Tag: ಜಟ್ಕಾ

  • ಹಲಾಲ್, ಜಟ್ಕಾ ಜಟಾಪಟಿಯೇ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಕಾರಣವಾಯ್ತಾ..?

    ಹಲಾಲ್, ಜಟ್ಕಾ ಜಟಾಪಟಿಯೇ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಕಾರಣವಾಯ್ತಾ..?

    ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪೊಲೀಸರಿಗೆ ಇನ್ನೂ ಕಗ್ಗಂಟಾಗಿ ಉಳಿದಿದೆ. ಹತ್ಯೆಗೆ ಏನು ಕಾರಣ? ಪ್ರಕರಣದ ಆರೋಪಿಗಳು ಯಾರು? ಎಂದು ಕಂಡುಹಿಡಿಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ನಡುವೆ ಕೊಲೆಗೆ ಹಲಾಲ್, ಜಟ್ಕಾ ವ್ಯಾಪಾರ ಒಂದು ಕಾರಣ ಎಂಬ ಅನುಮಾನ ಎದ್ದಿದೆ.

    ಹಿಜಬ್ ಹೋರಾಟದಿಂದ ಆರಂಭವಾಗಿ ಮುಂದುವರಿದು ಹಲಾಲ್, ಜಟ್ಕಾನೇ ಹತ್ಯೆಗೆ ಕಾರಣವಾಯಿತಾ ಎಂಬ ಗುಮಾನಿ ಈಗ ಪೊಲೀಸರಿಗೆ ಕಾಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಬ್ ಹೋರಾಟ ನಂತರ ರಾಜ್ಯಕ್ಕೆ ಕಿಚ್ಚು ಹಚ್ಚಿತ್ತು. ಹಲಾಲ್, ಜಟ್ಕಾ, ವ್ಯಾಪಾರ ಬಹಿಷ್ಕಾರ ಹೀಗೆ ಒಂದರ ಮೇಲೆ ಒಂದು ವಿವಾದಗಳು ಆರಂಭವಾಗಿತ್ತು. ನೆಟ್ಟಾರು ಪೇಟೆಯಲ್ಲಿ ಚಿಕನ್ ಸ್ಟಾಲ್ ನಡೆಸುತ್ತಿದ್ದ ಪ್ರವೀಣ್ ಹಲಾಲ್, ಜಟ್ಕಾ ವಿಚಾರದಲ್ಲಿ ಕೊಲೆಯಾದರೇ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಇದನ್ನೂ ಓದಿ: ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ..?: ಬಂಧಿತ ಝಾಕೀರ್ ತಾಯಿ

    ಜಟ್ಕಾ ಜಟಾಪಟಿ ನಂತರ ಪ್ರವೀಣ್‍ಗೆ ಒಳ್ಳೆಯ ವ್ಯಾಪಾರ ಆಗುತ್ತಿತ್ತು. ಇದು ಮುಸ್ಲಿಂ ಚಿಕನ್ ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಕೊಲೆಯಾಯ್ತು ಎಂಬ ಪ್ರಶ್ನೆಯನ್ನು ಹಿಡಿದುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಲ್ಲಾ ಸಿಸಿಟಿವಿಗಳನ್ನು ಜಾಲಾಡುತ್ತಿದ್ದಾರೆ. ವಶಕ್ಕೆ ಪಡೆದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಈವರೆಗೆ ನಿಖರ ಕಾರಣಕ್ಕೆ ಪ್ರವೀಣ್ ಕೊಲೆಯಾಗಿದೆ ಎಂದು ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಫಾಜಿಲ್ ಹತ್ಯೆ ಪ್ರಕರಣ – ಓರ್ವ ಆರೋಪಿ ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬಂತು: ದೇವನೂರು

    ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬಂತು: ದೇವನೂರು

    ಮೈಸೂರು: ಧರ್ಮದ ಮುಖವಾಡದಲ್ಲಿ ಅಧರ್ಮ ಕುಣಿದು ಕುಪ್ಪಳಿಸುತ್ತಿದೆ. ಜನ ಸಮುದಾಯದ ವಿವೇಕ ಕಡಿಮೆಯಾಗುತ್ತಿದೆ. ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬಂತು ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹಲಾಲ್ ವಿವಾದದ ಕುರಿತು ಪ್ರಶ್ನಿಸಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಸಾಹಿತಿ, ಕಾನೂನು ಹಾಗೂ ಸುವ್ಯವಸ್ಥೆ ಇದೆ ಎಂದಾದರೆ ಸರ್ಕಾರ ಇಂತಹ ವಿಚಾರವಾಗಿ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ದೇಶದ ಮೊದಲ ಹಸಿರು ಸಂಚಾರಿ ಪಥ ಕಾಮಗಾರಿ: ಜಗದೀಶ್ ಶೆಟ್ಟರ್

