Tag: ಜಗ್ಗಿ ವಾಸುದೇವ್

  • ಡಿಕೆ ಶಿವಕುಮಾರ್ ಒಂದು ವಾರದಿಂದ ಭೂಮಿ ಮೇಲೆ ಇಲ್ಲದಂತೆ ಮಾತಾಡ್ತಿದ್ದಾರೆ: ಹೆಚ್‌ಡಿಕೆ

    ಡಿಕೆ ಶಿವಕುಮಾರ್ ಒಂದು ವಾರದಿಂದ ಭೂಮಿ ಮೇಲೆ ಇಲ್ಲದಂತೆ ಮಾತಾಡ್ತಿದ್ದಾರೆ: ಹೆಚ್‌ಡಿಕೆ

    ಬೆಂಗಳೂರು:  ಡಿಸಿಎಂ ಡಿಕೆಶಿವಕುಮಾರ್ (DK Shivakumar) ಒಂದು ವಾರದಿಂದ ಭೂಮಿ ಮೇಲೆ ಇಲ್ಲದಂತೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ‌.

    ಸಿನಿಮಾ ನಟರ ವಿರುದ್ದ ಡಿಕೆಶಿವಕುಮಾರ್ ನೀಡಿದ್ದ ನಟ್ಟು-ಬೋಲ್ಟ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಟರು ಇವರಿಗೆ ಯಾವ ರೀತಿ ಸಪೋರ್ಟ್ ‌ಮಾಡಬೇಕು. ನಟ್ಟು-ಬೋಲ್ಟ್ ಲೂಸ್ ಆದರೆ ರಿಪೇರಿ ಮಾಡೋಕೆ ಅ ಕೆಲಸ ಮಾಡೋರು ಬಹಳ ಜನ ಇದ್ದಾರೆ‌. ರಾಜ್ಯದಲ್ಲಿ ಒಳ್ಳೆ ಆಡಳಿತ ಕೊಡಲಿ ಅಂತ 138 ಸೀಟು ನೀಡಿದ್ದಾರೆ. ನಟರು, ಜನರ ನೆಟ್ಟು-ಬೋಲ್ಡ್ ರಿಪೇರಿ ‌ಮಾಡಲು ಇವರಿಗೆ ಅಧಿಕಾರ ಕೊಟ್ಟಿಲ್ಲ. ಡಿಕೆಶಿ ಮಾತನ್ನ ಯಾರು ಸಿರಿಯಸ್ ಆಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು‌.

    ಡಿಕೆ ಶಿವಕುಮಾರ್ ಒಂದು ವಾರದಿಂದ ಅವರ ಮಾತು ಕೇಳಿದರೆ ಅವರು ಭೂಮಿ ಮೇಲೆ ಇಲ್ಲ. ಅವರ ಮಾತುಗಳಿಗೆ ಉತ್ತರ ಕೊಡದೇ ಸುಮ್ಮನೆ ಇರುವುದು ಉತ್ತಮ ಎನ್ನುವುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.
    ಇದನ್ನೂ ಓದಿ: ಕುಂಭಮೇಳದಲ್ಲಿ ನಾನು ಭಾಗಿಯಾದರೆ ತಪ್ಪೇನಿದೆ: ಸ್ವಪಕ್ಷದ ನಾಯಕರಿಗೆ ಡಿಕೆಶಿ ಟಾಂಗ್

    ಶಿವಕುಮಾರ್ ಸದ್ಗುರು (Sadhguru Jaggi Vasudev) ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಅದು ಅವರವರ ಇಚ್ಚೆ. ಅವರ ಮನಸಿನ ಭಾವನೆ. ಅದಕ್ಕೆ ನಾವು ಟೀಕೆ ಮಾಡೋದು ಅನಾವಶ್ಯಕ. ಪ್ರತಿಯೊಬ್ಬರಿಗೂ ಅವರೇ ತೀರ್ಮಾನ ತೆಗೆದುಕೊಳ್ಳೋಕೆ ಅಂಬೇಡ್ಕರ್ ಸಂವಿಧಾನದಲ್ಲಿ ಅವಕಾಶ ಕೊಟ್ಟಿದ್ದಾರೆ. ಡಿಕೆಶಿ ಅಲ್ಲಿಗೆ ಹೋಗಿರೋದು ದೊಡ್ಡ ವಿಶೇಷ ಏನು ಕಾಣುತ್ತಿಲ್ಲ. ಅದಕ್ಕೆ ಮಹತ್ವ ನೀಡುವುದು ಬೇಡ ಎಂದರು.

