Tag: ಜನಿವಾರ

  • ನೀಟ್ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದವರ ವಿರುದ್ಧ ಕ್ರಮ: ಬೋಸರಾಜು

    ನೀಟ್ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದವರ ವಿರುದ್ಧ ಕ್ರಮ: ಬೋಸರಾಜು

    ರಾಯಚೂರು: ಸರ್ಕಾರದಿಂದ ನಿರ್ದೇಶನ ಇದ್ದರೂ ಸಹ ಕೆಲವರು ಮಿಸ್ ಲೀಡ್ ಮಾಡ್ತಿದ್ದಾರೆ. ಅಂತಹವರ ವಿರುದ್ಧ ಕ್ರಮವಾಗುತ್ತದೆ ಎಂದು ಸಣ್ಣನೀರಾವರಿ ಸಚಿವ ಎನ್.ಎಸ್.ಬೋಸರಾಜು(N S Bosaraju) ಕಲಬುರಗಿಯಲ್ಲಿ(Kalaburagi) ನೀಟ್ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

    ರಾಯಚೂರಿನಲ್ಲಿ ಮಾತನಾಡಿದ ಅವರು ಅಂತಹವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ. ತಕ್ಷಣ ಜನಿವಾರ ತೆಗೆಸಿದವರ ಮೇಲೆ ಕ್ರಮ ತೆಗದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ನೀಟ್ ಪರೀಕ್ಷೆ ಜನಿವಾರ ಕೇಸ್ – ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ ಎಫ್‌ಐಆರ್

    ಇನ್ನೂ ಹಾಲ್ ಟಿಕೆಟ್‌ನಲ್ಲಿ ಧಾರ್ಮಿಕ ಚಿಹ್ನೆ ಇರುವಂತ ಯಾವ ವಸ್ತು ಇಟ್ಟುಕೊಂಡು ಪರೀಕ್ಷೆಗೆ ಹೊಗಬಾರದು ಎಂಬ ಸೂಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅದು ರಾಜ್ಯ ಸರ್ಕಾರ ಸೂಚನೆ ಅಲ್ಲ. ಕೇಂದ್ರ ಸರ್ಕಾರದ ಸೂಚನೆ. ಹೀಗಾಗಿ ಕೇಂದ್ರ ಸಚಿವರಾದ ವಿ.ಸೋಮಣ್ಣ(V Somanna) ಅದನ್ನ ಹೇಳಿದ್ದಾರೆ. ಮಂಗಳಸೂತ್ರ ಹಾಗೂ ಜನಿವಾರ ತೆಗೆಯಬಾರದು ಎಂದು ಹೇಳಿದ್ದಾರೆ. ಅದೆಲ್ಲಾ ಕೇಂದ್ರ ಸರ್ಕಾರದ ಸೂಚನೆಗಳು ರಾಜ್ಯ ಸರ್ಕಾರದ್ದು ಅಲ್ಲ. ಅದಕ್ಕೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕು ಎಂದರು.

  • ನೀಟ್ ಪರೀಕ್ಷೆ ಜನಿವಾರ ಕೇಸ್ – ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ ಎಫ್‌ಐಆರ್

    ನೀಟ್ ಪರೀಕ್ಷೆ ಜನಿವಾರ ಕೇಸ್ – ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ ಎಫ್‌ಐಆರ್

    ಕಲಬುರಗಿ: ನೀಟ್ ಪರೀಕ್ಷೆಯಲ್ಲಿ(NEET Exam) ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿದ ಪ್ರಕರಣದಲ್ಲಿ ಕಲಬುರಗಿಯ (Kalabuagi) ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    ಭಾನುವಾರ ನಡೆದ ನೀಟ್ ಪರೀಕ್ಷೆಯಲ್ಲಿ ಪರೀಕ್ಷಾ ಸಿಬ್ಬಂದಿ ಶರಣಗೌಡ ಹಾಗೂ ಗಣೇಶ್, ಪರೀಕ್ಷಾರ್ಥಿ ಶ್ರೀಪಾದ್ ಪಾಟೀಲ್ (Shripad Patil) ಧರಿಸಿದ್ದ ಜನಿವಾರ ತೆಗೆಸಿದ್ದರು. ಪರೀಕ್ಷಾ ಸಿಬ್ಬಂದಿ ಈ ನಡೆಗೆ ಆಕ್ರೋಶಗೊಂಡ ಬ್ರಾಹ್ಮಣ ಸಮಾಜ(Brahmin Community) ಬೃಹತ್ ಪ್ರತಿಭಟನೆ ನಡೆಸಿತ್ತು. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳು – ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ

    ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಸಿ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀಪಾದ್ ಪಾಟೀಲ್ ಸ್ಟೇಷನ್ ಬಜಾರ್ ಠಾಣೆಗೆ(Station Bazar Police Station) ದೂರು ನೀಡಿದ್ದಾರೆ. ವಿದ್ಯಾರ್ಥಿ ದೂರಿನ ಆಧಾರದಲ್ಲಿ ಪೊಲೀಸರು ಬಿಎನ್‌ಎಸ್ ಕಾಯ್ದೆ 298ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ರೈಲ್ವೇ ಎಕ್ಸಾಂಗೆ ಮಂಗಳಸೂತ್ರ, ಜನಿವಾರ ತೆಗೆಸುವಂತಿಲ್ಲ – ರೈಲ್ವೇ ಇಲಾಖೆಯಿಂದ ಅಧಿಕೃತ ಆದೇಶ

    ರೈಲ್ವೇ ಎಕ್ಸಾಂಗೆ ಮಂಗಳಸೂತ್ರ, ಜನಿವಾರ ತೆಗೆಸುವಂತಿಲ್ಲ – ರೈಲ್ವೇ ಇಲಾಖೆಯಿಂದ ಅಧಿಕೃತ ಆದೇಶ

    ಬೆಂಗಳೂರು: ರೈಲ್ವೇ ನೇಮಕಾತಿ ಪರೀಕ್ಷೆ ವೇಳೆ ಮಂಗಳಸೂತ್ರ ಧರಿಸಿದ್ರೆ ಪರೀಕ್ಷೆಗೆ ಅವಕಾಶವಿಲ್ಲ ಎಂಬ ನಿರ್ಬಂಧವನ್ನು ರೈಲ್ವೆ ಸಚಿವಾಲಯ ವಾಪಸ್ ಪಡೆದಿದೆ.

    ಜನಿವಾರ ವಿವಾದದಿಂದಾಗಿ ತೀವ್ರ ಟೀಕೆ, ಅಸಮಾಧಾನ ವ್ಯಕ್ತವಾಗಿದ್ದ ಬೆನ್ನಲ್ಲೇ ಈಗ ನಿರ್ಬಂಧ ಸಡಿಲಿಸಲಾಗಿದೆ. ಮಾರ್ಗಸೂಚಿಯಲ್ಲಿ ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂದು ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: Pahalgam Terror Attack – ತನಗೇ ಗೊತ್ತಿಲ್ಲದೆ ಪ್ರವಾಸಿಗನ ಮೊಬೈಲ್‌ನಲ್ಲಿ ಸೆರೆಯಾಯ್ತು ಭೀಕರ ಉಗ್ರ ಕೃತ್ಯ

    ಈ ಬಗ್ಗೆ ಸಂಸದರು, ಶಾಸಕರು ಮನವಿ ಮಾಡಿದ ಹಿನ್ನೆಲೆ ಟ್ವೀಟ್ ಮೂಲಕ ಕೇಂದ್ರ ಸಚಿವ ಸೋಮಣ್ಣ ಗೊಂದಲಕ್ಕೆ ಇತಿಶ್ರೀ ಹಾಡಿದ್ದಾರೆ. ಜನಿವಾರ, ಮಾಂಗಲ್ಯ, ಸಂಸ್ಕೃತಿ ಬಿಂಬಿಸುವ ಯಾವುದೇ ವಸ್ತು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸೂಚಿಸಲಾಗಿದೆ. ಇದನ್ನೂ ಓದಿ: ವೈಭವ್‌ ʻಯಶಸ್ವಿʼ ಶತಕ – ಚಿರಯುವಕನ ಆಟಕ್ಕೆ ಗುಜರಾತ್‌ ಧೂಳಿಪಟ, ರಾಜಸ್ಥಾನ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

  • ಜನಿವಾರ ವಾರ್‌ | ಭೌತಶಾಸ್ತ್ರ, ರಸಾಯನಶಾಸ್ತ್ರ ಸರಾಸರಿ ಅಂಕ ಪರಿಗಣಿಸಿ ಗಣಿತಕ್ಕೆ ಮಾರ್ಕ್ಸ್‌ ನೀಡಿ

    ಜನಿವಾರ ವಾರ್‌ | ಭೌತಶಾಸ್ತ್ರ, ರಸಾಯನಶಾಸ್ತ್ರ ಸರಾಸರಿ ಅಂಕ ಪರಿಗಣಿಸಿ ಗಣಿತಕ್ಕೆ ಮಾರ್ಕ್ಸ್‌ ನೀಡಿ

    ಬೀದರ್‌: ಜನಿವಾರ (Janivara) ಧರಿಸಿದ್ದಕ್ಕೆ ಸಿಇಟಿ ಪರೀಕ್ಷೆಯಿಂದ (CET) ವಂಚಿತನಾಗಿದ್ದ ಸುಚಿವ್ರತ್ ಕುಲಕರ್ಣಿ ಭೌತಶಾಸ್ತ್ರ (Physics) ಮತ್ತು ರಸಾಯನಶಾಸ್ತ್ರ (Chemistry) ವಿಷಯದ ಸರಾಸರಿ ಅಂಕಗಳನ್ನು ಆಧಾರವಾಗಿ ಪರಿಗಣಿಸಿ ಗಣಿತ ಅಂಕ ನೀಡುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರಿಗೆ  ಪತ್ರ ಬರೆದಿದ್ದಾನೆ.

    ಸುಚಿವ್ರತ್ ಕುಲಕರ್ಣಿಗೆ ಉನ್ನತ ಶಿಕ್ಷಣ ಇಲಾಖೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಅಥವಾ ಹಾಲಿ ಬರೆದಿರುವ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪರೀಕ್ಷೆಯಲ್ಲಿ ಪಡೆದ ಅಂಕದ ಆಧಾರದ ಮೇಲೆ ನೀಡುವ ಗಣಿತ ವಿಷಯದ ಅಂಕ ನಿಗದಿ ಮಾಡುವ ಆಯ್ಕೆ ನೀಡಿತ್ತು. ಈ ಆಯ್ಕೆಯ ಪೈಕಿ ಸುಚಿವ್ರತ್ ಎರಡನೇ ಆಯ್ಕೆಯನ್ನು ಆರಿಸಿಕೊಳ್ಳುವುದಾಗಿ ಹೇಳಿದ್ದಾನೆ.

     

    ಪತ್ರದಲ್ಲಿ ಏನಿದೆ?
    ನಾನು ಸುಚಿವ್ರತ್ ಕುಲಕರ್ಣಿ ಬೀದರ್ ನಿವಾಸಿಯಾಗಿದ್ದೇನೆ. ಏ.17 ರಂದು ಬೀದರ್ ನಗರದ ಸಾಯಿಸ್ಫೂರ್ತಿ ಪಿಯುಸಿ ಕಾಲೇಜಿನಲ್ಲಿರುವ ಕೇಂದ್ರಕ್ಕೆ ನಾನು ಸಿಇಟಿ ಗಣಿತ (Mathematics) ಪರೀಕ್ಷೆ ಬರೆಯಲು ಹೋಗಿರುತ್ತೇನೆ. ಆದರೆ ಈ ವೇಳೆ ಅಲ್ಲಿದ್ದ ಸಿಬ್ಬಂದಿ ನಾನು ತೊಟ್ಟಿದ್ದ ಜನಿವಾರ ತೆಗೆಯುವಂತೆ ಹೇಳಿದ್ದರು. ನಾನು ಬ್ರಾಹ್ಮಣ ಸಮಾಜದ ವಿದ್ಯಾರ್ಥಿಯಾಗಿದ್ದು ಜನಿವಾರ ತೆಗೆಯಲು ಸಾಧ್ಯವಿಲ್ಲ. ‌ಮೇಲಾಗಿ KEA ಪರೀಕ್ಷಾ ನಿಯಮದಲ್ಲಿ ಸಹ ಜನಿವಾರ ತೆಗೆಯುವ ಸೂಚನೆ ಇಲ್ಲ. ಜನಿವಾರ ತೆಗೆಯುವುದು ಅಥವಾ ತೆಗೆಸುವುದು ಧರ್ಮ ಅವಮಾನವಾಗಿದೆ.‌ ನಾನು ಜನಿವಾರ ತೆಗೆಯುವುದಿಲ್ಲ ಎಂದು ಹೇಳಿರುತ್ತೇನೆ. ಆಗ ಸಿಬ್ಬಂದಿಗಳು ನಾನು ಜನಿವಾರ ತೆಗೆಯದಿದ್ದಕ್ಕೆ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡದೇ ವಾಪಸ್ ಕಳಿಸಿದ್ದಾರೆ.

    ಪರೀಕ್ಷಾ ಕೇಂದ್ರದವರ ಈ ಕ್ರಮ ತಪ್ಪು ಹಾಗೂ KEA ನಿಯಮದ ವಿರುದ್ಧವಿದೆ ಎಂದು ಹೇಳಿ ಎಲ್ಲೆಡೆ ಬೃಹತ್ ಪ್ರತಿಭಟನೆ ನಡೆದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನನ್ನ ಮೇಲಿನ ಅನ್ಯಾಯ ಸರಿಪಡಿಸಲು ಹೇಳಿತು. ಪುನಃ ಸಿಇಟಿ ಗಣಿತ ವಿಷಯದ ಪರೀಕ್ಷೆ ಬರೆಯಲು ಅಥವಾ ಈಗಾಗಲೇ ಬರೆದಿದ್ದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಸರಾಸರಿ ಅಂಕಗಳ ಆಧಾರದಲ್ಲಿ ಗಣಿತ ವಿಷಯದ ಪರೀಕ್ಷೆಯ ಮೌಲ್ಯಮಾಪನ ಮಾಡಿ ಅಂಕ ನೀಡುವ ಘೋಷಣೆ ಮಾಡಿರುತ್ತದೆ.

    ಸರ್, ನಾನು ಮತ್ತು ನನ್ನ ಪಾಲಕರು ಸಮಾಲೋಚನೆ ಮಾಡಿ ಸರ್ಕಾರದ ಆಯ್ಕೆಯಲ್ಲಿ ಒಂದನ್ನು ಒಪ್ಪಿರುತ್ತೇವೆ‌. ನನ್ನ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದ ಸರಾಸರಿ ಅಂಕಗಳನ್ನು ಆಧಾರವಾಗಿ ಪರಿಗಣಿಸಿ ಗಣಿತ ವಿಷಯದ ಅಂಕ ನೀಡುವಂತೆ ಈ ಮೂಲಕ ಕೋರಲಾಗಿದೆ‌. ನನ್ನ ನಿರ್ಧಾರ ತಮಗೆ ತಿಳಿಸಿರುತ್ತೇನೆ. ನನಗೆ ಈ ಅವಕಾಶ ನೀಡಿ ನ್ಯಾಯ ಒದಗಿಸಿದ ಕರ್ನಾಟಕ ಸರ್ಕಾರಕ್ಕೆ ನಾನು ಮತ್ತು ನನ್ನ ಪರಿವಾರದವರಿಗೆ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇವೆ. ನನ್ನ ಪರವಾಗಿ ಧ್ವನಿ ಎತ್ತಿದ ಎಲ್ಲರಿಗೂ ವಂದಿಸುತ್ತೇನೆ.

  • PUBLiC TV Impact | ಜನಿವಾರ ಹಾಕಿದ್ದಕ್ಕೆ ಸಿಇಟಿಗೆ ನೋ ಎಂಟ್ರಿ – ಫ್ರೀ ಎಂಜಿನಿಯರಿಂಗ್ ಸೀಟ್ ಆಫರ್ ಕೊಟ್ಟ ಈಶ್ವರ್ ಖಂಡ್ರೆ

    PUBLiC TV Impact | ಜನಿವಾರ ಹಾಕಿದ್ದಕ್ಕೆ ಸಿಇಟಿಗೆ ನೋ ಎಂಟ್ರಿ – ಫ್ರೀ ಎಂಜಿನಿಯರಿಂಗ್ ಸೀಟ್ ಆಫರ್ ಕೊಟ್ಟ ಈಶ್ವರ್ ಖಂಡ್ರೆ

    ಬೀದರ್: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ (CET Exam) ಅವಕಾಶ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ವಂಚಿತನಾದ ವಿದ್ಯಾರ್ಥಿಗೆ ಉಚಿತ ಎಂಜಿನಿಯರಿಂಗ್ ಸೀಟ್ (Engineering Seat) ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಭರವಸೆ ನೀಡಿದ್ದಾರೆ.

    ಏ,17ರಂದು ಜಿಲ್ಲೆಯ ಸುಚ್ಚಿವೃತ್ ಎಂಬ ವಿದ್ಯಾರ್ಥಿ ಸಿಇಟಿ ಪರೀಕ್ಷೆ ಬರೆಯಲು dಹೋಗಿದ್ದಾಗ ಜನಿವಾರ ತೆಗೆಯದಿದ್ದರೆ ಪರೀಕ್ಷೆ ಅವಕಾಶವಿಲ್ಲ ಎಂದು ಒರಟಾಗಿ ನಡೆದುಕೊಂಡಿದ್ದ ಘಟನೆ ನಡೆದಿತ್ತು. ಈ ಕುರಿತು `ಪಬ್ಲಿಕ್ ಟಿವಿ’ (PUBLiC TV) ನಿರಂತರವಾಗಿ ಸುದ್ದಿಯನ್ನು ಬಿತ್ತರಿಸಿತ್ತು. ಈಗಾಗಲೇ ವಿದ್ಯಾರ್ಥಿಯ ಜೊತೆ ದುರ್ವರ್ತನೆ ತೋರಿದ ಪ್ರಾಂಶುಪಾಲ ಮತ್ತು ಸಿಬ್ಬಂದಿಯನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ.ಇದನ್ನೂ ಓದಿ: ಧಾರವಾಡದಲ್ಲಿಯೂ ಜನಿವಾರ ಜಟಾಪಟಿ – ಹುರಕಡ್ಲಿ ಕಾಲೇಜಿನಲ್ಲಿ ಜನಿವಾರ ಕತ್ತರಿಸಿ ಸಿಇಟಿ ಬರೆಸಿದ ಸಿಬ್ಬಂದಿ

    ಸುದ್ದಿ ಬಿತ್ತರಿಸುವ ಮೂಲಕ ಸರ್ಕಾರ ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದು, ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ವಿದ್ಯಾರ್ಥಿಯ ನಿವಾಸಕ್ಕೆ ಭೇಟಿ ನೀಡಿ, ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಸೀಟು ಕೊಡಿಸುವುದಾಗಿ ಆಫರ್ ನೀಡಿದ್ದಾರೆ. ಭವಿಷ್ಯದ ಬಗ್ಗೆ ಮಾನಸಿಕವಾಗಿ ನೊಂದಿದ್ದ ವಿದ್ಯಾರ್ಥಿ ಸುಚ್ಚಿವೃತ್ ಹಾಗೂ ಆತನ ಪೋಷಕರ ಮುಖದಲ್ಲಿ ಮಂದಹಾಸ ಮೂಡಿದೆ. ನಮಗೆ ನ್ಯಾಯಸಿಗುವಂತೆ ಮಾಡಿದ `ಪಬ್ಲಿಕ್ ಟಿವಿ’ ಹಾಗೂ ಹೆಚ್.ಆರ್ ರಂಗನಾಥ ಸರ್ ಅವರಿಗೆ ವಿದ್ಯಾರ್ಥಿ ಸೇರಿ ಪೋಷಕರು ಧನ್ಯವಾದಗಳನ್ನು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಏ,17ರಂದು ಬೀದರ್‌ನ ಸಾಯಿ ಸ್ಪೂರ್ತಿ ಕಾಲೇಜಿನಲ್ಲಿ ಸುಚ್ಚಿವೃತ್ ಎಂಬ ವಿದ್ಯಾರ್ಥಿ ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದಾಗ ಜನಿವಾರ ತೆಗೆಯದಿದ್ದರೆ ಪರೀಕ್ಷೆ ಅವಕಾಶವಿಲ್ಲ ಎಂದು ಒರಟಾಗಿ ನಡೆದುಕೊಂಡಿದ್ದ ಘಟನೆ ನಡೆದಿತ್ತು. ಸಿಬ್ಬಂದಿಗಳಿಗೆ ಇದೆಂಥಾ ನ್ಯಾಯ ಸರ್ ಎಂದಿದ್ದಕ್ಕೆ, ಒಳಗಡೆ ನೀನು ನೇಣು ಹಾಕಿಕೊಂಡರೆ ಏನು ಮಾಡೋದು? ಎಂದು ಉಡಾಫೆಯಾಗಿ ಮಾತನಾಡಿದ್ದರು. ಎರಡು ಎಕ್ಸಾಂಗೆ ಅವಕಾಶ ನೀಡಿ, ಗಣಿತ ಪರೀಕ್ಷೆಯಲ್ಲಿ ಮಾತ್ರ ಜನಿವಾರ ತೆಗೆದು ಒಳಗಡೆ ಬಾ ಎಂದಿದ್ದು ಅನ್ಯಾಯ ಎಂದು ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದ, ನಾನು ತೆಗೆಯೋದಕ್ಕೆ ಆಗಲ್ಲ ಅಂದಿದ್ದಕ್ಕೆ, ಹಾಗಾದ್ರೆ ನಾವು ಒಳಗೆ ಬಿಡಲ್ಲ ಎಂದಿದ್ದರು. ನೀನು ಒಳಗಡೆ ಹೋಗಿ ಸೂಸೈಡ್ ಮಾಡಿಕೊಂಡರೆ ಹೇಗೆ? ಎಂದು ವಾಪಸ್ ಕಳಿಸಿದ್ದರು.ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನಕ್ಕೆ ಟಿಟಿ ಡಿಕ್ಕಿ; ಹೈಮಾಸ್ಟ್ ದೀಪದ ಬೃಹತ್ ಕಂಬಕ್ಕೆ ಕಾರು ಡಿಕ್ಕಿ

  • ಧಾರವಾಡದಲ್ಲಿಯೂ ಜನಿವಾರ ಜಟಾಪಟಿ – ಹುರಕಡ್ಲಿ ಕಾಲೇಜಿನಲ್ಲಿ ಜನಿವಾರ ಕತ್ತರಿಸಿ ಸಿಇಟಿ ಬರೆಸಿದ ಸಿಬ್ಬಂದಿ

    ಧಾರವಾಡದಲ್ಲಿಯೂ ಜನಿವಾರ ಜಟಾಪಟಿ – ಹುರಕಡ್ಲಿ ಕಾಲೇಜಿನಲ್ಲಿ ಜನಿವಾರ ಕತ್ತರಿಸಿ ಸಿಇಟಿ ಬರೆಸಿದ ಸಿಬ್ಬಂದಿ

    ಧಾರವಾಡ: ಶಿವಮೊಗ್ಗ, ಬೀದರ್ ಬಳಿಕ ಇದೀಗ ಧಾರವಾಡದಲ್ಲಿಯೂ (Dharwad) ಜನಿವಾರ ಕತ್ತರಿಸಿ ಸಿಇಟಿ ಪರೀಕ್ಷೆಗೆ ಅವಕಾಶ ಕೊಟ್ಟಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ಜಿಲ್ಲೆಯ ಹುರಕಡ್ಲಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

    ಧಾರವಾಡ ನಗರದ ಜೆಎಸ್‌ಎಸ್ (JSS) ಕಾಲೇಜಿನ ವಿದ್ಯಾರ್ಥಿ ನಂದನ್ ಏರಿ ಸಿಇಟಿ ಪರೀಕ್ಷೆ (CET Exam) ಬರೆಯಲು ಹೋಗಿದ್ದ. ವಿದ್ಯಾರ್ಥಿಗಳ ತಪಾಸಣೆ ಮಾಡುವಾಗ ಪರೀಕ್ಷಾ ಕೇಂದ್ರದ ಸಿಬ್ಬಂದಿಯೊಬ್ಬರು ನಂದನ್ ಎಂಬ ಅಭ್ಯರ್ಥಿ ಹಾಕಿಕೊಂಡಿದ್ದ ಜನಿವಾರವನ್ನು ಗಮನಿಸಿದ್ದರು. ಆಗ ಜನಿವಾರ ಹಾಕಿಕೊಂಡು ಪರೀಕ್ಷಾ ಕೇಂದ್ರದೊಳಗೆ ಹೋಗುವಂತಿಲ್ಲ ಎಂದು ತಡೆದಿದ್ದರು. ಅದಕ್ಕೆ ವಿದ್ಯಾರ್ಥಿ ನಾನು ಬ್ಯಾಗಿನೊಳಗೆ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದ. ಆದರೆ ಅದಕ್ಕೂ ಅವಕಾಶ ನೀಡದೇ ಅದಕ್ಕೆ ಸಮಯವಿಲ್ಲ ಎಂದು ಜನಿವಾರವನ್ನು ಕತ್ತರಿಸಿದ್ದರು. ಅದನ್ನು ಹಾಗೇ ಬ್ಯಾಗ್‌ನಲ್ಲಿಟ್ಟುಕೊಂಡಿದ್ದ ನಂದನ್ ಗಾಬರಿಗೊಳಗಾಗಿದ್ದ. ಇದನ್ನೂ ಓದಿ: PUBLiC TV ವಿದ್ಯಾಪೀಠ | ವಿದ್ಯಾರ್ಥಿಗಳಿಗೆ ಸ್ಪಾಟ್‌ನಲ್ಲೇ ಸಿಗಲಿದೆ ಸರ್ಪ್ರೈಸ್‌ ಗಿಫ್ಟ್‌ – ತಪ್ಪದೇ ಬನ್ನಿ…

    ಮಾಧ್ಯಮಗಳಲ್ಲಿ ಕಳೆದೆರಡು ದಿನಗಳಿಂದ ಬರುತ್ತಿದ್ದ ಶಿವಮೊಗ್ಗ, ಬೀದರ್ ಜನಿವಾರದ ಸುದ್ದಿಗಳನ್ನು ಗಮನಿಸಿದ್ದ ಹುಡುಗ ತನಗಾಗಿದ್ದರ ಕುರಿತು ತನ್ನ ತಂದೆಗೆ ತಿಳಿಸಿದ್ದಾನೆ. ಇದನ್ನು ತಿಳಿದ ತಂದೆ ಆಕ್ರೋಶಗೊಂಡಿದ್ದು, ಇದೇ ಕಾರಣದಿಂದ ಮಗನಿಗೆ ಸರಿಯಾಗಿ ಪರೀಕ್ಷೆ ಬರೆಯಲು ಆಗಿಲ್ಲ ಎಂದು ಕಿಡಿಕಾರಿದ್ದಾರೆ.

    ಈ ಕುರಿತು ನಂದನ್ ತಂದೆ ವಿವೇಕ ಮಾತನಾಡಿ, ಪರೀಕ್ಷೆಗೆ ಹೋದಾಗ ಪೊಲೀಸರು ಆತನನ್ನು ಹಿಡಿದುಕೊಂಡು ಜನಿವಾರ ತೆಗೆದರೆ ಮಾತ್ರ ಒಳಗೆ ಬಿಡುತ್ತೇನೆ ಎಂದಿದ್ದಾರೆ. ಇದು ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅಪಮಾನ. ನಾವು ಜನಿವಾರ ತೆಗೆಯುವುದು ಸತ್ತಾಗ ಮಾತ್ರ, ಇನ್ಯಾವುದೇ ಸಮಯದಲ್ಲಿಯೂ ನಾವು ತೆಗೆಯಲ್ಲ. ಕೆಲವರು ರುದ್ರಾಕ್ಷಿ, ಕಾಶಿ ದಾರ ತೆಗೆದಿದ್ದಾರೆ. ಈ ರೀತಿ ನಮ್ಮ ಮೇಲೆ ನಡೆದಿದ್ದು ದೊಡ್ಡ ಘಟನೆ. ಮಾರನೇ ದಿನ ಆತ ನಮಗೆ ಹೇಳಿದ್ದಾನೆ. ನಾವು ನಮ್ಮ ಸಮಾಜದ ಜನರಿಗೆ ಹೇಳಿದ್ದೇನೆ. ಇದಕ್ಕೆ ನಾವು ಪ್ರತಿಭಟನೆ ಮಾಡುತ್ತೇವೆ. ಇದು ನನ್ನ ಮಗನ ಮೇಲೆ ಪರಿಣಾಮ ಬೀರಿದೆ. ಆತ ಪರೀಕ್ಷೆ ಕೂಡಾ ಸರಿಯಾಗಿ ಬರೆದಿಲ್ಲ, ಮಾನಸಿಕವಾಗಿ ಆತ ಕುಗ್ಗಿದ್ದಾನೆ. ಅಭ್ಯಾಸ ಬಿಟ್ಟು ಬೇರೆ ಕಡೆ ಆತನ ಮನಸ್ಸು ಡೈವರ್ಟ್ ಆಗದಿರಲಿ ಎಂದು ನಾವು ಇದನ್ನು ಹೊರಗೆ ಹಾಕಿಲ್ಲ. ಈಗ ಹೇಳುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.ಇದನ್ನೂ ಓದಿ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಡಿಕೆಶಿ ಭೇಟಿ – ಧರ್ಮಾಧಿಕಾರಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಸಿಎಂ

  • ಜನಿವಾರ ವಾರ್‌ – ಬೀದರ್‌ ಪ್ರಾಂಶುಪಾಲ, ಎಸ್‌ಡಿಎ ಕೆಲಸದಿಂದಲೇ ವಜಾ

    ಜನಿವಾರ ವಾರ್‌ – ಬೀದರ್‌ ಪ್ರಾಂಶುಪಾಲ, ಎಸ್‌ಡಿಎ ಕೆಲಸದಿಂದಲೇ ವಜಾ

    ಬೀದರ್‌ : ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಯಿ ಸ್ಪೂರ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮತ್ತು ಎಸ್‌ಡಿಎ ಸಿಬ್ಬಂದಿಯನ್ನು ಕೆಲಸದಿಂದಲೇ ವಜಾ ಮಾಡಲಾಗಿದೆ.

    ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಬೀದರ್‌ ಜಿಲ್ಲಾಧಿಕಾರಿ ಪ್ರಾಂಶುಪಾಲ ಚಂದ್ರಶೇಖರ್ ಬಿರಾದರ್‌ ಮತ್ತು ಎಸ್‌ಡಿಎ ಸತೀಶ ಪವಾರ್ ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದರು. ಡಿಸಿಯಿಂದ ಆದೇಶ ಬಂದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಇಬ್ಬರನ್ನು ಕೆಲಸದಿಂದ ವಜಾ ಮಾಡಿದೆ.

    ಖಾಸಗಿ ಕಾಲೇಜು ಆಗಿರುವ ಕಾರಣ ಶಾಲಾ ಆಡಳಿತ ಮಂಡಳಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಶಿಕ್ಷಣ ‌ಇಲಾಖೆ ಸೂಚಿಸಿತ್ತು. ಸಾಯಿ ಸ್ಪೂರ್ತಿ ಪದವಿ ಪೂರ್ವ ಕಾಲೇಜ್‌ ಇಬ್ಬರನ್ನು ತಕ್ಷಣದಿಂದಲೇ ವಜಾ ಮಾಡಿದೆ.

  • ಸಿದ್ದರಾಮಯ್ಯ ಅವಧಿಯಲ್ಲಿ ಬ್ರಾಹ್ಮಣರು ಸಾಫ್ಟ್‌ ಟಾರ್ಗೆಟ್‌: ಪ್ರತಾಪ್‌ ಸಿಂಹ

    ಸಿದ್ದರಾಮಯ್ಯ ಅವಧಿಯಲ್ಲಿ ಬ್ರಾಹ್ಮಣರು ಸಾಫ್ಟ್‌ ಟಾರ್ಗೆಟ್‌: ಪ್ರತಾಪ್‌ ಸಿಂಹ

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವಧಿಯಲ್ಲಿ ಬ್ರಾಹ್ಮಣರು (Brahmins) ಸಾಫ್ಟ್‌ ಟಾರ್ಗೆಟ್‌ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬ್ರಾಹ್ಮಣರ ಸಂಖ್ಯೆ ಬಹಳ ಕಡಿಮೆ ಇದೆ. ಅವರು ಪ್ರತಿರೋಧ ತೋರುವುದಿಲ್ಲ ಎಂಬ ಭಾವನೆ ಸಿದ್ದರಾಮಯ್ಯ ಅವರಿಗಿದೆ ಎಂದರು.

    ಉಡುಪಿಯ ಹಿಜಾಬ್ (Hijab) ವಿಚಾರ ಬಂದಾಗ ಸಿದ್ದರಾಮಯ್ಯ ಪ್ರಬಲವಾಗಿ ಪ್ರತಿಪಾದಿಸಿದರು. ಈಗ ಯಾಕೆ ಜನಿವಾರ (Janivara) ಪ್ರಕರಣದಲ್ಲಿ ಸಿದ್ದರಾಮಯ್ಯ ಸುಮ್ಮನಿದ್ದಾರೆ? ಜನಿವಾರದಲ್ಲಿ ಏನಾದ್ರೂ ಲೋಪ ಕಾಣುತ್ತಿದ್ಯಾ ಎಂದು ಪ್ರಶ್ನಿಸಿದರು.  ಇದನ್ನೂ ಓದಿ: ಪರಿಸರ ಚಟುವಟಿಕೆಯಲ್ಲಿ ತೊಡಗುತ್ತೇನೆ – ಬಿಜೆಪಿಗೆ ಮಾಜಿ ಶಾಸಕ ಎಟಿ ರಾಮಸ್ವಾಮಿ ರಾಜೀನಾಮೆ

     

    ಜಾತಿ ಜನಗಣತಿಯಲ್ಲೂ ಬ್ರಾಹ್ಮಣರ ಸಂಖ್ಯೆ ಕಡಿಮೆ ತೋರಿಸಲಾಗಿದೆ, ಅವರೇನೂ ಹೇಳಲ್ಲ ಅಂತನಾ? ಜನಿವಾರವೇ ಒಂದು ಸಮಸ್ಯೆ ಅಂತ ಅನ್ಕೊಂಡು ಜನಿವಾರವನ್ನೇ ತೆಗೆಸುವ ಕೆಲಸ ಆಗಿದೆ. ಇದು ಹಿಂದೂಗಳ ಮೇಲಿನ ಆಕ್ರಮಣ. ಹಿಂದೂ ಸಮಾಜ ಒಟ್ಟಾಗಿ ಜನಿವಾರ ಪ್ರಕರಣ ವಿರೋಧಿಸಬೇಕು ಎಂದು ಹೇಳಿದರು.  ಇದನ್ನೂ ಓದಿ: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ? – ಅನುರಾಗ್‌ ಕಶ್ಯಪ್‌ ವಿವಾದ

    ಒಕ್ಕಲಿಗರು, ಲಿಂಗಾಯತರಿಗೆ ತಮ್ಮ ಸಮುದಾಯ ಸಂಖ್ಯೆ ಕಡಿಮೆಯಾಗಿದೆ ಅಂತ ಸಿಟ್ಟಿದೆ. ದಲಿತ ನಾಯಕರು ತಮ್ಮ ಸಂಖ್ಯೆ ಒಂದು ಕೋಟಿ ಆಗಿದೆ ಅಂತ ಒಳಗೊಳಗೇ ಖುಷಿ ಆಗಿರಬಹುದು. ಆದರೆ ಈ ಹಿಂದೆಯೇ ಅಹಿಂದ ಪ್ರಾರಂಭಿಸಿ ಸಿದ್ದರಾಮಯ್ಯ ಹಿಂದೂಗಳನ್ನು ಒಡೆದಿದ್ದರು. ಈಗ ಅಧಿಕಾರದಲ್ಲಿ ಮುಂದುವರೆಯಲು ಸಮಸ್ತ ಹಿಂದೂ ಧರ್ಮ ಒಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

    ಇನ್ನಾದರೂ ಜಾತಿ ಜಾತಿ ಎನ್ನುವುದನ್ನು ಬಿಟ್ಟು ಹಿಂದೂಗಳು ಸಿದ್ದರಾಮಯ್ಯನವರ ಅವರ ಕುರ್ಚಿ ತಂತ್ರ ಅರ್ಥ ಮಾಡಿಕೊಳ್ಳಬೇಕು. ಇನ್ನೂ ನಾನು ಗೌಡ, ಲಿಂಗಾಯತ, ಒಬಿಸಿ, ಎಸ್ಸಿ, ಎಸ್ಟಿ, ಕುರುಬ ಅನ್ನುವ ಮನಸ್ಥಿತಿಯಿಂದ ಹೊರಗೆ ಬರಬೇಕು. ಜಾತಿ ಆಧಾರದಲ್ಲಿ ಅಪಸ್ವರ ಎತ್ತಲು ಹೋಗಬಾರದು. ಹಿಂದೂ ಸಮಾಜದ ಪ್ರತಿನಿಧಿಗಳ ರೀತಿ ಸಮಯದಾಯಗಳ ನಾಯಕರು ಮಾತಾಡಬೇಕು ಎಂದು ಅಭಿಪ್ರಾಯಪಟ್ಟರು.

  • ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ?: ಜನಿವಾರ ವಿವಾದಕ್ಕೆ ಸರ್ಕಾರದ ವಿರುದ್ಧ ಕೋಟ ಕಿಡಿ

    ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ?: ಜನಿವಾರ ವಿವಾದಕ್ಕೆ ಸರ್ಕಾರದ ವಿರುದ್ಧ ಕೋಟ ಕಿಡಿ

    ಉಡುಪಿ: ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ ಎಂದು ವಿದ್ಯಾರ್ಥಿ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಕಿಡಿಕಾರಿದರು.

    ಆಳುವ ಸರ್ಕಾರಕ್ಕೆ ಏನಾಗಿದೆಯೋ ಅರ್ಥವಾಗುತ್ತಿಲ್ಲ. ಸಿಇಟಿ ಪರೀಕ್ಷೆಯಲ್ಲಿ ಕಿವಿಯೋಲೆ ತೆಗೆಸಿದಾಗ ವಿವಾದ ಆಗಿತ್ತು. ಮಾಂಗಲ್ಯ ತೆಗೆಯಬೇಕು ಎಂಬ ಕಾರಣಕ್ಕೂ ಗಲಾಟೆ ಆಗಿತ್ತು. ಈಗ ಜನಿವಾರ (Janivara Row) ತೆಗೆಯಲು ಪ್ರಾರಂಭ ಮಾಡಿದ್ದಾರೆ. ಸರ್ಕಾರಕ್ಕೆ, ಮಂತ್ರಿಗಳಿಗೆ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿಲ್ವಾ? ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜನಿವಾರ ಕತ್ತರಿಸಿದ್ದು ಬಹಳ ದೊಡ್ಡ ತಪ್ಪು: ಪರಮೇಶ್ವರ್

    ಬ್ರಾಹ್ಮಣರು ಮಾತ್ರ ಯಜ್ಞೋಪವೀತ ಹಾಕುವುದಲ್ಲ. ಗೌಡ ಸರಸ್ವತರು, ವಿಶ್ವಕರ್ಮರು ಎಲ್ಲರೂ ಹಾಕುತ್ತಾರೆ. ಯಜ್ಞೋಪವೀತವನ್ನು ಪವಿತ್ರ ಎಂದು ಜನ ಭಾವಿಸುತ್ತಾರೆ. ಈ ರೀತಿ ಮಾಂಗಲ್ಯ ಕಿವಿಯೋಲೆ ಜನಿವಾರ ತೆಗೆಸುವುದು ಸರಿನಾ? ಜನಿವಾರದಲ್ಲಿ ನೇಣು ಹಾಕಿಕೊಳ್ಳುತ್ತೀರಾ ಅನ್ನೋದು ಸರಿಯಲ್ಲ ಎಂದು ಬೇಸರ ಹೊರಹಾಕಿದರು.

    ಮಂತ್ರಿಗಳೇ ನಿಮಗೆ ಗೊತ್ತಿಲ್ಲ ಅಂತೀರಿ. ತಪ್ಪು ಮಾಡಿದವರ ಮೇಲೆ ತಕ್ಷಣ ಕ್ರಮವಾಗಲಿ. ಒಂದು ಧರ್ಮದವರು ಏನು ಬೇಕಾದರೂ ಹಾಕಬಹುದಾ? ಮತ್ತೊಂದು ಧರ್ಮದವರು ಏನೂ ಹಾಕುವಂತಿಲ್ಲ ಅನ್ನೋದು ಸರಿಯಲ್ಲ. ಸಿಎಂ, ಗೃಹಮಂತ್ರಿಗಳು, ಶಿಕ್ಷಣ ಸಚಿವರು ಸಮಾಜದ ಮೇಲೆ ದಬ್ಬಾಳಿಕೆ ಮಾಡಬೇಡಿ ಎಂದು ಗರಂ ಆದರು. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಕೂರಿಸದ ಪ್ರಕರಣ – ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ FIR

  • ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡಿದ್ದು ಸರಿಯಲ್ಲ : ನಿಖಿಲ್ ಖಂಡನೆ

    ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡಿದ್ದು ಸರಿಯಲ್ಲ : ನಿಖಿಲ್ ಖಂಡನೆ

    ಬೆಂಗಳೂರು: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ (CET Exam) ಅವಕಾಶ ಕೊಡದ ಪ್ರಕರಣವನ್ನ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಖಂಡಿಸಿದ್ದಾರೆ.

    ಘಟನೆ ಬಗ್ಗೆ ಜೆಪಿ ಭವನದಲ್ಲಿ ಮಾತನಾಡಿದ ಅವರು, ಜನಿವಾರ ಹಾಕಿದ್ದಕ್ಕೆ ಪರೀಕ್ಷೆಗೆ ಕೂರಿಸದೇ ಇರುವುದು ಸರಿಯಲ್ಲ.ಈ ಘಟನೆಯನ್ನ ನಾನು ಖಂಡಿಸುತ್ತೇನೆ. ಜನಿವಾರ ಹಾಕಿಕೊಂಡು ಕಾಪಿ ಹೊಡೆಯೋಕೆ ಆಗುತ್ತಾ?ಜನಿವಾರದಲ್ಲಿ ಕಾಪಿ ಚೀಟಿ ಇಟ್ಟುಕೊಂಡು ಹೋಗೋಕೆ ಆಗುತ್ತಾ?ಜನಿವಾರ ಇದ್ದರೆ ಏನು ಸಮಸ್ಯೆ ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಜಾತಿಗಣತಿ ವರದಿ ಚರ್ಚೆಗೆ ಕೂಡಲೇ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆಯಬೇಕು: ನಿಖಿಲ್ ಕುಮಾರಸ್ವಾಮಿ

     

    ಸ್ಮಾರ್ಟ್ ವಾಚ್, ಎಲೆಕ್ಟ್ರಿಕ್ ವಸ್ತು ಅಂತಹದ್ದನ್ನ ಬೇಕಿದ್ರೆ ನೀವು ತೆಗೆಸಬೇಕು ಸರಿ. ಆದರೆ ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡೋದು ಸರಿಯಲ್ಲ. ಈ ಘಟನೆಗೆ ಕಾರಣವಾಗಿರೋರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ಬುದ್ದಿವಾದ ಹೇಳಬೇಕು. ಮುಂದೆ ಇಂತಹ ಘಟನೆ ಆಗದಂತೆ ಕ್ರಮವಹಿಸಬೇಕು ಅಂತ ಆಗ್ರಹ ಮಾಡಿದರು. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ಎಷ್ಟಿದೆ? – ವಿವಾದ ಹುಟ್ಟಿಕೊಂಡಿದ್ದು ಯಾವಾಗ?