Tag: ಜನರು

  • ವಿಜಯಪುರದಲ್ಲಿ ಮತ್ತೆ ಭೂಕಂಪ – ಬೆಚ್ಚಿಬಿದ್ದ ಜನತೆ

    ವಿಜಯಪುರ: ಐತಿಹಾಸಿಕ ಜಿಲ್ಲೆಯಲ್ಲಿ ಮತ್ತೆ ಭೂಕಂಪದ Earthquake) ಆತಂಕ ಶುರುವಾಗಿದೆ. ಪದೇ ಪದೇ ಭೂಕಂಪನ ಆಗುತ್ತಿರುವುದಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.

    ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲೆ ನಿರಂತರ ಮಳೆ ಸುರಿಯುತ್ತಿದೆ. ಈ ನಡುವೆ ಬುಧವಾರ ರಾತ್ರಿ 11:42ಕ್ಕೆ ಹಾಗೂ ಗುರುವಾರ ಬೆಳಗ್ಗೆ 6:19ಕ್ಕೆ ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಒಂದೇ ರಾತ್ರಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಇದನ್ನೂ ಓದಿ: 1 ತಿಂಗಳೊಳಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್‍ಗಳ ಸಂಚಾರ: KSRTC ಅಧ್ಯಕ್ಷ ಎಂ.ಚಂದ್ರಪ್ಪ

    ನಗರದ ರೈಲ್ವೆಸ್ಟೇಷನ್ ಏರಿಯಾ, ರಂಭಾಪುರ ಬಡಾವಣೆ, ಬಸವೇಶ್ವರ ನಗರ, ಗೋಳಗುಮ್ಮಟ ಏರಿಯಾ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದೆ. ಪದೇ ಪದೇ ಈ ರೀತಿ ಭೂಮಿ ಕಂಪಿಸುತ್ತಿರುವುದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ 80 ಸ್ಥಾನ ಗಳಿಸಿದ್ರೆ ನನ್ನ ಬೆರಳು ಕತ್ತರಿಸಿ ಕೊಡುತ್ತೇನೆ: ಶಿವನಗೌಡ ನಾಯಕ

    ಈ ವಿಚಾರವಾಗಿ ಇತ್ತೀಚೆಗಷ್ಟೇ ವಿಧಾನ ಪರಿಷತ್‍ನಲ್ಲು ಮಾತನಾಡಿದ ಸುನೀಲಗೌಡ ಪಾಟೀಲ (Sunil Gowda Basanagowda Patil) ಅವರು, ಜಿಲ್ಲೆಯಲ್ಲಿ ಈವರೆಗೆ ಸುಮಾರು 52 ದಾರಿ ಭೂಕಂಪನವಾಗಿದೆ. ಮನೆಯ ಹೊರಗಡೆ ಮಲಗಬೇಕೆಂದರೆ ಮಳೆ ಇರುತ್ತದೆ. ಮನೆ ಒಳಗಡೆ ಕುಳಿತುಕೊಳ್ಳಬೇಕೆಂದರೆ ಭೂಕಂಪನದ ಭೀತಿಯಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ಗಣಿ ಭೂವಿಜ್ಞಾನ ಇಲಾಖೆ ಸ್ಪಷ್ಟ ತಾಂತ್ರಿಕ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಜ್ಞರನ್ನು ಕರೆಯಿಸಿ ಭೂಕಂಪನಕ್ಕೆ ಕಾರಣ ಕುರಿತು ಅಧ್ಯಯನ ನಡೆಸಬೇಕು. ಈ ಮೂಲಕ ಜನರಲ್ಲಿರುವ ಭಯವನ್ನು ಹೊಗಲಾಡಿಸಬೇಕು ಎಂದು ಒತ್ತಾಯಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಲುಷಿತ ಕುಡಿಯುವ ನೀರು ಸೇವಿಸಿ 40 ಮಂದಿ ಅಸ್ವಸ್ಥ – ವೃದ್ಧ ಸಾವು

    ಕಲುಷಿತ ಕುಡಿಯುವ ನೀರು ಸೇವಿಸಿ 40 ಮಂದಿ ಅಸ್ವಸ್ಥ – ವೃದ್ಧ ಸಾವು

    ಬೆಳಗಾವಿ: ಕಲುಷಿತಗೊಂಡಿದ್ದ ಕುಡಿಯುವ ನೀರನ್ನು ಸೇವಿಸಿ ಅಸ್ವಸ್ಥಗೊಂಡಿದ್ದ 40 ಜನರ ಪೈಕಿ ಚಿಕಿತ್ಸೆ ಫಲಿಸದೇ ವೃದ್ಧರೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಬೆನ್ನೂರ ಗ್ರಾಮದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ರಾಮದುರ್ಗ ಸುರೇಬಾನ ಪಂಚಾಯತಿ ವ್ಯಾಪ್ತಿಯ ಬೆನ್ನೂರ ಗ್ರಾಮದಲ್ಲಿ ಕಲುಷಿತ ನೀರನ್ನು ಸೇವಿಸಿ ಸುಮಾರು 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಅವರನ್ನು ರಾಮದುರ್ಗ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ, ಕಳೆದ ರಾತ್ರಿ ಚಿಕಿತ್ಸೆ ಫಲಿಸದೇ ಬೆನ್ನೂರ ಗ್ರಾಮದ ಬಸಪ್ಪ ಖಾನಾಪೂರ(85) ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಶಿಂಧೆ ನಿಷ್ಠಾವಂತ ಅಧಿಕಾರಿ ಕಾರಿನ ಮೇಲೆ ಶಿವಸೈನಿಕರ ದಾಳಿ 

