Tag: ಜನಸಂಖ್ಯಾ ಸ್ಫೋಟ

  • Budget 2024: ಜನಸಂಖ್ಯಾ ಸ್ಫೋಟ ತಡೆಗೆ ಉನ್ನತ ಅಧಿಕಾರಿಗಳ ಸಮಿತಿ

    Budget 2024: ಜನಸಂಖ್ಯಾ ಸ್ಫೋಟ ತಡೆಗೆ ಉನ್ನತ ಅಧಿಕಾರಿಗಳ ಸಮಿತಿ

    ನವದೆಹಲಿ: ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಿಂದ (Population) ಉಂಟಾಗುವ ಸವಾಲುಗಳನ್ನ ನಿಭಾಯಿಸಲು ಉನ್ನತ ಅಧಿಕಾರ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ತಿಳಿಸಿದ್ದಾರೆ.

    ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ (Interim Budget 2024) ಮಂಡಿಸಿದ ಅವರು, ವೇಗವಾಗಿ ಬೆಳೆಯುತ್ತಿರುವ ಸಂಖ್ಯೆ ಮತ್ತು ಜನಸಂಖ್ಯೆಯಿಂದ ಸೃಷ್ಟಿಯಾಗುವ ಸವಾಲುಗಳನ್ನು ಪರಿಗಣಿಸಿ, ಸಮರ್ಥವಾಗಿ ಎದುರಿಸಲು ಉನ್ನತ ಅಧಿಕಾರ ಸಮಿತಿಯನ್ನು ರಚಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ಹಿಂದೆ ಎಷ್ಟಿತ್ತು? ಈಗ ಎಷ್ಟಿದೆ?

    `ವಿಕ್ಷಿತ್ ಭಾರತ್’ (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಾಣ ಮಾಡುವ ಗುರಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

    ಇದರೊಂದಿಗೆ ಹಣಕಾಸು ಸಚಿವರು, ಮುಂಬರುವ ರಾಷ್ಟ್ರೀಯ ಚುನಾವಣೆಯಲ್ಲಿ ನರೇಂದ್ರ ಮೋದಿ (Narendra Modi) ಸರ್ಕಾರ ಮತ್ತೊಮ್ಮೆ ಆಯ್ಕೆಯಾಗಲಿದೆ. ಕೇಂದ್ರ ಸರ್ಕಾರದ ಉತ್ತಮ ನೀತಿಗಳು ಮತ್ತು ಕೆಲಸಗಳು ಸತತ 3ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಮರಳಲು ಸಹಾಯ ಮಾಡುತ್ತದೆ. ಮುಂದಿನ ಜುಲೈನಲ್ಲಿ ನಮ್ಮ ಸರ್ಕಾರವು ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆಗಾಗಿ ಪೂರ್ಣಪ್ರಮಾಣದ ಬಜೆಟ್ ಮಂಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಿಎಂ ಸೂರ್ಯೋದಯ ಯೋಜನೆಗೆ ವಿಶೇಷ ಒತ್ತು – ಒಂದು ಕೋಟಿ ಮನೆಗಳಿಗೆ ಸೋಲಾರ್ ಮೇಲ್ಛಾವಣಿ

    ಜನಸಂಖ್ಯೆಯಲ್ಲಿ ಭಾರತವೇ ನಂ.1: ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದ ಚೀನಾವನ್ನು ಭಾರತ ಹಿಂದಿಕ್ಕಿದೆ. ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತವು 142.86 ಕೋಟಿ ಜನಸಂಖ್ಯೆ ಹೊಂದುವ ಮೂಲಕ ಮೊದಲ ಸ್ಥಾನಕ್ಕೆ ಏರಿದ್ದು, 142.57 ಕೋಟಿ ಜನಸಂಖ್ಯೆಯನ್ನು ಹೊಂದುವ ಮೂಲಕ ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ. ಇದನ್ನೂ ಓದಿ: ಜನಸಂಖ್ಯೆ ಸ್ಫೋಟ, ಚೀನಾ ಹಿಂದಿಕ್ಕಿದ ಭಾರತ – ದೇಶದ ಒಟ್ಟು ಜನಸಂಖ್ಯೆ ಎಷ್ಟು ಗೊತ್ತಾ?

  • ದೇಶದಲ್ಲಿ ಕುಟುಂಬಕ್ಕೆ ಎರಡೇ ಮಕ್ಕಳು: ಜನಸಂಖ್ಯಾ ನಿಯಂತ್ರಣ ನೀತಿ ಜಾರಿಯಾಗುತ್ತಾ?

    ದೇಶದಲ್ಲಿ ಕುಟುಂಬಕ್ಕೆ ಎರಡೇ ಮಕ್ಕಳು: ಜನಸಂಖ್ಯಾ ನಿಯಂತ್ರಣ ನೀತಿ ಜಾರಿಯಾಗುತ್ತಾ?

