Tag: ಜಗಳ

  • ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

    ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

    ಹಾಸನ: ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಕೊಲೆ ಮಾಡುವ ಮೂಲಕ ಅಂತ್ಯಗೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.

    ಸೋಮಣ್ಣ (50) ಕೊಲೆಯಾದ ವ್ಯಕ್ತಿ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯಶವಂತ್ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಆರೋಪಿ. ಕುಡಿದ ಮತ್ತಿನಲ್ಲಿ ಯಶವಂತ್ ಹಾಗೂ ಸೋಮಣ್ಣ ನಡುವೆ ಜಗಳ ಶುರುವಾಗಿದೆ. ಇದರಿಂದ ಪರಸ್ಪರ ವಾಕ್ಸಮರ ನಡೆಸಿದ ಇಬ್ಬರೂ ಕೈಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಾರೆ.

    POLICE JEEP

    ಜಗಳ ವಿಕೋಪಕ್ಕೆ ತಿರುಗಿ ಯಶವಂತ್, ಕೊಡಲಿಯಿಂದ ಸೋಮಣ್ಣನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸೋಮಣ್ಣ ಸಾವನ್ನಪ್ಪಿದ್ದಾನೆ. ಸೋಮಣ್ಣನನ್ನು ಕೊಲೆ ಮಾಡಿದ ನಂತರ ಯಶವಂತ್ ಪೊಲೀಸರಿಗೆ ಶರಣಾಗಿದ್ದಾನೆ. ಈ ಕುರಿತು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಫ್ಘಾನ್ ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟ ತಾಲಿಬಾನ್

  • ಶವಕ್ಕಾಗಿ ಪತ್ನಿ, ಪ್ರೇಯಸಿಯ ನಡುವೆ ಕಿತ್ತಾಟ – ಇಕ್ಕಟ್ಟಿಗೆ ಸಿಲುಕಿದ ಪೊಲೀಸರು

    ಶವಕ್ಕಾಗಿ ಪತ್ನಿ, ಪ್ರೇಯಸಿಯ ನಡುವೆ ಕಿತ್ತಾಟ – ಇಕ್ಕಟ್ಟಿಗೆ ಸಿಲುಕಿದ ಪೊಲೀಸರು

    ಚಾಮರಾಜನಗರ: ಮೃತ ವ್ಯಕ್ತಿಯ ಶವಕ್ಕಾಗಿ ಪತ್ನಿ ಹಾಗೂ ಪ್ರೇಯಸಿ ಇಬ್ಬರೂ ಕಿತ್ತಾಟ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.

    ಅನಾರೋಗ್ಯದಿಂದ ಮೃತಪಟ್ಟಿದ್ದ ದೊಡ್ಡತುಪ್ಪೂರು ಗ್ರಾಮದ ವಕೀಲ ಪಾಪಣ್ಣಶೆಟ್ಟಿ ಪತ್ನಿ ನಿಮಿತಾಳಿಂದ ದೂರವಿದ್ದು, ಪ್ರೇಯಸಿ ಮಹದೇವಮ್ಮನೊಂದಿಗೆ ವಾಸವಿದ್ದ. ಪತಿ ಪಾಪಣ್ಣ ಶೆಟ್ಟಿ, ತನ್ನ ತಂದೆಯಿಂದ ಆಸ್ತಿ ಬರೆದುಕೊಂಡು ಮೋಸ ಮಾಡಿದ್ದಾನೆ ಎಂದು ನಿಮಿತಾ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಈ ನಡುವೆ ಪಾಪಣ್ಣಶೆಟ್ಟಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇದನ್ನೂ ಓದಿ: ನರ್ಸ್ ಎಡವಟ್ಟು – ತಪ್ಪಾದ ಚುಚ್ಚು ಮದ್ದು ನೀಡಿದ್ದರಿಂದ ರೋಗಿ ಸಾವು

