Tag: ಜನ

  • ನಿರ್ದೇಶಕನಾದ ವಿತರಕ ಬಿ.ಜಿ.ಚಂದನ್‌ಕುಮಾರ್: ‘ಜನ’ ಚಿತ್ರಕ್ಕೆ ಚಾಲನೆ

    ನಿರ್ದೇಶಕನಾದ ವಿತರಕ ಬಿ.ಜಿ.ಚಂದನ್‌ಕುಮಾರ್: ‘ಜನ’ ಚಿತ್ರಕ್ಕೆ ಚಾಲನೆ

    ಣ್ಣದ ಲೋಕದ ಆಕರ್ಷಣೆಗೆ ಒಳಗಾಗದವರೇ ಇಲ್ಲ, ನಟನಾಗಬೇಕೆಂದು ಬಂದವರು ನಿರ್ದೇಶಕ, ನಿರ್ಮಾಪಕನಾಗಿದ್ದೂ ಇದೆ, ನಿರ್ದೇಶಕನಾಗಬೇಕೆಂದು ಬಂದವರು ನಟ, ನಿರ್ದೇಶಕನಾಗಿಯೂ ಬೆಳೆದಿದ್ದಾರೆ. ಆದರೆ ಇಲ್ಲೊಬ್ಬ ವಿತರಕ  ನಿರ್ದೇಶಕನಾಗುತ್ತಿರುವುದು ವಿಶೇಷ. ದಶಕದ ಹಿಂದೆ ತಾನೊಬ್ಬ ನಿರ್ದೇಶಕನಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಮಂಡ್ಯದಿಂದ ಗಾಂಧಿ ನಗರಕ್ಕೆ ಕಾಲಿಟ್ಟ ಬಿ.ಜಿ.ಚಂದನ್‌ಕುಮಾರ್ (Chandan Kumar) ವಿತರಕನಾಗಿ ಕಾರ್ಯನಿರ್ವಹಿಸುತ್ತಲೇ ಚಿತ್ರನಿರ್ಮಾಣದ ಎಲ್ಲಾ ಆಯಾಮಗಳನ್ನು ಅರಿತುಕೊಂಡು ಇದೀಗ ನಿರ್ದೇಶಕನಾಗುತ್ತಿದ್ದಾರೆ.

    ಒಬ್ಬ ನಿರ್ದೇಶಕನಿಗೆ ತನ್ನ ಚಿತ್ರವನ್ನು ಜನರಿಗೆ ಹೇಗೆ ತಲುಪಿಸಬೇಕೆಂಬುದು ಸಹ ಗೊತ್ತಿರಬೇಕು ಎಂಬುದನ್ನು ಅರಿತಿರುವ ಚಂದನ್‌ಕುಮಾರ್ ದಶಕದ ಹಾದಿಯಲ್ಲಿ  ಕಥೆ ಬರೆಯುವುದರಿಂದ ಹಿಡಿದು  ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವುದನ್ನು ಚೆನ್ನಾಗಿಯೇ ತಿಳಿದುಕೊಂಡೇ ನಿರ್ದೇಶನಕ್ಕಿಳಿದಿದ್ದಾರೆ. ಅವರ ಹೊಸ ಚಿತ್ರದ ಶೀರ್ಷಿಕೆ ಜನ (Jana). ಈ ಚಿತ್ರದ ಮುಹೂರ್ತ (Muhurta) ಸಮಾರಂಭ ದೇವಯ್ಯ ಪಾರ್ಕ್ ಬಳಿಯ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ನಿರ್ದೇಶಕರ ತಂದೆ ಗೋವಿಂದರಾಜ್ ಅವರು ಕ್ಲಾಪ್ ಮಾಡಿದರೆ, ಹಿರಿಯ ನಿರ್ಮಾಪಕ ಚಿನ್ನೇಗೌಡ್ರು ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದರು.

    ಜನ ಚಿತ್ರದ ಮೂಲಕ ಚೇತನ್‌ಕುಮಾರ್ ಎಂಬ ಯುವಪ್ರತಿಭೆ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇದೊಂದು ಜರ್ನಿಯಲ್ಲಿ ಸಾಗುವ ಕಥೆಯಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚಿತ್ರೀಕರಿಸುವ ಯೋಜನೆ ನಿರ್ದೇಶಕರಿಗಿದೆ. ಮಾಸ್, ಕ್ಲಾಸ್ ಹೀಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಮಾಡಿಕೊಂಡಿರುವ ನಿರ್ದೇಶಕ ಚಂದನ್‌ಕುಮಾರ್ ಚಿತ್ರದಲ್ಲಿ ಅಂಡರ್‌ವರ್ಲ್ಡ್ ಶೇಡ್ ಕೂಡ ಇರುತ್ತೆ ಎಂದು ಹೇಳಿದ್ದಾರೆ.

