Tag: ಜಡೇಜಾ

  • ‘ನಾನೇಕೆ ಡೈವ್ ಮಾಡಲಿಲ್ಲ?’- ವಿಶ್ವಕಪ್ ರನೌಟ್ ಕುರಿತು ಮೌನ ಮುರಿದ ಧೋನಿ

    ‘ನಾನೇಕೆ ಡೈವ್ ಮಾಡಲಿಲ್ಲ?’- ವಿಶ್ವಕಪ್ ರನೌಟ್ ಕುರಿತು ಮೌನ ಮುರಿದ ಧೋನಿ

    ಮುಂಬೈ: 2019 ಏಕದಿನ ವಿಶ್ವಕಪ್ ಕ್ರಿಕೆಟಿನಲ್ಲಿ ಟೀಂ ಇಂಡಿಯಾ ಸೆಮಿಫೈನಲ್‍ನಲ್ಲಿ ಸೋತು ಹಿಂದಿರುಗಿತ್ತು. ನ್ಯೂಜಿಲೆಂಡ್ ವಿರುದ್ಧದ ಸೆಮಿಸ್‍ನಲ್ಲಿ ನಡೆದ ಪಂದ್ಯದಲ್ಲಿ ಧೋನಿ ರನೌಟ್ ಆಗುವ ಮೂಲಕ ಹೊರ ನಡೆದಿದ್ದರು. ಧೋನಿಯವರ ರನೌಟ್ ತಂಡವನ್ನು ಜಯದಿಂದ ದೂರ ಮಾಡಿತ್ತು. ಈ ರನೌಟ್ ಕುರಿತು ಇತ್ತೀಚೆಗಷ್ಟೇ ಧೋನಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ವೃತ್ತಿ ಜೀವನ ಮೊದಲ ಮ್ಯಾಚ್‍ನಲ್ಲಿ ರನೌಟ್ ಆದ ರೀತಿಯಲ್ಲೇ ಸೆಮಿಸ್‍ನಲ್ಲೂ ರನೌಟ್ ಆಗಿರುವುದಾಗಿ ನೆನಪಿಸಿಕೊಂಡಿದ್ದಾರೆ.

    ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಸೆಮಿಫೈನಲ್ ಸೋಲುಂಡಿತ್ತು. ಪಂದ್ಯದಲ್ಲಿ ಟೀಂ ಇಂಡಿಯಾ 241 ರನ್ ಗುರಿ ತಲುಪಲು ವಿಫಲವಾಗಿತ್ತು. ತಂಡದ ಆರಂಭಿಕ ಆಟಗಾರರು ವಿಫಲರಾದ ಬಳಿಕ ಜಡೇಜಾ (77 ರನ್), ಧೋನಿ (50 ರನ್) ಗಳಿಸಿ ಆಸೆಯಾಗಿದ್ದರು. ಈ ಹಂತದಲ್ಲಿ ಧೋನಿ ರನೌಟ್ ಆಗಿದ್ದರು. ಸದ್ಯ ರನೌಟ್ ಕುರಿತು ಧೋನಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

    ಪಂದ್ಯದ ಸೋಲಿನ ಬಳಿಕ ನಾನು ಹಲವು ಬಾರಿ ಏಕೆ ಡೈವ್ ಮಾಡಲಿಲ್ಲ ಎಂದು ಪ್ರಶ್ನೆ ಮಾಡುಕೊಂಡಿದ್ದೇನೆ. ಕೇವಲ 2 ಇಂಚಿನ ಅಂತರದಲ್ಲಿ ರನೌಟ್ ಆಯ್ತು, ನಾನು ಡೈವ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.

