Tag: ಜನನ

  • ಹೆಣ್ಣು ಮಗುವಿನ ತಂದೆಯಾದ ಸಮೀರ್ ಆಚಾರ್ಯ: ತುಳಜಾ ಭವಾನಿ ಬಂದ್ಳು ಎಂದ ದಂಪತಿ

    ಹೆಣ್ಣು ಮಗುವಿನ ತಂದೆಯಾದ ಸಮೀರ್ ಆಚಾರ್ಯ: ತುಳಜಾ ಭವಾನಿ ಬಂದ್ಳು ಎಂದ ದಂಪತಿ

    ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಮನೆಗೆ ಮಗಳು ಬಂದ ಖುಷಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮನೆಗೆ ತುಳಜಾ ಭವಾನಿ ಬಂದಳು ಎಂದು ಸಂಭ್ರಮಿಸಿದ್ದಾರೆ. ಜೀವನದ ನವ ಅಧ್ಯಾಯದ ಕುರಿತು ಶ್ರಾವಣಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದ ಈ ದಂಪತಿ ರಾಜಾ ರಾಣಿ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದರು. ಅಲ್ಲದೇ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದ ಕನ್ನಡ ಕೋಟ್ಯಧಿಪತಿಯಲ್ಲೂ ಸಮೀರ್ ಆಚಾರ್ಯ ಭಾಗಿಯಾಗಿದ್ದರು. ರಾಜಾ ರಾಣಿ ರಿಯಾಲಿಟಿ ಶೋ ವೇಳೆ ತಮಗೆ ಮಿಸ್ ಕ್ಯಾರೇಜ್ ಆಗಿರುವ ಕುರಿತು ಶ್ರಾವಣಿ ಮಾತಾಡಿ ಭಾವುಕರಾಗಿದ್ದರು. ಇದನ್ನೂ ಓದಿ: ಉಡುಪಿ ಕೃಷ್ಣನ ದರ್ಶನ ಪಡೆದ ಸಿಂಹಪ್ರಿಯ ಜೋಡಿ

    ಮಗುವಿನ ಕಾಲುಗಳನ್ನು ತೋರಿಸುವಂತಹ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಶ್ರಾವಣಿ, ತಮ್ಮ ಮೊದಲ ಮಗುವಿಗೆ ನಿಮ್ಮೆಲ್ಲ ಆಶೀರ್ವಾದವಿರಲಿ ಎಂದು ಕೇಳಿದ್ದಾರೆ. ಈ ದಂಪತಿಯ ಮಗುವಿಗೆ ಶುಭವಾಗಲಿ ಎಂದು ಹಲವರು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿರ್ದೇಶಕ ಸ್ಮೈಲ್ ಶ್ರೀನು ನಿರ್ಮಾಪಕ: ‘ಜನನ’ ಚಿತ್ರದ ಮೂಲಕ ಸಾಮಾಜಿಕ ಸಂದೇಶ

    ನಿರ್ದೇಶಕ ಸ್ಮೈಲ್ ಶ್ರೀನು ನಿರ್ಮಾಪಕ: ‘ಜನನ’ ಚಿತ್ರದ ಮೂಲಕ ಸಾಮಾಜಿಕ ಸಂದೇಶ

    ನಿರ್ದೇಶಕ ಸ್ಮೈಲ್ ಶ್ರೀನು ಈಗ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದು, ಅದರ ಮೂಲಕ ಉತ್ತಮ ಚಲನಚಿತ್ರಗಳನ್ನು ನಿರ್ಮಿಸುವ ಗುರಿ ಹೊಂದಿದ್ದಾರೆ. ತಮ್ಮದೇ ಸ್ಮೈಲ್ ಜೋಹರ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಈಗ  ‘ಜನನ’ ಎಂಬ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ತಾವೇ ನಿರ್ದೇಶಕರಾಗಿದ್ದರೂ ಮತ್ತೊಬ್ಬ ಹೊಸ ನಿರ್ದೇಶಕನಿಗೆ ಅವಕಾಶ ಕೊಟ್ಟಿದ್ದಾರೆ.

    ಈಗಾಗಲೇ ತೂಫಾನ್, ಬಳ್ಳಾರಿ ದರ್ಬಾರ್, ಓ ಮೈ ಲವ್ ನಂಥ ವಿಭಿನ್ನ ಶೈಲಿಯ ಸಿನಿಮಾಗಳನ್ನು ನಿರ್ದೇಶಿಸಿರುವ ಸ್ಮೈಲ್  ಶ್ರೀನು, ಅವರೀಗ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಬರಲಿರುವ ವಿಧಾನಸಭಾ ಚುನಾವಣೆಗೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನಿರ್ಮಾಪಕರಾಗಿ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು), ಅವರು ತಮ್ಮ ಚಿತ್ರರಂಗದ ನಂಟನ್ನೂ ಮುಂದುವರಿಸಿದ್ದಾರೆ.  ಈಗಿನ ಸಂದರ್ಭದಲ್ಲಿ ಪ್ರಕೃತಿಯ ಬಗ್ಗೆ ಜನರಲ್ಲಿ ಕಾಳಜಿ ಕಮ್ಮಿಯಾಗುತ್ತಿದೆ. ನಾನೇ ಗ್ರೇಟ್ ಅಂತ ಮಾನವ ಬೀಗುತ್ತಿದ್ದಾನೆ. ಒಮ್ಮೆ ಆ ಪ್ರಕೃತಿ ಏನಾದರೂ ಮುನಿಸಿಕೊಂಡರೆ ನಮ್ಮಗತಿ ಏನಾಗಬಹುದು.  ನಮಗೆಲ್ಲಾ ಏನೇನು ತೊಂದರೆಯಾಗಬಹುದು ಎಂಬುದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಅಲ್ಲದೆ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗದಿದ್ದರೆ ಅವರ ಜೀವನ ಯಾವರೀತಿ ಹಾಳಾಗುತ್ತೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ  ಚಿತ್ರೀಕರಣ ನಡೆಸಲಾಗಿರುವ ಜನನ ಚಿತ್ರವು ಜನವರಿಯಲ್ಲಿ ತೆರೆಕಾಣಲಿದೆ.

    ಸಿನಿಮಾ ನಂಟು ಜೊತೆಯಲ್ಲಿರಬೇಕೆಂಬ ಕಾರಣದಿಂದಾಗಿ ಸ್ಮೈಲ್ ಶ್ರೀನು  ಅವರು ಮುಂದೆ ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಸಿನಿಮಾವೊಂದನ್ನು ನಿರ್ದೇಶಿಸುವ ಯೋಜನೆ ಹಾಕಿಕೊಂಡಿದ್ದಾರೆ. ದೊಡ್ಡ ಬಜೆಟ್’ನಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾದಲ್ಲಿ ಬಹುತೇಕ ಎಲ್ಲಾ ಭಾಷೆಯ ಸ್ಟಾರ್ ನಟರು ಅಭಿಸನಯಿಸಲಿದ್ದಾರೆ.  ಮುಂದಿನ ವರ್ಷ ಶ್ರೀನು ಅವರ ಹೊಸ ಬಿಗ್ ಬಜೆಟ್ ಪ್ಯಾನ್ ಇಂಡಿಯಾ  ಸಿನಿಮಾ ಸೆಟ್ಟೇರಲಿದೆ. ಅದಕ್ಕೂ ಮುನ್ನ ಜನನ ಸಿನಿಮಾ ಬಿಡುಗಡೆಯಾಗಲಿದೆ.

    ಯುವ ನಿರ್ದೇಶಕ ಮಧುಸೂದನ್ ಅವರು  ಆ್ಯಕ್ಷನ್ ಕಟ್ ಹೇಳಿರುವ ಜನನ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ನಮ್ಮ ನಾಡಿಗೆ ಪ್ರಕೃತಿ ತುಂಬಾ ಮುಖ್ಯ. ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂಬ ಸುಂದರ ಸಂದೇಶ ಈ ಚಿತ್ರದಲ್ಲಿದೆ. ಇದನ್ನೂ ಓದಿ:ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ

    ವರ್ಷಾ ಶೆಟ್ಟಿ ಬೇಬಿ ಮೈರಾ, ಮಾಸ್ಟರ್ ಚಿನ್ಮಯ್, ಬೇಬಿ ಶಾನ್ವಿ, ಬೇಬಿ ಪೂಜಾ, ವರಹ, ಮಂಜುಳಾ, ಕಾವ್ಯ ಹಾಗೂ ಮಂಜು ಸೇರಿದಂತೆ ಮಕ್ಕಳ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಭರತ್ ಅವರ ಛಾಯಾಗ್ರಹಣ, ಮಲ್ಲಿಕಾರ್ಜುನ್.ಡಿ ಅವರ ಸಂಕಲನ ಕಾರ್ಯ ಈ ಚಿತ್ರಕ್ಕಿದೆ. ಎಲ್ಲಾ ಅಂದುಕೊಂಡಂತೆ ಆದರೆ ಹೊಸ ವರ್ಷದಲ್ಲಿ ‘ಜನನ’ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನನ

    ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನನ

    ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಒಂಟಿಗಾಲಿನ ಅಪರೂಪದ ಮಗುವಿನ ಜನನವಾಗಿದೆ. ಮಗುವಿನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

    ಭಾನುವಾರ ಹೆರಿಗೆ ನೋವಿನಿಂದ ಬಳಲುತಿದ್ದ ಮಹಿಳೆ ಕಿಮ್ಸ್ ಗೆ ದಾಖಲಾಗಿದ್ದರು. ಪ್ರಸವದ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಸಿಜೇರಿಯನ್ ಮುಖಾಂತರ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಮಗುವನ್ನು ನೋಡಿದಾಗ ಕೇವಲ ಒಂದು ಕಾಲು ಮಾತ್ರ ಕಾಣಿಸಿಕೊಂಡಿದೆ. ಮಗು ವಿಚಿತ್ರ ಅಂಗಾಂಗ ಹೊಂದಿರುವುದು ವೈದ್ಯರಲ್ಲಿ ಅಚ್ಚರಿ ಮೂಡುವಂತೆ ಮಾಡಿದೆ. ಇದನ್ನೂ ಓದಿ: ಬರೋಬ್ಬರಿ 54 ದಿನಗಳ ಬಳಿಕ ಇಂದಿನಿಂದ ಸಾರಿಗೆ ಬಸ್ ಸಂಚಾರ ಆರಂಭ