    ಡಿಕೆಶಿ ಬಿಜೆಪಿಗೆ ಬರುವುದಕ್ಕೆ ಬಿಜೆಪಿ ಅವರೇ ಸ್ವಾಗತ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಮಾತಾಡಿದರೆ ನನಗೇನು ಸಂಬಂಧವಿದೆ ಎಂದರು.

  • ಚಿಕ್ಕಬಳ್ಳಾಪುರ ಈಶಾ ಆದಿಯೋಗಿ ಕೇಂದ್ರಕ್ಕೆ ಸದ್ಗುರು ಭೇಟಿ

    ಚಿಕ್ಕಬಳ್ಳಾಪುರ ಈಶಾ ಆದಿಯೋಗಿ ಕೇಂದ್ರಕ್ಕೆ ಸದ್ಗುರು ಭೇಟಿ

    – ಸದ್ಗುರು ದರ್ಶನ ಮಾಡಿ ಪುನೀತರಾದ ಭಕ್ತರು

    ಚಿಕ್ಕಬಳ್ಳಾಪುರ: ಆವಲಗುರ್ಕಿ‌ ಬಳಿಯ ಆದಿಯೋಗಿ (Adiyogi) ಈಶಾ ಕೇಂದ್ರಕ್ಕೆ ಇಂದು (ಡಿ.22) ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಭೇಟಿ ನೀಡಿದರು.

    ಸದ್ಗುರು ಜಗ್ಗಿವಾಸುದೇವ್ ಆಗಮನದ ಹಿನ್ನಲೆ ಈಶಾ (Isha) ಸನ್ನಿಧಾನಕ್ಕೆ ಸಹಸ್ರಾರು ಮಂದಿ ಭಕ್ತರು ಆಗಮಿಸಿ ಸದ್ಗುರುಗಳ ದರ್ಶನ ಪಡೆದರು. ಭಕ್ತರಿಗೆ ಅಶೀರ್ವಚನ ಹಿತನುಡಿಗಳನ್ನು ಸದ್ಗುರು ಜಗ್ಗೀವಾಸುದೇವ್ ನುಡಿದರು.

    ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸದ್ಗುರು, ಈಶಾ ಸಂಸ್ಥೆ ವತಿಯಿಂದ ಗ್ರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಗ್ರಾಮೀಣ ಭಾಗದ ಜನ ಮದ್ಯವ್ಯಸನಿಗಳಾಗುತ್ತಿದ್ದಾರೆ. ಕೃಷಿ ಕಾಯಕ ಮಾಡಿ ಮದ್ಯ ಸೇವನೆ ಮಾಡಿ ಮಲಗಿಕೊಳ್ಳುತ್ತಿದ್ದಾರೆ. ಅವರ ಜೀವನದಲ್ಲಿ ಉತ್ಸಾಹ ಚೈತನ್ಯ ತುಂಬುವ ಸಲುವಾಗಿ ಗ್ರಾಮೀಣ ಭಾಗದವರಿಗೆ ಗ್ರಾಮೋತ್ಸವ ಕ್ರೀಡೆಗಳನ್ನ ಆಯೋಜನೆ ಮಾಡುವ ಮೂಲಕ ಮದ್ಯ ವ್ಯಸನ ಮುಕ್ತರನ್ನಾಗಿ ಮಾಡಲು ಶ್ರಮಿಸುತ್ತಿದ್ದೇವೆ. ಕ್ರೀಡೆಗಳ ಮೂಲಕ ಜಾತಿ ತಾರತಮ್ಯ ದೂರ ಮಾಡುತ್ತಿದ್ದೇವೆ ಎಂದರು.

     

    ದೇಶದಲ್ಲಿ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಪರಿಸರದಲ್ಲಿ ಸಮತೋಲನ ಕಾಪಾಡಬೇಕಿದೆ. ಲಾಭವಿಲ್ಲದ ವಿಚಾರಗಳ ಬಗ್ಗೆ ಯಾರೂ ಸಹ ಮಾತನಾಡುತ್ತಿಲ್ಲ. ಹಾಗಾಗಿ ಈಶಾ ಫೌಂಡೇಶನ್‌ನಿಂದಲೇ ರೈತ ಉತ್ಪಾದಕಾ ಕಂಪನಿಗಳ ಆರಂಭ ಮಾಡಲಾಗಿದೆ. ಮುಂದೆ ಮಿರಾಕಲ್ ಹೆಸರಿನ ಅಪ್ಲಿಕೇಶನ್‌ ಅಭಿವೃದ್ಧಿ ಮಾಡಲಾಗುತ್ತದೆ. ಈ ಮೂಲಕ ಪ್ರಪಂಚಾದ್ಯಂತ ಮುನ್ನೂರು ಕೋಟಿ ಜನರಿಗೆ ಏಕಕಾಲದಲ್ಲಿ ಧ್ಯಾನದ ಸಂದೇಶದ ಜೀವನ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ ಜೀವನ ಉತ್ತಮಪಡಿಸುವ ಕನಸು ಕಂಡಿದ್ದೇವೆ ಅಂತ ಸದ್ಗುರು ತಿಳಿಸಿದರು. ಇದನ್ನೂ ಓದಿ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿಲ್ಲ ಪಶು ವೈದ್ಯರು – ಪ್ರಾಣಿಗಳು ಸತ್ತರೆ ಬಂಡೀಪುರ, ಮೈಸೂರು ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ

    ಇದೇ ವೇಳೆ ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಸದ್ಗುರು, ಬಾಂಗ್ಲಾದೇಶ ಉದ್ಬವವಾಗಲು ಭಾರತದ ಕೊಡುಗೆ ಮರೆಯುವಂತಿಲ್ಲ. ಭಾರತದ ಪಕ್ಕದಲ್ಲೇ ಮಿತ್ರ ದೇಶವಾಗಿ ಇರಲಿ ಅಂತ ಸಹಕಾರ ನೀಡಿದೆ. ಆದರೆ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದ್ದು ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದೇವೆ ಎಂದರು.

    ಎಲೆಕ್ಟ್ರಿಕಲ್‌ ವಾಹನಗಳಿಂದ ಪರಿಸರಕ್ಕೆ ಅನುಕೂಲವಿಲ್ಲ. ನನ್ನ ಹೇಳಿಕೆ ವಿವಾದವಾದರೂ ಪರವಾಗಿಲ್ಲ. ನಗರ ಪ್ರದೇಶಗಳಿಗೆ ಮಾತ್ರ ಎಲೆಕ್ಟ್ರಿಕಲ್‌ ವಾಹನಗಳು ಸೂಕ್ತ ಎಂದು ಅಭಿಪ್ರಾಯಪಟ್ಟರು.

     

  • ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗಲಾಗ್ತಿಲ್ಲ, ಇದು ನನ್ನ ದುರದೃಷ್ಟ: ಜಗ್ಗಿ ವಾಸುದೇವ್

    ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗಲಾಗ್ತಿಲ್ಲ, ಇದು ನನ್ನ ದುರದೃಷ್ಟ: ಜಗ್ಗಿ ವಾಸುದೇವ್

    ಚಿಕ್ಕಬಳ್ಳಾಪುರ: ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯಲ್ಲಿ (Ayodhya) ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ನನಗೆ ಅಹ್ವಾನ ಬಂದಿದೆ, ಆದರೆ ಹೋಗಲಾಗುತ್ತಿಲ್ಲ. ಇದು ದುರದೃಷ್ಟಕರ ಎಂದು ಈಶಾ ಸಂಸ್ಥಾಪಕ ಜಗ್ಗಿ ವಾಸುದೇವ್ (Sadhguru Jaggi Vasudev) ಹೇಳಿದರು.

    ಸಂಕ್ರಾಂತಿ ಹಬ್ಬದ ಅಂಗವಾಗಿ ಚಿಕ್ಕಬಳ್ಳಾಪುರದ ಈಶಾ ಆದಿಯೋಗಿ (Esha Foundation Chikkaballapur) ಕೇಂದ್ರದಲ್ಲಿ ನಂದಿ ವಿಗ್ರಹ ಹಾಗೂ ತ್ರಿಶೂಲ ಪ್ರತಿಷ್ಠಾಪನಾ ಕಾರ್ಯಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ನನಗೆ ಈಗಾಗಲೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪೂರ್ವ ನಿಗದಿ ಕಾರ್ಯಕ್ರಮ ಇರುವ ಕಾರಣದಿಂದ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲಾಗುತ್ತಿಲ್ಲ.‌ ಇದು ನನ್ನ ದುರದೃಷ್ಟ, ನಾನು ಹೋಗಲಾಗುತ್ತಿಲ್ಲ ಅಂತ ಸ್ಪಷ್ಟಪಡಿಸಿದರು.

