Tag: ಜಗಳ

  • ನಟಿ ರಾಗಿಣಿ ಗೆಳೆಯರ ಗಲಾಟೆ ಕೇಸ್‍ಗೆ ಹೊಸ ಟ್ವಿಸ್ಟ್..!

    ನಟಿ ರಾಗಿಣಿ ಗೆಳೆಯರ ಗಲಾಟೆ ಕೇಸ್‍ಗೆ ಹೊಸ ಟ್ವಿಸ್ಟ್..!

    ಬೆಂಗಳೂರು: ನಟಿ ರಾಗಿಣಿ ಸ್ನೇಹಿತರ ಗಲಾಟೆ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ತುಪ್ಪದ ಬೆಡಗಿ ಗೆಳೆಯ ರವಿಗೆ ಆತನ ಪತ್ನಿಯೇ ಫೋನ್ ಕರೆ ಮಾಡಿ ಎಚ್ಚರಿಕೆ ನೀಡಿದ್ದರು. ಆ ಬೆನ್ನಲ್ಲೇ ರವಿಗೆ ಥಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪತಿ ರವಿಗೆ ಕರೆ ಮಾಡಿದ ಪತ್ನಿ, ನೀನು ರಾಗಿಣಿ ಜೊತೆ ಹೋಗಿದ್ದೀಯಾ? ನಿನಗೆ ಯಾರಾದ್ರೂ ಬಂದು ಒದೆ ಕೊಡುತ್ತಾರೆ. ನನ್ನ ಬಾಳು ಹಾಳು ಮಾಡಿದ್ದೀಯ. ನಿನ್ನನ್ನ ನಾನು ಬಿಡಲ್ಲ. ಮದುವೆ ಆಗಿ ಬೇರೆ ಹುಡುಗಿಯರ ಜೊತೆ ಸುತ್ತಾಡುತ್ತಿದ್ದಿ. ನಿನಗೆ ಏನು ಮಾಡಿದ್ರೂ ಬುದ್ಧಿ ಬರಲ್ಲ. ನೀನು ಎಲ್ಲಿದ್ದೀಯ ಎಂದು ಗೊತ್ತು. ಅಲ್ಲಿಗೆ ಬಂದು ಒಬ್ಬ ಬುದ್ಧಿ ಕಲಿಸುತ್ತಾನೆ ಎಂದು ಪತ್ನಿಯೇ ರವಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಈ ವಾರ್ನಿಂಗ್ ಬಳಿಕ ಹೋಟೆಲ್‍ಗೆ ಬಂದಿದ್ದ ರವಿಗೆ ಗಣಿ ಉದ್ಯಮಿ ಶಿವಕುಮಾರ್ ಥಳಿಸಿದ್ದಾರೆ ಎನ್ನಲಾಗಿದೆ.

    ಏನಿದು ಪ್ರಕರಣ?:
    ಬೆಂಗಳೂರಿನ ಖಾಸಗಿ ಹೋಟೆಲ್ ರಿಟ್ಜ್ ಕಾರ್ಲ್ ಟನ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗಾಗಿ ಇಬ್ಬರು ಗೆಳೆಯರಾದ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್ ಟಿಒ ಅಧಿಕಾರಿ ರವಿ ಕಿತ್ತಾಡಿಕೊಂಡಿದ್ದರು. ಶನಿವಾರ ರಾತ್ರಿ ಹೋಟೆಲ್ ನಲ್ಲಿ ಶಿವಪ್ರಕಾಶ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನಟಿ, ತಮ್ಮ ಗೆಳೆಯ ರವಿಯೊಂದಿಗೆ ಹೋಟೆಲ್‍ಗೆ ತೆರಳಿದ್ದರು. ಇದನ್ನು ಕಂಡ ಶಿವಪ್ರಕಾಶ್, ರವಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಇಬ್ಬರ ನಡುವೆ ಆರಂಭವಾದ ಜಗಳ ತಾರಕಕ್ಕೇರಿ ಬಳಿಕ ಬಿಯರ್ ಬಾಟಲಿಯಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಘಟನೆಯಿಂದ ಗಾಯಗೊಂಡ ಬಳಿಕ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಅಶೋಕ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ. ರವಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿ ಶಿವಪ್ರಕಾಶ್ ರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿತ್ತು.

    ನಟಿ ರಾಗಿಣಿ ದ್ವಿವೇದಿ ಮೊದಲು ಉದ್ಯಮಿ ಶಿವಪ್ರಕಾಶ್ ನನ್ನ ಪ್ರೀತಿಸುತ್ತಿದ್ದರು. ಆದರೆ ಆ ಬಳಿಕ ಕೋರಮಂಗಲ ಆರ್ ಟಿಒ ಕಚೇರಿಯಲ್ಲಿ ಆಫೀಸರ್ ಆಗಿ ರವಿ ಕಾರ್ಯನಿರ್ವಹಿಸುತ್ತಿರುವ ರವಿ ಅವರೊಂದಿಗೆ ಒಡನಾಟ ಹೆಚ್ಚಿತ್ತು. ರಾತ್ರಿ ನಡೆದ ಗಲಾಟೆಯ ಬಳಿಕ ಶಿವಪ್ರಕಾಶ್, ರಾಗಿಣಿ ಅವರ ಬಳಿ ಇದ್ದ ಮರ್ಸಿಡೀಸ್ ಬೆಂಜ್ ಕಾರು ಕಿತ್ತುಕೊಂಡಿದ್ದಾರೆ. ರಾಗಿಣಿ ಅವರ ಬಳಿ ಇದ್ದ ಕಾರನ್ನು ಶಿವಪ್ರಕಾಶ್ ಕೊಡಿಸಿದ್ದರು ಎನ್ನಲಾಗಿದ್ದು, ಆದ್ದರಿಂದಲೇ ಕಾರನ್ನು ಕಿತ್ತುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