     

    ಈ ಚಿತ್ರವನ್ನು ಸಕ್ಕರೆನಾಡು ಕಂಬೈನ್ಸ್ ಮೂಲಕ ಶ್ರೀಮತಿ ಯಶೋದಮ್ಮ ಗೋವಿಂದರಾಜ್ ಹಾಗೂ ದೀಪಾ ಚಂದನ್‌ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ನರಸಿಂಹಮೂರ್ತಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.  ಮುಂಜಾನೆ ಮಂಜು ಅವರ ಛಾಯಾಗ್ರಹಣ, ಕಾರ್ತೀಕ್ ಅಲೆ ಅವರ ಸಂಗೀತ ಸಂಯೋಜನೆ, ಚಾಲೆಂಜಿಂಗ್ ಸೂರಿ ಅವರ ನೃತ್ಯನಿರ್ದೇಶನ ಜನ ಚಿತ್ರಕ್ಕಿದೆ,

  • ಶಿವಲಿಂಗದ ಮೇಲೆ ಮೂಡಿದ ಕಣ್ಣಿನ ಆಕೃತಿ – ವಿಸ್ಮಯ ನೋಡಲು ಮುಗಿಬಿದ್ದ ಜನ

    ಶಿವಲಿಂಗದ ಮೇಲೆ ಮೂಡಿದ ಕಣ್ಣಿನ ಆಕೃತಿ – ವಿಸ್ಮಯ ನೋಡಲು ಮುಗಿಬಿದ್ದ ಜನ

    ರಾಮನಗರ: ಮಾಗಡಿ (Magadi) ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ (KSRTC Bus)ನಿಲ್ದಾಣದ ಆವರಣದಲ್ಲಿರುವ ಬಸವೇಶ್ವರ ಹಾಗೂ ಉಮಾ ಮಹೇಶ್ವರಿ ದೇಗುಲದಲ್ಲಿನ ಶಿವಲಿಂಗ ಕಣ್ಣು ತೆರೆದಿದೆ ಎಂಬ ವದಂತಿ ಹಬ್ಬಿದ ಹಿನ್ನೆಲೆ ದೇಗುಲಕ್ಕೆ ಭಕ್ತರ ದಂಡೇ ಹರಿದುಬಂದಿದೆ.

    ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟಿದ್ದಾರೆ. ಹೂವಿನಿಂದ ಅಲಂಕೃತಗೊಂಡಿದ್ದ ಲಿಂಗ ಆಕಾರದ ಮೂರ್ತಿಯ ಮೇಲ್ಭಾಗದಲ್ಲಿ ಕಣ್ಣುಗಳ ಆಕೃತಿ ಕಾಣಿಸಿಕೊಂಡಿದೆ. ಇದರಿಂದ ದೇವರೇ ಕಣ್ಣು ಬಿಟ್ಟಿದ್ದಾನೆಂದು ಭಾವಿಸಿದ ಭಕ್ತರು ಶಿವಲಿಂಗ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.  ಇದನ್ನೂ ಓದಿ: ಮಂಡ್ಯದಲ್ಲಿ ಕಮಲ ಅರಳಿಸಲು ಪ್ಲಾನ್ – ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಬಿಜೆಪಿಗೆ

    ಇದನ್ನು ಕಾಣಲು ಸುತ್ತಮುತ್ತಲಿನ ನೂರಾರು ಜನರು ದೇವಾಲಯಕ್ಕೆ ಬಂದಿದ್ದು, ಕ್ರಮೇಣ ನೂಕುನುಗ್ಗಲು ಉಂಟಾಗಿದೆ. ಕೆಲಕಾಲದ ಬಳಿಕ ಕಣ್ಣಿನ ಆಕೃತಿ ಅದೃಶ್ಯವಾಗಿದ್ದು ಭಕ್ತರನ್ನು ಅಚ್ಚರಿಗೊಳಿಸಿದೆ. ಇದನ್ನೂ ಓದಿ: ಶ್ರದ್ಧಾವಾಕರ್ ಹತ್ಯೆ ಪ್ರಕರಣ – ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‍ಗೆ ಕೇಳಿದ ಪ್ರಶ್ನೆಗಳೇನು?

    Live Tv
    [brid partner=56869869 player=32851 video=960834 autoplay=true]

  • ತಿರುಪತಿಯಲ್ಲಿ ದರ್ಶನಕ್ಕೆ ಕಾಯಬೇಕು 50 ಗಂಟೆ

    ತಿರುಪತಿಯಲ್ಲಿ ದರ್ಶನಕ್ಕೆ ಕಾಯಬೇಕು 50 ಗಂಟೆ

    ತಿರುಪತಿ: ತಿರುಪತಿಯಲ್ಲಿ (Tirupati) ಭಕ್ತಸಾಗರ ತುಂಬಿ ತುಳುಕುತ್ತಿದೆ. ತಿರುಪತಿ ಬೆಟ್ಟದಲ್ಲಿ 6 ಕಿ.ಮೀ.ವರೆಗೆ ಭಕ್ತರ ಸಾಲು ನಿಂತಿದ್ದು, ತಿಮ್ಮಪ್ಪನ ದರ್ಶನ ಪಡೆಯಬೇಕು ಅಂದರೆ 50 ಗಂಟೆಗಳ ಕಾಲ ಕಾಯಬೇಕಿದೆ.