    ಇದೇ ವೇಳೆ ಅಪೂರ್ಣ ಮಂದಿರ ಉದ್ಘಾಟನೆ ಅಂತಾ ಕೆಲ ಮಠಾಧೀಶರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಸದ್ಗುರು, ನಮಗೆ ಯಾರ ಮೇಲಾದರೂ ಬಹಳ ಪ್ರೀತಿ ಇದ್ರೆ ಎಷ್ಟು ಮಾಡಿದ್ರೂ ಸಾಕಾಗಲ್ಲ ಅನಿಸುತ್ತೆ. ಸ್ವಲ್ಪ ಮಾಡಿದರೂ ಬಹಳ ಮಾಡಿದೆ ಅಂತ ತಿಳಿದುಕೊಳ್ಳುವವರ ಹೃದಯದಲ್ಲಿ ಪ್ರೀತಿ ಇರಲ್ಲ. ಜಾಸ್ತಿ ಮಾಡಿದರೂ ಇನ್ನೂ ಮಾಡಬೇಕು ಎನ್ನುವವರ ಹೃದಯದಲ್ಲಿ ಪ್ರೀತಿ ಇರಲಿದೆ. ದೇವಾಲಯ ಅನ್ನೋದು ಎಂದೂ ಮುಗಿಯಲ್ಲ. ಮಾಡ್ತಾನೆ ಇದ್ರೆ ಮಾಡ್ತಾನೆ ಇರಬೇಕು. ಭಕ್ತನ ಆಶಯವೂ ಅದು. ಈಗ ಅದು ಮೂರು ಅಂತಸ್ತು ಇದೆ. ಒಂದು ಅಂತಸ್ತು ಕಂಪ್ಲೀಟ್ ಆಗಿದೆ. ರಾಮಲಲ್ಲಾ ಅಲ್ಲಿ ಪ್ರತಿಷ್ಠಾಪನೆ ಆಗಲಿದ್ದಾನೆ. ಮುಂದೆ ಉಳಿದ ಎಲ್ಲವೂ ಮಾಡಲಿದ್ದಾರೆ. ಹಾಗಾಗಿ ಅದು ಅಪೂರ್ಣ ಅಲ್ಲ ಅಂತ ಹೇಳಿದರು.

  • ಚಿಕ್ಕಬಳ್ಳಾಪುರದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ

    ಚಿಕ್ಕಬಳ್ಳಾಪುರದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ

    ಚಿಕ್ಕಬಳ್ಳಾಪುರ: ಮಕರ ಸಂಕ್ರಾತಿಯ ಶುಭದಿನದಂದು ಆವಲಗುರ್ಕಿ ಬಳಿ ಇಶಾ ಫೌಂಡೇಶನ್ (Isha Foundation) ವತಿಯಿಂದ‌ ನಿರ್ಮಾಣಗೊಂಡಿದ್ದ 112 ಅಡಿ ಎತ್ತರದ ಆದಿಯೋಗಿಯ (Adiyogi) ಪ್ರತಿಮೆಯನ್ನು ಸಿಎಂ ಬಸವರಾಜ ಬೊಮ್ಮಾಯಿ (CM Basavaaj Bommai) ಅನಾವರಣಗೊಳಿಸಿದ್ದಾರೆ.

    ಈ ಆದಿಯೋಗಿಯ ಮುಖ ಪ್ರತಿಮೆಯು ಕೊಯಮತ್ತೂರಿನ ಈಶ ಯೋಗ ಕೇಂದ್ರದ ಪ್ರತಿರೂಪವಾಗಿದೆ. ಅನಾವರಣದ ನಂತರ ʼಆದಿಯೋಗಿ ದಿವ್ಯ ದರ್ಶನಂʼ ಹೆಸರಿನಲ್ಲಿ 112 ಅಡಿ ಆದಿಯೋಗಿಯ ಮೇಲೆ 14 ನಿಮಿಷಗಳ ವಿಶಿಷ್ಟ ಬೆಳಕು ಮತ್ತು ಧ್ವನಿ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಜೊತೆಗೆ ಸಚಿವ ಸುಧಾಕರ್‌ ಮತ್ತು ನಾಗೇಶ್‌ ಪಾಲ್ಗೊಂಡಿದ್ದರು.

    ಆದಿಯೋಗಿಯ ಅನಾವರಣಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಕಳೆದ ವರ್ಷ ಅಕ್ಟೋಬರ್ 09 ರಂದು ನಾಗಪ್ರತಿಷ್ಟೆಯನ್ನು ಸದ್ಗುರು ಜಗ್ಗಿ ವಾಸುದೇವ್‌ ನೆರವೇರಿಸಿದ್ದರು. ಆದಿಯೋಗಿಗೆ ಮಹಾ ಮಂಗಳಾರತಿಯ ನೃತ್ಯ, ಕೇರಳದ ತೆಯ್ಯಂ ಬೆಂಕಿ ನೃತ್ಯ, ಹಾಗೂ  ಜಗ್ಗಿ ವಾಸುದೇವ್  ಅವರ ಪುತ್ರಿಯ ಭರತನಾಟ್ಯ ಎಲ್ಲರ ಮನಸೊರೆಗೊಂಡಿತ್ತು

    ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಯೋಗದ ಮೂಲವಾದ ಆದಿಯೋಗಿಯ 112-ಅಡಿ ಪ್ರತಿಮಾರೂಪದ ಚಿತ್ರವನ್ನು ‘ಇನ್‌ಕ್ರೆಡಿಬಲ್ ಇಂಡಿಯಾ’ ತಾಣವೆಂದು ಪಟ್ಟಿ ಮಾಡಿದೆ. ಈ ಪ್ರತಿಮೆಯು ಗಿನ್ನೆಸ್ ವಿಶ್ವ ದಾಖಲೆಗಳಿಂದ ವಿಶ್ವದ ‘ಅತಿದೊಡ್ಡ ಬಸ್ಟ್ ಶಿಲ್ಪ’ ಎಂದು ಗುರುತಿಸಲ್ಪಟ್ಟಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಾವನ್ನು ರಕ್ಷಣೆ ಮಾಡಲಾಗಿದೆ ಹೊರತು, ಹಾನಿ ಮಾಡಿಲ್ಲ: ಇಶಾ ಫೌಂಡೇಶನ್

    ಹಾವನ್ನು ರಕ್ಷಣೆ ಮಾಡಲಾಗಿದೆ ಹೊರತು, ಹಾನಿ ಮಾಡಿಲ್ಲ: ಇಶಾ ಫೌಂಡೇಶನ್

    ಚಿಕ್ಕಬಳ್ಳಾಪುರ: ಜೀವಂತ ಹಾವು (Snake) ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಇಶಾ ಫೌಂಡೇಶನ್ (Isha Foundation) ಸಂಸ್ಥಾಪಕ ಜಗ್ಗಿ ವಾಸುದೇವ್ (Jaggi Vasudev) ವಿರುದ್ಧ ಅರಣ್ಯಾಧಿಕಾರಿಗೆ ದೂರು ನೀಡಲಾಗಿತ್ತು. ಇದನ್ನು ಪಬ್ಲಿಕ್ ಟಿವಿ ಡಿಜಿಟಲ್‌ನಲ್ಲಿ ವರದಿ ಮಾಡಲಾಗಿದ್ದು, ಈ ಬಗ್ಗೆ ಇಶಾ ಫೌಂಡೇಶನ್ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದೆ.

    ತಾಲೂಕಿನ ನರಸಿಂಹದೇವರ ಬೆಟ್ಟದ ತಪ್ಪಲಿನಲ್ಲಿರುವ ಇಶಾ ಕೇಂದ್ರದಲ್ಲಿ ನಾಗಮಂಟಪ ಪ್ರತಿಷ್ಠಾಪನೆ ಕಾರ್ಯಕ್ರಮದ ವೇಳೆ ಸಾವಿರಾರು ಜನರ ಮುಂದೆಯೇ ಜಗ್ಗಿ ವಾಸುದೇವ್ ಅವರು ಹಾವನ್ನು ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ್ದರು. ಈ ಬಗ್ಗೆ ಜಗ್ಗಿ ವಾಸುದೇವ್ ವಿರುದ್ಧ ಎಸ್‌ಪಿಸಿಎ ಸದಸ್ಯ ಹಾಗೂ ಉರಗರಕ್ಷಕ ಪ್ರಥ್ವಿರಾಜ್ ಚಿಕ್ಕಬಳ್ಳಾಪುರ ಜಿಲ್ಲಾ ಉಪ ಸಂರಕ್ಷಣಾಧಿಕಾರಿಗೆ ದೂರು ನೀಡಿದ್ದರು.

    ಪಬ್ಲಿಕ್ ಟಿವಿ ವರದಿ ಹಿನ್ನೆಲೆ ಇಶಾ ಫೌಂಡೇಶನ್ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ಟ್ವಿಟರ್ ಮೂಲಕ ಪಬ್ಲಿಕ್ ಟಿವಿ ಟ್ವಿಟರ್ ಖಾತೆಗೆ ಮಾಧ್ಯಮ ಪ್ರಕಟಣೆಯನ್ನು ಇಶಾ ಫೌಂಡೇಶನ್ ಟ್ಯಾಗ್ ಮಾಡಿದೆ. ಮಾಧ್ಯಮ ಪ್ರಕಟಣೆಯಲ್ಲಿ ಹಾವನ್ನು ಹಿಡಿದು ಪ್ರದರ್ಶನ ಮಾಡಿರುವ ಬಗೆಗಿನ ಅಸಲಿ ವಿಚಾರವನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಇದನ್ನೂ ಓದಿ: ಹಾವು ಹಿಡಿದು ಪ್ರದರ್ಶನ – ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು

    ಟ್ವೀಟ್‌ನಲ್ಲೇನಿದೆ?
    ಹಾವಿಗೆ ತೊಂದರೆ ಕೊಟ್ಟಿದ್ದಾರೆ ಎಂಬುದು ತಪ್ಪು ಮಾಹಿತಿಯಿಂದ ಕೂಡಿರುವ ದೂರಾಗಿದೆ. ನಾಗಮಂಟಪ ಪ್ರತಿಷ್ಠಾಪನೆ ವೇಳೆ ಸ್ವತಃ ಹಾವೇ ಇಶಾ ಯೋಗ ಕೇಂದ್ರದ ಸಮೀಪ ಆಗಮಿಸಿತ್ತು. ಹಾವಿನ ಹಾಗೂ ಜನರ ಸುರಕ್ಷತೆಯ ಹಿತದೃಷ್ಟಿಯಿಂದ ಹಾವನ್ನು ರಕ್ಷಣೆ ಮಾಡಲಾಗಿದೆ ಹೊರತು, ಹಾನಿ ಮಾಡಿಲ್ಲ. ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’ – ಆಲದ ಗಿಡ ನೆಟ್ಟು ಪುನೀತ್‌ ನಾಮಕರಣ

    ಸ್ವಯಂ ಸೇವಕರೊಬ್ಬರು ಹಾವು ಆಗಮಿಸಿರುವ ಬಗ್ಗೆ ಸದ್ಗುರುಗಳ ಗಮನಕ್ಕೆ ತಂದಿದ್ದರು. ದೂರಿನಲ್ಲಿ ಉಲ್ಲೇಖಿಸಿರುವಂತೆ ಹಾವಿಗೆ ಯಾವುದೇ ರೀತಿಯ ಹಾನಿ ಮಾಡಲಾಗಿಲ್ಲ. ಮೃದುವಾಗಿ ಹಾವು ಹಿಡಿದು ಕಾಡಿನೊಳಗೆ ಬಿಡಲಾಗಿದೆ ಎಂದು ಇಶಾ ಫೌಂಡೇಶನ್ ಸ್ಪಷ್ಟನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಹಾವು ಹಿಡಿದು ಪ್ರದರ್ಶನ – ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು

    ಹಾವು ಹಿಡಿದು ಪ್ರದರ್ಶನ – ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು

    ಚಿಕ್ಕಬಳ್ಳಾಪುರ: ಜೀವಂತ ಹಾವು (Snake) ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಇಶಾ ಫೌಂಡೇಶನ್ (Isha Foundation) ಸಂಸ್ಥಾಪಕ ಜಗ್ಗಿ ವಾಸುದೇವ್ (Sadhguru Jaggi Vasudev) ವಿರುದ್ಧ ಅರಣ್ಯಾಧಿಕಾರಿಗೆ ದೂರು ನೀಡಲಾಗಿದೆ.

    ಇತ್ತೀಚೆಗೆ ನಡೆದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್ ಅವರು ಜೀವಂತ ಹಾವನ್ನು ಹಿಡಿದು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದರು. ಈ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಎಸ್‌ಪಿಸಿಎ ಸಂಸ್ಥೆ ಸದಸ್ಯ ಹಾಗೂ ಉರಗರಕ್ಷಕ ಪೃಥ್ವಿರಾಜ್ ಚಿಕ್ಕಬಳ್ಳಾಪುರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ (Forest Officer) ರಮೇಶ್ ಅವರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ರಣರೋಚಕ T20 ವಿಶ್ವಕಪ್ ಆರಂಭ – ಟೀಂ ಇಂಡಿಯಾದತ್ತ ಎಲ್ಲರ ಚಿತ್ತ

    ವನ್ಯಜೀವಿಗಳನ್ನು ಹಿಡಿದು ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ಮಾಡುವುದು `ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ’ (Wildlife Act) ಸ್ಪಷ್ಟ ಉಲ್ಲಂಘನೆ ಆಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಚಿಕ್ಕಬಳ್ಳಾಪುರದಲ್ಲಿ ನಾಗಮಂಟಪ ಉದ್ಘಾಟನೆ – ಜನವರಿಯಲ್ಲಿ ಆದಿಯೋಗಿ ಪ್ರತಿಮೆ ಲೋಕಾರ್ಪಣೆ

    ಚಿಕ್ಕಬಳ್ಳಾಪುರದಲ್ಲಿ ನಾಗಮಂಟಪ ಉದ್ಘಾಟನೆ – ಜನವರಿಯಲ್ಲಿ ಆದಿಯೋಗಿ ಪ್ರತಿಮೆ ಲೋಕಾರ್ಪಣೆ

    ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್(Isha Foundation) ವತಿಯಿಂದ ರಾಜ್ಯದಲ್ಲೂ ಆದಿ ಯೋಗಿ ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮೊದಲ ಕಾರ್ಯಕ್ರಮವಾಗಿ ನಾಗಮಂಟಪ(Naga Mantapa) ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಾಕ್ಷಿಯಾದರು.