    ಅಪರೂಪದ ಮಗುವಿಗೆ ಸೊಂಟದ ಕೆಳಗೆ ಕೇವಲ ಒಂದು ಕಾಲಿನ ಆಕಾರ ಬಿಟ್ಟರೆ ಸಾಮಾನ್ಯ ದೈಹಿಕ ಭಾಗಗಳು ಇಲ್ಲವಾಗಿವೆ. ವಿಚಿತ್ರ ಮಗು ಜನಿಸಿದ ನಂತರ ಮಗುವಿನ ಹೆತ್ತವರ ಹೆಸರು ಮತ್ತು ವಿಳಾಸವನ್ನು ವೈದ್ಯರು ಬಹಿರಂಗ ಪಡಿಸದೆ ರಹಸ್ಯವಾಗಿಟ್ಟಿದ್ದಾರೆ.

  • ಹೆಣ್ಣು ಮಗು ಜನಿಸಿದ್ದಕ್ಕೆ  ಹೆಲಿಕಾಪ್ಟರ್‌ನಲ್ಲಿ ಕರೆತಂದ ಕುಟುಂಬ

    ಹೆಣ್ಣು ಮಗು ಜನಿಸಿದ್ದಕ್ಕೆ ಹೆಲಿಕಾಪ್ಟರ್‌ನಲ್ಲಿ ಕರೆತಂದ ಕುಟುಂಬ

    ಜೈಪುರ್: ಕುಟುಂಬದಲ್ಲಿ 35 ವರ್ಷಗಳ ಬಳಿಕ ಹೆಣ್ಣುಮಗು ಜನಿಸಿದ ಕಾರಣ ಸಂತಸಗೊಂಡ ಕುಟುಂಬಸ್ಥರು ಮಗುವನ್ನು ಹೆಲಿಕಾಪ್ಟರ್‌ನಲ್ಲಿ ಗ್ರಾಮಕ್ಕೆ ಕರೆದುಕೊಂಡು ಬಂದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಹೆಣ್ಣು ಮಗು ಜನಿಸಿತು ಅಂತ ಕುಟುಂಬದವರು ಖುಷಿ ಪಟ್ಟಿದ್ದಾರೆ. ಹೆಣ್ಣು ಮಗುವಿನ ಸ್ವಾಗತಕ್ಕೆ ವಿವಿಧ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಹಲವು ವರ್ಷಗಳ ನಂತರ ಹೆಣ್ಣು ಮಗು ಜನನವಾಯಿತು ಆ ಮಗುವಿನ ಸ್ವಾಗತಕ್ಕೆ ಹೆಲಿಕಾಪ್ಟರ್ ಬಾಡಿಗೆ ಪಡೆದು ತರಿಸಿದ್ದಾರೆ. ರಾಜಸ್ಥಾನದ ನಾಗಪುರ ಜಿಲ್ಲೆಯ ಚಂದವತ ಗ್ರಾಮದ ಹನುಮಾತ್ ಪ್ರಜಾಪತ್ ಅವರ ರೈತ ಕುಟುಂಬದಲ್ಲಿ 35 ವರ್ಷಗಳಿಂದ ಹೆಣ್ಣುಮಗು ಜನಿಸಿರಲಿಲ್ಲ. 35 ವರ್ಷಗಳ ನಂತರ ಜನಿಸಿದ ಹೆಣ್ಣು ಮಗುವಿನಿಂದ ಅವರ ಮನೆಯಲ್ಲಿ ಸಂತಸ ದುಪ್ಪಟ್ಟಾಗಿದೆ.

    ಮಗುವಿನ ಸ್ವಾಗತ ಸಾಧಾರಣವಾಗಿ ಇರಬಾರದು ಎಂದು ನಿರ್ಧರಿಸಿದ ಕುಟುಂಬದ ಯಜಮಾನ ಮೊಮ್ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಬೇಕು ಎಂದು ನಿರ್ಧರಿಸಿದ್ದಾರೆ. ಹಾಗಾಗಿ ಮಗುವಿನ ಅಜ್ಜ ಬೆಳೆಯನ್ನು 5 ಲಕ್ಷಕ್ಕೆ ಮಾರಿ ತನ್ನ ಮೊಮ್ಮಗಳಿಗಾಗಿ ಹೆಲಿಕಾಪ್ಟರ್ ಬಾಡಿಗೆಗೆ ಪಡೆದು ತರಿಸಿದ್ದಾರೆ. ಅದರಲ್ಲಿಯೇ ಮೊಮ್ಮಗಳನ್ನು ಸ್ವಾಗತಿಸಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

    ಮಗುವಿಗೆ ನಾವು ಸಿದ್ದಾಧತ್ರಿ ಎಂದು ಹೆಸರು ಇಟ್ಟಿದ್ದೇವೆ. ನಮ್ಮಲ್ಲಿ ಹಲವರು ಹೆಣ್ಣು ಮಗು ಎಂದು ಮೂಗು ಮುರಿದಿದ್ದಾರೆ. ಆದರೆ ನಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಅದ್ದೂರಿಯಾಗಿ ಸಂಭ್ರಮಿಸುಬೇಕು ಎಂದು ನಿರ್ಧರಿಸಿದ್ದೇವು. ನನ್ನ ಈ ನಡೆಯಿಂದ ಕೆಲವರಾದರು ಪ್ರೇರಣೆ ಪಡೆದರೆ ತುಂಬಾ ಸಂತೋಷವಾಗುತ್ತದೆ ಎಂದು ಹನುಮಾನ್ ಪ್ರಜಾತ್ ಹೇಳಿದ್ದಾರೆ.

  • ವಿಚಿತ್ರ ಮುಖವುಳ್ಳ ಆಡು ಮರಿ ಜನನ!

    ವಿಚಿತ್ರ ಮುಖವುಳ್ಳ ಆಡು ಮರಿ ಜನನ!

    ಚಾಮರಜನಗರ: ಸರಗೂರು ತಾಲೂಕಿನಲ್ಲಿ ವಿಚಿತ್ರ ಮುಖವುಳ್ಳ ಆಡು ಮರಿಯೊಂದು ಜನನವಾಗಿದ್ದು, ಈ ಅಪರೂಪದ ಮರಿಯನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.

    ತಾಲೂಕಿನ ಹುಲಿಕುರ ಗ್ರಾಮದಲ್ಲಿ ವಿಚಿತ್ರ ಆಡು ಮರಿ ಜನನವಾಗಿದೆ. ಹುಲಿಕುರ ಗ್ರಾಮದ ನಿವಾಸಿ ದಾಸಯ್ಯ ಅವರ ಮನೆಯಲ್ಲಿ ಸಾಕಿದ್ದ ಆಡಿಗೆ ಈ ಮರಿ ಹುಟ್ಟಿದೆ. ಶನಿವಾರದಂದು ಈ ಆಡು ಮರಿ ಜನಿಸಿತ್ತು. ಇದನ್ನು ನೊಡಿದ ತಕ್ಷಣ ಮನೆಮಂದಿ ಅಚ್ಚರಿಗೊಂಡಿದ್ದರು.

    ಈ ಆಡು ಮರಿಗೆ ನೋಡಲು ಕೊಂಚ ಮಾನವನ ಮುಖ ಲಕ್ಷಣ ಹೋಲುತ್ತದೆ. ಆಡು ಮರಿಗೆ ದೊಡ್ಡದಾದ ಎರಡು ಕಣ್ಣುಗಳಿವೆ ಆದರೆ, ಎರಡಕ್ಕೂ ಒಂದೆ ರೆಪ್ಪೆ ಇದೆ. ಈ ವಿಚಿತ್ರ ಮರಿಯ ವಿಷಯ ತಿಳಿದ ಬಳಿಕ ಇದನ್ನು ನೋಡಲು ಜನರು ಮುಗಿಬಿದ್ದು ದಾಸಯ್ಯ ಅವರ ಮನೆ ಬಳಿ ಸೇರಿದ್ದರು. ಈ ವೇಳೆ ಆಡು ಮರಿಯ ಫೋಟೋ, ವಿಡಿಯೋವನ್ನು ಕೂಡ ಜನ ಸೆರೆಹಿಡಿದಿದ್ದಾರೆ. ಆದರೆ ವಿಪರ್ಯಾಸವೆಂದರೆ ನಿನ್ನೆ ಜನಿಸಿದ್ದ ಆಡು ಮರಿ ನಿನ್ನೆ ಮಧ್ಯರಾತ್ರಿಯೇ ಅಸುನೀಗಿದೆ.

  • ಎರಡು ದೇಹ, 2 ಬಾಲ, 7 ಕಾಲುಗಳುಳ್ಳ ಕರು ಜನನ

    ಎರಡು ದೇಹ, 2 ಬಾಲ, 7 ಕಾಲುಗಳುಳ್ಳ ಕರು ಜನನ

    ಚೆನ್ನೈ: ತೆಲಂಗಾಣದ ನಾಗಪಟ್ಟಿಣಂ ನಲ್ಲಿ ಒಂದು ಹಸು ಎರಡು ದೇಹ, ಎರಡು ಬಾಲ ಹಾಗೂ ಏಳು ಕಾಲುಗಳನ್ನು ಹೊಂದಿರುವ ಅಸಾಮಾನ್ಯ ಕರುವಿಗೆ ಜನ್ಮ ನೀಡಿದೆ.

    ಭಾನುವಾರ ನಾಗಪಟ್ಟನಂ ಬಳಿಕಯ ವೆಟ್ಟೈಕಾರಣಿರುಪ್ಪು ಗ್ರಾಮದಲ್ಲಿ ಈ ರೀತಿ ಕರು ಜನಿಸಿದೆ. ರೈತ ಜೆಗನ್ ಎಂಬವರಿಗೆ ಸೇರಿದ್ದ ಹಸು ಏಳು ಕಾಲು, ಎರಡು ದೇಹ ಹಾಗೂ ಎರಡು ಬಾಲ ಇರುವ ಕರುವಿಗೆ ಜನ್ಮ ಕೊಟ್ಟಿದೆ.

    ನಾಗಪಟ್ಟಣಂ ಜಿಲ್ಲೆಯ ಪಶುವೈದ್ಯ ವೈದ್ಯರ ಸಹಾಯದಿಂದ ಕರುವಿಗೆ ಸೂಕ್ತವಾದ ಶಸ್ತ್ರ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರೈತ ತಿಳಿಸಿದ್ದಾರೆ. ಅಸಾಮಾನ್ಯ ಕರು ಜನಿಸಿರುವ ಬಗ್ಗೆ ತಿಳಿದು ಗ್ರಾಮದ ಜನರು ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಅಪಾರ ಸಂಖ್ಯೆಯ ಜನರು ಬಂದು ಕರುವನ್ನು ನೋಡುತ್ತಿದ್ದಾರೆ.

    ಇತ್ತೀಚಿನ ‘ಗಜ’ ಚಂಡಮಾರುತದ ಸಮಯದಲ್ಲಿ ಪೀಡಿತ ಗ್ರಾಮಗಳಲ್ಲಿ ವೆಟ್ಟಿಕರಣಿರುಪ್ಪು ಕರಾವಳಿ ಹಳ್ಳಿಯು ಒಂದಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹೊಸ ವರ್ಷದಂದು ಭಾರತದಲ್ಲಿ ಬರೋಬ್ಬರಿ 69 ಸಾವಿರ ಮಕ್ಕಳ ಜನನ- ಯಾವ ದೇಶದಲ್ಲಿ ಎಷ್ಟು?

    ಹೊಸ ವರ್ಷದಂದು ಭಾರತದಲ್ಲಿ ಬರೋಬ್ಬರಿ 69 ಸಾವಿರ ಮಕ್ಕಳ ಜನನ- ಯಾವ ದೇಶದಲ್ಲಿ ಎಷ್ಟು?

    ನವದೆಹಲಿ: 2021ರ ಶತಮಾನದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದ ಬೆನ್ನಲ್ಲೇ, ಹೊಸ ವರ್ಷದ ಮೊದಲ ದಿನದಂದು ಭಾರತದಲ್ಲಿ ಬರೋಬ್ಬರಿ 69,944 ಮಕ್ಕಳು ಜನಿಸಿದೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್) ತಿಳಿಸಿದೆ.

    ಹೊಸ ವರ್ಷದಂದು ಭಾರತದಲ್ಲಿ 69,944 ಮಗು ಜನಿಸಿದ್ದರೆ ಚೀನಾ 44,940 ಮಕ್ಕಳು ಜನಿಸಿವೆ. ನೈಜೀರಿಯಾ 25,685, ಪಾಕಿಸ್ತಾನ 15,112, ಇಂಡೋನೇಶಿಯಾ 13,256, ಅಮೆರಿಕ 1,086 ಹಾಗೂ ಬಾಂಗ್ಲಾದೇಶದಲ್ಲಿ 8,428 ಮಗು ಜನಿಸಿದೆ.

    ವಿಶ್ವಸಂಸ್ಥೆ ಮಾಹಿತಿ ಪ್ರಕಾರ ಪ್ರತಿದಿನ ವಿಶ್ವದಲ್ಲಿ ಅಂದಾಜು 3,95,072 ಮಕ್ಕಳ ಜನನವಾಗುತ್ತಿದ್ದು, ಈ ಪೈಕಿ ಅತಿ ಹೆಚ್ಚು ಶೇ.18 ರಷ್ಟು ಮಕ್ಕಳು ಭಾರತದಲ್ಲೇ ಜನಿಸುತ್ತಿವೆ ಎಂದು ಹೇಳಿದೆ.

    ಆರೋಗ್ಯದ ಸಮಸ್ಯೆಯಿಂದ ಕೆಲವು ಶಿಶುಗಳು ಒಂದು ವರ್ಷ ಕೂಡ ಬದುಕಲ್ಲ. ಕೆಲವು ಶಿಶುಗಳು ಒಂದು ದಿನದಲ್ಲೇ ಸಾವನ್ನಪ್ಪುತ್ತದೆ. ಹಾಗಾಗಿ ಡೆಲಿವರಿ ಸಮಯದಲ್ಲಿ ಪ್ರತಿ ಗಂಡು ಹಾಗೂ ಹೆಣ್ಣು ಮಗುವನ್ನು ಉಳಿಸಬೇಕೆಂದು ನಾವು ಈ ವರ್ಷ ರೆಸಲ್ಯೂಶನ್ ತೆಗೆದುಕೊಳ್ಳಬೇಕು ಎಂದು ಭಾರತದ ಯೂನಿಸೆಫ್ ಪ್ರತಿನಿಧಿ ಡಾ. ಯಾಸ್ಮಿನ್ ಅಲಿ ಹಕ್ ಹೇಳಿದ್ದಾರೆ.

    2017ರಲ್ಲಿ ಹುಟ್ಟಿದ ದಿನವೇ 10 ಲಕ್ಷ ಮಗು ಮೃತಪಟ್ಟಿತ್ತು. ಇನ್ನೂ ಹುಟ್ಟಿದ 1 ತಿಂಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಮಗು ಸಾವನ್ನಪ್ಪಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಶಿಶು ಮರಣದ ಪ್ರಮಾಣವನ್ನು ಗಣನೀಯವಾಗಿ ಸುಧಾರಿಸಿದೆ. ಶಿಶುಗಳ ಮರಣದ ಪ್ರಮಾಣವನ್ನು ಕಡಿಮೆ ಮಾಡುವುದು ಒಂದು ಸವಾಲಾಗಿದೆ ಎಂದು ಯಾಸ್ಮಿನ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷದ ಖುಷಿಯನ್ನು ಡಬಲ್ ಮಾಡಿಸಿದ ಪುಟಾಣಿ ಜೀವಗಳು

    ಹೊಸ ವರ್ಷದ ಖುಷಿಯನ್ನು ಡಬಲ್ ಮಾಡಿಸಿದ ಪುಟಾಣಿ ಜೀವಗಳು

    ಬೆಂಗಳೂರು: ಹೊಸ ವರ್ಷದ ಸಂಭ್ರಮದ ಜೊತೆಗೆ ಪುಟಾಣಿ ಜೀವಗಳು ಅಮ್ಮಂದಿರ ಮಡಿಲಲ್ಲಿ ಹೊಸ ವರ್ಷದ ಖುಷಿಯನ್ನು ಡಬಲ್ ಮಾಡಿಸಿವೆ.

    ಹೊಸ ವರ್ಷದ ದಿನವೇ ಹುಟ್ಟಿದ ಮಕ್ಕಳ ಅಮ್ಮಂದಿರ ಸಂಭ್ರಮಕ್ಕೆ ಪಾರವೇ ಇಲ್ಲ. ಕೆಲವು ಕಂದಮ್ಮಗಳಂತೂ ಸರಿಯಾಗಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಹುಟ್ಟಿದ್ದವು. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಧ್ಯರಾತ್ರಿಯಿಂದ ಮಧ್ಯಾಹ್ನದವರೆಗೆ ಹನ್ನೆರಡು ಗಂಟೆವರೆಗೂ ಒಟ್ಟು ಹದಿನಾರು ಹೆರಿಗೆಗಳಾಗಿದೆ.

    ಇಂದು ಸ್ವಾತಿ ನಕ್ಷತ್ರ ತುಲಾ ರಾಶಿ ಒಳ್ಳೆಯ ದಿನ ಎನ್ನುವುದು ಜ್ಯೋತಿಷ್ಯರ ನಂಬಿಕೆ ಆಗಿರುವುದರಿಂದ ಕಂದಮ್ಮಗಳ ಪೋಷಕರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೆಣ್ಣು ಮಗುವೇ ಹೆಚ್ಚು ಹುಟ್ಟಿದ್ದು ಹೊಸ ವರ್ಷದಂದು ಜನಿಸಿದ ಕಂದಮ್ಮಗಳಿಗೆ ಆಸ್ಪತ್ರೆ ಗಿಫ್ಟ್ ನೀಡಿ ದಂಪತಿಗೆ ಶುಭಾಶಯ ಹೇಳಿದೆ.

    ಇತ್ತೀಚಿನ ವರ್ಷಗಳಲ್ಲಿ ಹೊಸ ವರ್ಷಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ನವಮಾಸ ತುಂಬುತ್ತಿದ್ದ ಅಮ್ಮಂದಿರು ನ್ಯೂ ಇಯರ್ ಗೆ ಹೆರಿಗೆ ಮಾಡಿಸಲು ದುಂಬಾಲು ಬೀಳುತ್ತಿದ್ದಾರೆ. ಕೇವಲ ಹೊಸ ವರ್ಷ ಮಾತ್ರ ಅಲ್ಲದೇ ಈ ದಿನ ಹುಟ್ಟುವ ಮಗುವಿನ ಅದೃಷ್ಟವೇ ಬದಲಾಗುತ್ತದೆ ಎನ್ನುವ ನಂಬಿಕೆಯಿದೆ.

    ಫ್ಯಾನ್ಸಿ ನಂಬರ್ ಗಳ ಸೆಳೆತ, ಒಳ್ಳೆಯ ದಿನ ನೋಡಿಯೇ ಡೆಲಿವರಿ ಡೇಟ್ ಅಡ್ಜೆಸ್ಟ್ ಮೆಂಟ್ ಮಾಡುವ ಟ್ರೆಂಡ್ ಈಗ ಸಿಕ್ಕಾಪಟ್ಟೆ ಜೋರಾಗಿದೆ. ಅದರಲ್ಲೂ ಹೆರಿಗೆಗೆ ಅಸುಪಾಸಿನಲ್ಲಿರುವವರು ಹೊಸ ವರ್ಷ ಜನವರಿ ಒಂದರಂದು ಡೆಲಿವರಿ ಮಾಡಿಸಲು ವೈದ್ಯರಿಗೆ ಬೇಡಿಕೆ ಇಡುತ್ತಿದ್ದಾರೆ. ರಿಸ್ಕಿ ಇಲ್ಲದ ಡೆಲಿವರಿಗಳನ್ನು ಅವರ ಇಷ್ಟದ ದಿನವೇ ಮಾಡಬಹುದು. ಆದರೆ ಸ್ವಾಭಾವಿಕವಾಗಿ ಹೆರಿಗೆ ನೋವು ಬಂದಾಗ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಈ ಹಿಂದೆ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಸೆಂಬರ್‌ನಲ್ಲಿ ಹುಟ್ಟಿದ ಮಕ್ಕಳು ಲಕ್ಕಿ, ಕಾಯಿಲೆ ಬರಲ್ವಂತೆ!