    ಹೌದು.. ಎಲ್ಲಿ ನೋಡಿದ್ರೂ ಜನವೋ ಜನ (People), ದೇಗುಲದ (Temple) ಕಾಂಪ್ಲೆಕ್ಸ್‌ನಿಂದ ಆಚೆ, ದೇವಾಲಯದ ಮುಂಭಾಗ, ಲಡ್ಡುಗೂ ಕ್ಯೂ ಮುಡಿ ಸೇವೆಗೂ ಕ್ಯೂ ಲಗೇಜ್ ಕೌಂಟರ್‌ನಲ್ಲೂ ಕ್ಯೂ ಎಲ್ಲಿ ನೋಡಿದ್ರೂ ಲಕ್ಷಾಂತರ ಭಕ್ತರು. ಇದು ಆಂಧ್ರಪ್ರದೇಶದ ತಿರುಪತಿ ತಿರುಮಲದ ಸ್ಥಿತಿಯಾಗಿದೆ. ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದ ತಿರುಮಲದಲ್ಲಿ ಭಕ್ತ ಸಾಗರ ಹರಿದು ಬರುತ್ತಿದೆ. ಈ ಭಕ್ತರನ್ನು ನಿಯಂತ್ರಿಸಲು ಟಿಟಿಡಿ ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ.

    ಜನರು ಹೆಚ್ಚಿರುವ ಹಿನ್ನೆಲೆಯಲ್ಲಿ ತಿರುಮಲನ ದರ್ಶನಕ್ಕೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಆದರೂ ಉಚಿತ ದರ್ಶನದ ಸಾಲಿನಲ್ಲಿ 2 ಕಿ.ಮೀವರೆಗೆ ಭಕ್ತರು ನಿಂತಿದ್ದಾರೆ. ದರ್ಶನಕ್ಕಾಗಿ ಭಕ್ತರು 48 ಗಂಟೆಗಳ ಕಾಲ ಕಾಯುವಷ್ಟು ಜನದಟ್ಟಣೆ ಉಂಟಾಗಿದೆ. ಇದರಿಂದಾಗಿ ತಿರುಪತಿ ದೇವಾಲಯ, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಂತಾದ ಕಡೆ ಭಕ್ತರೇ ಕಾಣಿಸುತ್ತಿದ್ದಾರೆ. ಭಾನುವಾರದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಕೌಂಟರ್‌ಗಳಲ್ಲಿ ಭಕ್ತರನ್ನು ನಿಯಂತ್ರಿಸುವುದು ಟಿಟಿಡಿಗೆ ಸವಾಲಾಗಿ ಪರಿಣಮಿಸಿದೆ. ಇದನ್ನೂ ಓದಿ: ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆ – ಹಾರಂಗಿ ವಿಶೇಷತೆ ಏನು?

    ಇನ್ನೂ ಪ್ರಪಂಚದಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ತಿಮ್ಮಪ್ಪನ ದರ್ಶನಕ್ಕೆ ಬೇರೆ ಬೇರೆ ರಾಜ್ಯಗಳಿಂದಲೂ ಲಕ್ಷಾಂತರ ಜನ ಆಗಮಿಸಿದ್ದಾರೆ. ಕಳೆದ 2 ವರ್ಷಗಳಿಂದ ಕೋವಿಡ್ (Covid) ಇದ್ದು ದರ್ಶನ ಮಾಡಲು ಸಾಧ್ಯವಾಗದವರು ಹಾಗೂ ನಿಯಮಗಳ ಸಡಿಲಿಕೆ ಬಳಿಕ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಭಕ್ತರು ಪ್ರವಾಸ ಮುಂದೂಡುವುದು ಉತ್ತಮ ಎಂದು ಮನವಿ ಮಾಡಿದೆ. ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ತಕ್ಕ ಪ್ರಾಶಸ್ತ್ಯ ಸಿಗುತ್ತಿಲ್ಲ: ಶರದ್ ಪವಾರ್ ಬೇಸರ

    Live Tv
    [brid partner=56869869 player=32851 video=960834 autoplay=true]

  • ನಾಯಿಗಳ ಹಾವಳಿಗೆ ಬೆಚ್ಚಿ ಬಿದ್ದ ಕುಂದಾನಗರಿ ಜನ – ಆರು ತಿಂಗಳಲ್ಲಿ 14 ಸಾವಿರ ಮಂದಿಗೆ ನಾಯಿ ಕಡಿತ

    ನಾಯಿಗಳ ಹಾವಳಿಗೆ ಬೆಚ್ಚಿ ಬಿದ್ದ ಕುಂದಾನಗರಿ ಜನ – ಆರು ತಿಂಗಳಲ್ಲಿ 14 ಸಾವಿರ ಮಂದಿಗೆ ನಾಯಿ ಕಡಿತ