    ಕಲುಷಿತ ಕುಡಿಯುವ ನೀರು ಸೇವಿಸಿದ 40ಕ್ಕೂ ಹೆಚ್ಚು ಜನ ಏಕಾಏಕಿ ವಾಂತಿಭೇದಿಯಿಂದ ಬಳಲುತ್ತಿದ್ದಾರೆ. ಸದ್ಯ ಎಲ್ಲರಿಗೂ ಚಿಕಿತ್ಸೆ ಮುಂದುವರೆದಿದ್ದು, ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ. ಇತ್ತ ವೃದ್ಧನ ಸಾವಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜೆಜಿಎಂ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು, ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಮರನಾಥ ದರ್ಶನಕ್ಕೆ ತೆರಳಿದ ಬೆಳಗಾವಿಯ 50ಕ್ಕೂ ಹೆಚ್ಚು ಜನ ಸೇಫ್..!

    ಅಮರನಾಥ ದರ್ಶನಕ್ಕೆ ತೆರಳಿದ ಬೆಳಗಾವಿಯ 50ಕ್ಕೂ ಹೆಚ್ಚು ಜನ ಸೇಫ್..!

    ಬೆಳಗಾವಿ: ಜಮ್ಮು ಕಾಶ್ಮೀರದ ಪವಿತ್ರ ಯಾತ್ರಾ ಸ್ಥಳ ಅಮರನಾಥ ದರ್ಶನಕ್ಕೆ ತೆರಳಿದ 50ಕ್ಕೂ ಹೆಚ್ಚು ಜನರು ಶೇಷನಾಗ ಎಂಬ ಪ್ರದೇಶದಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ನಗರದ ಶಿವಾಜಿ ನಗರ, ಕಾಮತಗಲ್ಲಿ ಸೇರಿದಂತೆ ವಿವಿಧ ಕಡೆಗಳಿಂದ ಸುಮಾರು 55 ರಿಂದ 60 ಜನ ಅಮರನಾಥ ಯಾತ್ರೆಗೆ ಭಕ್ತರು ಪ್ರವಾಸ ಕೈಗೊಂಡಿದ್ದರು. ಆದರೆ ಅಮರನಾಥ ಪರ್ವತದಲ್ಲಿ ಮೇಘ ಸ್ಫೋಟ ಆಗಿ ದುರ್ಘಟನೆ ಸಂಭವಿಸಿದ್ದರಿಂದ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿತು. ಸದ್ಯ ದರ್ಶನಕ್ಕೆ ತೆರಳಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.   ಇದನ್ನೂ ಓದಿ: ಮೈದುಂಬಿ ಧುಮ್ಮುಕ್ಕುತ್ತಿರುವ ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ

    ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯ ಶಿವಾಜಿ ಮಂಡೋಳಕರ ತಂಡದಲ್ಲಿ 32 ಜನರಿದ್ದು, ಅದನ್ನು ಹೊರತುಪಡಿಸಿ 20ಕ್ಕೂ ಹೆಚ್ಚು ಬೆಳಗಾವಿಗರು ದರ್ಶನ ಪಡೆದುಕೊಂಡು ವಾಪಸ್ ಬರುವಾಗ ಮೇಘ ಸ್ಟೋಟದಿಂದ ಅಮರನಾಥ ದೇವಸ್ಥಾನದಿಂದ 20ಕಿ.ಮೀ. ದೂರದಲ್ಲಿರುವ ಶೇಷನಾಗ ಎಂಬ ಪ್ರದೇಶದಲ್ಲಿ ಸುರಕ್ಷಿತವಾಗಿದ್ದಾರೆ.

    ದರ್ಶನಕ್ಕೆ ತೆರಳಿದ್ದ ಶಿವಾಜಿ ನೇತೃತ್ವದ ತಂಡ ಮೊದಲಿಗೆ ಜಮ್ಮುಕಾಶ್ಮೀರದಿಂದ ಚಂದನವಾಡಿ, ಪೆಹಲಗಾಮ್‍ಗೆ ಬಂದು ಅಲ್ಲಿಂದ ಪಾದಯಾತ್ರೆ ಆರಂಭಿಸಿದ್ದು, ಸದ್ಯ ಧಾರಾಕಾರ ಮಳೆಗೆ ಸಂಭವಿಸಿದ ದುರ್ಘಟನೆಯಿಂದ ಶೇಷನಾಗದಲ್ಲಿ ಉಳಿದುಕೊಂಡಿದ್ದಾರೆ. ಇಲ್ಲವಾಗಿದ್ದರೆ ಶುಕ್ರವಾರವೇ ದರ್ಶನ ಪಡೆದುಕೊಂಡು ವಾಪಸ್ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಎಲ್ಲರು ಸೇಫ್ ಆಗಿದ್ದು ಅವರನ್ನು ಕರೆದುಕೊಂಡು ಬರಲು ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಹೆಚ್ಚಿದ ಆತಂಕ

    ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಹೆಚ್ಚಿದ ಆತಂಕ

    ಕೊಡಗು: ಜಿಲ್ಲೆಯ ಹಲವೆಡೆ ಇಂದು ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

    kodagu

    ಬೆಳಗ್ಗೆ 7.45ರ ಸುಮಾರಿಗೆ ಮಡಿಕೇರಿ ತಾಲೂಕಿನ ಕರಿಕೆ, ಪೆರಾಜೆ, ಅರವತ್ತೊಕ್ಲು, ಸಂಪಾಜೆ ಮತ್ತು ಕಲ್ಲುಗುಂಡಿ ಗ್ರಾಮಗಳಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಮನೆಗಳ ಪಾತ್ರೆಗಳು ಕಿಟಕಿಗಳು ಅಲ್ಲಾಡಿದ ಅನುಭವಾಗಿದೆ. ಅಲ್ಲದೇ ಭಾಗಮಂಡಲ ನಾಪೋಕ್ಲು ಕರ್ಣಗೇರಿಯಲ್ಲೂ ಭೂಮಿ ಕಂಪಿಸಿದೆ. ಸುಳ್ಯ ಪೇಟೆಯಲ್ಲೂ ಭೂಕಂಪನ ಅನುಭವವಾಗಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು 4-5 ಸೆಕೆಂಡ್‍ಗಳ ಕಾಲ ಕಂಪನ ಆಗಿದೆ. ಇದನ್ನೂ ಓದಿ: ಕೊಡಗಿನ ಕರಿಕೆ, ಸಂಪಾಜೆ, ಚೆಂಬು ಗ್ರಾಮದಲ್ಲಿ ಕಂಪಿಸಿದ ಭೂಮಿ

    ಕೇವಲ ಒಂದು ವಾರದ ಅಂತರದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಇದೀಗ ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಗುರುವಾರ, ಶನಿವಾರ ಭೂಕಂಪವಾಗಿತ್ತು. ಆದರೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

    Live Tv

  • ಅಧಿಕಾರದಲ್ಲಿರುವವರು ಸಮಾಜದಲ್ಲಿ ಕಹಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ: ಶರದ್ ಪವಾರ್

    ಅಧಿಕಾರದಲ್ಲಿರುವವರು ಸಮಾಜದಲ್ಲಿ ಕಹಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ: ಶರದ್ ಪವಾರ್

    ಮುಂಬೈ: ಅಧಿಕಾರದಲ್ಲಿರುವವರು ಸಮಾಜದಲ್ಲಿ ಕಹಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ದೇಶವನ್ನು ಮುನ್ನಡೆಸುವುದು ಮತ್ತು ಸಾಮರಸ್ಯವನ್ನು ಕಾಪಾಡುವುದು ದೊಡ್ಡ ಸವಾಲಾಗಿದೆ ಎಂದು ಬಿಜೆಪಿ ವಿರುದ್ಧ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ.

    ರಾಜಕೀಯವು ಈ ಹಿಂದೆ ಜನರ ನಡುವೆ ಸಂಪರ್ಕ ಕಲ್ಪಿಸುತ್ತಿತ್ತು. ಆದರೆ ಈಗ ದೇಶದಲ್ಲಿನ ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ದೇಶದ ನಾಯಕತ್ವವು ಮಹಾತ್ಮ ಗಾಂಧಿಯವರಂತಹ ರಾಷ್ಟ್ರೀಯ ಐಕಾನ್‍ಗಳನ್ನು ದೂಷಿಸಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಿಜಬ್‌ ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ಇಸ್ಲಾಂ ಬಗ್ಗೆ ಭೀತಿ ಹುಟ್ಟುವಂತೆ ಮಾಡಿದೆ: ಇಮ್ರಾನ್‌ ಖಾನ್‌

    ಇಲ್ಲಿಂದ ಸುಮಾರು 230 ಕಿಮೀ ದೂರದಲ್ಲಿರುವ ಸಾಂಗ್ಲಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ಶಿವಾಜಿರಾವ್ ಯಶಸ್ವಿಯಾಗಿದ್ದರು. ಅವರನ್ನು ಮರಳಿ ಎನ್‍ಸಿಪಿಗೆ ಸ್ವಾಗತಿಸುತ್ತೇನೆ. ಅವರ ಪರಿಣತಿಯನ್ನು ಮಹಾರಾಷ್ಟ್ರದ ಅಭ್ಯುದಯಕ್ಕೆ ಬಳಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ.

    Sharad Pawar

    ಮಹಾರಾಷ್ಟ್ರವು ಅಭಿವೃದ್ಧಿಗಾಗಿ ಅಥವಾ ಜನರನ್ನು ಒಟ್ಟುಗೂಡಿಸಲು ಕೆಲಸ ಮಾಡುವ ನಾಯಕತ್ವವನ್ನು ಹೊಂದಿತ್ತು. ಆದರೆ ಇಂದು ದೇಶದಲ್ಲಿ ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಮಹಾತ್ಮ ಗಾಂಧಿ, ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ದೇಶವನ್ನು ಕಟ್ಟಲು ಶ್ರಮಿಸಿದರು. ಆದರೆ ಪ್ರಸ್ತುತ ದೇಶದ ನಾಯಕತ್ವವು ಈ ಜನರನ್ನು ದೂಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಇಸ್ಲಾಂ ಸ್ಲೀಪರ್ ಸೆಲ್ ಕೆಲಸ ಮಾಡ್ತಿದೆ: ಚಕ್ರವರ್ತಿ ಸೂಲಿಬೆಲೆ

    ಇತ್ತೀಚೆಗಷ್ಟೇ ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಕೆಲ ಸಂಘಟನೆಗಳು ಫತ್ವಾ ಹೊರಡಿಸಿದ್ದು, ಅಲ್ಪಸಂಖ್ಯಾತ ಸಮುದಾಯದವರು ನಡೆಸುತ್ತಿರುವ ಅಂಗಡಿಗಳಲ್ಲಿ ಏನನ್ನೂ ಖರೀದಿಸದಂತೆ ಜನರಿಗೆ ಸೂಚಿಸಲಾಗಿತ್ತು. ಈ ರೀತಿಯ ಕಹಿಯ ಅಂಶಗಳನ್ನು ಹರಡಲಾಗುತ್ತಿದೆ. ಈ ರೀತಿ ಪಕ್ಷ ರಾಜ್ಯಗಳಲ್ಲಿ ಅಧಿಕಾರದ್ದರೆ, ಈ ದೇಶವು ಹೇಗೆ ಮುಂದುವರಿಯುತ್ತದೆ ಮತ್ತು ನಾವು ಹೇಗೆ ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತೇವೆ ಎಂಬುದು ಒಂದು ಪ್ರಶ್ನೆಯಾಗಿದೆ ಅಸಮಾಧಾನ ಹೊರಹಾಕಿದ್ದಾರೆ.

  • ಏಳೂರು ತೇರುಗಳು ಒಂದೆಡೆ ಸೇರಿ ಆಚರಣೆ ಮಾಡುವ ಪುರಾಣ ಪ್ರಸಿದ್ಧ ಜಾತ್ರೆ

    ಏಳೂರು ತೇರುಗಳು ಒಂದೆಡೆ ಸೇರಿ ಆಚರಣೆ ಮಾಡುವ ಪುರಾಣ ಪ್ರಸಿದ್ಧ ಜಾತ್ರೆ

    ಆನೇಕಲ್: ಎಲ್ಲೆಡೆ ಜಾತ್ರೆ ಎಂದರೆ ಸಣ್ಣ ರಥವನ್ನು ಸಿದ್ಧಪಡಿಸಿ ಆಚರಣೆ ಮಾಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಪುರಾಣ ಪ್ರಸಿದ್ಧ ದೇವಾಲಯಕ್ಕೆ ಹತ್ತಾರು ಗ್ರಾಮಗಳಿಂದ 120ಕ್ಕೂ ಅಡಿ ಎತ್ತರದ ಕುರ್ಜುಗಳ ಹೆಸರಿನ ತೆರನ್ನು ಎಳೆದು ತಂದು ಆಚರಣೆ ಮಾಡಲಾಗುತ್ತದೆ.

    ಹೌದು, ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹುಸ್ಕೂರು ಗ್ರಾಮದಲ್ಲಿ, ಗ್ರಾಮದ ದೇವತೆ ಮದ್ದೂರಮ್ಮ ಜಾತ್ರೆಗೆ ಸುತ್ತಮುತ್ತಲ ಹತ್ತಾರು ಊರುಗಳಿಂದ ಕಿಲೋಮೀಟರ್ ಗಟ್ಟಲೆ ರಸ್ತೆ ಹಾಗೂ ಗ್ರಾಮಗಳಲ್ಲಿ ಬೃಹತ್ ಗಾತ್ರದ ಕುರ್ಜುಗಳನ್ನು ತಿಂಗಳುಗಳ ಕಾಲ ಸಿದ್ಧಪಡಿಸಲಾಗುತ್ತದೆ. ಸಾವಿರಾರು ಜನ ಗ್ರಾಮದ ಭಕ್ತರು ಗ್ರಾಮದೇವತೆ ಮದ್ದೂರಮ್ಮನ ದೇವಾಲಯದ ಆವರಣಕ್ಕೆ ತೇರನ್ನು ಎಳೆದು ತರುತ್ತಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಜಾತ್ರೆ ನಡೆಯದೇ ಈ ಬಾರಿ ಗ್ರಾಮಸ್ಥರು ಹಾಗೂ ಭಕ್ತರು ಅದ್ಧೂರಿಯಾಗಿ ತೇರುಗಳನ್ನು ಸಿದ್ಧಪಡಿಸಿ ದೇವಾಲಯದ ಬಳಿ ಎಳೆದು ತಂದು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ

    ಇನ್ನು 800 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಹುಸ್ಕೂರು ಮದ್ದೂರಮ್ಮ ದೇವಾಲಯ ಜಾತ್ರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹೊರ ಭಾಗದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮದ್ದೂರಮ್ಮ ತಾಯಿಯನ್ನು ನಂಬಿ ಪೂಜೆ ಸಲ್ಲಿಸಿದರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಹಲವಾರು ವರ್ಷಗಳಿಂದ ಇಲ್ಲಿನ ಭಕ್ತಾದಿಗಳು ನಂಬಿಕೊಂಡು ಬಂದಿದ್ದಾರೆ. ಈ ಬಾರಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಪೆÇಲೀಸರು ವಿಶೇಷ ಭದ್ರತೆಯನ್ನು ಕೈಗೊಂಡಿದ್ದರು. ಜಾತ್ರಾ ಪ್ರಯುಕ್ತ ಅಲ್ಲಲೇ ಮಜ್ಜಿಗೆ ಪಾನಕ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೇವಾಲಯದಲ್ಲಿ ಮದ್ದೂರಮ್ಮ ತಾಯಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಹಾಗೂ ಅಲಂಕಾರವನ್ನು ಮಾಡಲಾಗಿತ್ತು. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಕೊರೊನಾ ಮಹಾಮಾರಿ ಕಾರಣದಿಂದ ಜನರು ಜಾತ್ರೆ, ಹಬ್ಬ ಹರಿದಿನಗಳಿಂದ ಕಳೆದ ಎರಡು ವರ್ಷಗಳಿಂದ ದೂರ ಇದ್ದರು. ಈ ಬಾರಿ ಮದ್ದುರಮ್ಮ ಜಾತ್ರೆಗೆ ಜನಸಾಗರವೇ ಹರಿದು ಬಂದಿದ್ದು, ಅದ್ಧೂರಿಯಾಗಿ ವಿಜೃಂಭಣೆಯಿಂದ ಜಾತ್ರೆ ನಡೆದಿದೆ.

  • ಘೋಷಣೆಯಲ್ಲೇ ಉಳಿದ ಹಾರಂಗಿ ಜಲಾಶಯದ ಹೂಳು ತೆಗೆಯುವ ಕ್ರಮ

    ಘೋಷಣೆಯಲ್ಲೇ ಉಳಿದ ಹಾರಂಗಿ ಜಲಾಶಯದ ಹೂಳು ತೆಗೆಯುವ ಕ್ರಮ

    ಮಡಿಕೇರಿ: ಕೊಡಗು ಜಿಲ್ಲೆ 2018ರಲ್ಲಿ ಪ್ರವಾಹ, ಭೂಕುಸಿತದಿಂದ ಅಕ್ಷರಶಃ ಕುಸಿದು ಹೋಗಿತ್ತು. ಅದರಲ್ಲೂ ಮಡಿಕೇರಿ ತಾಲೂಕಿನ ಹಟ್ಟಿಹೊಳೆಯಿಂದ ಗಾಳಿಬೀಡು ತನಕ ಒಂದರ್ಥದಲ್ಲಿ ಸರ್ವನಾಶವೇ ಆಗಿತ್ತು. ಅದಕ್ಕೆ ಮುಖ್ಯವಾಗಿ ಹಾರಂಗಿ ಜಲಾಶಯದಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದೇ ಕಾರಣ ಎಂದು ಅಂದಾಜಿಸಲಾಗಿತ್ತು.

    ಹೀಗಾಗಿಯೇ 2018-19ರ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹಾರಂಗಿ ಜಲಾಶಯದ ಹೂಳು ತೆಗೆಯುವುದಕ್ಕೆ 130 ಕೋಟಿ ರೂಪಾಯಿ ಘೋಷಿಸಿದ್ದರು. ಅದಾದ ಬಳಿಕ 2020 ರ ಮೇ, ಏಪ್ರಿಲ್ ತಿಂಗಳಿನಲ್ಲಿ ಬೋಟ್ ಮತ್ತು ಏರಿಯಲ್ ಸರ್ವೇ ಮಾಡಲಾಗಿತ್ತು. ಅದು ಬಿಟ್ಟರೆ ಇದುವರೆಗೆ ಹೂಳು ತೆಗೆಯುವುದಕ್ಕೆ ಕ್ರಮಕೈಗೊಳ್ಳಲೇ ಇಲ್ಲ. ಇದನ್ನೂ ಓದಿ:  ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

    ಹೌದು ಇದೀಗ ಮತ್ತೊಂದು ರಾಜ್ಯ ಬಜೆಟ್‍ನ ಹೊಸ್ತಿಲಿನಲ್ಲಿದ್ದೇವೆ. ಆದರೆ ಹೂಳು ತೆಗೆಯುವುದಕ್ಕಾಗಿ ಘೋಷಣೆಯಾಗಿ 3 ವರ್ಷಗಳೇ ಕಳೆದಿವೆ. ಈ ಬಾರಿಯೂ ಹೂಳು ತೆಗೆಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. 8.5 ಟಿಎಂಸಿ ಹಾರಂಗಿ ಜಲಾಶಯದಲ್ಲಿ ಈಗಲೂ 7 ಟಿಎಂಸಿ ಅಡಿ ನೀರು ಇದೆ. ಫೆಬ್ರವರಿ ತಿಂಗಳ ಕೊನೆಯಿಂದ ಕಾಲುವೆಗಳಿಗೆ ನೀರು ಹರಿಸಲಿದ್ದು, ಏಪ್ರಿಲ್ ಮೇ ತಿಂಗಳಿನಲ್ಲಿ ನೀರೇನೋ ಒಂದಷ್ಟು ಪ್ರಮಾಣದಲ್ಲಿ ಕಡಿಮೆ ಆಗಬಹುದು. ಆದರೆ ವಿಪರ್ಯಾಸವೆಂದರೆ ಹೂಳು ತೆಗೆಯುವುದಕ್ಕೆ ಸಂಬಂಧಿಸಿದಂತೆ ಇದುವರೆಗೆ ಟೆಂಡರ್ ಆಗಿಲ್ಲ.

    ಇನ್ನೂ ಒಂದು ವೇಳೆ ಟೆಂಡರ್ ಆಗಿ ಯಾರಾದರೂ ಹೂಳು ತೆಗೆಯುವುದಕ್ಕೆ ಮುಂದೆ ಬಂದರೂ ಅದು ಜೂನ್ ತಿಂಗಳಲ್ಲಿ ಆರಂಭವಾಗುವ ಮಳೆಗಾಲಕ್ಕೂ ಮುನ್ನ ಮುಗಿಯಲು ಸಾಧ್ಯವಿಲ್ಲ. ಏಕೆಂದರೆ 8.5 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ ಬರೋಬ್ಬರಿ ಎರಡು ಟಿಎಂಸಿ ಪ್ರಮಾಣದಷ್ಟು ಹೂಳು ತುಂಬಿದೆ. ಹೀಗಾಗಿ ಜಲಾಶಯದ ಸಾಮಥ್ರ್ಯ ಕಡಿಮೆಯಾಗಿದ್ದು, ತೀವ್ರ ಮಳೆಯಾದಾಗಲೆಲ್ಲ ಜಲಾಶಯಕ್ಕೆ ಹರಿದು ಬರುವ ಅಷ್ಟೂ ನೀರನ್ನು ನದಿಗೆ ಹರಿಸಲಾಗುತ್ತದೆ. ಹೀಗಾಗಿ ಕುಶಾಲನಗರ, ಕೂಡಿಗೆ ಕಣಿವೆ ಗ್ರಾಮಗಳ ಸುತ್ತಮುತ್ತ ಪ್ರತೀ ವರ್ಷ ಪ್ರವಾಹ ಸೃಷ್ಟಿಯಾಗುತ್ತಿದೆ. ಇದು ಈ ಬಾರಿಯೂ ಎದುರಾಗುವ ಎಲ್ಲಾ ಸಾಧ್ಯತೆಗಳಿವೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

    ಒಟ್ಟಿನಲ್ಲಿ ಜಲಾಶಯದಲ್ಲಿ ಭಾರೀ ಪ್ರಮಾಣದಲ್ಲಿ ತುಂಬಿರುವ ಹೂಳನ್ನು ತೆಗೆದು ಪ್ರವಾಹದ ಆತಂಕ ತಪ್ಪಿಸುವುದಕ್ಕಾಗಿ 130 ಕೋಟಿ ರೂಪಾಯಿಯನ್ನು ಬಜೆಟ್‍ನಲ್ಲಿಯೇ ಘೋಷಿಸಿ ಮೂರು ವರ್ಷಗಳಾಗಿದ್ದರೂ ಅದು ಘೋಷಣೆಯಾಗಿ ಉಳಿದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬೀದರ್‌ನಲ್ಲಿ 15ಕ್ಕೂ ಹೆಚ್ಚು ಮಂದಿ ಮೇಲೆ ಹುಚ್ಚು ನಾಯಿಗಳ ದಾಳಿ

    ಬೀದರ್‌ನಲ್ಲಿ 15ಕ್ಕೂ ಹೆಚ್ಚು ಮಂದಿ ಮೇಲೆ ಹುಚ್ಚು ನಾಯಿಗಳ ದಾಳಿ

    ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಹುಚ್ಚು ನಾಯಿಗಳ ಹಾವಳಿ ವಿಪರೀತವಾಗಿದ್ದು, ಮಕ್ಕಳು, ಯುವಕರು, ವಯೋವೃದ್ಧರು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಮೇಲೆ ದಾಳಿ ನಡೆಸಿವೆ. ಹುಚ್ಚು ನಾಯಿಗಳ ದಾಳಿಗೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ನಗರದ ಓಲ್ಡ್ ಸಿಟಿಯಲ್ಲಿ ಮಕ್ಕಳು, ಯುವಕರು ಹಾಗೂ ವಯೋವೃದ್ಧರು ಸೇರಿದಂತೆ 15ಕ್ಕೂ ಜನಕ್ಕೆ ಹುಚ್ಚು ನಾಯಿಗಳು ಕಡಿದು ಗಂಭೀರ ಗಾಯಗಳಾಗಿವೆ. ಮಕ್ಕಳು, ಯುವಕರು ಹಾಗೂ ವಯೋವೃದ್ಧರು ಸೇರಿದಂತೆ 15ಕ್ಕೂ ಗಾಯಾಳುಗಳು ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಗಳನ್ನು ಕೊಂದು, ಆತ್ಮಹತ್ಯೆಗೆ ಶರಣಾದ ತಂದೆ

    ರಾತ್ರಿ, ಹಗಲು ಎನ್ನದೇ ಮಕ್ಕಳು, ಯುವಕರು, ಮಹಿಳೆಯರು ಹಾಗೂ ವಯೋವೃದ್ಧರ ಮೇಲೆ ಹುಚ್ಚು ನಾಯಿಗಳು ದಾಳಿ ಮಾಡುತ್ತಿವೆ. ಹುಚ್ಚು ನಾಯಿಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ನಗರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹರ್ಷ ಕೊಲೆ ಕೇಸ್ ತನಿಖೆ ಪೂರ್ಣಗೊಳಿಸಿ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ: ಮುತಾಲಿಕ್

  • ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ – ಇಂದಿನಿಂದ ಆಟೋ ದರ ಕಾಸ್ಟ್ಲಿ

    ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ – ಇಂದಿನಿಂದ ಆಟೋ ದರ ಕಾಸ್ಟ್ಲಿ

    ಬೆಂಗಳೂರು: ಇಂದಿನಿಂದ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆಯಾಗಿದೆ.

    ಪೆಟ್ರೋಲ್, ಡಿಸೇಲ್, ತರಕಾರಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನೆಲ್ಲೇ ಇದೀಗ ಜನ ಸಾಮಾನ್ಯರಿಗೆ ಆಟೋ ದರ ಏರಿಕೆ ಬಿಸಿ ತಟ್ಟಿದೆ. ಈ ಹಿಂದೆ 2013 ರಲ್ಲಿ ಏರಿಕೆಯಾಗಿದ್ದ ಆಟೋ ಪ್ರಯಾಣ ದರ 8 ವರ್ಷದ ಬಳಿಕ ಇಂದಿನಿಂದ ಪರಿಷ್ಕೃತ ದರ ಜಾರಿಗೆಯಾಗಿದೆ.

    ಕೊರೊನಾ ಹೊಡೆತದಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕುರಿತಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ದರ ಏರಿಕೆ ಮಾಡುವಂತೆ ಆಟೋ ಸಂಘಟನೆಗಳು ಮನವಿ ಮಾಡಿದ್ದವು. ಅದರಂತೆ ಆಟೋ ಚಾಲಕರ ಮನವಿಗೆ ಸ್ಪಂದಿಸಿರುವ ಜಿಲ್ಲಾಡಳಿತ ಇಂದಿನಿಂದ ಆಟೋ ಪ್ರಯಾಣ ದರ ಏರಿಕೆಗೊಳಿಸಲು ಅನುಮತಿ ನೀಡಿದ್ದಾರೆ. ಆದರೆ ಆಟೋವನ್ನೇ ಅವಲಂಬಿಸಿದ್ದ ಜನಸಾಮಾನ್ಯರಿಗೆ ಹೊರೆಯಾಗಿದ್ದರೆ, ಮತ್ತೊಂದೆಡೆ ಇದರಿಂದ ಆಟೋ ಚಾಲಕರು ಮಾತ್ರ ಸಂತಸಗೊಂಡಿದ್ದಾರೆ. ಇದನ್ನೂ ಓದಿ: ಇನ್ನೂ ಕಾಯಲು ಸಿದ್ಧವಿಲ್ಲ: ಮಲ್ಯಗೆ ಶಿಕ್ಷೆ ವಿಧಿಸಲು ಸಿದ್ಧ ಎಂದು ಸುಪ್ರೀಂ

    ಇಂದಿನಿಂದ ಜಾರಿ ಆಗಲಿರುವ ಪರಿಷ್ಕೃತ ಆಟೋ ದರ:
    * ಮಿನಿಮಾಮ್ ಚಾರ್ಜ್ 25 ರಿಂದ 30ಕ್ಕೆ ಏರಿಕೆ.
    * ಕಿ.ಮಿ ಗೆ 13 ರಿಂದ 15 ರೂಗೆ ಏರಿಕೆ.
    * ಮೊದಲ 2 ಕಿಮೀಗೆ 30 ರೂಪಾಯಿ ನಿಗದಿ..
    * ನಂತರದ ಪ್ರತಿ ಕಿಮೀ ಗೆ 15 ರೂಪಾಯಿ
    * ಮೊದಲ ಐದು ನಿಮಿಷ ಕಾಯುವಿಕೆ ಉಚಿತ
    * ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ.
    * 20 ಕೆ.ಜಿ ವರೆಗೆ ಲಗೇಜ್ ಸಾಗಣೆ ಉಚಿತ
    * 21 ಕೆ.ಜಿಯಿಂದ 50 ಕೆ.ಜಿ ವರೆಗೆ 5ರೂ. ದರ ನಿಗದಿ
    * ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15) ಪಡೆಯಲು ಅವಕಾಶ. ಇದನ್ನೂ ಓದಿ: ಲೈವ್ ವೇಳೆ ವರದಿಗಾರ್ತಿಗೆ ಕಿರುಕುಳ, ಕಪಾಳಮೋಕ್ಷ

    ದರ ಏರಿಕೆಗೆ ಕಾರಣಗಳೇನು?
    * ಇಂಧನ ಗ್ಯಾಸ್ ಬೆಲೆ ಏರಿಕೆಯಾಗಿರುವುದು.
    * ಆಟೋದ ಬಿಡಿ ಭಾಗಗಳ ಬೆಲೆ ಏರಿಕೆ.
    * ಆರ್‍ಟಿಓ ದರ, ಇನ್ಸುರೆನ್ಸ್ ಬೆಲೆ ದುಪ್ಪಟ್ಟು ಆಗಿರುವುದು.
    * ಆರ್‍ಟಿಓ ಫೈನ್ ಜಾಸ್ತಿ ಆಗಿರುವುದು.
    * ಕಳೆದ 8 ವರ್ಷಗಳಂದ ಆಟೋ ಪ್ರಯಾಣ ದರ ಏರಿಕೆಯಾಗದಿರುವುದು.

  • ಕಡಿಮೆ ಆಹಾರ ತಿನ್ನಿ: ಕಿಮ್ ಜಾಂಗ್ ಉನ್ ಮನವಿ

    ಕಡಿಮೆ ಆಹಾರ ತಿನ್ನಿ: ಕಿಮ್ ಜಾಂಗ್ ಉನ್ ಮನವಿ

    ಪ್ಯಾನ್‍ಯಾಂಗ್: ಆದೇಶಗಳನ್ನು ಹೊರಡಿಸುವ ಮೂಲಕ ಸುದ್ದಿಯಾಗುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಇದೀಗ ಮತ್ತೊಂದು ಹೊಸ ಆದೇಶ ಹೊರಡಿಸಿದ್ದಾರೆ. ಕಡಿಮೆ ಆಹಾರ ತಿನ್ನಿ ಎಂದು ಉತ್ತರ ಕೊರಿಯಾದ ಜನರಿಗೆ ಸಂದೇಶವನ್ನು ನೀಡಿದ್ದಾರೆ.

    ತೀವ್ರವಾದ ಆಹಾರ ಬಿಕ್ಕಟ್ಟು ಎದುರಾಗಿದೆ. ಜನರು 2025 ರವರೆಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವಂತೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಮನವಿ ಮಾಡಿರುವುದು ಸಖತ್ ಸುದ್ದಿಯಾಗುತ್ತದೆ. ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು ಸಮಸ್ಯೆ ಎದರುರಾಗುತ್ತಿರುವುದು ಹೊಸತೇನಲ್ಲ. ಈ ಹಿಂದೆಯೂ ಹಲವು ಬಾರಿ ಆಹಾರ ಬಿಕ್ಕಟ್ಟನ್ನು ಎದುರಿಸಿದೆ. 1990ರಲ್ಲಿ ಉಂಟಾಗಿದ್ದ ಆಹಾರದ ಕೊರತೆಯಿಂದಾಗಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ:  ವಿಶ್ವಕ್ಕೆ ಕೊರೊನಾ ಬಂದರೂ ಉತ್ತರ ಕೊರಿಯಾಗೆ ಬಂದಿಲ್ಲ- ಪ್ರಜೆಗಳಿಗೆ ಕಿಮ್‌ ಧನ್ಯವಾದ

    2025ರೊಳಗೆ ಚೀನಾ ಜೊತೆಗಿನ ಗಡಿಯನ್ನು ಪುನಾರಂಭಿಸುವವರೆಗೆ ದೇಶದ ಜನರು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕೆಂದು ಕಿಮ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಉತ್ತರ ಕೊರಿಯಾದ ಜನರಿಗೆ ಈಗಾಗಲೇ ಆಹಾರ ಕೊರತೆ ಎದುರಾಗಿದೆ. ಇನ್ನೂ ಮೂರು ವರ್ಷಗಳ ಕಾಲ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಅವರು ಹೇಳಿದ್ದಾರೆ. ಇದನ್ನೂ ಓದಿ:  ಭಾರತಕ್ಕೂ ಮೊದಲ ಕೋವಿಡ್ ಗುಳಿಗೆ ಭಾಗ್ಯ

    ಆಹಾರ ಬಿಕ್ಕಟ್ಟಿಗೆ ಕಾರಣವೇನು?: ಕೊರಿನಾ ದಿಂದ ತತ್ತರಿಸಿರುವ ಕೊರಿಯಾಗೆ ಇತ್ತೀಚೆಗೆ ಸುರಿದ ಭಾರಿ ಮಳೆಯು ದೊಡ್ಡ ಹೊಡೆತ ನೀಡಿದೆ. ಅತಿವೃಷ್ಟಿಯಿಂದಾಗಿ ಬೆಳೆಗಳು ನೆಲಕಚ್ಚಿದ್ದು, ಆಹಾರ ಬಿಕ್ಕಟ್ಟಿಗೆ ಕಾರಣವಾಗಿದೆ. ಹಣಕಾಸಿನ ಕೊರತೆಯಿಂದಾಗಿ ಹೊರ ದೇಶಗಳಿಂದಲೂ ಆಹಾರ ಸಾಮಗ್ರಿಗಳ ಪೂರೈಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಾಗಿದೆ.