Tag: ಜಗಳ

  • ಜಗಳ ಬಿಡಿಸಲು ಹೋದವನಿಗೇ ಚಾಕು ಇರಿತ: ಮಂಡ್ಯದ ಯುವಕ ಸಾವು

    ಜಗಳ ಬಿಡಿಸಲು ಹೋದವನಿಗೇ ಚಾಕು ಇರಿತ: ಮಂಡ್ಯದ ಯುವಕ ಸಾವು

    ಮಂಡ್ಯ: ಜಗಳ ಬಿಡಿಸಲು ಹೋದ ವೇಳೆ ಚಾಕು ಇರಿತಕ್ಕೊಳಕ್ಕಾಗಿ ಗಂಭೀರ ಗಾಯಗೊಂಡ ಯುವಕನೊಬ್ಬ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೆ.ಮಲ್ಲೇನಹಳ್ಳಿ ಬಳಿ ತಡರಾತ್ರಿ ನಡೆದಿದೆ.

    ಬೆಂಗಳೂರಿನ ಮಾಗಡಿ ರಸ್ತೆ ವಾಸಿ ಕಿರಣ್(28) ಮೃತ ದುರ್ದೈವಿ ಯುವಕ. ಮೃತ ಕಿರಣ್ ಭಾನುವಾರ ರಾತ್ರಿ ಪತ್ನಿಯ ಅಣ್ಣನಿಗೆ ಟಾರ್ಪಲ್ ಕೊಡಲು ಪತ್ನಿ ಜೊತೆ ಬಂದಿದ್ದರು. ಈ ವೇಳೆ ಕ್ಷುಲಕ ಕಾರಣಕ್ಕೆ ಪತ್ನಿಯ ಅಣ್ಣನೊಂದಿಗೆ ಬೇರೆ ಯುವಕರು ಜಗಳವಾಡ್ತಿದ್ರು. ಹೀಗಾಗಿ ಕಿರಣ್ ಜಗಳ ಬಿಡಿಸಲೆಂದು ತೆರಳಿದ್ದರು. ಇದೇ ಸಂದರ್ಭದಲ್ಲಿ ಯುವಕರು ಕಿರಣ್‍ಗೆ ಚಾಕು ಇರಿದು ಅಲ್ಲಿಂದ ಪರಾರಿಯಾಗಿದ್ದಾರೆ.

    ಘಟನೆಯಿಂದ ಗಂಭೀರ ಗಾಯಗೊಂಡ ಕಿರಣ್ ನನ್ನು ನಾಗಮಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಬಿ.ಜಿ ನಗರದ ಎಐಎಂಎಸ್ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    ಈ ಸಂಬಂಧ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಕ್ಕಿನ ವಿಚಾರಕ್ಕೆ ಜಗಳ- ವಿಡಿಯೋ ಮಾಡಲು ಮುಂದಾದ ಯುವತಿಗೆ ಮರ್ಮಾಂಗ ತೋರಿಸಿದ ದುರುಳ

    ಬೆಕ್ಕಿನ ವಿಚಾರಕ್ಕೆ ಜಗಳ- ವಿಡಿಯೋ ಮಾಡಲು ಮುಂದಾದ ಯುವತಿಗೆ ಮರ್ಮಾಂಗ ತೋರಿಸಿದ ದುರುಳ

    ಚಿಕ್ಕಬಳ್ಳಾಪುರ: ಬೆಕ್ಕಿನ ವಿಚಾರದಲ್ಲಿ ನಡೆದ ಜಗಳದಲ್ಲಿ ವ್ಯಕ್ತಿಯೊರ್ವ ಯುವತಿಗೆ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿ ನಡೆದಿದೆ.

    ದಿವ್ಯಾ(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಗೆ ಪುರಷೋತ್ತಮ್ ಎಂಬಾತ ತನ್ನ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪುರಷೋತ್ತಮ್ ವಿರುದ್ಧ ದೂರು ದಾಖಲಾಗಿದೆ.

    ಏನಿದು ಗಲಾಟೆ?: ದಿವ್ಯಾ ಸಾಕಿದ್ದ ಬೆಕ್ಕು ಪಕ್ಕದ ಮನೆಯಲ್ಲೇ ವಾಸವಿರುವ ರತ್ಮಮ್ಮ ಎಂಬ ವೃದ್ಧೆಯವರ ಮನೆಯ ಮೇಲೆ ಹೋಗಿದೆ. ಹೀಗಾಗಿ ಬೆಕ್ಕನ್ನ ತರಲು ರತ್ಮಮ್ಮ ಅವರ ಮನೆಯ ಮೇಲೆ ದಿವ್ಯಾ ಹೋಗಿದ್ದಕ್ಕೆ ರತ್ಮಮ್ಮ ಹಾಗೂ ದಿವ್ಯಾ ಕುಟುಂಬಸ್ಥರ ನಡುವೆ ಜಗಳ ನಡೆದಿದೆ.

    ಈ ವಿಚಾರದಲ್ಲಿ ರತ್ಮಮ್ಮನ ಪರ ಬಂದ ಮಗ ಪುರಷೋತ್ತಮ್ ದಿವ್ಯಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಇದನ್ನ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ವೇಳೆ ಪುರಷೋತ್ತಮ್ ತನ್ನ ಪ್ಯಾಂಟ್ ಬಿಚ್ಚಿ ತಗೋ ಇದೂ ತಗೋ ಅಂತ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾನೆ.

    ಪುರಷೋತ್ತಮ್ ಹಾಗೂ ದಿವ್ಯಾ ಕುಟುಂಬಸ್ಥರ ನಡುವೆ ಮನೆಯ ಜಾಗದ ವಿಚಾರದಲ್ಲಿ ವಿವಾದವಿದೆ. ಹೀಗಾಗಿ ಪ್ರತಿ ಸಣ್ಣ ಪುಟ್ಟ ವಿಚಾರಗಳಿಗೂ ರತ್ಮಮ್ಮ ಕಿರಿಕ್ ತೆಗೆದು ಗಲಾಟೆ ಮಾಡುತ್ತಾರೆ ಎಂದು ಹೇಳಲಾಗಿದೆ. ಈ ವೇಳೆ ಅಮ್ಮನ ಪರ ವಕಾಲತ್ತು ವಹಿಸಿಕೊಂಡು ಬರುವ ಇಬ್ಬರು ಮಕ್ಕಳಾದ ಪುರಷೋತ್ತಮ್ ಹಾಗೂ ಮಹೇಶ್ ದಿವ್ಯಾ ಹಾಗೂ ಅವರ ಅಕ್ಕ ಅಂಜುಮ್ ಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ. ನಮ್ಮ ಮನೆಯ ಮುಂದೆಯೇ ಮೂತ್ರವಿಸರ್ಜನೆ ಮಾಡೋದು, ಸಿಗರೇಟ್ ಸೇದೋದು, ಮದ್ಯದ ಬಾಟಲಿ ಮನೆಯ ಮೇಲೆ ಬಿಸಾಡಿ ಕಿರುಕುಳ ನೀಡುತ್ತಿದ್ದಾರೆ ಅಂತ ದಿವ್ಯಾ ಆರೋಪಿಸಿದ್ದಾರೆ.

  • ನಾಗರಹಾವಿನ ಮರಿಗಳ ಜಗಳ- ಮೈ ಜುಮ್ಮೆನಿಸೋ ವಿಡಿಯೋ ನೋಡಿ

    ನಾಗರಹಾವಿನ ಮರಿಗಳ ಜಗಳ- ಮೈ ಜುಮ್ಮೆನಿಸೋ ವಿಡಿಯೋ ನೋಡಿ

    ಉಡುಪಿ: ನಾಗರಹಾವು- ಮುಂಗುಸಿ ಜಗಳ ಆಡೋದನ್ನು ನೋಡಿದ್ದೀರಿ. ಆದ್ರೆ ಇದು ನಾಗರ ಹಾವಿನ ಮರಿಗಳ ಜಗಳ.

    ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಶಿಲೆ ಕಲ್ಲು ರಾಶಿಯಲ್ಲಿ ನಾಗರ ಹಾವು ಅವಿತಿತ್ತು. ಕಲ್ಲು ತೆರವು ಮಾಡುವಾಗ ಹಾವಿನ ಬಲಭಾಗದ ವಿಷದಗ್ರಂಥಿಗೆ ಏಟಾಗಿತ್ತು. ಹಾವು ಹಿಡಿಯುವ ಬಾಬಣ್ಣ ಎಂಬವರು ಈ ಹಾವನ್ನು ಉರಗತಜ್ಞ ಗುರುರಾಜ ಸನಿಲ್ ಅವರಿಗೆ ನೀಡಿದ್ದರು. ಇದರ ಶುಶ್ರೂಷೆ ನಡೆಸುತ್ತಿರುವಾಗಲೇ 20 ಮೊಟ್ಟೆಯನ್ನಿಟ್ಟಿತ್ತು. ಕೃತಕ ಕಾವಿನ ವ್ಯವಸ್ಥೆ ಮಾಡಿ, 12 ಮರಿಗಳನ್ನು ಉಳಿಸಕೊಳ್ಳಲಾಗಿದೆ.

    ಮೊದಲ ಬಾರಿಗೆ ಮೊಟ್ಟೆಯೊಡೆದು ಹಾವಿನ ಮರಿಗಳು ಹೊರಬಂದ ದೃಶ್ಯವನ್ನು ನಾವಿಲ್ಲಿ ನೋಡಬಹುದು. ಆಟವೋ, ಕಚ್ಚಾಟವೋ ನಾಗನ ಮರಿಗಳು ಭಯಗೊಂಡು ಒಂದನ್ನೊಂದು ಬೆದರಿಸುವ, ತುಂಟಾಟ ಮಾಡುವ ದೃಶ್ಯ ಮಾತ್ರ ಎಲ್ಲರ ಗಮನಸೆಳೆದಿದೆ. ಇದೀಗ ಎಲ್ಲಾ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

    https://www.youtube.com/watch?v=k0FYf5MPdOU&feature=youtu.be

  • ತನ್ನ ಕರುವನ್ನು ಸಾಯ್ಸಿದ ಹಾವಿನೊಂದಿಗೆ ಹಸು ಜಗಳಾಡೋ ಮನಕಲಕುವ ವಿಡಿಯೋ ನೋಡಿ

    ತನ್ನ ಕರುವನ್ನು ಸಾಯ್ಸಿದ ಹಾವಿನೊಂದಿಗೆ ಹಸು ಜಗಳಾಡೋ ಮನಕಲಕುವ ವಿಡಿಯೋ ನೋಡಿ

    ಹಾವು-ಮುಂಗುಸಿ ಜಗಳ ಮಾಡುತ್ತವೆ ಅನ್ನೋದನ್ನ ಕೇಳಿರ್ತೀರಿ ಅಥವಾ ನೋಡಿರ್ತೀರಿ. ಆದ್ರೆ ಹಾವು ಮತ್ತು ಹಸು ಜಗಳ ಮಾಡಿರೋ ವಿಚಿತ್ರ ಘಟನೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹೌದು. ಆಗ ತಾನೇ ಹುಟ್ಟಿದ ತನ್ನ ಕರುಳ ಕುಡಿಯನ್ನೇ ಕಚ್ಚಿ ಸಾಯಿಸಿದ ಹಾವಿನೊಂದಿಗೆ ಹಸುವೊಂದು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೋರಾಟ ಮಾಡಿದೆ.

    ತನ್ನ ಕರುವನ್ನು ಸಾಯಿಸಿದ ಹಾವನ್ನು ಕಾಲಿನಲ್ಲಿ ತುಳಿದು, ಕೊಂಬಿನಿಂದ ತಿವಿದು ಕೊಂದು ಹಾಕಿ ಸೇಡು ತೀರಿಸಿಕೊಳ್ಳೋ ದೃಶ್ಯ ನೋಡೋವಾಗ ಎಂಥವರ ಕರುಳು ಚುರುಕ್ ಅನ್ನತ್ತೆ. ಆದ್ರೆ ಈ ಘಟನೆ ಎಲ್ಲಿ ನಡೆದಿದೆ ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಘಟನೆಯ ದೃಶ್ಯವನ್ನು ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದಾರೆ.

    `ತಮಿಳ್ ಸೈಥಿ’ ಎಂಬ ಯೂಟ್ಯೂಬ್ ಅಕೌಂಟ್‍ನಲ್ಲಿ ಮೇ 6ರಂದು ಈ ವಿಡಿಯೋ ಅಪ್ ಲೋಡ್ ಮಾಡಲಾಗಿದ್ದು ವೈರಲ್ ಆಗಿದೆ.

    https://www.youtube.com/watch?v=xEjI9HzRASI

  • ಸಿಬ್ಬಂದಿಯೆದುರೇ ಕೈ ಕೈ ಮಿಲಾಯಿಸಿದ ಗಂಗಾವತಿಯ ಸರ್ಕಾರಿ ಆಸ್ಪತ್ರೆ ವೈದ್ಯರು

    ಸಿಬ್ಬಂದಿಯೆದುರೇ ಕೈ ಕೈ ಮಿಲಾಯಿಸಿದ ಗಂಗಾವತಿಯ ಸರ್ಕಾರಿ ಆಸ್ಪತ್ರೆ ವೈದ್ಯರು

    ಕೊಪ್ಪಳ: ಸರ್ಕಾರಿ ಆಸ್ಪತ್ರೆಯ ವೈದ್ಯರಿಬ್ಬರು ಗಲಾಟೆ ಮಾಡಿಕೊಂಡು ಕೈ ಮಿಲಾಯಿಸಿದ ಘಟನೆ ಮಂಗಳವಾರ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ್ ಸವದಿ ಮತ್ತು ಇನ್ನೋರ್ವ ಹಿರಿಯ ವೈದ್ಯರಾದ ಡಾ.ಜುಬೇರ್ ಅಹಮ್ಮದ್ ಆಸ್ಪತ್ರೆಯಲ್ಲೆ ಗಲಾಟೆ ಮಾಡಿಕೊಂಡು ಸಾರ್ವಜನಿಕರು ಮತ್ತು ಸಿಬ್ಬಂದಿ ಎದುರೇ ನಗೆಪಾಟಲಿಗೀಡಾಗಿದ್ದಾರೆ.

    ಡಾ.ಜುಬೇರ್ ಅಹಮ್ಮದ್ ದಿನ ನಿತ್ಯ ಆಸ್ಪತ್ರೆಗೆ ತಡವಾಗಿ ಬರುತ್ತಿದ್ದು ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಅಧಿಕಾರಿ ಡಾ.ಈಶ್ವರ್ ಸವಡಿ ಅವರನ್ನು ತಮ್ಮ ಛೇಂಬರ್‍ಗೆ ಕರೆಸಿ, ಸರಿಯಾಗಿ ಕೆಲಸ ನಿರ್ವಹಿಸಿ ಎಂದು ಹೇಳಿದ್ದಾರೆ. ಇದಕ್ಕೆ ಕುಪಿತರಾದ ಡಾ.ಜುಬೇರ್ ನೀವು ಹೇಳಿದ ಹಾಗೆ ಕೇಳಬೇಕೆಂದೇನಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಈ ನಡುವೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ.

    ಈ ಇಬ್ಬರು ವೈದ್ಯಾಧಿಕಾರಿಗಳ ಜಗಳ ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳ ಮುಂದೆ ನಡೆದಿದೆ. ವೈದ್ಯಾಧಿಕಾರಿಗಳೇ ಈ ರೀತಿ ಜಗಳ ಮಾಡಿಕೊಂಡರೆ ಆಸ್ಪತ್ರೆಗೆ ಬರುವ ರೋಗಿಗಳನ್ನು ನೋಡುವರು ಯಾರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮೂತ್ರ ವಿಸರ್ಜನೆ ವಿಷಯದಲ್ಲಿ ಜಗಳ: ಯುವಕರ ನಡುವೆ ಮಾರಾಮಾರಿ

    ಗದಗ: ಮೂತ್ರ ವಿಸರ್ಜನೆ ವಿಷಯದಲ್ಲಿ ಜಗಳ ವಿಕೋಪಕ್ಕೆ ತಿರುಗಿ ಇಬ್ಬರು ಯುವಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ಗದಗ ನಗರದ ಮುಳಗುಂದದ ನಾಕಾ ಬಳಿ ಶುಕ್ರವಾರ ರಾತ್ರಿ ನಡೆದಿದೆ.

    ಸಂತೋಷ್ ರೊಖಡೆ ಮತ್ತು ಮುಸ್ತಾಕ್ ಛಬ್ಬಿ ನಡುವೆ ಮೂತ್ರ ವಿಸರ್ಜನೆಯ ವಿಷಯವಾಗಿ ಜಗಳ ನಡೆದಿದೆ. ಮುಸ್ತಾಕ್ ವ್ಯಾಪಾರ ಮಾಡುವ ಸ್ಥಳದಲ್ಲಿ ಸಂತೋಷ್ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮುಸ್ತಾಕ್, ಸಂತೋಷ್‍ನನ್ನು ಪ್ರಶ್ನೆ ಮಾಡಿದ್ದಾನೆ. ಈ ಸಂದರ್ಭ ಜಗಳ ವಿಕೋಪಕ್ಕೆ ತಿರುಗಿ ಇಬ್ಬರು ಪರಸ್ಪರ ಎದೆ, ಬೆನ್ನು, ಹೊಟ್ಟೆಗೆ ಇರಿದು ಹಲ್ಲೆ ಮಾಡಿದ್ದಾರೆ.

    ಸಂತೋಷ್ ರೊಖಡೆ

    ಮುಸ್ತಾಕ್ ಮತ್ತು ಸಂತೋಷ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಮುಸ್ತಾಕ್‍ರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹಾಗೂ ಸಂತೋಷ್‍ನನ್ನು ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.