Tag: ಜಟ್ಕಾ ಕಟ್

  • ಹಲಾಲ್ ಕಟ್ : ನಟ ಚೇತನ್ ಪ್ರತಿಕ್ರಿಯೆಯೇ ಭಿನ್ನ

    ಹಲಾಲ್ ಕಟ್ : ನಟ ಚೇತನ್ ಪ್ರತಿಕ್ರಿಯೆಯೇ ಭಿನ್ನ

    ರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿದ್ಯಮಾನಗಳಿಗೂ ನಟ, ಸಾಮಾಜಿಕ ಹೋರಾಟಗಾರ ಚೇತನ್ ಪ್ರತಿಕ್ರಿಯಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಅವರು ಒಂದೊಂದು ಸಲ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಈ ಸಲ ಅವರು ‘ಹಲಾಲ್’ ಕಟ್ ಮತ್ತು ‘ಜಟ್ಕಾ’ ಕಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೊಲ್ಲುವ ಮಾದರಿಗಳ ಬಗ್ಗೆ ಹೋರಾಡುವ ಬದಲು, ಜೀವ ರಕ್ಷಣೆಯ ಕೆಲಸ ಮಾಡಬೇಕು ಅಲ್ಲವಾ? ಎಂದು ಪರೋಕ್ಷವಾಗಿ ಹಿಂದೂ ಸಂಘಟನೆಗಳ ಕುರಿತು ಮಾತನಾಡಿದ್ದಾರೆ.  ಇದನ್ನೂ ಓದಿ : ಕಂಗನಾ ರಣಾವತ್ ಶೋನಲ್ಲಿ ಕರ್ಮ ಕರ್ಮ : ಶರ್ಟ್ ಬಿಚ್ಚಿತೀನಿ ಅಂದ ಮಾದಕ ನಟಿ ಪೂನಂ

    ಹಲಾಲ್ ಕಟ್ ನಿಷೇಧಿಸಬೇಕು ಎಂಬ ಹೋರಾಟ ಕರ್ನಾಟಕದಲ್ಲಿ ತೀವ್ರಗೊಂಡಿದೆ. ಹಲಾಲ್ ಆಹಾರಗಳನ್ನು ಹಿಂದೂಗಳು ಕೊಳ್ಳದಿರುವಂತೆ ಹಿಂದೂಪರ ಸಂಘಟನೆಗಳು ಬೀದಿಗೆ ಇಳಿದಿವೆ. ಈ ಸಂದರ್ಭದಲ್ಲಿ ನಟ ಚೇತನ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ತಮ್ಮ ಫೇಸ್ ಬುಕ್ ಖಾತೆಯಲ್ಲಿ “ಕರ್ನಾಟಕದಲ್ಲಿ ಹಿಂದುತ್ವ ಸಂಘಟನೆಗಳು ಹಲಾಲ್ ಕಟ್ ಮಾಂಸ ಮಾರಾಟಗಾರರನ್ನು ನಿಷೇಧಿಸಲು ಜಟ್ಕಾ ಕಟ್ ಮಾಂಸವನ್ನು ಒತ್ತಾಯಿಸಿ ದಂಗೆ ಎಬ್ಬಿಸುತ್ತಿದ್ದಾರೆ. ನಾವು ಕೊಲ್ಲುವ ಮಾರ್ಗಗಳ ಬಗ್ಗೆ ಹೋರಾಡುವ ಬದಲು, ಹೆಚ್ಚಿನ ಜೀವಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಅಲ್ಲವೆ? ಸದ್ಯದ ಪರಿಸ್ಥಿತಿಯಲ್ಲಿ ಬುದ್ಧನ ಅಹಿಂಸೆಯ ಅಗತ್ಯವಿದೆಯೇ ಹೊರತು, ಕೋಮು ದ್ವೆಷದ ಅಗತ್ಯವಿಲ್ಲ” ಎಂದು ಬರಹದ ಮೂಲಕ ತಿವಿದಿದ್ದಾರೆ. ಇದನ್ನೂ ಓದಿ : ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್

    ನಟ ಚೇತನ್ ಮೊನ್ನೆಯಷ್ಟೇ ಹಿಜಬ್ ಕುರಿತು ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ನ್ಯಾಯಾಧೀಶರ ವಿರುದ್ಧ ಮಾನಹಾನಿ ಆಗುವಂತಹ ಬರಹವನ್ನು ಟ್ವಿಟ್ ಮಾಡಿದರು ಎನ್ನುವ ಕಾರಣಕ್ಕಾಗಿ ಜೈಲಿಗೂ ಹೋಗಿ ಬಂದರು. ಅಲ್ಲದೇ ಇವರನ್ನು ದೇಶ ಬಿಡಿಸುವಂತಹ ಕೆಲಸಗಳು ನಡೆಯುತ್ತವೆ ಎಂದಾಗ, ಅದೆಲ್ಲವೂ ಸುಳ್ಳು, ನನ್ನ ಹೋರಾಟ ನಿರಂತರ ಎನ್ನುವ ಮೂಲಕ ತಮ್ಮ ಮಾತಿಗೆ ಬದ್ಧರಾಗಿಯೇ ಉಳಿಯುತ್ತಿದ್ದಾರೆ.

  • ಯುಗಾದಿ ಬಳಿಕ ಜಟ್ಕಾ ಕಟ್‍ಗೆ ಸ್ಪೆಷಲ್ ಕ್ಲಾಸ್..!

    ಯುಗಾದಿ ಬಳಿಕ ಜಟ್ಕಾ ಕಟ್‍ಗೆ ಸ್ಪೆಷಲ್ ಕ್ಲಾಸ್..!

    ಬೆಂಗಳೂರು: ಜಟ್ಕಾ-ಹಲಾಲ್ ದಂಗಲ್ ಜೋರಾಗಿದೆ. ಹಲಾಲ್ ಬಿಟ್ಟಕಿ. ಜಟ್ಕಾ ಜಮಾಯಿಸಿ ಅಂತಾ ಹಿಂದೂ ಸಂಘಟನೆಯವರು ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಮಾತ್ರವಲ್ಲ ಜಟ್ಕಾ ಕಟ್‍ಗೆ ಟ್ರೈನಿಂಗ್ ಕೂಡ ಕೊಡೋಕೆ ಪ್ಲಾನ್ ಮಾಡಿದ್ದಾರೆ.

    ರಾಜ್ಯದಲ್ಲಿ ಒಂದೆಡೆ ಯುಗಾದಿ. ಎಣ್ಣೆ ಸ್ನಾನದ ಸಿದ್ಧತೆ ಜೋರಾಗಿದ್ರೆ, ಮತ್ತೊಂದೆಡೆ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ದಂಗಲ್ ಕೂಡ ತಾರಕಕ್ಕೇರಿದೆ. ಯುಗಾದಿ ಹೊಸತೊಡಕು ವೇಳೆ ಭರ್ಜರಿ ವ್ಯಾಪಾರ ನಿರೀಕ್ಷೆಯಲ್ಲಿದ್ದ ಮುಸ್ಲಿಂ ವ್ಯಾಪಾರಿಗಳಿಗೆ ಜಟ್ಕಾ ದಂಗಲ್ ಶಾಕ್ ನೀಡಿದೆ. ಹಲಾಲ್ ವರ್ಸಸ್ ಜಟ್ಕಾ ದಂಗಲ್ ಜೋರಾಗ್ತಿದ್ದಂತೆ ಜಟ್ಕಾ ಬಾಡಿಗೆ ಫುಲ್ ಡಿಮಾಂಡ್ ಶುರುವಾಗಿದೆ. ಯುಗಾದಿ ಬಳಿಕವೂ ಜಟ್ಕಾ ಕಟ್ ಅಭಿಯಾನವನ್ನು ಮುಂದುವರಿಸಲು ಹಿಂದೂ ಸಂಘಟನೆಗಳು ಪ್ಲಾನ್ ಮಾಡಿವೆ.

    ಬೆಂಗಳೂರಿನಲ್ಲಿ ಹಲಾಲ್ ವರ್ಸಸ್ ಜಟ್ಕಾ ಫೈಟ್ ಜೋರಾಗಿದೆ. ಇದರ ಮಧ್ಯೆ ಜಟ್ಕಾ ಕಟ್ ಸ್ಪೆಷಲ್ ಕ್ಲಾಸ್‍ಗೂ ಚಿಂತನೆ ನಡೆದಿದೆ. ಯುಗಾದಿಯ ಬಳಿಕ ಜಟ್ಕಾ ಕಟ್ ಮಾಡುವ ವಿಧಾನ ತಿಳಿಸಿಕೊಡಲು ಸ್ಪೆಷಲ್ ತರಬೇತಿ ಕ್ಲಾಸ್ ತೆರೆಯಲು ನಿರ್ಧರಿಸಲಾಗಿದೆ. ಯಾಕಂದ್ರೆ ಅನೇಕ ಮಾರಾಟಗಾರರಿಗೆ ಜಟ್ಕಾ ಕಟ್ ವಿಧಾನದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಈ ವಿಧಾನದ ಬಗ್ಗೆ ತಿಳಿಸಿಕೊಡಲು ಜಟ್ಕಾ ಕಟ್ ಕ್ಲಾಸ್ ಒಪನ್‍ಗೆ ಹಿಂದವಿ ಮಾರ್ಟ್ ನಿರ್ಧರಿಸಲಾಗಿದ್ದು, ಶೀಘ್ರದಲ್ಲಿಯೇ ತರಬೇತಿ ಆರಂಭವಾಗಲಿದೆ. ಇದನ್ನೂ ಓದಿ: ಚಂಡೀಗಢವು ಜಂಟಿ ರಾಜಧಾನಿಯಾಗಿಯೇ ಉಳಿಯುತ್ತೆ: ಹರಿಯಾಣ ಸಿಎಂ

    ಹೊಸತೊಡಕಿಗೆ ಹಿಂದವೀ ಮಟನ್ ಮಾರ್ಟ್ ಆಫರ್: ಹಲಾಲ್ ಬಾಯ್ಕಾಟ್ ಅಭಿಯಾನಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಜಟ್ಕಾ ಮಟನ್ ಶಾಪ್‍ಗಳಿಂದಲೂ ರಿಯಾಯ್ತಿ ನೀಡಿದ್ದಾರೆ. ಹಲಾಲ್ ಬದಲು ಜಟ್ಕಾ ಮಟನ್ ಖರೀದಿಸುವ ಗ್ರಾಹಕರು ಹೈಪರ್ ಆಪ್ ಮೂಲಕ ಆರ್ಡರ್ ಮಾಡಿದ್ರೆ 20% ಡಿಸ್ಕೌಂಟ್ ನೀಡೋದಾಗಿ ಹಿಂದವೀ ಮಟನ್ ಮಾರ್ಟ್ ಯುಗಾದಿ ಆಫರ್ ನೀಡಿದೆ. ಒಂದು ಕೆಜಿ ಮಾಂಸಕ್ಕೆ 600 ರೂ. ನಿಗದಿ ಮಾಡಿದ್ದು, ಏಪ್ರಿಲ್ 2 ರಿಂದ ಏಪ್ರಿಲ್ 30ರವರೆಗೆ ಈ ಆಫರ್ ಇರಲಿದೆ. ಈ ಮೂಲಕ ಹಲಾಲ್ ಕಟ್‍ಗೆ ಸೆಡ್ಡು ಹೊಡೆಯಲು ಪ್ಲಾನ್ ಮಾಡಿದೆ. ಇದನ್ನೂ ಓದಿ: ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ

    ಒಟ್ಟಾರೆ ಯುಗಾದಿ ಹಬ್ಬದ ಬಳಿಕವೂ ಹಲಾಲ್ ವರ್ಸಸ್ ಜಟ್ಕಾ ಕಟ್ ದಂಗಲ್ ಮುಂದುವರಿಯುವ ಎಲ್ಲಾ ಲಕ್ಷಣಗಳಿವೆ. ಇದರ ಜೊತೆ ಈ ಗಲಾಟೆ ಪೊಲೀಸ್ ಕಮೀಷನರ್ ಮತ್ತು ಹೈಕೋರ್ಟ್ ಅಂಗಳಕ್ಕೆ ಹೋಗಿದೆ. ಹೀಗಾಗಿ ಹಿಂದೂ ಸಂಘಟನೆಗಳ ಪ್ಲಾನ್ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಅನ್ನೋದನ್ನ ಕಾದುನೋಡಬೇಕಿದೆ.

  • ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?

    ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?

    ಬೆಂಗಳೂರು: ಕರಾವಳಿಯಲ್ಲಿ ಹಿಜಬ್‌ನಿಂದ ಆರಂಭಗೊಂಡ ವಿವಾದ ಈಗ ಎಲ್ಲೆಲ್ಲೋ ಹೋಗುತ್ತಿದೆ. ದೇವಸ್ಥಾನಗಳಲ್ಲಿ ಹಿಂದೂಯೇತರರಿಗೆ ನಿರ್ಬಂಧ ಅಭಿಯಾನ ಹೊಸ ರೂಪ ಪಡೆದುಕೊಂಡಿದೆ. ಯುಗಾದಿ ಹೊಸತೊಡಕು ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ, ಹಿಂದೂಗಳ ಬಳಿಯೇ ಮಾಂಸ ಖರೀದಿ ಮಾಡುವಂತೆ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಅಭಿಯಾನವೇ ನಡೆದಿದೆ.

    ಇದಿಗ ಹಲಾಲ್ ತ್ಯಜಿಸಿ, ಜಟ್ಕಾ ಬಾಡು ಖರೀದಿಸಿ ಎಂದು ಹಿಂದೂ ಸಮುದಾಯದವರು ಕರೆ ನೀಡುತ್ತಿದ್ದಾರೆ. ಇದಕ್ಕೆ ಬಿಜೆಪಿಯೂ ಬಹಿರಂಗ ಬೆಂಬಲ ನೀಡಿದೆ. ಹಲಾಲ್ ಅನ್ನು ಆರ್ಥಿಕ ಜಿಹಾದ್ ಎಂದು ಸಿಟಿ ರವಿ ಆರೋಪಿಸಿದ್ದಾರೆ. ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ತಪ್ಪೇನು? ಮುಸಲ್ಮಾನರು ಹಿಂದೂಗಳ ಬಳಿ ಮಾಂಸ ಖರೀದಿ ಮಾಡಲ್ಲ. ಹಿಂದೂಗಳೇಕೆ ಮುಸ್ಲಿಮರ ಬಳಿ ಮಾಂಸ ಖರೀದಿ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಯಾವ ಅಂಶ ಪ್ರಚೋದನೆ ಕೊಡ್ತಿದೆ ನೀವೇ ಹೇಳಿ ಎಂದು ಸಿಟಿ ರವಿ ಕೇಳಿದ್ದಾರೆ. ಇದನ್ನೂ ಓದಿ: ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಭಟ್‌ಗೆ ಆಹ್ವಾನ – ಎಸ್‌ಎಫ್‌ಐ ವಿರೋಧ

    ಹಲಾಲ್ ಮಾಂಸದ ವಿಚಾರ ವಿವಾದ ಆಗಿರೋದು ಹೋಟೆಲ್ ಮಾಲೀಕರಿಗೆ ಹೊಸ ಪೀಕಲಾಟ ತಂದಿಟ್ಟಿದೆ. ಬೆಂಗಳೂರಿನ ಜಿಎಫ್‌ಸಿ ಬಿರಿಯಾನಿ ಮಳಿಗೆಯ ಬೋರ್ಡ್‌ನಲ್ಲಿ ಉಲ್ಲೇಖಿಸಿದ್ದ ಹಲಾಲ್ ಎಂಬ ಪದ ಮುಚ್ಚಲಾಗಿದೆ. ಹಲಾಲ್ ಬಹಿಷ್ಕಾರ ಅಭಿಯಾನಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಆಯ್ತು ಹಲಾಲ್ ತ್ಯಜಿಸುತ್ತೇವೆ. ಆರ್‌ಎಸ್‌ಎಸ್‌ನವರು ಪ್ರತಿ ಹಳ್ಳಿಯಲ್ಲೂ ಮಾಂಸದಂಗಡಿ ತೆರೆಯಲಿ. ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ನೀಡಲಿ ಎಂಬ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

     

    ಇದೀಗ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ಎಂದರೇನು ಎಂಬ ಪ್ರಶ್ನೆ ಎದ್ದಿದೆ. ಹಲಾಲ್ ಕಟ್ ಹಾಗೂ ಜಟ್ಕಾ ಕಟ್‌ಗೆ ಇರುವ ವ್ಯತ್ಯಾಸ ಇಲ್ಲಿದೆ.

    ಹಲಾಲ್ ಕಟ್:
    ಹಲಾಲ್ ಎಂಬುದು ಅರೇಬಿಕ್ ಪದ. ಇದರ ಅರ್ಥ ಅನುಮತಿ ಇದೆ ಎಂಬುದು. ಹಲಾಲ್ ಕಟ್ ಪ್ರಕಾರ ಪ್ರಾಣಿಯ ಗಂಟಲು ಸೀಳಿ ರಕ್ತ ಬರಿದಾಗಿಸಿ ಕೊಲ್ಲಲಾಗುತ್ತದೆ. ಪ್ರಾಣಿ ಮೊದಲೇ ಸತ್ತಿದ್ದರೆ ಅಥವಾ ಅನಾರೋಗ್ಯವಿದ್ದರೆ ಇದನ್ನು ಪರಿಗಣಿಸಲಾಗುವುದಿಲ್ಲ.

    ಹಲಾಲ್ ಕಟ್ ಮಾಡುವವರು ಇಸ್ಲಾಂ ಧರ್ಮಕ್ಕೆ ಸೇರಿದವರಾಗಬೇಕು. ಪ್ರಾಣಿಯನ್ನು ಕೊಲ್ಲುವಾಗ ಮುಸಲ್ಮಾನರ ಪವಿತ್ರ ಸ್ಥಳ ಮೆಕ್ಕಾದ ದಿಕ್ಕಿಗೆ ಮುಖ ಮಾಡಿ ಪ್ರಾರ್ಥನೆ ಮಾಡಬೇಕು. ಮಾಂಸ ತಿನ್ನುವವರೂ ಪ್ರಾಣಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಬೇಕು.

    ಹಲಾಲ್ ಕಟ್ ಮಾಡುವವರು ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್ ವತಿಯಿಂದ ಹಣ ಪಾವತಿಸಿ ಪ್ರಮಾಣ ಪತ್ರ ಪಡೆದಿರಬೇಕು. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಎನ್ನುವ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಹೆಚ್‌ಡಿಕೆ ಆಗ್ರಹ

    ಜಟ್ಕಾ ಕಟ್:
    ಜಟ್ಕಾ ಕಟ್ ಎಂದರೆ ಬಲಿ ಅಥವಾ ದೈವ ಬಲಿ ಎಂದರ್ಥ. ಈ ರೀತಿಯ ಪ್ರಾಣಿ ಬಲಿ ಬಗ್ಗೆ ಸನಾತನ ಹಿಂದೂ ಪದ್ಧತಿಯಲ್ಲಿ ಉಲ್ಲೇಖವಿದೆ. ಜಟ್ಕಾ ಕಟ್ ಪ್ರಕಾರ ಒಂದೇ ಏಟಿಗೆ ಪ್ರಾಣಿಯ ರುಂಡ ಹಾಗೂ ಮುಂಡವನ್ನು ಬೇರ್ಪಡಿಸಲಾಗುತ್ತದೆ. ಈ ರೀತಿಯಲ್ಲಿ ಪ್ರಾಣಿಯ ಜೀವ ಒಂದೇ ಬಾರಿಗೆ ಹೋಗುತ್ತದೆ.

    ಇವೇ ಹಲಾಲ್ ಕಟ್ ಹಾಗೂ ಜಟ್ಕಾ ಕಟ್‌ಗೂ ಇರುವ ವ್ಯತ್ಯಾಸ. ಮಾಂಸದ ಖರೀದಿಯಲ್ಲೂ ಧರ್ಮದ ವೈವಿಧ್ಯತೆ ಇರುವ ಕಾರಣಕ್ಕೆ ಇದೀಗ ಮತ್ತೆ ಹಿಂದೂ-ಮುಸ್ಲಿಂ ವಿವಾದ ಭುಗಿಲೇಳುತ್ತಿದೆ.