    ನವದೆಹಲಿ/ ಬೆಂಗಳೂರು: ದೇಶದಲ್ಲಿ ಕುಟುಂಬಕ್ಕೆ ಎರಡೇ ಮಕ್ಕಳು ಎಂಬ ಜನಸಂಖ್ಯಾ ನಿಯಂತ್ರಣಾ ನೀತಿ(Population Control Policy) ಜಾರಿಗೆ ಬರುತ್ತಾ? ಎಲ್ಲಾ ಸಮುದಾಯಗಳಿಗೂ ಈ ನಿಯಮ ಅನ್ವಯ ಆಗುತ್ತಾ ಎಂಬ ಚರ್ಚೆ ಜೋರಾಗುತ್ತಿದೆ.

    ಆರ್‌ಎಸ್‍ಎಸ್(RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat), ವಿಜಯದಶಮಿಯಂದು ನಾಗಪುರದ  ಕಚೇರಿಯಲ್ಲಿ ಬುಧವಾರ ಮಾತನಾಡುತ್ತಾ, ದೇಶದಲ್ಲಿ ಜನಸಂಖ್ಯಾ ನೀತಿ ಅವಶ್ಯಕತೆ ಇದೆ. ಧರ್ಮ(Religion) ಆಧಾರಿತ ಜನಸಂಖ್ಯೆಯ ಅಸಮತೋಲವನ್ನು ಇನ್ನು ನಿರ್ಲಕ್ಷಿಸಲಾಗದು. ಜನಸಂಖ್ಯಾ ಅಸಮತೋಲನ ದೇಶ ವಿಭಜನೆಗೆ ಕಾರಣವಾದೀತು ಅಂತ ಆತಂಕ ವ್ಯಕ್ತಪಡಿಸಿದ್ದರು.

    ಮೋಹನ್‌ ಭಾಗವತ್‌ ಹೇಳಿಕೆಯ ಬೆನ್ನಲ್ಲೇ ಜನಸಂಖ್ಯಾ ನೀತಿ ಜಾರಿ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾಗವತ್ ಹೇಳಿಕೆಯನ್ನು ಎಂಐಎಂನ ಅಸಾದುದ್ದೀನ್ ಓವೈಸಿ(Asaduddin Owaisi) ಟೀಕಿಸಿದ್ದಾರೆ. ಜನಸಂಖ್ಯಾ ನಿಯಂತ್ರಣದ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

    ಈ ಬೆನ್ನಲ್ಲೇ ಬಿಜೆಪಿ ಮುಖಂಡ ಸಂಗೀತ್ ಸೋಮ್ ಕಿಡಿಕಾರಿದ್ದು, ಒಂದು ಸಮುದಾಯದಿಂದ ದೇಶದಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದ್ದು, ಇದರಿಂದಾಗಿ ಭಯೋತ್ಪಾದನೆಯೂ ಹೆಚ್ಚಾಗುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಭಾಗವತ್ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸ್ವಾಗತಿಸಿದ್ದಾರೆ. ಕೋಳಿ ಕೇಳಿ ಮಸಾಲೆ ಅರೆಯಲ್ಲ ಅಂತ ಓವೈಸಿಗೂ ತಿರುಗೇಟು ನೀಡಿದ್ದಾರೆ. ದೇಶದ ಹಿತದೃಷ್ಠಿಯಿಂದ ಮೋಹನ್ ಭಾಗವತ್ ಸಲಹೆ ಕೊಟ್ಟಿದ್ದಾರೆ. ಸಂಸತ್, ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಬೇಕು ಎಂದು ಸಿಟಿ ರವಿ ಹೇಳಿದ್ದಾರೆ.

    ಟೀಕೆ-ಟಿಪ್ಪಣಿ ಏನೇ ಇರಲಿ, ಮೋಹನ್ ಭಾಗವತ್ ಕೊಟ್ಟ ಸಲಹೆಯನ್ನು ಪ್ರಧಾನಿ ಮೋದಿ(Narendra Modi) ಸ್ವೀಕರಿಸ್ತಾರಾ? ಚೀನಾವನ್ನು ಮೀರಿಸುವಂತೆ ಬೆಳೆಯುತ್ತಿರುವ ಜನಸಂಖ್ಯಾ ಸ್ಫೋಟಕ್ಕೆ ಬ್ರೇಕ್ ಹಾಕ್ತಾರಾ? ಮುಂದಿನ ಎಲೆಕ್ಷನ್‍ಗೆ ಪ್ರಮುಖ ಅಜೆಂಡಾವನ್ನಾಗಿಸಿಕೊಂಡು ಕೇಂದ್ರ ಸರ್ಕಾರವೇ ಸಂಸತ್‍ನಲ್ಲಿ ಮಸೂದೆ ಮಂಡಿಸುತ್ತಾ ಎಂಬೆಲ್ಲ ಪ್ರಶ್ನೆಗಳೊಂದಿಗೆ ಈಗ ಚರ್ಚೆ ಆರಂಭವಾಗಿದೆ.

    ಚೀನಾದ(China) ಜನಸಂಖ್ಯೆ 145 ಕೋಟಿ ದಾಟಿದ್ದು, ಭಾರತ 140 ಕೋಟಿ ಹತ್ತಿರ ತಲುಪಿದೆ. ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ನೀತಿ ಬಗ್ಗೆ ಚರ್ಚೆ ಇದೇ ಮೊದಲೇನಲ್ಲ. ಲೋಕಸಭೆ, ರಾಜ್ಯಸಭೆಯಲ್ಲಿ ಒಟ್ಟು 35 ಬಾರಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಖಾಸಗಿ ಬಿಲ್ ಮಂಡನೆಯಾಗಿವೆ. ಇದನ್ನೂ ಓದಿ: ‘ಪೊನ್ನಿಯಿನ್ ಸೆಲ್ವನ್ ‘ ಸಿನಿಮಾ ಎಫೆಕ್ಟ್: ‘ಚೋಳ ರಾಜರು ಹಿಂದೂಗಳಲ್ಲ’ ಕಮಲ್ ವಿವಾದಾತ್ಮಕ ಹೇಳಿಕೆ


    ಜನಸಂಖ್ಯಾ ನೀತಿ ಚರ್ಚೆ
    2019ರಲ್ಲಿ ರಾಜ್ಯಸಭೆಯಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಮಸೂದೆಯನ್ನು ಸಂಸದ ರಾಕೇಶ್ ಸಿನ್ಹಾ ಮಂಡಿಸಿದ್ದರು. ಈ ಮಸೂದೆಗೆ 125 ಸದಸ್ಯರು ಸಹಿ ಹಾಕಿದ್ದರು. 2020ರಲ್ಲೂ ಜನಸಂಖ್ಯೆ ನಿಯಂತ್ರಣ ನೀತಿ ಜಾರಿ ಬಗ್ಗೆ ಚರ್ಚೆ ನಡೆದಿತ್ತು. ರಾಜ್ಯಸಭೆಯಲ್ಲಿ ಶಿವಸೇನೆಯ ಅನಿಲ್ ದೇಸಾಯಿ ಮಸೂದೆ ಮಂಡಿಸಿದ್ದರು. ದಂಪತಿಗೆ ಎರಡೇ ಮಗು ಕಡ್ಡಾಯ ಮಾಡುವ ನಿಯಮವನ್ನು ಹೊಂದಿತ್ತು.

    ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಸದ್ದಿಲ್ಲದೆ ಜನಸಂಖ್ಯೆ ನಿಯಂತ್ರಣ ನೀತಿ ಶುರುವಾಗಿದೆ. ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನೀತಿ 2021-2030 ಕರಡು ಬಿಡುಗಡೆಯಾಗಿದೆ. ಎರಡಕ್ಕಿಂತ ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಕ್ಕೆ ಸರ್ಕಾರಿ ಸೌಲಭ್ಯಗಳ ನಿರಾಕಣೆಯ ಅಂಶ ನೀತಿಯಲ್ಲಿದೆ. ಅಸ್ಸಾಂನಲ್ಲೂ 2 ಮಕ್ಕಳ ನೀತಿ ಜಾರಿಯ ಬಗ್ಗೆ ಸಿಎಂ ಹೀಮಾಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 33 ವರ್ಷದ ನಂತರ ಹುಟ್ಟೂರಿನ ನಕ್ಷೆ ಬಿಡಿಸಿ ತಾಯಿ ಮಡಿಲು ಸೇರಿದ ಮಗ!

    33 ವರ್ಷದ ನಂತರ ಹುಟ್ಟೂರಿನ ನಕ್ಷೆ ಬಿಡಿಸಿ ತಾಯಿ ಮಡಿಲು ಸೇರಿದ ಮಗ!

    ಬೀಜಿಂಗ್: 33 ವರ್ಷಗಳ ನಂತರ ತನ್ನ ನೆನಪಿನ ಶಕ್ತಿಯಿಂದ ಹುಟ್ಟೂರಿನ ನಕ್ಷೆಯನ್ನು ಬಿಡಿಸಿ ಮತ್ತೆ ತನ್ನ ತಾಯಿಯ ಮಡಿಲನ್ನು ಮಗ ಸೇರಿದ ಭಾವನಾತ್ಮಕ ಘಟನೆ ಚೀನಾದಲ್ಲಿ ನಡೆದಿದೆ.

    ಚೀನಾದ ಹಳ್ಳಿಯಿಂದ ಅಪಹರಣಕ್ಕೊಳಗಾದ ಲಿ ಜಿಂಗ್‍ವೀ, 33 ವರ್ಷಗಳ ನಂತರ ತನ್ನ ನೆನಪಿನ ಶಕ್ತಿಯಿಂದ ನಕ್ಷೆಯನ್ನು ಬಿಡಿಸಿದ್ದಾರೆ. ಅದು ಅಲ್ಲದೇ ಇವರಿಗೆ ಪೊಲೀಸರು ಸಹಾಯ ಮಾಡಿದ್ದು, ನಕ್ಷೆಯ ಸಹಾಯದಿಂದ 33 ವರ್ಷದ ನಂತರ ತನ್ನ ತಾಯಿಯನ್ನು ಮತ್ತೆ ಸೇರಿದ್ದಾರೆ. ಇದನ್ನೂ ಓದಿ: ಸಣ್ಣ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಬೆಳೆಸಬೇಕು: ಎಂ.ವೆಂಕಯ್ಯ ನಾಯ್ಡು

    ಪ್ರಸ್ತುತ ಲಿ ಜಿಂಗ್‍ವೀ ಬಿಡಿಸಿದ್ದ ತನ್ನ ಹಳ್ಳಿಯ ನಕ್ಷೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಈಗ ಅದು ಸಖತ್ ವೈರಲ್ ಆಗುತ್ತಿದೆ.

    ಏನಿದು ಘಟನೆ?
    1989ರಲ್ಲಿ ನೈರುತ್ಯ ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಮಕ್ಕಳನ್ನು ಅಪಹರಿಸಿದಾಗ ಆ ಕಳ್ಳಸಾಗಣೆಯಲ್ಲಿ ಲಿ ಜಿಂಗ್‍ವೀ ಸಹ ಇದ್ದರು. ಆಗ ಅವರಿಗೆ ಕೇವಲ ನಾಲ್ಕು ವರ್ಷ. ಈಗ ಅವರಿಗೆ 37 ವರ್ಷವಾಗಿದೆ. ಆದರೂ, ತನ್ನ ಹಳ್ಳಿಯನ್ನು ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಅದು ಅಲ್ಲದೇ ತನ್ನ ಹುಟ್ಟೂರಿನ ನಕ್ಷೆಯನ್ನು ಬರೆದು ಅದನ್ನು ಬಳಸಿಕೊಂಡು ತನ್ನ ಸ್ವತ ಕುಟುಂಬವನ್ನು ಸೇರಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಲಿ ಜಿಂಗ್‍ವೀ, ನನ್ನನ್ನು ಆಟಿಕೆ ತೋರಿಸಿ ಕಳ್ಳರು ಅಪಹರಿಸಿದರು. ನಂತರ ಇಲ್ಲಿಂದ 1,000 ಮೈಲುಗಳಷ್ಟು ದೂರದಲ್ಲಿದ್ದ ಇನ್ನೊಂದು ಕುಟುಂಬಕ್ಕೆ ಮಾರಿದರು. ಆದರೆ ಪ್ರತಿದಿನ ನಾನು ನನ್ನ ಮನೆಯನ್ನು ನೆನಪಿಸಿಕೊಳ್ಳುತ್ತಿದ್ದೆ. ನನ್ನ ಊರನ್ನು ನೋಡಬೇಕು ಎಂದು ಪ್ರತಿಬಾರಿಯೂ ಆಲೋಚಿಸುತ್ತಿದೆ. ನಂತರ ತುಂಬಾ ಆಲೋಚಿಸಿ ಈ ನಕ್ಷೆಯನ್ನು ಬಿಡಿಸಿದೆ ಎಂದು ವಿವರಿಸಿದರು.

    ಡಿಸೆಂಬರ್‌ನಲ್ಲಿ, ಲಿ ಜಿಂಗ್‍ವೀ ಅವರು ತಾವು ಬಿಡಿಸಿದ ನಕ್ಷೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದರು. ಲಿ ಜಿಂಗ್‍ವೀ ಅವರು ಆ ವೇಳೆ ಅಪಹರಣಕ್ಕೊಳಗಾದ ಮಕ್ಕಳ ಬಗ್ಗೆ ವಿಚಾರಿಸಿದರು. ಅವರನ್ನು ತನ್ನ ಕುಟುಂಬ ಹುಡುಕುವಂತೆ ಸಹಾಯಕ್ಕಾಗಿ ಮನವಿ ಮಾಡಿದರು.

