಹೆರಿಗೆ ನೋವು ಕಾಣಿಸಿದ್ದರಿಂದ ತಾಲೂಕು ಆಸ್ಪತ್ರೆಯಯವರು ಹುಬ್ಬಳ್ಳಿ ಕಿಮ್ಸ್ ಗೆ ಕಳಿಸಿಕೊಟ್ಟಿದ್ದರು. ಹೆರಿಗೆ ನೋವು ಹೆಚ್ಚಾಗಿದ್ದರಿಂದ ವರೂರ ಬಳಿ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಬಳೂರ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ

    ತಾಯಿ ಮಗು ಇಬ್ಬರು ಸುರಕ್ಷಿತವಾಗಿ ಇದ್ದು, ಹುಬ್ಬಳ್ಳಿ  ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಕೆಂಚೇಶ್.ಇ.ಎನ್ ಇದ್ದರು.

  • ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ – ಅವಿವಾಹಿತೆ, ಮಗು ಸಾವು

    ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ – ಅವಿವಾಹಿತೆ, ಮಗು ಸಾವು

    ಲಕ್ನೋ: ಅವಿವಾಹಿತೆ ಗರ್ಭಿಣಿಯೊಬ್ಬಳು ಯೂಟ್ಯೂಬ್‍ನಲ್ಲಿ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಲು ಮುಂದಾದಾಗ ತೀವ್ರ ರಕ್ತಸ್ರಾವದಿಂದ ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆ ಸೋಮವಾರ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.

    ಯುವತಿ ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. ಈ ವೇಳೆ ಮನೆಯ ಮಾಲೀಕ ಹಾಗೂ ಅಕ್ಕಪಕ್ಕದ ಮನೆಯವರು ಯುವತಿಯ ರೂಮಿನ ಹೊರಗೆ ರಕ್ತವನ್ನು ನೋಡಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುವಾಗ ಯುವತಿಯ ಮೊಬೈಲಿನಲ್ಲಿ ವಿಡಿಯೋ ಪ್ಲೇ ಆಗುತ್ತಿತ್ತು.

    ಪೊಲೀಸರ ಪ್ರಕಾರ ಯುವತಿ ಬಹರಾಯಿಚ್‍ನಲ್ಲಿ ವಾಸಿಸುತ್ತಿದ್ದಳು. ನಾಲ್ಕು ದಿನಗಳ ಹಿಂದೆಷ್ಟೇ ಆಕೆ ಗೋರಖ್‍ಪುದ ರವಿ ಉಪಾಧ್ಯಾಯ್ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಕೆಲವು ದಿನಗಳಲ್ಲಿ ನನ್ನ ತಾಯಿ ನನ್ನ ಜೊತೆ ವಾಸಿಸಲು ಬರುತ್ತಾರೆ ಎಂದು ಯುವತಿ ಮನೆ ಮಾಲೀಕನಿಗೆ ಹೇಳಿದ್ದಳು.

    ಯುವತಿಯ ಕುಟುಂಬದವರು ಆಕೆಗೆ ಗರ್ಭಪಾತ ಮಾಡಿಸಬೇಕು ಎಂದುಕೊಂಡಿದ್ದರು. ಆದರೆ ಯುವತಿ ಇದಕ್ಕೆ ಒಪ್ಪಲಿಲ್ಲ. ಸಮಾಜಕ್ಕೆ ಹೆದರಿ ಯುವತಿ ಕೆಲವು ದಿನಗಳ ಹಿಂದಷ್ಟೇ ಬಚರಾಯಿಚ್‍ನಿಂದ ಗೋರಖ್‍ಪುರಕ್ಕೆ ಬಂದಿದ್ದಳು. ಗೋರಖ್‍ಪುರಕ್ಕೆ ಬಂದ ನಂತರ ಯುವತಿ ಬೇರೆ ಬೇರೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.

    ಪೊಲೀಸರು ಯುವತಿಯ ಮೊಬೈಲ್ ಪರಿಶೀಲಿಸಿ ಆಕೆಯ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪೋಷಕರಿಗೆ ಕರೆ ಮಾಡಿದ್ದಾಗ ಯುವತಿ ಅವಿವಾಹಿತೆ ಎಂಬುದು ತಿಳಿದುಬಂದಿದೆ. ಸಾಕ್ಷಿಗಳು ನಾಶ ಆಗಬಾರದೆಂದು ಪೊಲೀಸರು ಯುವತಿ ಇದ್ದ ಕೊಠಡಿಯನ್ನು ಸೀಲ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವಳಿ ಕರುಗಳೊಂದಿಗೆ ಸೆಲ್ಫಿಗೆ ಮುಗಿಬಿದ್ದ ಮಕ್ಕಳು!