    ಪಾಪಣ್ಣಶೆಟ್ಟಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಿಮಿತಾ, ಇದು ಅಸ್ವಾಭಾವಿಕ ಸಾವು ಎಂದು ದೂರು ನೀಡಿದ್ದಾರೆ. ಆಕೆಯ ದೂರಿನ ಮೇರೆಗೆ ಶವಪರೀಕ್ಷೆ ನಡೆಸಲಾಗಿತ್ತು. ಶವಪರೀಕ್ಷೆಯ ಬಳಿಕ ನಿಮಿತಾ ಗಂಡನ ಶವವನ್ನು ತನಗೆ ನೀಡುವಂತೆ ಒತ್ತಾಯಿಸಿದ್ದು, ಇದಕ್ಕೆ ಮಹದೇವಮ್ಮ ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: Well done, #TeamCongress! – ಕರ್ನಾಟಕ ಕಾಂಗ್ರೆಸ್‌ ಬೆನ್ನು ತಟ್ಟಿದ ರಾಹುಲ್‌ ಗಾಂಧಿ, ಸುರ್ಜೇವಾಲಾ

    ಇವರಿಬ್ಬರ ಕಿತ್ತಾಟದಿಂದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಇಬ್ಬರಿಗೂ ನ್ಯಾಯಾಲಯದ ಮೊರೆ ಹೋಗುವಂತೆ ಪೊಲೀಸರು ಸೂಚಿಸಿದ್ದಾರೆ. ನಂತರ ಪಾಪಣ್ಣಶೆಟ್ಟಿ ಶವವನ್ನು ಶವಾಗಾರಕ್ಕೆ ರವಾನಿಸಿದ್ದಾರೆ.

  • ಗಂಡ-ಹೆಂಡತಿ ಜಗಳಕ್ಕೆ ಮೂರು ತಿಂಗಳ ಮಗು ಬಲಿ

    ಗಂಡ-ಹೆಂಡತಿ ಜಗಳಕ್ಕೆ ಮೂರು ತಿಂಗಳ ಮಗು ಬಲಿ

    ನವದೆಹಲಿ: ಸಮತಾ ವಿಹಾರ್ ಪ್ರದೇಶದ ನಿವಾಸಿಯಾದ ಅಮನ್, ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದಾಗ ಶಿಶುವಿನ ತಲೆಯನ್ನು ಗೋಡೆಗೆ ಹೊಡೆದು ಕೊಂದ್ದಿದ್ದಾನೆ.

    ಈ ವಿಷಯ ತಿಳಿದ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದಾಗ ಮೂರು ತಿಂಗಳ ಮಗು ನೆಲದ ಮೇಲೆ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ಆ ಸಂದರ್ಭದಲ್ಲಿ ಮಗುವಿನ ತಂದೆ ರವಿ ರೈ(26) ಮತ್ತು ಕುಡಿದ ಅಮಲಿನಲ್ಲಿದ್ದರು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಲೆಗೆ ತೀವ್ರ ಏಟಾಗಿದ್ದು, ಹೀಗಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ ಎಂದು ವೈದ್ಯರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಒಂದು ತಿಂಗಳ ಹಿಂದೆಯಷ್ಟೆ ದಂಪತಿ ಈ ಪ್ರದೇಶಕ್ಕೆ ಬಂದಿದ್ದು ಗಂಡ-ಹೆಂಡತಿ ಪ್ರತಿದಿನ ಅವರ ಆರ್ಥಿಕ ಸಮಸ್ಯೆಗಳ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ಹೇಳಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ಜಗಳವಾಡುತ್ತಿದ್ದ ಸಂದರ್ಭದಲ್ಲಿ ಮಗು ಅದೇ ಕೋಣೆಯಲ್ಲಿತ್ತು. ನನ್ನ ಮೇಲೆ ಇದ್ದ ಕೋಪದ ಭರದಲ್ಲಿ ಮಗುವನ್ನು ಎತ್ತಿ ಗೋಡೆಗೆ ಹೊಡೆದನು ಎಂದು ಮಗುವಿನ ತಾಯಿ ಹೇಳಿದ್ದಾರೆ. ಆಕೆ ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ವ್ಯಕ್ತಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿತು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ

  • ಪತಿ ಸರಿಯಾಗಿ ಬ್ಲೌಸ್ ಹೊಲಿಯಲಿಲ್ಲವೆಂದು ಪತ್ನಿ ಆತ್ಮಹತ್ಯೆ

    ಪತಿ ಸರಿಯಾಗಿ ಬ್ಲೌಸ್ ಹೊಲಿಯಲಿಲ್ಲವೆಂದು ಪತ್ನಿ ಆತ್ಮಹತ್ಯೆ

    ಹೈದರಾಬಾದ್: ಬ್ಲೌಸ್ ಸರಿಯಾಗಿ ಹೊಲಿಯಲಿಲ್ಲವೆಂದು ಪತಿಯೊಂದಿಗೆ ಮಹಿಳೆ ಜಗಳವಾಡಿದ್ದಾಳೆ. ಇದೇ ವಿಚಾರವಾಗಿ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಶ್ರೀನಿವಾಸ್ ಪತ್ನಿ ವಿಜಯಲಕ್ಷ್ಮಿ (36) ಮೃತರು. ಬ್ಲೌಸ್ ವಿಚಾರವಾಗಿ ದಂಪತಿ ನಡುವೆ ನಡೆದಿರುವ ಜಗಳ ಪತ್ನಿ ಪ್ರಾಣವನ್ನು ಕಳೆದುಕೊಳ್ಳವ ಮಟ್ಟಿಗೆ ಹೋಗಿದೆ. ಇದನ್ನೂ ಓದಿ:  ರಾಜ್‌ ಕುಟುಂಬದಿಂದ ಗಂಧದಗುಡಿ‌ಯ 3ನೇ ಪ್ರಯೋಗ

    ದಂಪತಿ ಹೈದರಾಬಾದ್‍ನ ಅಂಬರಪೇಟ್‍ನಲ್ಲಿ ವಾಸವಾಗಿದ್ದರು. ಶ್ರೀನಿವಾಸ್ ಟೈಲರ್ ಆಗಿದ್ದು, ಸೀರೆ ವ್ಯಾಪಾರವನ್ನೂ ಮಾಡುತ್ತಿದ್ದರು. ಶನಿವಾರ ಪತ್ನಿ ವಿಜಯಲಕ್ಷ್ಮಿಗೆ ಬ್ಲೌಸ್ ಹೊಲಿದು ಕೊಟ್ಟಿದ್ದಾರೆ. ಆದರೆ ಆಕೆಗೆ ಬ್ಲೌಸ್ ಇಷ್ಟವಾಗಿರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಇದನ್ನೂ ಓದಿ:  ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

    POLICE JEEP

    ಇದೇ ಸಿಟ್ಟಿನಿಂದ ವಿಜಯಲಕ್ಷ್ಮಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಮಧ್ಯಾಹ್ನ 12.30ಕ್ಕೆ ಮಕ್ಕಳು ಶಾಲೆಯಿಂದ ಮನೆಗೆ ಬಂದು ಬಾಗಿಲು ತಟ್ಟಿದರೂ ಆಕೆ ಪ್ರತಿಕ್ರಿಯಿಸಲಿಲ್ಲ. ಆಕೆ ಪತಿ ಶ್ರೀನಿವಾಸ್ ಬಾಗಿಲು ಒಡೆದು ಒಳ ಹೋದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಶ್ರೀನಿವಾಸ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಂಬರ್‍ಪೇಟ್ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ದಂಪತಿ ಜಗಳಕ್ಕೆ ಬಲಿಯಾದ 22ದಿನದ ಕಂದಮ್ಮ

    ದಂಪತಿ ಜಗಳಕ್ಕೆ ಬಲಿಯಾದ 22ದಿನದ ಕಂದಮ್ಮ

    ಹೈದರಾಬಾದ್: ಇಪ್ಪತ್ತೆರಡು ದಿನಗಳ ಹುಸುಗೂಸೊಂದು ತನ್ನ ಅಪ್ಪ, ಅಮ್ಮನ ಜಗಳದಲ್ಲಿ ಬಲಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ತೆಲಂಗಾಣದ ಸೈದಾಬಾದ್‍ನ ಪೂಸಲ ಬಸ್ತಿ ನಿವಾಸಿಗಳಾದ ಪಿ. ರಾಜೇಶ್ ಮತ್ತು ಜಾಹ್ನವಿ ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ದಂಪತಿ ನಡುಗೆ ಶುರುವಾದ ಸಣ್ಣ ಜಗಳ ಮಗುವನ್ನು ಬಲಿ ಪಡೆದುಕೊಂಡಿದೆ. ಇದನ್ನೂ ಓದಿ: ಪೂಜಾ ಹೆಗ್ಡೆಗೆ ಸರ್ಪ್ರೈಸ್ ಕೊಟ್ಟ ಫೋಟೋಗ್ರಾಫರ್‌ಗಳು

