Tag: ಜಗಳ

  • ಮನೆಗೆ ಬಂದು ಜಗಳವಾಡಿದಳೆಂದು ಗೃಹಿಣಿಯನ್ನು ಕೊಲೆಗೈದ ಪ್ರಿಯಕರ

    ಮನೆಗೆ ಬಂದು ಜಗಳವಾಡಿದಳೆಂದು ಗೃಹಿಣಿಯನ್ನು ಕೊಲೆಗೈದ ಪ್ರಿಯಕರ

    ಮೈಸೂರು: ಗೃಹಿಣಿಯನ್ನು ತನ್ನ ಪ್ರಿಯಕರನೇ ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮಾರುತಿ ಬಡಾವಣೆ ನಿವಾಸಿ ಜ್ಯೋತಿ(29) ಕೊಲೆಯಾದ ಮಹಿಳೆ. ಹುಣಸೂರು ಪಟ್ಟಣದ ಪ್ರವೀಣ್ ಕೊಲೆ ಮಾಡಿದ ಆರೋಪಿ. ಜ್ಯೋತಿಗೆ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ.

    ಒಂದು ವರ್ಷದಿಂದ ಜ್ಯೋತಿ ಮತ್ತು ಪ್ರವೀಣ್ ನಡುವೆ ಅಕ್ರಮ ಸಂಬಂಧವಿತ್ತು. ಶುಕ್ರವಾರ ರಾತ್ರಿ ಜ್ಯೋತಿ, ಪ್ರವೀಣ್ ಮನೆಗೆ ಹೋಗಿ ಜಗಳವಾಡಿದ್ದಳು. ಇದರಿಂದ ಕುಪಿತನಾಗಿದ್ದ ಪ್ರವೀಣ್ ಇಂದು ಬೆಳಗ್ಗೆ ಜ್ಯೋತಿ ಮನೆಗೆ ನುಗ್ಗಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದಿದ್ದಾನೆ.

    ಆರೋಪಿ ಪ್ರವೀಣ್ ಕೊಲೆ ಮಾಡಿ ಬೈಪಾಸ್ ರಸ್ತೆಯ ಪ್ರಶಾಂತ್ ಲಾಡ್ಜ್ ನ ಮೇಲಿನ ಮಹಡಿಗೆ ಹೋಗಿ ತನ್ನ ತಂದೆಗೆ ಫೋನ್ ಮಾಡಿದ್ದಾನೆ. ಬಳಿಕ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಇದನ್ನು ಕೇಳಿದ ತಂದೆ ಕೂಡಲೇ ಸ್ಥಳಕ್ಕೆ ಆಗಮಿಸಿ ಪುತ್ರನ ಮನವೊಲಿಸಿದ್ದಾರೆ.

    ಡಿವೈಎಸ್ಪಿ ಭಾಸ್ಕರ್, ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ಹಾಗೂ ಪಿಎಸ್‍ಐ ಷಣ್ಮುಗಂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಎಂ ಭೇಟಿ ವೇಳೆಯೇ ಹೊನ್ನಾವರದಲ್ಲಿ ಕೋಮು ಗಲಭೆ – ಇಬ್ಬರಿಗೆ ಗಾಯ, ಟೆಂಪೋ ಜಖಂ

    ಸಿಎಂ ಭೇಟಿ ವೇಳೆಯೇ ಹೊನ್ನಾವರದಲ್ಲಿ ಕೋಮು ಗಲಭೆ – ಇಬ್ಬರಿಗೆ ಗಾಯ, ಟೆಂಪೋ ಜಖಂ

    ಕಾರವಾರ: ಸಿಎಂ ಸಿದ್ದರಾಮಯ್ಯ ಕಾರವಾರ ಭೇಟಿ ಸಂದರ್ಭದಲ್ಲೇ ಕೋಮು ಘರ್ಷಣೆ ಸಂಭವಿಸಿದೆ. ಒಂದು ಕೋಮಿನ ಯುವಕನ ದ್ವಿಚಕ್ರ ವಾಹನಕ್ಕೆ ಇನ್ನೊಂದು ಕೋಮಿನ ಆಟೋ ಚಾಲಕ ಆಟೋ ಡಿಕ್ಕಿ ಹೊಡೆಸಿದ ಸಂಬಂಧ ಎರಡು ಕೋಮುಗಳ ಯುವಕರು ಕಲ್ಲುತೂರಾಟ ನಡೆಸಿ ದೊಣ್ಣೆಗಳನ್ನ ಹಿಡಿದು ಹೊಡೆದಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಸ್ ಸ್ಟಾಂಡ್ ನಲ್ಲಿ ನಡೆದಿದೆ.