    ಅವಳಿ ಕರುಗಳೊಂದಿಗೆ ಸೆಲ್ಫಿಗೆ ಮುಗಿಬಿದ್ದ ಮಕ್ಕಳು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಈ ಕರುಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮಕ್ಕಳು ಮುಗಿಬಿದ್ದಿದ್ದರು.

    ಬೆಂಗಳೂರಿನ ಮಾರತಹಳ್ಳಿ ಬಳಿಯ ಬಾಲಾಜಿ ಲೇಔಟ್ ನಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಹಳ್ಳಿಗಾಡು ಪ್ರದೇಶಗಳಲ್ಲಿ ಇದು ಕಾಮನ್ ಆಗಿದ್ದರೂ ಈ ದಟ್ಟ ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿ ಹಸುವೊಂದು ಅವಳಿ ಗಂಡು ಕರುಗಳಿಗೆ ಜನ್ಮ ಕೊಟ್ಟಿದ್ದು ಸೆಲ್ಫಿ ಕ್ರೇಜ್‍ಗೆ ಕಾರಣವಾಗಿದೆ.

    ವಿಶ್ವನಾಥ್ ರೆಡ್ಡಿ ಎಂಬವರು ಕಳೆದ 20 ವರ್ಷಗಳಿಂದ ಹಸು ಸಾಗಣಿಕೆಯನ್ನೇ ವೃತ್ತಿಯಾಗಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಹಸು ಅವಳಿ ಕರುಗಳಿಗೆ ಜನ್ಮ ಕೊಟ್ಟಿದೆ. ಹೀಗಾಗಿ ತಮಗೂ ಇದು ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ. ಸಂಡೇ ಸ್ಪೆಷಲ್ ಎಂಬಂತೆ ಅವಳಿ ಕರುಗಳು ಪುಟಾಣಿಗಳ ರಜೆ ಮಜಾವನ್ನು ಮತ್ತಷ್ಟು ಕಲರ್ ಫುಲ್ ಗೊಳಿಸಿದವು.

    ಮಕ್ಕಳು ಅವಳಿ ಕರುವಿನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಸ್ಟೆಲ್‍ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

    ಹಾಸ್ಟೆಲ್‍ನಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

    -ಮಗು ಸಹಿತ ಬಾಲಕಿಯನ್ನು ಕಾಡಿಗೆ ಅಟ್ಟಿದ ಹಾಸ್ಟೆಲ್ ಸಿಬ್ಬಂದಿ

    ಭುವನೇಶ್ವರ: ಅಪ್ರಾಪ್ತ ಬಾಲಕಿಯೊಬ್ಬಳು ಆದಿವಾಸಿ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

    ಈ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯ ದರಿಂಗಿಬಾದಿಯಲ್ಲಿರುವ ‘ಸೇವಾ ಆಶ್ರಯ ಹೈಸ್ಕೂಲ್’ ಹಾಸ್ಟೆಲ್‍ನಲ್ಲಿ ನಡೆದಿದ್ದು, ವಿದ್ಯಾರ್ಥಿನಿ ಶನಿವಾರ ರಾತ್ರಿ ಮಗುವಿಗೆ ಜನ್ಮ ನೀಡಿದ್ದಾಳೆ. ವಿದ್ಯಾರ್ಥಿನಿಗೆ 14 ವಯಸ್ಸಾಗಿದ್ದು, 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಮಗು ಹುಟ್ಟಿದ ಬಳಿಕ ಆಕೆ ಮತ್ತು ಮಗುವನ್ನು ಹಾಸ್ಟೆಲ್ ನಿಂದ ಹೊರಗೆ ಹತ್ತಿರದ ಅರಣ್ಯಕ್ಕೆ ತಳ್ಳಿದ್ದಾರೆ ಎಂದು ಕಂಧಮಲ್ ಜಿಲ್ಲಾ ಕಲ್ಯಾಣ ಅಧಿಕಾರಿ ಚಾರುಲತಾ ಮಲ್ಲಿಕ್ ತಿಳಿಸಿದ್ದಾರೆ.

