Tag: ಜಗ್ಗಿ ಜಗನ್ನಾಥ

  • ಬಿಡುಗಡೆಗೆ ರೆಡಿಯಾದ ‘ಜಗ್ಗಿ ಜಗನ್ನಾಥ’ – ದುನಿಯಾ ರಶ್ಮಿಗೆ ಸಿಗುತ್ತಾ ಬ್ರೇಕ್!

    ಬಿಡುಗಡೆಗೆ ರೆಡಿಯಾದ ‘ಜಗ್ಗಿ ಜಗನ್ನಾಥ’ – ದುನಿಯಾ ರಶ್ಮಿಗೆ ಸಿಗುತ್ತಾ ಬ್ರೇಕ್!

    ಸೂರಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ದುನಿಯಾ ಮೂಲಕ ಚಿರಪರಿಚಿತವಾದ ಟ್ಯಾಲೆಂಟೆಡ್ ನಟಿ ರಶ್ಮಿ. ಚಿತ್ರದ ಯಶಸ್ಸಿನ ನಂತರ ದುನಿಯಾ ರಶ್ಮಿ ಎಂದೇ ಖ್ಯಾತಿಯಾಗಿರೋ ಈಕೆ ದುನಿಯಾ ನಂತರ ಮುರಾರಿ, ಮಂದಾಕಿನಿ, ಅಕ್ಕ-ತಂಗಿ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ರೂ ಕೂಡ ಯಾವ ಸಿನಿಮಾಗಳು ಕೈ ಹಿಡಿಯಲಿಲ್ಲ, ಹೆಸರೂ ತಂದು ಕೊಡಲಿಲ್ಲ. ಒಂದಷ್ಟು ದಿನಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ದುನಿಯಾ ರಶ್ಮಿ ನಂತರ ಪ್ರತ್ಯಕ್ಷವಾಗಿದ್ದು ಬಿಗ್ ಬಾಸ್ ಸೀಸನ್-7ರ ವೇದಿಕೆಯಲ್ಲಿ. ಗೆದ್ದು ಸೋತು ಮತ್ತೆ ಗೆಲುವಿಗಾಗಿ ಹಂಬಲಿಸುತ್ತಿರುವ ಈ ಮುದ್ದು ಮುಖದ ಚೆಲುವೆ ಈಗ ಜಗ್ಗಿ ಜಗನ್ನಾಥ್ ಚಿತ್ರದ ಮೂಲಕ ಆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

    ಹೌದು, ಓಂ ಸಾಯಿ ಪ್ರಕಾಶ್ ನಿರ್ದೇಶನದ ಆ್ಯಕ್ಷನ್ ಓರಿಯೆಂಟೆಡ್ ಜಗ್ಗಿ ಜಗನ್ನಾಥ ಸಿನಿಮಾದಲ್ಲಿ ದುನಿಯಾ ರಶ್ಮಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಾಮಿಸಿಂಗ್ ಟ್ರೈಲರ್ ಸದ್ದು ಮಾಡ್ತಿದೆ. ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ದುನಿಯಾ ರಶ್ಮಿ ಚಿತ್ರದಲ್ಲಿ ನಟಿಸಿದ್ದು, ಈ ಪಾತ್ರವನ್ನು ಹಾಗೂ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಲ್ಲಿದ್ದಾರೆ ದುನಿಯಾ ರಶ್ಮಿ.

    ನವ ನಟ ಲಿಖಿತ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಆ್ಯಕ್ಷನ್ ಜೊತೆಗೆ ಮಾಫಿಯ ಕಥೆಯೂ ಚಿತ್ರದಲ್ಲಿದೆ. ಮೊಟ್ಟ ಮೊದಲ ಬಾರಿ ಆ್ಯಕ್ಷನ್ ಸಿನಿಮಾಗೆ ನಿರ್ದೇಶನ ಮಾಡಿರುವ ಓಂ ಸಾಯಿ ಪ್ರಕಾಶ್ ಕೂಡ ಈ ಚಿತ್ರದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸಾಯಿ ಕುಮಾರ್ ಪೊಲೀಸ್ ಸೂಪರ್ ಕಾಪ್ ಆಗಿ ಜಗ್ಗಿ ಜಗನ್ನಾಥ್ ಚಿತ್ರದಲ್ಲಿ ಡೈಲಾಗ್ ಮೂಲಕ ಅಬ್ಬರಿಸಿದ್ದಾರೆ. ಪದ್ಮಜಾ ರಾವ್, ತಬಲ ನಾಣಿ, ಪವನ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಫೆಬ್ರವರಿ 28ಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು, ದುನಿಯಾ ರಶ್ಮಿ ಕರಿಯರ್ ಗೆ ಜಗ್ಗಿ ಜಗನ್ನಾಥ ಬ್ರೈಟ್ ಫ್ಯೂಚರ್ ನೀಡುತ್ತಾನಾ ಅನ್ನೋದನ್ನ ಕಾದು ನೋಡಬೇಕು.

  • ಜಗ್ಗಿ ಜಗನ್ನಾಥ ಇದು ಓಂ ಸಾಯಿ ಪ್ರಕಾಶ್ ಸಿನಿಮಾ

    ಜಗ್ಗಿ ಜಗನ್ನಾಥ ಇದು ಓಂ ಸಾಯಿ ಪ್ರಕಾಶ್ ಸಿನಿಮಾ

    ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಯಾರಿಗೆ ಗೊತ್ತಿಲ್ಲ ಹೇಳಿ. ಚಂದನವನಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರೋ ಇವ್ರು, ಭಕ್ತಿ ಪ್ರಧಾನ, ಪ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳಿಂದಲೇ ಹೆಸರುವಾಸಿ. ಇವ್ರು ಇತ್ತೀಚೆಗೆ ಆ್ಯಕ್ಷನ್ ಕಟ್ ಹೇಳಿರೋ ಜಗ್ಗಿ ಜಗನ್ನಾಥ ಚಿತ್ರ ಇದೇ ತಿಂಗಳ 28ಕ್ಕೆ ಬಿಡುಗಡೆಯಾಗುತ್ತಿದೆ.

    ಚಿತ್ರದ ವಿಶೇಷ ಅಂದ್ರೆ ಇದು ಮಾಸ್ ಸಬ್ಜೆಕ್ಟ್ ಇರೋ ಸಿನಿಮಾ. ಅದ್ರಲ್ಲೇನಿದೆ ವಿಶೇಷ ಅಂದ್ಕೋಬೇಡಿ ವಿಶೇಷ ಇದೆ. ಓಂ ಸಾಯಿ ಪ್ರಕಾಶ್ ಮೊದಲಿನಿಂದಲೂ ಭಕ್ತಿ ಪ್ರಧಾನ, ಸೆಂಟಿಮೆಂಟ್ ಕಂಟೆಂಟ್ ಇರೋ ಸಿನಿಮಾಗಳಿಗೆ ಹೆಸರುವಾಸಿ ಅನ್ನೋದು ಎಲ್ಲರಿಗು ಗೊತ್ತೆ ಇದೆ. ಆದ್ರೆ ಫರ್ ದಿ ಫಸ್ಟ್ ಟೈಂ ಓಂ ಸಾಯಿ ಪ್ರಕಾಶ್ ಮಾಸ್ ಸಬ್ಜೆಕ್ಟ್ ಇರೋ ಸಿನಿಮಾ ಡೈರೆಕ್ಟ್ ಮಾಡಿರೋದು. ಇನ್ನೊಂದು ವಿಶೇಷ ಅಂದ್ರೆ ಹೊಸ ಪ್ರತಿಭೆಯನ್ನು ನಾಯಕ ನಟನಾಗಿ ತಮ್ಮ ಚಿತ್ರದಲ್ಲಿ ಇಂಟ್ರಡ್ಯೂಸ್ ಮಾಡ್ತಿರೋದು. ಈ ಎಲ್ಲ ಅಂಶಗಳಿಂದ ಸಾಯಿ ಪ್ರಕಾಶ್ ಅವ್ರ ಜಗ್ಗಿ ಜಗನ್ನಾಥ್ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಟ್ರೈಲರ್ ಕೂಡ ಮಾಸ್ ಡೈಲಾಗ್, ಆಕ್ಷನ್ ದೃಶ್ಯಗಳಿಂದ ಸಖತ್ ಸೌಂಡ್ ಮಾಡ್ತಿದೆ.

    ಸದ್ದಿಲ್ಲದೆ ಶೂಟಿಂಗ್ ಮುಗಿಸಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಜಗ್ಗಿ ಜಗನ್ನಾಥ್ ಚಿತ್ರ ಮಾಫಿಯಾ, ಲವ್ ಸ್ಟೋರಿ, ಆ್ಯಕ್ಷನ್ ಸಬ್ಜೆಕ್ಟ್ ಒಳಗೊಂಡಿದ್ದು, ಸಾಯಿ ಪ್ರಕಾಶ್ ಸಿನಿಮಾ ಅಭಿಮಾನಿಗಳಿಗೆ ಹೊಸ ಫೀಲ್ ನೀಡೋದಂತೂ ಖಂಡಿತ. ಹೊಸ ಪ್ರತಿಭೆ ಲಿಖಿತ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ದುನಿಯಾ ರಶ್ಮಿ ನಾಯಕ ನಟಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಖ್ಯಾತಿಯ ಸಾಯಿ ಕುಮಾರ್ ಪೊಲೀಸ್ ಆಗಿ ಮತ್ತದೇ ಹಳೆ ಖದರ್‍ನಲ್ಲಿ ಮಾಸ್ ಪಂಚ್ ಡೈಲಾಗ್ ಮೂಲಕ ಕಂ ಬ್ಯಾಕ್ ಮಾಡಿದ್ದಾರೆ.

    ಎ.ಎಂ ನೀಲ್ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಹೆಚ್.ಜಯರಾಜು, ಜಿ.ಶಾರಾದ ಜಗ್ಗಿ ಜಗನ್ನಾಥ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಓಂ ಸಾಯಿ ಪ್ರಕಾಶ್ ಈ ಹಿಂದಿನ ಸಿನಿಮಾ ನೋಡಿದವರು ಈ ಹೊಸ ಪ್ರಯತ್ನವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಅನ್ನೋದಕ್ಕೆ ಫೆಬ್ರವರಿ 28ಕ್ಕೆ ಥಿಯೇಟರ್ ಅಂಗಳದಲ್ಲಿ ಉತ್ತರ ಸಿಗಲಿದೆ.

  • ಬಿಡುಗಡೆಯಾಯ್ತು ಜಗ್ಗಿ ಜಗನ್ನಾಥ ಮಾಸ್ ಟ್ರೇಲರ್!

    ಬಿಡುಗಡೆಯಾಯ್ತು ಜಗ್ಗಿ ಜಗನ್ನಾಥ ಮಾಸ್ ಟ್ರೇಲರ್!

    ಬೆಂಗಳೂರು: ನಿರ್ದೇಶಕ ಓಂ ಸಾಯಿಪ್ರಕಾಶ್ ಅಂದರೆ ಭಾವನೆಗಳನ್ನು ಮೀಟುವಂಥಾ ಕೌಟುಂಬಿಕ ಚಿತ್ರಗಳು, ಭಕ್ತಿಪ್ರಧಾನ ಚಿತ್ರಗಳೇ ಕಣ್ಮುಂದೆ ಬರುತ್ತವೆ. ಅವರು ನಿರ್ದೇಶನ ಮಾಡಿದ ಚಿತ್ರಗಳನ್ನು ನೋಡುತ್ತಾ ಬಂದವರಿಗೆ ಅವರನ್ನು ಮಾಸ್ ಸಿನಿಮಾ ನಿರ್ದೇಶಕರಾಗಿ ಕಲ್ಪಿಕೊಳ್ಳುವುದೂ ಕಷ್ಟವಾಗಬಹುದು. ಆದರೀಗ ಸಾಕ್ಷಾತ್ತು ಸಾಯಿಪ್ರಕಾಶ್ ಜಗ್ಗಿ ಜಗನ್ನಾಥ ಎಂಬ ಪಕ್ಕಾ ಆಕ್ಷನ್ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಯಾವ ಸದ್ದೂ ಇಲ್ಲದೆ ಚಿತ್ರೀಕರಣ ಪೂರೈಸಿಕೊಂಡಿರೋ ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.

    ಈ ಚಿತ್ರದಲ್ಲಿ ಲಿಖಿತ್ ಎಂಬ ಹೊಸ ಹುಡುಗ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ದುನಿಯಾ ರಶ್ಮಿ ನಟಿಸಿದ್ದಾರೆ. ತಮ್ಮ ಬ್ರ್ಯಾಂಡಿನಂತಿರೋ ಖಡಕ್ ಪೊಲೀಸ್ ಪಾತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಈಗ ಹೊರಬಂದಿರೋ ಟ್ರೇಲರ್‍ನಲ್ಲಿ ಅವರ ಪಾತ್ರವೇ ಹೈಲೈಟ್ ಆಗಿದೆ. ದುಷ್ಟರ ಪಾಲಿಗೆ ಸಿಂಹಸ್ವಪ್ನವಾದ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿರುವ ಸಾಯಿಕುಮಾರ್ ತಮ್ಮ ಹಳೆಯ ಲುಕ್ಕಲ್ಲಿ, ಹೊಸ ಖದರಿನ ಡೈಲಾಗುಗಳೊಂದಿಗೆ ಗಮನ ಸೆಳೆದಿದ್ದಾರೆ. ಇಲ್ಲಿನ ಮೈನವಿರೇಳಿಸೋ ಮಾಸ್ ಸೂಚನೆಗಳು ಇದು ಓಂ ಸಾಯಿಪ್ರಕಾಶ್ ನಿರ್ದೇಶನದ ಚಿತ್ರವಾ ಎಂಬಂಥಾ ಸಂಶಯ ಹುಟ್ಟುವಷ್ಟು ಆಕ್ಷನ್ ಅಂಶಗಳನ್ನೊಳಗೊಂಡಿದೆ.

    ಪೆಟ್ರೋಲ್ ಪ್ರಸನ್ನ ಈ ಹಿಂದೆ ದಂಡುಪಾಳ್ಯಂ ಸರಣಿಯಲ್ಲಿ ಒಂದಷ್ಟು ಸದ್ದು ಮಾಡಿದ್ದರು. ಜಗ್ಗಿ ಜಗನ್ನಾಥ ಚಿತ್ರದಲ್ಲಿ ಅವರು ಮತ್ತೆ ವಿಲನ್ ರೋಲ್‍ನಲ್ಲಿ ಅಬ್ಬರಿಸಿದ್ದಾರೆ. ಈ ಕಥಾ ಹಂದರವೂ ವಿಶೇಷವಾಗಿಯೇ ಇದೆಯಂತೆ. ಸಾಮಾನ್ಯರಲ್ಲಿ ಸಾಮಾನ್ಯನಾದ ಹುಡುಗನೊಬ್ಬ ಅಘೋರಿಯ ಅವತಾರವೆತ್ತುವ ಅಪರೂಪದ ಸನ್ನಿವೇಶವೂ ಇಲ್ಲಿದೆಯಂತೆ. ಮಾಫಿಯಾ, ರೌಡಿಸಂ ಮತ್ತು ಅದನ್ನು ಬಗ್ಗುಬಡಿಯಲು ನಿಂತ ಖಡಕ್ ಖಾಕಿಯ ಸುತ್ತಾ ಈ ಕಥೆ ರೋಚಕವಾಗಿ ಚಲಿಸುತ್ತದೆಯಂತೆ. ಇದೆಲ್ಲದರ ಜೊತೆಗೆ ಮನಮಿಡಿಯೋ ಪ್ರೇಮಕಥೆಯನ್ನೂ ಹೊಂದಿರುವ ಈ ಚಿತ್ರವೀಗ ಟ್ರೇಲರ್ ಮೂಲಕ ಸುದ್ದಿ ಕೇಂದ್ರದಲ್ಲಿದೆ. ಇಷ್ಟರಲ್ಲಿಯೇ ಇದರ ಬಿಡುಗಡೆ ದಿನಾಂಕವೂ ಘೋಷಣೆಯಾಗಲಿದೆ.