    ಬೆಳಗಾವಿ: ಜಿಲ್ಲೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಮಕ್ಕಳು, ಮಹಿಳೆಯರ ಮೇಲೆ ಈ ಶ್ವಾನಗಳು ಅಟ್ಯಾಕ್ ಮಾಡುತ್ತಿದ್ದು, ರಾತ್ರಿಯಾದರೆ ಸಾಕು ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. ಜನವರಿಯಿಂದ ಜುಲೈ ಮೊದಲ ವಾರದವರೆಗೆ ಕೇವಲ ಆರು ತಿಂಗಳಲ್ಲಿ ಬರೋಬ್ಬರಿ 14,278 ಜನರಿಗೆ ಈ ನಾಯಿಗಳು ಕಚ್ಚಿದ್ದು ಎಲ್ಲರೂ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.

    ಈ ಬಗ್ಗೆ ಡಿಎಚ್‍ಒ ಡಾ.ಮಹೇಶ್ ಕೋಣಿ ಪ್ರತಿಕ್ರಿಯಿಸಿ, ಈ ವರ್ಷ ಆರು ತಿಂಗಳಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ನಾಯಿಗಳು ಜನರಿಗೆ ಕಚ್ಚಿವೆ. ಈಗಾಗಲೇ ಈ ಕುರಿತು ಇಲಾಖೆ ಸಭೆಯಲ್ಲಿ ಪ್ರಸ್ತಾವನೆ ಕೂಡ ಆಗಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚು ಜನ ದಾಖಲಾಗಿದ್ದಾರೆ. ನಾಯಿ ಕಡಿತಕ್ಕೆ ಲಸಿಕೆ ಇದ್ದು ಯಾವ ತೊಂದರೆ ಇಲ್ಲ ಅಂದಿದ್ದಾರೆ.  ಇದನ್ನೂ ಓದಿ: ದೇಶದ ಚರಿತ್ರೆಯಲ್ಲಿ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪಟ್ಟ – ಇಂದು ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ

    ಸದ್ಯ ಗ್ರಾಮೀಣ ಭಾಗ ಅಷ್ಟೇ ಅಲ್ಲದೇ ನಗರ ಪ್ರದೇಶದಲ್ಲೂ ನಾಯಿಗಳ ಹಾವಳಿ ಮೀತಿಮಿರಿದೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯ ಶಾಸಕ ಅಭಯ್ ಪಾಟೀಲ್ ಕೂಡ ಸೂಚನೆ ನೀಡಿದ್ದಾರೆ. ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ, ಶಾಲಾ ಆವರಣದ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳು ಗುಂಪು, ಗುಂಪಾಗಿ ಓಡಾಡುತ್ತಿದೆ. ಹೀಗಾಗಿ ಸಾರ್ವಜನಿಕರು ಸೇರಿದಂತೆ ಎಲ್ಲರೂ ಕೂಡ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಅಭಯ್ ಪಾಟೀಲ್ ಆದಷ್ಟು ಬೇಗ ನಾಯಿಗಳನ್ನು ನಗರದಿಂದ ಬೇರೆ ಕಡೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಮೇಕೆದಾಟು ಡ್ಯಾಂಗೆ ತಮಿಳುನಾಡು ವಿರೋಧ – ಸುಪ್ರೀಂಕೋರ್ಟ್‍ನಲ್ಲಿ ಇಂದು ವಿಚಾರಣೆ

    ದಿನೇ ದಿನೇ ನಾಯಿಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಒಂಟಿಯಾಗಿ ಓಡಾಡುವವರನ್ನೇ ಟಾರ್ಗೆಟ್ ಮಾಡುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ನಾಯಿಗಳನ್ನು ಹಿಡಿದು ಬೇರೆ ಕಡೆ ಬಿಡುವ ಕೆಲಸ ಮಾಡಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹೊಳೆನರಸೀಪುರ ತಾಲೂಕಿನಲ್ಲಿ 3.4 ತೀವ್ರತೆಯ ಭೂಕಂಪ – ಭಯಪಡುವ ಅಗತ್ಯವಿಲ್ಲ ಎಂದ KSNDMC

    ಹೊಳೆನರಸೀಪುರ ತಾಲೂಕಿನಲ್ಲಿ 3.4 ತೀವ್ರತೆಯ ಭೂಕಂಪ – ಭಯಪಡುವ ಅಗತ್ಯವಿಲ್ಲ ಎಂದ KSNDMC

    ಬೆಂಗಳೂರು: ಹಾಸನ ಜಿಲ್ಲೆಯ ಹಲವೆಡೆ ಬೆಳಗಿನ ಜಾವ 4:30ರ ಸುಮಾರಿಗೆ 3.4 ತೀವ್ರತೆಯ ಕಂಪನವಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ(ಕೆಸ್‍ಎನ್‍ಡಿಎಂಸಿ) ಅಧಿಕೃತವಾಗಿ ತಿಳಿಸಿದೆ.