    ಇತ್ತೀಚೆಗಷ್ಟೆ ಈ ದಂಪತಿಗೆ ಮುದ್ದಾದ ಗಂಡು ಮಗು ಜನನವಾಗಿತ್ತು. ಮಗುವಿಗೆ ಹಾಲು ಕುಡಿಸುವ ಬಗ್ಗೆ ವಾಗ್ವಾದವಾದ ಹಿನ್ನಲೆಯಲ್ಲಿ ರಾಜೇಶ್ ಜಾಹ್ನವಿಗೆ ಹೊಡೆಯಲು ಪೈಪ್ ಕೈಗೆತ್ತಿಕೊಂಡ. ಮಗುವನ್ನು ತನ್ನ ತೋಳಿನಲ್ಲಿ ಎತ್ತಿಕೊಂಡಿದ್ದ ಆ ತಾಯಿ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಳು. ಹೊಡೆತ ತಪ್ಪಿಸಿಕೊಳ್ಳಲು ಮನೆಯೆಲ್ಲಾ ಓಡಾಡಿದ್ದಳು ಎನ್ನಲಾಗಿದೆ. ಇದನ್ನೂ ಓದಿ:  ನೆಟ್ಟಿಗರ ಮನಗೆದ್ದ ನ್ಯೂಸ್‍ಪೇಪರ್ ಬಾಯ್

    ಸ್ವಲ್ಪ ಸಮಯದ ನಂತರ ಮಗು ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದದನ್ನು ಗಮನಿಸಿದ ದಂಪತಿ, ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷೆ ನಡೆಸಿದ ವೈದ್ಯರು, ಮಗು ಉಸಿರುಗಟ್ಟಿ ಸತ್ತುಹೋಗಿದೆ ಎಂದು ತಿಳಿಸಿದರು. ಮಾಹಿತಿ ತಿಳಿದ ಸೈದಾಬಾದ್ ಪೊಲೀಸರು ದಂಪತಿ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

  • ಜಗಳ ಬಿಡಿಸಲು ಹೋದ ಕಾನ್‍ಸ್ಟೇಬಲ್ ತಲೆಗೆ ಕಲ್ಲಿನಿಂದ ಹಲ್ಲೆ

    ಜಗಳ ಬಿಡಿಸಲು ಹೋದ ಕಾನ್‍ಸ್ಟೇಬಲ್ ತಲೆಗೆ ಕಲ್ಲಿನಿಂದ ಹಲ್ಲೆ

    ದಾವಣಗೆರೆ: ಜಗಳ ಬಿಡಿಸಲು ಹೋದ ಪೊಲೀಸ್ ಕಾನ್‍ಸ್ಟೇಬಲ್ ಅವರಿಗೆ ಕಲ್ಲಿನಲ್ಲಿ ಹೊಡೆದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

    ಹನುಮಂತಪ್ಪ ಗಾಯಗೊಂಡ ಪೊಲೀಸ್ಕಾನ್‍ಸ್ಟೇಬಲ್‍. ಜಿಲ್ಲೆಯ ಮಾಯಕೊಂಡ ಹೋಬಳಿಯ ಹಿರೇತೊಗಲೆರಿ ಗ್ರಾಮದಲ್ಲಿ ಹಬ್ಬದ ವಿಚಾರವಾಗಿ ಎರಡು ಗುಂಪುಗಳ ನಡುವೆ ಜಗಳ ನಡೆದು, ಕೈ ಕೈ ಮಿಲಾಯಿಸಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಯಕೊಂಡ ಠಾಣೆಯ ಕಾನ್‍ಸ್ಟೇಬಲ್‍ ಹನುಮಂತಪ್ಪ ಜಗಳವಾಡುತ್ತಿದ್ದವರನ್ನು ಬಿಡಿಸಿ ಜೀಪಿಗೆ ಹತ್ತಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲೇ ಶುಶ್ರುಕಿ ಆತ್ಮಹತ್ಯೆಗೆ ಯತ್ನ

    ಜೀಪಿಗೆ ಹತ್ತಿಸುವ ವೇಳೆಯಲ್ಲಿ ನಿವೃತ್ತ ಎಎಸ್‍ಐ ರುದ್ರಪ್ಪ ಕುಟುಂಬಸ್ಥರು ಪೊಲೀಸ್ ಕಾನ್‍ಸ್ಟೇಬಲ್‍ ಹನುಮಂತಪ್ಪ ಅವರ ತಲೆಗೆ ಕಲ್ಲಿನಿಂದ ಹೊಡೆದಿದ್ದಾರೆ. ಗಾಯಗೊಂಡಿರುವ ಹನುಮಂತಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿರುವ ನಿವೃತ್ತ ಎಎಸ್‍ಐ ಕುಟುಂಬದ ವಿರುದ್ಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆಎಸ್ ಪಿ ರಿಷ್ಯಂತ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ಸೋನು ಸೂದ್ ಕಚೇರಿ ಮೇಲೆ ಐಟಿ ದಾಳಿ

  • ಅಕ್ರಮ ಸಂಬಂಧ- ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ

    ಅಕ್ರಮ ಸಂಬಂಧ- ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ

    ದಾವಣಗೆರೆ: ಅಕ್ರಮ ಸಂಬಂಧಕ್ಕೆ ಪತಿಯನ್ನು ಪತ್ನಿ ಬಲಿ ಪಡೆದಿದ್ದು, ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಕತ್ತು ಹಿಸುಕಿ ಕೊಲೆ ಮಾಡಿ ವಿಕೃತಿ ಮೆರೆದಿದ್ದಾಳೆ. ಕೊಲೆ ಮಾಡಿ ತನಗೆ ಏನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸಿದ್ದು, ಬಳಿಕ ಪೊಲೀಸರು ಕೊಲೆಗಾರ್ತಿ ಹಾಗೂ ಪ್ರಿಯಕರ ಇಬ್ಬರನ್ನೂ ಬಂಧಿಸಿದ್ದಾರೆ.

    ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಘಟನೆಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಬನ್ನಿಹಟ್ಟಿ ಗ್ರಾಮ ಸಾಕ್ಷಿಯಾಗಿದೆ. ವಡ್ನಾಳ್ ಬನ್ನಿಹಟ್ಟಿ ಗ್ರಾಮದ ನಿವಾಸಿ ಲೋಕೇಶಪ್ಪ (38) ಕೊಲೆಯಾದ ವ್ಯಕ್ತಿಯಾಗಿದ್ದು, ಪತ್ನಿ ಕುಸುಮ (30), ಪ್ರಿಯಕರ ಪ್ರಭು ಲಿಂಗಪ್ಪ (35) ಬಂಧಿತ ಆರೋಪಿಗಳೆಂದು ತಿಳಿದುಬಂದಿದೆ. ಮಹಿಳೆಯ ಪ್ರಿಯಕರ ಪ್ರಭು ಲಿಂಗಪ್ಪ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ನಿವಾಸಿಯಾಗಿದ್ದು, ಕುಸುಮಳೊಂದಿಗೆ ಅಕ್ರಮಸಂಬಂಧ ಇಟ್ಟುಕೊಂಡಿದ್ದನು. ಈ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಲೋಕೇಶಪ್ಪನನ್ನು ಇಬ್ಬರೂ ಸೇರಿ ಕತ್ತು ಹಿಸುಕಿ ಕಳೆದ 27ರ ತಡರಾತ್ರಿ ಮನೆಯಲ್ಲೇ ಕೊಲೆ ಮಾಡಿದ್ದರು.

    ಕೊಲೆ ಬಳಿಕ ಕುಸುಮ ತನಗೇನೂ ಗೊತ್ತೇ ಇಲ್ಲ ಎಂಬಂತೆ ನಟಿಸಿದ್ದಳು. ಪೊಲೀಸರು ವಿಚಾರಣೆ ನಡೆಸಿದಾಗ ಕುಸುಮ ಹಾಗೂ ಪ್ರಭು ಕೊಲೆ ಮಾಡಿರುವ ಮಾಹಿತಿ ಹೊರಬಿದ್ದಿದೆ. ಇದೀಗ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೇರೆಯಾಗಿದ್ದ ದಂಪತಿ
    ಮೃತ ಲೋಕೇಶಪ್ಪ ಹಾಗೂ ಆರೋಪಿ ಪತ್ನಿ ಕುಸುಮ ಇಬ್ಬರ ನಡುವೆ ಸಾಕಷ್ಟು ಬಾರಿ ಗಲಾಟೆಯಾಗಿ ಬೇರೆ ಇದ್ದರಂತೆ. ಗ್ರಾಮಸ್ಥರು ಕೂಡ ರಾಜೀಪಂಚಾಯಿತಿ ಮಾಡಿದ್ದರು. ಆದರೂ ಪ್ರಯೋಜನ ಆಗಿರಲಿಲ್ಲ. ಆದರೆ ಕುಸುಮ ಪ್ರಿಯಕರ ಫ್ರಭು ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳಂತೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಲೋಕೇಶಪ್ಪನನ್ನು ಕತ್ತು ಹಿಸುಕಿ ಪತ್ನಿ ಕೊಲೆಗೈದಿದ್ದಾಳೆ.

  • ಅವಾಚ್ಯ ಬೈಗುಳಕ್ಕೆ ಶುರುವಾದ ಜಗಳ – ಅತ್ತೆಯನ್ನೇ ಕೊಂದ ಸೊಸೆ

    ಅವಾಚ್ಯ ಬೈಗುಳಕ್ಕೆ ಶುರುವಾದ ಜಗಳ – ಅತ್ತೆಯನ್ನೇ ಕೊಂದ ಸೊಸೆ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ಅತ್ತೆ ಸೊಸೆಯನ್ನ ಒಣಕೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.

    ಮೀನಾಕ್ಷಿ (50) ಕೊಲೆಯಾದ ಮಹಿಳೆ. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಅಧಿಕ ರಕ್ತಸ್ರಾವವಾಗಿ ಮಹಿಳೆ ಮೃತಪಟ್ಟಿದ್ದಾಳೆ. ಮೃತಳ ಮಗ ನೀಡಿದ ದೂರಿನನ್ವಯ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿ ಸೊಸೆಯನ್ನ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಟೈಲರಿಂಗ್ ಕೆಲಸದಿಂದ ಬಂದ ಹಣಕ್ಕಾಗಿ ಅತ್ತೆ-ಸೊಸೆ ನಡುವೆ ಜಗಳವಾಗಿದೆ. ಅತ್ತೆ ಅವಾಚ್ಯ ಶಬ್ದಗಳಿಂದ ಬೈದ ಹಿನ್ನೆಲೆಯಲ್ಲಿ ಸೊಸೆ ಮನೆಯಲ್ಲಿದ್ದ ಒಣಕೆಯಿಂದ ಬಲವಾಗಿ ಹೊಡೆದಿದ್ದಾಳೆ. ಇದರಿಂದ ಅತ್ತೆ ಮೀನಾಕ್ಷಿ ಸಾವನ್ನಪ್ಪಿದ್ದಾಳೆ.

    ಘಟನೆ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದಾಯಾದಿಗಳ ನಡುವೆ ಜಮೀನು ವಿವಾದ- ಗುಂಪು ಗಲಾಟೆಯಲ್ಲಿ ಕೆಲವರಿಗೆ ಗಾಯ

    ದಾಯಾದಿಗಳ ನಡುವೆ ಜಮೀನು ವಿವಾದ- ಗುಂಪು ಗಲಾಟೆಯಲ್ಲಿ ಕೆಲವರಿಗೆ ಗಾಯ

    ಕೋಲಾರ: ಜಮೀನು ವಿವಾದ ಹಿನ್ನೆಲೆ ದಾಯಾದಿಗಳ ಮಧ್ಯೆ ಜಗಳ ನಡೆದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಜಮೀನಿನ ಮೇಲೆ ನೀರು ಹರಿಯುತ್ತಿದ್ದದ್ದನ್ನು ಪ್ರಶ್ನಿಸಿದಕ್ಕೆ, ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಇದಾಗಿದೆ. ಕೋಲಾರ ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಮದ ಮುಲಿಯಾಕಲಪ್ಪ ದೊಡ್ಡ ಹೆಂಡತಿ ಮಕ್ಕಳಾದ ಮುನಿರಾಜು, ಸೊಣ್ಣಪ್ಪ, ಅಂಜಿನಪ್ಪ ಮತ್ತು ಸಹೋದರರು ಸೇರಿ ಚಿಕ್ಕ ಹೆಂಡತಿ ಮಕ್ಕಳಾದ ಮನೋಜ್ ಮತ್ತು ಮದನ್ ಸೇರಿದಂತೆ ಮುನಿಯಾಕಲಪ್ಪ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇನ್ನು ಹಲ್ಲೆಯಲ್ಲಿ ಮನೋಜ್ ತಲೆಗೆ ತೀವ್ರವಾಗಿ ಗಾಯವಾಗಿದ್ದು ತಲೆಗೆ ನಾಲ್ಕು ಹೊಲಿಗೆಯನ್ನು ಮಾಡಲಾಗಿದೆ.

    ಮುನಿಯಾಕಲಪ್ಪ ದೊಡ್ಡ ಹೆಂಡತಿ ಮಕ್ಕಳಿಗೆ ನೀಡಬೇಕಾದ ಭಾಗವನ್ನು ಗ್ರಾಮದ ಹಿರಿಯರು ಸೇರಿ ನ್ಯಾಯ ಪಂಚಾಯಿತಿ ಮಾಡಿ ವಿಭಾಗ ನೀಡಿದ್ದು, ಅದರ ಜಮೀನು ಪಕ್ಕ ಚಿಕ್ಕ ಹೆಂಡತಿ ಮಕ್ಕಳು ಜಮೀನಿನಲ್ಲಿ ಕೆಲಸಮಾಡುತ್ತಿರುವಾಗ ಏಕಾ ಏಕಿ ರಾಡ್ ಮೂಲಕ ಹಲ್ಲೆ ಮಾಡಿದ್ದಾರೆ. ಗಾಯಾಳುಗಳು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ,

  • ನೆರೆಮನೆ ದಂಪತಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ

    ನೆರೆಮನೆ ದಂಪತಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ

    ಲಕ್ನೋ: ನೆರೆಮನೆಯ ಗಂಡ, ಹೆಂಡತಿ ಜಗಳ ಬಿಡಿಸಲು ಹೋದ ಯುವಕನೊಬ್ಬ ಅನ್ಯಾಯವಾಗಿ ಪ್ರಾಣಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಪ್ರೇಮನಗರದಲ್ಲಿ ನಡೆದಿದೆ.

    ಅರ್ಜುನ್(24) ಮೃತನಾಗಿದ್ದಾನೆ. ನವೀನ್ ಕುಮಾರ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ದಂಪತಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

    ಕೆಲಸ ಕಳೆದುಕೊಂಡಿದ್ದ ನವೀನ್ ಕುಮಾರ್ ತನ್ನ ಹೆಂಡತಿ ದೀಪಮಾಲಾ ಜೊತೆಗೆ ಜಗಳವಾಡುತ್ತಿದ್ದನು. ಅವರ ಜಗಳ ಬಿಡಿಸಲು ಅರ್ಜುನ್ ಹೋಗಿದ್ದಾನೆ. ಆದರೆ ಈ ವೇಳೆ ನವೀನ್ ಕುಮಾರ್ ಅರ್ಜುನ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಅರ್ಜುನ್‍ಗೆ ತೀವ್ರ ರಕ್ತಸ್ರಾವವಾಗಿದೆ.

    ಗಾಯಗೊಂಡಿರುವ ಅರ್ಜುನ್‍ನನ್ನು ಅವರ ಕುಟುಂಬ ಆಸ್ಪತ್ರೆಗೆ ಕರೆದೊಯ್ಯುವ ಬದಲು ಪೊಲೀಸ್ ಠಾಣೆಗೆ ಕರೆದೊಯ್ಯಿತು. ದೂರು ನೀಡಿದ ನಂತರ, ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅರ್ಜುನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ಆರೋಪಿ ನವೀನ್‍ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ತಲೆಗೆ ಪೆಟ್ಟಾಗಿ ಮೃತಪಟ್ಟಿರುವುದು ಕಂಡುಬರುತ್ತದೆ. ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಎಂದು ಬರೇಲಿ ಎಸ್‍ಎಸ್‍ಪಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.