Tag: ಜಟ್ಕಾಕಟ್

  • ಯುಗಾದಿ ಹಬ್ಬದಂದು ಮತ್ತೆ ಮುನ್ನೆಲೆಗೆ ಬಂತು ಹಲಾಲ್ ಬಾಯ್ಕಾಟ್ ಅಭಿಯಾನ

    ಯುಗಾದಿ ಹಬ್ಬದಂದು ಮತ್ತೆ ಮುನ್ನೆಲೆಗೆ ಬಂತು ಹಲಾಲ್ ಬಾಯ್ಕಾಟ್ ಅಭಿಯಾನ

    ಬೆಂಗಳೂರು: ಹಲಾಲ್ ಬಾಯ್ಕಾಟ್ (Halal Boycott) ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದ್ದು, ಹಲಾಲ್ ಮುಕ್ತ ಯುಗಾದಿ (Yugadi) ಹಬ್ಬದ ಆಚರಣೆಗಾಗಿ ರಾಜಧಾನಿಯಲ್ಲಿ ಮಂಗಳವಾರದಿಂದ ಹಲಾಲ್ ಬಾಯ್ಕಾಟ್ ಅಭಿಯಾನ ಶುರುವಾಗಲಿದೆ.

    ಹಿಂದೂಪರ ಸಂಘಟನೆಯ ಕಾರ್ಯಕರ್ತರು ಈ ಅಭಿಯಾನವನ್ನು ಪ್ರಾರಂಭಿಸಿದ್ದು, ಮಧ್ಯಾಹ್ನ ೧ ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಲಾಲ್ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಎರಡು ಗಂಟೆಗೆ ಸರಿಯಾಗಿ ಬೆಂಗಳೂರು (Bengaluru) ನಗರದ ಜಿಲ್ಲಾಧಿಕಾರಿಗಳ ಮೂಲಕ ಹಲಾಲ್ ಸರ್ಟಿಫಿಕೇಟ್ ಬ್ಯಾನ್ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ 6 ವರ್ಷವಿದ್ದು ಮಗು ಮಾಡಿಕೊಂಡಿದ್ದ ಮಹಿಳೆ – ವಿಷಯ ತಿಳಿಯುತ್ತಲೇ ಪತಿಯಿಂದ ಪತ್ನಿ ಕೊಲೆ

    ಸಂಜೆ ನಾಲ್ಕು ಗಂಟೆಗೆ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರೋಡಿನಲ್ಲಿ ಅಭಿಯಾನವನ್ನು ನಡೆಸಲಿದ್ದು, ನಗರದಾದ್ಯಂತ ಭಿತ್ತಿಪತ್ರ ಹಂಚುವ ಮೂಲಕ ಹಲಾಲ್ ಮುಕ್ತ ಯುಗಾದಿ ಹಬ್ಬ ಆಚರಣೆ ಮಾಡುವಂತೆ ಜನರಲ್ಲಿ ಮನವಿ ಮಾಡಲಿದ್ದಾರೆ. ಸಂಜೆ ೫ ಗಂಟೆಗೆ ವಿಜಯನಗರದ (Vijayanagara) ಸಂಕಷ್ಟಹರ ಗಣಪತಿ ದೇವಸ್ಥಾನ ಸೇರಿದಂತೆ ಹಲವೆಡೆ ಅಭಿಯಾನ ನಡೆಸಲಿದ್ದಾರೆ. ಈ ಮೂಲಕ ಗುರುವಾರದ ಹೊಸತೊಡಕಿಗೆ ಹಿಂದೂ ಸಂಪ್ರದಾಯದಂತೆ ಜಟ್ಕಾಕಟ್ (Jhatka Cut) ಮಾಂಸ ಖರೀದಿ ಮಾಡುವಂತೆ ಮನವಿ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಯುಗಾದಿ ಹಬ್ಬಕ್ಕೆ ಹರಿದ ಸೀರೆ ಹಂಚಿದ್ರಾ ಕಾಂಗ್ರೆಸ್ ಶಾಸಕ?

    ಹಿಂದೂ ಜನಜಾಗೃತಿ ವೇದಿಕೆಯ ಮೋಹನ್ ಗೌಡ, ಹಿಂದೂಪರ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಹಾಗೂ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಶ್ರೀರಾಮಸೇನೆ, ಹಿಂದೂ ದಲಿತ ಸೇನೆ, ಹಿಂದೂ ಜನಜಾಗೃತಿ, ರಾಷ್ಟ್ರ ರಕ್ಷಣಾ ಪಡೆ ಸೇರಿದಂತೆ ಬಜರಂಗದಳದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಡಿನೋಟಿಫಿಕೇಶನ್‌ ಕೇಸ್‌ – ಅಧಿಕ ರಕ್ತದೊತ್ತಡ ಕಾರಣ ನೀಡಿ ಕೋರ್ಟ್‌ ವಿಚಾರಣೆಗೆ ಎಚ್‌ಡಿಕೆ ಗೈರು

  • ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ಬಿಬಿಎಂಪಿಯಿಂದ ಬಿಗ್ ಶಾಕ್

    ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ಬಿಬಿಎಂಪಿಯಿಂದ ಬಿಗ್ ಶಾಕ್

    ಬೆಂಗಳೂರು: ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದ್ದು, ಪಾಲಿಕೆಯಿಂದ ಲೈಸೆನ್ಸ್ ಪಡೆದಿಲ್ಲ ಎಂದು ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.

    ಹಿಂದವೀ ಮೀಟ್ ಮಾರ್ಟ್ ಹಲಾಲ್ ಕಟ್ ವಿರುದ್ಧ ಅಭಿಯಾನ ನಡೆಸಿದ್ದರು. ಅವರು ಹಲಾಲ್ ಕಟ್‍ಗೆ ಸೈಡ್ ಹೊಡೆಯಲು ಜಟ್ಕಾ ಕಟ್ ಮಾರಾಟ ಮಾಡತ್ತಿದ್ದು, ಆದರೆ ಇದೀಗ ಹಿಂದವೀ ಮೀಟ್ ಮಾರ್ಟ್‍ಗಳು ಅಂಗಡಿಯನ್ನು ತೆರೆಯಲು ಪಾಲಿಕೆಯಿಂದ ಲೈಸೆನ್ಸ್ ಪಡೆದಿಲ್ಲ ಎನ್ನುವ ಕಾರಣಕ್ಕೆ ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ನೋಟಿಸ್ ನೀಡಿದೆ.

    ಬಿಬಿಎಂಪಿ ಪಶುಪಾಲನೆ (ಆರ್.ಆರ್ ನಗರ ವಲಯ) ನೋಟಿಸ್‍ನ್ನು ಜಾರಿ ಮಾಡಿದ್ದು, ಪಶುಪಾಲನೆ ಸಹಾಯಕ ನಿರ್ದೇಶಕರಿಂದ ಜಟ್ಕಾ ಮಳಿಗೆಗಳಿಗೆ ನೋಟಿಸ್ ಹೋಗಿದೆ. ಪರವಾನಗಿ ಪಡೆಯದೆಯೇ ಅಂಗಡಿಗಳನ್ನು ತೆರೆದಿರುವ ಪರಿಣಾಮವಾಗಿ ಬಿಬಿಎಂಪಿ ಪಶುಪಾಲನೆ ಸಹಾಯಕ ನಿರ್ದೇಶಕರಿಂದ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಮೇ 4ರವರೆಗೆ ಪೊಲೀಸ್‌, ಎಲ್ಲಆಡಳಿತ ಅಧಿಕಾರಿಗಳ ರಜೆ ರದ್ದು- ಯೋಗಿ ಆದಿತ್ಯನಾಥ್‌

    ಇದೇ ಏಪ್ರಿಲ್ 12ರಂದು ನೋಟಿಸ್ ನೀಡಿರುವ ಬಿಬಿಎಂಪಿ ಪರವಾನಗಿ ಇಲ್ಲದಿರುವುದು ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖಿಸಿದೆ. ನೋಟಿಸ್ ನೀಡಿದ ಒಂದು ವಾರದೊಳಗೆ ಪರವಾನಗಿ ಪಡೆಯುವಂತೆ ಆದೇಶಿಸಲಾಗಿದೆ. ಇಲ್ಲವಾದರೆ ಮಳಿಗೆಗೆ ಬೀಗ ಹಾಕುವುದಾಗಿ ಮೌಖಿಕ ಎಚ್ಚರಿಕೆ ನೀಡಿದೆ.

    ರಾಜರಾಜೇಶ್ವರಿನಗರದ ವಲಯ ಕಚೇರಿಯಿಂದ ಉಲ್ಲಾಳದ ಹಿಂದವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡಗೆ ಬಿಬಿಎಂಪಿ ನೋಟಿಸ್ ನೀಡಿದ್ದು, ಕೇವಲ ಕೋಳಿ ಅಂಗಡಿಯಾದ್ರೆ ಪರವಾನಗಿಗೆ 2,500 ರೂ. ಶುಲ್ಕ ನೀಡಬೇಕು. ಕೋಳಿ ಅಂಗಡಿ ಜೊತೆಗೆ ಮಟನ್ ಮತ್ತು ಫಿಶ್ ಮಳಿಗೆ ಲೈಸೆನ್ಸ್‍ಗೆ 10,500 ರೂ. ಶುಲ್ಕ ಪಾವತಿಸಬೇಕು ಎಂದು ನಿಯಮ ಹಾಕಿದೆ. ಈ ನಿಯಮದ ಪ್ರಕಾರವಾಗಿ ಪ್ರತಿ ಒಂದು ವರ್ಷಕ್ಕೆ ಈ ಶುಲ್ಕ ಪಾವತಿಸಬೇಕು ಎಂದು ಬಿಬಿಎಂಪಿ ತಿಳಿಸಿದ್ದು, ಮೊದಲು ಪರವಾನಿಗೆ ಪಡೆಯಲು ಇದೇ ಶುಲ್ಕ ಅನ್ವಯಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ದೇಶದಲ್ಲಿ ಕೋಮು ಪರಿಸ್ಥಿತಿ ಸೃಷ್ಟಿಸಲು ಬಿಜೆಪಿ ಯತ್ನ: ಶರದ್ ಪವಾರ್