    ಇಂದು ಬೆಳಗ್ಗೆ ಹಾಸನದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು ಜನ ಭಯಭೀತರಾಗಿದ್ದರು. ಹೊಳೇನರಸಿಪುರ, ಅರಕಲಗೂಡು, ಹಾಸನ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿತ್ತು. ಇದನ್ನೂ ಓದಿ:  ಹಾಸನ, ಅರಕಲಗೂಡು, ಹೊಳೆನರಸೀಪುರ ತಾಲೂಕಿನಲ್ಲಿ ಕಂಪಿಸಿದ ಭೂಮಿ – ಜನರಲ್ಲಿ ತೀವ್ರ ಆತಂಕ

    ಹೇಳಿಕೆಯಲ್ಲಿ ಏನಿದೆ?
    ಹೊಳೆನರಸೀಪುರ ತಾಲೂಕಿನ ಮಲುಗನಹಳ್ಳಿ ಗ್ರಾಮ ಕಂಪನದ ಕೇಂದ್ರಬಿಂದು ಆಗಿದ್ದು ಭೂಮಿ ಅಡಿ 0.800 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಮಧ್ಯಮ ಕ್ರಮಾಂಕ ಕಂಪನ ಇದಾಗಿದ್ದು ಕೇಂದ್ರ ಬಿಂದುವಿನ 40-50 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಕಂಪನದ ಅನುಭವವಾಗಿದೆ. ಇದನ್ನೂ ಓದಿ: ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತೆ ಕಾಡಂಚಿನಲ್ಲಿ ಪ್ರತ್ಯಕ್ಷ – ಮದ್ವೆಯಾಗೋದಾಗಿ ನಂಬಿಸಿ ಮೋಸ

    ಈ ಭೂಕಂಪನದಿಂದ ಯಾವುದೇ ಹಾನಿಯಾಗುವುದಿಲ್ಲ. ಸೆಸ್ಮಿಕ್ ವಲಯ 2ರಲ್ಲಿ ಈ ಜಾಗ ಬರುವುದರಿಂದ ಹಾನಿಯ ಸಾಧ್ಯತೆ ಕಡಿಮೆ. ಜನತೆ ಭಯಪಡುವ ಅಗತ್ಯವಿಲ್ಲ ಎಂದು ಕೆಎಸ್‍ಎನ್‍ಡಿಎಂಸಿ ತಿಳಿಸಿದೆ.

    ಭೂಮಿ ಕಂಪನವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮನೆಯಿಂದ ಜೀವ ಭಯದಲ್ಲಿ ಹೊರಬಂದಿದ್ದಾರೆ. ಸುಮಾರು 6 ಸೆಕೆಂಡ್ ಭೂಮಿ ಕಂಪಿಸಿದ ಅನುಭವವಾಗಿ, ಮಲಗಿದ್ದವರು ಮಕ್ಕಳೊಂದಿಗೆ ಹೊರಬಂದು ರಸ್ತೆಯಲ್ಲಿ ನಿಂತಿದ್ದಾರೆ.

    ಹೊಳೇನರಸಿಪುರ ತಾಲೂಕಿನ ಬೆಟ್ಟದ ಸಾತನಹಳ್ಳಿ, ಹಳ್ಳಿ ಮೈಸೂರು, ಕಲ್ಲಹಳ್ಳಿ, ದಾಳಗೌಡನಹಳ್ಳಿ, ದೊಡ್ಡ ಕಾಡನೂರು, ಪೂಜೆ ಕೊಪ್ಪಲು, ಮಾಕವಳ್ಳಿ, ತೇಜೂರು, ಗೋಹಳ್ಳಿ, ಕುರಿ ಕಾವಲು, ಓಡನಹಳ್ಳಿ, ನಿಡುವಣಿ, ಅರಕಲಗೂಡು ತಾಲೂಕಿನ ಬೆಳವಾಡಿ, ಹೊಳೆನರಸೀಪುರ ಪಟ್ಟಣದ ಚಿಟ್ಟನಹಳ್ಳಿ ಬಡಾವಣೆ, ನರಸಿಂಹನಾಯಕ ನಗರ ನಗರ, ಹೌಸಿಂಗ್ ಬೋರ್ಡ್, ಸೇರಿದಂತೆ ತಾಲೂಕಿನ ಹಲವೆಡೆ ಭೂಮಿ ಕಂಪನವಾಗಿದೆ.

    ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಪಾತ್ರೆಗಳು ಹಾಗೂ ಮನೆಯ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಕೆಲವು ವಸ್ತುಗಳು ಕಂಪನದ ಹಿನ್ನೆಲೆಯಲ್ಲಿ ಒಡೆದು ಹೋಗಿದೆ.