    ಪಂದ್ಯದಲ್ಲಿ ಧೋನಿ-ಜಡೇಜಾ ಜೋಡಿ 116 ರನ್ ಗಳಿಸಿದ ಸಂದರ್ಭದಲ್ಲಿ ಟೀಂ ಇಂಡಿಯಾ ಗೆಲ್ಲುವ ವಿಶ್ವಾಸವಿತ್ತು. ಅಂತಿಮ 2 ಓವರ್ ಗಳಲ್ಲಿ 31 ರನ್ ಅಗತ್ಯವಿತ್ತು. ಓವರಿನ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಧೋನಿ ಅರ್ಧ ಶತಕ ಪೂರ್ಣಗೊಳಿಸಿದ್ದರು. 2ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 3ನೇ ಎಸೆತದಲ್ಲಿ ಇಲ್ಲದ 2 ರನ್‍ಗೆ ಓಡಲು ಧೋನಿ ಮುಂದಾಗಿ ಮಾರ್ಟಿನ್ ಗಪ್ಟಿಲ್ ಅದ್ಭುತ ಥ್ರೋನಿಂದ ರನೌಟ್ ಆಗಿದ್ದರು. ಆ ಬಳಿಕ ಚಹಲ್, ಭುವನೇಶ್ವರ್ 5 ರನ್ ಗಳಿಸಿ ಔಟಾಗಿದ ಪರಿಣಾಮ 221 ರನ್ ಗಳಿಗೆ ಆಲೌಟ್ ಆಗುವ ಮೂಲಕ 18 ರನ್ ಅಂತರದಲ್ಲಿ ತಂಡ ಸೋಲುಂಡಿತ್ತು.

    ಸೆಮಿಫೈನಲ್ ಪಂದ್ಯದ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರವೇ ಉಳಿದಿದ್ದಾರೆ. ಕೆಲ ಸಮಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದ ಧೋನಿ, ಆ ಬಳಿಕ ನಡೆದ ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ತಂಡಗಳ ವಿರುದ್ಧದ ಸರಣಿಯಿಂದ ದೂರವುಳಿದಿದ್ದಾರೆ. ಇತ್ತ ಮಂಗಳವಾರದಿಂದ ಆರಂಭವಾಗುತ್ತಿರುವ ಆಸೀಸ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭಾಗವಹಿಸುತ್ತಿದ್ದು, ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಪ್ರವಾಸ ಬೆಳೆಸಲಿದೆ.

    ಇತ್ತೀಚೆಗಷ್ಟೇ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದು, ಧೋನಿ ಶೀಘ್ರದಲ್ಲೇ ಏಕದಿನ ಕ್ರಿಕೆಟ್‍ನಿಂದ ದೂರವಾಗಲಿದ್ದಾರೆ ಎಂದು ಹೇಳಿದ್ದು, ಫಿಟ್ನೆಸ್, ಫೇಮ್ ಉತ್ತಮವಾಗಿದ್ದರೆ ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ಅವಕಾಶವಿದೆ ಎಂದಿದ್ದಾರೆ.

  • ಅಭಿಮಾನಿಯ ಟ್ವೀಟ್ ರಿಟ್ವೀಟ್ ಮಾಡಿ ಸೆಹ್ವಾಗ್ ಕಾಲೆಳೆದ ಜಡೇಜಾ

    ಅಭಿಮಾನಿಯ ಟ್ವೀಟ್ ರಿಟ್ವೀಟ್ ಮಾಡಿ ಸೆಹ್ವಾಗ್ ಕಾಲೆಳೆದ ಜಡೇಜಾ

    ಬೆಂಗಳೂರು: ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ತನ್ನ ಬಗ್ಗೆ ವಿರೇಂದ್ರ ಸೆಹ್ವಾಗ್ ಬಳಿ ಕೇಳಿಕೊಂಡ ಪ್ರಶ್ನೆಯನ್ನು ಟೀಂ ಇಂಡಿಯಾದ ಆಲ್‍ರೌಂಡರ್ ರವೀಂದ್ರ ಜಡೇಜಾ ರಿಟ್ವೀಟ್ ಮಾಡಿದ್ದಾರೆ.

    ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 203 ರನ್ ಗಳಿಂದ ಪಂದ್ಯವನ್ನು ಗೆದ್ದ ಹಿನ್ನೆಲೆಯಲ್ಲಿ ಸೆಹ್ವಾಗ್ ಟೀಂ ಇಂಡಿಯಾವನ್ನು ಟ್ವಿಟ್ಟರ್ ನಲ್ಲಿ ಅಭಿನಂದಿಸಿದ್ದರು.

    ರೋಹಿತ್ ಶರ್ಮಾ ಉತ್ತಮವಾಗಿ ಆಡಿದ್ದೀರಿ. ಮಯಾಂಕ್, ಶಮಿ, ಅಶ್ವಿನ್, ಪುಜಾರಾ ಅವರ ಸಂಘಟಿತ ಆಟದಿಂದ ಭಾರತ ಜಯಗಳಿಸಿದೆ ಎಂದು ಬರೆದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಗಮನಿಸಿದ ಬಿನೀತ್ ಪಟೇಲ್ ಎಂಬವರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರೂ ಯಾಕೆ ಅವರ ಹೆಸರನ್ನು ಉಲ್ಲೇಖ ಮಾಡಿಲ್ಲ ಎಂದು ಪ್ರಶ್ನಿಸಿದ್ದರು.

    ಬಿನೀತ್ ಪಟೇಲ್ ಟ್ವೀಟ್ ನಲ್ಲಿ ಟ್ಯಾಗ್ ಆಗಿದ್ದ ಕಾರಣ ರವೀಂದ್ರ ಜಡೇಜಾ ಅವರು ಈ ಟ್ವೀಟ್ ರಿಟ್ವೀಟ್ ಮಾಡಿ ಸೆಹ್ವಾಗ್ ಕಾಲೆಳೆದಿದ್ದಾರೆ. ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಔಟಾಗದೇ 30 ರನ್ (46 ಎಸೆತ, 1 ಸಿಕ್ಸರ್) ಹೊಡೆದಿದ್ದ ಜಡೇಜಾ ಎರಡನೇ ಇನ್ನಿಂಗ್ಸ್ ನಲ್ಲಿ 40 ರನ್(32 ಎಸೆತ, 3 ಸಿಕ್ಸರ್) ಹೊಡೆದಿದ್ದರು.

    ಮೊದಲ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಕಿತ್ತಿದ್ದ ಜಡೇಜಾ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದರು.

  • ನೀವು ಆಡಿರುವ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯವಾಡಿದ್ದೇನೆ – ಮಂಜ್ರೇಕರ್‌ಗೆ ಜಡೇಜಾ ಖಡಕ್ ಮಾತು

    ನೀವು ಆಡಿರುವ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯವಾಡಿದ್ದೇನೆ – ಮಂಜ್ರೇಕರ್‌ಗೆ ಜಡೇಜಾ ಖಡಕ್ ಮಾತು

    ಬೆಂಗಳೂರು: ವಿಶ್ವಕಪ್ ಟೂರ್ನಿಯ ವೀಕ್ಷಕ ವಿವರಣೆಗಾರ, ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ವಿರುದ್ಧ ಆಲ್‍ರೌಂಡರ್ ರವೀಂದ್ರ ಜಡೇಜಾ ಗರಂ ಆಗಿದ್ದಾರೆ.

    ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುವ ಸಮಯದಲ್ಲಿ ಮಂಜ್ರೇಕರ್ ನಾನು ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ. ಟೆಸ್ಟ್ ಪಂದ್ಯದಲ್ಲಿ ಜಡೇಜಾ ನಿಜವಾಗಿಯೂ ಬೌಲರ್. ಆದರೆ 50 ಓವರ್‌ಗಳ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಮತ್ತು ಸ್ಪಿನ್ನರ್ ಆಗಿರುತ್ತಾರೆ ಎಂದು ಹೇಳಿದ್ದರು.

    ಮಂಜ್ರೇಕರ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಜಡೇಜಾ ಒಂದು ಪಂದ್ಯವನ್ನು ಆಡದೇ ಇದ್ದರೂ ಅವರ ಕೊಡುಗೆ ವಿಶ್ವಕಪ್‍ನಲ್ಲಿ ಸಾಕಷ್ಟಿದೆ. ಭಾರತದ ಗೆಲುವಿನ ಹಿಂದೆ ಅವರ ಕ್ಯಾಚ್ ಸಹ ಇದೆ ಎನ್ನುವದನ್ನು ಮರೆಯಬೇಡಿ ಎಂದು ಹೇಳಿ ಕ್ರಿಕೆಟ್ ಅಭಿಮಾನಿಗಳು ಮಂಜ್ರೇಕರ್ ವಿರುದ್ಧ ಕಿಡಿ ಕಾರುತ್ತಿದ್ದರು.

    ಚರ್ಚೆ ಜೋರು ಆಗುತ್ತಿದ್ದಂತೆ ಜಡೇಜಾ, ನೀವು ಆಡಿರುವ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯವಾಡಿದ್ದೇನೆ. ಈಗಲೂ ಆಡುತ್ತಿದ್ದೇನೆ. ಸಾಧನೆ ಮಾಡಿದವರನ್ನು ಗೌರವಿಸಲು ಕಲಿತುಕೊಳ್ಳಿ. ನಿಮ್ಮ ಅತಿಸಾರದ ಮಾತುಗಳನ್ನು ಸಾಕಷ್ಟು ಕೇಳಿದ್ದೇನೆ ಎಂದು ಖಾರವಾಗಿ ಬರೆದು ಮಂಜ್ರೇಕರ್ ಅವರಿಗೆ ಟ್ಯಾಗ್ ಮಾಡಿ ತಿರುಗೇಟು ನೀಡಿದ್ದಾರೆ.