    ಶಿವಪ್ರಕಾಶ್ ಸ್ಪಷ್ಟನೆ:
    ಗಲಾಟೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಿವಪ್ರಕಾಶ್, ನನ್ನ ಗೆಳತಿ ರಾಗಿಣಿಯೇ ಬೇರೆ. ನಟಿ ರಾಗಿಣಿಯೇ ಬೇರೆ. ನಾನು ರವಿಶಂಕರ್ ಮೇಲೆ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಚಾನೆಲ್ ಚೇಂಜ್ ಮಾಡಿ ಎಂದಿದ್ದಕ್ಕೆ ಪತ್ನಿಗೆ ಚಾಕು ಇರಿತ

    ಚಾನೆಲ್ ಚೇಂಜ್ ಮಾಡಿ ಎಂದಿದ್ದಕ್ಕೆ ಪತ್ನಿಗೆ ಚಾಕು ಇರಿತ

    ಚೆನ್ನೈ: ಚಾನೆಲ್ ಚೇಂಜ್ ಮಾಡಿ ಎಂದು ಹೇಳಿದಕ್ಕೆ ಪತಿ ತನ್ನ ಪತ್ನಿಗೆ ಚಾಕು ಇರಿದ ಘಟನೆ ತಮಿಳುನಾಡಿನ ತ್ರಿಪ್ಲಿಕೇನ್‍ನ ಅಯೋತಿನಗರದಲ್ಲಿ ನಡೆದಿದೆ.

    ವೀರನ್ ಪತ್ನಿಗೆ ಚಾಕು ಇರಿದ ಪತಿ. ವೀರನ್ ಹಾಗೂ ಪತ್ನಿ ಉಷಾ(47) ಇಬ್ಬರು ಜೊತೆಯಲ್ಲಿ ಟಿವಿ ನೋಡುತ್ತಿದ್ದರು. ಈ ವೇಳೆ ಉಷಾ ತನ್ನ ಬೇರೆ ಚಾನೆಲ್‍ನಲ್ಲಿ ಬರುವ ಕಾರ್ಯಕ್ರಮವನ್ನು ವೀಕ್ಷಿಸಬೇಕು ಚೇಂಜ್ ಮಾಡಿ ಎಂದು ಪತಿಗೆ ಹೇಳಿದ್ದಾಳೆ. ಆದರೆ ಪತಿ ಇದಕ್ಕೆ ನಿರಾಕರಿಸಿದ್ದಾನೆ.

    ಇದೇ ವಿಷಯಕ್ಕಾಗಿ ವೀರನ್ ಹಾಗೂ ಉಷಾ ನಡುವೆ ಜಗಳ ಶುರುವಾಗಿದೆ. ಅಲ್ಲದೇ ವೀರನ್ ತನ್ನ ಪತ್ನಿ ಉಷಾಗೆ ನಿಂದಿಸಿ ಆಕೆಯನ್ನು ನೆಲಕ್ಕೆ ತಳ್ಳಿದ್ದಾನೆ. ಈ ವೇಳೆ ಉಷಾ ಮೊದಲು ಟೇಬಲ್ ಮೇಲೆ ಬಿದ್ದು ಬಳಿಕ ಕೆಳಗೆ ಬಿದ್ದಿದ್ದಾಳೆ. ಟೇಬಲ್ ಮೇಲೆ ಬಿದ್ದಾಗ ಉಷಾಗೆ ಗಂಭೀರ ಗಾಯಗಳಾಗಿದೆ.

    ಇದಾದ ಬಳಿಕ ವೀರನ್ ಅಡುಗೆ ಮನೆಗೆ ಹೋಗಿ ಚಾಕು ತಂದು ಪತ್ನಿಗೆ ಬೆದರಿಕೆ ಹಾಕಿದ್ದಾನೆ. ಆದರೂ ಉಷಾ ಸುಮ್ಮನಿರದೇ ವೀರನ್ ಜೊತೆ ವಾದ ಮಾಡಿದ್ದಾಳೆ. ಇದರಿಂದ ಕೋಪಗೊಂಡ ವೀರನ್ ಪತ್ನಿಗೆ ಹಲವು ಬಾರಿ ಚಾಕು ಇರಿದಿದ್ದಾನೆ.

    ಸದ್ಯ ಉಷಾಳ ಎದೆ, ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಆಕೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಈ ಘಟನೆ ಬಗ್ಗೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೀರನ್‍ನನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ ಕೊಲೆ ಪ್ರಯತ್ನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕತ್ತು ಕೊಯ್ದು ಪತ್ನಿಯನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ..!

