Tag: ಜಗಳ

  • ಇವ ನನ್ನ ಬಾಯ್ ಫ್ರೆಂಡ್, ಇವ ನನ್ನ ಬಾಯ್ ಫ್ರೆಂಡ್ – ರಸ್ತೆಯಲ್ಲಿಯೇ ಮೂವರು ಹುಡ್ಗೀರ ಜಗಳ

    ಇವ ನನ್ನ ಬಾಯ್ ಫ್ರೆಂಡ್, ಇವ ನನ್ನ ಬಾಯ್ ಫ್ರೆಂಡ್ – ರಸ್ತೆಯಲ್ಲಿಯೇ ಮೂವರು ಹುಡ್ಗೀರ ಜಗಳ

    ಹುಬ್ಬಳ್ಳಿ: ಮೂವರು ಹುಡುಗಿಯರು ಒಬ್ಬ ಬಾಯ್ ಫ್ರೆಂಡ್‍ಗೋಸ್ಕರ ನಡು ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ವಿಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಈ ಗಲಾಟೆ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ ಮುಂಭಾಗದಲ್ಲಿ ನಡೆದಿದೆ ಎನ್ನಲಾಗಿದೆ. ವಿಡಿಯೋದಲ್ಲಿ ರಸ್ತೆಯ ಮೇಲೆ ಒಬ್ಬ ಹುಡುಗನನ್ನು ಮೂವರು ಹುಡುಗಿಯರು ಸುತ್ತುವರಿದಿದ್ದಾರೆ. ಇವ ನನ್ನ ಬಾಯ್ ಫ್ರೆಂಡ್, ಇವ ನನ್ನ ಬಾಯ್ ಫ್ರೆಂಡ್ ಅಂತ ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ?:
    ವಿಡಿಯೋದಲ್ಲಿ ಒಬ್ಬ ಹುಡುಗ ಹುಡುಗಿಯನ್ನು ಕರೆದುಕೊಂಡು ಬರುತ್ತಿದ್ದನು. ಈ ವೇಳೆ ಹಿಂಬದಿಯಿಂದ ಇನ್ನೊಬ್ಬಳು ಬಂದು ಕಾಲಿನಿಂದ ಹುಡುಗಿಗೆ ಒದ್ದಿದ್ದಾಳೆ. ಇದರಿಂದ ಕೋಪಕೊಂಡ ಹುಡುಗಿ ಯುವತಿಯ ಜಡೆ ಹಿಂಡಿದುಕೊಂಡು ನಡುರಸ್ತೆಯಲ್ಲಿಯೇ ಪರಸ್ಪರ ಜಗಳವಾಡಿದ್ದಾರೆ. ಈ ವೇಳೆ ಮತ್ತೊಬ್ಬಳು ಬಂದು ಇಬ್ಬರ ಮೇಲೂ ತನ್ನ ಕಾಲಿನಿಂದ ಒದ್ದಿದ್ದಾಳೆ. ಮೂವರ ಜಗಳ ತಾರಕಕ್ಕೇರುತ್ತಿದ್ದಂತಯೇ ಅಲ್ಲಿದ್ದ ಹುಡುಗ ಗಲಾಟೆ ಬಿಡಿಸಲು ಪ್ರಯತ್ನ ಮಾಡಿದ್ದಾನೆ. ಆದರೆ ಏನು ಪ್ರಯೋಜನವಾಗಿಲ್ಲ. ನಂತರ ಸ್ಥಳದಲ್ಲಿದ್ದವರು ಬಂದು ಬಿಡಿಸಲು ಪ್ರಯತ್ನ ಮಾಡಿದ್ದಾರೆ.

    ಇವರು ಯಾರು? ಯಾಕೆ? ಹೊಡೆದಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿದುಬಂದಿಲ್ಲ. ಆದರೆ ಕಾರಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಮೂವರು ಹುಡುಗಿಯರು ಒಬ್ಬ ಹುಡಗನ ಸುತ್ತುವರಿದು ಹೊಡೆದಾಡುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಕಲೇಶಪುರದ ಪುರಸಭೆ ಮಾಜಿ ಅಧ್ಯಕ್ಷನ ಬಂಧನ, ಬಿಡುಗಡೆ

    ಸಕಲೇಶಪುರದ ಪುರಸಭೆ ಮಾಜಿ ಅಧ್ಯಕ್ಷನ ಬಂಧನ, ಬಿಡುಗಡೆ

    ಹಾಸನ: ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಪಡಿಸಿದ ಆರೋಪದಡಿ ಸಕಲೇಶಪುರದ ಪುರಸಭೆ ಮಾಜಿ ಅಧ್ಯಕ್ಷನನ್ನು ಬಂಧಿಸಲಾಗಿದ್ದು, ಬಳಿಕ ಅವರನ್ನು ಬಿಡುಗಡೆ ಮಾಡಿರುವ ಘಟನೆ ಪಟ್ಟಣದ ಭುವನೇಶ್ವರಿ ರಸ್ತೆಯಲ್ಲಿ ನಡೆದಿದೆ.

    ಸಯ್ಯದ್ ಮುಫಿಜ್ ಬಂಧಿಸಲ್ಪಟ್ಟಿದ್ದ ಪುರಸಭೆ ಮಾಜಿ ಅಧ್ಯಕ್ಷ. ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. 9ನೇ ವಾರ್ಡಿನಿಂದ ಮುಫಿಜ್ ಪತ್ನಿ ಹಾಗೂ ಅದೇ ವಾರ್ಡ್ ನ ದಸ್ತಗಿರಿ ಎಂಬವರ ಪತ್ನಿ ಪುರಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಗೆಲುವು-ಸೋಲಿನ ಲೆಕ್ಕಾಚಾರದ ವೇಳೆ ಇಬ್ಬರ ನಡುವೆ ಆರೋಪ-ಪ್ರತ್ಯಾರೋಪ ಜರುಗಿ ಅದು ವಿಕೋಪಕ್ಕೆ ತಿರುಗಿದೆ. ಹೀಗಾಗಿ ಭಾನುವಾರ ಸಂಜೆ ಪೊಲೀಸರು ನಡುಬೀದಿಯಲ್ಲಿ ಸಯ್ಯದ್ ಮುಫೀಜ್ ಅವರನ್ನು ಹಿಡಿದು ಠಾಣೆಗೆ ಎಳೆದೊಯ್ದಿದ್ದರು.

    ಘಟನೆ ಸಂಬಂಧ 20 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರಮಹಾಲಕ್ಷ್ಮಿ ಪೂಜೆಗೆ ಹೂ ಖರೀದಿಗೆ ಬಂದು ಹಣ್ಣಿನ ವ್ಯಾಪಾರಿ ಜೊತೆಗೆ ಜಗಳ

    ವರಮಹಾಲಕ್ಷ್ಮಿ ಪೂಜೆಗೆ ಹೂ ಖರೀದಿಗೆ ಬಂದು ಹಣ್ಣಿನ ವ್ಯಾಪಾರಿ ಜೊತೆಗೆ ಜಗಳ

    ಚಿಕ್ಕಬಳ್ಳಾಪುರ: ವರಮಹಾಲಕ್ಷ್ಮಿ ಪೂಜೆಗೆ ಹೂ ಖರೀದಿಗೆ ಬಂದಿದ್ದ ವಕೀಲ ಹಾಗೂ ಹಣ್ಣಿನ ವ್ಯಾಪಾರಿ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

    ನಗರದ ಖಾಸಗಿ ಬಸ್ ನಿಲ್ದಾಣದ ರಸ್ತೆ ಬದಿಯ ಹಣ್ಣಿನ ಅಂಗಡಿ ಮುಂದೆ ವಕೀಲ ವೆಂಕಟರಮಣಪ್ಪ ಅವರು ತಮ್ಮ ಬೈಕನ್ನು ನಿಲ್ಲಿಸಿ, ಹೂ ಖರೀದಿಗೆ ತೆರಳುತ್ತಿದ್ದರು. ಆದರೆ ಹಣ್ಣಿನ ವ್ಯಾಪಾರಿ ಇಮ್ರಾನ್ ಅಂಗಡಿ ಮುಂದೆ ಬೈಕ್ ನಿಲ್ಲಿಸಬೇಡಿ ಎಂದು ಖಡಕ್ ಆಗಿಯೇ ಹೇಳಿದ್ದ.

    ಇಮ್ರಾನ್ ಮಾತಿನಿಂದ ಮುಜುಗರಕ್ಕೆ ಒಳಗಾದ ವೆಂಕಟರಮಣಪ್ಪ ವಾಗ್ದಾಳಿ ನಡೆಸಿದರು. ಬಳಿಕ ಮಾತಿಗೆ ಮಾತು ಬೆಳೆದು ಇಬ್ಬರು ಪರಸ್ಪರ ಹಲ್ಲೆ ನಡೆಸಿದ್ದಾರೆ. ವೆಂಕಟರಮಣಪ್ಪ ತಮ್ಮ ಬಳಿ ಇದ್ದ ಹೆಲ್ಮೆಟ್ ತೆಗೆದುಕೊಂಡು ಇಮ್ರಾನ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಆಗ ಪಕ್ಕದ ವ್ಯಾಪಾರಿಗಳು ಹಾಗೂ ಸ್ಥಳೀಯರು ಜಗಳ ಬಿಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಬರ್ಬರ ಕೊಲೆ

    ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಬರ್ಬರ ಕೊಲೆ

    ವಿಜಯಪುರ: ಕ್ಷುಲ್ಲಕ ವಿಚಾರಕ್ಕೆ ಕೊಡಲಿಯಿಂದ ಕೊಚ್ಚಿ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ನಡೆದಿದೆ.

    ಸೋಮನಾಳ ಗ್ರಾಮದ ಗೋಲ್ಲಾಳಪ್ಪ ಸಂಗಣ್ಣ ಹಡಪದ (28) ಕೊಲೆಯಾದ ದುರ್ದೈವಿ. ಶನಿವಾರ ಸಂಜೆ ಅದೇ ಗ್ರಾಮದ ಶಿವಪುತ್ರಪ್ಪ ಮೈಲಾರಪ್ಪ ಮದ್ದರಕಿ ಎಂಬವರ ಜೊತೆ ಕ್ಷುಲ್ಲಕ ವಿಚಾರಕ್ಕೆ ವಾಗ್ವಾದ ನಡೆದಿತ್ತು. ಇದರಿಂದ ಕೋಪಗೊಂಡಿದ್ದ ಶಿವಪುತ್ರಪ್ಪ ಕಂಠಪೂರ್ತಿ ಕುಡಿದು, ಮಧ್ಯರಾತ್ರಿ ಮನೆಯ ಹೊರಗಡೆ ಕಟ್ಟೆಯ ಮೇಲೆ ಮಲಗಿದ್ದ ಗೋಲ್ಲಾಳಪ್ಪನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ತಾಳಿಕೋಟೆ ಸಬ್ ಇನ್ಸ್ ಪೆಕ್ಟರ್ ಜಿ.ಎಸ್. ಬಿರಾದಾರ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಆರೋಪಿ ಶಿವಪುತ್ರಪ್ಪನು ಈ ಹಿಂದೆಯೂ ತನ್ನ ಹೆಂಡತಿಯನ್ನು ಕೊಲೆಮಾಡಿ, ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದನೆಂದು ತಿಳಿಸಿದ್ದಾರೆ. ಪರಾರಿಯಾಗಿರುವ ಶಿವಪುತ್ರಪ್ಪನಿಗಾಗಿ ವ್ಯಾಪಕ ಶೋಧ ನಡೆದಿದ್ದು, ಘಟನೆ ಸಂಬಂಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಹೆಂಡ್ತಿ, ನನ್ನ ಹೆಂಡ್ತಿ – ಆಕೆಗಾಗಿ ಇಬ್ಬರು ಪುರುಷರ ನಡುವೆ ಡಿಶುಂ..ಡಿಶುಂ

    ನನ್ನ ಹೆಂಡ್ತಿ, ನನ್ನ ಹೆಂಡ್ತಿ – ಆಕೆಗಾಗಿ ಇಬ್ಬರು ಪುರುಷರ ನಡುವೆ ಡಿಶುಂ..ಡಿಶುಂ

    ಬೆಂಗಳೂರು: ನನ್ನ ಹೆಂಡತಿ, ನನ್ನ ಹೆಂಡತಿ, ಎಂದು ಇಬ್ಬರು ಪುರುಷರು ಹೆದ್ದಾರಿ ಪಕ್ಕದಲ್ಲಿ ಬಡಿದಾಡಿಕೊಂಡ ವಿಚಿತ್ರ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬಾವಿಕೆರೆ ಕ್ರಾಸ್ ಬಳಿ ನಡೆದಿದೆ.

    ನೆಲಮಂಗಲ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಈ ಘಟನೆ ನಡೆದಿದೆ. ಚಿಕ್ಕಬಿದರಕಲ್ಲು ನಿವಾಸಿ ಮೂರ್ತಿ ಹಾಗೂ ಮತ್ತೊಬ್ಬ ಸಿದ್ದು ಎಂಬವರು ರಕ್ತ ಬರುವ ಹಾಗೆ ಬಡಿದಾಡಿಕೊಂಡಿದ್ದಾರೆ. ಈ ಇಬ್ಬರು ಪುರುಷರು ಒಬ್ಬ ಮಹಿಳೆಗಾಗಿ ನಾನು ಮದುವೆಯಾಗಿರೋದು, ಈಕೆ ನನಗೆ ಸೇರಬೇಕೆಂದು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಗುದ್ದಾಟ ಮಾಡಿದ್ದರಿಂದ ದಾರಿಯಲ್ಲಿ ಹೋಗುವವರು ತಮ್ಮ ಮೊಬೈಲಿನಲ್ಲಿ ಇಬ್ಬರು ಪುರುಷರು ಗುದ್ದಾಟವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆದರೆ ಯಾರು ಸಹ ಜಗಳ ಬಿಡಿಸುವ ಪ್ರಯತ್ನವನ್ನು ಕೂಡ ಮಾಡಿಲ್ಲ.

    ಈ ಬಗ್ಗೆ ಮಹಿಳೆಯನ್ನು ಕೇಳಿದರೆ ಒಮ್ಮೆ ಮೂರ್ತಿಯನ್ನು ಮದುವೆಯಾಗಿದ್ದೇನೆ. ಮತ್ತೊಮ್ಮೆ ಸಿದ್ದುವನ್ನು ಮದುವೆಯಾಗಿದ್ದೇನೆ ಎಂದು ಗೊಂದಲದ ಉತ್ತರವನ್ನು ಕೊಟ್ಟಿದ್ದಾರೆ. ಈಕೆ ಈಗಾಗಲೇ ಪರ ಪುರುಷನೊಂದಿಗೆ ವಿವಾಹವಾಗಿದ್ದು, ವಿಚ್ಛೇದನ ಕೂಡ ಆಗಿದೆ. ಹೀಗಾಗಿ ಇವರಿಬ್ಬರು ಈಕೆಯನ್ನು ಮದುವೆಯಾಗಬೇಕೆಂದು ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸದ್ಯ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪತ್ನಿ ನೇಣು ಹಾಕಿಕೊಳ್ಳುವಾಗ ಲೈವ್ ವಿಡಿಯೋ ಮಾಡಿದ ಪತಿ!

    ಪತ್ನಿ ನೇಣು ಹಾಕಿಕೊಳ್ಳುವಾಗ ಲೈವ್ ವಿಡಿಯೋ ಮಾಡಿದ ಪತಿ!

    ಲಕ್ನೋ: ಗಂಡನ ಮನೆಯವರ ಕಿರುಕುಳ ತಾಳಲಾರದೇ ಪತ್ನಿ ನೇಣಿಗೆ ಶರಣಾಗುತ್ತಿದ್ದಾಗ ಪತಿ ವಿಡಿಯೋ ಮಾಡಿದ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ.

    ಗೀತಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಗೀತಾ 2015ರ ಏಪ್ರಿಲ್ 22ರಂದು ರಾಜ್‍ಕುಮಾರ್ ಜೊತೆ ಮದುವೆಯಾಗಿದ್ದಳು. ಮದುವೆ ಆಗಿ ಕೆಲವು ದಿನಗಳಲ್ಲಿ ಗೀತಾಗೆ ಆಕೆಯ ಪತಿ ಹಾಗೂ ಆತನ ಮನೆಯವರು ಒಂದು ಕಾರನ್ನು ವರದಕ್ಷಿಣೆ ಆಗಿ ನೀಡಬೇಕೆಂದು ಕಿರುಕುಳ ನೀಡುತ್ತಿದ್ದರು. ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಗೀತಾ ಹಾಗೂ ಪತಿ ಮನೆಯವರ ನಡುವೆ ಜಗಳ ಕೂಡ ನಡೆಯುತ್ತಿತ್ತು.

    ಪತಿ ಹಾಗೂ ಆತನ ಮನೆಯವರ ವರದಕ್ಷಿಣೆಯ ಕಿರುಕುಳ ತಾಳಲಾರದೇ ಗೀತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗೀತಾ ಆತ್ಮಹತ್ಯೆಗೆ ಶರಣಾಗುವಾಗ ರಾಜ್‍ಕುಮಾರ್ ಆಕೆಯ ರೂಂ ಹೊರಗೆ ನಿಂತು ಕಿಟಕಿಯಿಂದ ಲೈವ್ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಗೀತಾ ಆತ್ಮಹತ್ಯೆ ಮಾಡಿಕೊಳ್ಳುವಾಗ ಆಕೆಯ ಗಂಡನ ಮನೆಯವರು ಹೊರಗೆ ನಿಂತು ಕಿರುಚಾಡುತ್ತಿದ್ದರೇ ಹೊರತು ಬಾಗಿಲು ಒಡೆಯಲು ಪ್ರಯತ್ನಿಸಲಿಲ್ಲ ಎಂದು ವರದಿಯಾಗಿದೆ.

    ಗೀತಾ ನೇಣಿಗೆ ಶರಣಾಗಿರುವ ವಿಡಿಯೋ 12 ನಿಮಿಷ 14 ಸೆಕೆಂಡ್‍ಗಳಿದೆ. ಈ ವಿಡಿಯೋದಲ್ಲಿ ಆಕೆಯ ಅತ್ತೆ ಹಾಗೂ ನಾದಿನಿ ಪ್ರಮಾಣ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲು ಪ್ರಯತ್ನಿಸಿದ್ದರು. ಆದರೆ ಬಾಗಿಲು ಒಡೆದು ಆಕೆಯನ್ನು ರಕ್ಷಿಸಲು ಯಾರೂ ಮುಂದಾಗಲಿಲ್ಲ. ಪತಿ ವಿಡಿಯೋ ಮಾಡುತ್ತಿರುವುದು ಗಮನಿಸಿದ ಗೀತಾಗೆ ಆತ್ಮಹತ್ಯೆ ಮಾಡಿಕೊಳ್ಳುವುದ್ದಕ್ಕೆ ಪ್ರೇರೆಪಿಸುತ್ತಿತ್ತು.

    ಈ ಘಟನೆ ನಡೆದ ಮೇಲೆ ಪೊಲೀಸರು ಹಾಗೂ ಗೀತಾ ಪೋಷಕರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಗೀತಾ ಪೋಷಕರು ಆಕೆಯ ಪತಿ ಹಾಗೂ ಆತನ ಮನೆಯವರ ಮೇಲೆ ವರದಕ್ಷಿಣೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಕೇಸ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪತಿ ರಾಜ್‍ಕುಮಾರ್ ಹಾಗೂ ಅತ್ತೆ ವಿಮಲಾರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ವಿಡಿಯೋ ವೈರಲ್ ಆದ ಮೇಲೆ ಪೊಲೀಸರು ಮತ್ತೊಮ್ಮೆ ಈ ಕೇಸ್ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

  • ಕುಡಿಯಲು ದುಡ್ಡು ಕೊಡದಕ್ಕೆ ಬೆಂಕಿ ಹಚ್ಚಿಕೊಂಡು ಪತ್ನಿಯನ್ನು ತಬ್ಬಿಕೊಂಡ ಪತಿ

    ಕುಡಿಯಲು ದುಡ್ಡು ಕೊಡದಕ್ಕೆ ಬೆಂಕಿ ಹಚ್ಚಿಕೊಂಡು ಪತ್ನಿಯನ್ನು ತಬ್ಬಿಕೊಂಡ ಪತಿ

    – ಪತಿ ಸಾವು, ಹೆಂಡತಿಯ ಸ್ಥಿತಿ ಗಂಭೀರ

    ತುಮಕೂರು: ಕುಡಿಯಲು ಹಣ ನೀಡಿಲ್ಲವೆಂದು ಕುಡುಕ ಪತಿಯೊಬ್ಬ ತಾನು ಬೆಂಕಿ ಹಚ್ಚಿಕೊಂಡು ಪತ್ನಿಯನ್ನು ತಬ್ಬಿಕೊಂಡ ಘಟನೆಯೊಂದು ಕೊರಟಗರೆ ತಾಲೂಕಿನ ಕರೇ ದುಗ್ಗನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

    ಪತಿ ಲೋಕೇಶ್(40) ಮೃತಪಟ್ಟಿದ್ದು, ಪತ್ನಿ ಮರಿಬಸಮ್ಮ(38) ಸ್ಥಿತಿ ಗಂಭೀರವಾಗಿದೆ. ಪತಿ ಲೋಕೇಶ್ ಕುಡಿಯಲು ಹಣ ಕೊಡುವಂತೆ ಪತ್ನಿಯನ್ನು ನಿತ್ಯ ಪೀಡಿಸುತ್ತಿದ್ದನು. ಹಾಗೆಯೇ ಭಾನುವಾರ ಕೂಡ ಕುಡಿಯೋಕೆ ಪತ್ನಿ ಬಳಿ ಹಣ ಕೇಳಿದ್ದನು. ಪತ್ನಿ ಹಣ ನೀಡಲು ನಿರಾಕರಿಸಿದ್ದಕ್ಕೆ ಲೋಕೇಶ್ ಜಗಳವಾಡಿದ್ದನು.

    ಲೋಕೇಶ್ ಸೀಮೆ ಎಣ್ಣೆ ಸುರಿದುಕೊಂಡು ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿಕ ಉರಿಯುವ ಬೆಂಕಿಯೊಂದಿಗೆ ಪತ್ನಿಯನ್ನು ತಬ್ಬಿಕೊಂಡಿದ್ದಾನೆ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ಮರಿಬಸಮ್ಮಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಸದ್ಯ ಈ ಬಗ್ಗೆ ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ: ಕಸಾಪ ಅಧ್ಯಕ್ಷರನ್ನ ತರಾಟೆ ತಗೆದುಕೊಂಡ ಮಹಿಳಾ ಪದಾಧಿಕಾರಿ

    ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ: ಕಸಾಪ ಅಧ್ಯಕ್ಷರನ್ನ ತರಾಟೆ ತಗೆದುಕೊಂಡ ಮಹಿಳಾ ಪದಾಧಿಕಾರಿ

    ವಿಜಯಪುರ: ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿಲ್ಲ ಅಂತಾ ಕನ್ನಡ ಸಾಹಿತ್ಯ ಪದಾಧಿಕಾರಿಯೊಬ್ಬರು ಅಧ್ಯಕ್ಷ ಹಾಗೂ ಜಿಲ್ಲಾ ಪದಾಧೀಕಾರಿಯನ್ನು ತರಾಟೆಗೆ ತಗೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.

    ಇಂದು ಜಿಲ್ಲಾ ಸಾಹಿತ್ಯ ಪರಿಷತ್‍ನಿಂದ ಇದೇ 22ರಂದು ವಿಜಯಪುರ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸುವರ್ಣಾ ಅವರು, ಆಮಂತ್ರಣ ಪತ್ರಿಕೆಯಲ್ಲಿ ಮತ್ತು ಭಾಷಣದಲ್ಲಿ ತಮ್ಮ ಹೆಸರು ಸೇರಿಸಿಲ್ಲ ಎಂದು ಫುಲ್ ಗರಂ ಆದರು.

    ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಲಿಲ್ಲ ಅಂತಾ ಜಿಲ್ಲಾ ಕಸಾಪ ಪದಾಧಿಕಾರಿ ಲಕ್ಷ್ಮಿ ದೇಸಾಯಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಯಕ್ರಮವನ್ನು ಲೆಕ್ಕಿಸದೆ ಅಶ್ಲೀಲ ಶಬ್ದಗಳಿಂದ ಇಬ್ಬರು ಬಾಯಿಗೆ ಬಂದಂತೆ ನಿಂದಿಸಿಕೊಂಡು ಜಗಳವಾಡಿದರು.

    ಕಾರ್ಯಕ್ರಮದಿಂದ ಹೊರಬಂದ ಸುವರ್ಣ ಅವರು, ಯಾರು ಹಣ ನೀಡತ್ತಾರೆ ಅವರ ಹೆಸರನ್ನು ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂಡಿಗೇರಿ ಆಮಂತ್ರಣ ಪತ್ರಿಕೆಯಲ್ಲಿ ಹಾಕುತ್ತಾರೆ. ನಿಷ್ಠಾವಂತರಿಗೆ ಬೆಲೆ ಕೊಡುವುದಿಲ್ಲ. ಕಸಾಪದಲ್ಲಿ ಹಣ ನೀಡದವರಿಗೆ ಕಿಮ್ಮತ್ತು ಇಲ್ಲ. ನಾನು ಒಬ್ಬ ಶಿಕ್ಷಕಿ ಎಲ್ಲಿಂದ ಹಣ ತಂದು ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    https://youtu.be/vfmkw-7EI20

  • ಕ್ಷುಲ್ಲಕ ವಿಚಾರದಲ್ಲಿ ಪ್ರಾರಂಭವಾದ ಜಗಳ- ಕುಡಿದ ಮತ್ತಿನಲ್ಲಿ ಮಚ್ಚು ಹಿಡಿದು ದಾಂಧಲೆ

    ಕ್ಷುಲ್ಲಕ ವಿಚಾರದಲ್ಲಿ ಪ್ರಾರಂಭವಾದ ಜಗಳ- ಕುಡಿದ ಮತ್ತಿನಲ್ಲಿ ಮಚ್ಚು ಹಿಡಿದು ದಾಂಧಲೆ

    ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಯುವಕ ಕ್ಷುಲಕ ವಿಚಾರಕ್ಕೆ ಜಗಳ ಪ್ರಾರಂಭಿಸಿ ಮಚ್ಚು ಹಿಡಿದು ದಾಂಧಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಚಿಕ್ಕಮಾರನಹಳ್ಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

    ಕುಡಿದ ಮತ್ತಿನಲ್ಲಿ ಸುರೇಶ್ ಹಾಗೂ ಲಕ್ಷ್ಮಿ ನಾರಾಯಣ್ ಎಂಬವರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಬೈದಾಡಿಕೊಂಡು ಸುರೇಶ್ ಮನೆಗೆ ಹೋಗಿದ್ದಾನೆ. ನಂತರ ಲಕ್ಷ್ಮಿನಾರಾಯಣ್ ಮಚ್ಚು ಹಿಡಿದು, ಸುರೇಶ್ ನ ಮನೆ ಬಾಗಿಲು ಮುರಿದಿದ್ದಾನೆ.

    ಈ ವೇಳೆ ಗ್ರಾಮದಲ್ಲಿ ಲಕ್ಷ್ಮಿನಾರಾಯಣನ ರಂಪಾಟಕ್ಕೆ, ಗ್ರಾಮಸ್ಥರು ಕೆಲಕಾಲ ಭಯಬೀತರಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದಾಂಧಲೆ ಮಾಡಿದ ಲಕ್ಷ್ಮಿನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ.

  • ಬೆಂಗ್ಳೂರಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಪತಿ ಪರಾರಿ!

    ಬೆಂಗ್ಳೂರಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಪತಿ ಪರಾರಿ!

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪಾಪಿ ಪತಿ ಪತ್ನಿಯ ಉಸಿರುಗಟ್ಟಿಸಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.

    ಓರಿಸ್ಸಾ ಮೂಲದ ಮಾಲತಿ(38) ಕೊಲೆಗೀಡಾದ ಮಹಿಳೆ. ಆರೋಪಿ ಬಾಪಿ ಮತ್ತು ಮಾಲತಿ ಮೂಲತಃ ಓರಿಸ್ಸಾ ಮೂಲದವರಾಗಿದ್ದು, ಕಳೆದ ಕೆಲ ವರ್ಷಗಳಿಂದ ಈ ದಂಪತಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.

    ಈ ದಂಪತಿ ಕಳೆದ 9 ತಿಂಗಳ ಹಿಂದೆ ಕಾವೇರಿಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆರೋಪಿ ಪತಿ ಬಾಪಿ ಕೈ ಮಗ್ಗದಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಮಾಲತಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿದ್ದರು.

    ಇತ್ತೀಚೆಗೆ ಆರೋಪಿ ಬಾಪಿ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಜಗಳವಾಡಿದ್ದಾನೆ. ಇದೇ ಕಾರಣಕ್ಕೆ ಮನೆ ಮಾಲೀಕರು ಮನೆ ಖಾಲಿ ಮಾಡಲು ಸೂಚಿಸಿದ್ದರು. ಅದರಂತೆ ಮಂಗಳವಾರ ಮಧ್ಯಾಹ್ನ ಪತಿ-ಪತ್ನಿ ಇಬ್ಬರೂ ಚರ್ಚೆ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಪತ್ನಿ ಮಾಲತಿಯನ್ನು ಬಾಪಿ ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ.

    ಬಳಿಕ ಆಕೆ ಮಲಗಿದ್ದಾರೆ ಎನ್ನುವಂತೆ ಆಕೆಯ ಮೇಲೆ ಬೆಡ್ ಶೀಟ್ ಹೊದಿಸಿ, ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ಸೋಮವಾರ ರಾತ್ರಿ ಸ್ಥಳೀಯ ವ್ಯಕ್ತಿ ಆರೋಪಿ ಬಾಪಿ ಮನೆ ಬಳಿ ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ.

    ಘಟನೆ ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಶೋಧಕಾರ್ಯ ಮುಂದುವರೆದಿದೆ.