Tag: ಜನಪ್ರತಿನಿಧಿ

  • ವಿಮಾನಗಳ ಮುಖಾಮುಖಿ ಡಿಕ್ಕಿ – ಓರ್ವ ಜನಪ್ರತಿನಿಧಿ ಸೇರಿ 7 ಜನ ಸಾವು

    ವಿಮಾನಗಳ ಮುಖಾಮುಖಿ ಡಿಕ್ಕಿ – ಓರ್ವ ಜನಪ್ರತಿನಿಧಿ ಸೇರಿ 7 ಜನ ಸಾವು

    ಅಲಾಸ್ಕಾ: ಅಮೆರಿಕದ ಆಂಕಾರೋಜ್‍ನಲ್ಲಿ ಶುಕ್ರವಾರ ಹಾರಾಡುತ್ತಿದ್ದಾಗ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬರು ಜನಪ್ರತಿನಿಧಿಯೊಂದಿಗೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲಾಸ್ಕಾ ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ.

    ಮೃತರನ್ನು ಒಂದು ವಿಮಾನದ ಪೈಲಟ್ ಗ್ರೆಗೊರಿ ಬೆಲ್ (67), ಮಾರ್ಗದರ್ಶಿ ಡೇವಿಡ್ ರೋಜರ್ಸ್ (40) ಮತ್ತು ದಕ್ಷಿಣ ಕೆರೊಲಿನಾ ಸಂದರ್ಶಕರಾದ ಕ್ಯಾಲೆಬ್ ಹಲ್ಸಿ (26), ಹೀದರ್ ಹಲ್ಸಿ (25) ಮ್ಯಾಕೆ ಹಲ್ಸಿ (24) ಮತ್ತು ಕಸ್ರ್ಟಿನ್ ರೈಟ್ (23) ಎಂದು ಗುರುತಿಸಲಾಗಿದೆ. ಇನ್ನೊಂದು ವಿಮಾನದಲ್ಲಿ ರಾಜ್ಯ ಪ್ರತಿನಿಧಿ ಗ್ಯಾರಿ ನಾಪ್ (67) ಒಬ್ಬರೇ ಇದ್ದರು ಎಂದು ತಿಳಿದು ಬಂದಿದೆ.

    ಕೆನಾಯ್ ಪೆನಿನ್ಸುಲಾದ ನಗರದ ಸೋಲ್ಡೊಟ್ನಾ ವಿಮಾನ ನಿಲ್ದಾಣದ ಬಳಿ ಈ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಎರಡು ವಿಮಾನಗಳಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ. ಇದೇ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ರಾಜ್ಯ ಪ್ರತಿನಿಧಿ ಗ್ಯಾರಿ ನಾಪ್ ಅವರು ಒಂದು ವಿಮಾನದಲ್ಲಿ ಇದ್ದರು ಎಂದು ಹೇಳಲಾಗಿದೆ. ಇನ್ನೊಂದು ವಿಮಾನದಲ್ಲಿ ದಕ್ಷಿಣ ಕೆರೊಲಿನಾ ನಾಲ್ಕು ಪ್ರವಾಸಿಗರು, ಕಾನ್ಸಾಸ್‍ನ ಮಾರ್ಗದರ್ಶಿ ಮತ್ತು ಸೋಲ್ಡೊಟ್ನಾದ ಪೈಲಟ್ ಇದ್ದರು ಎಂದು ಸೈನಿಕರು ತಿಳಿಸಿದ್ದಾರೆ.

    ಡಿಕ್ಕಿಯಾದ ಎರಡು ವಿಮಾನಗಳು ಅವಶೇಷ ಬಂದು ಕೆನಾಯ್ ಪೆನಿನ್ಸುಲಾದ ನಗರದ ಹೆದ್ದಾರಿಯಲ್ಲಿ ಬಿದ್ದವೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅಪಘಾತವಾದ ವಿಮಾನಗಳಲ್ಲಿ ಒಂದನ್ನು ಡಿ ಹ್ಯಾವಿಲ್ಯಾಂಡ್ ಡಿಹೆಚ್‍ಸಿ-2 ಬೀವರ್ ಎಂದು ಗುರುತಿಸಿದೆ. ಅಪಘಾತದ ಬಗ್ಗೆ ಎಫ್‍ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ನಡೆಸುತ್ತಿದೆ. ರಾಜ್ಯ ಪ್ರತಿನಿಧಿ ಗ್ಯಾರಿ ನಾಪ್ ಅವರ ಸಾವಿಗೆ ಅವರ ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.

    ಅಲಾಸ್ಕಾದಲ್ಲಿ 2019ರ ಮೇ ತಿಂಗಳಿನಲ್ಲಿ ಎರಡು ವಿಮಾನಗಳ ಮಧ್ಯೆ ಡಿಕ್ಕಿ ಸಂಭವಿಸಿತ್ತು. ಈ ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದರು.

  • ಆಸ್ತಿ ವಿವರ ಸಲ್ಲಿಸಲು 45 ಐಪಿಎಸ್ ಅಧಿಕಾರಿಗಳ ಮೊಂಡಾಟ!

    ಆಸ್ತಿ ವಿವರ ಸಲ್ಲಿಸಲು 45 ಐಪಿಎಸ್ ಅಧಿಕಾರಿಗಳ ಮೊಂಡಾಟ!

    ಬೆಂಗಳೂರು: ಆಸ್ತಿ ವಿವರ ಸಲ್ಲಿಸಲು ಐಪಿಎಸ್ ಅಧಿಕಾರಿಗಳು ಜನಪ್ರತಿನಿಧಿಗಳಂತೆ ಮೊಂಡಾಟ ಮಾಡುತ್ತಿದ್ದಾರೆ. ಇದುವರೆಗೂ ರಾಜ್ಯದ ಬರೋಬ್ಬರಿ 45 ಐಪಿಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಿಲ್ಲ.

    2018ರ ಆಸ್ತಿ ವಿವರ ಈ ವರ್ಷ ಜನವರಿ ಅಂತ್ಯದೊಳಗೆ ಸಲ್ಲಿಸಬೇಕಾಗಿತ್ತು. ಆದರೆ ಇದುವರೆಗೂ 45 ಐಪಿಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಿಲ್ಲ.

    ಐಪಿಎಸ್ ಅಧಿಕಾರಿಗಳ ಮೊಂಡಾಟಕ್ಕೆ ಬೇಸತ್ತು ರಾಜ್ಯ ಒಳಡಾಳಿತ ಇಲಾಖೆಗಳ ಕಾರ್ಯದರ್ಶಿ ರಜನೀಶ್ ಗೋಯಲ್ ಡಿಜಿ ಐಜಿಪಿಗೆ ಪತ್ರ ಬರೆದಿದ್ದಾರೆ. ಪ್ರತಿ ವರ್ಷ ಐಪಿಎಸ್ ಅಧಿಕಾರಿಗಳು ತಮ್ಮ ಹಾಗೂ ಕುಟುಂಬದ ಆಸ್ತಿ ವಿವರ ಸಲ್ಲಿಸಬೇಕು ಎನ್ನುವ ನಿಯಮವಿದೆ.

    ಆಸ್ತಿ ವಿವರ ಸಲ್ಲಿಸಲು ಆನ್ ಲೈನ್ ವ್ಯವಸ್ಥೆ ಮಾಡಿದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದಾರೆ. ಚಿರಾಸ್ತಿ ಹಾಗೂ ಸ್ಥಿರಾಸ್ತಿ ವಿವರ ಸಲ್ಲಿಕೆ ಮಾಡಲು ಐಪಿಎಸ್ ಅಧಿಕಾರಿಗಳ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಡಿಜಿಪಿಗೆ ಪತ್ರ ಬರೆದು ತ್ವರಿತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

  • ದಯವಿಟ್ಟು ಮತ ಕೇಳಲು ಬರಬೇಡಿ – ಸ್ಮಾರ್ಟ್ ಸಿಟಿ ದಾವಣಗೆರೆ ಜನತೆಯಿಂದ ಅಭಿಯಾನ

    ದಯವಿಟ್ಟು ಮತ ಕೇಳಲು ಬರಬೇಡಿ – ಸ್ಮಾರ್ಟ್ ಸಿಟಿ ದಾವಣಗೆರೆ ಜನತೆಯಿಂದ ಅಭಿಯಾನ

    ದಾವಣಗೆರೆ: ಮೂಲ ಸೌಕರ್ಯ ಕಲ್ಪಿಸದ ಮಹಾನಗರ ಪಾಲಿಕೆ ವಿರುದ್ಧ ನಗರದ ಸ್ಮಾರ್ಟ್ ಸಿಟಿಯಲ್ಲಿನ ನಿವಾಸಿಗಳು ಕೋಪಗೊಂಡಿದ್ದು, ದಯವಿಟ್ಟು ಮತ ಕೇಳಲು ಬರಬೇಡಿ ಎಂದು ಮತದಾನ ಬಹಿಷ್ಕಾರ ಅಭಿಯಾನ ನಡೆಸುತ್ತಿದ್ದಾರೆ.

    ಮಹಾನಗರ ಪಾಲಿಕೆಯ 18 ನೇ ವಾರ್ಡ್ ವಿನಾಯಕ ನಗರದ “ಎ” ಬ್ಲಾಕ್ ನಲ್ಲಿ 200 ಕ್ಕೂ ಹೆಚ್ಚು ಮನೆಗಳಿವೆ. ಅದರಲ್ಲಿ 100 ಕ್ಕೂ ಹೆಚ್ಚು ಮನೆಗಳ ಮುಂದೆ ಜನ ಮತದಾನ ಬಹಿಷ್ಕಾರದ ಪೋಸ್ಟರ್ ಹಾಕಿದ್ದಾರೆ.

    20 ದಿನಗಳಿಗೊಮ್ಮೆ ಕುಡಿಯೋಕೆ ನೀರು ಬಿಡ್ತಾರೆ. ಅಲ್ಲದೇ ರಾತ್ರಿ ಬೀದಿ ದೀಪದ ವ್ಯವಸ್ಥೆ ಇಲ್ಲ, ರಸ್ತೆ ಗುಂಡಿಮಯವಾಗಿವೆ. ಹಾಗೂ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿದೆ. ಸಮಸ್ಯೆಯ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೆಲಸ ಆಗದ ಹಿನ್ನೆಲೆಯಲ್ಲಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ನಿವಾಸಿಗಳು ಹೇಳಿದ್ದಾರೆ.

    ಮೂಲ ಸೌಕರ್ಯಕ್ಕೆ ಆಗ್ರಹಿಸಿ ಸತತ ಮೂರು ವರ್ಷಗಳಿಂದ ಹೋರಾಟ ನಡೆಸಿದರೂ ಅಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಸಮಸ್ಯೆ ಆಲಿಸದೇ ಅತ್ತ ತಿರುಗಿಯೂ ಕೂಡ ನೋಡುತ್ತಿಲ್ಲ. ಹಾಗಾಗಿ ಮೂಲ ಸೌಕರ್ಯ ಒದಗಿಸದ ಹೊರತು ಮತದಾನ ಮಾಡೋದಿಲ್ಲ ಅಂತ ಪಟ್ಟು ಹಿಡಿದು ನಿವಾಸಿಗಳು ಮತದಾನ ಬಹಿಷ್ಕಾರ ಅಭಿಯಾನವನ್ನು ಕೈಗೊಂಡಿದ್ದಾರೆ.

  • ತುಮಕೂರಲ್ಲಿ ಶಾಸಕ ಸುರೇಶ್ ಬಾಬು ಸಹೋದರನಿಂದ ಗೂಂಡಾ ವರ್ತನೆ

    ತುಮಕೂರಲ್ಲಿ ಶಾಸಕ ಸುರೇಶ್ ಬಾಬು ಸಹೋದರನಿಂದ ಗೂಂಡಾ ವರ್ತನೆ

    ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರ ಸಹೋದರ ಟಿ.ಸಿ.ದಯಾನಂದ ಗೂಂಡಾ ವರ್ತನೆ ತೋರಿದ್ದಾರೆ.

    ಪುರಸಭೆಯ ಹಾಲಿ ಸದಸ್ಯ ಮಾಜಿ ಅಧ್ಯಕ್ಷನೂ ಆಗಿರುವ ದಯಾನಂದ, ಪುರಸಭೆಗೆ ಮಾಹಿತಿ ಕೇಳಿ ಬಂದ ಮಂಜುನಾಥ್ ಎಂಬ ವಕೀಲರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕಾರ್ಯಕ್ರಮವೊಂದರ ಪ್ಲೆಕ್ಸ್ ಕಟ್ಟುವ ಉದ್ದೇಶದಿಂದ ಶುಲ್ಕ ಪಾವತಿಸಲು ಮಂಜುನಾಥ್ ಪುರಸಭೆಗೆ ಬಂದಿದ್ರು. ಮಂಜುನಾಥ್ ಕಚೇರಿ ಒಳಗೆ ಇದ್ದುದ್ದನ್ನು ಕಂಡ ದಯಾನಂದ `ಒಳಗೆ ಬರಲು ನೀನ್ಯಾರೋ, ಮಾಹಿತಿ ಬೇಕಾದ್ರೆ ಹೊರಗಿನಿಂದ ಕೇಳು’ ಎಂದು ಕೊರಳಪಟ್ಟಿ ಹಿಡಿದು ಹೊರಹಾಕಿದ್ದಾರೆ. ಅಲ್ಲದೆ ಕೆನ್ನೆಗೆ, ಹೊಟ್ಟೆಗೆ ಹೊಡೆದಿದ್ದಾನೆ.

    ವಕೀಲರ ಮೇಲೆ ದಯಾನಂದ ನಡೆಸಿದ ದರ್ಪದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಮಂಜುನಾಥನ ತಂದೆ ಕೂಡಾ ಪುರಸಭೆ ಸದಸ್ಯರಾಗಿದ್ದು, ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ರಾಜಕೀಯ ದ್ವೇಷದಿಂದ ಕೂಡ ದಯಾನಂದ ಮಂಜುನಾಥನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

    ಈ ಸಂಬಂಧ ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಉದ್ಘಾಟನೆಯಾದ ಎರಡೇ ತಿಂಗ್ಳಲ್ಲಿ ಅಂಡರ್‍ಪಾಸ್‍ನಲ್ಲಿ ನೀರು ಲೀಕೇಜ್: ಜಲಮಂಡಳಿ ವಿರುದ್ಧ ಸ್ಥಳೀಯರ ಆಕ್ರೋಶ

    ಉದ್ಘಾಟನೆಯಾದ ಎರಡೇ ತಿಂಗ್ಳಲ್ಲಿ ಅಂಡರ್‍ಪಾಸ್‍ನಲ್ಲಿ ನೀರು ಲೀಕೇಜ್: ಜಲಮಂಡಳಿ ವಿರುದ್ಧ ಸ್ಥಳೀಯರ ಆಕ್ರೋಶ

    ಬೆಂಗಳೂರು: ಅಂಡರ್ ಪಾಸ್ ಉದ್ಘಾಟನೆ ಆಗಿ ಕೇವಲ ಎರಡು ತಿಂಗಳಾಗಿದೆ. ಆದರೆ ರಸ್ತೆಯಲ್ಲಿ ಈಗ ನೀರು ಲಿಕೇಜ್ ಆಗುತ್ತಿದ್ದೆ. ಅದು ಜಲಮಂಡಳಿಯವರ ನಿರ್ಲಕ್ಷ್ಯ ಅಂತ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

    ಮಾಗಡಿ ರೋಡ್ ಹೌಸಿಂಗ್ ಬೋರ್ಡ್ ಬಸ್ ಸ್ಟಾಪ್ ಅಂಡರ್‍ಪಾಸ್‍ನಲ್ಲಿ ರಸ್ತೆಯಿಂದ ನೀರು ಹೊರ ಚಿಮ್ಮುತಿದೆ. ವಾಟರ್ ಪೈಪ್ ಲೈನ್ ಡ್ಯಾಮೇಜ್ ಆಗಿ ರಸ್ತೆ ತುಂಬೆಲ್ಲ ನೀರು ಹರಿಯುತ್ತಿದೆ.

    ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಉದಾಹರಣೆ ಈ ಅಂಡರ್ ಪಾಸ್ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ಉದ್ಘಾಟನೆ ಆಗಿರೋ ಈ ಅಂಡರ್ ಪಾಸ್ ಎಷ್ಟು ಕಳಪೆಯಾಗಿದೆ ಅಂದರೆ 15 ದಿನಗಳಿಂದ ಇಲ್ಲಿ ನೀರು ಹರಿಯಲು ಶುರುವಾಗಿದೆ. ನಾವು ಮೊದಲಿಗೆ ಮಳೆ ನೀರಿರಬಹುದು ಅಂದುಕೊಂಡಿದ್ದೆವು. ಆದರೆ ಇದು ಏನೋ ಡ್ಯಾಮೇಜಿನಿಂದಲೇ ನೀರು ಲೀಕ್ ಆಗುತ್ತಿದ್ದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಈ ವಿಷಯ ನಿಮ್ಮ ಗಮನಕ್ಕೆ ಬಂತಾ ಎಂದು ಸ್ಥಳೀಯ ಕಾರ್ಪೋರೇಟರ್ ಉಮೇಶ್ ಶೆಟ್ಟಿ ಅವರನ್ನು ಕೇಳಿದ್ರೆ, ಅವರು ಬಿಡಬ್ಲ್ಯೂಎಸ್‍ಎಸ್‍ಬಿ ಅಧಿಕಾರಿಗಳಿಗೆ ಈ ಕಾಮಗಾರಿ ಬಗ್ಗೆ ಮೊದಲೇ ಹೇಳಿದ್ದೆವು ಇಲ್ಲಿ ನೀರಿನ ಪೈಪ್ ಲೈನ್ ಇದೆ ಎಂದು. ಆದರೆ ಅವರು ಸಿಎ ಬರ್ತಾರೆ ಅಂತ ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

    15 ದಿನಗಳಿಂದ ಸಮಸ್ಯೆ ಇದ್ದರೂ ಸಂಬಂಧಪಟ್ಟವರು ಯಾರೂ ಇದರ ಬಗ್ಗೆ ಗಮನ ಹರಿಸಿಲ್ಲ. ಎರಡು ತಿಂಗಳಲ್ಲೇ ಈ ಮಟ್ಟಿಗೆ ಹಾಳಾದರೆ ಮತ್ತೆ ಟೆಂಡರ್, ಅದೂ ಇದೂ ಅಂತ ಹಣ ತಿನ್ನುತ್ತಾರೆ. ಯಾವ ದುಡ್ಡು ಕೊಡದೇ ಸಮಸ್ಯೆ ಬಗೆಹರಿಸಬೇಕು ಅಂತ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.