    ಸರ್ಕಾರ ಜನ ಸಮುದಾಯವನ್ನು ಒಡೆದು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ವಿರೋಧ ಪಕ್ಷಗಳು ಇದನ್ನೆಲ್ಲಾ ನೋಡಿಕೊಂಡು ಮಂಕಾಗಿ ಕೂತಿದೆ. ಮಾಂಸವನ್ನು ಹಾಗೆ ಕತ್ತರಿಸಬೇಕು ಹೀಗೆ ಕತ್ತರಿಸಬೇಕು ಎಂದು ಹೇಳಲು ಅವರು ಯಾರು ಎಂದು ಮಾಂಸ ತಿನ್ನುವವರೇ ಪ್ರಶ್ನಿಸಿದ್ದಾರೆ. ಮಾಂಸವನ್ನು ಕತ್ತರಿಸುವ ರೀತಿಯಲ್ಲೂ ಮಾನವೀಯತೆ ಇದೆ ಎನ್ನುತ್ತಾರೆ. ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬರುತ್ತೆ? ಎಂದು ದೇಮ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಚ್ಚೇ ದಿನ್ ಕೊಡ್ತೀವಿ ಎಂದ ಕೇಂದ್ರ ನರಕ ದಿನ ತೋರಿಸುತ್ತಿದೆ: ಡಿಕೆಶಿ

     

  • ಇನ್ಮುಂದೆ ಪ್ರಾಣಿಗಳ ವಧೆಗೆ ಸ್ಟನ್ನಿಂಗ್ ಕಡ್ಡಾಯ

    ಇನ್ಮುಂದೆ ಪ್ರಾಣಿಗಳ ವಧೆಗೆ ಸ್ಟನ್ನಿಂಗ್ ಕಡ್ಡಾಯ

    ಬೆಂಗಳೂರು: ನಗರದಲ್ಲಿ ಕುರಿ-ಕೋಳಿ ವಧೆಗೆ ಸ್ಟನ್ನಿಂಗ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಹಲಾಲ್ ಆಗಲೀ, ಜಟ್ಕಾವಾಗಲೀ ಸ್ಟನ್ನಿಂಗ್ ರೂಲ್ಸ್ ಪಾಲಿಸಬೇಕು ಎಂದು ಬಿಬಿಎಂಪಿಗೆ ಪಶು ಸಂಗೋಪನಾ ಇಲಾಖೆ ಸೂಚನೆ ನೀಡಿದೆ.

    ಸ್ಟನ್ನಿಂಗ್  ಎಂದರೇನು? ಎಷ್ಟು ವಿಧ?:
    `ಸ್ಟನ್ನಿಂಗ್’ ಅಂದ್ರೆ ಪ್ರಾಣಿವಧೆಗೆ ಮೊದಲು ಪ್ರಜ್ಞೆ ತಪ್ಪಿಸುವುದು. ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗೆ ಹೆಚ್ಚು ಹಿಂಸೆಯಾಗುವುದಿಲ್ಲ. ಹಾಗಾಗಿ ಇನ್ಮುಂದೆ ಪ್ರಾಣಿವಧೆಗೂ ಮುನ್ನ ಸ್ಟನ್ನಿಂಗ್ ಕಡ್ಡಾಯಗೊಳಿಸಲಾಗಿದ್ದು, ಸ್ಟನ್ನಿಂಗ್ ಇಲ್ಲದಿದ್ದರೆ ಹೊಸ ಅಂಗಡಿಗಳಿಗೆ ಅನುಮತಿ ಇಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ಕುತ್ತಿಗೆ ತಿರುವಿ, ಕೊಂಬಿನಲ್ಲಿ ಎಳೆದಾಡಿ ಕಾರ್ಕಳ ರಸ್ತೆಯಲ್ಲಿ ಗೋವು ಕಳ್ಳತನ