    ಈ ಪ್ರಕರಣ ಈಗ ಅಧಿಕಾರಿಗಳಿಗೆ ತಲೆಬಿಸಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಎಸ್‍ಸಿ/ಎಸ್‍ಟಿ ಕಲ್ಯಾಣ ಸಚಿವ ರಮೇಶ್ ಮಝಿ ಅವರು ಆದೇಶಿಸಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಪೊಲೀಸರು ಕೂಡ ಈ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

    ಭಾನುವಾರ ಮುಂಜಾನೆ ಇಬ್ಬರು ಅರಣ್ಯ ಅಧಿಕಾರಿಗಳು ಬಾಲಕಿಯನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕಿ ಹಾಗೂ ಆಕೆಯ ಮಗು ಇಬ್ಬರು ಫುಲಬಾನಿ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗು ಮತ್ತು ತಾಯಿ ಇಬ್ಬರ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಎಂಟು ತಿಂಗಳ ಹಿಂದೆ ಬಾಲಕಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ಆದರೆ ಬಾಲಕಿ ಭಯದಿಂದ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರಿಂಗ್‍ಬಾದಿ ಕಾಲೇಜಿನ ವಿದ್ಯಾರ್ಥಿಯೋರ್ವನನ್ನು ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ.

    ಜಿಲ್ಲಾಧಿಕಾರಿ ಬೃಂದ ಅವರು, ಹಾಸ್ಟೆಲ್‍ನ ಇಬ್ಬರು ಅಡುಗೆ ಭಟ್ಟರು, ಮಹಿಳಾ ಮೇಲ್ವಿಚಾರಕಿ ಹಾಗೂ ಓರ್ವ ದಾದಿಯನ್ನು ಅಮಾನತು ಮಾಡಿದ್ದಾರೆ. ಜೊತೆಗೆ ಈ ಶಾಲೆಯ ಮುಖ್ಯಶಿಕ್ಷಕಿ ರಾಧಾ ರಾಣಿ ಅವರನ್ನೂ ಅಮಾನತು ಮಾಡುವಂತೆ ಸರ್ಕಾರ ಆದೇಶಿಸಿರುವುದಾಗಿ ತಿಳಿಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 9 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ- ಕರುಳಬಳ್ಳಿ ಜೊತೆ ಜೀವಂತವಾಗಿ ನೇತಾಡುತ್ತಿದ್ದ ಮಗು ರಕ್ಷಣೆ

    9 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ- ಕರುಳಬಳ್ಳಿ ಜೊತೆ ಜೀವಂತವಾಗಿ ನೇತಾಡುತ್ತಿದ್ದ ಮಗು ರಕ್ಷಣೆ

    ಭೋಪಾಲ್: 9 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಾಗ ಆಕೆಯ ಹೊಟ್ಟೆಯಿಂದ ಕರುಳಬಳ್ಳಿಯೊಂದಿಗೆ ಜಾರಿ ನೇತಾಡುತ್ತಿದ್ದ ಮಗುವನ್ನು ರಕ್ಷಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಲಕ್ಷ್ಮಿ ಠಾಕೂರ್(36) ಆತ್ಮಹತ್ಯೆ ಮಾಡಿಕೊಂಡ ತುಂಬು ಗರ್ಭಿಣಿ. ಲಕ್ಷ್ಮಿ 9 ತಿಂಗಳು ಗರ್ಭಿಣಿಯಾಗಿದ್ದು, ಈಗಾಗಲೇ ಆಕೆಗೆ 4 ಮಕ್ಕಳಿದ್ದರು. ಲಕ್ಷ್ಮಿ ಗುರುವಾರ ಬೆಳಗ್ಗೆ 6.30ಕ್ಕೆ ತನ್ನ ಮನೆಯ ಬಳಿಯಿದ್ದ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಗಂಡು ಮಗು ಕರುಳಬಳ್ಳಿ ಸಮೇತ ಲಕ್ಷ್ಮಿ ಕಾಲಿನ ಮಧ್ಯೆ ಸೀರೆಯಲ್ಲಿ ಜೀವಂತವಾಗಿ ನೇತಾಡುತ್ತಿತ್ತು.

    ಈ ಘಟನೆ ಬಗ್ಗೆ ನಮಗೆ ಮಾಹಿತಿ ಬಂದಾಗ ನಾವು ಮೊದಲು ಸ್ಥಳಕ್ಕೆ ಭೇಟಿ ನೀಡಿದ್ದೇವು. ವೈದ್ಯರು ಬರುವವರೆಗೂ ನೇತಾಡುತ್ತಿದ್ದ ಗಂಡು ಮಗುವನ್ನು ಕ್ಲೀನ್ ಮಾಡಿ ಅದನ್ನು ಬೆಚ್ಚಗಿರಿಸಿದ್ದೇವು. ನಂತರ ವೈದ್ಯರು ಬಂದು ಮಗುವನ್ನು ತಾಯಿಯ ಕರುಳಬಳ್ಳಿಯಿಂದ ಬೇರ್ಪಡಿಸಿದ್ದಾರೆ. ಸದ್ಯ ಮಗುವನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಬದುಕುಳಿಯುವ ಎಲ್ಲ ಸಾಧ್ಯತೆ ಇದೆ ಎಂದು ಎಸ್‍ಐ ಕವಿತಾ ಸಹ್ನಿ ಹೇಳಿದ್ದಾರೆ.