    ಜಡೇಜಾ ಅವರ ಟ್ವೀಟ್ ಅನ್ನು 38 ಸಾವಿರಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದರೆ 1.60 ಲಕ್ಷಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.

    ಮಂಜ್ರೇಕರ್ ಒಟ್ಟು 74 ಏಕದಿನ ಪಂದ್ಯವಾಡಿದ್ದು, 1994 ರನ್ ಗಳಿಸಿದ್ದಾರೆ. ಜಡೇಜಾ 151 ಏಕದಿನ ಪಂದ್ಯವಾಡಿದ್ದು 2035 ರನ್ ಗಳಿಸಿದ್ದಾರೆ. 41 ಟೆಸ್ಟ್ ಪಂದ್ಯಗಳಲ್ಲಿ 192 ವಿಕೆಟ್, 151 ಏಕದಿನ ಪಂದ್ಯಗಳ 147 ಇನ್ನಿಂಗ್ಸ್ ನಲ್ಲಿ ಜಡೇಜಾ 174 ವಿಕೆಟ್ ಕಿತ್ತಿದ್ದಾರೆ.

    ಮಂಜ್ರೇಕರ್ ಅವರು ಧೋನಿ ಅವರನ್ನು ಟೀಕೆ ಮಾಡಿದ್ದರು. ಸ್ಟ್ರೈಕ್ ರೇಟ್ ಮತ್ತು ಕೊನೆಯ ಓವರಿನಲ್ಲಿ ಒಂಟಿ ರನ್ ತೆಗೆದುಕೊಳ್ಳುತ್ತಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ದರು. ಕಪ್ ಗೆಲ್ಲಲು ಹೊರಟ ಭಾರತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ತಂಡವೆಂದರೆ ಅದು ಇಂಗ್ಲೆಂಡ್ ಮಾತ್ರ. ಕೊನೆಯಲ್ಲಿ ಧೋನಿ ಆಟ ಭಾರತದ ಗೆಲುವಿಗೆ ಅಡ್ಡಿಯಾಯಿತು ಎಂದು ಮಂಜ್ರೇಕರ್ ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಸಿಟ್ಟಾದ ಧೋನಿ ಅಭಿಮಾನಿಗಳು ವೀಕ್ಷಕ ವಿವರಣೆಯ ಹುದ್ದೆ ನೀಡಿದ್ದಕ್ಕೆ ಆ ಹುದ್ದೆಗೆ ತಕ್ಕುದಾದ ಭಾಷೆಯನ್ನು ಬಳಸಿ. ಏನೋ ಗೊತ್ತಿದೆ ಎನ್ನುವ ಮಾತ್ರಕ್ಕೆ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

    https://twitter.com/keith_zta/status/1145541916072665088

  • ಓಡಿ ಬಂದು ಒಂದೇ ಕೈಯಲ್ಲಿ ಬಾಲ್ ಹಿಡಿದು ಡೈರೆಕ್ಟ್ ಥ್ರೋ – ಜಡೇಜಾ ಫೀಲ್ಡಿಂಗ್ ಸೂಪರ್

    ಓಡಿ ಬಂದು ಒಂದೇ ಕೈಯಲ್ಲಿ ಬಾಲ್ ಹಿಡಿದು ಡೈರೆಕ್ಟ್ ಥ್ರೋ – ಜಡೇಜಾ ಫೀಲ್ಡಿಂಗ್ ಸೂಪರ್

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅತ್ಯುತ್ತಮವಾಗಿ ಫೀಲ್ಡಿಂಗ್ ಮಾಡಿ ಉಸ್ಮಾನ್ ಖವಾಜ ಅವರನ್ನು ರನೌಟ್ ಮಾಡಿದ್ದಾರೆ.

    19ನೇ ಓವರ್ 21 ರನ್ ಗಳಿಸಿದ್ದ ಕುಲ್ ದೀಪ್ ಯಾದವ್ ಎಸೆದ 3ನೇ ಎಸೆತವನ್ನು ಖವಜಾ ಬಲಗಡೆ ಹೊಡೆದು ರನ್ ಕದಿಯಲು ಯತ್ನಿಸಿದ್ದರು. ಈ ವೇಳೆ ಕವರ್ ಪಾಯಿಂಟ್ ನಲ್ಲಿದ್ದ ಜಡೇಜಾ ಒಂದೇ ಕೈಯಲ್ಲಿ ಬಾಲನ್ನು ತಡೆದು ನೇರವಾಗಿ ವಿಕೆಟ್ ಗೆ ಗುರಿಯಿಟ್ಟು ಹೊಡೆದರು.

    ಜಡೇಜಾ ಎಸೆದ ಬಾಲ್ ವಿಕೆಟ್ ತಾಗುತ್ತಿದ್ದಂತೆ ಆಟಗಾರರು ಸಂಭ್ರಮಿಸಲು ತೊಡಗಿದರು. ಈ ವೇಳೆ ಅಂಪೈರ್ ಮೂರನೇ ಅಂಪೈರ್ ಗೆ ತೀರ್ಪನ್ನು ವರ್ಗಾಯಿಸಿದರು. ಟಿವಿ ರಿಪ್ಲೈಯಲ್ಲಿ ಸ್ಟಂಪ್ ಹಾರಿದ ಬಳಿಕ ಬ್ಯಾಟ್ ಅನ್ನು ಕ್ರೀಸ್ ಗೆ ಇಡುವುದು ಸ್ಪಷ್ಟವಾಗುತ್ತಿದ್ದಂತೆ ಖವಜಾ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

    ಮೊದಲು ಬ್ಯಾಟಿಂಗ್ ಮಾಡಿರುವ ಆಸ್ಟ್ರೇಲಿಯಾ ಶೇನ್ ಮಾರ್ಶ್ ಅವರ ಶತಕದಿಂದಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದೆ. ಮಾರ್ಶ್ 131 ರನ್(123 ಎಸೆತ, 11 ಬೌಂಡರಿ, 3 ಸಿಕ್ಸರ್) ಹೊಡೆದರೆ ಮ್ಯಾಕ್ಸ್ ವೆಲ್ 48 ರನ್(37 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದರು.

    ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 3, ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚೊಚ್ಚಲ ಶತಕ ಸಿಡಿಸಿ ಕತ್ತಿವರಸೆ ಶೈಲಿಯಲ್ಲಿ ಬ್ಯಾಟ್ ಬೀಸಿದ ಜಡೇಜಾ- ವಿಡಿಯೋ ನೋಡಿ

    ಚೊಚ್ಚಲ ಶತಕ ಸಿಡಿಸಿ ಕತ್ತಿವರಸೆ ಶೈಲಿಯಲ್ಲಿ ಬ್ಯಾಟ್ ಬೀಸಿದ ಜಡೇಜಾ- ವಿಡಿಯೋ ನೋಡಿ

    ರಾಜ್ ಕೋಟ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ತಮ್ಮ ಟೆಸ್ಟ್ ವೃತ್ತಿ ಜೀವನದ ಮೊದಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಜಡೇಜಾ ಶತಕ ಸಿಡಿಸುತ್ತಿದ್ದಂತೆ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿರು.

    ಟೀಂ ಇಂಡಿಯಾ ಪರ 6ನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದ ಜಡೇಜಾ 5 ಸಿಕ್ಸರ್, 5 ಬೌಂಡರಿಗಳ ಮೂಲಕ 75.75 ಸರಾಸರಿಯಲ್ಲಿ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ತಮ್ಮ 55ನೇ ಇನ್ನಿಂಗ್ಸ್ (38 ಪಂದ್ಯ)ಗಳಲ್ಲಿ ಶತಕದ ಸಾಧನೆ ಮಾಡಿದರು. ಈ ಹಿಂದೆ ಟೀಂ ಇಂಡಿಯಾ ಪರ ಹರ್ಭಜನ್ ಸಿಂಗ್ 121, ಅನಿಲ್ ಕುಂಬ್ಳೆ 150 ಇನ್ನಿಂಗ್ಸ್ ಗಳಲ್ಲಿ ಮೊದಲ ಶತಕ ಸಿಡಿಸಿದ್ದರು.

    2ನೇ ದಿನದಾಟದದಲ್ಲಿ ಕೊಹ್ಲಿ ಮತ್ತು ಜಡೇಜಾ 6ನೇ ವಿಕೆಟ್‍ಗೆ 64 ರನ್ ಜೊತೆಯಾಟವಾಡಿದರು. 87 ಎಸೆತಗಳಲ್ಲಿ 50 ರನ್ ಸಿಡಿಸಿದರು. ಬಳಿಕ 132 ಎಸೆತಗಳಲ್ಲಿ ಶತಕ ಗಳಿಸಿದರು. ಅರ್ಧ ಶತಕ, ಶತಕ ಗಳಿಸಿದ ವೇಳೆ ತಮ್ಮದೇ ಕತ್ತಿವರಸೆ ಶೈಲಿಯಲ್ಲಿ ಬ್ಯಾಟನ್ನು ಗಾಳಿಯಲ್ಲಿ ಬೀಸಿ ಸಂಭ್ರಮಿಸಿದರು. ಇದುವರೆಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಜಡೇಜಾ 9 ಅರ್ಧ ಶತಕಗಳಿಸಿದ್ದಾರೆ. ಇದನ್ನೂ ಓದಿ: ಶತಕ ಸಿಡಿಸುವುದರ ಜೊತೆ ಭಾರತದ ಪರ ದಾಖಲೆ ನಿರ್ಮಿಸಿದ ಪೃಥ್ವಿ ಶಾ!

    ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಪರ ಪೃಥ್ವಿ ಶಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಶತಕ ಸಿಡಿಸಿದರೆ, ಚೇತೇಶ್ವರ ಪೂಜಾರಾ, ರಿಷಭ್ ಪಂತ್ ಅರ್ಧ ಶತಕ ಗಳಿಸಿ ಮಿಂಚಿದರು. ತಂಡ 149.5 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 649 ಗಳಿಸಿ ಬೃಹತ್ ಮೊತ್ತ ಗಳಿಸಿದ್ದ ವೇಳೆ ಕೊಹ್ಲಿ ಡಿಕ್ಲೇರ್ ಮಾಡಿಕೊಂಡರು. ಇದನ್ನೂ ಓದಿ: ಶತಕ ಸಿಡಿಸಿ ಭಾರತದ ಪರ ದಾಖಲೆ ಬರೆದ ಕೊಹ್ಲಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಹ್ಲಿ ವಿಕೆಟ್ ಪಡೆದ್ರು ಸಂತೋಷ ಪಟ್ಟಿಲ್ಲ ಯಾಕೆ: ಜಡೇಜಾ ಹೇಳ್ತಾರೆ ಓದಿ

    ಕೊಹ್ಲಿ ವಿಕೆಟ್ ಪಡೆದ್ರು ಸಂತೋಷ ಪಟ್ಟಿಲ್ಲ ಯಾಕೆ: ಜಡೇಜಾ ಹೇಳ್ತಾರೆ ಓದಿ

    ಪುಣೆ: ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದ ವೇಳೆ ತಾನು ಇನ್ನಿಂಗ್ಸ್ ನ ಮೊದಲ ಬೌಲ್ ಎಸೆದ ಕಾರಣ ಸೆಲೆಬ್ರೇಟ್ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಸಿಎಸ್‍ಕೆ ಬೌಲರ್ ರವೀಂದ್ರ ಜಡೇಜಾ ಹೇಳಿದ್ದಾರೆ.

    ಶನಿವಾರ ಚೆನ್ನೈ ಹಾಗೂ ಆರ್ ಸಿಬಿ ನಡುವಿನ ಪಂದ್ಯದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿದ ಜಡೇಜಾ, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಸಂತಸ ತಂದಿದೆ. ನನ್ನ ಬೌಲಿಂಗ್ ಎಂಜಾಯ್ ಮಾಡಿದ್ದೇನೆ ಎಂದರು.

    ಈ ಹಿಂದಿನ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ದುಬಾರಿ ಬೌಲಿಂಗ್ ಮಾಡಿದ ಜಡೇಜಾ ಆರ್ ಸಿಬಿ ವಿರುದ್ಧ ಮೂರು ವಿಕೆಟ್ ಪಡೆದು ಮಿಂಚಿದ್ದರು. ಪಂದ್ಯದಲ್ಲಿ ಮೊದಲ ಪವರ್ ಪ್ಲೇ ಮುಗಿದ ಬಳಿಕ ಸ್ಟ್ರೈಕ್ ನಲ್ಲಿದ್ದ ಕೊಹ್ಲಿ ಅವರಿಗೆ ಬೌಲ್ ಮಾಡುವ ಅವಕಾಶವನ್ನು ಪಡೆದಿದ್ದರು. ಮೊದಲ ಎಸೆತದಲ್ಲೇ ಕೊಹ್ಲಿ ಬಿಗ್ ವಿಕೆಟ್ ಪಡೆದ ರವೀಂದ್ರ ಜಡೇಜಾ ಯಾವುದೇ ಸಂಭ್ರಮಾಚರಣೆ ಮಾಡದಿರುವುದನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. (ಗಮನಕ್ಕೆ ಸರ್ ರವೀಂದ್ರ ಜಡೇಜಾ  ಅಧಿಕೃತ ಟ್ವಿಟ್ಟರ್ ಖಾತೆಯಲ್ಲ)

     

     

    https://twitter.com/Iambadri11/status/992722422318039041

  • ಆಸೀಸ್ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ: ಯಾರು ಇನ್? ಯಾರು ಔಟ್?

    ಆಸೀಸ್ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ: ಯಾರು ಇನ್? ಯಾರು ಔಟ್?

    ಮುಂಬೈ: ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಟೀಂ ಇಂಡಿಯಾಗೆ ವಾಪಸ್ ಆಗಿದ್ದಾರೆ.

    ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿಗೆ ಪ್ರಕಟಿಸಿದ 16 ಮಂದಿಯ ತಂಡದಲ್ಲಿ ಉಮೇಶ್ ಯಾದವ್, ಮೊಹಮ್ಮದ್ ಶಮಿ ಸ್ಥಾನ ಪಡೆದಿದ್ದಾರೆ.

    ಸ್ಪಿನ್ನರ್ ಗಳಾದ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್ ಸ್ಥಾನ ಸಿಕ್ಕಿದೆ.

    ಶಾರ್ದೂಲ್ ಠಾಕೂರ್ ಅವರನ್ನು ಕೈಬಿಡಲಾಗಿದ್ದು, ಅವರ ಜಾಗದಲ್ಲಿ ಉಮೇಶ್ ಯಾದವ್‍ಗೆ ಸ್ಥಾನ ಸಿಕ್ಕಿದೆ. ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 3ರವರೆಗೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ನಾಲ್ಕು ದಿನಗಳ ಪದ್ಯದಲ್ಲಿ ಭಾರತ ಎ ತಂಡದಲ್ಲಿ ಶಾರ್ದೂಲ್ ಠಾಕೂರ್ ಅವರಿಗೆ ಸ್ಥಾನ ಸಿಕ್ಕಿದೆ.

    ಸೆಪ್ಟೆಂಬರ್ 17 ರಂದು ಚೆನ್ನೈನಲ್ಲಿ ಮೊದಲ ಏಕದಿನ ಪಂದ್ಯ ನಡೆದರೆ ಅಕ್ಟೋಬರ್ 1ರಂದು ಐದನೇ ಏಕದಿನ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ.

    ಟೀ ಇಂಡಿಯಾ ಪಟ್ಟಿ:
    ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಮನೀಷ್ ಪಾಂಡೆ, ಕೇದಾರ್ ಜಾದವ್, ಅಂಜಿಕ್ಯಾ ರೆಹಾನೆ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಚಹಲ್, ಜಸ್‍ಪ್ರಿತ್ ಬೂಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ.

  • ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್

    ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್

    ಓವಲ್: ಜಡೇಜಾ ವಿರುದ್ಧ ಅಂಗಳದಲ್ಲಿ ಸಿಟ್ಟಾಗಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಟ್ವಿಟ್ಟರ್‍ನಲ್ಲೂ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ನಮ್ಮವರನ್ನು ನಮ್ಮವರೇ ಲೂಟಿ ಮಾಡಿದ್ರು, ಬೇರೆ ಅವರಿಗೆ ಎಲ್ಲಿದೆ ಆ ತಾಕತ್ತು ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾದ ಆಟಗಾರರು ಪೆವಿಲಿಯನ್ ಪರೇಡ್ ಮಾಡುತ್ತಿದ್ದರೆ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಕೆಚ್ಚೆದೆಯ ಪ್ರದರ್ಶನ ನೀಡಿದ್ದರು. ಆದರೆ ಜಡೇಜಾ ಅವರಿಂದಾಗಿ ರನ್ ಔಟ್ ಆಗಿದ್ದಕ್ಕೆ ಸಿಟ್ಟಾಗಿದ್ದ ಪಾಂಡ್ಯ ಮ್ಯಾಚ್ ಮುಗಿದ ಬಳಿಕ ಈ ಮೇಲಿನಂತೆ ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ್ದರು.