    ಸ್ಟನ್ನಿಂಗ್ ಪ್ರಾಣಿವಧೆಯಲ್ಲಿ ಎರಡು ವಿಧಾನಗಳಿದ್ದು, ಪ್ರಜ್ಞೆ ತಪ್ಪಿಸಿ ಪ್ರಾಣಿಗಳ ವಧೆ ಮಾಡುವುದು ಮೊದಲನೇ ವಿಧಾನ. ಮೊದಲನೇ ವಿಧಾನದ ಮೂಲಕ ಪ್ರಾಣಿಯ ತಲೆಗೆ ಬಲವಾಗಿ ಹೊಡೆಯುವುದು. ತಲೆಗೆ ಬಲವಾಗಿ ಹೊಡೆದ್ರೆ ಪ್ರಜ್ಞೆ ತಪ್ಪಲಿದೆ ಅಥವಾ ತಲೆಗೆ ಹೊಡೆದಾಗ ಮೆದುಳು ನಿಷ್ಕ್ರಿಯವಾಗಲಿದೆ. ಈ ವೇಳೆ ರಕ್ತ ಸೋರಿಕೆ ಆಗದಂತೆ ಪ್ರಾಣಿಗಳ ವಧೆ ಮಾಡುವುದಾಗಿದೆ. ಈ ಮೂಲಕ ಪ್ರಾಣಿವಧೆ ಪರಿಣತರಾದವರು ಮಾತ್ರ ಮಾಡಬಹುದುದಾಗಿದೆ. ಇದನ್ನೂ ಓದಿ: ಕುರಿದೊಡ್ಡಿಗೆ ನುಗ್ಗಿ 30 ಕುರಿಗಳನ್ನು ಕದ್ದೊಯ್ದ ಖದೀಮರು – ಕುರಿಗಾಯಿ ಕಣ್ಣೀರು

    ಎಲೆಕ್ಟ್ರಿಕ್ ಶಾಕ್ ಕೊಟ್ಟು ಪ್ರಾಣಿಗಳ ವಧೆ ಮಾಡುವುದು ಎರಡನೇ ವಿಧಾನ. ಪ್ರಾಣಿಗಳ ತಲೆಗೆ ಹೊಡೆಯುವ ಬದಲು ಎಲೆಕ್ಟ್ರಿಕ್ ಶಾಕ್ ಕೊಟ್ಟು ಪ್ರಜ್ಞೆ ತಪ್ಪಿಸುವುದು. ಈ ಮೂಲಕ ಪ್ರಾಣಿಗಳು ಹಿಂಸೆ ಅನುಭವಿಸೋ ಬದಲು ಮೂರ್ಛೆ ತಪ್ಪಿಸುವುದಾಗಿದೆ.

    ಇದೀಗ ನಗರದಲ್ಲಿ ಸ್ಟನ್ನಿಂಗ್ ಸೂಚನೆ ಬಗ್ಗೆ ಮಾಂಸ ಮಾರಾಟಗಾರರು ಬೇಸರ ವ್ಯಕ್ತಪಡಿಸಿದ್ದು, ಬಿಬಿಎಂಪಿಯ ಕಸಾಯಿಖಾನೆಗಳಲ್ಲೂ ಸ್ಟನ್ನಿಂಗ್ ವ್ಯವಸ್ಥೆ ಇಲ್ಲ. ಬಿಬಿಎಂಪಿ ಟ್ರೇಡ್ ಲೈಸೆನ್ಸ್ ಕೊಟ್ಟಿದೆ. ಅದರಲ್ಲಿ ಇದ್ಯಾವುದೂ ಇಲ್ಲ. ಸಡನ್ ಆಗಿ ಮಾಡಿ ಅಂದ್ರೇ ಅವೆಲ್ಲ ಆಗಲ್ಲ. ಮೊದಲು ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಅದನ್ನು ಶುರು ಮಾಡಲಿ. ನಮಗೆ ಸ್ಟನ್ನಿಂಗ್ ಮಾಡುವ ವಿಧಾನ ಡೆಮೋ ಕೊಡಲಿ. ಅದನ್ನು ಬಿಟ್ಟು ಸ್ಟನ್ನಿಂಗ್ ಮಾಡಿ ಅಂದ್ರೆ ಹೇಗೆ ಪಾಲಿಸಲು ಸಾಧ್ಯ. ಸ್ಟನ್ನಿಂಗ್ ವ್ಯವಸ್ಥೆ ಬಗ್ಗೆ ಮೊದಲು ತಿಳಿಸಿಕೊಡಿ ಎಂಬ ಅಭಿಪ್ರಾಯ ಕೇಳಿಬಂದಿದೆ.