Tag: ಜಗ್ಗಿ ಜಗನ್ನಾಥ್

  • ಡೈಲಾಗ್ ಕಿಂಗ್ ಈಸ್ ಬ್ಯಾಕ್!

    ಡೈಲಾಗ್ ಕಿಂಗ್ ಈಸ್ ಬ್ಯಾಕ್!

    ಪೊಲೀಸ್ ಡೈರಿ, ಅಗ್ನಿ ಸಿನಿಮಾಗಳಲ್ಲಿ ಪೊಲೀಸ್ ಸೂಪರ್ ಕಾಪ್ ಆಗಿ ಪವರ್ ಫುಲ್ ಡೈಲಾಗ್ ಮೂಲಕ ಖಾಕಿಗೆ ಹೊಸ ಖದರ್ ತಂದುಕೊಟ್ಟಿದ್ದ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವ್ರನ್ನ ಮರೆಯೋಕಾಗುತ್ತಾ..? ತಮ್ಮ ಚಿತ್ರಗಳಲ್ಲಿ ಖಾಕಿಗೆ ಹೊಸ ಖದರ್ ತಂದುಕೊಟ್ಟಿದ್ದ ಸಾಯಿ ಕುಮಾರ್ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್‍ನಿಂದಲೇ ಹೊಸ ಟ್ರೆಂಡ್ ಸೃಷ್ಟಿಸಿದ್ರು. ಈಗಲೂ ಆ ಡೈಲಾಗ್‍ಗಳು ಫೇಮಸ್ ಆಗಿವೆ.

    ಸಾಯಿ ಕುಮಾರ್ ರನ್ನು ಮತ್ತೆ ಖಾಕಿಯಲ್ಲಿ ನೋಡಲು, ಡೈಲಾಗ್ ಕಣ್ತುಂಬಿಕೊಳ್ಳಲು ಸಿನಿ ರಸಿಕರು ವರ್ಷಗಳಿಂದ ಕಾಯ್ತಾಯಿದ್ರು. ಈಗ ಆ ಸಮಯ ಬಂದಿದೆ. ಅದೇ ಖದರ್, ಅಷ್ಟೇ ಪವರ್ ಫುಲ್ ಡೈಲಾಗ್, ಅದೇ ಮ್ಯಾನರಿಸಂ ಮೂಲಕ ಮತ್ತೆ ಡೈಲಾಗ್ ಕಿಂಗ್ ಪೊಲೀಸ್ ಸೂಪರ್ ಕಾಪ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ. ಆ ಚಿತ್ರದ ಹೆಸರೇ ಜಗ್ಗಿ ಜಗನ್ನಾಥ್. ದುಷ್ಟರ ಪಾಲಿಗೆ ಸಿಂಹಸ್ವಪ್ನವಾದ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿರುವ ಸಾಯಿಕುಮಾರ್ ತಮ್ಮ ಹಳೆಯ ಲುಕ್ಕಲ್ಲಿ, ಹೊಸ ಖದರ್ನೊಂದಿಗೆ ಗಮನ ಸೆಳೆಯುತ್ತಿದ್ದಾರೆ.

    ಎಸ್, ಡೈಲಾಗ್ ಕಿಂಗ್ ಸಾಯಿ ಕುಮಾರ್ ಬಿಡುಗಡೆಗೆ ಸಿದ್ಧವಾಗಿರೋ ಜಗ್ಗಿ ಜಗನ್ನಾಥ ಚಿತ್ರದಲ್ಲಿ ಪವರ್ ಫುಲ್ ಪೊಲೀಸ್ ಆಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಜನರ್ದಸ್ತ್ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ಡೈಲಾಗ್ ಕಿಂಗ್ ಎನರ್ಜಿಟಿಕ್ ಅಂಡ್ ಖದರ್ ತುಂಬಿರೋ ಮಾಸ್ ಡೈಲಾಗ್‍ಗಳು ಈಗಾಗಲೇ ಟ್ರೈಲರ್ ನಲ್ಲಿ ಮಿಂಚು ಹರಿಸಿದೆ. ಬಹು ದಿನಗಳಿಂದ ಸಾಯಿ ಕುಮಾರ್ ಡೈಲಾಗ್ ಮಿಸ್ ಮಾಡಿಕೊಂಡಿದ್ದ ಸಿನಿರಸಿಕರಿಗೆ ಈ ಚಿತ್ರ ಭರಪೂರ ಮನರಂಜನೆ ನೀಡಲಿದೆ.

    ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಸಾಯಿಕುಮಾರ್, ಲಿಖಿತ್, ದುನಿಯಾ ರಶ್ಮಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮಾಫಿಯ, ರೌಡಿಸಂ ಕಥಾನಕವುಳ್ಳ ಮಾಸ್ ಸಬ್ಜೆಕ್ಟ್ ಜಗ್ಗಿ ಜಗನ್ನಾಥ ಚಿತ್ರದಲ್ಲಿದ್ದು, ಸಾಯಿ ಕುಮಾರ್ ದುಷ್ಟರನ್ನ ಬಗ್ಗು ಬಡಿಯೋ ಪವರ್ ಫುಲ್ ಪೊಲೀಸ್ ಆಫಿಸರ್ ಆಗಿ ಬಣ್ಣ ಹಚ್ಚಿದ್ದಾರೆ. ಹೆಚ್, ಜಯರಾಜ್, ಜಿ. ಶಾರದಾ ಜಗ್ಗಿ ಜಗನ್ನಾಥ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಎ. ಎಂ ನೀಲ್ ಸಂಗೀತ ನಿರ್ದೇಶನ ಇರುವ ಈ ಚಿತ್ರ ಇದೇ ಫೆಬ್ರವರಿ 28ಕ್ಕೆ ಬಿಡುಗಡೆಯಾಗುತ್ತಿದೆ.

  • ‘ಜಗ್ಗಿ ಜಗನ್ನಾಥ್’ ಸಿನಿಮಾದಲ್ಲಿ ಅಬ್ಬರಿಸಿದ ಸಾಯಿಕುಮಾರ್!

    ‘ಜಗ್ಗಿ ಜಗನ್ನಾಥ್’ ಸಿನಿಮಾದಲ್ಲಿ ಅಬ್ಬರಿಸಿದ ಸಾಯಿಕುಮಾರ್!

    ಸಾಯಿಕುಮಾರ್ ಅವರ ಖಡಕ್ ಡೈಲಾಗ್ ಕೇಳೋಕೆ ಅದೇನೋ ಒಂಥರ ಖುಷಿ. ತನ್ನ ಡೈಲಾಗ್ ನಿಂದಲೇ ಡೈಲಾಗ್ ಕಿಂಗ್ ಎನಿಸಿಕೊಂಡವರು. ಇದೀಗ ಅದೇ ಖಡಕ್ ಡೈಲಾಗ್ ಹೊಡೆಯಲು ರೆಡಿಯಾಗಿದ್ದಾರೆ. ಹೌದು ಸಾಯಿಕುಮಾರ್ ಅಭಿನಯದ ‘ಜಗ್ಗಿ ಜಗನ್ನಾಥ್’ ಸಿನಿಮಾ ಇದೇ ತಿಂಗಳ 28ಕ್ಕೆ ತೆರೆ ಕಾಣಲಿದೆ. ಅದಕ್ಕೂ ಮುನ್ನ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

    ಟ್ರೇಲರ್ ನೋಡಿದವರಿಗೆ ಸಿನಿಮಾ ಹೇಗಿರಲಿದೆ ಎಂಬುದು ಅರ್ಥವಾಗಿದೆ. ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿ. ಸಾಯಿ ಕುಮಾರ್ ಇದ್ರೆ ಅಲ್ಲೊಂದು ರೌಡಿಸಂ ಡೈಲಾಗ್ ಗಳ ಸುರಿಮಳೆ ಅಲ್ವೆ. ಅದೇ ರೀತಿ ಸಿನಿಮಾದಲ್ಲಿ ಗನ್ನು, ಮಚ್ಚು-ಲಾಂಗು ಬೀಸುತ್ತೆ, ರಕ್ತ ಹರಿಯುತ್ತೆ, ಡೈಲಾಗ್ ಗಳ ಸುರಿಮಳೆ ಸುರಿಯುತ್ತೆ. ಹೆಚ್ಚು ರೌಡಿಸಂ ದೃಶ್ಯಗಳೆ ಟ್ರೇಲರ್ ನಲ್ಲಿ ಓಡಾಡುತ್ತಿವೆ. ಇದರ ನಡುವೆ ಕಾಮಿಡಿ ಜೊತೆಗೆ ನಾಯಕನಿಗೊಂದು ಲವ್ ಸ್ಟೋರಿ ಇರುವುದು ಟ್ರೇಲರ್ ನಲ್ಲಿ ವ್ಯಕ್ತವಾಗಿದೆ.

    ನಾಯಕ ಲಿಕಿತ್ ರಾಜ್ ಅಭಿನಯ ಕೂಡ ಮೆಚ್ಚುವಂತಿದೆ. ಪಕ್ಕಾ ಮಾಸ್ ಸ್ಟೋರಿಗೆ ಮ್ಯಾಚ್ ಆಗಿದ್ದಾರೆ. ಇನ್ನು ಸಿನಿಮಾದಲ್ಲಿ ತಾಯಿ-ಮಗನ ಸೆಂಟಿಮೆಂಟ್ ಅಂಶ ಕೂಡ ಇದೆ. ನಾಯಕ ಮತ್ತು ಖಡಕ್ ಪೊಲೀಸ್ ಆಫೀಸರ್ ಆಗಿರುವ ಸಾಯಿ ಪ್ರಕಾಶ್ ನಡುವೆ ಜುಗಲ್ ಬಂದಿ ಕ್ರಿಯೇಟ್ ಆಗುವ ದೃಶ್ಯಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ನಾಯಕ ರೌಡಿಸಂ, ಪ್ರೇಯಸಿಯ ಮುಗ್ಧತೆ, ತಾಯಿಯನ್ನ ಯಾರೋ ಕೊಲ್ಲುವುದು, ನಾಯಕ ಮುಂದೇನು ಮಾಡ್ತಾನೆ ಎಂಬೆಲ್ಲಾ ಪ್ರಶ್ನೆಗಳನ್ನು ಹುಟ್ಟುವಂತೆ ಮಾಡಿದ್ದಾರೆ ಓಂ ಸಾಯಿ ಪ್ರಕಾಶ್. ಇದೇ 28 ರಂದು ಸಿನಿಮಾ ತೆರೆಗೆ ಬರಲಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಥಿಯೇಟರ್ ನಲ್ಲೆ ಉತ್ತರ ಕಂಡುಕೊಳ್ಳಬೇಕಿದೆ.

    ಶ್ರೀಮೈಲಾರಲಿಂಗೇಶ್ವರ ಮೂವೀಸ್ ಲಾಂಛನದಲ್ಲಿ ಹೆಚ್.ಜಯರಾಜು ಹಾಗೂ ಜಿ.ಶಾರದ ನಿರ್ಮಾಣದ ಚಿತ್ರವಿದು. ಎ.ಎಂ.ನೀಲ್ ಸಂಗೀತ ನೀಡಿದ್ದಾರೆ. ರೇಣುಕುಮಾರ್ ಛಾಯಾಗ್ರಹಣವಿದ್ದು, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಸಾಯಿ ಸರ್ವೇಶ್ ಸಾಹಿತ್ಯ ನೀಡಿದ್ದಾರೆ. ಬಾಬು ಸಂಕಲನ ಮಾಡಿದ್ದಾರೆ. ಸಾಯಿ ಕುಮಾರ್ ಹಾಗೂ ಲಿಖಿತ್ ರಾಜ್ ಜತೆಗೆ ತಬಲಾ ನಾಣಿ, ಪದ್ಮಜಾ ರಾವ್, ಲಯ ಕೋಕಿಲ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.

  • ಸಾಯಿಕುಮಾರ್ ‘ಜಗ್ಗಿ ಜಗನ್ನಾಥ್’ ಟ್ರೈಲರ್ ಹಿಟ್

    ಸಾಯಿಕುಮಾರ್ ‘ಜಗ್ಗಿ ಜಗನ್ನಾಥ್’ ಟ್ರೈಲರ್ ಹಿಟ್

    ಬೆಂಗಳೂರು: ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಓಂಸಾಯಿಪ್ರಕಾಶ್ ಪಕ್ಕಾ ಆ್ಯಕ್ಷನ್, ಲವ್ ಸ್ಟೋರಿ ಇಟ್ಟುಕೊಂಡು ಮಾಡಿರುವ ಚಿತ್ರ ಜಗ್ಗಿ ಜಗನ್ನಾಥ್. ಈ ಚಿತ್ರದ ಟ್ರೈಲರ್ ಹೊರಬಂದಿದ್ದು, ಎಲ್ಲಾ ಕಡೆ ಸಖತ್ ವೈರಲ್ ಆಗಿದೆ. ಡೈಲಾಗ್ ಕಿಂಗ್ ಸಾಯಿಕುಮಾರ್, ನಿರ್ದೇಶಕ ಸಾಯಿಪ್ರಕಾಶ್, ಯುವಪ್ರತಿಭೆ ಲಿಖಿತ್ ರಾಜ್ ಈ ಮೂವರ ಕಾಂಬಿನೇಶನ್‍ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟ್ರೈಲರ್ ಯುಟ್ಯೂಬ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

    ಅಗ್ನಿ ಐಪಿಎಸ್, ಪೊಲೀಸ್ ಸ್ಟೋರಿಯಂಥ ಮಾಸ್ ಡೈಲಾಗ್‍ಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಲಿಖಿತ್ ರಾಜ್ ಹಾಗೂ ಸಾಯಿಪ್ರಕಾಶ್ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ ಡೈಲಾಗ್‍ಗಳು ಪ್ರೇಕ್ಷಕರ ಮನಗೆದ್ದಿವೆ. ಅಂಡರ್‍ವಲ್ರ್ಡ್ ಕಥೆ ಇದಾಗಿದ್ದರೂ ಚಿತ್ರದಲ್ಲಿರುವ ಹೃದಯ ಕಲಕುವ ತಾಯಿ-ಮಗನ ಸೆಂಟಿಮೆಂಟ್ ಸೀನ್‍ಗಳು ಕೂಡ ಗಮನ ಸೆಳೆದಿವೆ. ಈಗಾಗಲೇ ಜಗ್ಗಿ ಜಗನ್ನಾಥ್ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಕ್ತಾಯಗೊಂಡು ಇತ್ತೀಚೆಗಷ್ಟೇ ಚಿತ್ರ ಸೆನ್ಸಾರ್ ಕೂಡ ಆಗಿದೆ. ಒಬ್ಬ ಸಾಮಾನ್ಯ ಯುವಕ ಹೇಗೆ ಅಘೋರಿಯಾದ ಎನ್ನುವ ಕುತೂಹಲಕರವಾದ ಕಥಾಹಂದರ ಚಿತ್ರದಲ್ಲಿದ್ದು, ಇದೇ ಥರದ ಹಲವಾರು ವಿಶೇಷತೆಗಳು ಚಿತ್ರದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿವೆ.

    ಶ್ರೀಮೈಲಾರಲಿಂಗೇಶ್ವರ ಮೂವೀಸ್ ಲಾಂಛನದಲ್ಲಿ ಹೆಚ್.ಜಯರಾಜು, ಜಿ.ಶಾರದ,ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಎಂ.ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಯೋಗರಾಜ್‍ಭಟ್, ಜಯಂತ್ ಕಾಯ್ಕಿಣಿ, ವಿಜಯ್ ವಿ., ಸಾಯಿಸರ್ವೇಶ್ ಸಾಹಿತ್ಯ, ಶ್ರೀನಿವಾಸ್ ಪಿ. ಬಾಬು ಸಂಕಲನ, ಅರವಿಂದ್ ಡಿಸ್ಕೊ ಡಿಸಿಲ್ವ ನೃತ್ಯ ನಿರ್ದೇಶನ, ಜಾನಿ ಮಾಸ್ಟರ್, ಕೌರವ ವೆಂಕಟೇಶ್ ಸಾಹಸವಿದೆ.

    ಲಿಖಿತ್ ರಾಜ್, ದುನಿಯಾ ರಶ್ಮಿ, ಸಾಯಿಕುಮಾರ್, ತಬಲಾ ನಾಣಿ, ಪದ್ಮಜ ರಾವ್, ಲಯ ಕೋಕಿಲ, ಮೈಕೊ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ದಂಡುಪಾಳ್ಯ, ಪವನ್ (ಮಜಾ ಟಾಕೀಸ್), ಮೋಹನ್ ಜುನೇಜ, ಗುರುರಾಜ್ ಹೊಸಕೋಟೆ, ವಾಣಿಶ್ರೀ, ನಾಗರಾಜ್ ಕೋಟೆ ಮುಂತಾದವರ ತಾರಾಬಳಗವಿದೆ.