    Live Tv

  • ಹಾಸನ, ಅರಕಲಗೂಡು, ಹೊಳೆನರಸೀಪುರ ತಾಲೂಕಿನಲ್ಲಿ ಕಂಪಿಸಿದ ಭೂಮಿ – ಜನರಲ್ಲಿ ತೀವ್ರ ಆತಂಕ

    ಹಾಸನ, ಅರಕಲಗೂಡು, ಹೊಳೆನರಸೀಪುರ ತಾಲೂಕಿನಲ್ಲಿ ಕಂಪಿಸಿದ ಭೂಮಿ – ಜನರಲ್ಲಿ ತೀವ್ರ ಆತಂಕ

    ಹಾಸನ: ಜಿಲ್ಲೆಯಲ್ಲಿ ಲಘು ಭೂಕಂಪನ ಸಂಭವಿಸಿದೆ. ಹಾಸನ, ಹೊಳೆನರಸೀಪುರ, ಅರಕಲಗೂಡು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ.

    ಅರಕಲಗೂಡು ತಾಲೂಕಿನ ಬೆಳವಾಡಿ, ಹನೆಮಾರನಹಳ್ಳಿ, ಕಾರಹಳ್ಳಿ, ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ಬೆಳಗಿನ ಜಾವ 4.38ರ ಸಮಯದಲ್ಲಿ ಭೂಕಂಪನದ ಅನುಭವವಾಗಿದ್ದು ಜನರೆಲ್ಲಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ನದಿಯಲ್ಲಿ ಪತ್ನಿಗೆ ಕಿಸ್‌ ಮಾಡಿದ ಪತಿಯನ್ನೇ ಥಳಿಸಿದ ಸಾರ್ವಜನಿಕರು… Video Viral

    ಹಾಸನ ತಾಲೂಕಿನ ಮಲ್ಲೆದೇವರಪುರ, ಕಾರ್ಲೆ ಅಂಕನಹಳ್ಳಿ ಗ್ರಾಮದ ಸುತ್ತಮುತ್ತಲೂ ಬೆಳಗ್ಗೆ 4.52 ನಿಮಿಷದಲ್ಲಿ ಭೂಮಿ ನಡುಗಿದ ಅನುಭವ ಆಗಿದೆ. ಭೂಕಂಪಕ್ಕೆ ನಿದ್ದೆಯಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಮನೆಗಳಲ್ಲಿ ಬಿರುಕು ಬಿಟ್ಟಿದೆ. ಈ ಮಧ್ಯೆ, ಅಫ್ಘಾನಿಸ್ಥಾನದಲ್ಲಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 1,000 ದಾಟಿದೆ. 1,800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಜೆಪಿ ನಡ್ಡಾ ನಿವಾಸಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

    Live Tv

  • ಯಮುನೋತ್ರಿ ದೇವಸ್ಥಾನದ ಹೆದ್ದಾರಿಯಲ್ಲಿ ಗೋಡೆ ಕುಸಿತ – 10 ಸಾವಿರ ಮಂದಿ ಸಂಕಷ್ಟದಲ್ಲಿ

    ಯಮುನೋತ್ರಿ ದೇವಸ್ಥಾನದ ಹೆದ್ದಾರಿಯಲ್ಲಿ ಗೋಡೆ ಕುಸಿತ – 10 ಸಾವಿರ ಮಂದಿ ಸಂಕಷ್ಟದಲ್ಲಿ

    ಡೆಹರಾಡೂನ್: ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಗೋಡೆ ಕುಸಿದು ಸುಮಾರು 10,000 ಜನರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಕುಸಿತದಿಂದ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, 10,000 ಜನರು ಹೆದ್ದಾರಿಯ ವಿವಿಧೆಡೆ ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದ ವಿದೇಶಾಂಗ ನೀತಿ ಸಂಪೂರ್ಣ ಬದಲಾಗಿದೆ, ಯಾರ ಮಾತನ್ನೂ ಕೇಳಲ್ಲ: ರಾಹುಲ್ ಗಾಂಧಿ

    ರಸ್ತೆಯನ್ನು ಮತ್ತೆ ತೆರೆಯಲು 3 ದಿನಗಳು ಬೇಕಾಗಬಹುದು. ಕೆಲವು ಚಿಕ್ಕ ವಾಹನಗಳಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದ್ದು, ದೂರದಿಂದ ದೊಡ್ಡ ವಾಹನಗಳಲ್ಲಿ ಬಂದವರು ತೆರಳಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.  ಇದನ್ನೂ ಓದಿ: ವಿಶ್ವಯೋಗ ದಿನಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ: ಪ್ರತಾಪ್ ಸಿಂಹ

  • ಬಸಪ್ಪನಿಗೆ ಚಮಚದಲ್ಲಿ ಹಾಲು ಕುಡಿಸಿದ ಭಕ್ತರು!