    ಕಲ್ಲು ತೂರಾಟದಿಂದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಲಭೆಯಲ್ಲಿ ಗಾಯಗೊಂಡ ನಗರದ ಶರತ್ ಮಹಾಲೆ ಮತ್ತು ನರಸಿಂಹ ಮೇಸ್ತರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಟೆಂಪೋಗಳ ಗಾಜುಗಳು ಜಖಂ ಆಗಿವೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗಲಭೆ ನಿರತ ಹತ್ತಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದಿದ್ದಾರೆ.

    ಸದ್ಯ ಗಲಭೆ ನಿಯಂತ್ರಣಕ್ಕೆ ಬಂದಿದ್ದು ಬಸ್ ಸ್ಟಾಂಡ್ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಾಕಾಬಂಧಿ ಹಾಕಿದ್ದು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಮೂರು ದಿನಗಳ ಹಿಂದೆ ಚಂದಾವರದಲ್ಲಿ ಧ್ವಜ ನೆಡುವ ವಿಷಯದಲ್ಲಿ ಎರಡು ಕೋಮುಗಳ ನಡುವೆ ಗಲಭೆಯಾಗಿ 27 ಜನ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

  • ರಸ್ತೆಯಲ್ಲಿ ಯುವತಿ, ಟ್ರಾಫಿಕ್ ಪೊಲೀಸರ ನಡುವೆ ಕಚ್ಚಾಟ: ವಿಡಿಯೋ ವೈರಲ್

    ರಸ್ತೆಯಲ್ಲಿ ಯುವತಿ, ಟ್ರಾಫಿಕ್ ಪೊಲೀಸರ ನಡುವೆ ಕಚ್ಚಾಟ: ವಿಡಿಯೋ ವೈರಲ್

    ಕಲಬುರಗಿ: ನಗರದ ರಸ್ತೆಯಲ್ಲಿ ಯುವತಿ ಮತ್ತು ಮಹಿಳಾ ಸಂಚಾರಿ ಪೊಲೀಸ್ ನಡುವಿನ ಜಗಳವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಬಂಕ್ ಬಳಿ ಯವತಿ ಒಬ್ಬರು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಅಂಗಡಿಗೆ ಹೋಗಿದ್ದರು. ಅಷ್ಟರಲ್ಲಿ ಟ್ರಾಫಿಕ್ ಮಹಿಳಾ ಅಧಿಕಾರಿಯಾದ ಭಾರತಿ ಎಂಬುವರು ಸ್ಥಳಕ್ಕೆ ಬಂದು ಯುವತಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಹೇ ನಿನ್ನ ಲೈಸೆನ್ಸ್ ಎಲ್ಲಿ? ನಿನ್ನ ಬೈಕ್‍ನ ಎಮಿಷನ್ ಟೆಸ್ಟ್ ರಿಪೋರ್ಟ್ ಎಲ್ಲಿದೆ? ಹೆಲ್ಮೆಟ್ ಎಲ್ಲಿದೆ ಎಂದು ಪ್ರಶ್ನಿಸಿ ಬೈಕ್ ಸಿಜ್ ಮಾಡಲು ಮುಂದಾಗಿದ್ದಾರೆ. ನೀನು 1000 ರೂ. ದಂಡ ಕಟ್ಟು ಆಮೇಲೆ ನಿನ್ನ ಬೈಕ್ ಬಿಡ್ತಿನಿ ಎಂದು ಯುವತಿಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    https://www.youtube.com/watch?v=VXxP7CRchaI

    ಕೇವಲ ಹೆಲ್ಮೆಟ್ ಇಲ್ಲದಿದ್ದಕ್ಕೆ 1000 ರೂ. ಯಾಕೆ ದಂಡ ಕಟ್ಟಬೇಕು? ಎಂದು ಯವತಿ ಪ್ರಶ್ನಿಸಿದ್ದಾರೆ. ಅದಕ್ಕೆ ಆ ಅಧಿಕಾರಿ ನೀನು ಹಣ ಕಟ್ಟದೇ ಇದ್ದಲ್ಲಿ ನಿನ್ನ ಬೈಕ್ ಸಿಜ್ ಮಾಡ್ತೀನಿ. ಕಚೇರಿಗೆ ಬಂದು ಬೈಕ್ ಬಿಡಿಸಿಕೊಂಡು ಹೋಗು ಎಂದು ಹೇಳಿದ್ದಾರೆ. ಇದರಿಂದ ಕೆಂಡಮಂಡಲವಾದ ಯುವತಿ ಹೋಗಮ್ಮ ಹೋಗು ನನ್ನ ಬೈಕ್ ಎಲ್ಲಾದರು ಒಯಿ, ಏನಾದರು ಮಾಡು. ನಾನ್ಯಾಕೆ 1000 ಕೊಡಲಿ ಎಂದು ಮರುಪ್ರಶ್ನೆ ಹಾಕಿದ್ದಾರೆ.

    ಒಂದು ಗಂಟೆಗೂ ಅಧಿಕ ಇಬ್ಬರ ನಡುವಿನ ಕಚ್ಚಾಟ ನೆರದಿದ್ದವರಿಗೆ ಮನರಂಜನೆ ಒದಗಿಸಿದರೆ, ಆ ಪೊಲೀಸ್ ಅಧಿಕಾರಿ ಮಾತ್ರ ಸ್ವಲ್ಪವೂ ಮಾನವೀಯತೆ ಇಲ್ಲದೇ ವರ್ತಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಟ್ರಾಫಿಕ್ ನಿಯಮಗಳ ಪಾಲನೆ ನೆಪದಲ್ಲಿ ಕಲಬುರಗಿ ಟ್ರಾಫಿಕ್ ಪೊಲೀಸರು ಗುಂಡಾ ವರ್ತನೆ ತೋರುತ್ತಿದ್ದಾರೆ ಮತ್ತು ಮನಬಂದಂತೆ ದಂಡ ವಸೂಲಿ ಮಾಡುತ್ತಿದ್ದಾರೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

  • ಸ್ಕೇಟಿಂಗ್ ಆಡುವಾಗ ಹೊಡೆದಾಡಿಕೊಂಡ ಕ್ರೀಡಾಪಟುಗಳು: ವಿಡಿಯೋ ವೈರಲ್

    ಸ್ಕೇಟಿಂಗ್ ಆಡುವಾಗ ಹೊಡೆದಾಡಿಕೊಂಡ ಕ್ರೀಡಾಪಟುಗಳು: ವಿಡಿಯೋ ವೈರಲ್

    ಮಂಗಳೂರು: ಸ್ಕೇಟಿಂಗ್ ಪಟುಗಳಿಬ್ಬರು ಹೊಡೆದಾಡಿಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ.

    ನವೆಂಬರ್ 26 ರಂದು ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ 33ನೇ ಸ್ಕೇಟಿಂಗ್ ಚಾಂಪಿಯನ್‍ ಶಿಪ್‍ ನಲ್ಲಿ ಇಬ್ಬರು ಸ್ಕೇಟಿಂಗ್ ಪಟುಗಳು ಸ್ಕೇಟಿಂಗ್ ರಿಂಕ್ ನಲ್ಲೇ ಹಿಗ್ಗಾಮುಗ್ಗ ಹೊಡೆದಾಡಿಕೊಂಡಿದ್ದಾರೆ.

    ಮಂಗಳೂರಿನ ಹೊಗೈಬೈಲ್ ನಲ್ಲಿರುವ ಫ್ರಾನಿಸ್ಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಹೈಫ್ಲೈ ಸ್ಕೇಟಿಂಗ್ ಕ್ಲಬ್ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯಶಿಪ್ ನಡೆಯುತ್ತಿದ್ದ ವೇಳೆ ಈ ಹೊಡೆದಾಟ ನಡೆದಿದೆ. 16 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದ ಫೈನಲ್ ಪಂದ್ಯ ನಡೆಯುತ್ತಿದ್ದಾಗ ಬೆಂಗಳೂರಿನ ರಾಘವೇಂದ್ರ ಹಾಗೂ ಅಂಕಿತ್ ಎಂಬಿಬ್ಬರು ಸ್ಕೇಟರ್ ಗಳು ಫಿನಿಶ್ ಲೈನ್ ದಾಟುವ ಮೊದಲೇ ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದು ಬಿದ್ದರು.

    ಬಿದ್ದ ತಕ್ಷಣ ರಾಘವೇಂದ್ರ ಅಂಕಿತ್ ಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಬಳಿಕ ರೆಫ್ರಿಗಳು ಜಗಳವನ್ನು ಬಿಡಿಸಿದ್ದಾರೆ. ಸ್ಕೇಟಿಂಗ್ ಪಟುಗಳ ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಕೇಟಿಂಗ್ ನಲ್ಲೂ ಇಂತಹ ಘಟನೆಗಳು ನಡೆಯುತ್ತಾ? ಈ ಮಟ್ಟಕ್ಕೆ ಸ್ಕೇಟಿಂಗ್ ಬಂದಿದಿಯಾ ಎಂಬ ಚರ್ಚೆ ಆರಂಭಗೊಂಡಿದೆ.

    ಕಳೆದ ವರ್ಷ ಇದೇ ಅಂಕಿತ್ ರಾಘವೇಂದ್ರನ ಮೇಲೆ ಹಲ್ಲೆ ನಡೆಸಿದ್ದು, ಅದಕ್ಕೆ ಪ್ರತೀಕಾರವಾಗಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಕಳೆದ ವರ್ಷ ಹಲ್ಲೆ ನಡೆದಾಗ ರಾಜ್ಯ ಸ್ಕೇಟಿಂಗ್ ಅಸೋಶೀಯೇಷನ್ ಯಾವುದೇ ಕ್ರಮ ಕೈಗೊಳ್ಳದೇ ಇರೋದು ಈ ಘಟನೆ ಮರುಕಳಿಸಲು ಕಾರಣ ಎಂಬ ಆರೋಪ ಕೇಳಿಬಂದಿದೆ.

    ಈ ಹಲ್ಲೆ ಕುರಿತು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಕ್ಕಡಿಯಲ್ಲಿ ಹೊಡೆದ್ರು, ಜಡೆ ಜಡೆ ಹಿಡಿದು ಎಳೆದಾಡಿಕೊಂಡ್ರು – ಬೆಂಗ್ಳೂರಲ್ಲಿ ಲೇಡೀಸ್ ಫೈಟ್

    ತಕ್ಕಡಿಯಲ್ಲಿ ಹೊಡೆದ್ರು, ಜಡೆ ಜಡೆ ಹಿಡಿದು ಎಳೆದಾಡಿಕೊಂಡ್ರು – ಬೆಂಗ್ಳೂರಲ್ಲಿ ಲೇಡೀಸ್ ಫೈಟ್

    ಬೆಂಗಳೂರು: ಫುಟ್ ಪಾತ್ ನಲ್ಲಿ ಅಂಗಡಿ ಹಾಕೋ ವಿಚಾರಕ್ಕೆ ಮಹಿಳೆಯರು ಜಡೆ ಹಿಡಿದು ಹೊಡೆದಾಡಿಕೊಂಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಜಾಗ ನನ್ನದು ನನ್ನದು ಅಂತ ಜಡೆ ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಜಾಗ ಬಿಡದೇ ಇದ್ದಿದ್ದಕ್ಕೆ ತಕ್ಕಡಿಯನ್ನೇ ತೆಗೆದುಕೊಂಡು ಮಹಿಳೆ ತಲೆಗೆ ಒಡೆದಿದ್ದಾಳೆ.

    ಕೊನೆಗೆ ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿ ಮಹಿಳೆಯರನ್ನ ದೂರ ತಳ್ಳಿ ಜಗಳ ಬಿಡಿಸಿದ್ದಾರೆ. ಇಷ್ಟಾದರೂ ಮಹಿಳೆಯರು ಪರಸ್ಪರ ಬೈದಾಡಿಕೊಂಡಿದ್ದಾರೆ.

  • ನೆರೆಮನೆ ಮಹಿಳೆಯೊಂದಿಗೆ ಜಗಳ- ಸೇಡು ತೀರಿಸಿಕೊಳ್ಳಲು ಆಕೆಯ 2 ವರ್ಷದ ಮಗನನ್ನು ಕೊಂದ್ಳು!

    ನೆರೆಮನೆ ಮಹಿಳೆಯೊಂದಿಗೆ ಜಗಳ- ಸೇಡು ತೀರಿಸಿಕೊಳ್ಳಲು ಆಕೆಯ 2 ವರ್ಷದ ಮಗನನ್ನು ಕೊಂದ್ಳು!

     

    ನವದೆಹಲಿ: ಮಹಿಳೆಯೊಬ್ಬಳು ತನ್ನ ನೆರೆಮನೆಯ ಮಹಿಳೆಯೊಂದಿಗೆ ಜಗಳವಾಡಿದ್ದು, ಅದಕ್ಕೆ ಸೇಡು ತೀರಿಸಿಕೊಳ್ಳಲು ಆಕೆಯ 2 ವರ್ಷದ ಮಗನನ್ನು ಕೊಲೆ ಮಾಡಿರೋ ಘಟನೆ ದೆಹಲಿಯ ಉತ್ತಾಮ್‍ನಗರದಲ್ಲಿ ಶುಕ್ರವಾರದಂದು ನಡೆದಿದೆ.

    ಆರೋಪಿ ಮಹಿಳೆ ಎರಡನೇ ಮಹಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಮಗುವಿನ ತಲೆಯನ್ನ ನೆಲಕ್ಕೆ ಗುದ್ದಿ ಕೊಲೆ ಮಾಡಿರಬಹುದೆಂಬ ಶಂಕೆಯಿದೆ. ಮೃತ ಬಾಲಕ ಆರೋಪಿ ಮಹಿಳೆಯ ಮಕ್ಕಳೊಂದಿಗೆ ಆಟವಾಡಲು ಅವರ ಮನೆಗೆ ಆಗಾಗ ಹೋಗುತ್ತಿದ್ದ ಎಂದು ಪೊಲೀಸಿರು ತಿಳಿಸಿದ್ದಾರೆ.

    ಆರೋಪಿ ಮಹಿಳೆ ಕೆಲವು ದಿನಗಳ ಹಿಂದೆ ಬಾಲಕನ ತಾಯಿಯೊಂದಿಗೆ ಜಗಳವಾಡಿದ್ದಳು. ಬುಧವಾರದಂದು ಆಕೆ ಬಾಲಕನನ್ನು ತನ್ನ ಮಗನೊಂದಿಗೆ ಆಟವಾಡಲು ಕರೆದು ಕೊಲೆ ಮಾಡಿದ್ದಾಳೆ. ಬಾಲಕನ ಪೋಷಕರು ಆತನಿಗಾಗಿ ಹುಡುಕಾಡಿದಾಗ ಆರೋಪಿ ಮಹಿಳೆಯ ಮನೆಯಲ್ಲಿ ಗಾಯಗೊಂಡು ಬಿದ್ದಿರೋದನ್ನ ನೋಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಬಾಲಕನನ್ನ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

    ಸದ್ಯ ಪೊಲೀಸರು ಆರೋಪಿ ಮಹಿಳೆಯನ್ನ ಬಂಧಿಸಿದ್ದಾರೆ.

  • 10ರೂ. ಹೆಚ್ಚು ಪಡೆದಿದ್ದಕ್ಕೆ ಮದ್ಯ ಮಾರಾಟಗಾರ, ಗ್ರಾಹಕರ ಮಧ್ಯೆ ಜಗಳ

    10ರೂ. ಹೆಚ್ಚು ಪಡೆದಿದ್ದಕ್ಕೆ ಮದ್ಯ ಮಾರಾಟಗಾರ, ಗ್ರಾಹಕರ ಮಧ್ಯೆ ಜಗಳ

    ಕೊಪ್ಪಳ: ಎಂಆರ್ ಪಿ ದರಕ್ಕಿಂತ ಹೆಚ್ಚಿಗೆ ರೂ. ಪಡೆದು ಮದ್ಯ ಮಾರಾಟ ಮಾಡಿದ್ದಕ್ಕೆ ಗ್ರಾಹಕರು ಹಾಗೂ ಮಾರಾಟಗಾರ ನಡುವೆ ಮಾತಿನ ಚಕಮಕಿಯಾಗಿರೋ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

    ಇಲ್ಲಿನ ಜುಲಾಯ್ ನಗರದಲ್ಲಿರೋ ಸರಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮಳಿಗೆಯಲ್ಲಿ ಎಂಆರ್ ಪಿ ದರಕ್ಕಿಂತ 10 ರೂಪಾಯಿ ಹೆಚ್ಚಿಗೆ ಪಡೆದಿದ್ದಾರೆ. ಆಗ ಗ್ರಾಹಕರು ನೀವು ಎಂಆರ್ ಪಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಬೋರ್ಡ್ ಹಾಕಿದ್ದೀರಿ ಅಂತ ಜಗಳ ಆರಂಭಿಸಿದ್ದಾರೆ.

    ಆದ್ರೆ ಎಂಆರ್ ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿದ್ದೀರಿ ಎಂದಾಗ ಮಳಿಗೆಯ ಮಾರಾಟಗಾರ ಶಾಸಕ ಇಕ್ಬಾಲ್ ಅನ್ಸಾರಿ, ಸಿಎಲ್ 2 ಮದ್ಯದಂಗಡಿಯಲ್ಲಿ ಎಂಆರ್ ಪಿ ದರಕ್ಕಿಂತ 40 ರೂಪಾಯಿ ಹೆಚ್ಚಿಗೆ ಕೊಟ್ಟು ಕುಡಿಯುತ್ತೀರಿ.ನಮಗೆ 10 ರೂಪಾಯಿ ಕೊಡೋಕೆ ಕಿರಿಕ್ ಮಾಡುತ್ತೀರಿ ಎಂದು ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆ ಕೂಡಾ ನಡೆದಿದೆ. ಬಳಿಕ ಗ್ರಾಹಕರು ಅಂಗಡಿ ಬಂದ್ ಮಾಡಿಸಿದ್ದಾರೆ.

  • ಸ್ನೇಹಿತರ ಮಧ್ಯೆ ಜಗಳವಾಗಿ ಕೊನೆಗೆ ಎದೆಗೆ ಚಾಕು ಹಾಕಿದ್ರು!

    ಸ್ನೇಹಿತರ ಮಧ್ಯೆ ಜಗಳವಾಗಿ ಕೊನೆಗೆ ಎದೆಗೆ ಚಾಕು ಹಾಕಿದ್ರು!

    ಮಂಡ್ಯ: ವ್ಯಕ್ತಿಯೊಬ್ಬನ ಮೇಲೆ ಚಾಕುವಿನಿಂದ ಇರಿದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಲಾಪುರ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.

    ಬೆಂಗಳೂರು ಮೂಲದ 38 ವರ್ಷದ ಲೋಕೇಶ್ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಲೋಕೇಶ್ ಬೆಂಗಳೂರಿನಿಂದ ಸ್ನೇಹಿತರ ಜೊತೆ ನಾಗಮಂಗಲಕ್ಕೆ ಹೋಗುತ್ತಿದ್ದರು. ಈ ವೇಳೆ ಸ್ನೇಹಿತರ ನಡುವೆಯೇ ಗಲಾಟೆಯಾಗಿ ಎದೆಗೆ ಚಾಕು ಹಾಕಿದ್ದಾರೆ.

    ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಲೋಕೇಶ್ ಅವರನ್ನು ಮಂಡ್ಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಣ ಹಂಚಿಕೆ ವಿಷಯವೇ ಗಲಾಟೆಗೆ ಕಾರಣ ಎಂದು ಶಂಕೆ ವ್ಯಕ್ತವಾಗಿದೆ. ಲೋಕೇಶ್ ಮತ್ತು ಜೊತೆಯಲ್ಲಿದ್ದ ಗೆಳೆಯರು ಈ ಹಿಂದೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

    ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಅಪ್ಪ ಅಮ್ಮನ ಜಗಳದಲ್ಲಿ ಮಗಳಿಗೆ ಬಿತ್ತು ಮಚ್ಚಿನೇಟು

    ಅಪ್ಪ ಅಮ್ಮನ ಜಗಳದಲ್ಲಿ ಮಗಳಿಗೆ ಬಿತ್ತು ಮಚ್ಚಿನೇಟು

    ತುಮಕೂರು: ಅಪ್ಪ ಅಮ್ಮನ ಜಗಳವನ್ನು ಬಿಡಿಸಲು ಹೋದ ಮಗಳಿಗೆ ಅಪ್ಪನಿಂದಲೇ ಮಚ್ಚಿನೇಟು ಬಿದ್ದಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಪಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    12 ವರ್ಷದ ಬೃಂದಾ ತೀವ್ರವಾಗಿ ಗಾಯಗೊಂಡಿರುವ ಮಗಳು. ಅಪ್ಪ ಅಮ್ಮನ ಜಗಳ ಬಿಡಿಸಲು ಹೋದಾಗ ಬೃಂದಾ ತಲೆಗೆ ಏಟು ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.

    ಗ್ರಾಮದ ನಿವಾಸಿ ನಾಗರಾಜ್ ಹಾಗೂ ಪತ್ನಿ ಶಾಂತಮ್ಮ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಜಗಳ ಆರಂಭವಾಗಿದೆ. ಹೆಂಡತಿಯ ವರ್ತನೆಯಿಂದ ತೀವ್ರ ಆಕ್ರೋಶಗೂಂಡ ನಾಗರಾಜ್ ಅಲ್ಲೇ ಪಕ್ಕದಲ್ಲಿದ್ದ ಮಚ್ಚಿನಿಂದ ಹೊಡೆಯಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಹತ್ತಿರವಿದ್ದ ಬೃಂದಾ ಅಡ್ಡ ಬಂದಿದ್ದಾಳೆ. ಪತ್ನಿಗೆ ಬೀಸಿದ ಮಚ್ಚು ನೇರವಾಗಿ ಮಗಳ ತಲೆಗೆ ಬಂದು ಬಿದ್ದಿದ್ದೆ. ಪರಿಣಾಮ ಬೃಂದಾ ಗಂಭೀರವಾಗಿ ಗಾಯಗೂಂಡಿದ್ದಾಳೆ.

    ಕೂಡಲೇ ಅಕ್ಕ ಪಕ್ಕದ ಮನೆಯವರು ಬಂದು ಬಾಲಕಿಯನ್ನ ಸಮೀಪದ ಚೇಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ನಂತರ ಬೆಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿ ತಂದೆ ನಾಗರಾಜ್‍ನನ್ನು ಚೇಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಬಾರ್‍ನಲ್ಲಿ ಗಲಾಟೆ-ಗೆಳೆಯನನ್ನು ರಕ್ಷಿಸಲು ಹೋಗಿ ಯುವಕ ದುರ್ಮರಣ

    ಬಾರ್‍ನಲ್ಲಿ ಗಲಾಟೆ-ಗೆಳೆಯನನ್ನು ರಕ್ಷಿಸಲು ಹೋಗಿ ಯುವಕ ದುರ್ಮರಣ

    ಥಾಣೆ: ಬಾರ್ ಗಲಾಟೆಯಲ್ಲಿ ತನ್ನ ಗೆಳೆಯನನ್ನು ರಕ್ಷಿಸಲು ಹೋಗಿ 26 ವರ್ಷದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ.

    ಥಾಣೆಯ ಮಿರಾ ರಸ್ತೆಯಲ್ಲಿರೋ ಬಾರ್ ಸಮೀಪ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಯುವಕನನ್ನು 26 ವರ್ಷದ ನೊವೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?: ದಾಹಿಸರ್ ಪೂರ್ವದ ಅನುಪಮ್ ಬಿಲ್ಡಿಂಗ್ ನಿವಾಸಿಯಾದ ನೊವೇಶ್ ಗುರುವಾರ ರಾತ್ರಿ ತನ್ನ ಗೆಳೆಯರಾದ ನಿಖಿಲ್ ಹಾಗೂ ನೀಲೆಶ್‍ರೊಂದಿಗೆ ಮೀರಾ ರೋಡ್‍ನ ಬಾರ್‍ಗೆ ಬಂದು ಮತ್ತೊಬ್ಬ ಗೆಳೆಯನಿಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಹೊರಗಡೆ ಏನೋ ಜಗಳವಾಗ್ತಿರೋದು ಕೇಳಿಸಿತ್ತು. ಆಗ ಈ ಮೂವರು ಅಲ್ಲಿಗೆ ಹೋಗಿ ನೋಡಿದಾಗ ಅವರ ಗೆಳೆಯ ಕಾರ್ತಿಕ್, ಆರೋಪಿ ಸುಜಿತ್ ಮಿಶ್ರಾ ಹಾಗೂ ಮತ್ತಿಬ್ಬರೊಂದಿಗೆ ಜೋರಾಗಿ ವಾಗ್ವಾದ ನಡೆಸುತ್ತಿದ್ದ.

    ಈ ನಡುವೆ ನೊವೇಶ್ ಶೆಟ್ಟಿ ಗೆಳೆಯನ ಜಗಳ ಬಿಡಿಸಲೆಂದು ಮಧ್ಯೆ ಹೋಗಿದ್ದ. ಆಗ ಸುಜಿತ್ ನೊವೇಶ್‍ನನ್ನು ತಳ್ಳಿದ್ದಾನೆ. ಇದರಿಂದ ಸಿಟ್ಟುಗೊಂಡ ನೊವೇಶ್‍ನ ಗೆಳೆಯ ನಿಖಿಲ್ ಸುಜಿತ್ ಗೆ ಹೊಡೆದಿದ್ದಾನೆ.

    ನಂತರ ಜಗಳ ತಾರಕಕ್ಕೇರಿದ್ದು, ಕಾರ್ತಿಕ್‍ನನ್ನು ಸುಜಿತ್ ನಿಂದಿಸಿದ್ದಾನೆ. ಬಳಿಕ ಕಾರ್ತಿಕ್ ಹತ್ತಿರದ ಪೆಟ್ರೋಲ್ ಬಂಕ್‍ನ ಕಿಟಕಿ ಗಾಜಿನ ಮೇಲೆ ಬಿದ್ದಿದ್ದಾನೆ. ಈ ವೇಳೆ ಸುಜಿತ್ ಗಾಜಿನ ಪೀಸ್ ತೆಗೆದುಕೊಂಡು ನಿಖಿಲ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹಲ್ಲೆಯನ್ನು ತಡೆಯಲು ನೊವೇಶ್ ಅಡ್ಡ ಬಂದಿದ್ದು, ಗಾಜಿನ ಪೀಸ್ ಆತನ ಕುತ್ತಿಗೆಗೆ ಇರಿದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನನಪ್ಪಿದ್ದಾನೆ.

    ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ನೊವೇಶ್ ಮೂರು ದಿನಗಳ ಹಿಂದೆಯಷ್ಟೇ ಮುಂಬೈಗೆ ತೆರಳಿದ್ದ ಅಂತ ಪೊಲೀಸ್ ಮೂಲಗಳು ತಿಳಿಸಿವೆ.

    ಸದ್ಯ ನೊವೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದೇವೆ ಅಂತ ಕಾಶಿಮಿರಾ ಪೊಲೀಸ್ ಠಾಣೆಯ ಎಸ್‍ಐ ಸುರೇಶ್ ಖೆಡೆಕರ್ ಹೇಳಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಿಖಿಲ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.