Tag: ಜನಾರ್ದನ್ ಚಿಕ್ಕಣ್ಣ

  • ‘ಪೌಡರ್’ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಕ್ತಾಯ

    ‘ಪೌಡರ್’ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಕ್ತಾಯ

    ದಿಗಂತ್ (Digant) ಮತ್ತು ಧನ್ಯಾ ರಾಮ್ (Dhanya Ram Kumar) ಕಾಂಬಿನೇಷನ್ ನ ಪೌಡರ್ (Powder) ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಬಹು ತಾರಾಗಣವನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಕೆ ಆರ್ ಜಿ ಸ್ಟುಡಿಯೋಸ್, ಟಿವಿಎಫ್ ಮೋಷನ್ ಪಿಕ್ಚರ್ಸ್ ಸಂಸ್ಥೆಯ ಜೊತೆಗೆ ಕೈಜೋಡಿಸಿ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡಿದೆ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಈ ಎರಡೂ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರದ ಮುಹೂರ್ತ ನಡೆದಿತ್ತು.

    ಪೌಡರ್ ಒಂದು ಹಾಸ್ಯಮಯ ಚಿತ್ರವಾಗಿದ್ದು, ಒಂದು ಸಣ್ಣ ಊರಿನ ಯುವಕರಿಗೆ ದೊಡ್ಡ ಪ್ರಮಾಣದ ಕೊಕೇನ್ ಸಿಗುತ್ತದೆ. ಒಂದು ಕಡೆ ಆ ಕೊಕೇನ್ ಗಾಗಿ ಹುಡುಕಾಟದಲ್ಲಿರುವ ದುಷ್ಟರ ಗುಂಪು. ಇನ್ನೊಂದು ಕಡೆ ಆ ಕೊಕೇನ್ ಮಾರಿ ದಿಢೀರ್ ಶ್ರೀಮಂತರಾಗಬೇಕೆಂಬ ಯುವಕರ ಗುಂಪು. ಮತ್ತೊಂದು ಕಡೆ ತಮ್ಮ ಅಧಿಪತ್ಯ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿರುವ ಒಬ್ಬ ಮಾಸ್ಟರ್ ಮೈಂಡ್. ಈ ಹಾವು-ಏಣಿ ಆಟದಲ್ಲಿ ಗೆಲ್ಲುವವರು ಯಾರು? ಎಂದು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ.

    ಜನಾರ್ದನ್ ಚಿಕ್ಕಣ್ಣ (Janardhan Chikkanna) ನಿರ್ದೇಶನದ ಈ ಬಹುತಾರಾಗಣದ ಚಿತ್ರದಲ್ಲಿ ದಿಗಂತ್, ಧನ್ಯ ರಾಮಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಅಚ್ಯುತ್ ಕುಮಾರ್, ರವಿಶಂಕರ್ ಗೌಡ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ. ದೀಪಕ್ ವೆಂಕಟೇಶನ್ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶಾಂತಿ ಸಾಗರ್ ಅವರ ಛಾಯಾಗ್ರಹಣವಿದೆ.

     

    ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಟಿವಿಎಫ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ ಪೌಡರ್. ಬಹು ತಾರಾಗಣವಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಿದೆ. 2024ರ ಏಪ್ರಿಲ್ 5 ಚಿತ್ರ‌ ಬಿಡುಗಡೆಯಾಗಲಿದೆ ಎಂದು ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಈಗಾಗಲೇ ತಿಳಿಸಿದ್ದಾರೆ.

  • ಏಪ್ರಿಲ್ 7ಕ್ಕೆ ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’ ಟೀಸರ್ ರಿಲೀಸ್

    ಏಪ್ರಿಲ್ 7ಕ್ಕೆ ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’ ಟೀಸರ್ ರಿಲೀಸ್

    ಗುಲ್ಟು ಖ್ಯಾತಿಯ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ (Janardhan Chikkanna) ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ (Hemanth Rao) ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಅಜ್ಞಾತವಾಸಿ’ (Ajnathavasi) ಸಿನಿಮಾದ ಟೀಸರ್ (Teaser) ಇದೇ ಏಪ್ರಿಲ್ 7ರಂದು ರಿಲೀಸ್ ಆಗಲಿದೆ. ಜನಾರ್ದನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಹೇಮಂತ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ.

    ಈ ಸಿನಿಮಾದಲ್ಲಿ ರಂಗಾಯಣ ರಘು (Rangayana Raghu) ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ರಂಗಾಯಣ ರಘು ಅವರೊಂದಿಗೆ ನಟಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ ತಾರಾಗಣದಲ್ಲಿ ಇದ್ದಾರೆ. ರಂಗಾಯಣ ರಘು   ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರೆ,  ಸಿದ್ದು ಮೂಲಿಮನಿ ಹಾಗೂ ಪಾವನ ಗೌಡ ಅವರ ಪಾತ್ರವೂ ವಿಶೇಷವಾಗಿದೆಯಂತೆ. ಇದನ್ನೂ ಓದಿ:‘ವೀರಂ’ ಮೂಲಕ ವಿಷ್ಣುವರ್ಧನ್ ಅಭಿಮಾನಿಯಾದ ಪ್ರಜ್ವಲ್ ದೇವರಾಜ್

    ಈ ಕುರಿತು ಮಾತನಾಡಿದ ಜನಾರ್ದನ್ ಚಿಕ್ಕಣ್ಣ, ‘ನನ್ನ ಗುರುಗಳಾದ ಕೃಷ್ಣರಾಜ್ ಅವರು ಕಥೆ ಬರೆದಿದ್ದಾರೆ. 1997 ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಅವರು ಕಥೆ ಹೇಳಿದ ರೀತಿ ತುಂಬಾ ಹಿಡಿಸಿತು.  ನನಗೆ ತಿಳಿದ ಹಾಗೆ ಇದೊಂದು ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಅನ್ನಬಹುದು. ಆನಂತರ ಹೇಮಂತ್ ರಾವ್ ಅವರನ್ನು ಭೇಟಿಯಾಗಿ ಕಥೆ ಹೇಳಿದಾಗ ಕೇವಲ ಅರ್ಧಗಂಟೆಯಲ್ಲಿ ನಿರ್ಮಾಣಕ್ಕೆ ಒಪ್ಪಿಕೊಂಡರು.  ಅದ್ವೈತ ಛಾಯಾಗ್ರಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ’ ಎನ್ನುತ್ತಾರೆ.

  • ಅಜ್ಞಾತವಾಸಿಯಾದ ರಂಗಾಯಣ ರಘು ಮತ್ತು ಪಾವನಾ

    ಅಜ್ಞಾತವಾಸಿಯಾದ ರಂಗಾಯಣ ರಘು ಮತ್ತು ಪಾವನಾ

    ‘ಗೋಧಿಬಣ್ಣ‌ ಸಾಧಾರಣ ಮೈಕಟ್ಟು’ ಚಿತ್ರ ಖ್ಯಾತಿಯ ಹೇಮಂತ್ ರಾವ್ ನಿರ್ಮಾಣದಲ್ಲಿ ಹೊಸ ಸಿನಿಮಾವೊಂದು ಮೂಡಿ ಬರುತ್ತಿದ್ದು, ಈ ಚಿತ್ರಕ್ಕೆ  ಗುಲ್ಟು  ಚಿತ್ರ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಮಾಡುತ್ತಿದ್ದಾರೆ. ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ಅಜ್ಞಾತವಾಸಿ ಎಂದು ಹೆಸರಿಡಲಾಗಿದೆ. ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ರಂಗಾಯಣ ರಘು ಅವರೊಂದಿಗೆ ಈ ಚಿತ್ರದಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ ಸಹ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ : ಲಾಕಪ್ ನಲ್ಲಿ ಗಳಗಳನೆ ಅತ್ತ ಪೂನಂ: ಈ ನಟಿಗೆ ಅದೆಂಥ ಅವಮಾನ?

    ನನ್ನ ಗುರುಗಳಾದ ಕೃಷ್ಣರಾಜ್ ಅವರು ಕಥೆ ಬರೆದಿದ್ದಾರೆ. 1997 ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಅವರು ಕಥೆ ಹೇಳಿದ ರೀತಿ ತುಂಬಾ ಹಿಡಿಸಿತು.  ನನಗೆ ತಿಳಿದ ಹಾಗೆ ಇದೊಂದು ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಅನ್ನಬಹುದು. ಆನಂತರ ಹೇಮಂತ್ ರಾವ್ ಅವರನ್ನು ಭೇಟಿಯಾಗಿ ಕಥೆ ಹೇಳಿದಾಗ ಕೇವಲ ಅರ್ಧಗಂಟೆಯಲ್ಲಿ ನಿರ್ಮಾಣಕ್ಕೆ ಒಪ್ಪಿಕೊಂಡರು. ರಂಗಾಯಣ ರಘು ಸರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದು ಮೂಲಿಮನಿ, ಪಾವನ ಗೌಡ ಅವರ ಪಾತ್ರ ಕೂಡ ಜನಮನಸೂರೆಗೊಳ್ಳಲಿದೆ.  ಅದ್ವೈತ ಛಾಯಾಗ್ರಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ತಿಳಿಸಿದರು.‌ ಇದನ್ನೂ ಓದಿ : ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ

    ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ರಂಗಾಯಣ ರಘು ಅವರ ಅಭಿನಯವನ್ನು ನೋಡಲು ನಾನು ನಿರ್ಮಾಪಕನಿಗಿಂತ ಹೆಚ್ಚಾಗಿ ಅಭಿಮಾನಿಯಾಗಿ ಕಾಯುತ್ತಿದ್ದೇನೆ.  “ಕವಲುದಾರಿ” ಸಿನಿಮಾ ಸಂದರ್ಭದಲ್ಲಿ ಪುನೀತ್ ಸರ್ ರಂಗಾಯಣ ರಘು ಬಗ್ಗೆ ಹೇಳಿದ ಮಾತು ಇನ್ನೂ ಕಿವಿಯಲ್ಲೇ ಇದೆ.‌ ಈ ಚಿತ್ರ ನಿರ್ಮಾಣಕ್ಕೆ ಅವರೆ ಸ್ಪೂರ್ತಿ ಎನ್ನಬಹುದು ಎಂದರು ನಿರ್ಮಾಪಕ ಹೇಮಂತ್ ರಾವ್. ಇದನ್ನೂ ಓದಿ : ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್

    ನಾನು ಟಿವಿ ಜ್ಯೋತಿಷಿಗಳಿಗಿಂತ ಹೆಚ್ಚಾಗಿ ಜನಾರ್ದನ ಚಿಕ್ಕಣ್ಣ ಅವರನ್ನು ನಂಬುತ್ತೇನೆ. ಏಕೆಂದರೆ “ಗುಲ್ಟು” ಚಿತ್ರದಲ್ಲಿ ಅವರು ಹೇಳಿದ್ದ ಒಂದು ಹಗರಣದ ವಿಷಯ ನಂತರ ನಿಜವಾಯಿತು. ಹೇಮಂತ್ ರಾವ್ ಕೂಡ ಹಾಗೆ ಈ ಯುವ ನಿರ್ದೇಶಕರ ಯೋಚನಾಶೈಲಿಯೇ ಬೇರೆ. ನನಗೆ ಉತ್ತಮ ಪಾತ್ರ ನೀಡಿದ್ದಾರೆ‌. ಇಡೀತಂಡಕ್ಕೆ ಒಳ್ಳೆಯದಾಗಲಿ ಎಂದು ರಂಗಾಯಣ ರಘು ಹಾರೈಸಿದರು. ಇದನ್ನೂ ಓದಿ : ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ

    ಚಿತ್ರದಲ್ಲಿ ನಟಿಸುತ್ತಿರುವ ಪಾವನ ಗೌಡ, ಸಿದ್ದು ಮೂಲಿಮನಿ‌ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತದ ಕುರಿತು ಹಾಗೂ ಅದ್ವೈತ ಛಾಯಾಗ್ರಹಣದ ಬಗ್ಗೆ ಮಾತನಾಡಿದರು.