    ಬಸಪ್ಪನಿಗೆ ಚಮಚದಲ್ಲಿ ಹಾಲು ಕುಡಿಸಿದ ಭಕ್ತರು!

    ಬಾಗಲಕೋಟೆ: ಜನ ಮರುಳೊ, ಜಾತ್ರೆ ಮರುಳೊ ಎಂಬ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ. ಬಸಪ್ಪನಿಗೆ ಭಕ್ತರು ಚಮಚದಲ್ಲಿ ಹಾಲು ಕುಡಿಸಿದ್ದಾರೆ.

    ಪಟ್ಟಣದ ಅರಳಿಕಟ್ಟೆ ಬಸಪ್ಪನಿಗೆ ಭಕ್ತರು ಚಮಚದಲ್ಲಿ ಹಾಲು ಕುಡಿಸಲು ಶುರು ಮಾಡಿದ್ದಾರೆ. ಚಮಚದಲ್ಲಿನ ಹಾಲು ಕೆಳಗೆ ಬಿದ್ದರೇ ಬಸವಣ್ಣ ಹಾಲು ಕುಡಿದ ಅಂತ ನಂಬಿಕೆ. ಈ ಸುದ್ದಿ ಪಟ್ಟಣದ ತುಂಬ ಹರಡಿದ್ದು, ಬಸಪ್ಪನನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.

    ನಿನ್ನೆ ರಾತ್ರಿ ಜನರು ಬಸಪ್ಪನ ಪವಾಡ ನೋಡಬೇಕು ಎಂದು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.

  • ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ

    ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ

    ಜಿನೆವಾ: ರಷ್ಯಾದ ಆಕ್ರಮಣದಿಂದ ತತ್ತರಿಸಿ ಹೋಗಿರುವ ಉಕ್ರೇನ್‍ನಿಂದ ಕೇವಲ ಒಂದು ವಾರದಲ್ಲಿ 1 ಮಿಲಿಯನ್ ಜನರು ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇದು ಈ ಶತಮಾನದ ಅತಿದೊಡ್ಡ ನಿರಾಶ್ರಿತರ ಬಿಕ್ಕಟ್ಟಾಗಿ ಪರಿಣಮಿಸುವ ಪರಿಸ್ಥಿತಿಯನ್ನು ತೋರಿಸುತ್ತದೆ.

    ವಿಶ್ವ ಬ್ಯಾಂಕ್ 2020ರ ಅಂತ್ಯದಲ್ಲಿ ನಡೆಸಿದ ಎಣಿಕೆಯಲ್ಲಿ ಉಕ್ರೇನ್ ಸುಮಾರು 44 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ ಎಂದು ತಿಳಿಸಿತ್ತು. ಆದರೆ ಒಂದು ವಾರದೊಳಗೆ ಉಕ್ರೇನ್‍ನಿಂದ ಶೇಕಡ 2ಕ್ಕಿಂತ ಹೆಚ್ಚು ಮಂದಿ ಪಲಾಯಾನ ಮಾಡುತ್ತಿದ್ದಾರೆ. ಅಲ್ಲದೇ ಮುಂದೆ 4 ಮಿಲಿಯನ್ ಜನರು ಅಂತಿಮವಾಗಿ ಉಕ್ರೇನ್ ತೊರೆಯಬಹುದು ಎಂದು ವಿಶ್ವಸಂಸ್ಥೆ ಭವಿಷ್ಯ ನುಡಿದಿದೆ. ಇದನ್ನು ಓದಿ: ಪುಟಿನ್‌ ಜೊತೆ 2ನೇ ಬಾರಿ ಮೋದಿ ಮಾತುಕತೆ

    ಇಮೇಲ್ ಮೂಲಕ ವಿಶ್ವಸಂಸ್ಥೆ ವಕ್ತಾರ ಜೌಂಗ್-ಆಹ್ ಘೆಡಿನಿ-ವಿಲಿಯಮ್ಸ್ ಅವರು, ರಾಷ್ಟ್ರೀಯ ಅಧಿಕಾರಿಗಳು ಸಂಗ್ರಹಿಸಿದ ಎಣಿಕೆಗಳ ಆಧಾರದ ಮೇಲೆ ಮಧ್ಯ ಯೂರೋಪ್‍ನಲ್ಲಿ ಸುಮಾರು 1ಮಿಲಿಯನ್ ಮಂದಿ ದೇಶ ತೊರೆದಿದ್ದಾರೆ ಎಂದು ನಮ್ಮ ಡೇಟಾವು ಸೂಚಿಸುತ್ತಿದೆ.