    ತುಂಬು ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗುರುವಾರ ಬೆಳಗ್ಗೆ 7.13 ಕರೆ ಬಂತು. ನಾವು ಆಕೆಯ ಮೃತದೇಹವನ್ನು ಪರಿಶೀಲಿಸಲು ಹೋಗಿದ್ದಾಗ ಆಕೆಯ ಸೀರೆಯಲ್ಲಿ ಮಗು ನೇತಾಡುತ್ತಿರುವುದು ಕಾಣಿಸಿತು. ಆಗ ವೈದ್ಯರನ್ನು ಕರೆಸಿ ಕರುಳ ಬಳ್ಳಿಯನ್ನು ಕತ್ತರಿಸಿ ಮಗುವನ್ನು ತಾಯಿಯನ್ನು ಪ್ರತ್ಯೇಕಿಸಲಾಯಿತು. ಮಗುವನ್ನು ತೆಗೆದ ಬಳಿಕ ಲಕ್ಷ್ಮಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದರು.

    ಇದು ಒಂದು ದುರಾದೃಷ್ಟಕರ ಘಟನೆ. ಮಹಿಳೆಯನ್ನು ಜೀವಂತವಾಗಿ ಉಳಿಸಲು ಸಾಧ್ಯವಾಗಿಲ್ಲ. ಆದರೆ ಮಗುವನ್ನು ರಕ್ಷಿಸಿದ್ದೇವೆ. ಮಗು ಬದುಕಲಿ ಎಂದು ಬೇಡಿಕೊಳ್ಳುತ್ತಿದ್ದೇವು. ಸರಿಯಾದ ಸಮಯಕ್ಕೆ ನಮಗೆ ಕರೆ ಮಾಡಿದ್ದಕ್ಕೆ ಮಗು ಬದುಕುಳಿದಿದೆ, ಇಲ್ಲದಿದ್ದರೆ ಮಗು ಕೂಡ ಮೃತಪಡುತ್ತಿತ್ತು ಎಂದು ವೈದ್ಯರು ತಿಳಿಸಿದರು. ತಾಯಿ ಮೃತಪಟ್ಟರೂ ಮಗು ಜೀವಂತವಾಗಿರುವುದನ್ನು ನೋಡಿದರೆ ಇದೊಂದು ಪವಾಡವೇ ಎಂದು ಎನ್ನಿಸುತ್ತದೆ ಎಂದು ಕವಿತಾ ಹೇಳಿದರು.

    ಲಕ್ಷ್ಮಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನನ್ನ ಹಾಗೂ ಲಕ್ಷ್ಮಿ ನಡುವೆ ಯಾವುದೇ ಜಗಳ ಇರಲಿಲ್ಲ. ಇಬ್ಬರು ಬುಧವಾರ 9 ಗಂಟೆವರೆಗೂ ಟಿವಿ ನೋಡಿ ಮಲಗಲು ಹೋಗಿದ್ದೇವು. ಗುರುವಾರ ಬೆಳಗ್ಗೆ 6 ಗಂಟೆಗೆ ನಾನು ಎದ್ದಾಗ ಲಕ್ಷ್ಮಿ ಎಲ್ಲಿಯೂ ಕಾಣಿಸಲಿಲ್ಲ. ಆಕೆಯನ್ನು ಹುಡುಕುತ್ತಿದ್ದಾಗ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ನಾನು ಸ್ಥಳೀಯ ನಿವಾಸಿಗಳಿಗೆ ತಿಳಿಸಿದೆ ಎಂದು ಪತಿ ಸಂತೋಷ್ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ.

    ಮಹಿಳೆ ನೇಣಿಗೆ ಶರಣಾಗುವ ಮೊದಲು ಅಥವಾ ನಂತರ ಮಗು ಜನಿಸಿರುವುದು ಇದು ಮೊದಲ ಪ್ರಕರಣ ಎಂದು ವೈದ್ಯಕೀಯ ಲೋಕದಲ್ಲಿ ಹೇಳಲಾಗುತ್ತಿದೆ. ಲಕ್ಷ್ಮಿ ಆತ್ಮಹತ್ಯೆ ಹಾಗೂ ಡೆಲಿವರಿಯಾದ ಮಗುವಿನ ಬಗ್ಗೆ ಸಮಯ ಸರಿಯಾಗಿ ಗೊತ್ತಿಲ್ಲ. ಮಹಿಳೆ ನೇಣಿಗೆ ಶರಣಾದ ಹಿನ್ನಲೆಯಲ್ಲಿ ಮಗು ಜನಿಸಿರಬಹುದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ- ಒಂದು ಕಡೆ ಖುಷಿಯಾದರೆ, ಮತ್ತೊಂದೆಡೆ ಬೇಸರ

    ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ- ಒಂದು ಕಡೆ ಖುಷಿಯಾದರೆ, ಮತ್ತೊಂದೆಡೆ ಬೇಸರ

    ಕೊಪ್ಪಳ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಗಂಗಾವತಿ ತಾಲೂಕಿನ ವಿಠಲಾಪುರದ ಗ್ರಾಮದ ರತ್ನಮ್ಮ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈಗ ತಾಯಿ ಹಾಗೂ ಮೂರು ಮಕ್ಕಳು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ರತ್ನಮ್ಮ ಅವರು ಈ ಮೊದಲು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಈ ಮೊದಲು ರತ್ನಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದೀಗ ಮತ್ತೆ ಮೂರು ತ್ರಿವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಟ್ಟು ನಾಲ್ಕು ಜನ ಹೆಣ್ಣು ಮಕ್ಕಳನ್ನು ಪಡೆದಿರುವ ರತ್ನಮ್ಮ ಅವರಿಗೆ ಒಂದು ಕಡೆ ಖುಷಿಯಾದರೆ, ಮತ್ತೊಂದೆಡೆ ಕಡುಬಡತನಕ್ಕೆ ಮಕ್ಕಳನ್ನು ಸಾಕುವುದು ಕಷ್ಟ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೇ ಬಾರಿಗೆ ಮೂರು ಮರಿಗಳಿಗೆ ಜನ್ಮ ನೀಡಿದ ಕುರಿ

    ಒಂದೇ ಬಾರಿಗೆ ಮೂರು ಮರಿಗಳಿಗೆ ಜನ್ಮ ನೀಡಿದ ಕುರಿ

    ಮಂಡ್ಯ: ಕುರಿ ಸಾಧಾರಣವಾಗಿ ಒಂದು ಮರಿಗೆ ಅಥವಾ ಹೆಚ್ಚು ಅಂದರೆ ಎರಡು ಮರಿಗಳಿಗೆ ಜನ್ಮ ನೀಡುತ್ತದೆ. ಆದರೆ ಮಂಡ್ಯದ ರೈತರೊಬ್ಬರ ಮನೆಯಲ್ಲಿ ಕುರಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿ ಸುದ್ದಿಯಾಗಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ, ತರಮನಕಟ್ಟೆ ಗ್ರಾಮದ ರೈತ ರಮೇಶ್ ಎಂಬವರ ಮನೆಯಲ್ಲಿ ಕುರಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ. ರಮೇಶ್ ಮನೆಯವರು ಸುಮಾರು 50 ವರ್ಷಗಳಿಂದ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ.

    ರಮೇಶ್ ತಮ್ಮ ಮನೆಯಲ್ಲಿ ಸುಮಾರು 60 ಕುರಿಗಳನ್ನು ಸಾಕಿದ್ದಾರೆ. ಕಳೆದ ಐವತ್ತು ವರ್ಷಗಳಲ್ಲಿ ಅವರ ಕುರಿಗಳು ಒಮ್ಮೆಯೂ ಒಮ್ಮೆಲೆ ಮೂರು ಮರಿಗಳಿಗೆ ಜನ್ಮ ನೀಡಿಲ್ಲ. ಅಷ್ಟೇ ಅಲ್ಲದೇ ಸಹಜವಾಗಿ ಕುರಿಗಳು ಒಮ್ಮೆಗೆ ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುತ್ತವೆ.

    ಇದೀಗ ಒಮ್ಮೆಗೆ ಮೂರು ಮರಿಗಳಿಗೆ ಜನ್ಮ ನೀಡಿರುವುದರಿಂದ ರೈತ ರಮೇಶ್ ಕುಟುಂಬ ಸಂತಸ ವ್ಯಕ್ತಪಡಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 21ನೇ ಮಗುವಿಗೆ ಜನ್ಮ ನೀಡಿ ಇದು ಲಾಸ್ಟ್ ಎಂದ ಮಹಾತಾಯಿ!

    21ನೇ ಮಗುವಿಗೆ ಜನ್ಮ ನೀಡಿ ಇದು ಲಾಸ್ಟ್ ಎಂದ ಮಹಾತಾಯಿ!

