Tag: ಜಗಳ

  • ಮಂಡ್ಯದಲ್ಲಿ ದೋಸ್ತಿಗಳ ನಡ್ವೆ ವಾರ್- ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದ ಅನ್ನದಾನಿ

    ಮಂಡ್ಯದಲ್ಲಿ ದೋಸ್ತಿಗಳ ನಡ್ವೆ ವಾರ್- ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದ ಅನ್ನದಾನಿ

    ಮಂಡ್ಯ: ಅಭಿವೃದ್ಧಿ ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜಗಳ ಬೀದಿಗೆ ಬಂದಿದೆ. ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರನ್ನು ಹಾಲಿ ಶಾಸಕ ಅನ್ನದಾನಿ ಬಹಿರಂಗವಾಗಿಯೇ ಅವಾಚ್ಯವಾಗಿ ನಿಂದಿಸುತ್ತಾ ತೆಂಗಿನಕಾಯಿಂದ ಹಲ್ಲೆ ನಡೆಸಲು ಹೋದ ಘಟನೆ ನಡೆದಿದೆ.

    ಮಳವಳ್ಳಿ ತಾಲೂಕು ಮಾಗನೂರು ಬಳಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಇಂದು ಶಾಸಕ ಅನ್ನದಾನಿ ಭೂಮಿ ಪೂಜೆ ನೆರವೇರಿಸಲು ಆಗಮಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರು, ಸಿದ್ದರಾಮಯ್ಯ ಸಿಎಂ ಆಗಿ ನರೇಂದ್ರಸ್ವಾಮಿ ಶಾಸಕರಾಗಿದ್ದಾಗ ಭೂಮಿ ಪೂಜೆ ಮಾಡಿ, ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇಂದು ಇದೇ ಸ್ಥಳದಲ್ಲಿ ಶಾಸಕ ಅನ್ನದಾನಿ ಮತ್ತೊಮ್ಮೆ ಶಂಕುಸ್ಥಾಪನೆ ನೆರವೇರಿಸಲು ಬಂದಿದ್ದಾರೆ ಎಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.

    ಈ ವೇಳೆ ಹಾಲಿ ಶಾಸಕ ಅನ್ನದಾನಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ತಾಳ್ಮೆ ಕಳೆದುಕೊಂಡ ಶಾಸಕ ಅನ್ನದಾನಿ, ಕಾಂಗ್ರೆಸ್ ಕಾರ್ಯಕರ್ತರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸ್ತೀರೇನ್ರೋ. ಎಲ್ಲರನ್ನು ಜೈಲಿಗೆ ಕಳುಹಿಸುತ್ತೀನಿ ಎಂದು ಕೈಯಲ್ಲಿದ್ದ ತೆಂಗಿನಕಾಯಿಯಿಂದ ಹಲ್ಲೆ ನಡೆಸಲು ಮುಂದಾದರು.

    ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟರು. ಕಾರ್ಯಕ್ರಮದ ನಂತರ ಮಾತನಾಡಿದ ಶಾಸಕ ಅನ್ನದಾನಿ, ನಾನೇನು ಶಂಕುಸ್ಥಾಪನೆ ನೆರವೇರಿಸಲು ಇಲ್ಲಿಗೆ ಬರಲಿಲ್ಲ. ಇಂದಿನಿಂದ ಕೆಲಸ ಆರಂಭಿಸಲು ಶುಭವಾಗಲಿ ಎಂದು ಪೂಜೆ ಮಾಡಲು ಮಾತ್ರ ಬಂದಿದ್ದೆ. ಇದನ್ನೇ ತಪ್ಪಾಗಿ ತಿಳಿದು ಉದ್ದೇಶಪೂರ್ವಕವಾಗಿ ನರೇಂದ್ರಸ್ವಾಮಿ ಬೆಂಬಲಿಗರು ತೊಂದರೆ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

  • ತವರಿಗೆ ಹೋಗುತ್ತೇನೆಂದ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಭೂಪ

    ತವರಿಗೆ ಹೋಗುತ್ತೇನೆಂದ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಭೂಪ

    ಲಕ್ನೋ: ತವರಿಗೆ ಹೋಗುತ್ತೇನೆಂದು ಹೇಳಿದ ಪತ್ನಿಯ ಮೇಲೆ ಸಿಟ್ಟಿಗೆದ್ದ ಪತಿಯೊಬ್ಬ ಆಕೆಯ ಮೂಗನ್ನೇ ಕಚ್ಚಿ ತುಂಡು ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಮಹಿಳೆಯನ್ನು ಆರತಿ ಹಾಗೂ ಆರೋಪಿಯನ್ನು ಕುಮಾರ್ ಎಂದು ಗುರುತಿಸಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಪ್ರತಿ ದಿನ ಪತಿ ಕುಡಿದು ಬಂದು ಪತ್ನಿಗೆ ಹಿಂಸೆ ಕೊಡುತ್ತಿದ್ದನು. ಆದರೆ ಇದನ್ನು ಪತ್ನಿ ಸಹಿಸಿಕೊಂಡು ಆತನ ಜೊತೆಗೆ ಹೇಗೋ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು.

    ಪತ್ನಿ ಪಕ್ಕದೂರಿನಲ್ಲಿರುವ ತನ್ನ ತವರಿಗೆ ಹೋಗಿ ತನ್ನ ತಂದೆ-ತಾಯಿಯನ್ನು ನೋಡಿಕೊಂಡು ಬರುತ್ತೇನೆ ಎಂದು ಪತಿ ಬಳಿ ಹೇಳಿದ್ದಳು. ಇದೇ ಕಾರಣಕ್ಕೆ ಇಬ್ಬರ ನಡುವೆ ಸೋಮವಾರ ಬೆಳಗ್ಗೆ ಜಗಳವಾಗಿತ್ತು. ಈ ವೇಳೆ ಕೋಪಗೊಂಡ ಪತಿರಾಯ ಪತ್ನಿಯ ಮೂಗನ್ನೇ ಕಚ್ಚಿ ತುಂಡು ಮಾಡಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ತುಂಡಾಗಿರುವ ಮೂಗನ್ನು ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಬಹುದಿತ್ತು, ಆದರೆ ತುಂಡಾದ ಮೂಗಿನ ಭಾಗ ಲಭ್ಯವಾಗದ ಹಿನ್ನೆಲೆ ಮೂಗನ್ನು ಜೋಡಿಸಲು ಆಗಿಲ್ಲ. ಆರತಿಗೆ ಈಗ ಕೃತಕ ಮೂಗನ್ನು ಅಳವಡಿಸಬಹುದು. ಆದರೆ ಅದು ಬಹಳ ದುಬಾರಿ ಪ್ರಕ್ರಿಯೆ ಆಗಿರುವುದರಿಂದ ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಸದ್ಯ ಈ ಸಂಬಂಧ ಪ್ರಕರಣ ದಾಖಲಿಕೊಂಡ ಪೊಲೀಸರು ದಂಪತಿಯ ನೆರೆಹೊರೆಯವರನ್ನು ವಿಚಾರಣೆ ನಡೆಸಿದ್ದು, ಆರೋಪಿಯನ್ನು ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.

  • ಕುಡಿದಿದ್ದನ್ನ ಪ್ರಶ್ನಿಸಿದ ಪತ್ನಿಗೆ ಚಾಕುವಿನಿಂದ ಇರಿದ ಪತಿ

    ಕುಡಿದಿದ್ದನ್ನ ಪ್ರಶ್ನಿಸಿದ ಪತ್ನಿಗೆ ಚಾಕುವಿನಿಂದ ಇರಿದ ಪತಿ

    ಬೆಂಗಳೂರು: ಕುಡಿದಿದನ್ನು ಪ್ರಶ್ನೆ ಮಾಡಿದಕ್ಕೆ ಪತಿಯೊಬ್ಬ ತನ್ನ ಪತ್ನಿಯ ಕುತ್ತಿಗೆಗೆ ಚಾಕು ಇರಿದ ಘಟನೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ನಡೆದಿದೆ.

    ಪ್ರದೀಪ್ ಪತ್ನಿಯ ಕುತ್ತಿಗೆಗೆ ಚಾಕು ಇರಿದ ಆರೋಪಿ. ಪ್ರದೀಪ್ ತನ್ನ ಪತ್ನಿ ತಪಸ್ವಿನಿ ಜೊತೆ ಕುಡಿದ ಮತ್ತಿನಲ್ಲಿ ಜಗಳವಾಡುತ್ತಿದ್ದನು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮದ್ಯದ ಅಮಲಿನಲ್ಲಿ ಪ್ರದೀಪ್ ತನ್ನ ಪತ್ನಿಯ ಕುತ್ತಿಗೆಯನ್ನು ಚಾಕುವಿನಿಂದ ಇರಿದಿದ್ದಾನೆ.

    ಪ್ರದೀಪ್ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದು, ತಪಸ್ವಿನಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಹಣಕಾಸಿನ ವಿಚಾರಕ್ಕೆ ಪ್ರದೀಪ್, ತಪಸ್ವನಿಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ತಪಸ್ವಿನಿ ರಕ್ತದ ಮಡುವಿನಲ್ಲೇ ಅಣ್ಣನ ಮನೆ ಬಾಗಿಲು ತಟ್ಟಿದ್ದಾಳೆ.

    ಬಾಗಿಲು ತೆಗೆಯುತ್ತಿದ್ದಂತೆ ತಪಸ್ವಿನಿಯನ್ನು ನೋಡಿದ ಅವರ ಅಣ್ಣ ಪದ್ಮಲೋಷನ್ ಶಾಕ್ ಆದ್ದರು. ಬಳಿಕ ತಪಸ್ವಿನಿಯನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತು. ತಪಸ್ವಿನಿ ಈಗ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

    ಈ ಬಗ್ಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಠಾಣೆಗೆ ದೂರು ನೀಡಲು ಹೋಗುತ್ತಿದ್ದ ಪತ್ನಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪತಿ

    ಠಾಣೆಗೆ ದೂರು ನೀಡಲು ಹೋಗುತ್ತಿದ್ದ ಪತ್ನಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪತಿ

    ವಿಜಯಪುರ: ಹಾಡಹಗಲೇ ನಡು ರಸ್ತೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ವಿಜಯಪುರದ ಜಿಲ್ಲೆಯ ಇಂಡಿ ಪಟ್ಟಣದ ಕಂದಾಯ ನಿರೀಕ್ಷಕರ ಕಚೇರಿ ಎದುರು ನಡೆದಿದೆ.

    ಖಾಜಿಸಾಬ್ ಬಾಗವಾನ್ (30) ಕೃತ್ಯ ಎಸಗಿದ ಪತಿ. ಮೃತ ಪತ್ನಿಯನ್ನು 26 ವರ್ಷದ ಶಾಹಿದಾ ಭಗವಾನ್ ಎಂದು ಗುರುತಿಸಲಾಗಿದೆ.

    ದಂಪತಿ ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ವಾಸವಿದ್ದರು. ರಂಜಾನ್ ಹಬ್ಬಕ್ಕೆ ತವರು ಮನೆಯಾದ ಹಿರೇಬೇವನೂರು ಗ್ರಾಮಕ್ಕೆ ಶಾಹಿದಾ ತೆರಳಿದ್ದಳು. ಇದಕ್ಕೆ ಕೋಪಗೊಂಡ ಪತಿ ಆಕೆಯ ತವರು ಮನೆಗೆ ಹೋಗಿ ಜಗಳವಾಡಿ ಎರಡು ವರ್ಷದ ಮಗನನ್ನು ಕರೆದುಕೊಂಡು ತನ್ನ ಮನೆಗೆ ಬಂದಿದ್ದಾನೆ

    ಮಗನನ್ನು ಬಲವಂತವಾಗಿ ಎತ್ತಿಕೊಂಡು ಹೋಗಿದ್ದಕ್ಕೆ ಇಂದು ಪತಿ ವಿರುದ್ಧ ದೂರು ನೀಡಲು ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ಶಾಹಿದಾ ಹೋಗುವಾಗ ಹಿಂದಿನಿಂದ ಬೈಕಿನಲ್ಲಿ ಬಂದ ಖಾಜಾಸಾಬ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಖಾಜಾಸಾಬ್‍ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಮಹಿಳೆಯರ ಹೊಡೆದಾಟ

    ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಮಹಿಳೆಯರ ಹೊಡೆದಾಟ

    ಹುಬ್ಬಳ್ಳಿ: ಮಹಿಳೆಯರು ಹುಬ್ಬಳ್ಳಿಯ ಶಾ ಬಜಾರ್ ಮಾರುಕಟ್ಟೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಸ್ಥಳೀಯರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಬುಧವಾರ ಸಂಜೆ ಮಹಿಳೆಯರು ಮಾರುಕಟ್ಟೆಗೆ ತಮ್ಮ ಗಂಡಂದಿರ ಜೊತೆ ಬಂದಿದ್ದರು. ಈ ವೇಳೆ ಓರ್ವ ಬೈಕ್ ತೆಗೆಯುವಾಗ ಮಹಿಳೆಗೆ ತಾಗಿದೆ. ಬೈಕ್ ತಾಗಿದ್ದರಿಂದ ಕುಪಿತಗೊಂಡ ಮಹಿಳೆ ಸವಾರನನ್ನು ನಿಂದಿಸಿದ್ದಾಳೆ. ಪತಿಯನ್ನು ನಿಂದಿಸುತ್ತಿದ್ದ ನೋಡಿದ ಸವಾರನ ಪತ್ನಿ ಮಹಿಳೆ ಮೇಲೆ ಎರಗಿದ್ದಾಳೆ.

    ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಕೊನೆಗೆ ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ ಇಬ್ಬರು ಮಹಿಳೆಯರ ಗಂಡಂದಿರನ್ನು ತಮ್ಮ ಪತ್ನಿಯರನ್ನು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

  • ಬುದ್ಧಿ ಹೇಳಿದಕ್ಕೆ ಕಟ್ಟಿಗೆಯಿಂದ ತಂದೆಯನ್ನೇ ಕೊಂದ ಪಾಪಿ ಮಗ!

    ಬುದ್ಧಿ ಹೇಳಿದಕ್ಕೆ ಕಟ್ಟಿಗೆಯಿಂದ ತಂದೆಯನ್ನೇ ಕೊಂದ ಪಾಪಿ ಮಗ!

    ಹಾವೇರಿ: ಬುದ್ಧಿ ಮಾತು ಹೇಳಿದಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ದಾರುಣ ಘಟನೆ ಜಿಲ್ಲೆಯ ಹಾನಗಲ್ ತಾಲೂಕು ಬಿಂಗಾಪುರ ಗ್ರಾಮದಲ್ಲಿ ನಡೆದಿದೆ.

    ಬಿಂಗಾಪುರ ಗ್ರಾಮದ ನಿವಾಸಿ ಮುರಾರಿ ಡಾಂಗೆ(55) ಮೃತ ದುರ್ದೈವಿ. ಸಿದ್ದಪ್ಪ(35) ಕೊಲೆ ಮಾಡಿದ ಆರೋಪಿ. ಶನಿವಾರದಂದು ಕ್ಷುಲಕ ಕಾರಣಕ್ಕೆ ಮನೆಯಲ್ಲಿ ಜಗಳ ಆಗಿತ್ತು. ಆದರಿಂದ ಮಗನಿಗೆ ತಂದೆ ಮುರಾರಿ ಬುದ್ಧಿ ಮಾತು ಹೇಳಿದ್ದರು. ಆದ್ರೆ ಬುದ್ಧಿ ಹೇಳಿದ್ದೇ ತಪ್ಪಾಗಿ ಹೋಯ್ತು. ತಂದೆ ಮಾತಿಗೆ ಕೋಪಗೊಂಡ ಮಗ ಸಿಟ್ಟಿನಿಂದ ಕೈಗೆ ಸಿಕ್ಕ ಕಟ್ಟಿಗೆಯಲ್ಲಿ ಹೊಡೆದು ಕೊಲೆ ಮಾಡಿದ್ದಾನೆ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಸಿದ್ದಪ್ಪನ ವಿರುದ್ಧ ಆಡೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರ ನಡೆಸುತ್ತಿದ್ದಾರೆ.

  • ಪತಿ-ಪತ್ನಿ ಜಗಳ ನೋಡಿ ನಕ್ಕಿದಕ್ಕೆ ಕೆನ್ನೆಯನ್ನೇ ಕತ್ತರಿಸಿದ!

    ಪತಿ-ಪತ್ನಿ ಜಗಳ ನೋಡಿ ನಕ್ಕಿದಕ್ಕೆ ಕೆನ್ನೆಯನ್ನೇ ಕತ್ತರಿಸಿದ!

    ನವದೆಹಲಿ: ಪತಿ-ಪತ್ನಿ ಜಗಳ ಮಾಡುತ್ತಿದ್ದಾಗ ನೋಡಿ ನಕ್ಕಿದ ಯುವಕನೋರ್ವನ ಎರಡು ಕನ್ನೆಯನ್ನೇ ಪತಿರಾಯ ಕತ್ತರಿಸಿದ ಭಯಾನಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ದೆಹಲಿಯ ಕಲ್ಯಾಣನಗರದ ನಿವಾಸಿ ಕುಮಾಲ್(17) ಗಾಯಗೊಂಡ ಯುವಕ. ಕಲ್ಯಾಣನಗರದಲ್ಲಿ ಗುರುವಾರದಂದು ದಂಪತಿ ಜಗಳವಾಡುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಯುವಕ ಅವರಿಬ್ಬರ ಜಗಳ ನೋಡಿ ನಕ್ಕಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಪತಿರಾಯ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ.

    ಯುವಕನನ್ನು ಮರುದಿನ ಪಾರ್ಕಿಗೆ ಕರೆದುಕೊಂಡು ಹೋದ ಆರೋಪಿ, ನಿನ್ನೆ ನೀನು ನಮ್ಮ ಜಗಳ ನೋಡಿ ನಗುತ್ತಿದ್ದೆ. ನನ್ನ ಪತ್ನಿ ಜೊತೆ ಜಗಳವಾಡಿದರೆ ನೀನೇಕೆ ನಕ್ಕಿದ್ದು ಎಂದು ಪ್ರಶ್ನಿಸಿ, ನಮ್ಮನ್ನ ನೋಡಿ ನಕ್ಕಿದ್ದಕ್ಕೆ ನಿನಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಏಕಾಏಕಿ ಯುವಕನ ಮೇಲೆ ಹಲ್ಲೆ ನಡೆಸಿ ಆತನ ಎರಡೂ ಕೆನ್ನೆಯನ್ನು ಬ್ಲೇಡ್ ನಿಂದ ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹಾಗೆಯೇ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ.

  • ಡಿಕೆಶಿ ಸಮ್ಮುಖದಲ್ಲೇ ಜಗಳ – ಬಳ್ಳಾರಿ ಕಾಂಗ್ರೆಸ್ಸಿನಲ್ಲಿ ಮುಗಿಯದ ಕಿತ್ತಾಟ

    ಡಿಕೆಶಿ ಸಮ್ಮುಖದಲ್ಲೇ ಜಗಳ – ಬಳ್ಳಾರಿ ಕಾಂಗ್ರೆಸ್ಸಿನಲ್ಲಿ ಮುಗಿಯದ ಕಿತ್ತಾಟ

    ಬಳ್ಳಾರಿ: ಕಾಂಗ್ರೆಸ್ ಶಾಸಕರಿಬ್ಬರ ಬಡಿದಾಟ ಇನ್ನೂ ಜನಮಾನಸದಿಂದ ಮರೆಯಾಗಿಲ್ಲ. ರೆರ್ಸಾಟಿನಲ್ಲಿ ಕುಡಿದು ತೂರಾಡಿದ ಶಾಸಕ ಗಣೇಶ ಹಾಗೂ ಆನಂದ್ ಸಿಂಗ್ ಗಲಾಟೆ ಬಗೆಹರಿಯುವ ಮುನ್ನವೇ ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕರ ಜಗಳ ಮತ್ತೆ ಮುಂದುವರಿದಿದೆ.

    ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ನಾಮಪತ್ರ ಸಲ್ಲಿಕೆ ನಂತರ ಸಚಿವ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡುವ ವೇಳೆಯಲ್ಲೇ ಶಾಸಕ ಭೀಮಾನಾಯ್ಕ್ ಹಾಗೂ ಮಾಜಿ ಶಾಸಕ ಶಿರಾಜ್ ಶೇಖ್ ಬೈದಾಡಿಕೊಂಡು ಜಗಳ ಮಾಡಿಕೊಂಡಿದ್ದಾರೆ.

    ಮಾಜಿ ಶಾಸಕ ಶಿರಾಜಶೇಖ್ ಅವರಿಗೆ ಶಾಸಕ ಭೀಮಾನಾಯ್ಕ್,”ಲೇ ನೋಡ್ಕೋತ್ತೀನಿ. ನಾಳೆ ಸಿಗು ಇದೆ” ಎಂದು ಹೇಳಿದರೆ “ಏನು ನೋಡ್ಕೋತ್ತಿಯಾ” ಎಂದು ಶಿರಾಜ್ ಶೇಖ್ ತಿರುಗೇಟು ನೀಡಿದರು.

    ಪಕ್ಷ ವಿರೋಧಿ ಚಟುವಟಿಕೆ ಮಾಡಿ ಬಿಜೆಪಿ ಪರ ಪ್ರಚಾರ ಮಾಡಿದ್ದ ಶಿರಾಜ ಶೇಖ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದಕ್ಕೆ ಭೀಮಾನಾಯ್ಕ್ ಗರಂ ಆಗಿ ಬೈದಿದ್ದರು. ಅಲ್ಲದೇ ಶೀರಾಜ್ ಶೇಖ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಭೀಮಾನಾಯ್ಕ್ ಅಸಮಾಧಾನ ಸಹ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

    ನಾಮಪತ್ರ ಸಲ್ಲಿಕೆಯ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಮಂಗಳವಾರದ ಶುಭ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ದೇಶದಲ್ಲಿ ಬದಲಾವಣೆ ಆಗಬೇಕು. ಎಲ್ಲ ವರ್ಗದವರಿಗೂ ರಕ್ಷಣೆ ಸಿಗಬೇಕು. ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತದಾರರು ಜವಾಬ್ದಾರಿಯಿಂದ ಮತ ನೀಡಬೇಕು. ಬಳ್ಳಾರಿಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗಬೇಕು ಎಂದು ಹೇಳಿದರು.

    ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ನಾನು ಉಪಚುನಾವಣೆಯಲ್ಲೇ ಉಗ್ರಪ್ಪರ ಪರವಾಗಿ ನಾನು ಐದೂವರೆ ವರ್ಷಗಳಿಗೆ ಮತ ನೀಡುವಂತೆ ಮನವಿ ಮಾಡಿದ್ದೇನೆ. ನಮಗೆ ಚುನಾವಣೆಯಲ್ಲಿ ಹಣದ ಅವಶ್ಯಕತೆ ಇಲ್ಲ. ನಮಗೆ ಜನರ ಆರ್ಶಿವಾದ ಬೇಕು. ಬಿಜೆಪಿಯವರು ಬೇಕಾದಷ್ಟು ಹಣ ಹಂಚಿಕೆ ಮಾಡಲಿ ಎಂದು ಹೇಳಿದರು.

  • ಯುವತಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

    ಯುವತಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ಯುವತಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಸಲೀಂ ಕೊಲೆಯಾದ ವ್ಯಕ್ತಿ. ಸಲೀಂ ನಗರದ ಟ್ಯಾನರಿ ರೋಡ್‍ನ ನಿವಾಸಿಯಾಗಿದ್ದು, ಏರಿಯಾದಲ್ಲಿ ಮೆಕ್ಯಾನಿಕ್ ಆಗಿ ಫೇಮಸ್ ಆಗಿದ್ದ. ಸಲೀಂ ನನ್ನ ಕಳೆದ ಶನಿವಾರ ಸಂಜೆ ಡಿಯೋ ಬೈಕ್‍ನಲ್ಲಿ ಬಂದಿದ್ದ ಐವರು ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿಕೊಂದು ಪರಾರಿಯಾಗಿದ್ದರು. ನಾಲ್ವರು ಆರೋಪಿಗಳಾದ ಮುನೀರ್, ಸೈಯ್ಯದ್, ಶೋಯೆಭ್ ಹಾಗೂ ಹಿದಾಯತ್‍ನನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಕಳೆದ 23ರಂದು ಕೊಲೆಯಾದ ಸಲೀಂ ತನ್ನ ಏರಿಯಾದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಅದೇ ಯುವತಿಯನ್ನು ಮುನೀರ್ ಕೂಡ ಇಷ್ಟಪಡಲು ಶುರು ಮಾಡಿದ್ದ. ಇದೇ ವಿಚಾರಕ್ಕೆ ವರ್ಷದ ಹಿಂದೆ ಸಲೀಂ ಹಾಗೂ ಮುನೀರ್‍ಗೆ ಜಗಳವಾಗಿದ್ದು, ಆ ವೇಳೆ ಸಲೀಂ ತನ್ನ ಯುವತಿ ಕಡೆ ತಿರುಗಿ ನೋಡಿದರೆ ಅಷ್ಟೇ ಎಂದು ಮುನೀರ್ ಗೆ ವಾರ್ನ್ ಮಾಡಿ ಕಳುಹಿಸಿದ್ದನು. ನಂತರ ಮದುವೆ ಕಾರ್ಯಕ್ರಮವೊಂದರಲ್ಲಿ ಮುನೀರ್ ಹಾಗೂ ಸಲೀಂ ಇಬ್ಬರು ಭಾಗವಹಿಸಿದರು.

    ಈ ವೇಳೆ ಮದುವೆ ಆರ್ಕೆಸ್ಟ್ರಾದಲ್ಲಿನ ಸೌಂಡ್ ಕಡಿಮೆ ಮಾಡುವಂತೆ ಸಲೀಂ ತಿಳಿಸಿದ್ದಾನೆ. ಆಗ ಅಲ್ಲೇ ಇದ್ದ ಮುನೀರ್ ಆಗಲ್ಲ ಎಂದು ವಿರೋಧಿಸಿದ್ದಾನೆ. ಈ ವೇಳೆ ಮುನೀರ್‍ನ ಮೇಲೆ ಸಲೀಂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಅಷ್ಟಕ್ಕೆ ಸುಮ್ಮನಾಗದ ಸಲೀಂ ಇತ್ತೀಚೆಗೆ ಏರಿಯಾ ತುಂಬಾ ಮುನೀರ್ ನನ್ನು ಸುಮ್ಮನೇ ಬಿಡುವುದಿಲ್ಲ ಅವನಿಗೆ ಮತ್ತೆ ಹೊಡೆಯುತ್ತೇನೆ ಎಂದು ಹೇಳಿದ್ದನು.

    ಸಲೀಂ ನನ್ನ ಹಾಗೇ ಬಿಟ್ರೆ ನಮ್ಮನ್ನು ಹೊಡೆದು ಮುಗಿಸ್ತಾನೆ ಎಂದು ತಿಳಿದ ಮುನೀರ್ ಕಳೆದ ಶನಿವಾರ ಸಲೀಂನ ಮೆಕಾನಿಕ್ ಶಾಪ್ ಬಳಿ ತನ್ನ ಹುಡುಗರ ಜೊತೆ ಬಂದವನೇ ಮಚ್ಚು-ಲಾಂಗುಗಳಿಂದ ಸಲೀಂ ಮೇಲೆ ದಾಳಿ ಮಾಡಿ ಕೊಂದು ಮುಗಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

    ಈ ಘಟನೆ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಪೊಲೀಸರು ಈಗ ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಶಬರೀಶ್‍ಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

  • ಬೆಂಗ್ಳೂರಲ್ಲಿ  ಗೆಳೆಯನನ್ನು ಅಟ್ಟಾಡಿಸಿಕೊಂಡು ಗೂಸ ಕೊಟ್ಟ ಯುವತಿ

    ಬೆಂಗ್ಳೂರಲ್ಲಿ ಗೆಳೆಯನನ್ನು ಅಟ್ಟಾಡಿಸಿಕೊಂಡು ಗೂಸ ಕೊಟ್ಟ ಯುವತಿ

    ಬೆಂಗಳೂರು: ರಸ್ತೆಯಲ್ಲಿ ವಿದೇಶಿ ಪ್ರೇಮಿಗಳಿಬ್ಬರು ರಂಪಾಟ ಮಾಡುತ್ತ, ಗೆಳೆಯನನ್ನು ಅಟ್ಟಾಡಿಸಿಕೊಂಡು ಯುವತಿ ಹೊಡೆದು ಹೈಡ್ರಾಮ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ರೇಸ್ ಕೋರ್ಸ್ ರಸ್ತೆಯಲ್ಲಿ ಇಂದು ನಡೆದಿದೆ.

    ವಿದೇಶಿ ಪ್ರೇಮಿಗಳ ಬೀದಿ ಗುದ್ದಾಟಕ್ಕೆ ಮೂಕ ಪ್ರೇಕ್ಷಕರಾದ ಜನ ನೋಡುತ್ತ ನಿಂತಿದ್ದರು. ಯುವತಿ ಕಾಲಿನಿಂದ ಒದ್ದರೂ, ಬಾಟಲಿಯಿಂದ ಹೊಡೆದರೂ ಯುವಕ ಮಾತ್ರ ಸುಮ್ಮನೆ ನಿಂತಿದ್ದ. ಇದನ್ನು ನೋಡಿ ಜನರು ಏನಪ್ಪ ಹಿಂಗೆ ಗುದ್ದಾಡುತ್ತಾ ಇದ್ದಾರೆ ಅಂತ ದಂಗಾಗಿ ನೋಡುತ್ತ ನಿಂತಿದ್ದರು.

    ರಸ್ತೆಯಲ್ಲಿ ಜಗಳವಾಡುತ್ತ ಇಂತಿದ್ದ ಯುವತಿಗೆ ಯುವಕ ಮನವೊಲಿಸಲು ಪ್ರಯತ್ನ ಮಾಡಿದ್ದಾನೆ. ಆದ್ರೆ ಯುವತಿ ಮಾತ್ರ ರೊಚ್ಚಿಗೆದ್ದು ಆತನಿಗೆ ಹೊಡೆದಿದ್ದಕ್ಕೆ, ಕೊನೆಗೆ ಅಲ್ಲಿಂದ ಓಡಿ ಹೋಗಿ ಯುವಕ ಪರಾರಿಯಾಗಿದ್ದಾನೆ.

    https://www.youtube.com/watch?v=KLJXfREX9rc