    ಡಿಸೆಂಬರ್‌ನಲ್ಲಿ ಹುಟ್ಟಿದ ಮಕ್ಕಳು ಲಕ್ಕಿ, ಕಾಯಿಲೆ ಬರಲ್ವಂತೆ!

    ಸಾಮಾನ್ಯವಾಗಿ ಕೆಲವರು ತಮ್ಮ ಮಗು ಇಂತಹ ದಿನವೇ ಜನಿಸಬೇಕು ಎಂದು ಇಷ್ಟ ಪಟ್ಟಿರುತ್ತಾರೆ. ಅಂದರೆ ತಮ್ಮ ಹುಟ್ಟುಹಬ್ಬದಂದು ಅಥವಾ ತಮ್ಮ ಮದುವೆ ವಾರ್ಷಿಕೋತ್ಸವದಂದು ಹುಟ್ಟಬೇಕು ಎಂದು ಆಸೆ ಪಟ್ಟಿರುತ್ತಾರೆ. ಆದರೆ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರು ಹೆಚ್ಚು ಆರೋಗ್ಯವಾಗಿರುತ್ತಾರೆ ಎಂದು ಅಧ್ಯಯನ ಒಂದು ತಿಳಿಸಿದೆ.

    ಯೂರೋಪಿಯನ್ ಕಾಲೇಜ್ ಆಫ್ ನ್ಯೂರೊಸೈಕೋಫಾರ್ಮಾಕಾಲಜಿ ಸುಮಾರು 366 ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ವೈಜ್ಞಾನಿಕವಾಗಿ ಪ್ರಶ್ನೆ ಕೇಳಿ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ಹೆಚ್ಚು ಆರೋಗ್ಯವಂತರಾಗಿರುತ್ತಾರೆ ಮತ್ತು ಹೆಚ್ಚು ಲವಲವಿಕೆಯಿಂದ ಇರುತ್ತಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಡಿಸೆಂಬರ್ ತಿಂಗಳ ಮಕ್ಕಳು ಹೇಗೆ ಭಿನ್ನ ಎನ್ನುವುದಕ್ಕೂ ಅಧ್ಯಯನ ಕಾರಣಗಳನ್ನು ನೀಡಿದೆ. ಇದನ್ನೂ ಓದಿ: ಕೊನೆಗೂ ಯಶ್ ಕನಸು ನೆರವೇರಿತು-ತಂದೆಯಾದ ರಾಕಿಂಗ್ ಸ್ಟಾರ್

    1. ತುಂಬಾ ಅಪರೂಪ: ಡಿಸೆಂಬರ್ ತಿಂಗಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ಹೆರಿಗೆಯಾಗುತ್ತದೆ. ಅದರಲ್ಲೂ ಡಿಸೆಂಬರ್ 24 ಮತ್ತು 25 ರಂದು ಮಕ್ಕಳ ಬರ್ತ್ ಡೇ ದಿನಾಂಕ ಬರುವುದು ಬಹಳ ಕಡಿಮೆ.

    2. ಕಡಿಮೆ ಕೋಪ: ಬೇಸಿಗೆಯಲ್ಲಿ ಹುಟ್ಟಿದವರು ಯಾವಾಗಲೂ ಮೂಡಿಯಾಗಿ ಇರುತ್ತಾರೆ. ಆದರೆ ಚಳಿಗಾಲದಲ್ಲಿ ಹುಟ್ಟಿದವರು ಸ್ಥಿರವಾಗಿರುತ್ತಾರೆ. ನಿರ್ದಿಷ್ಟವಾಗಿ ಡಿಸೆಂಬರ್ ನಲ್ಲಿ ಹುಟ್ಟಿದವರ ಸ್ವಾಭಾವದಲ್ಲಿ ಕೋಪ ಸ್ವಲ್ಪ ಕಡಿಮೆ ಇರುತ್ತದೆ.

    3. ಜಾಸ್ತಿ ಕಾಯಿಲೆ ಬರಲ್ಲ: ಕೊಲಂಬಿಯಾ ಯುನಿವರ್ಸಿಟಿ ಡಿಪಾರ್ಟ್ ಮೆಂಟ್ ಆಫ್ ಮೆಡಿಸಿನ್ ಸಂಶೋಧಕರು, ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ 1900 ಮತ್ತು 2000 ರ ನಡುವೆ ಜನಿಸಿದ ಸುಮಾರು 1.75 ದಶಲಕ್ಷ ರೋಗಿಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಅವರಲ್ಲಿ 1,668 ರೋಗಿಗಳಿಗೆ ಜನಿಸಿದ ತಿಂಗಳು, ಆಹಾರದ ಮೂಲಕ ಕಾಯಿಲೆ ಬರುವ ಸಾಧ್ಯತೆ ಇದೆ. ಡಿಸೆಂಬರ್ ತಿಂಗಳಿನಲ್ಲಿ ಜನಿಸಿದ ಮಕ್ಕಳಲ್ಲಿ ಹೆಚ್ಚಾಗಿ ಕಾಯಿಲೆ ಕಂಡು ಬಂದಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ಒಂದು ವಾಷಿಂಗ್ಟನ್ ಪೋಸ್ಟ್ ಚಾರ್ಟ್ ಸಿದ್ಧಪಡಿಸಿ ಮಾಹಿತಿಯನ್ನು ಉಲ್ಲೇಖಿಸಿದೆ.

    4. ಆಯಸ್ಸು ಹೆಚ್ಚು: ಪ್ರತಿಯೊಬ್ಬ ತಂದೆ-ತಾಯಿ ಕೂಡ ನಮ್ಮ ಮಕ್ಕಳು ಸದಾ ಖುಷಿಯಾಗಿ ಜೀವನ ನಡೆಸಬೇಕು ಎಂದು ಬಯಸುತ್ತಿರುತ್ತಾರೆ. ಆದರಲ್ಲೂ ಡಿಸೆಂಬರ್ ನಲ್ಲಿ ಜನಿಸಿದ ಮಕ್ಕಳು 100 ವರ್ಷಕ್ಕಿಂತಲೂ ಹೆಚ್ಚು ವರ್ಷ ಬದುಕುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಜರ್ಮನ್ ಜನಗಣತಿಯ ಪ್ರಕಾರ, ಡಿಸೆಂಬರ್ ಮತ್ತು ಜೂನ್ ತಿಂಗಳ ಜನನಕ್ಕೆ ಹೋಲಿಸಿದರೆ 105 ವರ್ಷ ಬದುಕು ಸಾಧ್ಯತೆ ಇದೆ ಎಂದು ಜರ್ನಲ್ ಆಫ್ ಏಜಿಂಗ್ ರಿಸರ್ಚ್ ಮೂಲಕ ತಿಳಿದು ಬಂದಿದೆ.

    5. ಹುಡುಗರು ಎಡಗೈ ಬರಹಗಾರರು: ಅಕ್ಟೋಬರ್ ನಿಂದ ಫೆಬ್ರವರಿಯೊಳಗೆ ಜನಿಸಿದ ಗಂಡು ಮಕ್ಕಳು ಹೆಚ್ಚಾಗಿ ಎಡಗೈ ಬಳಸುತ್ತಾರೆ. ಬೇರೆ ತಿಂಗಳಿಗೆ ಹೋಲಿಕೆ ಮಾಡಿದರೆ ಡಿಸೆಂಬರ್ ನಲ್ಲಿ ಈ ಸಂಖ್ಯೆ ಜಾಸ್ತಿ.

    6. ತರಗತಿಯಲ್ಲಿ ಕಿರಿಯರಾಗಿರುತ್ತಾರೆ: ಡಿಸೆಂಬರ್ ನಲ್ಲಿ ಹುಟ್ಟಿದ ಮಗು ಶಾಲೆಯ ಪ್ರಾರಂಭವಾದಾಗ ತರಗತಿಯಲ್ಲಿ ಎಲ್ಲರಿಗಿಂತ ಕಿರಿಯವರಾಗಿರುತ್ತಾರೆ  ಒಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಂಸ್ಕೃತಿಕ ನಗರದಲ್ಲಿ ಬರೋಬ್ಬರಿ 5 ಕೆ.ಜಿಯ ಅಪರೂಪದ ಮಗು ಜನನ

    ಸಾಂಸ್ಕೃತಿಕ ನಗರದಲ್ಲಿ ಬರೋಬ್ಬರಿ 5 ಕೆ.ಜಿಯ ಅಪರೂಪದ ಮಗು ಜನನ

    ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಬರೋಬ್ಬರಿ 5 ಕೆ.ಜಿಯ ಅಪರೂಪದ ಮಗು ಜನನವಾಗಿದೆ. ನಗರದ ರಾಜೇಶ್ವರಿ ಈ ಭಾರೀ ತೂಕದ ಮಗುವಿಗೆ ಜನ್ಮ ನೀಡಿದ ತಾಯಿ.

    ರಾಜೇಶ್ವರಿ ತಿಲಕ್ ನಗರದ ನಿವಾಸಿ ಸಿದ್ದರಾಜು ಅವರ ಪತ್ನಿಯಾಗಿದ್ದು, ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಪರೂಪದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ತೂಕ ಜಾಸ್ತಿಯಿದ್ದ ಕಾರಣ ಸಿಸೇರಿಯನ್ ಮೂಲಕ ವೈದ್ಯಾಧಿಕಾರಿಗಳು ಹೊರತೆಗೆದಿದ್ದಾರೆ. ಇದನ್ನೂ ಓದಿ: ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಯಾಕೆ ಮಾಡ್ತಾರೆ? ಕಾರಣಗಳೇನು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv