Tag: ಜಗಳ

  • ‘ಬಿಗ್ ಬಾಸ್’ ಮನೆಯಲ್ಲಿ ಜಗಳ: ಗೆಳೆಯನ ವಿರುದ್ಧವೇ ಗರಂ ಆದ ಸಂಬರ್ಗಿ

    ‘ಬಿಗ್ ಬಾಸ್’ ಮನೆಯಲ್ಲಿ ಜಗಳ: ಗೆಳೆಯನ ವಿರುದ್ಧವೇ ಗರಂ ಆದ ಸಂಬರ್ಗಿ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಟಾಸ್ಕ್ ವಿಚಾರಕ್ಕೆ ಜಗಳ ಕಾವೇರಿದೆ. ಸ್ಯಾಂಡ್ ವಿಚ್ ಮಾಡೋ ವಿಚಾರಕ್ಕೆ 2 ತಂಡಗಳು ಜಗಳ ಆಡಿವೆ. ಕ್ಯಾಪ್ಟನ್ ಕೊಟ್ಟ ತೀರ್ಪು ಒಪ್ಪಲು ಪ್ರಶಾಂತ್ ಸಂಬರ್ಗಿ ರೆಡಿಯಿಲ್ಲ ಅದಕ್ಕೆ ಜಗಳ ಆಗಿದೆ. ಈ ವೇಳೆ ಗೆಳೆಯ ಗೊಬ್ಬರಗಾಲ ವಿರುದ್ಧವೇ ಸಂಬರ್ಗಿ ತಿರುಗಿ ಬಿದ್ದಿದ್ದಾರೆ.

    ದೊಡ್ಮನೆಯಲ್ಲಿ ಕ್ಯಾಪ್ಟನ್ಸಿ ಆಯ್ಕೆಗೆ ವಿವಿಧ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ ಮನೆಯಲ್ಲಿ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಒಂದು ಗುಂಪಿಗೆ ಅನುಪಮಾ ಗೌಡ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂಗೆ ದೀಪಿಕಾ ಕ್ಯಾಪ್ಟನ್. ಈ ಎರಡೂ ಟೀಂಗಳಿಗೆ ವಿವಿಧ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಮೊದಲ ಟಾಸ್ಕ್​ನಲ್ಲಿ  ಸಂಬರ್ಗಿ (Prashant Sambargi) ಫುಲ್ ರಾಂಗ್ ಆಗಿದ್ದಾರೆ. ಇದನ್ನೂ ಓದಿ: ಕಾಂತಾರ ಕಾಳಗ: ಜಾಲತಾಣಗಳಲ್ಲಿ ಸೈದ್ಧಾಂತಿಕ, ರಾಜಕೀಯ, ಪ್ರಾದೇಶಿಕ ಸೊಗಡಿನ ಚರ್ಚೆ

    ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನ ಪ್ರಕಾರ ಸ್ಪರ್ಧಿಗಳು ಜಿಮ್ ಸೈಕಲ್ ತುಳಿಯುತ್ತಾ ಸ್ಯಾಂಡ್​ವಿಚ್ ಮಾಡಬೇಕಿತ್ತು. ಈ ಟಾಸ್ಕ್​ ಮುಗಿದ ಮೇಲೆ ಪ್ರಶಾಂತ್ ಸಂಬರ್ಗಿ ಸಖತ್ ವೈಲೆಂಟ್ ಆದರು. ಕ್ಯಾಪ್ಟನ್ ಆಗಿದ್ದ ವಿನೋದ್ (Vinod Gobbargala) ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಟಾಸ್ಕ್​ನ ಕೆಲ ನಿಯಮಗಳನ್ನು ವಿವಿಧ ರೀತಿಯಲ್ಲಿ ಬದಲಾಯಿಸಿ ಹೇಳಿದ್ದರು ಎಂಬುದು ಪ್ರಶಾಂತ್ ಸಂಬರ್ಗಿ ವಾದ ಮಾಡಿದ್ದಾರೆ. ವಿನೋದ್​ ನಡೆ ಅನೇಕರಿಗೆ ಇಷ್ಟವಾಗಿಲ್ಲ. ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಅವರು ಸಖತ್ ವೈಲೆಂಟ್ ಆಗಿದ್ದಾರೆ.

    ಕಳೆದ ಸೀಸನ್ ನಲ್ಲೂ ಗುರುತಿಸಿಕೊಂಡಿದ್ದ ಪ್ರಶಾಂತ್ ಸಂಬರ್ಗಿ ಸೀಸನ್ ೯ ರ ಹೊಸತರಲ್ಲಿ ಸೈಲೆಂಟ್ ಆಗಿದ್ದರು. ಈಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಸಂಬರ್ಗಿ ಫುಲ್ ರಾಂಗ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಕ್ಕಳ ಎದುರೇ ಶಾಲೆಯಲ್ಲಿ ಶಿಕ್ಷಕಿಯರ ಕಿತ್ತಾಟ – ವೀಡಿಯೋ ವೈರಲ್

    ಮಕ್ಕಳ ಎದುರೇ ಶಾಲೆಯಲ್ಲಿ ಶಿಕ್ಷಕಿಯರ ಕಿತ್ತಾಟ – ವೀಡಿಯೋ ವೈರಲ್

    ಲಕ್ನೋ: ಮಕ್ಕಳಿಗೆ ಪಾಠ ಮಾಡಿ, ತಿದ್ದಿ-ಬುದ್ದಿ ಹೇಳಬೇಕಾದ ಶಿಕ್ಷಕಿಯರೇ, ಮಕ್ಕಳ ಮುಂದೆ ಕಿತ್ತಾಡಿರುವ ವೀಡಿಯೋವೊಂದು ಸೊಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಹೌದು, ಉತ್ತರ ಪ್ರದೇಶದ (Uttar Pradesh) ಹಮೀರ್‍ಪುರ (Hamirpur) ಜಿಲ್ಲೆಯ ಬಾಲಕಿಯರ ಪ್ರೌಢಶಾಲೆಯಲ್ಲಿ ಮಹಿಳಾ ಶಿಕ್ಷಕಿರ ನಡುವೆ ಮಾರಾಮಾರಿ ನಡೆದಿದೆ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ (Gandhi Jayanti celebrations) ವೇಳೆ ಈ ಘಟನೆ ನಡೆದಿದೆ. ಸ್ವಚ್ಛತೆ ವಿಚಾರವಾಗಿ ಶಿಕ್ಷಕರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ದೆಹಲಿಯಲಿದ್ದ 500 ರೂ. ಮಾಸ್ಕ್ ಫೈನ್ ವಾಪಸ್ – 6 ತಿಂಗಳ ಬಳಿಕ ರಿಲೀಫ್

    ಕ್ಲಾಸ್ ತುಂಬ ಮಕ್ಕಳಿರುವಾಗ ಅವರ ಮುಂದೆಯೇ ಶಿಕ್ಷಕಿಯರು ಪರಸ್ಪರ ನಿಂದಿಸುತ್ತಾ, ಹೊಡೆದಾಡಿಕೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವಿದ್ಯಾರ್ಥಿಗಳು ನೋಡುತ್ತಿದ್ದರೂ ಕೊಂಚ ಕೂಡ ಮುಜುಗರ ಹೊಂದದೆ ಸುಮಾರು 45 ನಿಮಿಷಗಳ ಕಾಲ ಜಗಳ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಸಹ ಇಬ್ಬರು ಶಿಕ್ಷಕಿಯ ಜಗಳ ಬಿಡಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

    ಈ ವೀಡಿಯೋ ವೈರಲ್ ಬಳಿಕ ಜಗಳವಾಡಿದ ಮೂವರು ಶಿಕ್ಷಕಿಯರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೀತಿ ನಿಗಮ್, ಸಹಾಯಕ ಶಿಕ್ಷಕಿ ನಹಿದ್ ಹಶ್ಮಿ ಮತ್ತು ಮಹಿಳಾ ಸಹಾಯಕಿ ಪುಷ್ಪಲತಾ ಪಾಂಡೆ ಅಮಾನತುಗೊಂಡವರಾಗಿದ್ದಾರೆ. ಇದನ್ನೂ ಓದಿ: ಬ್ಯಾಕ್ ಟೂ ಬ್ಯಾಕ್ ಭದ್ರತಾ ಪಡೆಗಳಿಂದ ನಾಲ್ವರು ಭಯೋತ್ಪಾದಕರ ಎನ್‍ಕೌಂಟರ್

    Live Tv
    [brid partner=56869869 player=32851 video=960834 autoplay=true]

  • ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ, ಸುಮ್ನಿರ್ತಿಯಾ’ ಅಂತ ಸೋನು ಮೇಲೆ ಗರಂ ಆದ ಗುರೂಜಿ

    ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ, ಸುಮ್ನಿರ್ತಿಯಾ’ ಅಂತ ಸೋನು ಮೇಲೆ ಗರಂ ಆದ ಗುರೂಜಿ

    ತೀ ಹೆಚ್ಚು ಮಾತನಾಡುವ ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಮತ್ತು ಸೋನು ಶ್ರೀನಿವಾಸ್ ಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆರ್ಯವರ್ಧನ್ ಗುರೂಜಿ ಅಡುಗೆ ಮಾಡುತ್ತಿರುವ ಸಮಯದಲ್ಲಿ, ಈ ಜಗಳ ನಡೆದಿದ್ದು ಸೋನು ಶ್ರೀನಿವಾಸ್ ಗೌಡ ಅವರನ್ನು ಸುಮ್ಮನಿರಿಸಲು ಆಡಬಾರದ ಮಾತುಗಳನ್ನು ಆಡಿದ್ದಾರೆ ಗುರೂಜಿ. ಅದನ್ನು ಕೇಳಿಸಿಕೊಂಡ ಸೋನು, ಗುರೂಜಿ ನೀವು ಆ ರೀತಿ ಮಾತಡಬೇಡಿ ಎಂದು ಬುದ್ದಿವಾದ ಹೇಳಿದ್ದಾರೆ.

    ಊಟದ ವಿಚಾರಕ್ಕಾಗಿ ನಡೆದ ಮಾತು, ಜಗಳಕ್ಕೆ ತಿರುಗಿದ್ದು ಈ ಸಮಯದಲ್ಲಿ ಸುಮ್ಮನಿರುವಂತೆ ಸೋನು ಶ್ರೀನಿವಾಸ್ ಗೌಡಗೆ ಹೇಳುತ್ತಲೇ ಇರುತ್ತಾರೆ ಗುರೂಜಿ. ಆದರೆ, ಸೋನು ಮಾತನಾಡುತ್ತಲೇ ಹೋಗುತ್ತಾರೆ. ನೀವು ಮಾತನಾಡುತ್ತೀರಿ ಎಂದು ಗುರೂಜಿಗೆ ಹೇಳುತ್ತಾರೆ. ನಾನ್ ಸ್ಟಾಪ್ ಮಾತುಗಳನ್ನು ಕೇಳಿದ ಗುರೂಜಿ ಕೋಪ ಮಾಡಿಕೊಂಡು ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ? ಸುಮ್ನಿರ್ತಿಯಾ’ ಎಂದು ಆವಾಜ್ ಹಾಕುತ್ತಾರೆ. ಅದನ್ನು ಕೇಳಿಸಿಕೊಂಡ ಸೋನು, ನೀವು ಈ ರೀತಿ ಮಾತನಾಡಬೇಡಿ ಎಂದು ತಿರುಗೇಟು ನೀಡುತ್ತಾರೆ. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

    ಸೋನು ಶ್ರೀನಿವಾಸ್ ಗೌಡ ಸದಾ ಮಾತನಾಡುತ್ತಲೇ ಇರುತ್ತಾಳೆ ಮತ್ತು ಗೌರವ ಕೊಡುವುದಿಲ್ಲ ಎನ್ನುವುದನ್ನು ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕರು ಮಾತನಾಡಿದ್ದಾರೆ. ಇದೇ ಕಾರಣಕ್ಕಾಗಿ ಸುದೀಪ್ ಕೂಡ ಸೋನುಗೆ ಬುದ್ದಿವಾದ ಹೇಳಿದ್ದಾರೆ. ಆದರೂ, ಸೋನು ತಿದ್ದಿಕೊಂಡಂತೆ ಕಾಣುತ್ತಿಲ್ಲ. ಹಾಗಾಗಿಯೇ ಆಡಬಾರದ ಪದಗಳಿಂದ ಆಕೆಯನ್ನು ನಿಂದಿಸುತ್ತಲೇ ಇರುತ್ತಾರೆ ಬಿಗ್ ಬಾಸ್ ಸ್ಪರ್ಧಿಗಳು. ಅದರಲ್ಲಿ ಗುರೂಜಿ ಆಡಿದ ಈ ಮಾತೂ ಒಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • Bigg Boss-ರಣರಂಗವಾದ ಬಿಗ್ ಬಾಸ್ ಮನೆ : ರೊಟ್ಟಿ ವಿಚಾರಕ್ಕೆ ಇಬ್ಬರು ಸ್ಪರ್ಧಿಗಳ ನಡುವೆ ಕಿತ್ತಾಟ

    Bigg Boss-ರಣರಂಗವಾದ ಬಿಗ್ ಬಾಸ್ ಮನೆ : ರೊಟ್ಟಿ ವಿಚಾರಕ್ಕೆ ಇಬ್ಬರು ಸ್ಪರ್ಧಿಗಳ ನಡುವೆ ಕಿತ್ತಾಟ

    ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಭಾವುಕತೆ, ಫನ್ ಮತ್ತು ಪ್ರೇಮಿಗಳ ಕಲರವ ಕೇಳಿ ಬರುತ್ತಿತ್ತು. ತ್ರಿಕೋನ ಪ್ರೇಮಕಥೆಗಳು ಕೂಡ ಹುಟ್ಟಿಕೊಂಡವು. ಆರ್ಯವರ್ಧನ್ ಗುರೂಜಿ ಏರು ಧ್ವನಿಯಲ್ಲಿ ಒಂದು ಬಾರಿ ಮಾತನಾಡಿದ್ದನ್ನು ಬಿಟ್ಟರೆ, ಉಳಿದಂತೆ ಮನೆ ಫುಲ್ ಸೈಲೆಂಟ್. ಆದರೆ, ಎರಡನೇ ವಾರ ಹಾಗಿಲ್ಲ. ಮನೆಯ ಇಡೀ ವಾತಾವರಣೇ ಬದಲಾಗಿದೆ. ಅದರಲ್ಲೂ ಸಣ್ಣ ಪುಟ್ಟ ವಿಷಯಗಳನ್ನಿಟ್ಟುಕೊಂಡು ಹಗೆ ಸಾಧಿಸುವಂತಹ ಮನಸ್ಥಿತಿ ಉಂಟಾಗಿದೆ.

    ಸೋಮವಾರ ಮನೆಯ ಎಲ್ಲ ಸದಸ್ಯರು ಸ್ವಾತಂತ್ರ್ಯ ಧ್ವಜಾ ರೋಹನದಲ್ಲಿ ಪಾಲ್ಗೊಂಡಿದ್ದರು. ನಂತರ ಒಂದಷ್ಟು ಹೊತ್ತು ಸಂಭ್ರಮದಿಂದಲೇ ಕಳೆದರು. ನಗು ನಗುತ್ತಲೇ ಇದ್ದ ಮನೆಯು ರೊಟ್ಟಿ ವಿಚಾರವಾಗಿ ರಣರಂಗವಾಗಿ ಮಾರ್ಪಟ್ಟಿತು ಆ ಮನೆ. ರೂಪೇಶ್ ತನಗೆ ಕೊಟ್ಟಿದ್ದ ರೊಟ್ಟ ಹೆಚ್ಚಾಯಿತು ಎಂದು ಅದನ್ನು ಡಸ್ಟ್ ಬೀನ್ ಗೆ ಎಸೆದಿದ್ದರು. ಅದನ್ನು ಕಂಡ ಅರ್ಜುನ್, ಯಾರು ರೊಟ್ಟಿ ಎಸೆದದ್ದು ಎಂದು ಕೇಳಿದರು. ಇಬ್ಬರ ನಡುವಿನ ಸಂಭಾಷಣೆಯೇ ಜಗಳಕ್ಕೆ ಕಾರಣವಾಯಿತು. ಇದನ್ನೂ ಓದಿ:ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಯ್ತು ‘ಸಲಾರ್’ ಚಿತ್ರದ ಪೋಸ್ಟರ್

    ಡಸ್ಟ್ ಬೀನ್ ಗೆ ನಾನೇ ರೊಟ್ಟಿ ಎಸೆದದ್ದು ಅಂತ ರೂಪೇಶ್ ಒಪ್ಪಿಕೊಂಡ. ನನಗೆ ರೊಟ್ಟಿ ಹಿಡಿಸಲಿಲ್ಲ ಎಂದೂ ಹೇಳಿದ. ಈ ಉತ್ತರದಿಂದ ಸಮಾಧಾನವಾಗದ ಅರ್ಜುನ್, ಎಷ್ಟೋ ಜನಕ್ಕೆ ತಿನ್ನಲು ಅನ್ನವಿಲ್ಲ. ಉಪವಾಸದಿಂದ ಸಾಯುತ್ತಿದ್ದಾರೆ ಎಂದು ರೇಗಿದೆ. ಈ ಮಾತು ರೂಪೇಶ್ ಗೆ ಸರಿ ಕಾಣಲಿಲ್ಲ. ಹಾಗಾಗಿ ಇಬ್ಬರೂ ಏರು ಧ್ವನಿಯಲ್ಲೇ ಪರಸ್ಪರ ಮಾತಿನ ಯುದ್ಧವನ್ನೇ ಸಾರಿದರು. ಇಡೀ ಮನೆ ದಂಗಾಗಿ ಇಬ್ಬರನ್ನೂ ನೋಡುತ್ತಾ ನಿಂತಿತು.

    Live Tv
    [brid partner=56869869 player=32851 video=960834 autoplay=true]

  • ಸಾಕುನಾಯಿ ವಿಚಾರದಲ್ಲಿ ಜಗಳ – ದೊಣ್ಣೆ, ಕಬ್ಬಿಣದ ರಾಡ್‍ನಿಂದ ಕುಟುಂಬದ ಮೂವರ ಮೇಲೆ ಗಂಭೀರ ಹಲ್ಲೆ

    ಸಾಕುನಾಯಿ ವಿಚಾರದಲ್ಲಿ ಜಗಳ – ದೊಣ್ಣೆ, ಕಬ್ಬಿಣದ ರಾಡ್‍ನಿಂದ ಕುಟುಂಬದ ಮೂವರ ಮೇಲೆ ಗಂಭೀರ ಹಲ್ಲೆ

    ನವದೆಹಲಿ: ಸಾಕುನಾಯಿಯನ್ನು ಹೊಂದಿದ್ದ ಕುಟುಂಬದವರ ವಿರುದ್ಧ ರೋಚಿಗೆದ್ದ ನೆರೆಮನೆಯವರು ದೊಣ್ಣೆ, ಕಬ್ಬಿಣದ ರಾಡ್‍ನಿಂದ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ರಸ್ತೆಯಲ್ಲಿ ಸಾಕುನಾಯಿ ತಿರುಗಾಡುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ದಾಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಗಳ ನಡೆದಿತ್ತು. ಈ ವೇಳೆ ಸಾಕುನಾಯಿ ಹೊಂದಿದ್ದ ವಿನೋದ್ ಕುಮಾರ್, ಅವರ ಪತ್ನಿ ಮತ್ತು ಮಗಳ ಮೇಲೆ ನೆರೆಮನೆಯ ಜಿತೇಂದರ್ ಪಾಂಡೆ ಮತ್ತು ಅವರ ಕುಟುಂಬದವರು ಹಲ್ಲೆ ಮಾಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ(ದ್ವಾರಕಾ) ಎಂ.ಹರ್ಷವರ್ಧನ್ ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ, ಆರೋಪಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಿ: ಓವೈಸಿ 

    ನಡೆದಿದ್ದೇನು?
    ಜಿತೇಂದರ್ ಪಾಂಡೆ ಚೆನ್ನಾಗಿ ಕುಡಿದು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ. ಈ ವೇಳೆ ವಿನೋದ್ ಕುಮಾರ್ ತನ್ನ ನಾಯಿಯೊಂದಿಗೆ ವಾಕಿಂಗ್‌ಗೆ ಹೋಗುತ್ತಿದ್ದರು. ಆಗ ಪಾಂಡೆಯನ್ನು ವಿನೋದ್ ಅವರ ನಾಯಿ ಕಚ್ಚಿದೆ ಎಂದು ನಾಯಿಯನ್ನು ಹೊಡೆಯಲು ಪ್ರಯತ್ನಿಸಿದ್ದಾನೆ. ನಂತರ, ಪಾಂಡೆ ತನ್ನ ಮನೆಯಿಂದ ಕೆಲವು ವ್ಯಕ್ತಿಗಳನ್ನು ಕರೆದಿದ್ದು, ಸಂತ್ರಸ್ತರ ಮೇಲೆ ಹಲ್ಲೆ ನಡೆಸಿದ್ದಾನೆ.

    ದೂರು ದಾಖಲು
    ಈ ಹಿನ್ನೆಲೆ ವಿನೋದ್ ಕುಮಾರ್ ಪೊಲೀಸರಿಗೆ ಜಿತೇಂದರ್ ಪಾಂಡೆ ಮತ್ತು ಆತನ ಸಂಬಂಧಿಕರ ವಿರುದ್ಧ ದೂರು ಕೊಟ್ಟಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಈ ದೂರಿನ ಪ್ರಕಾರ, ಹಲ್ಲೆ ವೇಳೆ ಆರೋಪಿಗಳು ಸಂತ್ರಸ್ತರ ಮೇಲೆ ಬಿದಿರಿನ ದೊಣ್ಣೆ ಮತ್ತು ಕಬ್ಬಿಣದ ರಾಡ್‍ಗಳನ್ನು ಬಳಸಿ ಹಲ್ಲೆ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:  ಕೇರಳ ಶೈಲಿಯಲ್ಲಿ ಮಾಡಿ ‘ಫಿಶ್ ಫ್ರೈ’

    crime

    ಇಬ್ಬರು ಅರೆಸ್ಟ್
    ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೆಯ ಸಂಬಂಧಿಕರಾದ ನವೀನ್ ಮತ್ತು ಸನೋಜ್ ಕುಮಾರ್ ಇಬ್ಬರನ್ನು ಬಂಧಿಸಲಾಗಿದೆ. ಇತರ ಆರೋಪಿಗಳು ನಾಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv

  • ಜುಟ್ಟು ಅಂದಿದ್ದಕ್ಕೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದ್ರು

    ಜುಟ್ಟು ಅಂದಿದ್ದಕ್ಕೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದ್ರು

    ಬೆಂಗಳೂರು: ಗ್ಯಾಂಗ್‍ವೊಂದು ಜುಟ್ಟು ಅಂದಿದ್ದಕ್ಕೆ ಸಿನಿಮಾ ಸ್ಟೈಲ್‍ನಲ್ಲಿ ಮೂವರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದು ಹಲ್ಲೆಗೈದ ಘಟನೆ ನಗರದ ರಾಮಮೂರ್ತಿ ನಗರ ಟಿಸಿ ಪಾಳ್ಯದಲ್ಲಿ ನಡೆದಿದೆ.

    ವಿನಯ್, ಬಸವರಾಜು, ಗುರು, ಹಲ್ಲೆಗೊಳಾದ ಯುವಕರು. ತರುಣ್, ರಾಹುಲ್, ವಿಕ್ಕಿ, ಆ್ಯಂಡ್ ಗ್ಯಾಂಗ್‍ನಿಂದ ಹಲ್ಲೆ ನಡೆದಿದೆ. ಯುವಕರು ಮದ್ಯಪಾನ ಮಾಡಲು ಬಾರ್‍ಗೆ ತೆರಳಿದ್ದರು. ಇದೇ ವೇಳೆ ತರುಣ್ ಗ್ಯಾಂಗ್ ಅಲ್ಲಿಗೆ ಬಂದಿತ್ತು. ಗ್ಯಾಂಗ್‍ನಲ್ಲಿ ರಾಹುಲ್ ಜುಟ್ಟು ಬಿಟ್ಟಿದ್ದನ್ನು ನೋಡಿ ಯುವಕರು ನಕ್ಕಿದ್ದಾರೆ. ಇದೇ ವಿಚಾರಕ್ಕೆ ಎರಡು ಗ್ಯಾಂಗ್‍ಗಳ ನಡುವೆ ಮಾರಮಾರಿ ನಡೆದು ಗಲಾಟೆ ಶುರುವಾಗಿದೆ. ಇದನ್ನೂ ಓದಿ: ಎನ್‍ಟಿಆರ್ ಸಾಂಗ್‍ಗೆ ಸಖತ್ ಸ್ಟೆಪ್ ಹಾಕಿದ ರಮೇಶ್ ಕುಮಾರ್

    ನಂತರ ಆ ಮೂವರು ಯುವಕರ ಮೇಲೆ ತರುಣ್ ಆ್ಯಂಡ್ ಗ್ಯಾಂಗ್ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹಲ್ಲೆ ನಡೆಸಿದೆ. ಗಾಯಗೊಂಡ ಯುವಕರು ರಾಮಮೂರ್ತಿ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿದ್ದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ

    ಪೆÇಲೀಸರು ತರುಣ್‍ನನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

    ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

    ಬಾಗಲಕೋಟೆ: ಸಲೂನ್‍ವೊಂದರಲ್ಲಿ ತಲೆಗೆ ಕಲರ್ ಹಾಕೋದರ ರೇಟ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದ್ದು, ನಗರದ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸಾಗರ್ ಅವಟಿ (22) ಕೊಲೆಗೀಡಾದ ಯುವಕ. ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ. ಸಾಗರ್ ತಲೆಗೆ ಕಲರ್ ಹಚ್ಚಿಸೋಕೆ ಬಂದಿದ್ದನು. ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಕಲರ್ ಹಚ್ಚೋದಕ್ಕೆ ಮುಂದಾಗಿದ್ದನು. ಇನ್ನೊಂದು ಟೇಬಲ್‍ನಲ್ಲಿ ಸದಾಶಿವ ನಾವಿ ಬೇರೊಬ್ಬನ ಕಟಿಂಗ್ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಸಲೂನ್ ಮಾಲೀಕನು ಸಾಗರ್‌ಗೆ ಕಲರ್ ಹಚ್ಚೋದಕ್ಕೆ 20 ರೂ. ಕೊಡೋದಾಗಿ ಹೇಳಿದ್ದನು. ನಂತರದಲ್ಲಿ ಸದಾಶಿವ ನಾವಿ ಇದಕ್ಕೆ ತಕರಾರು ತೆಗೆದು ಜಗಳಕ್ಕೆ ಇಳಿದಿದ್ದಾನೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಕ್ರಮವಲ್ಲ – ಸುಪ್ರೀಂಕೋರ್ಟ್ ಮಹತ್ವದ ತೀರ್ಪು

    ಈ ವೇಳೆ ಜಗಳವು ತಾರಕಕ್ಕೇರಿದ್ದು ಸದಾಶಿವ ಅಲ್ಲೇ ಇದ್ದ ಕತ್ತರಿಯಿಂದ ಆತನಿಗೆ ಎದೆಯ ಎಡಭಾಗಕ್ಕೆ ಚುಚ್ಚಿದ್ದಾನೆ. ಈ ಮೊದಲು ಸಾಗರ, ಸದಾಶಿವ ನಾವಿಯನ್ನು ಅವಮಾನ ಮಾಡಿ ಕಾಡಿಸುತ್ತಿದ್ದನಂತೆ. ನಿನ್ನೆ ಕೂಡ ಕೆಲ ಹೊತ್ತು ಕ್ಷೌರಿಕನಿಗೆ ಆತ ಕಾಡಿಸಿದ್ದನಂತೆ. ನಂತರ ತಲೆಗೆ ಕಲರ್ ಹಚ್ಚುವಾಗ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 30ಕ್ಕೆ ಏರಿಕೆ

    ಈ ವೇಳೆ ಕೂಡಲೇ ಸಾಗರನನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

  • ನಡು ರಸ್ತೆಯಲ್ಲಿ ಜಡೆ ಜಗಳ – ಎರಡು ಗುಂಪಿನ ವಿದ್ಯಾರ್ಥಿನಿಯರ ಜಗಳ ಬಿಡಿಸಲು ಜನ ಹರಸಾಹಸ

    ನಡು ರಸ್ತೆಯಲ್ಲಿ ಜಡೆ ಜಗಳ – ಎರಡು ಗುಂಪಿನ ವಿದ್ಯಾರ್ಥಿನಿಯರ ಜಗಳ ಬಿಡಿಸಲು ಜನ ಹರಸಾಹಸ

    ಚೆನ್ನೈ: ನಗರದ ಬಸ್ ನಿಲ್ದಾಣವೊಂದರಲ್ಲಿ ಎರಡು ಗುಂಪಿನ ಕಾಲೇಜು ವಿದ್ಯಾರ್ಥಿನಿಯರ ನಡುವೆ ಜಗಳ ನಡೆದಿದ್ದು, ಕೈ, ಕೈ ಮೀಲಾಸಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ಏಪ್ರಿಲ್ 26ರ ಮಂಗಳವಾರ ಉತ್ತರ ಚೆನ್ನೈನ ನ್ಯೂ ವಾಷರ್‍ಮನ್‍ಪೇಟ್‍ನ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿಗಳು ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ಎರಡು ಗುಂಪಿನ ವಿದ್ಯಾರ್ಥಿನಿಯರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಮಾತಿಗೆ ಮಾತು ಬೆಳೆದು ಎರಡು ಗುಂಪಿನ ವಿದ್ಯಾರ್ಥಿನಿಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ವಿಚಾರದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ: ಸಂಜಯ್ ರಾವತ್

    POLICE JEEP

    ಅಕ್ಕಪಕ್ಕದಲ್ಲಿ ಜನರು ನೆರೆದಿರುವುದನ್ನು ಪರಿಗಣಿಸದೇ ಸಾರ್ಜಜನಿಕವಾಗಿ ವಿದ್ಯಾರ್ಥಿನಿಯರು ನೆಲದ ಮೇಲೆ ಬಿದ್ದು ಉರುಳಾಡಿ ಒಬ್ಬರಿಗೊಬ್ಬರು ಬಡಿದಾಡಿದ್ದಾರೆ. ಇನ್ನೂ ಇವರನ್ನು ಬಿಡಿಸಲು ಯಾರಿಗೂ ಸಹ ಸಾಧ್ಯವಾಗಲಿಲ್ಲ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿನಿಯರು ಹೊಡೆದಾಡುತ್ತಿರುವುದನ್ನು ಕಂಡು ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸಿದ್ದಾರೆ. ನಂತರ ಈ ರೀತಿ ಮತ್ತೆ ಘಟನೆ ಸಂಭವಿಸಬಾರದು ಎಂದು ವಾರ್ನ್ ಮಾಡಿ ಬಿಟ್ಟುಕಳುಹಿಸಿದ್ದಾರೆ.

    ಪೊಲೀಸರು ಗಸ್ತಿನಲ್ಲಿದ್ದರು ಮತ್ತು ಅವರು ಹೊಡೆದಾಟವನ್ನು ನೋಡಿದರು. ಅವರು ಮಧ್ಯಪ್ರವೇಶಿಸಿ ಗುಂಪುಗಳನ್ನು ಬೇರ್ಪಡಿಸಿದರು. ನಂತರ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಎಚ್ಚರಿಕೆ ನೀಡಿ ಬಿಡಲಾಯಿತು. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಯು ಅಲ್ಪಸಂಖ್ಯಾತರ ವಿರೋಧಿ ಕ್ರಮ: ಮುಸ್ಲಿಂ ಕಾನೂನು ಮಂಡಳಿ

  • ಕಾರ್ ಪಾರ್ಕಿಂಗ್ ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ

    ಕಾರ್ ಪಾರ್ಕಿಂಗ್ ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ

    ಧಾರವಾಡ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಹತ್ತಿರ ನಡೆದಿದೆ.

    ಕಳೆದ ಸುಮಾರು ದಿನಗಳಿಂದ ಉಣಕಲ್ ಭಾಗದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಜನರು ದಿನವೂ ಹೊಡೆದಾಡುವ ಪ್ರಸಂಗಗಳು ಗೋಚರಿಸುತ್ತವೆ. ಸಾರ್ವಜನಿಕರೊಬ್ಬರು ರಸ್ತೆ ಮುಂದಿನ ಮನೆಯ ಮುಂದೆ ಕಾರ್ ಪಾರ್ಕ್ ಮಾಡಿ ಹೋಟೆಲ್‌ಗೆ ಹೋಗಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಈ ವೇಳೆ ಇದಕ್ಕೆ ಕೋಪಗೊಂಡ ಮನೆಯವರು ಕಾರಿನ ಗ್ಲಾಸ್ ಒಡೆದು ಕಾರ್ ಚಾಲಕನಿಗೆ ಹೊಡೆದಿದ್ದಾರೆ. ಬಳಿಕ ಕಾರ್ ಚಾಲಕ ಪುನಃ ತನ್ನ ಸ್ನೇಹಿತರ ಜೊತೆಗೆ ಬಂದು ಜಗಳ ತಗೆದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ ದೊಣ್ಣೆಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ

  • ಆಸ್ತಿ ವಿಚಾರಕ್ಕೆ ನಡು ಬೀದಿಯಲ್ಲಿ ಸಂಬಂಧಿಕರ ಮಾರಾಮಾರಿ

    ಆಸ್ತಿ ವಿಚಾರಕ್ಕೆ ನಡು ಬೀದಿಯಲ್ಲಿ ಸಂಬಂಧಿಕರ ಮಾರಾಮಾರಿ

    ನವದೆಹಲಿ: ಆಸ್ತಿ ವಿಚಾರಕ್ಕೆ ಸಂಬಂಧಿಕರು ನಡು ಬೀದಿಯಲ್ಲಿ ಮಾರಾಮಾರಿ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರು ಆರೋಪಿಗಳನ್ನು ಗುರುತಿಸಿ, ಅವರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

    ನಡು ಬೀದಿಯಲ್ಲಿ ಹಗಲು ಹೊತ್ತಿನಲ್ಲಿಯೇ ದೆಹಲಿಯ ಉಸ್ಮಾನ್‍ಪುರ ಪ್ರದೇಶದಲ್ಲಿ ಜಗಳ ಆಡುತ್ತಿದ್ದವರನ್ನು ಪೊಲೀಸರು ಬಿಡಿಸಿ ಇದೀಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ಜ್ಞಾನದೀವಿಗೆ 2ನೇ ಆವೃತ್ತಿಗೆ ಬೊಮ್ಮಾಯಿ, ಸಿದ್ದರಾಮಯ್ಯ ಚಾಲನೆ

    ವೀಡಿಯೋದಲ್ಲಿ ನೆಲದ ಮೇಲೆ ಇರುವ ವ್ಯಕ್ತಿಯನ್ನು ತುಂಡಾಗಿರುವ ಮರದ ಕೋಲಿನಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ವಯಸ್ಸಾದ ಮಹಿಳೆಯೊಬ್ಬಳು ವ್ಯಕ್ತಿಯನ್ನು ಹೊಡೆಯದಂತೆ ಮನವಿ ಮಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

    ವ್ಯಕ್ತಿ ಗಾಯಗೊಂಡಿದ್ದರೂ, ಎರಡು ಕಡೆಯ ಸಂಬಂಧಿಕರು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರೆ, ಜನ ಬಾಲ್ಕನಿಯಿಂದ ನೋಡುತ್ತಿರುತ್ತಾರೆ. ಈ ಜಗಳ ಶ್ಯಾಮವೀರ್ ಮತ್ತು ಜಗತ್ ಅವರ ಮಕ್ಕಳ ನಡುವೆ ನಡೆದಿದೆ ಎಂದು ಪೊಲೀಸರಿಗೆ ತನಿಖೆ ವೇಳೆ ತಿಳಿಸಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ವಧು-ಕಣ್ಣು, ಹೃದಯ, ಕಿಡ್ನಿ ದಾನ

    ಆಸ್ತಿ ವಿವಾದಕ್ಕೆ ಎರಡು ಮನೆಯವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಹಿಂದೆ ಇಬ್ಬರು ಪರಸ್ಪರ ಆಸ್ತಿಗಾಗಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಇಂದು ಜಗತ್ ಮತ್ತು ಇತರರು ಶ್ಯಾಮವೀರ್ ಮತ್ತು ಆತನ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಹೇಳಿಕೆ ಹೇಳಿದ್ದಾರೆ.