    ಮತ್ತೊಂದೆಡೆ ವಿಶ್ವಸಂಸ್ಥೆ ಹೈ ಕಮಿಷನರ್ ಫಿಲಿಪ್ಪೊ ಗ್ರಾಂಡಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಕೇವಲ ಏಳು ದಿನಗಳಲ್ಲಿ ಉಕ್ರೇನ್‍ನಿಂದ ನೆರೆಯ ದೇಶಗಳಿಗೆ ಒಂದು ಮಿಲಿಯನ್ ನಿರಾಶ್ರಿತರು ವಲಸೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಅಕ್ರಮ ಶಸ್ತ್ರಾಸ್ತ್ರಗಳ ಬದಲಿಗೆ, ಯುಪಿ ಈಗ ಕ್ಷಿಪಣಿಗಳನ್ನು ತಯಾರಿಸುತ್ತಿದೆ: ಅಮಿತ್ ಶಾ

  • ಅತ್ತೆ ಮನೆಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ವಧು – ವೀಡಿಯೋ ವೈರಲ್

    ಅತ್ತೆ ಮನೆಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ವಧು – ವೀಡಿಯೋ ವೈರಲ್

    ಜೈಪುರ: ಸಾಮಾನ್ಯವಾಗಿ ಹೊಸದಾಗಿ ಮದುವೆಯಾದ ವಧು, ವರನ ಜೊತೆಗೆ ಐಷಾರಾಮಿ ಕಾರಿನಲ್ಲಿ ಅತ್ತೆ ಮನೆಗೆ ಆಗಮಿಸುವುದನ್ನು ನಾವು ನೋಡಿರುತ್ತೇವೆ. ಆದರೆ ರಾಜಸ್ಥಾನದ ಬಾರ್ಮರ್‌ನಲ್ಲಿ ವಧು ತನ್ನ ಅತ್ತೆ ಮನೆಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದಾರೆ.

    ಹೌದು, ಬಾರ್ಮರ್ ಜಿಲ್ಲೆಯ ದಲಿತ ಕುಟುಂಬವೊಂದು ತಮ್ಮ ಸೊಸೆಯನ್ನು ಮೊದಲ ಬಾರಿಗೆ ಮನೆಗೆ ಕರೆತರಲು ಖಾಸಗಿ ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆದಿದೆ. ಡಿಸೆಂಬರ್ 14 ರಂದು ಬಾರ್ಮರ್ ಜಿಲ್ಲೆಯ ಗಡಿಯ ಸಮೀಪವಿರುವ ಬಿಧಾನಿಯನ್ ಕಿ ಧನಿಯಲ್ಲಿ ಧಿಯಾ ಅವರನ್ನು ತರುಣ್ ಮೇಘವಾಲ್ ವಿವಾಹವಾದರು. ಮರುದಿನ ನವ ದಂಪತಿ ಹೆಲಿಕಾಪ್ಟರ್‍ನಲ್ಲಿ ಬಾರ್ಮರ್ ನಗರದ ಜಸೇಧರ್ ಧಾಮ್‍ಗೆ ತೆರಳಿದ್ದಾರೆ. ಇದನ್ನು ಕಂಡು ಗ್ರಾಮದ ಜನರು ಆಶ್ಚರ್ಯಕ್ಕೊಳಗಾಗಿದ್ದು, ಈ ದೃಶ್ಯ ನೋಡಲು ಮುಗಿಬಿದ್ದಿದ್ದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರನ್ನು ಕರೆಸಬೇಕಾಗಿತ್ತು. ಇದನ್ನೂ ಓದಿ: ತುಂಬಾ ಜನರು ನನ್ನನ್ನ ಜೈಲಿಗೆ ಕಳುಹಿಸಲು ಸಿದ್ಧರಿದ್ದಾರೆ: ರಮೇಶ್ ಕುಮಾರ್

    ಮದುವೆ ಸಮಾರಂಭದ ವೇಳೆ ದಲಿತ ವರರು ಕುದುರೆ ಸವಾರಿ ಮಾಡಿದರೆ ಥಳಿಸುವುದಾಗಿ ಬೆದರಿಕೆಯೊಡ್ಡಿದ್ದರಿಂದ ಈ ಕುಟುಂಬ ವಿಶೇಷವಾಗಿ ಆಲೋಚಿಸಿ ಹೆಲಿಕಾಪ್ಟರ್‌ನನ್ನೇ ಬಾಡಿಗೆ ಪಡೆದು ವಧುವನ್ನು ತಮ್ಮ ಮನೆಗೆ ಸ್ವಾಗತಿಸಿದ್ದಾರೆ. ಸೊಸೆಯನ್ನು ಹೆಲಿಕಾಪ್ಟರ್ ಮೂಲಕ ಬರಮಾಡಿಕೊಳ್ಳಬೇಕು ಎಂಬ ಕನಸ್ಸುನ್ನು ಹೊಂದಿದ್ದ ಅತ್ತೆ 1ಲಕ್ಷ ರೂ. ಹೆಲಿಕಾಪ್ಟರ್ ಬುಕ್ ಮಾಡಿ ಸೊಸೆಯನ್ನು ಮನೆಗೆ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಇಸ್ಲಾಮಾಬಾದ್‍ನಲ್ಲಿ 3 ದಿನ ಮೊಬೈಲ್ ಸೇವೆ ಸ್ಥಗಿತ