    ಲಂಡನ್: ಇಂಗ್ಲೆಂಡಿನ 43 ವರ್ಷದ ಮಹಾತಾಯಿಯೊಬ್ಬರು 21ನೇ ಮಗುವಿಗೆ ಜನ್ಮ ನೀಡಿ ಇದು ಲಾಸ್ಟ್ ಎಂದು ಹೇಳುವುದರ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.

    ಸ್ಯೂ ರಾಡ್ಫೋರ್ಡ್ 21ನೇ ಮಗುವಿಗೆ ಜನ್ಮ ನೀಡಿದ ಮಹಿಳೆ. 20 ಮಕ್ಕಳನ್ನು ಪಡೆದು ರಾಡ್ಫೋರ್ಡ್ ಕುಟುಂಬ ಯುಕೆಯಲ್ಲೇ ಅತಿ ದೊಡ್ಡದಾದ ಕುಟುಂಬ. ಸದ್ಯ ಈ ಕುಟುಂಬಕ್ಕೆ 21ನೇ ಸದಸ್ಯ ಎಂಟ್ರಿ ನೀಡಿದ್ದು, ರಾಡ್ಫೋರ್ಡ್ ಇದು ಲಾಸ್ಟ್ ಮಗು ಎಂದು ತಿಳಿಸಿದ್ದಾರೆ.

    ರಾಡ್ಫೋರ್ಡ್ ನ.6ರಂದು ತನ್ನ 21ನೇ ಮಗು ಬೋನಿ ರಾಯೈಗೆ ಜನ್ಮ ನೀಡಿದ್ದಾರೆ. ಬೋನಿ ಜನ್ಮದಿಂದ ಈಗ ನನ್ನ ಕುಟುಂಬದಲ್ಲಿ 23 ಮಂದಿ ಆಗಿದ್ದಾರೆ. ಸದ್ಯ ನಾನು ಹಾಗೂ ನನ್ನ ಪತಿ ಇನ್ನು ಮಗು ಬೇಡ ಎಂದು ನಿರ್ಧರಿಸಿದ್ದೇವೆ. ಬೋನಿ ನಮ್ಮ ಕುಟುಂಬವನ್ನು ಕಂಪ್ಲೀಟ್ ಮಾಡಿದ್ದಾಳೆ ಎಂದು ಹೇಳಿ ಸಂಭ್ರಮಿಸಿದ್ದಾರೆ.

    ನಾವು ಎರಡು ಅಥವಾ ಮೂರು ಮಗುವನ್ನು ಪಡೆಯಲು ಮಾತ್ರ ನಿರ್ಧರಿಸಿದ್ದೇವು. ಆದರೆ ನಾವು ಈಗ 21 ಮಗುವನ್ನು ಪಡೆದಿದ್ದೇವೆ. ನನ್ನ ಎಲ್ಲ ಮಕ್ಕಳು ತಮ್ಮ ಮೂರು ದಶಕದ ಕಿರಿಯ ಸಹೋದರಿಯನ್ನು ನೋಡಲು ನನ್ನ ಎಲ್ಲ ಮಕ್ಕಳು ಖುಷಿಯಾಗಿದ್ದಾರೆ ಎಂದು ರಾಡ್ಫೋರ್ಡ್ ಹೇಳಿದ್ದಾರೆ.

    ತಮ್ಮ ಸಹೋದರಿಯನ್ನು ನೋಡಲು ಎಲ್ಲರೂ ಜಗಳವಾಡಿದರು. ನಂತರ ನಾವು ಮಗುವನ್ನು ಮನೆಗೆ ಕರೆದುಕೊಂಡು ಬಂದಾಗ ಎಲ್ಲರೂ ಮಗುವನ್ನು ನೋಡಲು ಸರದಿಯಲ್ಲಿ ನಿಂತಿದ್ದರು. ನಾವು ಮೂರು ಮಕ್ಕಳು ಪಡೆಯಲು ನಿರ್ಧರಿಸಿದ್ದೇವು. ರಾಡ್ಫೋರ್ಡ್ ಒಂಬತ್ತನೇ ಮಗುವಿಗೆ ಜನ್ಮ ನೀಡಿದ ನಂತರ ಕೆಲವು ವರ್ಷಗಳ ಹಿಂದೆ ನಾನು ಸಂತಾನಹರಣ ಮಾಡಿಸಲು ನಿರ್ಧರಿಸಿದೆ. ಆದರೆ ನನಗೆ ತಂದೆಯಾಗುವ ಬಯಕೆಯಿತ್ತು. ಹಾಗಾಗಿ ನಾನು ಈ ನಿರ್ಧಾರದಿಂದ ಹಿಂದೆ ಸರಿದೆ ಎಂದು ರಾಡ್ಫೋರ್ಡ್ ಪತಿ ತಿಳಿಸಿದ್ದಾರೆ.