    ಕತ್ತು ಕೊಯ್ದು ಪತ್ನಿಯನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ..!

    ಮಂಡ್ಯ: ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಗರಿಬಿ ಕಾಲೋನಿಯಲ್ಲಿ ನಡೆದಿದೆ.

    ಉಮಾ(30) ಕೊಲೆಯಾದ ದುರ್ದೈವಿ. ನಾಗೇಶ್(35) ಪತ್ನಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಉಮಾ ಹಾಗೂ ನಾಗೇಶ್ ಕಳೆದ ಆರು ವರ್ಷದ ಹಿಂದೆ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

    ನಾಗೇಶ್ ತನ್ನ ಪತ್ನಿ ಉಮಾಳಿಗೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸುತ್ತಿದ್ದನು. ಇದೇ ವಿಚಾರಕ್ಕೆ ದಿನನಿತ್ಯ ತನ್ನ ಪತ್ನಿ ಜೊತೆ ಜಗಳವಾಡುತ್ತಿದ್ದನು. ಇಂದು ಮುಂಜಾನೆ ಕೂಡ ಇಬ್ಬರ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ನಾಗೇಶ್ ತನ್ನ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ಪತ್ನಿಯನ್ನು ಕೊಲೆ ಮಾಡಿದ ಬಳಿಕ ನಾಗೇಶ್ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಘಟನಾ ಸ್ಥಳಕ್ಕೆ ಬಂದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿರುವ ನಾಗೇಶ್ ನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ನಡೆಯುವಾಗ ಮಕ್ಕಳು ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ.

    ಈ ಘಟನೆ ಕೆ.ಎಂ ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾವೇ ಸೋತಿದ್ದೇವೆ, ನಮ್ಮ ಅಪ್ಪನ ಬಗ್ಗೆ ಮಾತಾಡ್ತೀಯಾ – ಎಂಬಿಪಿಗೆ ಶಾಮನೂರು ಪುತ್ರರಿಂದ ಕ್ಲಾಸ್

    ನಾವೇ ಸೋತಿದ್ದೇವೆ, ನಮ್ಮ ಅಪ್ಪನ ಬಗ್ಗೆ ಮಾತಾಡ್ತೀಯಾ – ಎಂಬಿಪಿಗೆ ಶಾಮನೂರು ಪುತ್ರರಿಂದ ಕ್ಲಾಸ್

    ದಾವಣಗೆರೆ: ಚುನಾವಣೆಯಲ್ಲಿ ನಾವೇ ಸೋತು ಸುಣ್ಣ ಆಗಿದ್ದೀವಿ, ನೀನು ನಮ್ಮ ಅಪ್ಪನ ಬಗ್ಗೆ ಮಾತಾಡ್ತಿಯ ಅಂತ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಹಾಗೂ ಮಾಜಿ ಸಚಿವರಾಗಿದ್ದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಗೃಹ ಸಚಿವ ಎಂ.ಬಿ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಊಟಕ್ಕೆಂದು ಎಂ.ಬಿ ಪಾಟೀಲ್ ತೆರಳಿದ್ದರು. ಈ ವೇಳೆ ಚುನಾವಣೆಯಲ್ಲಿ ನಾವೇ ಸೋತು ಸುಣ್ಣ ಆಗಿದ್ದೀವಿ. ನೀನು ನಮ್ಮ ಅಪ್ಪನ ಬಗ್ಗೆ ಮಾತಾಡ್ತಿಯ ಎಂದು ಪ್ರಶ್ನಿಸಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕಾಂಗ್ರೆಸ್ ಆಫೀಸ್ ಹೋಗಬೇಕು ಬಾ ಅಂತ ಎಂ.ಬಿ ಪಾಟೀಲ್ ಅವರು ಮಲ್ಲಿಕಾರ್ಜುನ್ ಅವರನ್ನು ಕರೆದಿದ್ದಾರೆ. ಇಷ್ಟಕ್ಕೆ ಅವರು ಅಲ್ಲಿ ನಮ್ಮದೇನು ಕೆಲಸ ಇಲ್ಲ. ನಾನು ಯಾಕೆ ಬರಲಿ? ನಾವು ಹಿದಕ್ಕೆ ಸರಿದಿದ್ದೇವೆ. ನಾವು ಚುನಾವಣೆಯಲ್ಲಿ ಸೋತು ಸುಣ್ಣ ಆಗಿದ್ದೀವಿ. ನೀನು ಮಂತ್ರಿಯಾಗಿದೀಯಾ ಅಂತ ಹೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮಲ್ಲಿಕಾರ್ಜುನ್ ಅವರ ಕೆಂಗಣ್ಣಿಗೆ ಗುರಿಯಾಗಿ ಎಂ.ಬಿ.ಪಾಟೀಲ್ ಅವರು ಸಪ್ಪೆಮೊರೆ ಹಾಕಿಕೊಂಡು ಸುಮ್ಮನಾದರು. ಈ ವೇಳೆ ಶಾಮನೂರು ಶಿವಶಂಕರಪ್ಪ ಮಧ್ಯ ಪ್ರವೇಶಿಸಿ ಮಲ್ಲಿಕಾರ್ಜುನ್ ಅವರನ್ನು ಸಮಾಧಾನ ಮಾಡಿದರು. ಬಳಿಕ ಶಾಮನೂರು ಅವರ ಜೊತೆ ಎಂ.ಬಿ.ಪಾಟೀಲ್ ಊಟಕ್ಕೆ ತೆರಳಿದರು.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್, ಮಲ್ಲಿಕಾರ್ಜುನ್ ನಾನು ಸಹೋದರರು. ಪದೇ ಪದೇ ನಮ್ಮ ನಡುವೆ ಈ ರೀತಿ ಗಲಾಟೆ ನಡೆಯುತ್ತಲೇ ಇರುತ್ತವೆ. ದಾವಣಗೆರೆಗೆ ಎಸ್.ಎಸ್.ಮಲ್ಲಿಕಾರ್ಜುನ್ ನಿಲ್ಲದೇ ಇದ್ದರೆ ಹಿರಿಯರು ಶಾಮನೂರು ಶಿವಶಂಕರಪ್ಪನವರು ನಿಲ್ಲುತ್ತಾರೆ. ಅವರ ಪರವಾಗಿ ನಾನು ಚುನಾವಣಾ ಪ್ರಚಾರಕ್ಕೆ ಬರುತ್ತೇನೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಬೈಲ್‍ನಲ್ಲಿ ಜೋರಾಗಿ ಮಾತನಾಡಿದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆಗೈದ ಬಾಲಕ!

    ಮೊಬೈಲ್‍ನಲ್ಲಿ ಜೋರಾಗಿ ಮಾತನಾಡಿದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆಗೈದ ಬಾಲಕ!

    ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಕ್ಕೆ ಯುವಕನೊಬ್ಬನನ್ನು ಅಪ್ರಾಪ್ತ ಬಾಲಕನೊಬ್ಬ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಗೈದ ಘಟನೆ ನವದೆಹಲಿಯ ಜಸೋಲಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೊಲೆಯಾದ ವ್ಯಕ್ತಿಯನ್ನು ಅಮಿತ್ (28) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಅಮಿತ್ ಪಾರ್ಕ್ ಒಂದರಲ್ಲಿ ತನ್ನ ಫೋನ್‍ನಲ್ಲಿ ಜೋರಾಗಿ ಮಾತನಾಡುತ್ತಿದ್ದ. ಈ ವೇಳೆ ಸ್ಥಳದಲ್ಲಿದ್ದ ಬಾಲಕ ನಿಧಾನವಾಗಿ ಮಾತನಾಡಿ ತೊಂದರೆಯಾಗುತ್ತಿದೆ ಎಂದಿದ್ದಾನೆ. ಆದರೂ ಯುವಕ ಬಾಲಕನ ಮಾತು ಕೇಳದೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಲೇ ಇದ್ದ. ಆಗ ಮತ್ತೆ ಬಾಲಕ ಯುವಕನಿಗೆ ನಿಧಾನವಾಗಿ ಮಾತನಾಡಿ ಎಂದಿದಕ್ಕೆ ಕೋಪಗೊಂಡ ಯುವಕ ರೇಗಿದ್ದಾನೆ. ಬಳಿಕ ಅವರಿಬ್ಬರ ನಡುವೆ ಜಗಳವಾಗಿದೆ. ಇದರಿಂದ ಸಿಟ್ಟಿಗೆದ್ದ ಬಾಲಕ ಕೈಗೆ ಸಿಕ್ಕ ಕಲ್ಲಿನಿಂದ ಯುವಕನ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.

    ಈ ಹಲ್ಲೆಯಿಂದ ಯುವಕನ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಸಾರ್ವಜನಿಕರು ಗಮನಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯದ್ದಿದ್ದಾರೆ. ಆದರೇ ಅಷ್ಟರಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಾಲಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಯುವಕನ ಜೊತೆ ಜಗಳವಾದಾಗ ಕೋಪದಿಂದ ಕಲ್ಲಿನಿಂದ ಆತನನ್ನು ಜಜ್ಜಿ ಸಾಯಿಸಿದೆ. ಬಳಿಕ ಭಯವಾಗಿ ಸ್ಥಳದಿಂದ ಓಡಿಹೋದೆ ಎಂದು ಬಾಲಕ ಹೇಳಿದ್ದಾನೆ.

    ಇಬ್ಬರ ನಡುವೆ ವೈಯಕ್ತಿಕವಾಗಿ ಯಾವುದೇ ದ್ವೇಷವಿರಲಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಅಪ್ರಾಪ್ತ ಬಾಲಕನನ್ನು ರಿಮ್ಯಾಂಡ್ ಹೋಮ್‍ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 10,000 ರೂ. ನೀಡಿಲ್ಲವೆಂದು ಪತ್ನಿ ಮೇಲೆ ಆ್ಯಸಿಡ್ ಎರಚಿದ ಪತಿ

    10,000 ರೂ. ನೀಡಿಲ್ಲವೆಂದು ಪತ್ನಿ ಮೇಲೆ ಆ್ಯಸಿಡ್ ಎರಚಿದ ಪತಿ

    ಬೆಂಗಳೂರು: ಪಾಪಿ ಗಂಡನೊಬ್ಬ ಕೇವಲ ಹತ್ತು ಸಾವಿರ ರೂ. ನೀಡಲಿಲ್ಲ ಎಂದು ತನ್ನ ಹೆಂಡತಿಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ನಡೆದಿದೆ.

    ಪಶ್ಚಿಮ ಬಂಗಾಳ ಮೂಲದ ಪತ್ನಿ ತಪಸಿ ಮೇಲೆ ಚಿತಂಜಿತ್ ಬಿಸ್ವಾಸ್ ಆ್ಯಸಿಡ್ ದಾಳಿ ಮಾಡಿದ್ದಾನೆ. 8 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಂದು ವರ್ಷದಿಂದ ಕೆಲಸಕ್ಕೋಗದೆ ಮನೆಯಲ್ಲೆ ಇದ್ದು, ಕುಡಿತದ ದಾಸನಾಗಿದ್ದ ಪಾಪಿ ಗಂಡ ಬಾಡಿಗೆ ತಾಯ್ತನದ ಮೂಲಕ ಹಣಗಳಿಸಬಹುದೆಂದು ಯೋಚಿಸಿದ್ದನು.

    ಈ ಕಾರಣದಿಂದ ನಾಗರಬಾವಿಯಲ್ಲಿರುವ ವರದಾ ಪರ್ಟಿಲಿಟಿ ಕೇಂದ್ರಕ್ಕೆ ತೆರಳಿ ಈ ಬಗ್ಗೆ ವಿಚಾರಿಸಿಕೊಂಡಿದ್ದನು. ಇದೇ ಫೆಬ್ರವರಿ 20ರಂದು ಆಸ್ಪತ್ರೆಗೆ ತೆರಳಿ ವಾಪಸ್ಸಾಗುವಾಗ ಹೆಂಡತಿ ಬಳಿ ಹಣ ಕೇಳಿದ್ದನು. ಹಣ ಇಲ್ಲ ಎಂದಾಗ ಹೆಂಡತಿಯ ಮುಖ, ಎದೆ, ಬೆನ್ನಿಗೆ ಆ್ಯಸಿಡ್ ಎರಚಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

    ಸದ್ಯ ಪತ್ನಿ ತಪಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮಿಗಳ ದಿನವೇ ಬೀದಿಗೆ ಬಂತು ಲವ್ ದೋಖಾ ವಾರ್..!

    ಪ್ರೇಮಿಗಳ ದಿನವೇ ಬೀದಿಗೆ ಬಂತು ಲವ್ ದೋಖಾ ವಾರ್..!

    ತುಮಕೂರು: ಇಂದು ಪ್ರೇಮಿಗಳ ದಿನಾಚರಣೆ. ಎಲ್ಲಾ ಪ್ರೇಮಿಗಳು ನನಗೆ ನೀನು, ನಿನಗೆ ನಾನು ಎಂದು ಪ್ರೇಮಲೋಕದಲ್ಲಿ ತೇಲುತ್ತಿದ್ದರೆ, ಇಲ್ಲೊಂದು ಪ್ರೇಮಿಗಳ ಜಗಳ ಬೀದಿಗೆ ಬಂದಿದೆ.

    ತುಮಕೂರು ನಗರದ ನಿವಾಸಿಗಳಾದ ನೇತ್ರಾವತಿ ಹಾಗೂ ರಂಗನಾಥ್‍ರ ಪ್ರೇಮ ಪ್ರಸಂಗ ಈಗ ಮಹಿಳಾ ಠಾಣಾ ಮೆಟ್ಟಿಲೇರಿದೆ. ರಂಗನಾಥ್ ಮತ್ತು ನೇತ್ರಾ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲದೆ ಇದ್ದುದರಿಂದ ಇಬ್ಬರೂ ಬೇರೆ ಬೇರೆ ಮದುವೆಯಾಗಿದ್ದರು.

    ಆದರೂ ನೇತ್ರಾವತಿ ಕೆಲ ತಿಂಗಳ ಬಳಿಕ ರಂಗನಾಥನ್ ನನ್ನು ಸಂಪರ್ಕಿಸಿ ಮತ್ತೆ ಅನೈತಿಕ ಸಂಬಂಧ ಮುಂದುವರಿಸಿದ್ದಾಳೆ. ನನ್ನ ಬಳಿಯಿಂದ ಸುಮಾರು 1.5 ಲಕ್ಷ ರೂ. ಪೀಕಿದ್ದಾಳೆ. ಬಳಿಕ ದುಡ್ಡು ವಾಪಸ್ ಕೊಡು ಎಂದು ಕೇಳಿದಾಗ ಆಕೆ ನಿರಾಕರಿಸಿದ್ದಾಳೆ ಎಂದು ರಂಗನಾಥ್ ಆರೋಪಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ.

    ಕೆಲ ಫೋಟೋ ಇಟ್ಟುಕೊಂಡು ರಂಗನಾಥ್ ತನ್ನನ್ನು ಬ್ಲಾಕ್‍ಮೇಲ್ ಮಾಡುತ್ತಾನೆ ಎಂದು ನೇತ್ರಾವತಿ ದೂರು ನೀಡಿದ್ದಾಳೆ. ಅಸಲಿಗೆ ಈ ಇಬ್ಬರೂ ವಿವಾಹಿತ ಪ್ರೇಮಿಗಳು ಪರಸ್ಪರ ತಮ್ಮ ಖಾಸಗಿ ಫೋಟೋಗಳನ್ನು ಮೊಬೈಲಲ್ಲಿ ಸೆರೆ ಹಿಡಿದು ಒಬ್ಬರಿಗೊಬ್ಬರು ಬ್ಲಾಕ್‍ಮೇಲ್ ಮಾಡಿಕೊಂಡಿದ್ದಾರೆ.

    ಇಬ್ಬರು ಪ್ರೇಮಿಗಳ ಜಗಳ ಮಹಿಳಾ ಠಾಣೆಯ ಮೆಟ್ಟಿಲೇರಿದ್ದು ಅಶ್ಲೀಲ ಫೋಟೋಗಳು ವೈರಲ್ ಆಗಿವೆ. ಆದರೆ ಈ ಪ್ರಕರಣದ ಕುರಿತು ಪ್ರಿಯಕರ ರಂಗನಾಥ್ ಪ್ರತಿಕ್ರಿಯೆ ನೀಡಿದರೆ, ನೇತ್ರಾವತಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪರಪ್ಪನ ಅಗ್ರಹಾರ ಜೈಲಿನಲ್ಲೇ ರೌಡಿ ಶೀಟರ್‌ಗಳ ನಡುವೆ ಬಡಿದಾಟ!

    ಪರಪ್ಪನ ಅಗ್ರಹಾರ ಜೈಲಿನಲ್ಲೇ ರೌಡಿ ಶೀಟರ್‌ಗಳ ನಡುವೆ ಬಡಿದಾಟ!

    ಬೆಂಗಳೂರು: ಅಪರಾಧ ಕೃತ್ಯಗಳಲ್ಲಿ ತೊಡಗಿರುವವರ ಮನ ಪರಿವರ್ತನೆಗೆ ಜೈಲು ಶಿಕ್ಷೆ ನೀಡಿದರೆ ಅಲ್ಲಿಯೂ ಗ್ಯಾಂಗ್ ಕಟ್ಟಿಕೊಂಡು ಬಡಿದಾಟ ನಡೆಸಿರುವ ಘಟನೆ ನಗರದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.

    ನಗರದ ಕುಖ್ಯಾತ ರೌಡಿಗಳಾದ ಸೈಕಲ್ ರವಿ ಮತ್ತು ಆಟೋ ರಾಮು ಗ್ಯಾಂಗ್ ಗಳ ನಡುವೆ ಗಲಾಟೆ ನಡೆದಿದೆ. ಇಬ್ಬರ ಮೇಲೂ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಕಾರಾಗೃಹದ ಬ್ಯಾರಕ್ ನಂ.9 ರಲ್ಲಿ ಘಟನೆ ನಡೆದಿದ್ದು, ಬಡಿದಾಟದಲ್ಲಿ ಕೆಲ ಕೈದಿಗಳು ಗಾಯಗೊಂಡಿದ್ದಾರೆ. ಘಟನೆ ಬಳಿಕ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಎರಡು ಗ್ಯಾಂಗ್‍ಗಳನ್ನು ಪ್ರತ್ಯೇಕ ಬ್ಯಾರಕ್ ಗಳಿಗೆ ವರ್ಗಾಯಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿ ಅಕ್ರಮವಾಗಿ ಅಪರಾಧಿಗಳಿಗೆ ಗಾಂಜಾ, ಸಿಗರೇಟು, ಮದ್ಯ ಸಾಗಾಟ ಮಾಡಲಾಗುತ್ತದೆ. ಇದು ಕೂಡ ಜೈಲಿನಲ್ಲಿ ಕೈದಿಗಳ ನಡುವೆ ಗಲಾಟೆಗೆ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಿಂದ ಮಾತುಗಳು ಕೇಳಿ ಬಂದಿದೆ. ಹಣದ ಆಸೆಗಾಗಿ ಜೈಲಿನ ಅಧಿಕಾರಿಗಳೇ ಇಂತಹ ಕೃತ್ಯಕ್ಕೆ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಜೈಲಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ಅಕ್ರಮ ವಸ್ತುಗಳ ಸಾಗಾಟ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ ಎಂಬ ಆಗ್ರಹ ಕೇಳಿಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತಿಗೆ ಅಡ್ಡಿಯಾದ ಸ್ನೇಹಿತನಿಗೇ ಬಿಯರ್ ಬಾಟ್ಲಿಯಿಂದ ಹೊಡೆದ 10ನೇ ಕ್ಲಾಸ್ ವಿದ್ಯಾರ್ಥಿ!

    ಪ್ರೀತಿಗೆ ಅಡ್ಡಿಯಾದ ಸ್ನೇಹಿತನಿಗೇ ಬಿಯರ್ ಬಾಟ್ಲಿಯಿಂದ ಹೊಡೆದ 10ನೇ ಕ್ಲಾಸ್ ವಿದ್ಯಾರ್ಥಿ!

    ಹೈದರಾಬಾದ್: 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಪ್ರೀತಿ ವಿಚಾರಕ್ಕೆ ಸಿಟ್ಟಿಗೆದ್ದು ಸ್ನೇಹಿತನಿಗೇ ಬಿಯರ್ ಬಾಟಲಿಯಿಂದ ಹೊಡೆದಿರುವ ಘಟನೆ ಮೀರ್‍ಪೇಟ್‍ನ ಜಿಲ್ಲೆಲಾಗುಡಾದಲ್ಲಿ ನಡೆದಿದೆ.

    ಜಿಲ್ಲೆಲಾಗುಡಾದ ಜಿಲ್ಲಾ ಪರಿಷದ್ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಪ್ರೀತಿ ವಿಚಾರಕ್ಕೆ ಹಾಗೂ ಬೇರೆ ವೈಯಕ್ತಿಕ ವಿಚಾರಗಳಿಗೆ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು.

    ಆದ್ರೆ ಶುಕ್ರವಾರ ಈ ಜಗಳ ಮಿತಿಮೀರಿತ್ತು. ಮತ್ತೆ ಶನಿವಾರ ಇಬ್ಬರು ಶಾಲೆಗೆ ಬಂದಾಗ ಕೂಡ ಜಗಳ ಮುಂದುವರಿಸಿದ್ದರು. ಕೊನೆಗೆ ಜಗಳ ತಾರಕಕ್ಕೇರಿ ಕೋಪಗೊಂಡ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿ ಮೂತ್ರ ವಿಸರ್ಜನೆ ಮಾಡಲು ಹೊರಹೋದಾಗ ಆತನಿಗೆ ಖಾಲಿ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿಸಿದ್ದಾನೆ. ಅಷ್ಟೇ ಅಲ್ಲದೆ, ಆತನನ್ನು ತಡೆಯಲು ಬಂದ ಸ್ನೇಹಿತನ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ.

    ಈ ಘಟನೆಯಿಂದ ಹಲ್ಲೆಗೊಳಗಾದ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಘಟನೆ ಕುರಿತು ರಾಚಕೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಈ ಹಿಂದೆ ಕೂಡ ಪ್ರೀತಿಯ ವಿಚಾರಕ್ಕೆ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳನ್ನು ಬೆಂಕಿ ಹಚ್ಚಿ ಸುಟ್ಟ ಘಟನೆ ಹೈದರಾಬಾದ್‍ನಿಂದ 190 ಕಿ.ಮೀ ದೂರವಿರುವ ತೆಲಂಗಾಣದ ಜಗ್ತಿಯಾಲ್ ಪಟ್ಟಣದಲ್ಲಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಾನು ಸರಿಯಿಲ್ಲ, ಆದ್ರೆ ಅವನು ನಂಗೆ ಬೇಡ – ನಡವಳಿಕೆ ಸರಿಯಿಲ್ಲ, ನಂಗೆ ಅವ್ಳು ಬೇಡ

    ನಾನು ಸರಿಯಿಲ್ಲ, ಆದ್ರೆ ಅವನು ನಂಗೆ ಬೇಡ – ನಡವಳಿಕೆ ಸರಿಯಿಲ್ಲ, ನಂಗೆ ಅವ್ಳು ಬೇಡ

    -ಬೀದಿಗೆ ಬಂತು 13 ವರ್ಷದ ಸಂಸಾರ

    ಹಾಸನ: ಮದುವೆಯಾಗಿ 13 ವರ್ಷ ಸಂಸಾರ ಮಾಡಿ ಇಬ್ಬರು ಮಕ್ಕಳಾಗಿರುವ ಪತಿ-ಪತ್ನಿ ಜಗಳ ಬೀದಿಗೆ ಬಿದ್ದಿರುವ ಪ್ರಕರಣ ಹಾಸನದಲ್ಲಿ ನಡೆದಿದೆ.

    ಪತಿ ಚಂದ್ರು ಮೇಲೆ ಮಚ್ಚಿನಿಂದ ಹಲ್ಲೆಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ನನ್ನ ಪತಿ ನನಗೆ ಹೊಡೀತಾನೆ ಅವನು ನನಗೆ ಬೇಡ ಎಂದು ಪತ್ನಿ ವಾದ ಮಾಡುತ್ತಿದ್ದಾಳೆ. ನನ್ನ ಪತ್ನಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಳೆ ಅವಳು ಸರಿ ಇಲ್ಲ ಎಂಬುದು ಪತಿಯ ಅಳಲಾಗಿದೆ. ಇದೀಗ ಇವರಿಬ್ಬರ ಜಗಳ ಬೀದಿಗೆ ಬಂದಿದ್ದು, ಇಬ್ಬರೂ ಕೂಡ ಒಬ್ಬೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

                                                                             ಪ್ರಿಯಕರ ಚೇತನ್

    ಜಿಲ್ಲೆಯ ಹೊಳೇನರಸೀಪುರ ತಾಲೂಕಿನ ಕಡವಿನಹೊಸಳ್ಳಿ ಗ್ರಾಮದ ಚಂದ್ರುಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ನಿವಾಸಿ ರೂಪಾಳ ಜೊತೆ 13 ವರ್ಷದ ಹಿಂದೆ ಮದುವೆಯಾಗಿತ್ತು. ಸಕಲೇಶಪುರದಲ್ಲಿ ವಾಸವಿದ್ದ ಇವರಿಬ್ಬರಿಗೆ ಇಬ್ಬರು ಮಕ್ಕಳೂ ಕೂಡ ಇದ್ದಾರೆ. ಆದರೆ ಪತ್ನಿಯ ನಡವಳಿಕೆ ಸರಿ ಇಲ್ಲ ಆಕೆ ವೈಶ್ಯಾವಾಟಿಕೆ ಮಾಡುತ್ತಿದ್ದಾಳೆ. ನನಗೆ ನನ್ನಿಬ್ಬರು ಮಕ್ಕಳೂ ಕೊಟ್ಟರೆ ಸಾಕು. ನಾನು ನನ್ನ ಪಾಡಿಗೆ ಇರುತ್ತೇನೆ ಎಂದು ಚಂದ್ರು ಮನವಿ ಮಾಡಿಕೊಂಡಿದ್ದಾರೆ.

    ಪತಿ ಆರೋಪ:
    ನಾನು ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ನನ್ನ ಮನೆಯಲ್ಲೇ ಚಕ್ಕಂದ ಆಡುತ್ತಿದ್ದಳು. ಇದನ್ನು ನಾನು ಕಣ್ಣಾರೆ ಕಂಡು, ಪೊಲೀಸರಿಗೂ ದೂರು ನೀಡಿದ್ದೆ. ಆ ಬಳಿಕ ನನಗೆ ತಿಳಿಯದ ರೀತಿಯಲ್ಲಿ ಏಕಾಏಕಿ ಮನೆ ಖಾಲಿ ಮಾಡಿಕೊಂಡು ಹಾಸನಕ್ಕೆ ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು. ತನ್ನ ಧನದಾಹಕ್ಕೆ ಎಷ್ಟೋ ಹುಡುಗಿಯರ ಬಾಳು ಹಾಳು ಮಾಡಿದ್ದಾಳೆ. ಇಂಥವಳ ಬಳಿ ನನ್ನ ಮಕ್ಕಳು ಇರಬಾರದು ಎಂದು ಕರೆತರಲು ಹೋದಾಗ ಚೇತನ್ ಹಾಗೂ ಇತರರೊಂದಿಗೆ ಸೇರಿಕೊಂಡು ನನ್ನನ್ನು ಕೊಲ್ಲಲು ಯತ್ನಿಸಿದಳು ಎಂದು ಪತಿ ಚಂದ್ರು ಆರೋಪಿಸಿದ್ದಾರೆ.

    ಪತ್ನಿ ಸಮರ್ಥನೆ:
    ಹಲ್ಲೆಯಿಂದ ಚಂದ್ರುವಿನ ಕೈ ಹಾಗೂ ಇತರೆ ಭಾಗಗಳಿಗೆ ಹಾನಿಗಳಾಗಿದ್ದು, ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನಗೆ ಜೀವ ಬೆದರಿಕೆ ಇದ್ದು ರಕ್ಷಣೆ ಬೇಕು ಎಂದು ಮೊರೆ ಇಡುತ್ತಿದ್ದಾರೆ. ಇತ್ತ ನಾನು ಈ ಸ್ಥಿತಿಗೆ ಬರಲು ಗಂಡನೇ ಕಾರಣ ಎಂದು ಸಬೂಬು ಹೇಳುತ್ತಿರುವ ರೂಪಾ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಅಲ್ಲಿ ತೀರ್ಮಾನ ಆಗೋವರೆಗೂ ನಾನು ಮಕ್ಕಳನ್ನು ಕೊಡುವುದಿಲ್ಲ. ನಾನು ಸರಿಯಿಲ್ಲ, ಆದರೆ ಅವನು ನನಗೆ ಬೇಡ. ಅಷ್ಟಕ್ಕೂ ನಾನು ಕೊಲೆ ಮಾಡಿಸಲು ಹೋಗಿಲ್ಲ ಎಂದು ಸಮರ್ಥನೆ ಕೊಡುತ್ತಿದ್ದಾಳೆ.

    ಗಂಡನ ಮನೆಯವರು ಕಿರುಕುಳ ನೀಡಿದರು ಅನ್ನೋ ನೆಪವೊಡ್ಡಿ, ವೇಶ್ಯಾವಾಟಿಕೆ ದಂಧೆಗೆ ಇಳಿದು ಅನೇಕ ಸಲ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ರೂಪಾ, ಇದೀಗ ಕಣ್ಣೀರಿಡುವಂತಾಗಿದೆ. ಇಂಥವಳಿಗೆ ತಕ್ಕ ಶಾಸ್ತಿ ಮಾಡಿ ಅನ್ನೋದು ಚಂದ್ರು ಮನವಿಯಾಗಿದೆ. ಈ ನಡುವೆ ರೂಪಾಳಿಗೆ ಸಹಕಾರ ನೀಡಿದ ಆರೋಪ ಹಿನ್ನೆಲೆಯಲ್ಲಿ ಆಕೆಯ ಸಂಬಂಧಿ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv