ಚಿಕ್ಕೋಡಿ: ಹಣಕಾಸಿನ ವಿಚಾರವಾಗಿ ನಡುರಸ್ತೆಯಲ್ಲೇ ಇಬ್ಬರು ಮಹಿಳೆಯರು ಕೂಡಿ ಓರ್ವ ಮಹಿಳೆಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಅಥಣಿ ಪಟ್ಟಣದ ಮುಖ್ಯ ರಸ್ತೆಯಲ್ಲಿಯೇ ಸಾರ್ವಜನಿಕವಾಗಿ ರಸ್ತೆಯ ಮೇಲೆ ಎಳೆದುಕೊಂಡು ಹೋಗಿ ಚಪ್ಪಲಿಯಿಂದ ಇಬ್ಬರು ಮಹಿಳೆಯರು ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ವೈಯಕ್ತಿಕ ಕಾರಣ ಹಾಗೂ ಹಣಕಾಸಿನ ವ್ಯವಹಾರಕ್ಕೆ ಹೀಗೆ ಮಹಿಳೆಯನ್ನ ಥಳಿಸಲಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ಯಾವುದೇ ದೂರು ದಾಖಾಲಾಗದ ಕಾರಣ ಹಲ್ಲೆ ಮಾಡಿದವರ ಹಾಗೂ ಹಲ್ಲೆಗೊಳಗಾದ ಮಹಿಳೆಯರು ಪತ್ತೆಯಾಗಿಲ್ಲ. ಆದರೂ ಅಥಣಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ದೊಡ್ಡಬಳ್ಳಾಪುರ: ಬೈಕ್ ವಿಚಾರದಲ್ಲಿ ಉಂಟಾದ ಜಗಳವೊಂದರಲ್ಲಿ 21 ವರ್ಷದ ಯುವಕನೊರ್ವ, ಮತ್ತೊಬ್ಬ 21 ವರ್ಷದ ಯುವಕನ ತಲೆ ಕಡಿದು ಪೊಲೀಸ್ ಠಾಣೆಗೆ ಬರಲು ಯತ್ನಿಸಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.
ನಗರದ ಉಪೇಂದ್ರ ಕೊಲೆಯಾಗಿದ್ದು, ರೌಡಿಶೀಟರ್ ಪವನ್ ತಲೆ ಕಡಿದಿದ್ದು ಈಗ ಅರೆಸ್ಟ್ ಆಗಿದ್ದಾನೆ. ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಶ್ರೀರಾಮದೇವಸ್ಥಾನ ಬಳಿ ಜೂನ್ 1 ರಂದು ಅಪರಿಚಿತ ವ್ಯಕ್ತಿಯ ರುಂಡ ಪತ್ತೆಯಾಗಿತ್ತು. ಪ್ರಕರಣದ ತನಿಖೆಗಿಳಿದ ದೊಡ್ಡಬಳ್ಳಾಪುರ ಪೊಲೀಸರಿಗೆ ಪತ್ತೆಯಾದ ರುಂಡ ನಗರದ ಉಪೇಂದ್ರ ನದು ಎಂಬುದು ಅವರ ತಂದೆಯ ಮೂಲಕ ಗೊತ್ತಾಗಿತ್ತು.
ಮೊದ ಮೊದಲು ರೈಲ್ವೆ ಹಳಿಗಳ ಕೂಗಳತೆ ದೂರದಲ್ಲಿ ರುಂಡ ಪತ್ತೆಯಾದ ಕಾರಣ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಅಂತಲೇ ಅಂದಾಜಿಸಿದ್ದರು. ಆದ್ರೆ ರುಂಡ ಪತ್ತೆಯಾಗಿ ಮುಂಡಕ್ಕಾಗಿ ರೈಲ್ವೇ ಹಳಿಗಳ ಅಕ್ಕ-ಪಕ್ಕ ಹುಡುಕಾಟ ನಡೆಸಿದ್ರೂ ಮುಂಡ ಪತ್ತೆಯಾಗಿರಲಿಲ್ಲ. ಇದ್ರಿಂದ ಅನುಮಾನಗೊಂಡ ಪೊಲೀಸರು ಪ್ರಕರಣದ ತನಿಖೆಯ ದಿಕ್ಕನ್ನ ಬದಲಿಸಿದ್ದರು.
ಕೊಲೆಯಾದ ಉಪೇಂದ್ರ
ಕೊಲೆಗೆ ಕಾರಣ ಏನು?