    ರಾಡ್ಫೋರ್ಡ್ ಹಾಗೂ ಆಕೆಯ ಪತಿ ಮೋರ್ ಕ್ಯಾಂಬೇಯಲ್ಲಿ ಮಕ್ಕಳ ಸಹಾಯದಲ್ಲಿ ಬೇಕರಿ ನಡೆಸುತ್ತಿದ್ದಾರೆ. ನಾನು ಮತ್ತೆ ಗರ್ಭಿಣಿಯಾಗುವುದನ್ನು ಮಿಸ್ ಮಾಡುತ್ತೇನೆ ಎಂದಿದ್ದಾರೆ. ಸದ್ಯ ರಾಡ್ಫೋರ್ಡ್ 7ನೇ ವಯಸ್ಸಿನಲ್ಲಿದ್ದಾಗ ತನ್ನ ಪತಿ ನಿಯೋಲ್‍ಯನ್ನು ಭೇಟಿಯಾಗಿದ್ದರು. 14ನೇ ವಯಸ್ಸಿಗೆ ರಾಡ್ಫೋರ್ಡ್ ಮೊದಲನೇ ಗಂಡು ಮಗುವಿಗೆ ಜನ್ಮ ನೀಡಿದ್ದು ಆತನಿಗೆ ಈಗ 29 ವರ್ಷ. ರಾಡ್ಫೋರ್ಡ್ ತನ್ನ ಜೀವನದಲ್ಲಿ ಒಟ್ಟು 800 ವಾರ ಗರ್ಭಿಣಿಯಾಗಿದ್ದರು.

    ಕ್ರಿಸ್, ಸೋಫಿ, ಕ್ಲೋಯ್, ಜ್ಯಾಕ್, ಡೇನಿಯಲ್, ಲ್ಯೂಕ್, ಮಿಲ್ಲಿ, ಕೇಟೀ, ಜೇಮ್ಸ್, ಎಲ್ಲೀ, ಐಮೀ, ಜೋಶ್, ಮ್ಯಾಕ್ಸ್, ಟೆಲ್ಲೀ, ಆಸ್ಕರ್, ಕ್ಯಾಸ್ಪರ್, ಹ್ಯಾಲೀ, ಫೋಬೆ ಮತ್ತು ಆರ್ಚೀ ಅವರ ಮಕ್ಕಳ ಹೆಸರಾಗಿದ್ದು, ಸೋಫಿ ಮೂರು ಮಕ್ಕಳ ತಾಯಿ. ಸದ್ಯ ರಾಡ್ಫೋರ್ಡ್ ಈಗ ಅಜ್ಜಿ ಆಗಿದ್ದಾರೆ. ರಾಡ್ಫೋರ್ಡ್ ಡೆಲಿವರಿಗೆ ಆಸ್ಪತ್ರೆಗೆ ಹೋದಾಗ, ಮುಂದಿನ ವರ್ಷ ಬರುತ್ತೀರಾ ಎಂದು ಸಿಬ್ಬಂದಿ ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಇಲ್ಲವೆಂದು ಉತ್ತರಿಸಿದ್ದರು. ಆದರೆ ಹಿಂದಿನ ವರ್ಷ 20ನೇ ಮಗು ಜನಿಸಿದಾಗ ಕೂಡ ರಾಡ್ಫೋರ್ಡ್ ಇದೇ ಉತ್ತರ ನೀಡಿದ್ದರು ಎಂದು ವರದಿಯಾಗಿದೆ.

     

    View this post on Instagram

     

    This is what breakfast time looks like well one table anyway ????????

    A post shared by Radford Family (@theradfordfamily) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ಹಸು

    ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ಹಸು

    – ಪಂಚಾಯ್ತಿ ಅಧ್ಯಕ್ಷರಿಂದ ಸಹಾಯಧನ

    ಬೆಂಗಳೂರು: ಅಪರೂಪದ ಅವಳಿ ಹೆಣ್ಣು ಕರುಗಳಿಗೆ ಗೋವೊಂದು ಜನ್ಮ ನೀಡಿದ್ದು, ಇದೀಗ ಸುತ್ತಮುತ್ತಲ ಜನರ ಆಕರ್ಷಣೆಗೆ ಕಾರಣವಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯಲ್ಲಿ ಈ ವಿಸ್ಮಯ ನಡೆದಿದೆ. ಗ್ರಾಮದ ನರಸಮ್ಮ ಎಂಬವರಿಗೆ ಸೇರಿದ ಹಸು ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿ ಸೋಜಿಗಕ್ಕೆ ಕಾರಣವಾಗಿದೆ.