    ಚಿಕ್ಕಬಳ್ಳಾಪುರ(Chikkaballapura) ತಾಲೂಕಿನ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ನಂತರ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಹದೇವರಬೆಟ್ಟದ ತಪ್ಪಲಿನಲ್ಲಿ ಇಶಾ ಫೌಂಡೇಶನ್ ವತಿಯಿಂದ ತಮಿಳುನಾಡಿನ‌ ಕೊಯಮತ್ತೂರಿನಲ್ಲಿರುವಂತೆ 112 ಅಡಿಯ ಆದಿಯೋಗಿ(Adiyogi) ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯವಾಗಿದೆ.

     

    ಅದಿಯೋಗಿ ಶಿವನ(Shiva) ಅವತಾರದ ಪ್ರತಿಮೆ ನಿರ್ಮಾಣದ ಕಾರ್ಯದ ಅಂಗವಾಗಿ ಇಶಾ ಫೌಂಡೇಶನ್ ವತಿಯಿಂದ ಮೊದಲ ಕಾರ್ಯಕ್ರಮವಾಗಿ ನಾಗಮಂಟಪ ಲೋಕಾರ್ಪಣೆ ಇಂದು ನೇರವೇರಿತು. ಕಾರ್ಯಕ್ರಮಕ್ಕೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ(Basvaraj Bommai) ಹಾಗೂ ಸಚಿವ ಕೆ ಸುಧಾಕರ್(K Sudhakar) ಆಗಮಿಸಿದ್ದರು.

    ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್(Jaggi Vasudev ) ನಾಗಮಂಟಪ ಪೂಜಾ ಕೈಂಕರ್ಯಗಳನ್ನು ನಡೆಸಿ ಲೋಕಾರ್ಪಣೆಗೊಳಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪೂಜಾ ಕೈಂಕರ್ಯಗಳನ್ನ ಸಿಎಂ ಬೊಮ್ಮಾಯಿ ಹಾಗೂ ಸಚಿವ ಸುಧಾಕರ್ ಕಣ್ತುಂಬಿಕೊಂಡರು. ಇದನ್ನೂ ಓದಿ: ಟಿಪ್ಪು ಹೆಸರೇ ಗೊಂದಲದಲ್ಲಿದೆ, ಹಾಗಾಗಿ ಟ್ರೈನ್‌ನ ಹೆಸರು ಬದಲಿಸಿದ್ದೇವೆ: ನಳೀನ್ ಕುಮಾರ್ ಕಟೀಲ್

    ಅದಿಯೋಗಿ ಶಿವನ ಪ್ರತಿಮೆ ದಿವ್ಯ ಮುಖ ರೂಪ ಅಂತಿಮ ಹಂತ ತಲುಪಿದ್ದು ಮುಂದಿನ ಜನವರಿ ಸಂಕ್ರಾಂತಿ ಸಮಯದಲ್ಲಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಸುಮಾರು 110 ಎಕ್ರೆ ವಿಶಾಲವಾದ ಪ್ರದೇಶದಲ್ಲಿ ಇಶಾ ಯೋಗ ಕೇಂದ್ರ ತಲೆ ಎತ್ತುತ್ತಿದ್ದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ 9 ಕಿಲೋಮೀಟರ್ ದೂರದಲ್ಲಿದೆ.

    ಇಶಾ ಯೋಗ ಕೇಂದ್ರಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳು ಪ್ರಮುಖವಾಗಿ ರಸ್ತೆ ಸೇರಿದಂತೆ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳ ನಿರ್ಮಾಣ ಕಾರ್ಯ ಮುಂದುವರೆದಿದೆ. ಭಾನುವಾರ ಸಹ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯ ಜರುಗಲಿದ್ದು ಸರಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆ. 2023ರ ಮಹಾಶಿವರಾತ್ರಿಯಂದು‌ ಈ ಆದಿಯೋಗಿ ಶಿವನ‌ ಪ್ರತಿಮೆ ಎದುರು ಸದ್ಗುರುಗಳ‌ ನೇತೃತ್ವದಲ್ಲಿ ಜಾಗರಣೆ, ಶಿವನ ಅರಾಧನೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಹರಾಜಿನಲ್ಲಿ 5.1 ಕೋಟಿಗೆ ಮಾರಾಟವಾದ ‘ಭೈರವ’ ಪೇಂಟಿಂಗ್

    ಹರಾಜಿನಲ್ಲಿ 5.1 ಕೋಟಿಗೆ ಮಾರಾಟವಾದ ‘ಭೈರವ’ ಪೇಂಟಿಂಗ್

    -ಇದ್ದಿಲು, ಸಗಣಿ, ಅರಿಶಿಣ, ಸುಣ್ಣದ ಕಲ್ಲಿನಿಂದಾದ ‘ಭೈರವ’

    ಚೆನ್ನೈ: ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರ ‘ಭೈರವ’ ಪೇಂಟಿಂಗ್ ಆನ್‍ಲೈನ್ ನಲ್ಲಿ 5.1 ಕೋಟಿ ರೂ.ಗೆ ಮಾರಾಟವಾಗಿದೆ. ಒಂದು ತಿಂಗಳು ಈ ಪೇಂಟಿಂಗ್ ಪ್ರದರ್ಶನಕ್ಕೆ ಇರಿಸಲಾಗಿತ್ತು. ಆನ್‍ಲೈನ್ ಲಲಿ ಅಂತಿಮವಾಗಿ 5.1 ಕೋಟಿಗೆ ಬಿಡ್ ಮಾಡಲಾಗಿತ್ತು. ಪೇಂಟಿಂಗ್ ನಿಂದ ಬಂದ ಹಣವನ್ನು ಇಶಾ ಫೌಂಡೇಶನ್ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಲಿದೆ.

    ಈ ಹಿಂದೆ ಜಗ್ಗಿ ವಾಸುದೇವ್ ಅವರ ಪೇಂಟಿಂಗ್ 4 ಕೋಟಿ ರೂ.ಗೆ ಮಾರಾಟವಾಗಿತ್ತು. ಈ ಹಣವನ್ನು ‘ಬೀಟ್ ದ ವೈರಸ್’ ಸಂಸ್ಥೆಗೆ ದಾನವಾಗಿ ನೀಡಿದ್ದರು. ಸದ್ಯ ಬಂದಿರುವ ಹಣವನ್ನು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿವೆ.

    ಸೋಮವಾರ ಮಾರಾಟಗೊಂಡಿರುವ ಪೇಂಟಿಂಗ್ ಪ್ರಸಿದ್ಧ ಬೈರವ ಹೆಸರಿನ ಎತ್ತಿನ ನೆನಪಿಗಾಗಿ ಮಾಡಲಾಗಿತ್ತು. ಬೈರವ ಎತ್ತು ಏಪ್ರಿಲ್ ನಲ್ಲಿ ಸಾವನ್ನಪ್ಪಿತ್ತು. ಜಗ್ಗಿ ವಾಸುದೇವ ಅವರು ಪೇಂಟಿಂಗ್ ಬ್ಯಾಕ್‍ಡ್ರಾಪ್ ನಲ್ಲಿ ಹಸುವಿನ ಸಗಣಿ ಬಳಸಿದ್ದಾರೆ. ಜೊತೆಗೆ ಇದ್ದಿಲು, ಸುಣ್ಣದ ಕಲ್ಲು ಮತ್ತು ಅರಿಶಿಣ ಬಳಸಿ ಬೈರವ ಪೇಂಟಿಂಗ್ ಮಾಡಲಾಗಿದೆ. ಇನ್ನು ಪೇಂಟಿಂಗ್ ಮಾರಾಟಗೊಂಡಿರುವ ಬಗ್ಗೆ ಜಗ್ಗಿ ವಾಸುದೇವ್ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಆದ್ರೆ ಪೇಂಟಿಂಗ್ ಖರೀದಿದಾರರ ಮಾಹಿತಿಯನ್ನು ತಿಳಿಸಿಲ್ಲ.

    ಜಗ್ಗಿ ವಾಸುದೇವ ಟ್ವೀಟ್: ಬೈರವನಿಗೆ ಅವನ ಮನೆಯನ್ನು ಹುಡುಕೊಂಡಿದ್ದಾನೆ. ನಮ್ಮ ಪ್ರೀತಿಯ ಎತ್ತು ಜೀವಂತವಿದ್ದಾಗಲೂ, ಸತ್ತ ಮೇಲೆಯೂ ನಮ್ಮೆಲ್ಲರ ಸೇವೆ ಮಾಡುತ್ತಿದ್ದಾನೆ. ದಾನಿ (ಖರೀದಿದಾರ)ಗಳ ದಯೆ ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಕರಿಗೆ ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡುವಂತೆ ಮಾಡಿದೆ.