Tag: ಜನಾರ್ದನ ಪೂಜಾರಿ

  • ರೈ ವಿರುದ್ಧ ಮಾತನಾಡಿದ್ರೆ ನಿನ್ನ ಕೊಲೆ ಮಾಡಿ ನಿನ್ ಹೆಂಡ್ತಿನಾ ರೇಪ್ ಮಾಡ್ತಿವಿ- ಹರಿಕೃಷ್ಣ ಬಂಟ್ವಾಳ್ ಗೆ ಬೆದರಿಕೆ

    ರೈ ವಿರುದ್ಧ ಮಾತನಾಡಿದ್ರೆ ನಿನ್ನ ಕೊಲೆ ಮಾಡಿ ನಿನ್ ಹೆಂಡ್ತಿನಾ ರೇಪ್ ಮಾಡ್ತಿವಿ- ಹರಿಕೃಷ್ಣ ಬಂಟ್ವಾಳ್ ಗೆ ಬೆದರಿಕೆ

    ಮಂಗಳೂರು: ಇಲ್ಲಿನ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್‍ಗೆ ಪತ್ರದ ಮೂಲಕ ಕೊಲೆ ಬೆದರಿಕೆಯೊಂದು ಬಂದಿದೆ.

    ಕಳೆದ ಒಂದು ವಾರದಿಂದ ಹತ್ತಾರು ಬೆದರಿಕೆ ಪತ್ರಗಳು ಬರುತ್ತಿದ್ದು, ಕೆಲವೊಂದರಲ್ಲಿ ನಿನ್ನನ್ನು ಕೊಂದು, ನಿನ್ನ ಪತ್ನಿಯನ್ನೂ ಅತ್ಯಾಚಾರ ಮಾಡುವುದಾಗಿಯೂ ಬೆದರಿಕೆ ಹಾಕಲಾಗಿದೆ. ಸಚಿವ ರಮಾನಾಥ ರೈ ವಿರುದ್ಧವಾಗಿ ಇನ್ಮುಂದೆ ಮಾತನಾಡಿದ್ರೆ ಪತ್ರದಲ್ಲಿರುವ ವಿಚಾರಗಳನ್ನು ನಿಜವಾಗಿಸುತ್ತೇವೆ ಎಂದು ಬರೆಯಲಾಗಿದೆ.

    ಕಾಂಗ್ರೆಸ್‍ನ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರನ್ನು ರಮಾನಾಥ ರೈ ಹೀನಾಯವಾಗಿ ನಡೆಸಿಕೊಳ್ತಿದ್ದಾರೆ ಅಂತ ಹರಿಕೃಷ್ಣ ಬಂಟ್ವಾಳ್ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇತ್ತೀಚೆಗೆ ಜನಾರ್ದನ ಪೂಜಾರಿಗೆ ರಮಾನಾಥ ರೈ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದನ್ನೂ ಹರಿಕೃಷ್ಣ ಬಂಟ್ವಾಳ್ ಬಯಲು ಮಾಡಿದ್ದರು. ಹೀಗಾಗಿ ಇದೆಲ್ಲವೂ ರಮಾನಾಥ ರೈ ಅವರ ಆಪ್ತರೇ ಮಾಡಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹೀಗಾಗಿ ಪೊಲೀಸರಿಗೆ ದೂರು ನೀಡಿದರೆ ಪ್ರಯೋಜನವಿಲ್ಲ ಎಂದು ಸುಮ್ಮನಿರಲು ನಿರ್ಧರಿಸಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

  • ಮಂಗ್ಳೂರಲ್ಲಿ ಆಣೆ ಪ್ರಮಾಣ ರಾಜಕೀಯ- ಸಚಿವರ ಸವಾಲು ಸ್ವೀಕರಿಸಿದ ಜನಾರ್ದನ ಪೂಜಾರಿ ಆಪ್ತರು

    ಮಂಗ್ಳೂರಲ್ಲಿ ಆಣೆ ಪ್ರಮಾಣ ರಾಜಕೀಯ- ಸಚಿವರ ಸವಾಲು ಸ್ವೀಕರಿಸಿದ ಜನಾರ್ದನ ಪೂಜಾರಿ ಆಪ್ತರು

    ಮಂಗಳೂರು: ಒಂದು ಕಾಲದಲ್ಲಿ ರಮಾನಾಥ ರೈ ಪಾಲಿಗೆ ರಾಜಕೀಯ ಗುರುವಾಗಿದ್ದ ಜನಾರ್ದನ ಪೂಜಾರಿಯವರನ್ನೇ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದರೆಂಬ ಆರೋಪ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.  ಇದನ್ನೂ ಓದಿ: ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಣ್ಣೀರಿಟ್ಟ ಸಚಿವ ರಮಾನಾಥ ರೈ!

    ಸಾರ್ವಜನಿಕ ವೇದಿಕೆಯಲ್ಲಿ ಪೂಜಾರಿಯವರು ಕಣ್ಣೀರು ಹಾಕಿದ್ದು, ಬಿಲ್ಲವರನ್ನು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ರೈ ವಿರುದ್ಧ ಟೀಕೆ ಎದ್ದುಬಂದಿತ್ತು. ಆದರೆ ಮತ್ತೆ ಪೂಜಾರಿಯವರ ಕಣ್ಣೀರಿಗೆ ಪ್ರತಿಯಾಗಿ ರಮಾನಾಥ ರೈ ಕೂಡ ಕಣ್ಣೀರು ಹಾಕಿದ್ದಲ್ಲದೆ, ಆಣೆ ಪ್ರಮಾಣಕ್ಕೆ ಕರೆದಿದ್ದು ಪೂಜಾರಿ ಆಪ್ತರನ್ನು ಕೆರಳಿಸಿತ್ತು.  ಇದನ್ನೂ ಓದಿ: ಬಹಿರಂಗ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು

    ಇದೀಗ ಸವಾಲನ್ನು ಸ್ವೀಕರಿಸಿರುವ ಪೂಜಾರಿ ಆಪ್ತರಾದ ಹರಿಕೃಷ್ಣ ಬಂಟ್ವಾಳ್ ಮತ್ತು ಅರುಣ್ ಕುವೆಲ್ಲೋ ಆಣೆ ಪ್ರಮಾಣಕ್ಕೆ ಸಿದ್ಧರಾಗಿದ್ದಾರೆ. ಅಲ್ಲದೆ ಧರ್ಮಸ್ಥಳಕ್ಕೆ ಜನಾರ್ದನ ಪೂಜಾರಿ ಯಾಕೆ ಬರಬೇಕು. ನಾವೇ ಬರ್ತೀವಿ. ಯಾಕಂದ್ರೆ ರಮಾನಾಥ ರೈ ಪೂಜಾರಿಯವರನ್ನು ನಿಂದಿಸಿದಾಗ ಅರುಣ್ ಕುವೆಲ್ಲೋ ಸಾಕ್ಷಿಯಾಗಿದ್ರು ಅಂತಾ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಕಣ್ಣೀರು!

    https://www.youtube.com/watch?v=d0ABn6LEi-w

    https://www.youtube.com/watch?v=3tD5oKIc3EY

     

  • ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಣ್ಣೀರಿಟ್ಟ ಸಚಿವ ರಮಾನಾಥ ರೈ!

    ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಣ್ಣೀರಿಟ್ಟ ಸಚಿವ ರಮಾನಾಥ ರೈ!

    ಮಂಗಳೂರು: ತನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದರೆಂದು ಕಣ್ಣೀರು ಹಾಕಿದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಸಚಿವ ರಮಾನಾಥ ರೈ ಕಣ್ಣೀರಲ್ಲೇ ಉತ್ತರ ಕೊಟ್ಟಿದ್ದಾರೆ.

    ಸ್ವಕ್ಷೇತ್ರ ಬಂಟ್ವಾಳದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಸಚಿವ ರೈ, ತನ್ನ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ನಾನೇನು ಮದುವೆ ಕಾರ್ಯಕ್ರಮದಲ್ಲಿ ಪೂಜಾರಿಯವರ ಬಗ್ಗೆ ಕೆಟ್ಟ ಮಾತು ಆಡಿಲ್ಲ. ಆ ಬಗ್ಗೆ ಯಾವುದೇ ಸಾಕ್ಷ್ಯವೂ ಇಲ್ಲ. ಹೀಗಿದ್ದರೂ ವಿರೋಧ ಪಕ್ಷದವರು, ಪಕ್ಷ ಬಿಟ್ಟು ಹೋದವರು ಅಪಪ್ರಚಾರ ಮಾಡುತ್ತಿದ್ದಾರೆ. ಸ್ವತಃ ಜನಾರ್ದನ ಪೂಜಾರಿಯವರು, ಅವರ ಕುಟುಂಬಸ್ಥರು ಕರೆದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲು ರೆಡಿಯಿದ್ದೇನೆ ಅಂತಾ ಹೇಳುತ್ತಾ ಗದ್ಗದಿತರಾದ್ರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಕಣ್ಣೀರು!

    ತನ್ನ ಹೇಳಿಕೆಯ ಮೂಲಕ ಪಕ್ಷ ತ್ಯಜಿಸಿ, ಬಿಜೆಪಿ ಸೇರ್ಪಡೆಯಾಗಿರುವ ಪೂಜಾರಿ ಆಪ್ತ ಹರಿಕೃಷ್ಣ ಬಂಟ್ವಾಳ್ ಗೆ ಈ ಮೂಲಕ ರೈ ಟಾಂಗ್ ಕೊಟ್ಟಿದ್ದಾರೆ.

    ಇತ್ತೀಚೆಗಷ್ಟೇ ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ವೇಳೆ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ತನ್ನ ತಾಯಿಯ ಹೆಸರು ಹೇಳಿ ಗದ್ಗದಿತರಾಗಿದ್ದರು. ಅರಣ್ಯ ಸಚಿವ ರಮಾನಾಥ ರೈ ಅವರು ಆಡಿದ ಅಶ್ಲೀಲ ಮಾತುಗಳನ್ನು ನೆನೆದು ಭಾಷಣದ ಆರಂಭದಲ್ಲೇ ಗಳಗಳನೇ ಅತ್ತಿದ್ದು, ತನ್ನ ವಿರುದ್ಧ ಅವಾಚ್ಯ ಶಬ್ಧ ಬಳಸಿ ನಿಂದಿಸಿದರೆಂಬ ವಿಚಾರವನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿಕೊಂಡು ಅತ್ತುಬಿಟ್ಟಿದ್ದರು. ಇದನ್ನೂ ಓದಿ: ಬಹಿರಂಗ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು

    ಇದು ಸತ್ಯ ನ್ಯಾಯಕ್ಕಾಗಿ ಹೋರಾಡಿದ ಕೋಟಿ ಚೆನ್ನಯರ ಗರೋಡಿ. ನನ್ನ ತಾಯಿ ಚೆನ್ನಮ್ಮ. ತಾಯಿಯ ತಾಯಿ ನನ್ನ ಅಜ್ಜಿ ದೇಯಿ ಬೈದೆತಿ. ಅದೇ ರೀತಿ ಕೋಟಿ ಚೆನ್ನಯರ ತಾಯಿಯೂ ದೇಯಿ ಬೈದೆತಿ. ಹಾಗಾದ್ರೆ ರಮಾನಾಥ ರೈ ಹೇಳಿದಂತೆ ನನ್ನ ತಾಯಿ ಸೂಳೆ, ನಾನು ಸೂಳೆಯ ಮಗ ಎಂಬ ಪ್ರಶ್ನೆ ಮುಂದಿಟ್ಟು ಗದ್ಗದಿತರಾಗಿ ಕಣ್ಣೀರು ಹಾಕಿದ್ದರು.

  • ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಕಣ್ಣೀರು!

    ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಕಣ್ಣೀರು!

    ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತೀರಾ ಗದ್ಗದಿತರಾಗಿ ಕಣ್ಣೀರಿಟ್ಟಿದ್ದಾರೆ.

    ಅರಣ್ಯ ಸಚಿವ ರಮಾನಾಥ ರೈ ಆಡಿದ ಅಶ್ಲೀಲ ಮಾತುಗಳನ್ನು ನೆನೆದು ಭಾಷಣದ ಆರಂಭದಲ್ಲೇ ಗಳಗಳನೇ ಅತ್ತಿದ್ದು, ತನ್ನ ವಿರುದ್ಧ ಅವಾಚ್ಯ ಶಬ್ಧ ಬಳಸಿ ನಿಂದಿಸಿದರೆಂಬ ವಿಚಾರವನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿಕೊಂಡು ಅತ್ತುಬಿಟ್ಟಿದ್ದಾರೆ.

    ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪೂಜಾರಿಯವರು ತನ್ನ ತಾಯಿ ಹೆಸರು ಹೇಳಿಕೊಂಡು ಗದ್ಗದಿತರಾಗಿದ್ದು, ಇದು ಸತ್ಯ ನ್ಯಾಯಕ್ಕಾಗಿ ಹೋರಾಡಿದ ಕೋಟಿ ಚೆನ್ನಯರ ಗರೋಡಿ. ನನ್ನ ತಾಯಿ ಚೆನ್ನಮ್ಮ. ತಾಯಿಯ ತಾಯಿ ನನ್ನ ಅಜ್ಜಿ ದೇಯಿ ಬೈದೆತಿ. ಅದೇ ರೀತಿ ಕೋಟಿ ಚೆನ್ನಯರ ತಾಯಿಯೂ ದೇಯಿ ಬೈದೆತಿ. ಹಾಗಾದ್ರೆ ರಮಾನಾಥ ರೈ ಹೇಳಿದಂತೆ ನನ್ನ ತಾಯಿ ಸೂಳೆ, ನಾನು ಸೂಳೆಯ ಮಗ ಎಂಬ ಪ್ರಶ್ನೆ ಮುಂದಿಟ್ಟು ಗದ್ಗದಿತರಾಗಿ ಕಣ್ಣೀರಿಟ್ಟಿದ್ದಾರೆ.

    ಮಂಗಳೂರಲ್ಲಿ ನಡೆದ ಕೋಟಿ-ಚೆನ್ನಯ್ಯ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಸಾವಿರಾರು ಜನ ಸೇರಿದ್ದ ಸಭೆಯಲ್ಲಿ 80 ವರ್ಷದ ಹಿರಿಯರಾದ ಜನಾರ್ದನ ಪೂಜಾರಿಯವರು ಅತ್ತು ಕರೆದಾಗ, ವೇದಿಕೆ ಮೇಲಿದ್ದ ಮಂಗಳೂರು ಪಾಲಿಕೆ ಮೇಯರ್ ಕವಿತಾ ಸನಿಲ್ ಕೂಡಾ ಕಣ್ಣೀರು ಹಾಕಿದ್ದಾರೆ. ವೇದಿಕೆಯಲ್ಲಿ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

    ಬಂಟ್ವಾಳದಲ್ಲಿ ನಡೆದ ಬಿಲ್ಲವ ಸಂಘದ ಕಾರ್ಯಕ್ರಮದಲ್ಲಿ ಜನಾರ್ದನ ಪೂಜಾರಿ ಮತ್ತು ಅವರ ಆಪ್ತ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಪಾಲ್ಗೊಂಡಿದ್ದರು. ಹರಿಕೃಷ್ಣ ಬಂಟ್ವಾಳ್ ವೇದಿಕೆಯಲ್ಲಿ ಮಾತನಾಡುತ್ತಾ, ಸಚಿವ ರಮಾನಾಥ ರೈ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಹಿರಿಯರಾದ ಜನಾರ್ದನ ಪೂಜಾರಿಗೆ ಅವಮಾನಿಸಿದ್ದು, ಇಡೀ ಬಿಲ್ಲವ ಸಮುದಾಯಕ್ಕೆ ಮಾಡಿದ ಅವಮಾನ. ಪೂಜಾರಿಯವರೆಂದ್ರೆ ತನಗೆ ತಂದೆ ಸಮಾನ. ರಮಾನಾಥ ರೈ ತಮ್ಮನ್ನು ತೀರಾ ಅವಾಚ್ಯವಾಗಿ ನಿಂದಿಸಿದ್ದು ಎಷ್ಟು ಬೇಸರವಾಗಿತ್ತು ಅಂದ್ರೆ ಅವರಿಗಷ್ಟೆ ಗೊತ್ತು ಅನ್ನುವಾಗ ಪೂಜಾರಿಯವರು ದುಃಖ ತಾಳಲಾರದೆ ವೇದಿಕೆಯಲ್ಲೇ ಅತ್ತು ಬಿಟ್ಟಿದ್ದರು.

    ಕಂಕನಾಡಿಯ ಪ್ರಸಿದ್ಧ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರದಂದು ಹಸಿರು ಹೊರೆಕಾಣಿಕೆಯ ಉದ್ಘಾಟನೆಯ ಕಾರ್ಯಕ್ರಮ ನಡೆದಿತ್ತು. ಜನಾರ್ದನ ಪೂಜಾರಿ, ಶಾಸಕ ಜೆರ್ ಲೋಬೋ ಸೇರಿದಂತೆ ಚಿತ್ರನಟ ರಾಜಶೇಖರ್ ಕೋಟ್ಯಾನ್ ಕೂಡಾ ಭಾಗವಹಿಸಿದ್ದರು. ಜನಾರ್ದನ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ರಾಜಶೇಖರ್ ಕೋಟ್ಯಾನ್ ದೀಪ ಬೆಳಗಲು ಮುಂದಾಗಿದ್ದು, ಈ ಸಂಧರ್ಭದಲ್ಲಿ ಜನಾರ್ದನ ಪೂಜಾರಿ ಕೋಟ್ಯಾರ್ ರನ್ನು ತಡೆದಿದ್ದರು. ನನ್ನನ್ನು ಅವ್ಯಾಚವಾಗಿ ನಿಂದಿಸಿದವರ ಪರವಾಗಿ ನೀವು ಇದ್ದೀರಿ. ನೀವು ತಪ್ಪು ಮಾಡಿದ್ದೀರಿ. ನನ್ನ ತಾಯಿಯನ್ನೇ ಅವಮಾನಿಸಿದ ಜನರ ಹಿಂದೆ ಹೋಗಿದ್ದೀರಿ. ಇದನ್ನು ಕ್ಷಮಿಸಲು ಸಾಧ್ಯ ಇಲ್ಲ. ದೇವರಲ್ಲಿ ತಪ್ಪಾಯ್ತು ಎಂದು ಕ್ಷಮೆ ಕೇಳಿದ ಬಳಿಕ ಈ ಕ್ಷೇತ್ರಕ್ಕೆ ಬನ್ನಿ ಎಂದು ಕ್ಲಾಸ್ ತೆಗೆದುಕೊಂಡಿದ್ದರು. ಪೂಜಾರಿಯವರ ಈ ಮಾತನ್ನು ಕೇಳಿ ನೆರೆದಿದ್ದವರೆಲ್ಲಾ ವಿಚಲಿತರಾಗಿದ್ದರು. ಇದನ್ನು ಓದಿ: ನಾನು ಆರು ಬಾರಿ ಶಾಸಕನಾಗಲು ಮುಸ್ಲಿಂ ಸಮುದಾಯದ ಜಾತ್ಯತೀತ ನಿಲುವೇ ಕಾರಣ : ರಮಾನಾಥ ರೈ

    https://www.youtube.com/watch?v=3tD5oKIc3EY

    https://www.youtube.com/watch?v=PJ8h1JAxwDk

  • ಬಹಿರಂಗ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು

    ಬಹಿರಂಗ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು

    ಮಂಗಳೂರು: ಸಚಿವ ರಮಾನಾಥ ರೈ ತನ್ನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ವಿಚಾರದ ಬಗ್ಗೆ ತಿಳಿದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತೀರಾ ಗದ್ಗದಿತರಾಗಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.

    ಬಂಟ್ವಾಳದಲ್ಲಿ ನಡೆದ ಬಿಲ್ಲವ ಸಂಘದ ಕಾರ್ಯಕ್ರಮದಲ್ಲಿ ಜನಾರ್ದನ ಪೂಜಾರಿ ಮತ್ತು ಅವರ ಆಪ್ತ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಪಾಲ್ಗೊಂಡಿದ್ದರು. ಹರಿಕೃಷ್ಣ ಬಂಟ್ವಾಳ್ ವೇದಿಕೆಯಲ್ಲಿ ಮಾತನಾಡುತ್ತಾ, ಸಚಿವ ರಮಾನಾಥ ರೈ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ಹಿರಿಯರಾದ ಜನಾರ್ದನ ಪೂಜಾರಿಗೆ ಅವಮಾನಿಸಿದ್ದು ಇಡೀ ಬಿಲ್ಲವ ಸಮುದಾಯಕ್ಕೆ ಮಾಡಿದ ಅವಮಾನ. ಪೂಜಾರಿಯವರೆಂದ್ರೆ ತನಗೆ ತಂದೆ ಸಮಾನ. ರಮಾನಾಥ ರೈ ತಮ್ಮನ್ನು ತೀರಾ ಅವಾಚ್ಯವಾಗಿ ನಿಂದಿಸಿದ್ದು ಎಷ್ಟು ಬೇಸರವಾಗಿತ್ತು ಅಂದ್ರೆ ಅವರಿಗಷ್ಟೆ ಗೊತ್ತು ಅನ್ನುವಾಗ ಪೂಜಾರಿಯವರು ದುಃಖ ತಾಳಲಾರದೆ ವೇದಿಕೆಯಲ್ಲೇ ಅತ್ತು ಬಿಟ್ಟರು.

     

    ಈ ವಿದ್ಯಮಾನ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಚಿವ ರಮಾನಾಥ ರೈ ವಿರುದ್ಧ ಆಕ್ರೋಶದ ಮಾತು ಕೇಳಿಬಂದಿದೆ. ನಾಲ್ಕು ತಿಂಗಳ ಹಿಂದೆ ಸಚಿವ ರಮಾನಾಥ ರೈ ಮದುವೆ ಕಾರ್ಯಕ್ರಮವೊಂದರಲ್ಲಿ ಪರೋಕ್ಷವಾಗಿ ನಿಂದಿಸಿ ಮಾತನಾಡಿದ್ದು ಕಾಂಗ್ರೆಸಿಗರಲ್ಲೇ ಅಸಮಾಧಾನ ಸೃಷ್ಟಿಸಿತ್ತು.

    ಕಂಕನಾಡಿಯ ಪ್ರಸಿದ್ಧ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರದಂದು ಹಸಿರು ಹೊರೆಕಾಣಿಕೆಯ ಉದ್ಘಾಟನೆಯ ಕಾರ್ಯಕ್ರಮ ನಡೆದಿದ್ದು, ಜನಾರ್ದನ ಪೂಜಾರಿ, ಶಾಸಕ ಜೆರ್ ಲೋಬೋ ಸೇರಿದಂತೆ ಚಿತ್ರನಟ ರಾಜಶೇಖರ್ ಕೋಟ್ಯಾನ್ ಕೂಡಾ ಭಾಗವಹಿಸಿದ್ದರು. ಜನಾರ್ದನ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ರಾಜಶೇಖರ್ ಕೋಟ್ಯಾನ್ ದೀಪ ಬೆಳಗಲು ಮುಂದಾಗಿದ್ದು, ಈ ಸಂಧರ್ಭದಲ್ಲಿ ಜನಾರ್ದನ ಪೂಜಾರಿ ಕೋಟ್ಯಾರ್ ರನ್ನು ತಡೆದರು.

    ನನ್ನನ್ನು ಅವ್ಯಾಚವಾಗಿ ನಿಂದಿಸಿದವರ ಪರವಾಗಿ ನೀವು ಇದ್ದೀರಿ. ನೀವು ತಪ್ಪು ಮಾಡಿದ್ದೀರಿ. ನನ್ನ ತಾಯಿಯನ್ನೇ ಅವಮಾನಿಸಿದ ಜನರ ಹಿಂದೆ ಹೋಗಿದ್ದೀರಿ. ಇದನ್ನು ಕ್ಷಮಿಸಲು ಸಾಧ್ಯ ಇಲ್ಲ. ದೇವರಲ್ಲಿ ತಪ್ಪಾಯ್ತು ಎಂದು ಕ್ಷಮೆ ಕೇಳಿದ ಬಳಿಕ ಈ ಕ್ಷೇತ್ರಕ್ಕೆ ಬನ್ನಿ ಎಂದು ಕ್ಲಾಸ್ ತೆಗೆದುಕೊಂಡರು. ಪೂಜಾರಿಯವರ ಈ ಮಾತನ್ನು ಕೇಳಿ ನೆರೆದಿದ್ದವರೆಲ್ಲಾ ವಿಚಲಿತರಾದ್ರು.

  • ಸಿಎಂ ಸಿದ್ದರಾಮಯ್ಯರಿಗೆ ಶನಿ ಹಿಡಿದಿದೆ: ಸರ್ಕಾರದ ವಿರುದ್ಧ ಪೂಜಾರಿ ಕಿಡಿ

    ಸಿಎಂ ಸಿದ್ದರಾಮಯ್ಯರಿಗೆ ಶನಿ ಹಿಡಿದಿದೆ: ಸರ್ಕಾರದ ವಿರುದ್ಧ ಪೂಜಾರಿ ಕಿಡಿ

    ಮಂಗಳೂರು: ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಪೂರ್ವ ನಿಯೋಜಿತ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರಿಗೆ ಶನಿ ಹಿಡಿದಿದೆ. ಕಲಬುರ್ಗಿಯವರ ಹತ್ಯೆ ನಡೆದು ಇನ್ನೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಈ ನಡುವೆಯೇ ಗೌರಿ ಲಂಕೇಶ್ ಹತ್ಯೆ ನಡೆದಿದೆ ಅಂದ್ರು.

    ಒಂದಾದ ಮೇಲೊಂದರಂತೆ ಹತ್ಯೆಗಳು ನಡೆಯುತ್ತಿರೋ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ಏನು ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಶ್ನಿಸಿ ಅವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರಕರಣದ ಕುರಿತು ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಕೆಲಸ ಆಗಬೇಕು. ಆಗ ಮಾತ್ರ ಕೊಲೆಯಾದ ಗೌರಿಯವರ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದು ಅವರು ಹೇಳಿದರು.

  • ಸಿಎಂ ತರಾಟೆಗೆ ತೆಗೆದುಕೊಂಡ ಜನಾರ್ದನ ಪೂಜಾರಿ- ನಟ ಉಪೇಂದ್ರ ಬಗ್ಗೆ ಹೀಗಂದ್ರು

    ಸಿಎಂ ತರಾಟೆಗೆ ತೆಗೆದುಕೊಂಡ ಜನಾರ್ದನ ಪೂಜಾರಿ- ನಟ ಉಪೇಂದ್ರ ಬಗ್ಗೆ ಹೀಗಂದ್ರು

    ಮಂಗಳೂರು: ನಟ ಉಪೇಂದ್ರ ಅವರಲ್ಲಿ ವಿಭಿನ್ನ ಆಲೋಚನೆಗಳಿವೆ. ಅವರ ಪ್ರಶ್ನೆಗಳಿಗೆ ನಾನೂ ಸೇರಿದಂತೆ ರಾಜ್ಯದ ಜನ ತಲೆಬಾಗಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಪೇಂದ್ರರವರ ಹೊಸ ಪಕ್ಷಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಉಪೇಂದ್ರ ಅವರ ಆಲೋಚನೆಗಳು ಚೆನ್ನಾಗಿದೆ. ರಾಜಕೀಯದಲ್ಲಿ ಹೊಸತನ ಬೇಕು. ಇಲ್ಲದಿದ್ದಲ್ಲಿ ರಜಕಾರಣಿಗಳಿಗೆ ಯಾರ ಭಯವೂ ಇರೋದಿಲ್ಲ ಎಂದರು.

    ಇದೇ ಸಂದರ್ಭ ಸಿಎಂ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡ ಪೂಜಾರಿ, ಬರಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಅವರಿಗೆ ಭೇಟಿ ನೀಡಲು ಪುರುಸೋತ್ತಿಲ್ಲ. ರಾತ್ರಿ ಪೂರ್ತಿ ಅವರು ಏನು ಮಾಡುತ್ತಿದ್ದಾರೆ. ಇಸ್ಟೀಟ್ ಆಡುತ್ತಿದ್ದಾರೆಯೇ ಅಥವಾ ಬೇರ್ಯಾವುದಾದರೂ ಕೆಲಸ ಇದೆಯಾ ಎಂದು ಪ್ರಶ್ನಿಸಿದರು.

    ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದಿರೋದು ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಇಳಿಸಲು. ಅಮಿತ್ ಶಾ ಹೋದ ಎಲ್ಲಾ 16 ರಾಜ್ಯಗಳಲ್ಲೂ ಸಿಎಂಗಳನ್ನು ಕುರ್ಚಿಯಿಂದ ಕೆಳಗಿಳಿಸಿದ್ದಾರೆ. ಮುಂದೆ ನಿಮ್ಮ ಸರದಿ. ಸಚಿವ ಡಿ.ಕೆ. ಶಿವಕುಮಾರ್ ಮೇಲೆ ಒಳ್ಳೆಯ ಅಭಿಪ್ರಾಯಗಳು ಹೆಚ್ಚಾಗುತ್ತಿದ್ದು ಅವರೇ ಮುಂದಿನ ಮುಖ್ಯಮಂತ್ರಿಯಾಗೋದರಲ್ಲಿ ಸಂದೇಹವಿಲ್ಲ ಎಂದರು.

  • ಸಿಎಂನಿಂದಾಗಿ ಕಾಂಗ್ರೆಸ್‍ಗೆ ಉಪಚುನಾವಣೆಯಲ್ಲಿ ಸೋಲು: ಪೂಜಾರಿ ಭವಿಷ್ಯ

    ಸಿಎಂನಿಂದಾಗಿ ಕಾಂಗ್ರೆಸ್‍ಗೆ ಉಪಚುನಾವಣೆಯಲ್ಲಿ ಸೋಲು: ಪೂಜಾರಿ ಭವಿಷ್ಯ

    ಮಂಗಳೂರು: ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಸೋಲನುಭವಿಸಲಿದೆ ಎಂದು ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರಿಂದ ಕಾಂಗ್ರೆಸ್‍ಗೆ ಉಪಚುನಾವಣೆಯಲ್ಲಿ ಸೋಲಾಗಲಿದೆ. ಸಿಎಂ ಸರಿಯಾಗುವುದಿಲ್ಲ. ಮೊದಲು ಅವರು ಸರಿಯಾದ್ರೆ ಎರಡೂ ಕಡೆಯಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ ಎಂದರು.

    ಶ್ರೀನಿವಾಸ ಪ್ರಸಾದ್ ಅವರು ಒಬ್ಬ ಒಳ್ಳೆಯ ವ್ಯಕ್ತಿತ್ವದ ಮನುಷ್ಯ. ಒಟ್ಟಿನಲ್ಲಿ ನಮ್ಮ ಪಕ್ಷ ಸರಿ ಇದೆ. ಆದ್ರೆ ಈ ಮನುಷ್ಯ ಸರಿ ಇಲ್ಲ. ಹೀಗಾಗಿ ಅವರನ್ನು ಬದಲಾಯಿಸಿದರೆ ಮಾತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದು. ಈ ಕಾರಣಕ್ಕಾಗಿಯೇ ನಾನು ಸಿಎಂ ಅವರನ್ನು ಬದಲಾವಣೆ ಮಾಡಿ ಪರಮೇಶ್ವರ್ ಅವರನ್ನು ನೇಮಕ ಮಾಡಿ ಎಂದು ಹೇಳಿಕೊಂಡು ಬಂದಿದ್ದೇನೆ. ಹೈಕಮಾಂಡ್‍ಗೆ ಬೇಕಿದ್ರೆ ನಾನೇ ಹೇಳ್ತೇನೆ. ನಾಳೆಯೇ ಪರಮೇಶ್ವರ್ ಅವರನ್ನು ಸಿಎಂ ಆಗಿ ನೇಮಕ ಮಾಡಿದರೆ ಎಲ್ಲವೂ ಸರಿಯಾಗತ್ತೆ. ಎರಡು, ಮೂರು ವರ್ಷ ಸಿದ್ದರಾಮಯ್ಯ ಆಡಳಿತ ನಡೆಸಿದ್ದು ಸಾಕು ಅಂತಾ ಸಿಎಂ ಮೇಲಿನ ಅಸಮಾಧಾನವನ್ನು ಪೂಜಾರಿ ಮತ್ತೊಮ್ಮೆ ಹೊರಹಾಕಿದ್ರು.

    ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಹಿರಿಯರು, ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಅಸಮಾಧಾನ ಆಗಿದ್ದರೆ ಸಿಎಂ ಸಿದ್ದರಾಮಯ್ಯನವರು ಅವರ ಬಳಿ ಹೋಗಿ ಮಾತನಾಡಬಹುದಿತ್ತು. ಅಸಮಾಧಾನ ಬಗೆಹರಿಸಿ, ಬೇರೆ ಪಕ್ಷಕ್ಕೆ ಹೋಗದಂತೆ ತಡೆಯಬಹುದಿತ್ತು. ಆದರೆ ಸಿದ್ದರಾಮಯ್ಯ ಈ ಕೆಲಸ ಮಾಡಲಿಲ್ಲ. ಕೃಷ್ಣ ಬಿಜೆಪಿ ಸೇರುವುದಿದ್ದರೆ ಅದಕ್ಕೆ ಸಿಎಂ ಮೂಲ ಕಾರಣ ಎಂದು ವಾಗ್ದಾಳಿ ನಡೆಸಿದರು.