    ವೈಜ್ಞಾನಿಕವಾಗಿ ವರ್ಣತಂತುಗಳು ಡೈಜೈಗೋಟಿಕ್ ಪ್ರಕ್ರಿಯೆಯಾದಾಗ ಈ ರೀತಿಯ ಎರಡು ಕರುಗಳು ಜನ್ಮ ತಾಳುತ್ತವೆ. ಅಪರೂಪದ ಹಸು ಕರುಗಳನ್ನು ನೋಡಲು ಸುತ್ತ-ಮುತ್ತಲಿನ ಗ್ರಾಮಗಳ ಹಲವಾರು ಮಂದಿ ಆಗಮಿಸಿ ವೀಕ್ಷಿಸುತ್ತಿದ್ದಾರೆ.

    ಸ್ಥಳೀಯ ಮಾದನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಸು ಸಾಕಿದ ನರಸಮ್ಮಳಿಗೆ ಉಡುಗೊರೆ ಹಾಗೂ ಕರುಗಳ ಪೋಷಣೆಗಾಗಿ ಸಹಾಯ ಧನ ನೀಡಿ ಮಾನವೀಯತೆಗೆ ಮುಂದಾಗಿದ್ದಾರೆ. ಅಪರೂಪದ ಹಸು ಕರುಗಳು ವಿಜ್ಞಾನಕ್ಕೆ ವಿಸ್ಮಯವಾಗಿದ್ದು, ಹಸು ಹಾಗೂ ಕರುಗಳೆರಡೂ ಆರೋಗ್ಯವಾಗಿವೆ ಎಂದು ನರಸಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎರಡನೇ ಮಗುವಿಗೆ ಜನ್ಮ ನೀಡಿದ್ರು ಹೇಮಾ ಪಂಚಮುಖಿ

    ಎರಡನೇ ಮಗುವಿಗೆ ಜನ್ಮ ನೀಡಿದ್ರು ಹೇಮಾ ಪಂಚಮುಖಿ

    ಬೆಂಗಳೂರು: ‘ಅಮೆರಿಕಾ ಅಮೆರಿಕಾ’ ಚಿತ್ರದಿಂದ ನಾಯಕಿಯಾಗಿ ಗುರುತಿಸಿಕೊಂಡ ನಟಿ ಹೇಮಾ ಪಂಚಮುಖಿ ಗುರುವಾರ ಎರಡನೇ ಮಗುವಿಗೆ ಜನ್ಮ ನೀಡಿದರು.

    ಹೇಮಾ ಕೆಲವು ತಿಂಗಳ ಹಿಂದೆ ತಮ್ಮ ಮನೆಯವರ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸೀಮಂತ ಮಾಡಿಕೊಂಡಿದ್ದರು. ಆದರೆ ಗುರುವಾರ ಅಂದರೆ ಸೆಪ್ಟೆಂಬರ್ 6ರಂದು ಹೇಮಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ವಿಷಯವನ್ನು ಹೇಮಾ ಹಾಗೂ ಅವರ ಪತಿ ಪ್ರಶಾಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ನಟಿ ಹೇಮಾ ಅವರಿಗೆ ಈಗಾಗಲೇ ಒಬ್ಬಳು ಮಗಳಿದ್ದಾರೆ. ಹೇಮಾ ಭರತನಾಟ್ಯ ಅಭಿನೇತ್ರಿಯಾಗಿದ್ದು, ಅವರ ಮಗಳು ಕೂಡ ವಿದ್ಯಾಭ್ಯಾಸದ ಜೊತೆ ಭರತನಾಟ್ಯ ಕೂಡ ಕಲಿಯುತ್ತಿದ್ದಾಳೆ. ಅಲದೇ ಆಕೆ ಚಿಕ್ಕ ವಯಸ್ಸಿನಿಂದಲೂ ತನ್ನ ತಾಯಿಯ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ.

    ಹೇಮಾ ‘ರಂಗೋಲಿ’ ಚಿತ್ರದ ನಟ ಪ್ರಶಾಂತ್ ಗೋಪಾಲ್ ಅವರ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದರು. ಸದ್ಯ ಹೇಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ.

    ಹೇಮಾ ಅಮೆರಿಕಾ ಅಮೆರಿಕಾ, ದೊರೆ, ಸಂಭ್ರಮ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ಹೇಮಾ ಹಾಗೂ ಅವರ ಪತಿ ಪ್ರಶಾಂತ್ ನಾಟ್ಯ ಶಾಲೆ ಮೂಲಕ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv