Tag: ಜಗಳ

  • ಪತ್ನಿ ಜೊತೆ ಜಗಳವಾಡಿ ಫ್ರೆಂಚ್ ಕಿಸ್ ಬೇಕೆಂದ- ಮುತ್ತು ನೀಡಲು ಬಂದಾಗ ನಾಲಿಗೆಯನ್ನೇ ಕತ್ತರಿಸಿದ

    ಪತ್ನಿ ಜೊತೆ ಜಗಳವಾಡಿ ಫ್ರೆಂಚ್ ಕಿಸ್ ಬೇಕೆಂದ- ಮುತ್ತು ನೀಡಲು ಬಂದಾಗ ನಾಲಿಗೆಯನ್ನೇ ಕತ್ತರಿಸಿದ

    ಗಾಂಧಿನಗರ: ಪತಿಯೊಬ್ಬ ತನ್ನ ಪತ್ನಿ ಜೊತೆ ಜಗಳವಾಡಿ ಫ್ರೆಂಚ್ ಕಿಸ್ ಕೇಳುವ ನೆಪದಲ್ಲಿ ಆಕೆಯ ನಾಲಿಗೆಯನ್ನೇ ಕತ್ತರಿಸಿದ ಘಟನೆ ಬುಧವಾರ ರಾತ್ರಿ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ.

    ಆಯುಬ್ ಪತ್ನಿಯ ನಾಲಿಗೆ ಕತ್ತರಿಸಿದ ಪತಿ. ಆಯುಬ್ ತನ್ನ ಪತ್ನಿ ತಸ್ಲಿಮಾ ಜೊತೆ ಜಗಳವಾಡಿದ್ದಾನೆ. ಜಗಳವಾಡಿದ ಬಳಿಕ ಪತ್ನಿ ಬಳಿ ಫ್ರೆಂಚ್ ಕಿಸ್ ಬೇಕು ಎಂದು ಕೇಳಿದ್ದಾನೆ. ಆಯುಬ್ ಮಾತನ್ನು ಕೇಳಿದ ತಸ್ಲಿಮಾ ತನ್ನ ಪತಿ ಜಗಳವಾಡಿದ್ದನ್ನು ಮರೆತು ಈಗ ಪ್ಯಾಚಪ್ ಮಾಡಿಕೊಳ್ಳುತ್ತಿದ್ದಾನೆ ಎಂದು ಒಪ್ಪಿಗೆ ನೀಡಿದ್ದಾಳೆ. ತಸ್ಲಿಮಾ ಫ್ರೆಂಚ್ ಕಿಸ್ ನೀಡಲು ನಾಲಿಗೆ ಹೊರಗೆ ತೆಗೆಯುತ್ತಾಳೆ. ಈ ವೇಳೆ ಆಯುಬ್ ತನ್ನ ಪತ್ನಿಯ ನಾಲಿಗೆಯನ್ನು ಕೈಯಲ್ಲಿ ಹಿಡಿದು ಚಾಕುವಿನಿಂದ ಕತ್ತರಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಪರಾರಿಯಾದ ಆರೋಪಿ ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆ ಬಗ್ಗೆ ತಸ್ಲಿಮಾ ವೆಜಲ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ನಾನು 2008ರಂದು ಆಯುಬ್‍ನನ್ನು ಮದುವೆಯಾಗಿದ್ದೇನೆ. ಇದು ನನ್ನ ಮೂರನೇ ಮದುವೆಯಾಗಿದ್ದು, ಆಯುಬ್‍ನ ಎರಡನೇ ಮದುವೆ. ನಾವು ಮದುವೆಯಾದ ಎರಡು ತಿಂಗಳು ಮಾತ್ರ ಖುಷಿಯಾಗಿದ್ದೆವು. ಬಳಿಕ ಆಯುಬ್ ಚಿಕ್ಕಚಿಕ್ಕ ವಿಷಯಕ್ಕೆ ನನ್ನ ಜೊತೆ ಜಗಳವಾಡಲು ಶುರು ಮಾಡಿದ್ದನು. ಆಯುಬ್ ಕೆಲಸದ ಬಗ್ಗೆ ಅಸಡ್ಡೆ ಹೊಂದಿದ್ದಾನೆ. ನಾನು ಕೆಲಸದ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಆತ ನನ್ನ ಮೇಲೆ ಹಲ್ಲೆ ಮಾಡಿದ್ದನು. ನನಗೆ ಈ ಮದುವೆ ಮುರಿದುಕೊಳ್ಳುವುದ್ದಕ್ಕೆ ಇಷ್ಟವಿರಲಿಲ್ಲ. ಹಾಗಾಗಿ ಎಲ್ಲವನ್ನು ಸಹಿಸಿಕೊಂಡಿದ್ದೆ ಎಂದು ತಸ್ಲಿಮಾ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

    ಆಯುಬ್ ತನ್ನ ಪತ್ನಿಯ ನಾಲಿಗೆಯನ್ನು ಕತ್ತರಿಸಿದ ಬಳಿಕ ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾನೆ. ಈ ವೇಳೆ ತಸ್ಲಿಮಾ ತನ್ನ ಸಹೋದರಿಗೆ ಕರೆ ಮಾಡಿ ನಡೆದ ಘಟನೆಯನ್ನು ತಿಳಿಸಿ ಸಹಾಯ ಮಾಡಲು ಕೇಳಿಕೊಂಡಿದ್ದಾಳೆ. ಅಲ್ಲದೆ ಕಾಲೋನಿಯಲ್ಲಿದ್ದ ಜನರ ಬಳಿ ಸಹಾಯ ಪಡೆದು ತಸ್ಲಿಮಾ ಆ ರೂಮಿನಿಂದ ಹೊರ ಬಂದಿದ್ದಾಳೆ. ಬಳಿಕ ಸ್ಥಳೀಯರು ತಸ್ಲಿಮಾಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ತಸ್ಲಿಮಾ ನಾಲಿಗೆಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

  • ತಂದೆ, ತಾಯಿ ಗುದ್ದಾಟಕ್ಕೆ ಬಲಿಯಾಯ್ತು 5 ತಿಂಗಳ ಕಂದಮ್ಮ

    ತಂದೆ, ತಾಯಿ ಗುದ್ದಾಟಕ್ಕೆ ಬಲಿಯಾಯ್ತು 5 ತಿಂಗಳ ಕಂದಮ್ಮ

    ನವದೆಹಲಿ: ತಂದೆ, ತಾಯಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆ ಮಾತಿದೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿ ತಂದೆ-ತಾಯಿ ಜಗಳ, ಗುದ್ದಾಟಕ್ಕೆ 5 ತಿಂಗಳ ಪುಟ್ಟ ಕಂದಮ್ಮ ಬಲಿಯಾಗಿದೆ.

    ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ನಿವಾಸಿ ದೀಪ್ತಿ(29) ಹಾಗೂ ಸತ್ಯಜೀತ್(32) ಅವರ 5 ತಿಂಗಳ ಮಗು ಸಾವನ್ನಪ್ಪಿದೆ. ಭಾನುವಾರ ದೀಪ್ತಿ ಹಾಗೂ ಸತ್ಯಜೀತ್ ನಡುವೆ ಜಗಳ ನಡೆದಿತ್ತು. ಈ ವೇಳೆ ಅವರಿಬ್ಬರ ನಡುವೆ ಹೊಡೆದಾಟ ಕೂಡ ನಡೆದಿತ್ತು. ಈ ವೇಳೆ ಪತಿ ತನ್ನ ಪತ್ನಿಗೆ ಕೋಲಿನಿಂದ ಹೊಡೆಯುತ್ತಿದ್ದಾಗ ಕೋಲಿನಲ್ಲಿದ್ದ ಕಬ್ಬಿಣದ ಮೊಳೆ ತುಂಡಾಗಿ, ಆಕಸ್ಮಿಕವಾಗಿ ಹಾಸಿಗೆ ಮೇಲೆ ಮಲಗಿದ್ದ ಮಗುವಿನ ತಲೆ ಬಡಿದಿತ್ತು. ಆಗ ದಂಪತಿ ಮಗುವಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಸುಮ್ಮನಾಗಿದ್ದರು. ಈ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಿರಲಿಲ್ಲ.

    ಬುಧವಾರ ಇದ್ದಕ್ಕಿದ್ದ ಹಾಗೆ ಮಗು ವಾಂತಿ ಮಾಡಲು ಆರಂಭಿಸಿ, ಅಸ್ವಸ್ಥಗೊಂಡಿತು. ಈ ವೇಳೆ ದೀಪ್ತಿ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಕರೆತರುವ ಮೊದಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ಮಗುವಿನ ಮೃತದೇಹ ಕಳುಹಿಸಿದಾಗ ಮಗು ಹೇಗೆ ಸಾವನ್ನಪ್ಪಿತು ಎಂಬುದು ಬೆಳಕಿಗೆ ಬಂತು.

    ಮಗುವಿನ ತಲೆಗೆ ಕಬ್ಬಿಣದ ವಸ್ತುವಿನಿಂದ ಹೊಡೆತಬಿದ್ದಿದೆ, ಆದ್ದರಿಂದ ಅದರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮಗು ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದಿದ್ದು, ಈ ಸಂಬಂಧ ಗಾಜಿಪುರ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಈ ಬಗ್ಗೆ ತಿಳಿಯುತ್ತಿದ್ದಂತೆ ಆರೋಪಿ ಸತ್ಯಜೀತ್ ತಲೆಮರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ದಸರಾದಲ್ಲೂ ಪಾಲಿಟಿಕ್ಸ್- ಶಾಮಿಯಾನ ಹಾಕಿಸೋ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ಫೈಟ್

    ದಸರಾದಲ್ಲೂ ಪಾಲಿಟಿಕ್ಸ್- ಶಾಮಿಯಾನ ಹಾಕಿಸೋ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ಫೈಟ್

    ಮಂಡ್ಯ: ಶ್ರೀರಂಗಪಟ್ಟಣ ದಸರಾದಲ್ಲಿ ಶಾಮಿಯಾನ ಹಾಕುವ ವಿಚಾರಕ್ಕೆ ಪಾಲಿಟಿಕ್ಸ್ ಶುರುವಾಗಿದ್ದು, ದಸರಾ ಶಾಮಿಯಾನದ ಜಗಳ ಬೀದಿಗೆ ಬಂದು ನಿಂತಿದೆ.

    ಜೆಡಿಎಸ್ ಮತ್ತು ಬಿಜೆಪಿ ನಡುವೆ ಶಾಮಿಯಾನ ಹಾಕುವ ವಿಚಾರಕ್ಕೆ ಜಗಳ ನಡೆದಿದೆ. ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರ ನಡುವೆ ಶಾಮಿಯಾನ ಹಾಕುವ ವಿಚಾರಕ್ಕೆ ಜಿದ್ದಾಜಿದ್ದಿ ನಡೆದಿದೆ. ಒಂದೆಡೆ ಇಷ್ಟು ವರ್ಷ ದಸರಾಗೆ ನಾವು ಶಾಮಿಯಾನ ಹಾಕುತ್ತಿದ್ದೇವೆ ಎಂದು ಜೆಡಿಎಸ್ ಮುಖಂಡರು ಹೇಳುತ್ತಿದ್ದರೆ, ಆಗ ನೀವು ಹಾಕಿಸುತ್ತಾ ಇದ್ರಿ, ಈಗ ನಮ್ಮ ಸರ್ಕಾರ ಇದೆ. ಹೀಗಾಗಿ ಈ ಬಾರಿ ನಾವು ಹಾಕಿಸುತ್ತೇವೆ ಎಂದು ಬಿಜೆಪಿ ಮುಖಂಡರು ಶಾಮಿಯಾನ ಹಾಕಿಸಲು ಪಟ್ಟು ಹಿಡಿದು ಕುಳಿತಿದ್ದಾರೆ.

    ಗುರುವಾರ ಶ್ರೀರಂಗಪಟ್ಟಣದಲ್ಲಿ ಶಾಮಿಯಾನ ವಿಚಾರಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಜೋರಾಗಿ ಜಗಳ ನಡೆದಿದ್ದು, ಎರಡು ಪಕ್ಷದವರೂ ಶಾಮಿಯಾನ ಲಾರಿಗಳನ್ನು ನಿಲ್ಲಿಸಿಕೊಂಡು ಗಲಾಟೆ ಮಾಡಿದ್ದಾರೆ. ನಮ್ಮವರೇ ಶಾಮಿಯಾನ ಹಾಕುತ್ತಾರೆ ಎಂದು ಜೆಡಿಎಸ್‍ನವರು, ಇಲ್ಲ ಈ ಸಲ ನಮ್ಮವರು ಹಾಕುತ್ತಾರೆ ಎಂದು ಬಿಜೆಪಿ ದಸರಾ ಶಾಮಿಯಾನ ವಿಚಾರಕ್ಕೂ ರಾಜಕೀಯ ಮಾಡುತ್ತಿದ್ದಾರೆ.

  • ಜಗಳವಾಡುತ್ತಾ ಪತ್ನಿಯ ಮೂಗು, ಕೂದಲು ಕತ್ತರಿಸಿದ ಪತಿ

    ಜಗಳವಾಡುತ್ತಾ ಪತ್ನಿಯ ಮೂಗು, ಕೂದಲು ಕತ್ತರಿಸಿದ ಪತಿ

    ಲಾಹೋರ್: ಪತಿಯೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಾ ಕೋಪಗೊಂಡು ಆಕೆಯ ಮೂಗು ಮತ್ತು ಕೂದಲನ್ನು ಕತ್ತರಿಸಿ ಕೌರ್ಯ ಮೆರೆದ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ.

    ಮಂಗಳವಾರದಂದು ಈ ಘಟನೆ ನಡೆದಿದೆ. ಆರೋಪಿಯನ್ನು ಸಾಜಿದ್ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಆರೋಪಿ ಎಸ್ಕೆಪ್ ಆಗಿದ್ದಾನೆ. ಇತ್ತ ತೀವ್ರವಾಗಿ ಗಾಯಗೊಂಡ ಸಾಜಿದ್ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೃತ್ಯವೆಸೆಗಿ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಈ ಬಗ್ಗೆ ದಂಪತಿಯ ಮಗಳು ಪ್ರತಿಕ್ರಿಯಿಸಿ, ನನ್ನ ಅಮ್ಮ ಹಲವು ಸಂಘಗಳಲ್ಲಿ ಸದಸ್ಯರಾಗಿ ಅದರಲ್ಲಿ ಹಣ ಉಳಿಸುತ್ತಿದ್ದರು. ಆದರೆ ಈ ವಿಚಾರಕ್ಕೆ ಅಪ್ಪ ಯಾವಾಗಲೂ ಅಮ್ಮನ ಬಳಿ ಜಗಳ ಮಾಡುತ್ತಿದ್ದರು, ಅಮ್ಮನಿಗೆ ಹೊಡೆಯುತ್ತಿದ್ದರು. ಮಂಗಳವಾರ ಕೂಡ ಅಪ್ಪ-ಅಮ್ಮ ಜಗಳ ಮಾಡುತ್ತಿದ್ದಾಗ, ಸಿಟ್ಟಿನಿಂದ ಅಪ್ಪ ಮೊದಲು ಅಮ್ಮನಿಗೆ ಪೈಪ್‍ನಿಂದ ಹೊಡೆದರು. ಬಳಿಕ ಚಾಕುವಿನಿಂದ ಅಮ್ಮನ ಮೂಗು, ಕೂದಲು ಕತ್ತರಿಸಿದ್ದಾರೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.

    ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ಜಗಳವಾಡುತ್ತಿದ್ದರು. ಪತಿಯ ಕಾಟವನ್ನು ತಾಳಲಾರದೆ ಪತ್ನಿ ಎರಡು ಬಾರಿ ಮನೆಬಿಟ್ಟು ಹೋಗಿದ್ದಳು. ಆದರೆ ಪತಿ ಆಕೆಯ ಮನವೊಲಿಸಿ, ಮುಂದೆ ಹೀಗೆ ಆಗಲ್ಲ ಎಂದು ಮಾತು ಕೊಟ್ಟು ವಾಪಸ್ ಕರೆತಂದಿದ್ದನು ಎಂದು ಕುಟುಂಬದ ಇತರೆ ಸದಸ್ಯರು ವಿಚಾರಣೆ ವೇಳೆ ಹೇಳಿದ್ದಾರೆ.

  • ಜಮೀನಿಗಾಗಿ ದೊಡ್ಡಮ್ಮ, ಸಹೋದರಿಯನ್ನು ಕೊಂದ ಯುವಕ

    ಜಮೀನಿಗಾಗಿ ದೊಡ್ಡಮ್ಮ, ಸಹೋದರಿಯನ್ನು ಕೊಂದ ಯುವಕ

    ರಾಮನಗರ: ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ದೊಡ್ಡಮ್ಮ ಹಾಗೂ ಆಕೆಯ ಮಗಳನ್ನು ಯುವಕನೊಬ್ಬ ಕೊಲೆ ಮಾಡಿದ ಘಟನೆ ಕನಕಪುರ ತಾಲೂಕಿನ ಸೊಂಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸೊಂಟೇನಹಳ್ಳಿ ಗ್ರಾಮದ ಮಂಗಮ್ಮ ಹಾಗೂ ಆಕೆಯ ಮಗಳು ನಾಗರತ್ನ ಕೊಲೆಯಾದ ದುರ್ದೈವಿಗಳು. ಕೊಲೆಯಾದ ಮಂಗಮ್ಮಳ ಸೋದರಿಯ ಮಗ ನಾಗರಾಜು ಅಲಿಯಾಸ್ ನಾಗ ಅಲಿಯಾಸ್ ಬುಲೆಟ್ ನಾಗ ಕೊಲೆ ಮಾಡಿದ ಆರೋಪಿ.

    ಎರಡು ಕುಟುಂಬಗಳ ನಡುವೆ ಹಲವಾರು ವರ್ಷಗಳಿಂದ ಜಮೀನಿನ ವಿಚಾರವಾಗಿ ಗಲಾಟೆ ನಡೆಯುತ್ತಲೇ ಇತ್ತು. ಇದೇ ವಿಚಾರವಾಗಿ ರಾತ್ರಿ ಕೂಡ ಗಲಾಟೆ ನಡೆದಿದ್ದು, ಬೆಳಗ್ಗೆ ಕೂಡ ಜಗಳವಾಡುತ್ತಿದ್ದಾಗ ಆರೋಪಿ ನಾಗರಾಜು ಮಚ್ಚು ತೆಗೆದುಕೊಂಡು ಮಂಗಮ್ಮಳ ಮನೆಗೆ ನುಗ್ಗಿ ಕೊಚ್ಚಿ ಕೊಲೆ ಮಾಡಿದ್ದಾನೆ.

    ಕೊಲೆ ಮಾಡಿದ ಬಳಿಕ ನಾಗರಾಜು ಸ್ವತಃ ಪೊಲೀಸ್ ಠಾಣೆಗೆ ಹಾಜರಾಗಿ ಶರಣಾಗಿದ್ದಾನೆ. ಈ ಬಗ್ಗೆ ಹಾರೋಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪತಿ ಮೇಲಿನ ಕೋಪಕ್ಕೆ ಮಗನ ಕುತ್ತಿಗೆ ಸೀಳಿ, ಆತ್ಮಹತ್ಯೆಗೆ ಶರಣಾದ ಪತ್ನಿ

    ಪತಿ ಮೇಲಿನ ಕೋಪಕ್ಕೆ ಮಗನ ಕುತ್ತಿಗೆ ಸೀಳಿ, ಆತ್ಮಹತ್ಯೆಗೆ ಶರಣಾದ ಪತ್ನಿ

    ಅಹಮದಾಬಾದ್: ಪತಿ ಮೇಲಿನ ಕೋಪಕ್ಕೆ ಮಹಿಳೆಯೊಬ್ಬರು ಎರಡು ವರ್ಷದ ಮಗನ ಕುತ್ತಿಗೆ ಸೀಳಿ, ಕೊನೆಗೆ ತಾವೂ ನೇಣಿಗೆ ಶರಣಾದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ

    ನೇಪಾಳ ಮೂಲದ ಶಾಂತಿಬೆನ್ ಸೋನಾರ್ ಆತ್ಮಹತ್ಯೆಗೆ ಶರಣಾದ ಮಹಿಳೆ. ತನ್ನ ಪತಿ ಹಾಗೂ ಮಗುವಿನೊಂದಿಗೆ ಅಹಮದಾಬಾದಿನಲ್ಲಿ ಮಹಿಳೆ ವಾಸವಿದ್ದರು. ನೇಪಾಳದಲ್ಲಿನ ತಮ್ಮ ಊರು ಕಂಚನ್‍ಪುರಕ್ಕೆ ಮರಳಿ ಕರೆದೊಯ್ಯುವುದಾಗಿ ಪತಿ ಯಾವಾಗಲೂ ಹೇಳುತ್ತಿದ್ದರು. ಆದರೆ ಇದು ಬರೀ ಮಾತಿಗೆ ಮಾತ್ರ ಸೀಮಿತವಾಗಿತ್ತೆ ಹೊರತು, ಊರಿಗೆ ಮರಳಿ ಕರೆದೊಯ್ಯಲಿಲ್ಲ.

    ಯಾವಾಗಲೂ ಬರೀ ಮಾತು, ಯಾವುದನ್ನು ಮಾಡಲ್ಲ ಎಂದು ಪತಿ ಮೇಲೆ ಮಹಿಳೆ ಕೋಪಗೊಂಡಿದ್ದರು. ಪದೇ ಪದೇ ಪತಿ ಸುಳ್ಳು ಮಾತನ್ನು ಕೊಡುತ್ತಾರೆ. ಸುಳ್ಳು ಹೇಳುತ್ತಾರೆ ಎಂಬ ಸಿಟ್ಟಿನಿಂದ ಪತ್ನಿ ಮನೆಯಲ್ಲಿ ತಮ್ಮ ಮಗನ ಕುತ್ತಿಗೆ ಸೀಳಿ, ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

  • ನಿಮ್ಮನ್ನು ಕಂಗೆಡಿಸಲು ನನ್ನ ಒಂದು ಟ್ವೀಟ್ ಸಾಕು: ಪಾಕ್ ಸಚಿವನಿಗೆ ತಿರುಗೇಟು ನೀಡಿದ್ದ ಸುಷ್ಮಾ

    ನಿಮ್ಮನ್ನು ಕಂಗೆಡಿಸಲು ನನ್ನ ಒಂದು ಟ್ವೀಟ್ ಸಾಕು: ಪಾಕ್ ಸಚಿವನಿಗೆ ತಿರುಗೇಟು ನೀಡಿದ್ದ ಸುಷ್ಮಾ

    ಇಸ್ಲಾಮಾಬಾದ್: ನಿಮ್ಮ ಜೊತೆ ಟ್ವಿಟ್ಟರ್ ಜಗಳ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನದ ಸಚಿವರೊಬ್ಬರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ಸುಷ್ಮಾ ಸ್ವರಾಜ್ ಅವರ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ಟ್ವಿಟ್ಟರಿನಲ್ಲಿ ನಾನು ಸುಷ್ಮಾ ಅವರ ಜೊತೆ ಆಡುತ್ತಿದ್ದ ಜಗಳವನ್ನು ಮಿಸ್ ಮಾಡಿಕೊಳ್ಳುತ್ತೇನೆ. ಸುಷ್ಮಾ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.

    2019ರಲ್ಲಿ ಇಬ್ಬರು ಹಿಂದೂ ಬಾಲಕಿಯರ ಅಪಹರಣ ಮಾಡಿ ಬಲವಂತವಾಗಿ ಮತಾಂತರ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ವಿಷಯಕ್ಕಾಗಿ ಫವಾದ್ ಹುಸೇನ್ ಹಾಗೂ ಸುಷ್ಮಾ ಸ್ವರಾಜ್ ಅವರ ನಡುವೆ ಟ್ವಿಟ್ಟರಿನಲ್ಲಿ ಜಗಳ ನಡೆದಿತ್ತು.

    ಪಾಕ್‍ನ ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಆಚರಣೆಯಲ್ಲಿ ತೊಡಗಿದ್ದ ಯುವತಿಯನ್ನು ಅಪಹರಣ ಮಾಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೇ ಹಿಂದೂ ಸಮುದಾಯ ಈ ಘಟನೆಯ ಬಗ್ಗೆ ಪ್ರತಿಭಟನೆ ನಡೆಸಿ ಕೃತ್ಯ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

    ಹಿಂದೂ ಸಮುದಾಯ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸುಷ್ಮಾ ಸ್ವರಾಜ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ಪಾಕಿಸ್ತಾನದ ಭಾರತೀಯ ಹೈಕಮಿಷನರ್ ಗೆ ಈ ಬಗ್ಗೆ ವರದಿ ಕಳುಹಿಸಲು ಕೇಳಿದ್ದೇನೆ. ಪಾಕ್‍ನ ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಆಚರಿಸುವಾಗ ಇಬ್ಬರು ಹಿಂದೂ ಯುವತಿಯರ ಅಪಹರಣ ಮಾಡಲಾಗಿದೆ” ಎಂದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ಸಚಿವ ಫವಾದ್ ಹುಸೇನ್, “ಮೆಡಮ್ ಇದು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯ. ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲು ಇದು ಮೋದಿ ಅವರ ಭಾರತ ಅಲ್ಲ. ಇದು ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನ. ನಮ್ಮ ರಾಷ್ಟ್ರಧ್ವಜದ ಬಿಳಿ ಬಣ್ಣ ನಮಗೆ ಪ್ರಿಯವಾಗಿದೆ. ಭಾರತೀಯ ಅಲ್ಪಸಂಖ್ಯಾತರ ಹಕ್ಕುಗಳ ವಿಷಯದಲ್ಲಿ ನೀವು ಇದೇ ಪರಿಶ್ರಮದಿಂದ ವರ್ತಿಸುವಿರಿ ಎಂದು ನಾನು ಭಾವಿಸುತ್ತೇನೆ” ಎಂದು ರೀ-ಟ್ವೀಟ್ ಮಾಡಿದ್ದರು.

    ಫವಾದ್ ಹುಸೇನ್ ಅವರ ಟ್ವೀಟ್‍ಗೆ ಸುಷ್ಮಾ ಅವರು, “ನಾನು ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನರ್ ಗೆ ವರದಿ ಕೇಳಿದ್ದೇನೆ ಅಷ್ಟೇ. ನಿಮ್ಮನ್ನು ಕಂಗೆಡಿಸಲು ಇದು ಸಾಕು. ಇದು ನಿಮ್ಮ ತಪ್ಪಿತಸ್ಥ ಭಾವನೆ ತೋರಿಸುತ್ತಿದೆ” ಎಂದು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದರು.

  • 7 ವರ್ಷದ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ

    7 ವರ್ಷದ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ

    ಬೆಂಗಳೂರು: ಏಳು ವರ್ಷ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಪುಟ್ಟೆನಹಳ್ಳಿಯಲ್ಲಿ ನಡೆದಿದೆ.

    ಜ್ಯೋತಿ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ತಾಯಿ. ಜ್ಯೋತಿ ಕಳೆದ 10 ವರ್ಷಗಳ ಹಿಂದೆ ಪಂಕಜ್ ಎಂಬವರನ್ನು ಮದುವೆಯಾಗಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಜ್ಯೋತಿ ಹಾಗೂ ಪಂಕಜ್ ನಡುವೆ ಗಲಾಟೆ ನಡೆದಿತ್ತು.

    ಕೌಟುಂಬಿಕ ಕಲಹದಿಂದ ಬೇಸತ್ತ ಜ್ಯೋತಿ ಮೊದಲು ತನ್ನ ಏಳು ವರ್ಷದ ಮಗಳು ಶಾಬುವನ್ನು ಕೊಲೆ ಮಾಡಿದ್ದಾಳೆ. ಬಳಿಕ ಕಟ್ಟಡದಿಂದ ಜಿಗಿದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಈ ಬಗ್ಗೆ ಪುಟ್ಟೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೀರು ಹಿಡಿಯುವ ವಿಚಾರವಾಗಿ ಶುರುವಾದ ಜಗಳಕ್ಕೆ ಮಹಿಳೆ ಬಲಿ

    ನೀರು ಹಿಡಿಯುವ ವಿಚಾರವಾಗಿ ಶುರುವಾದ ಜಗಳಕ್ಕೆ ಮಹಿಳೆ ಬಲಿ

    ಹೈದರಾಬಾದ್: ಸಾರ್ವಜನಿಕ ನಲ್ಲಿಯಲ್ಲಿ ನೀರಿಗಾಗಿ ನಡೆದ ಜಗಳದಲ್ಲಿ ಮಹಿಳೆಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದಿದೆ.

    ಸೋಮಪೇಟ ಪಟ್ಟಣದ ಪಲ್ಲಿವೇದಿ ಪ್ರದೇಶದ ನಿವಾಸಿ ಪಟಿಪುಡಿ ಪದ್ಮ(38) ಮೃತ ದುರ್ದೈವಿ. ನೀರು ಹಿಡಿಯುವ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳಕ್ಕೆ ಪದ್ಮ ಜೀವ ಕಳೆದುಕೊಂಡಿದ್ದಾರೆ. ಪಲ್ಲಿವೇದಿ ಪ್ರದೇಶದ ಶಾಲೆಯೊಂದರ ಬಳಿ ಇದ್ದ ಸಾರ್ವಜನಿಕ ನಲ್ಲಿಯ ನೀರಿಗಾಗಿ ಸುತ್ತಮುತ್ತಲ ಜನ ಬರುತ್ತಾರೆ.

    ನೀರು ತರಲು ಪದ್ಮ ನಲ್ಲಿಯ ಬಳಿ ತೆರೆಳಿದ್ದರು. ಅಲ್ಲಿ ನೀರಿಗಾಗಿ ಎಲ್ಲರು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಸ್ಥಳಿಯ ನಿವಾಸಿಯಾಗಿದ್ದ ತೆಪ್ಪಲ ಸುಂದರಮ್ಮನ ಹಾಗೂ ಪದ್ಮ ನಡುವೆ ಜಗಳ ನಡೆದಿದೆ. ಮೊದಲು ಮಾತಿನಿಂದ ಶುರುವಾಗಿದ್ದ ಜಗಳ ಕೊನೆಗೆ ಒಂದು ಜೀವ ತೆಗೆಯುವ ಮಟ್ಟಿಗೆ ಬಂದಿದೆ.

    ಜಗಳವಾಡುತ್ತಾ ಇಬ್ಬರು ಮಹಿಳೆಯರು ನೀರು ಹಿಡಿಯಲು ತಂದಿದ್ದ ಕೊಡಪಾನ, ಪಾತ್ರೆಗಳಿಂದ ಹೊಡೆದಾಡಿಕೊಳ್ಳಲು ಆರಂಭಿಸಿದ್ದಾರೆ. ಪರಿಣಾಮ ಪದ್ಮ ಅವರ ತಲೆ ಹಾಗೂ ಎದೆಗೆ ತೀವ್ರವಾಗಿ ಹೊಡೆತ ಬಿದ್ದಿದ್ದು, ರಸ್ತೆಯಲ್ಲೇ ತಕ್ಷಣ ಕುಸಿದು ಬಿದ್ದಿದ್ದು, ಸ್ಥಳದಲ್ಲಿದ್ದವರು ಏನಾಯ್ತು ಎಂದು ನೋಡುವಷ್ಟರಲ್ಲಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ.

    ಈ ಘಟನೆ ನಡೆದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸುದ್ದಿಗೋಷ್ಠಿಯಲ್ಲಿ ಕಂಗನಾ, ಪತ್ರಕರ್ತ ನಡುವೆ ಫೈಟ್: ವಿಡಿಯೋ ನೋಡಿ

    ಸುದ್ದಿಗೋಷ್ಠಿಯಲ್ಲಿ ಕಂಗನಾ, ಪತ್ರಕರ್ತ ನಡುವೆ ಫೈಟ್: ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತನ ಜೊತೆ ಜಗಳವಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚೆಗೆ ನಟಿ ಕಂಗನಾ, ನಟ ರಾಜ್‍ಕುಮಾರ್ ರಾವ್, ನಿರ್ಮಾಪಕಿ ಏಕ್ತಾ ಕಪೂರ್ ಜೊತೆ ಮುಂಬರುವ ‘ಜಡ್ಜ್ ಮೆಂಟಲ್ ಹೇ ಕ್ಯಾ’ ಚಿತ್ರದ ಹಾಡಿನ ಪ್ರಮೋಶನ್ ಮಾಡಲು ಸುದ್ದಿಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ಪತ್ರಕರ್ತರಾದ ಜಸ್ಟಿನ್ ರಾವ್ ತಮ್ಮ ಹೆಸರನ್ನು ಹೇಳಿ ಪ್ರಶ್ನೆ ಕೇಳಲು ಆರಂಭಿಸಿದರು. ಜಸ್ಟಿನ್ ಹೆಸರು ಕೇಳುತ್ತಿದ್ದಂತೆ ಈ ಹಿಂದೆ ನಡೆದ ಒಂದು ಸಂದರ್ಶನ ಪ್ರಸ್ತಾಪಿಸಿ ಕಂಗನಾ ಗರಂ ಆಗಿದ್ದಾರೆ.

    ‘ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಪತ್ರಕರ್ತ ಜಸ್ಟಿನ್ ಕಂಗನಾ ವಿರುದ್ಧವಾಗಿ ಸುದ್ದಿ ಪ್ರಕಟಿಸಿದ್ದರು. ಈ ವಿಷಯ ನೆನಪಾಗಿ ಕಂಗನಾ, ನಾನು ಈ ಸಿನಿಮಾ ಮಾಡಿ ಏನಾದರೂ ತಪ್ಪು ಮಾಡಿದ್ದೀನಾ? ನಾನು ರಾಷ್ಟ್ರೀಯತೆ ಸಿನಿಮಾ ಮಾಡಿದ್ದಕ್ಕೆ ನನ್ನ ನಡವಳಿಕೆ ಬಗ್ಗೆ ಮಾತನಾಡಿದ್ದೀರಾ ಎಂದು ಪತ್ರಕರ್ತ ಜಸ್ಟಿನ್ ಜೊತೆ ಜಗಳವಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಜಸ್ಟಿನ್ ಕೇಳಿದ ಪ್ರಶ್ನೆಗೆ ಉತ್ತರಿಸದೇ ಕಂಗನಾ ಅವರ ಮೇಲೆ ಸಾಕಷ್ಟು ಆರೋಪಗಳನ್ನು ಹೊರಿಸಿದ್ದಾರೆ. ಮಣಿಕರ್ಣಿಕಾ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ತನ್ನ ವಿರುದ್ಧ ಸುದ್ದಿ ಮಾಡಿ ಉದ್ದೇಶಪೂರ್ವಕವಾಗಿ ಸಿನಿಮಾ ಕೆಟ್ಟದಾಗಿದೆ ಎಂದು ವಿಮರ್ಷೆ ಮಾಡಿದ್ದೀರಿ. ಹಾಗೂ ಕೆಲಸಕ್ಕೆ ಬಾರದ ಟ್ವೀಟ್‍ಗಳನ್ನು ಮಾಡಿದ್ದೀರಿ ಎಂದು ನೇರವಾಗಿಯೇ ಹೇಳಿದ್ದಾರೆ.

    ನಟಿ ಕಂಗನಾ ಆರೋಪ ಮಾಡುತ್ತಿದ್ದಂತೆ ಪತ್ರಕರ್ತ ಜಸ್ಟಿನ್ ನೀವು ಈ ರೀತಿ ನನ್ನ ಮೇಲೆ ಆರೋಪ ಮಾಡಬಾರದು. ಏಕೆಂದರೆ ನಾವು ಏನೂ ಬರೆಯುತ್ತೇವೋ ಸತ್ಯವನ್ನೇ ಬರೆಯುತ್ತೇವೆ. ನಾನು ನಿಮ್ಮ ಬಗ್ಗೆ ಕೆಟ್ಟದಾಗಿ ಏನೂ ಸುದ್ದಿ ಪ್ರಕಟಿಸಿಲ್ಲ ಎಂದು ಜಸ್ಟಿನ್ ಸ್ಪಷ್ಟನೆ ಕೊಟ್ಟರೂ ಸಹ ಕಂಗನಾ ಸುಮ್ಮನಾಗಲಿಲ್ಲ. ಅಲ್ಲದೆ ಅಲ್ಲಿದ್ದ ಬೇರೆ ಪತ್ರಕರ್ತರು ಸಹ ಚಿತ್ರದ ವಿರುದ್ಧ ಹಾಗೂ ನಿಮ್ಮ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

    ಬಳಿಕ ಕಂಗನಾ, ಮಣಿಕರ್ಣಿಕಾ ಸಂದರ್ಶನದ ಸಮಯದಲ್ಲಿ ನೀವು 3 ಗಂಟೆ ನನ್ನ ವ್ಯಾನ್‍ನಲ್ಲಿ ಇದ್ದು ನನ್ನ ಜೊತೆ ಊಟ ಮಾಡಿದ್ದೀರಿ. ಈ ವೇಳೆ ನಾನು ಸಂದರ್ಶನ ನೀಡಿದ್ದೆ. ಆದರು ನೀವು ಉದ್ದೇಶಪೂರ್ವಕವಾಗಿ ನನ್ನ ಬಗ್ಗೆ ಕೆಟ್ಟದ್ದಾಗಿ ಬರೆದಿದ್ದೀರಾ. ನೀವು ನನಗೆ ವೈಯಕ್ತಿಕವಾಗಿ ಮೆಸೇಜ್ ಕೂಡ ಮಾಡಲು ಶುರು ಮಾಡಿದ್ದೀರಿ ಎಂದು ಪತ್ರಕರ್ತನ ವಿರುದ್ಧ ಆರೋಪಿಸಿದ್ದರು. ಈ ವೇಳೆ ಪತ್ರಕರ್ತ ಜಸ್ಟಿನ್ ನಾನು ನಿಮ್ಮ ವಿರುದ್ಧ ಕೆಟ್ಟದಾಗಿ ಸುದ್ದಿ ಮಾಡಿಲ್ಲ. ಅಲ್ಲದೆ ನಾನು ನಿಮ್ಮ ವ್ಯಾನಿನಲ್ಲಿ ಇದ್ದು, ನಿಮ್ಮ ಜೊತೆ ನಾನು ಊಟ ಕೂಡ ಮಾಡಿಲ್ಲ ಎಂದರೂ ಸಹ ಕಂಗನಾ ಅವರ ಮಾತನ್ನು ಕೇಳಲು ಒಪ್ಪಲಿಲ್ಲ.

    ಪತ್ರಕರ್ತ ಜಸ್ಟಿನ್ ಮಾತನಾಡಿ, ನಾನು ನಿಮ್ಮ ಜೊತೆ ಮೆಸೇಜ್ ಮಾಡಿದ್ದರೆ, ಆ ಟ್ವೀಟ್‍ಗಳು ಹಾಗೂ ಮೆಸೇಜ್‍ಗಳ ಸ್ಕ್ರೀನ್‍ಶಾಟ್ ತೋರಿಸಿ, ಆಗ ನಾನು ನಿಮ್ಮ ಆರೋಪಗಳನ್ನು ಒಪ್ಪುತ್ತೇನೆ ಎಂದರು. ಆಗ ಕಂಗನಾ ನಾನು ಸ್ಕ್ರೀನ್‍ಶಾಟ್‍ಗಳನ್ನು ತೋರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ಇದಾದ ಬಳಿಕ ಕಂಗನಾ ಪತ್ರಕರ್ತ ಜಸ್ಟಿನ್‍ಗೆ ಕೆಟ್ಟ ಅಲೋಚನೆಯ ವ್ಯಕ್ತಿ ಎಂದು ಹೇಳಿ ಜಗಳ ಮಾಡಿದ್ದಾರೆ.

    ಕಂಗನಾ ಹಾಗೂ ಪತ್ರಕರ್ತನ ಜಗಳ ಜೋರಾಗುತ್ತಿದ್ದಂತೆ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್, ನಟ ರಾಜ್‍ಕುಮಾರ್ ರಾವ್ ಹಾಗೂ ವೇದಿಕೆಯಲ್ಲಿ ಇದ್ದ ಎಲ್ಲರೂ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಆದರೆ ಕಂಗನಾ ಹಾಗೂ ಪತ್ರಕರ್ತ ಶಾಂತರಾಗಲು ಒಪ್ಪಲಿಲ್ಲ. ಇಬ್ಬರ ಜಗಳ ಜೋರಾಗಿ ನಡೆದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

     

    View this post on Instagram

     

    A post shared by Viral Bhayani (@viralbhayani) on