    ರನ್‍ಔಟ್ ಆಗಿದ್ದು ಹೇಗೆ?
    ಟೀಂ ಇಂಡಿಯಾದ ಮೊತ್ತ 152 ಆಗಿದ್ದಾಗ ಹಸನ್ ಅಲಿ ಎಸೆದ 26ನೇ ಓವರ್‍ನ ಮೂರನೇ ಎಸೆತವನ್ನು ಜಡೇಜಾ ಕವರ್‍ಗೆ ತಳ್ಳಿ ರನ್ ಕದಿಯಲು ಮುಂದಾದರು. ಜಡೇಜಾ ಓಡಲು ಆರಂಭಿಸುತ್ತಿದ್ದಂತೆ ನಾನ್ ಸ್ಟ್ರೈಕ್ ನಲ್ಲಿದ್ದ ಪಾಂಡ್ಯ ಸ್ಟ್ರೈಕ್‍ನತ್ತ ಓಡಲು ಆರಂಭಿಸಿದರು. ಅಷ್ಟರಲ್ಲಿ ಬಾಲ್ ಹಫೀಸ್ ಕೈ ಸೇರಿತ್ತು. ಹಫೀಸ್ ಕೈಗೆ ಬಾಲ್ ಸಿಕ್ಕಿದ್ದೆ ತಡ ನಾನ್ ಸ್ಟ್ರೈಕ್‍ರನತ್ತ ಓಡುತ್ತಿದ್ದ ಜಡೇಜಾ ತಮ್ಮ ನಿರ್ಧಾರ ಬದಲಾಯಿಸಿ ಸ್ಟ್ರೈಕ್‍ನತ್ತ ತಿರುಗಿದರು. ಇಬ್ಬರು ಸ್ಟ್ರೈಕ್‍ನತ್ತ ಓಡುವುದನ್ನು ಗಮನಿಸಿದ ಹಫೀಸ್ ಬಾಲನ್ನು ಬೌಲರ್ ಹಸನ್ ಅಲಿಗೆ ಎಸೆದರು. ಈ ವೇಳೆ ಜಡೇಜಾ ಸ್ಟ್ರೈಕ್ ತಲುಪಿ ಆಗಿತ್ತು. ಹೀಗಾಗಿ ಪಾಂಡ್ಯ ರನೌಟ್‍ಗೆ ಬಲಿಯಾದರು.

    ರನ್‍ಔಟ್ ಆದ ಕೂಡಲೇ ಅಲ್ಲೇ ಜಡೇಜಾ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ ಪಾಂಡ್ಯ ಡ್ರೆಸಿಂಗ್ ರೂಂಗೆ ಹೋಗುವವರೆಗೂ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದ್ದರು.

    ರಾತ್ರಿ ಟ್ವೀಟ್: ಪಂದ್ಯ ಮುಗಿದ ಬಳಿಕ ಪಾಂಡ್ಯ ತಮ್ಮ ಆಕ್ರೋಶವನ್ನು ಟ್ವಿಟ್ಟರ್‍ನಲ್ಲಿ ತೋರಿಸಿದ್ದಾರೆ. ರಾತ್ರಿ 10.15 ಟ್ವೀಟ್ ಮಾಡಿದ ತಕ್ಷಣ ಈ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ. ಟ್ವೀಟ್ ಡಿಲೀಟ್ ಮಾಡಿದ್ದರೂ ಜನ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

    ಧೋನಿ ಔಟಾಗುವ ವೇಳೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿತ್ತು. ನಂತರ ಕ್ರೀಸಿಗೆ ಆಗಮಿಸಿದ್ದ ಪಾಂಡ್ಯ ಪಾಕ್ ಬೌಲರ್‍ಗಳ ಎಸೆತವನ್ನು ಮನಬಂದಂತೆ ಚಚ್ಚಲು ಆರಂಭಿಸಿದ್ದರು. ಪರಿಣಾಮ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅವರು 43 ಎಸೆತಗಳಲ್ಲಿ 76 ರನ್ ಸಿಡಿಸಿದ್ದರು. ಈ ಭರ್ಜರಿ ಆಟದಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದ್ದರು.

    ಇದನ್ನೂ ಓದಿ: 76 ರನ್‍ಗಳಿಸಿ ರನೌಟ್ ಆದ್ರೂ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!

     

     

     

    https://twitter.com/takentweets/status/876515488414785537