ಬೆಂಗಳೂರಿನಿಂದ ದೊಡ್ಡಬಳ್ಳಾಪುರ ಕ್ಕೆ ಆಗಮಿಸಿದ್ದ ಸ್ನೇಹಿತ ಯೋಗಿಯ ಬೈಕ್ ನ್ನ ಪವನ್ ಪಡೆದುಕೊಂಡಿದ್ದ. ಆದ್ರೆ ಈ ಬೈಕ್ ಮೇಲೆ ಕಣ್ಣು ಹಾಕಿದ ಆಶೋಕ್ ಪವನ್ ಬಳಿಯಿದ್ದ ಬೈಕ್ ನ್ನ ಚಾಕು ತೋರಿಸಿ ಬೆದರಿಸಿ ಕಸಿದುಕೊಂಡಿದ್ದ. ಹೀಗಾಗಿ ಪವನ್- ಆಶೋಕ್ ನಡುವೆ ಜಗಳ ಶುರುವಾಗಿತ್ತು. ಮತ್ತೊಂದೆಡೆ ಮಾರನೇ ದಿನ ಬೈಕ್ ಮಾಲೀಕ ಯೋಗಿ ಹಾಗೂ ಪವನ್, ಅತನ ಸ್ನೇಹಿತರು ಸೇರಿ ಅಶೋಕ್ ನ ಮನೆ ಮುಂದಿದ್ದ ಆತನ ಸ್ವಂತ ಬೈಕ್ ನ್ನ ಸುಟ್ಟು ಹಾಕಿದ್ರು.
ಕೊನೆಗೆ ಆಶೋಕ್ ನ ಬಳಿ ಕಸಿದುಕೊಂಡ ಬೈಕ್ ಕೊಡುವಂತೆ ಪಟ್ಟು ಹಿಡಿದು ಗಲಾಟೆ ನಡೆಸಿದ್ರು. ಇದಲ್ಲದೆ ಅಶೋಕ್ ತಂಗಿ ಹಾಗೂ ಪವನ್ ನಡುವೆ ಪ್ರೇಮಾಂಕುರವಾಗಿ ಆ ವಿಚಾರದಲ್ಲಿ ಮೊದಲೇ ಅಶೋಕ್-ಪವನ್ ನಡುವೆ ದ್ವೇಷ ಏರ್ಪಟ್ಟಿತ್ತು. ಇದ್ರಿಂದ ಇಬ್ಬರ ನಡುವೆ ದ್ವೇಷ ಬೈಕ್ ಜಗಳದಿಂದ ಮತ್ತೆ ಕೆರಳಿ ಕೊನೆಗೆ ಇಬ್ಬರ ಪರಸ್ಪರ ರನ್ನ ಕೊಲೆ ಮಾಡೋಕೆ ಪ್ಲಾನ್ ಮಾಡಿದ್ರು. ಆದ್ರೆ ಇದರ ಮಧ್ಯೆ ಅಶೋಕ್ ಸ್ನೇಹಿತ ಉಪೇಂದ್ರನೇ ತನ್ನ ಮಾಹಿತಿ ಆಶೋಕ್ ನಿಗೆ ಕೊಡ್ತಿದ್ದಾನೆ ಅಂತ ಉಪೇಂದ್ರನನ್ನು ಪವನ್ ಮೊದಲು ಟಾರ್ಗೆಟ್ ಮಾಡಿದ್ದ.
ಕೊಲೆ ಮಾಡಿದ ಪವನ್
ಈ ಮಧ್ಯೆ ಮಧ್ಯದಾರೀಲಿ ಸಿಕ್ಕ ಉಪೇಂದ್ರ ನನ್ನ ನಾಗರಕರೆಗೆ ಕರೆದುಕೊಂಡ ಹೋದ ಪವನ್, ಮೊದಲು ಅವನ ಬಟ್ಟೆ ಬಿಚ್ಚಿಸಿದ್ದಾನೆ. ಕೊನೆಗೆ ತಾನು ಬಟ್ಟೆ ಬಿಚ್ಚಿ ಎದುರು ನಿಲ್ತಾನೆ. ಮೊದಲೇ ಪ್ಲಾನ್ ನಂತೆ ಕೆರೆಯಲ್ಲಿ ಇಟ್ಟಿದ್ದ ಲಾಂಗ್ ಉಪೇಂದ್ರ ನಿಗೆ ಕೊಟ್ಟು ಕೊಲೆ ಮಾಡೊಕೆ ಹೇಳ್ತಾನೆ. ಅದ್ರೆ ಉಪೇಂದ್ರ ನಿರಾಕರಿಸಿದಾಗ ಕೊಡು ನಾನು ಮಾಡ್ತೀನಿ ಅಂತ ಲಾಂಗ್ ತಗೊಂಡು ಒಂದೇ ಏಟಿಗೆ ಉಪೇಂದ್ರ ನ ತಲೆ ಕತ್ತರಿಸುತ್ತಾನೆ. ತದನಂತರ ಲಾಂಗ್ ನಿಂದ ಉಪೇಂದ್ರ ನ ರುಂಡ-ಮುಂಡ ಬೇರ್ಪಡಿಸಿ, ಮುಂಡವನ್ನ ಅಲ್ಲೇ ಕೆರೆಯಲ್ಲಿ ಹೂತು ಹಾಕ್ತಾನೆ.
ರುಂಡವನ್ನ ಚೀಲದಲ್ಲಿ ಹಾಕಿಕೊಂಡು ಕೈಯಲ್ಲಿ ಹಿಡಿದು ಪೊಲೀಸ್ ಠಾಣೆ ಕಡೆಗೆ ಹೆಜ್ಜೆ ಹಾಕಿದ್ದಾನೆ. ಅಷ್ಟರಲ್ಲೇ ಮತ್ತೊಂದಡೆ ಪವನ್ ಕೊಲೆ ಮಾಡೋಕೆ ಅಂತ ಪವನ್ ನನ್ನ ಹುಡುಕಾಡ್ತಿದ್ದ ಆಶೋಕ್ ಗೆ ಪವನ್ ಸಿಕ್ಕಿಬಿದ್ದಿದ್ದ. ಸ್ಮಶಾನ ಕ್ಕೆ ಕರೆದುಕೊಂಡು ಹೋಗಿ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿ ತಲೆ ಯ ಮೇಲೆ ಕಲ್ಲು ಎತ್ತಿ ಹಾಕಿದ್ದ. ಆದ್ರೆ ಪವನ್ ನನ್ನ ಮರ್ಡರ್ ಮಾಡೋಕೆ ಕರೆದುಕೊಂಡು ಹೋಗಿರುವ ವಿಷಯ ತಿಳಿದು ಪವನ್ ತಂದೆ ಸ್ಮಶಾನದ ಬಳಿ ಹೋಗಿದ್ದಾರೆ. ಇದನ್ನ ಕಂಡ ಅಶೋಕ್ ಹಾಗೂ ಸಹಚರರು ಪರಾರಿಯಾಗಿ ಪವನ್ ಬದುಕುಳಿದಿದ್ದ. ಕೊನೆಗೆ ಹೋಗಿ ತನ್ನ ಮೇಲಿನ ಕೊಲೆ ಪ್ರಕರಣವನ್ನ ಪೊಲೀಸರಿಗೆ ತಿಳಿಸಿದ್ದ. ಆದ್ರೆ ತಾನು ಮಾಡಿದ್ದ ಉಪೇಂದ್ರನ ಕೊಲೆ ವಿಷಯ ಮುಚ್ಚಿಟ್ಟಿದ್ದ.
ಪ್ರಕರಣ ಭೇದಿಸಿದ್ದು ಹೇಗೆ?
ಏಪ್ರಿಲ್ 30 ರಂದು ಬಿಸಾಡಿದ್ದ ರುಂಡ, ಜೂನ್ 1 ರಂದು ಪತ್ತೆಯಾಗಿತ್ತು. ಮಗ ಕಾಣೆಯಾಗಿದ್ದ ಹಿನ್ನಲೆಯಲ್ಲಿ ರುಂಡ ಪತ್ತೆಯಾದ ವಿಷಯ ತಿಳಿದು ಮೃತ ಉಪೇಂದ್ರ ತಂದೆ ಪೊಲೀಸ್ ಠಾಣೆಗೆ ಬಂದು ಫೋಟೋ ಮೂಲಕ ತನ್ನ ಮಗನದ್ದೇ ರುಂಡ ಅಂತ ಗುರ್ತಿಸಿದ್ದ. ಇನ್ನೂ ತನ್ನ ಮಗನನ್ನ ಪವನ್ ಕರೆದುಕೊಂಡು ಹೋಗಿದ್ದ ಅನ್ನೋ ಮಾಹಿತಿಯನ್ನ ಪೊಲೀಸರಿಗೂ ನೀಡಿದ್ದ. ಇದೇ ಅನುಮಾನದ ಮೇಲೆ ಪವನ್ ಕರೆಸಿ ಬೆಂಡೆತ್ತಿದ್ದ ಪೊಲೀಸರಿಗೆ ಗೊತ್ತಾಗಿದ್ದು ಈ ಒಂದು ಬೈಕ್ ಮರ್ಡರ್ ನ ಕ್ರೈಂ ಕಹಾನಿ.
ಸದ್ಯ ಪವನ್, ಅಶೋಕ್ ಸೇರಿದಂತೆ ಐವರು ಸಹಚರರನ್ನ ಬಂಧಿಸಿರುವ ಪೊಲೀಸರು ಘಟನೆಗೆಲ್ಲಾ ಕಾರಣವಾದ ಬೈಕ್ ಜಪ್ತಿ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಸಿ ಕಾರ್ಯಾಚರಣೆ ನಡೆಸಿದ ದೊಡ್ಡಬಳ್ಳಾಪುರ ಸಿಪಿಐ ಸಿದ್ದರಾಜು ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಭೀಮಾಶಂಕರ್ ಗುಳೇದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೀಜಿಂಗ್: ಇಬ್ಬರೂ ಮಹಿಳೆಯರು ತಮ್ಮ ಗಂಡನಿಗಾಗಿ ಕೂದಲು ಹಿಡಿದುಕೊಂಡು ಹೊಡೆದಾಡಿಕೊಂಡ ಘಟನೆ ಚೀನಾದ ಹ್ಯಾಂಝ್ಹೊಂಗ್ ನಲ್ಲಿ ನಡೆದಿದೆ. ಇಬ್ಬರೂ ಪತ್ನಿಯರು ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಹಿಂದೆಯೂ ನಾನು ನನ್ನ ಕುಟುಂಬ ಮತ್ತು ಗಂಡನಿಂದ ದೂರ ಹೋಗು ಅಂತಾ ಎಚ್ಚರಿಕೆ ನೀಡಿದ್ದೆ ಎಂದು ಜೋರು ಜೋರಾಗಿ ಕಿರುಚುತ್ತಾ ಕೂದಲು ಹಿಡಿದು ಎಳೆದಾಡಿದ್ದಾರೆ. ಈ ಘಟನೆ ನಗರದ ನಡುರಸ್ತೆಯಲ್ಲೆ ನಡೆದಿದ್ದು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಎಲ್ಲ ದೃಶ್ಯಗಳನ್ನು ಸೆರೆಹಿಡಿದುಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ: ಬರಿಗಾಲಿನಲ್ಲಿರುವ ಮಹಿಳೆ ತನ್ನ ಪತಿಯ ಗರ್ಲ್ ಫ್ರೆಂಡ್‍ಳನ್ನು ಮಾರುಕಟ್ಟೆಯಲ್ಲಿ ಭೇಟಿಯಾಗಿದ್ದಾಳೆ. ಕೂಡಲೇ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಪತಿಯ ಗರ್ಲ್ ಫ್ರೆಂಡ್ ಹೈ ಹೀಲ್ ಸ್ಯಾಂಡಲ್ ಹಾಕಿದ್ದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೂ ಆಗಿಲ್ಲ. ಕೂಡಲೇ ಮಹಿಳೆ ಪತಿಯ ಗರ್ಲ್ ಫ್ರೆಂಡ್ ಕೂದಲು ಹಿಡಿದು ಎಳೆದಾಡಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿದ ಪತಿ ತನ್ನ ಪತ್ನಿಗೆ ಆಕೆಯ ಹಲ್ಲೆ ಮಾಡಬೇಡವೆಂದು ಆದೇಶಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಮತ್ತೊಬ್ಬ ಮಹಿಳೆ `ಏ ನೀನು ಮಾಡಿದ್ದು ತಪ್ಪು’ ಅಂತಾ ಬೈದಿದ್ದಾರೆ. ಕೊನೆಗೆ ಇಬ್ಬರ ಜಗಳವನ್ನು ಬಿಡಿಸಲು ಪತಿ ಸುಸ್ತಾಗಿದ್ದಾನೆ. ಕೊನೆಗೆ ಮಹಿಳೆ ಮೊದಲು ನನಗೆ ವಿಚ್ಛೇದನ ನೀಡಿ ಆನಂತರ ಮಾತನಾಡು ಅಂತಾ ಹೇಳಿ ಹೊರಟು ಹೋಗಿದ್ದಾಳೆ.
ಜಮ್‍ಶೇಡ್‍ಪುರ್: ಪೋಷಕರು ಜಗಳವಾಡುವುದನ್ನು ನೋಡಿ ಅವರನ್ನು ತಡೆಯಲು ಹೋದ ಮಗನನ್ನು ತಂದೆಯೇ ಕೊಲೆ ಮಾಡಿದ ಘಟನೆ ಜಾರ್ಖಂಡ್‍ನ ಜಮ್‍ಶೇಡ್‍ಪುರ್ ನಲ್ಲಿ ನಡೆದಿದೆ.
ಗೋವಿಂದೋ ಮುಂಡಾ ಮಗನನ್ನೇ ಕೊಂದ ಆರೋಪಿ ತಂದೆ. ಗೋವಿಂದೋ ತನ್ನ ಪತ್ನಿ ಜೊತೆ ಜಗಳವಾಡುತ್ತಿದ್ದನು. ಆಗ ಬಾಲಕ ಜಗಳವಾಡಬೇಡಿ ಎಂದು ಅವರ ಜಗಳದಲ್ಲಿ ಮಧ್ಯೆ ಪ್ರವೇಶಿಸಿದ್ದನು.
ಇದರಿಂದ ಕೋಪಗೊಂಡ ಗೋವಿಂದೋ ತನ್ನ ಮಗನನ್ನು ತಮುಕ್‍ಪಾಲ್ ಗ್ರಾಮದಲ್ಲಿ ಕಲ್ಲಿನಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗನನ್ನು ಕೊಂದಿದ್ದಕ್ಕೆ ಗ್ರಾಮಸ್ಥರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಶಿವಮೊಗ್ಗ: ಎರಡು ಕುಟುಂಬಗಳ ಜಮೀನು ವಿವಾದದ ದ್ವೇಷಕ್ಕೆ ಕಾಲೇಜು ವಿದ್ಯಾರ್ಥಿ ಬಲಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಅಭಿಷೇಕ್(19) ಬಲಿಯಾದ ವಿದ್ಯಾರ್ಥಿ. ಅಭಿಷೇಕ್ ಪ್ರಥಮ ಬಿಕಾಂ ಪರೀಕ್ಷೆ ಬರೆಯಲು ಹೋದಾಗ ಮತ್ತೊಂದು ಕುಟುಂಬ ಆತನಿಗೆ ಬಲವಂತವಾಗಿ ವಿಷ ಪ್ರಾಷಣ ಮಾಡಿಸಲಾಗಿದೆ ಎಂದು ದೂರಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಅಭಿಷೇಕ್ ಕಾಲೇಜು ಪರೀಕ್ಷೆ ಮುಗಿಸಿಕೊಂಡು ಬರುವಾಗ ಆರೋಪಿಗಳು ಆತನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು.
ಕಾರಿನಲ್ಲಿಯೇ ವಿಷ ಕುಡಿಸಿ ತದ ನಂತರ ಶಿವಮೊಗ್ಗದ ವಿದ್ಯಾನಗರ ಬಳಿ ರೈಲ್ವೇ ಟ್ರಾಕ್ ಬಳಿ ಎಸೆದು ಹೋಗಿದ್ದರು. ಸ್ಥಳೀಯರ ಸಹಕಾರದಿಂದ ಆಸ್ಪತ್ರೆ ಸೇರಿದ್ದ ಅಭಿಷೇಕ್ ಸಾಯುವ ಮುನ್ನ ಕೃತ್ಯದ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅಭಿಷೇಕ್ ಸಾವನ್ನಪ್ಪಿದ್ದಾರೆ.
ಆಯನೂರು ಗ್ರಾಮದ ಚನ್ನೇನಹಳ್ಳಿ ಗ್ರಾಮದಲ್ಲಿ ಪೊಲೀಸರು ಜಮಾಯಿಸಿದ್ದು, ಅಹಿತಕರ ಘಟನೆ ನಡೆಯದಂತೆ ಭದ್ರತೆ ವ್ಯವಸ್ಥೆ ಮಾಡಿದ್ದಾರೆ. ರಾಜಾ ನಾಯ್ಕ್ ಮತ್ತು ಮೆಗ್ಯಾ ನಾಯ್ಕ್ ಕುಟುಂಬಗಳ ನಡುವಿನ ಗೋಮಾಳ ಜಮೀನಿಗಾಗಿ ಆಗಾಗ ಜಗಳ, ಹೊಡೆದಾಟ ನಡೆಯುತ್ತಿತ್ತು.
ರಾಜನಾಯ್ಕ ಮಗ ಅಭಿಷೇಕ್. ಕುಟುಂಬದ ಜಗಳದಲ್ಲಿ ಈತನ ಪಾತ್ರವಿಲ್ಲದಿದ್ದರೂ ಮೆಗ್ಯಾ ನಾಯ್ಕ ಪ್ರತಿಕಾರ ತೀರಿಸಿಕೊಳ್ಳಲು ಹೊಂಚುಹಾಕಿದ್ದ ಎನ್ನಲಾಗಿದೆ. ಮೆಗ್ಯಾ ನಾಯ್ಕ್ ಸಹೋದರ ಒಬ್ಯಾ ನಾಯ್ಕ್ , ಪಾಪ ನಾಯ್ಕ್, ನಿರ್ಮಲ ಬಾಯಿ ಹಾಗೂ ಗೀತಾ ಬಾಯಿ ವಿಷ ಪ್ರಾಷಣ ಮಾಡಿಸಿದ ಆರೋಪಕ್ಕೆ ತುತ್ತಾಗಿದ್ದಾರೆ.
ಸದ್ಯ ಓಬ್ಯಾ ನಾಯ್ಕ ನನ್ನು ಕೋಟೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಲಕ್ನೋ: ಅಳಿಯನೊಬ್ಬ ವೇಶ್ಯೆಯನ್ನು ತನ್ನ ಜೊತೆ ಪತ್ನಿಯ ತವರು ಮನೆಗೆ ಕರೆದುಕೊಂಡ ಹೋಗಿ ಒದೆ ತಿಂದ ಘಟನೆ ಬುಧವಾರ ಉತ್ತರ ಪ್ರದೇಶದ ಫಿಲ್‍ಖುವಾದ ಮೊಹಲ್ಲಾ ಸಿದ್ದಿಕಪೂರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೋತ್‍ವಾಲಿದಲ್ಲಿರುವ ಮೊಹೆಲ್ಲಾ ಸಿದ್ದಿಪುರಿ ನಿವಾಸಿಯ ಯುವತಿಗೆ ಮಸೂರಿಯ ಯುವಕನ ಜೊತೆ ಮದುವೆಯಾಗಿತ್ತು. ಇಬ್ಬರ ನಡುವೆ ಒಂದು ಚಿಕ್ಕ ಜಗಳ ನಡೆದಿದೆ. ಇಬ್ಬರ ನಡುವೆ ಆದ ಜಗಳದಿಂದ ಪತ್ನಿ 15 ದಿನಗಳ ಹಿಂದೆ ತನ್ನ ತವರು ಮನೆ ಸೇರಿದ್ದಳು. ಆದರಿಂದ ಪತಿ ತನ್ನ ಪತ್ನಿಯ ತವರು ಮನೆಗೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದನು ಎಂದು ಹೇಳಲಾಗಿದೆ.
ತವರು ಮನೆಗೆ ಬಂದಿದ್ದ ಪತ್ನಿಗೆ ಬುದ್ಧಿ ಕಲಿಸಲು ಪತಿ ತನ್ನ ಜೊತೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ ಪತ್ನಿ ತನ್ನ ಪತಿಯ ಜೊತೆ ವೇಶ್ಯೆಯನ್ನು ನೋಡುತ್ತಿದ್ದಂತೆ ಆತನ ಮೇಲೆ ರೇಗಾಡಿದ್ದಾಳೆ. ಅಲ್ಲದೇ ಆಕೆಯ ತವರು ಮನೆಯವರು ಆತನನ್ನು ಸರಿಯಾಗಿ ಥಳಿಸಿದ್ದಾರೆ. ಥಳಿತಕ್ಕೊಳಕ್ಕಾಗುತ್ತಿದ್ದಂತೆಯೇ ಪತ್ನಿ ಮನೆಯ ನೆರೆಮನೆಯವರು ಬಂದು ಪತಿಯನ್ನು ರಕ್ಷಿಸಿದ್ದಾರೆ.
ಅಳಿಯ ಕುಡಿದ ನಶೆಯಲ್ಲಿ ತನ್ನ ಮಾವನ ಮನೆಗೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದನು. ನಶೆಯಲ್ಲಿ ಇದ್ದ ಅಳಿಯನಿಗೆ ತನ್ನ ಪತ್ನಿ ಅಲ್ಲಿ ಇರುವುದನ್ನು ಮರೆತು ಹೋಗಿದ್ದನು. ಪತಿಯ ಜೊತೆ ವೇಶ್ಯೆಯನ್ನು ನೋಡಿ ಪತ್ನಿ ರೇಗಾಡಿ, ಆಕೆಯ ಮನೆಯವರು ಆತನನ್ನು ಕೋಲಿನಿಂದ ಹೊಡೆದಿದ್ದಾರೆ. ಜೊತೆಗೆ ಆ ವೇಶ್ಯೆಗೂ ಕಪಾಳಮೋಕ್ಷ ಮಾಡಿದ್ದಾರೆ ಎಂಬುದಾಗಿ ವರದಿಯಾಗಿದೆ.
ಘಟನೆಯ ಬಳಿಕ ಗ್ರಾಮಸ್ಥರು ಆತನನ್ನು ರಕ್ಷಿಸಿ ಮಸೂರಿಗೆ ಕಳುಹಿಸಿದ್ದರು. ವೇಶ್ಯೆ ಕೂಡ ಸಮಯ ಸಿಕ್ಕದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾಳೆ. ಪತಿಯ ಈ ವರ್ತನೆಯಿಂದ ಪತ್ನಿ ತನ್ನ ತವರು ಮನೆಯಲ್ಲೇ ಉಳಿದುಕೊಂಡಿದ್ದಾಳೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.
ಕೋಲಾರ: ಗಂಡ-ಹೆಂಡತಿ ನಡುವೆ ಜಗಳ ಆಗಿ ಅದು ಪಂಚಾಯ್ತಿವರೆಗೂ ಹೋಗಿದ್ದಕ್ಕೆ ಮನನೊಂದು ಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ಮಾಲೂರು ಪಟ್ಟಣದ ಜಯ ಕರ್ನಾಟಕ ವೇದಿಕೆ ಕಚೇರಿಯಲ್ಲಿ ನಡೆದಿದೆ.
ನಾಗರಾಜ್ ರಾವ್ ಆತ್ಮಹತ್ಯೆ ಮಾಡಿಕೊಂಡ ಪತಿ. ನಾಗರಾಜ್ ರಾವ್ ಹಾಗೂ ಎರಡನೇ ಪತ್ನಿ ರುಕ್ಮಿಣಿ (ಹೆಸರು ಬದಲಾಯಿಸಲಾಗಿದೆ) ನಡುವೆ ಜಗಳ ನಡೆದಿದೆ. ನಾಗರಾಜರಾವ್ ಇತ್ತೀಚೆಗೆ ಎರಡನೇ ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಶ್ವೇತಾ (ಹೆಸರು ಬದಲಾಯಿಸಲಾಗಿದೆ) ತೀವ್ರ ವಿರೋಧಿಸಿದ್ದರು.
ಜಯ ಕರ್ನಾಟಕ ವೇದಿಕೆ ತಾಲೂಕು ಅಧ್ಯಕ್ಷ ನಾರಾಯಣ ರೆಡ್ಡಿ ಸಮ್ಮುಖದಲ್ಲಿ ನಡೆದ ಪಂಚಾಯ್ತಿಯಲ್ಲಿ ವಿಷ ಕುಡಿದು ಸಾವನ್ನಪ್ಪಿದ್ದಾರೆ.
ಕೊಪ್ಪಳ: ಪತಿ-ಪತ್ನಿ ಜಗಳದ ನಡುವೆ ಕೂಸು ಬಡವವಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಎ.ಪಿ.ಎಮ್.ಸಿ. ಬಳಿ ನಡೆದಿದೆ.
ನೀಲಪ್ಪ ಹಾಗೂ ಸೌಭಾಗ್ಯ ಮಗುವಿನೊಂದಿಗೆ ಗಂಗಾವತಿಯಿಂದ ಹೊರಟಿದ್ದರು. ಬಸ್ ನಲ್ಲಿ ನೀಲಪ್ಪ ಹಾಗೂ ಸೌಭಾಗ್ಯ ಮಧ್ಯೆ ಜಗಳ ನಡೆಯಿತ್ತು. ಸೌಭಾಗ್ಯ ಜಗಳವಾಡಿ ಮಗುವಿನೊಂದಿಗೆ ಬಸ್ಸಿನಿಂದ ಕೆಳಗೆ ಜಿಗಿದಿದ್ದಾಳೆ. ಜಿಗಿದ ನಂತರ ಕೂಡಲೇ ಮಗು ಮೂರ್ಛೆ ಹೋಗಿದ್ದು, ತಂದೆ ನೀಲಪ್ಪ ಮಗುವನ್ನು ಎತ್ತುಕೊಂಡು ಹೋಗಿದ್ದಾರೆ.
ಒಂದು ವರ್ಷದ ಮಗ ಮಂಜುನಾಥ್ ನೊಂದಿಗೆ ನೀಲಪ್ಪ ಕಾಣೆಯಾಗಿದ್ದು, ಗಾಯಗೊಂಡ ಸೌಭಾಗ್ಯಗೆ ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಬಗ್ಗೆ ಬಸ್ ಡ್ರೈವರ್ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಪ್ರೇಯಸಿಯೇ ಪ್ರಿಯಕರನನ್ನು ಕೊಲೆ ಮಾಡಿದ ಅಚ್ಚರಿಯ ಘಟನೆ ನಗರದ ಪೀಣ್ಯದ ಚಿಕ್ಕಬಿದರಕಲ್ಲುವಿನಲ್ಲಿ ನಡೆದಿದೆ.
ರಘು (32) ಕೊಲೆಯಾದ ವ್ಯಕ್ತಿ. ಪ್ರೇಯಸಿ ರೂಪಾ ತನ್ನ ಪ್ರಿಯಕರ ರಘುವನ್ನು ಕೊಲೆ ಮಾಡಿದ್ದಾಳೆ. ರಘು ಬುಧವಾರ ರಾತ್ರಿ ರೂಪಾಳ ಮಗಳ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದನು. ಇದ್ದರಿಂದ ಕೋಪಗೊಂಡು ರೂಪಾ ರಘುವನ್ನು ಕೊಲೆ ಮಾಡಿದ್ದಾಳೆ ಅಂತಾ ಹೇಳಲಾಗ್ತಿದೆ.
ರಘು ಹಾಗೂ ರೂಪಾಳ ಗಂಡ ಪ್ರಭು ಒಂದೇ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಪ್ರಭು ತಿಪಟೂರಿಗೆ ಜಾತ್ರೆಗೆ ತೆರಳಿದ್ದನು. ಪ್ರಭು ಇಲ್ಲದ ಕಾರಣ ಪ್ರಿಯಕರ ರಘು ರಾತ್ರಿ ರೂಪಾಳ ಮನೆಗೆ ಬಂದಿದ್ದನು. ಈ ವೇಳೆ ರೂಪಾ ಮತ್ತು ರಘು ಮಧ್ಯೆ ಮಗಳ ವಿಚಾರದಲ್ಲಿ ಜಗಳ ನಡೆದಿದ್ದು, ನಂತರ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ರೂಪಾ ತನ್ನ ಪ್ರಿಯಕರ ರಘುವಿನ ಹೊಟ್ಟೆ, ಕಿವಿ ಹಾಗು ಕತು ಕತ್ತರಿಸಿ ಕೊಲೆ ಮಾಡಿದ್ದಾಳೆ.
ಸದ್ಯ ಪೀಣ್ಯ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸುತ್ತಿದ್ದು, ರೂಪಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಲಾಮಾಬಾದ್: ಪತಿಯೊಬ್ಬ ತನ್ನ ಪತ್ನಿ ಚಿನ್ನದ ಓಲೆ ಕೊಡಲಿಲ್ಲವೆಂದು ಆಕೆಯ ಗುಪ್ತಾಂಗವನ್ನು ಕತ್ತರಿಸಿದ ಘಟನೆ ಪಾಕಿಸ್ತಾನದ ಡೇರಾ ಘಾಸಿಯಲ್ಲಿ ನಡೆದಿದೆ.
ವರದಿಗಳ ಪ್ರಕಾರ ಈ ದಂಪತಿಗೆ ಮಕ್ಕಳಿರಲಿಲ್ಲ. ಈ ಕಾರಣಕ್ಕೆ ಆಗಾಗ ಇವರ ಮಧ್ಯೆ ಜಗಳವಾಗುತ್ತಿತ್ತು. ಆದರೆ ಮಂಗಳವಾರ ಪತಿ ತನ್ನ ಪತ್ನಿಯನ್ನು ಚಿನ್ನದ ಓಲೆಯನ್ನು ಕೇಳಿದ್ದಾನೆ. ಆದರೆ ಆಕೆ ಕೊಡಲು ನಿರಾಕರಿಸಿದ್ದಾಳೆ. ಇದ್ದರಿಂದ ರೊಚ್ಚಿಗೆದ್ದ ಪತಿ ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿ ಹೊಡೆಯಲು ಶುರು ಮಾಡಿದ್ದಾನೆ.
ಪತಿಯ ಹೊಡೆತದಿಂದ ಮಹಿಳೆ ಜೋರಾಗಿ ಅಳುತ್ತಾ, ಕಿರುಚಾಡಲು ಶುರು ಮಾಡಿದ್ದಾಳೆ. ಆಗ ರೂಮಿನ ಹತ್ತಿರದಲ್ಲೇ ಇದ್ದ ಮಹಿಳೆಯ ತಂದೆ ಹಾಗೂ ಆಕೆಯ ಚಿಕ್ಕಪ್ಪ ರೂಮಿನ ಹತ್ತಿರ ಓಡಿ ಬಂದಿದ್ದಾರೆ. ಮಹಿಳೆಯ ತಂದೆ ಹಾಗೂ ಆಕೆಯ ಸಂಬಂಧಿಕರು ಬಾಗಿಲು ತಟ್ಟಿದ್ದರು ಆತ ರೂಮಿನ ಬಾಗಿಲನ್ನು ತೆಗೆಯಲಿಲ್ಲ. ನಂತರ ಎಲ್ಲರೂ ಸೇರಿ ಬಾಗಿಲನ್ನು ಹೊಡೆದಿದ್ದಾರೆ.
ಎಲ್ಲರೂ ರೂಮಿನೊಳಗೆ ಹೋಗಿ ನೋಡಿದ್ದಾಗ ಮಹಿಳೆ ರಕ್ತಸ್ತ್ರಾವದಿಂದ ಪ್ರಜ್ಞೆ ತಪ್ಪಿದ್ದು, ಪತಿ ಆಕೆಯ ಗುಪ್ತಾಂಗವನ್ನೇ ಕತ್ತರಿಸಿದ್ದನು. ನಂತರ ಸಂಬಂಧಿಕರು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಪೊಲೀಸರಿಗೆ ಕರೆ ಮಾಡಿದ್ದರು. ವಿಚಾರಣೆ ವೇಳೆ ಕ್ರೂರಿ ಪತಿ ತನ್ನ ಪತ್ನಿಯ ಗುಪ್ತಾಂಗವನ್ನು ಕತ್ತರಿಸಿದ್ದಾನೆಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಮಹಿಳೆಯ ಕುಟುಂಬಸ್ಥರ ಪ್ರಕಾರ ಈ ಹಿಂದೆ ಪತಿ ತನ್ನ ಪತ್ನಿಯ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದಾನೆ. ಆಕೆಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಆತ ಆಗಾಗ ತನ್ನ ಪತ್ನಿಯ ಜೊತೆ ಜಗಳವಾಡುತ್ತುದ್ದನು ಎಂದು ತಿಳಿಸಿದ್ದಾರೆ.