    ಈ ವೇಳೆ ಲಿ ಜಿಂಗ್‍ವೀ ಅವರ ಸಹಾಯಕ್ಕೆ ಪೊಲೀಸರು ಬಂದಿದ್ದು, ತನಿಖೆಯನ್ನು ಪ್ರಾರಂಭಿಸಿದರು. ಅಂತಿಮ ಫಲವೆಂಬಂತೆ ಅವರಿಗೆ ತನ್ನ ಊರು ಮತ್ತು ತಾಯಿ ಸಿಕ್ಕಿದ್ದಾರೆ. ಈ ಭಾವನಾತ್ಮಕ ದೃಶ್ಯವನ್ನ ಸೆರೆಹಿಡಿಯಲಾಗಿದ್ದು, ಈ ವೀಡಿಯೋದಲ್ಲಿ ತಾಯಿಯನ್ನು ನೋಡಿದ ಲಿ ಜಿಂಗ್‍ವೀ ಅಳುತ್ತ ನೆಲಕ್ಕೆ ಬಿಳುತ್ತಾರೆ. ನಂತರ ಆತನ ತಾಯಿ ಕೊನೆಗೂ ನನ್ನ ಮಗನನ್ನು ನಾನು ನೋಡಿದೆ ಎಂದು ದುಃಖಿತರಾಗಿದ್ದಾರೆ. ಇದನ್ನೂ ಓದಿ: ಗಂಗಾಕಲ್ಯಾಣ ಯೋಜನೆಯಲ್ಲಿ ಸಾವಿರಾರು ಕೋಟಿ ಅಕ್ರಮ

    ಪ್ರಸ್ತುತ ಲಿ ಜಿಂಗ್‍ವೀ ಅವರು ಮದುವೆಯಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ. ಈಗ ಆ ಮಕ್ಕಳಿಗೆ ಇವರು ನಕ್ಷೆಯಲ್ಲಿ ತನ್ನ ಹುಟ್ಟೂರು ಹಿಂದೆ ಹೇಗಿತ್ತು ಎಂದು ತೋರಿಸಿದರು. ತನ್ನನ್ನು ಖರೀದಿಸಿದ ಕುಟುಂಬದ ವಿರುದ್ಧ ಕ್ರಮ ತೆಗದುಕೊಳ್ಳಲು ಹಿಂದೇಟು ಹಾಕಿದ ಅವರು, ಅವರು ನನಗೆ ಜೀವನ ಮೌಲ್ಯವನ್ನು, ಮನುಷ್ಯತ್ವವನ್ನು ಕಲಿಸಿದ್ದಾರೆ ಎಂದು ಹೇಳಿದ್ದಾರೆ.

    ಚೀನಾದಲ್ಲಿ ಕಳ್ಳಸಾಗಣೆ ಮತ್ತು ಮಕ್ಕಳ ಅಪಹರಣವು ಗಂಭೀರ ಸಮಸ್ಯೆಯಾಗಿದ್ದು, ಹಿಂದೆ ಪ್ರತಿ ಕುಟುಂಬಕ್ಕೆ ಮಕ್ಕಳ ಸಂಖ್ಯೆಯ ಮೇಲೆ ಮಿತಿಯನ್ನು ಹೇರಲಾಗಿತ್ತು. ಅದು ಅಲ್ಲದೇ ಹುಡುಗರಿಗೆ ಸಾಂಪ್ರದಾಯಿಕವಾಗಿ ಆದ್ಯತೆ ಹೆಚ್ಚಿತ್ತು. ಈ ಕಾರಣಕ್ಕೆ ಮಕ್ಕಳ ವ್ಯಾಪಾರ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

  • ಭಾರತದಲ್ಲಿ ಜನಸಂಖ್ಯಾ ಪ್ರಮಾಣ ಕುಸಿತ – ಗಂಡು ಮಕ್ಕಳಿಗಿಂತ ಹೆಣ್ಮಕ್ಕಳ ಜನನ ಅಧಿಕ

    ಭಾರತದಲ್ಲಿ ಜನಸಂಖ್ಯಾ ಪ್ರಮಾಣ ಕುಸಿತ – ಗಂಡು ಮಕ್ಕಳಿಗಿಂತ ಹೆಣ್ಮಕ್ಕಳ ಜನನ ಅಧಿಕ

    ನವದೆಹಲಿ: ಜನಸಂಖ್ಯಾ ಸ್ಫೋಟ ತಡೆಗೆ ಕೇಂದ್ರ ಸರ್ಕಾರ ಕೈಗೊಂಡಿದ್ದ ಎಲ್ಲಾ ಕ್ರಮಗಳು ಇತ್ತೀಚಿನ ದಿನಗಳಲ್ಲಿ ಫಲ ನೀಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಂಖ್ಯೆ ಪ್ರಕಾರ ಭಾರತದಲ್ಲಿ ಜನಸಂಖ್ಯಾ ದರವು ಇಳಿಮುಖವಾಗಿದೆ. ಜನ ಸಂಖ್ಯಾ ಸ್ಫೋಟದ ಭೀತಿಯಿಂದ ದೇಶ ಪಾರಾಗಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದುಬಂದಿದೆ.

    ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಹೇರುವ ಮಕ್ಕಳ ಸಂಖ್ಯೆಯನ್ನು ಫಲವತ್ತತೆ(ಟಿಎಫ್‍ಆರ್) ಎಂದು ಕರೆಯುತ್ತೇವೆ. ಕೇಂದ್ರ ಸರ್ಕಾರ ಫಲವತ್ತತೆಯ ಮಟ್ಟವನ್ನು 2.1ಕ್ಕೆ ನಿಗದಿಪಡಿಸಿದೆ. ಏಕೆಂದರೆ ಇದು ಜನನ ಮತ್ತು ಮರಣಗಳ ನಡುವೆ ಸಮತೋಲನವನ್ನು ಕಾಪಾಡಲು ಈ ಜನಸಂಖ್ಯೆಯ ಸರಾಸರಿ ಅಗತ್ಯವಿದೆ.

    ಈ ಸಮೀಕ್ಷೆಯ ಪ್ರಕಾರ ಕೇಂದ್ರ ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಫಲವತ್ತತೆ ದರ ಕುಸಿದಿದ್ದು, 2ಕ್ಕಿಂತ ಕಡಿಮೆ ಇದೆ. ಕರ್ನಾಟಕದಲ್ಲಿ ಈ ದರ 1.7 ರಷ್ಟಿದೆ. ಈ ಅಂಕಿ ಅಂಶಗಳನ್ನು ಗಮನಿಸಿದಾಗ ದೇಶದ ಜನಸಂಖ್ಯಾ ಸ್ಫೋಟ ಕುಸಿದಿರುವುದು ಕಾಣುತ್ತದೆ.

    ಯಾವ ರಾಜ್ಯದಲ್ಲಿ ಎಷ್ಟು?
    2ಕ್ಕಿಂತ ಹೆಚ್ಚು ಫಲವತ್ತತೆ ಹೊಂದಿದ ರಾಜ್ಯಗಳು ದೇಶದಲ್ಲಿದೆ. ಅವುಗಳೆಂದರೆ, ಬಿಹಾರ 3, ಮೇಘಾಲಯ 2.9, ಉತ್ತರ ಪ್ರದೇಶ 2.4, ಜಾರ್ಖಂಡ್ 2.3, ಮಣಿಪುರ 2.2ರಷ್ಟಿದೆ.  ಇದನ್ನೂ ಓದಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ

    ಆಸ್ಸಾಂ, ಹರಿಯಾಣ, ಮಿಜೋರಾಂ, ಉತ್ತರಾಖಂಡ ರಾಜ್ಯಗಳು 1.9ಗಿಂತ ಕಡಿಮೆ ಫಲವತ್ತತೆಯನ್ನು ಹೊಂದಿದೆ. ಹಾಗೆಯೇ ಅರುಣಾಚಲ ಪ್ರದೇಶ, ಛತ್ತೀಸ್‍ಗಢ, ಕೇರಳ, ಒಡಿಶಾ, ತಮಿಳುನಾಡು, ತೆಲಂಗಾಣ ರಾಜ್ಯಗಳು 1.8ಷ್ಟು ಕಡಿಮೆ ಫಲವತ್ತತೆ ಹೊಂದಿದ್ದರೆ. ಕರ್ನಾಟಕ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ನಾಗಲ್ಯಾಂಡ್, ತ್ರಿಪುರ ರಾಜ್ಯಗಳು 1.7ರಷ್ಟಿದೆ.

    ಪಶ್ಚಿಮ ಬಂಗಾಳದಲ್ಲಿ 1.6 ಫಲವತ್ತತೆಯನ್ನು ಹೊಂದಿದೆ. ಇನ್ನೂ ರಾಷ್ಟ್ರೀಯ ಸರಾಸರಿಯಂತೆಯೇ  ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ 2.1 ರಷ್ಟಿದೆ.

    2015 ಮತ್ತು 16ರಲ್ಲಿ ನಡೆದ ಸಮೀಕ್ಷೆಯಲ್ಲಿ ಒಟ್ಟು ಫಲವತ್ತತೆ 2.2ರವರೆಗೆ ಇತ್ತು. 2019ರಿಂದ 2021ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಜನಸಂಖ್ಯಾ ಪ್ರಮಾಣ 2ಕ್ಕೆ ಕುಸಿದಿದೆ.  ಇದನ್ನೂ ಓದಿ: ಥಿಯೇಟರ್‌ಗಳಲ್ಲಿ ನಾವು ರಾಜಿಯಾಗಲ್ಲ: ಅಮೀರ್‌ಗೆ ಯಶ್ ಉತ್ತರ

    ಹೆಣ್ಣು ಮಕ್ಕಳ ಸಂಖ್ಯೆ ಅಧಿಕ: ಪುರುಷ ಪ್ರಧಾನವಾಗಿರುವ ಭಾರತದಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ. ಸಮೀಕ್ಷೆಯ ಅನ್ವಯ ಕಳೆದ 2 ವರ್ಷಗಳಲ್ಲಿ ಪ್ರತಿ 1000 ಗಂಡು ಮಕ್ಕಳು 1020 ಹೆಣ್ಣು ಮಕ್ಕಳು ಜನಿಸುತ್ತಿದ್ದಾರೆ.

     

     

    ಜನಸಂಖ್ಯಾ ಸ್ಫೋಟ ತಡೆಗೆ ಮೊದಲಿನಿಂದಲೂ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿ ತಂದಿದೆ. ಅದರಲ್ಲೂ 2016ರಲ್ಲಿ ಜಾರಿಗೆ ಬಂದ ಮಿಷನ್ ಪರಿವಾರ ವಿಕಾಸ್ ಯೋಜನೆಯಿಂದ ಗರ್ಭನಿರೋಧಕ ಮತ್ತು ಕುಟುಂಬ ಕಲ್ಯಾಣ ಯೋಜನೆಗಳು ಹೆಚ್ಚೆಚ್ಚು ಲಭ್ಯವಾಗುವಂತೆ ನೋಡಿಕೊಂಡಿತು. ಈ ಯೋಜನೆಯ ಫಲವನ್ನು ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಯಿತು. ಇದೆಲ್ಲದರ ಫಲದಿಂದ ಜನಸಂಖ್ಯೆ ಇಳಿಕೆಯಾಗಿದೆ.

  • ಭಯ ಹುಟ್ಟಿಸಲು ಉಗ್ರರು ಹತ್ಯೆಯನ್ನು ಗುರಿಯಾಗಿಸಿಕೊಂಡಿದ್ದಾರೆ: ಮೋಹನ್ ಭಾಗವತ್

    ಭಯ ಹುಟ್ಟಿಸಲು ಉಗ್ರರು ಹತ್ಯೆಯನ್ನು ಗುರಿಯಾಗಿಸಿಕೊಂಡಿದ್ದಾರೆ: ಮೋಹನ್ ಭಾಗವತ್

    -ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ತರಬೇಕು

    ನಾಗಪುರ: ಭಯ ಮೂಡಿಸುವುದಕ್ಕಾಗಿ ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ದಾಳಿಗೆ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಸರ್ಕಾರ ಕಾನೂನು ತರಬೇಕು. ಇದನ್ನು ಪ್ರತಿಯೊಬ್ಬರೂ ಸ್ವೀಕರಿಸುತ್ತಾರೆ ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

    ನಾಗಪುರದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಜಯ ದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿ ಅವರು ಸದಾ ಸನ್ನದ್ಧರಾಗಿರುವಂತೆ ನೋಡಿಕೊಳ್ಳುವ ಅಗತ್ಯವಿದೆ. ಬಿಟ್ ಕಾಯಿನ್ ಮತ್ತು ವೇದಿಕೆ ಕುರಿತು ಪ್ರಸ್ತಾಪಿಸಿದ ಅವರು ಇವುಗಳ ಮೇಲೆ ನಿಯಂತ್ರಣ ಹೇರಲು ಸರ್ಕಾರ ಪ್ರಯತ್ನಿಸಬೇಕು ಎಂದೂ ಸಲಹೆ ನೀಡಿದರು. ಇದನ್ನೂ ಓದಿ:  ಜನಸಂಖ್ಯಾ ಅಸಮತೋಲನ ತಡೆಗೆ ಹೊಸ ನೀತಿ ಜಾರಿಗೊಳಿಸಬೇಕು: ಮೋಹನ್ ಭಾಗವತ್

    ರಾಷ್ಟ್ರದ ಅಭಿವೃದ್ಧಿಗೆ ತೊಡಕಾಗಿರುವುದು ವೇಗವಾಗಿ ವೃದ್ಧಿಸುತ್ತಿರುವ ಜನಸಂಖ್ಯೆ. ಇದರ ಬಗ್ಗೆ ಹಲವರು ಕಳವಳಗೊಂಡಿದ್ದಾರೆ. ಜನಸಂಖ್ಯೆ ವೃದ್ಧಿಯಿಂದ ಸಾಕಷ್ಟು ಸಮಸ್ಯೆಗಳು ಭವಿಷ್ಯದಲ್ಲಿ ಎದುರಾಗಲಿವೆ. ಸಮಯೋಚಿತವಾಗಿ ಜನಸಂಖ್ಯೆ ನಿಯಂತ್ರಣದ ಸವಾಲು ತೆಗೆದುಕೊಳ್ಳಬೇಕಿದೆಎಂದಿದ್ದಾರೆ. ಇದನ್ನೂ ಓದಿ: ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

    ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ವವ್ಯಾಪಿ ಮತ್ತು ಪರಿಣಾಮಕಾರಿ ಕಾನೂನುಗಳನ್ನು ಅನುಷ್ಠಾನಕ್ಕೆ ತರಬೇಕು. ಸರ್ವರಿಗೂ ಅರಿವು ಮೂಡಿಸಬೇಕು. ತಾರತಮ್ಯವಿಲ್ಲದೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೂಲ ಹಿಂದುಗಳಿಗೆ ಕಿರುಕುಳ, ಅಪರಾಧ ಕೃತ್ಯಗಳ ಹೆಚ್ಚಳ ಮತ್ತು ಹುಟ್ಟಿದ ಊರನ್ನೇ ತೊರೆಯುವಂತಹ ಒತ್ತಡಗಳು ನಿರ್ಮಾಣಗೊಳ್ಳಲು ಅಸಮತೋಲನದ ಜನಸಂಖ್ಯಾ ವೃದ್ಧಿ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಂದರ್ಭ ಹಿಂಸಾಕೃತ್ಯಗಳು ಸ್ಫೋಟಗೊಳ್ಳಲು ಮತ್ತು ಅಲ್ಲಿನ ಹಿಂದುಗಳಲ್ಲಿ ದಯಾನಿಯ ಪರಿಸ್ಥಿತಿ ನಿರ್ಮಾಣಗೊಳ್ಳಲು ಅಸಮತೋಲನದ ಜನಸಂಖ್ಯಾ ವೃದ್ಧಿ ಮತ್ತು ಅಲ್ಲಿನ ಸರ್ಕಾರದ ನಿರ್ಲಕ್ಷ್ಯ ಧೋರಣೆಗಳು ಕಾರಣವಾಗಿದೆ ಎಂದಿದ್ದಾರೆ.

  • ವಲಸಿಗ ಮುಸ್ಲಿಮರು ಕುಟುಂಬ ಯೋಜನೆ ನೀತಿಯನ್ನು ಅಳವಡಿಸಿಕೊಳ್ಳಬೇಕು – ಅಸ್ಸಾಂ ಸಿಎಂ

    ವಲಸಿಗ ಮುಸ್ಲಿಮರು ಕುಟುಂಬ ಯೋಜನೆ ನೀತಿಯನ್ನು ಅಳವಡಿಸಿಕೊಳ್ಳಬೇಕು – ಅಸ್ಸಾಂ ಸಿಎಂ

    ದಿಸ್ಪುರ: ವಲಸಿಗ ಅಲ್ಪಸಂಖ್ಯಾತರು ಕುಟುಂಬ ಯೋಜನೆ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಸಲಹೆ ನೀಡಿದ್ದಾರೆ.

    ಅಸ್ಸಾಂ ಸರ್ಕಾರಕ್ಕೆ 1 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಳದಿಂದಾಗಿ ಅಲ್ಪಸಂಖ್ಯಾತರಲ್ಲಿ ಬಡತನ ಹೆಚ್ಚಾಗುತ್ತಿದೆ. ಹೀಗಾಗಿ ಬಡತನವನ್ನು ಕಡಿಮೆ ಮಾಡಲು ಸಮುದಾಯದ ಜನ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ನಾವು ಈಗಾಗಲೇ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಜನಸಂಖ್ಯಾ ನೀತಿಯನ್ನು ಜಾರಿಗೆ ತಂದಿದ್ದೇವೆ. ಜನಸಂಖ್ಯೆಯ ಹೊರೆಯನ್ನು ಕಡಿಮೆ ಮಾಡಲು ನಾವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ ಎಂದು ಅವರು ಹೇಳಿದರು.

    ನಮ್ಮ ಸರ್ಕಾರ ಸಮುದಾಯದ ಮಹಿಳೆಯರಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಇದರಿಂದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು ಎಂದು ಶರ್ಮಾ ಹೇಳಿದರು. ಇದನ್ನೂ ಓದಿ: ಅಸ್ಸಾಂನಲ್ಲಿ ಮದರಸಾ, ಸಂಸ್ಕೃತ ಶಾಲೆಗಳು ಬಂದ್

    ನಾವು ಜನಸಂಖ್ಯೆಯನ್ನು ನಿಯಂತ್ರಿಸಿದರೆ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.