Tag: ಜಗಳ

  • Andhra Pradesh| ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ

    Andhra Pradesh| ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ

    ಅಮರಾವತಿ: ಗಂಡ-ಹೆಂಡತಿಯ ನಡುವೆ ಜಗಳ ನಡೆದು, ಪತಿ 8 ತಿಂಗಳ ಗರ್ಭಿಣಿ ಪತ್ನಿಯನ್ನು (Preganant Wife) ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿ ಸೋಮವಾರ ನಡೆದಿದೆ.

    ಅನುಷಾ (27) ಮೃತ ಪತ್ನಿ. ಪತಿ ಜ್ಞಾನೇಶ್ವರ್ ಹಾಗೂ ಪತ್ನಿ ಅನುಷಾ ಸೋಮವಾರ ಬೆಳಗ್ಗೆ ಜಗಳವಾಡಿದ್ದು, ಈ ಜಗಳ ತಾರಕಕ್ಕೇರಿ ಜ್ಞಾನೇಶ್ವರ್ ತನ್ನ ಪತ್ನಿಯ ಕತ್ತು ಹಿಸುಕಿದ್ದಾನೆ. ಈ ಸಂದರ್ಭ ಅನುಷಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಪತಿ, ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಷ್ಟರಲ್ಲಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಇದನ್ನೂ ಓದಿ: ತುಮಕೂರು | ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ ಸಾವು

    ವಿಶಾಖಪಟ್ಟಣಂನ (Visakhapatnam) ಪಿಎಂ ಪಾಲೆಂನ ಉಡಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಆರೋಪಿ ಪತಿ ನಗರದ ಸ್ಕೌಟ್ಸ್ ಮತ್ತು ಸಾಗರ್‌ನಗರ ವೀಕ್ಷಣಾ ಕೇಂದ್ರದ ಬಳಿ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಅನುಷಾಳೊಂದಿಗೆ ಪ್ರೇಮ ವಿವಾಹವಾಗಿದ್ದರು. ಬಳಿಕ ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸೆಂಚುರಿ ಬಾರಿಸಿದ್ದಕ್ಕೆ ಪಾಕ್‌ ಸೂಪರ್‌ ಲೀಗಲ್ಲಿ ಸಿಕ್ಕಿದ್ದು ಹೇರ್ ಡ್ರೈಯರ್‌!

    ಘಟನೆಯ ಬಳಿಕ ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮುಸ್ಲಿಮರದ್ದು ಕಾಂಟ್ರ್ಯಾಕ್ಟ್‌ ಮ್ಯಾರೇಜ್, ಹಿಂದೂಗಳ ರೀತಿ ಏಳು ಜನ್ಮದ ಅನುಬಂಧ ಅಲ್ಲ: ರಾಯರೆಡ್ಡಿ

  • ಹಾಸನ | ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ

    ಹಾಸನ: ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹಾಸನದ(Hassan) ಅರಸೀಕೆರೆ(Arsikere) ತಾಲೂಕಿನ ದೋಣನಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಲಕ್ಕಪ್ಪ(48) ಕೊಲೆಯಾದ ವ್ಯಕ್ತಿ. ಬಸವರಾಜ ಚಾಕುವಿನಿಂದ ಇರಿದು ಕೊಲೆಗೈದ ಆರೋಪಿ. ಇದನ್ನೂ ಓದಿ:ಕೋವಿಡ್ ಹಗರಣ ಆರೋಪ – ಇಂದು ಅಂತಿಮ ವರದಿ ಸಲ್ಲಿಕೆ

    ಶಶಿ ಮತ್ತು ವಸಂತ ಚೌಕಾಬಾರ ಆಡುತ್ತಿದ್ದಾಗ ಬಸವರಾಜ ಬಂದು ಜಗಳ ಮಾಡಿ, ಅವರಿಬ್ಬರ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಲಕ್ಕಪ್ಪ ಜಗಳ ಬಿಡಿಸಲು ಹೋದಾಗ ಬಸವರಾಜ ಚಾಕುವಿನಿಂದ ಎದೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಬಸವರಾಜನ ಜೊತೆಗಿದ್ದ ನಂಜುಂಡಿಯು ಹಲ್ಲೆಗೆ ಬೆಂಬಲ ನೀಡಿದ್ದ ಎಂದ ಆರೋಪ ಕೇಳಿಬಂದಿದೆ. ಇದೀಗ ಆರೋಪಿ ಬಸವರಾಜ ಹಾಗೂ ನಂಜುಂಡಿ ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ವಕ್ಫ್‌ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಎಎಪಿ

    ಶಶಿ, ವಸಂತ ಎಂಬುವವರಿಗೆ ಬೆನ್ನು ಹಾಗೂ ಕೈ ಭಾಗಕ್ಕೆ ಬಸವರಾಜ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದ. ಗಾಯಾಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಪ್ರಜೆಗೆ ಚಾಕುವಿನಿಂದ ಇರಿದು ಕೊಲೆ

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • Belagavi | ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ 2 ಗುಂಪುಗಳ ನಡುವೆ ಘರ್ಷಣೆ – ಸೋಡಾ, ನೀರಿನ ಬಾಟಲಿಯಿಂದ ಹೊಡೆದಾಟ

    Belagavi | ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ 2 ಗುಂಪುಗಳ ನಡುವೆ ಘರ್ಷಣೆ – ಸೋಡಾ, ನೀರಿನ ಬಾಟಲಿಯಿಂದ ಹೊಡೆದಾಟ

    ಬೆಳಗಾವಿ: ಪ್ರಾರ್ಥನೆ ಮುಗಿಸಿ ಉಪಹಾರ ಸೇವಿಸಲು ಹೋಟೆಲ್‌ಗೆ (Hotel) ಬಂದಾಗ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಸೋಡಾ ಬಾಟಲಿ ಹಾಗೂ ನೀರಿನ ಬಾಟಲಿಯಿಂದ ಪರಸ್ಪರ ಹೊಡೆದಾಡಿಕೊಂಡ ಘಟನೆ ಬೆಳಗಾವಿ (Belagavi) ನಗರದಲ್ಲಿ ನಡೆದಿದೆ.

    ಎರಡು ಗುಂಪುಗಳ ಯುವಕರು ಪರಸ್ಪರ ಹೊಡೆದಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಿಂದ ಕೆಲಕಾಲ ತ್ವೇಷಮಯ ವಾತಾವರಣ ಉಂಟಾಗಿತ್ತು. ಏಕಾಏಕಿ ಘರ್ಷಣೆ ಉಂಟಾದ ಹಿನ್ನೆಲೆ ಸಿಬ್ಬಂದಿ ಹೋಟೆಲ್‌ನ ಬಾಗಿಲು ಮುಚ್ಚಿದ್ದಾರೆ. ಇದನ್ನೂ ಓದಿ: ರಾಜ್ಯದ ಮೊಟ್ಟ ಮೊದಲ ಮೇಕೆ ಹಾಲು ಉತ್ಪಾದನಾ ಘಟಕ ಕಾಡುಪಾಲು

    ಬೆಳಗಾವಿಯ ಕೃಷ್ಣ ದೇವರಾಯ ಸರ್ಕಲ್ ಬಳಿಯಿರುವ ಸಾಯಿ ಹೋಟೆಲ್‌ನಲ್ಲಿ ಘಟನೆ ನಡೆದಿದೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಮೊದಲ ಮಗುವಿಗೆ 45 ವರ್ಷ – ಈಗ 66ನೇ ವಯಸ್ಸಿನಲ್ಲಿ 10ನೇ ಮಗು!

  • ವ್ಯಕ್ತಿಗಾಗಿ ನಡು ರಸ್ತೆಯಲ್ಲೇ ಪತ್ನಿ, ಲವ್ವರ್‌ ಹೊಡೆದಾಟ!

    ವ್ಯಕ್ತಿಗಾಗಿ ನಡು ರಸ್ತೆಯಲ್ಲೇ ಪತ್ನಿ, ಲವ್ವರ್‌ ಹೊಡೆದಾಟ!

    ಬೆಳಗಾವಿ: ನಡು ರಸ್ತೆಯಲ್ಲಿಯೇ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡ ಘಟನೆ ‌ಬೆಳಗಾವಿ (Belagavi) ನಗರದ ಕೊಲ್ಹಾಪುರ ಸರ್ಕಲ್‌ನಲ್ಲಿ ನಡೆದಿದೆ.

    ಮಾರಿಹಾಳ‌ ಗ್ರಾಂಪಂ ಸದಸ್ಯೆಯ ಪತಿ ಬಸವರಾಜ್ ಸೀತಿಮನಿ  ಅದೇ ಗ್ರಾಮದ ಮಾಸಾಬಿ ಸೈಯ್ಯದ್ ಜೊತೆ ಓಡಿಹೋಗಿದ್ದ. ಪತಿ ಓಡಿ ಹೋದ ಬಳಿಕ ಪತ್ನಿ ವಾಣಿಶ್ರೀ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ನ್ಯಾಯ ನೀಡುವಂತೆ ಮನವಿ ಮಾಡಿದ್ದಳು. ಇದನ್ನೂ ಓದಿ: ಮೈಸೂರಿನ ಉದಯಗಿರಿ ಗಲಾಟೆ – ಕಲ್ಲು ತೂರಿದ 1,000 ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಎಫ್‌ಐಆರ್‌

     

    ಎರಡು ತಿಂಗಳ‌ ನಂತರ ಬೆಳಗಾವಿಗೆ ಬಂದು ಮಾಸಾಬಿ ಜೊತೆಗೆ ಬಸವರಾಜ್ ವಾಸ ಮಾಡತೊಡಗಿದ್ದ. ಬುಧವಾರ ರಾತ್ರಿ ವಾಣಿಶ್ರೀ ಕೈಯಲ್ಲಿ ಜೋಡಿಗಳು ಸಿಕ್ಕಿಬಿದ್ದಿದ್ದಾರೆ.

    ಮಾಸಾಬಿಯನ್ನು ಪ್ರಶ್ನೆ ಮಾಡಿದ್ದಕ್ಕೆ ವಾಣಿಶ್ರೀ ಮೇಲೆ ‌ಹಲ್ಲೆ‌ಯಾಗಿದೆ. ಹಲ್ಲೆಯಾಗುತ್ತಿದ್ದಂತೆ ಪರಸ್ಪರ ಜುಟ್ಟು ಹಿಡಿದುಕೊಂಡು ವಾಣಿಶ್ರೀ ಮತ್ತು‌ ಮಾಸಾಬಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ.‌

    ಪತಿ ಬಸವರಾಜ್ ನಿಂದಲೂ ವಾಣಿಶ್ರೀಯ ಮೇಲೆ ಹಲ್ಲೆ ನಡೆದಿದೆ. ನಡು ರಸ್ತೆಯಲ್ಲಿ ಹೊಡೆದಾಡಿಕೊಳ್ಳುತ್ತಿರುವುದನ್ನು ನೋಡಿ ಸ್ಥಳೀಯರು ಮೂವರ ಜಗಳವನ್ನು ಬಿಡಿಸಿ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಹೊಡೆದಾಡುವ ವಿಡಿಯೋ ಈಗ ಹರಿದಾಡುತ್ತಿದೆ.

     

  • Bigg Boss Kannada ವಾರ್: ಶಟಪ್ ಎಂದು ಗರಂ ಆದ ನಮ್ರತಾ

    Bigg Boss Kannada ವಾರ್: ಶಟಪ್ ಎಂದು ಗರಂ ಆದ ನಮ್ರತಾ

    ಬಿಗ್ ಬಾಸ್  (Bigg Boss Kannada) ಮನೆ ಬೆಳಗ್ಗೆ ರಣರಂಗವಾಗಿತ್ತು. ನೆನ್ನೆಯಿಂದಲೇ ನಮ್ರತಾ (Namrata Gowda) ಮತ್ತು ತನಿಷಾ (Tanisha Kuppunda) ನಡುವೆ ಯಾವುದೂ ಸರಿಯಿಲ್ಲ ಎನ್ನುವಂತಿತ್ತು. ಅದು ಇವತ್ತು ನಿಜವಾಗಿದೆ. ಇಬ್ಬರೂ ಜೋರು ಧ್ವನಿಯಲ್ಲೇ ಕಿತ್ತಾಡಿದ್ದಾರೆ. ತನಿಷಾ ಮೇಲೆ ನಮ್ರತಾ ಗರಂ ಆಗಿದ್ದಾರೆ. ಶಟಪ್.. ಮುಚ್ಕೋ ಬಾಯಿ ಎಂದು ಹೇಳುವಷ್ಟರ ಮಟ್ಟಿಗೆ ಜಗಳ ಬೆಳೆದು ನಿಂತಿದೆ.

    ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೆ ಜಡೆ ಜಗಳ ಶುರುವಾಗಿದೆ. ತನಿಷಾ ಮತ್ತು ನಮ್ರತಾ ಗೌಡ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದೆ. ಫನ್ ಟಾಸ್ಕ್‌ ಫನ್‌ ಆಗಿ ನಡೆಯಬೇಕಿದ್ದ ಜಾಗದಲ್ಲಿ ನಮ್ರತಾ- ತನಿಷಾ ಕಿತ್ತಾಡಿಕೊಂಡಿದ್ದಾರೆ. ರೊಚ್ಚಿಗೆದ್ದ ನಮ್ರತಾ, ಆ್ಯಸಿಡ್ ಹಾಕಿ ತನಿಷಾ ಬಾಯಿ ತೊಳಿಯಿರಿ ಎಂದು ಕುಟುಕಿದ್ದಾರೆ.

    ಬಿಗ್ ಬಾಸ್ ಎಂದಿನಂತೆ ಈ ವಾರವೂ 2 ತಂಡಗಳಿಗೆ ಟಾಸ್ಕ್ ನೀಡಿದ್ರು. ಭಜರಂಗಿ’ – ‘ಉಗ್ರಂ’ ತಂಡಕ್ಕೆ ‘ಬಿಗ್ ಬಾಸ್’ ಫನ್ ಟಾಸ್ಕ್ ಕೊಟ್ಟಿದ್ದರು. ಅದೇ ‘ಗಲ್ಲಿ ಕ್ರಿಕೆಟ್’ ಇದರ ಅನುಸಾರ, ಎರಡೂ ತಂಡಗಳು ಮೂರು ಓವರ್‌ಗಳ ಗಲ್ಲಿ ಕ್ರಿಕೆಟ್ ಆಡಬೇಕಿತ್ತು. ಎರಡೂ ತಂಡದಿಂದ ತಲಾ ಒಬ್ಬರು ಅಂಪೈರ್‌ ಆಗಬೇಕಿತ್ತು. ‘ಭಜರಂಗಿ’ ತಂಡದಿಂದ ತನಿಷಾ ಅಂಪೈರ್ ಆದರೆ, ‘ಉಗ್ರಂ’ ತಂಡದಿಂದ ನಮ್ರತಾ ಗೌಡ ಅಂಪೈರ್‌ ಆಗಿದ್ದರು.

    ಆಟಕ್ಕೆ ತನಿಷಾ ಎಂಟ್ರಿ ಕೊಟ್ಟ ಕೂಡಲೆ ನಮ್ರತಾ, ತನಿಷಾ ಡಿಸಿಷನ್ ಫೇರ್‌ ಆಗಿರಲಿ ಈಗಲೇ ಹೇಳ್ತಿದ್ದೀನಿ ಎಂದು ಖಡಕ್ ಆಗಿ ಹೇಳಿ ಬಿಟ್ಟರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು. ನಮ್ರತಾ ಮಾತಿಗೆ ನಿಮ್ಮ ಹತ್ತಿರ ಅನ್ನಿಸಿಕೊಳ್ಳಲು ಬಂದಿಲ್ಲ ಇಲ್ಲಿ. ಇದು ನಾನ್‌ ಸೆನ್ಸ್. ಎಂಟರ್‌ಟೇನ್ಮೆಂಟ್ ಗೇಮ್‌ನ ಹಾಳು ಮಾಡೋಕೆ ನಿಮ್ಮಂಥೋರು ಇರಬೇಕು ಇಲ್ಲಿ ಅಂತ ತನಿಷಾ ತಿರುಗೇಟು ನೀಡಿದ್ರು.

    ಗಲ್ಲಿ ಕ್ರಿಕೆಟ್‌’ನಲ್ಲಿ ಅಂತಿಮವಾಗಿ ‘ಭಜರಂಗಿ’ ತಂಡ ಗೆಲುವು ಸಾಧಿಸಿತು. ಉತ್ತಮ ಬ್ಯಾಟ್‌ಮ್ಯಾನ್ ಪಟ್ಟ ತುಕಾಲಿ ಸಂತುಗೆ ಒಲಿಯಿತು. ಆದರೆ ಆಟ ಮುಗಿದ್ರೂ ನಮ್ರತಾ-ತನಿಷಾ ಕೋಳಿ ಜಳಗಕ್ಕೆ ಬ್ರೇಕ್ ಬಿಳಲಿಲ್ಲ.

    ಇದಾದ ಬಳಿಕ ಡಿಸಿಷನ್ ಫೇರ್‌ ಆಗಿರಲಿ ಈಗಲೇ ಹೇಳ್ತಿದ್ದೀನಿ ಅಂತ ತನಿಷಾ ಮುಂದೆ ಹೇಳಿಬಿಟ್ಟು. ಜಗಳದ ಬಳಿಕ ವಿನಯ್ ಮತ್ತು ಕಾರ್ತಿಕ್ ಮುಂದೆ, ನಾನು ಏನೂ ಹೇಳಿಲ್ಲ ಗುರು ನಮ್ರತಾ ಖ್ಯಾತೆ ತೆಗೆದರು. ಮಾತು ಶುರುವಾದ್ಮೇಲೆ ನಿಲ್ಲಿಸೋದೇ ಇಲ್ಲ ಅಂತ ತನಿಷಾ ಬಗ್ಗೆ ವಿನಯ್ ಗೌಡ ಕಾಮೆಂಟ್ ಮಾಡಿದ್ಮೇಲೆ, ಮಾತನಾಡುವ ಕಾಯಿಲೆ ಅನ್ಸುತ್ತೆ. ಆ್ಯಸಿಡ್ ಹಾಕಿ ಬಾಯಿ ತೊಳಿದುಬಿಡು ಒಂದ್ಸಲಿ ಎಂದು ಕೊಂಕು ನುಡಿದರು ನಮ್ರತಾ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಿವಿ ರಿಮೋಟ್‌ಗಾಗಿ ಅಣ್ಣ-ತಮ್ಮಂದಿರ ಕಿತ್ತಾಟ; ತಂದೆಯಿಂದ ಮಗನ ಹತ್ಯೆ

    ಟಿವಿ ರಿಮೋಟ್‌ಗಾಗಿ ಅಣ್ಣ-ತಮ್ಮಂದಿರ ಕಿತ್ತಾಟ; ತಂದೆಯಿಂದ ಮಗನ ಹತ್ಯೆ

    ಚಿತ್ರದುರ್ಗ: ಟಿವಿ ರಿಮೋಟ್‌ಗಾಗಿ (Tv Remote) ಅಣ್ಣ-ತಮ್ಮಂದಿರ (Brothers) ನಡುವೆ ಗಲಾಟೆ ನಡೆದ ಹಿನ್ನೆಲೆ ಸಿಟ್ಟಿಗೆದ್ದ ತಂದೆ (Father) ಹಿರಿಮಗನ ಮೇಲೆ ಕತ್ತರಿ (Scissors) ಎಸೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಹಿರಿಮಗ ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

    ಜಿಲ್ಲೆಯ ಮೊಳಕಾಲ್ಮೂರು (Molakalmuru) ಪಟ್ಟಣದಲ್ಲಿ ಘಟನೆ ನಡೆದಿದ್ದು, ಹಿರಿಮಗ ಚಂದ್ರಶೇಖರ್ (16) ಸಾವನ್ನಪ್ಪಿದ್ದಾನೆ. ಮೃತ ಚಂದ್ರಶೇಖರ್ ಹಾಗೂ ತಮ್ಮ ಪವನ್ (14) ರಿಮೋಟ್‌ಗಾಗಿ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ತಂದೆ ಲಕ್ಷ್ಮಣ್‌ಬಾಬು ತನ್ನ ಹಿರಿಮಗನಾದ ಚಂದ್ರಶೇಖರ್ ಮೇಲೆ ಕತ್ತರಿ ಎಸೆದು ಹೆದರಿಸಲು ಮುಂದಾಗಿದ್ದಾರೆ. ಹಲವು ದಿನಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಲಕ್ಷ್ಮಣ್‌ಬಾಬು ಮಕ್ಕಳ ಜಗಳದಿಂದ ಸಿಟ್ಟಿಗೆದ್ದು ಹಿರಿಮಗನ ಕಡೆಗೆ ಕತ್ತರಿ ಎಸೆದಿದ್ದಾರೆ. ಇದನ್ನೂ ಓದಿ: ಕಾರು, ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ – 8 ಮಂದಿ ದುರ್ಮರಣ

    ದುರಾದೃಷ್ಟವಶಾತ್ ಕತ್ತರಿ ಏಟು ಬಾಲಕನ ಕಿವಿಯ ಹಿಂಭಾಗಕ್ಕೆ ಜೋರಾಗಿ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಚಂದ್ರಶೇಖರ್ (16) ಸಾವನ್ನಪ್ಪಿದ್ದಾನೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: 15 ವರ್ಷದಲ್ಲಿ ಒಮ್ಮೆಯೂ ತವರಿಗೆ ಕಳುಹಿಸದೆ ಕಿರುಕುಳ – ವಿಷ ಕುಡಿಸಿ ಪತ್ನಿಯ ಕೊಂದ ದುರುಳ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಷುಲ್ಲಕ ಕಾರಣಕ್ಕೆ ಜಗಳ – ಯುವಕನ ಕೊಲೆಯಲ್ಲಿ ಅಂತ್ಯ

    ಕ್ಷುಲ್ಲಕ ಕಾರಣಕ್ಕೆ ಜಗಳ – ಯುವಕನ ಕೊಲೆಯಲ್ಲಿ ಅಂತ್ಯ

    ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ (Fight) ಯುವಕನ ಕೊಲೆಯಲ್ಲಿ ಅಂತ್ಯಕಂಡ ಘಟನೆ ಮಂಡ್ಯ (Mandya) ಜಿಲ್ಲೆ ಕೆಆರ್ ಪೇಟೆ (K.R.Pete) ತಾಲೂಕಿನ ಮಲ್ಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಯೋಗೇಶ್ (32) ಕೊಲೆಯಾದ ದುರ್ದೈವಿ. ಪ್ರದೀಪ್ (31) ಹತ್ಯೆಗೈದ ದುಷ್ಕರ್ಮಿ. ಕೊಲೆಯಾದ ಯೋಗೇಶ್ ಹಾಗೂ ಆತನ ತಾಯಿ ಭಾಗ್ಯಮ್ಮ ಜೊತೆ ಪ್ರದೀಪ್ ಪದೇ ಪದೇ ಜಗಳ ಮಾಡುತ್ತಿದ್ದ. ಮಂಗಳವಾರ ಸಂಜೆಯೂ ಇದೇ ರೀತಿ ಜಗಳ ಶುರುವಾಗಿದ್ದು, ಕೋಪ ವಿಕೋಪಕ್ಕೆ ತಿರುಗಿದೆ. ಕೋಪದ ಭರದಲ್ಲಿ ಯೋಗೇಶ್ ತನ್ನ ಮನೆಯಲ್ಲಿದ್ದ ಚಾಕು ತಂದು ಯೋಗೇಶ್‌ಗೆ ಇರಿದಿದ್ದಾನೆ. ಇದನ್ನೂ ಓದಿ: ಬೆಲೆ ಬಾಳುವ ವಾಚ್‍ಗಾಗಿ ಯುವಕನ ಬರ್ಬರ ಹತ್ಯೆ

    ಚಾಕು ಇರಿತಕ್ಕೊಳಗಾದ ಯೋಗೇಶ್‌ನನ್ನು ತಕ್ಷಣವೇ ಸ್ಥಳಿಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಮೃತಪಟ್ಟಿದ್ದಾನೆ. ಸದ್ಯ ಕೊಲೆಗೈದ ಆರೋಪಿ ಪ್ರದೀಪ್ ಪರಾರಿಯಾಗಿದ್ದು, ತಲೆಮರೆಸಿಕೊಂಡಿರುವ ಪ್ರದೀಪ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ಕುರಿತು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 2ನೇ ಮದುವೆಗೆ ಅಡ್ಡಿಯಾಗುತ್ತೆ ಎಂದು 14 ತಿಂಗಳ ಮಗುವನ್ನೇ ಕೊಂದ ಪಾಪಿ ತಂದೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಉರ್ಫಿಗೆ ಕ್ಲಾಸ್: ನಿನಗೇನು ಪ್ರಾಬ್ಲಂ ಎಂದ ಜಾವೇದ್

    ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಉರ್ಫಿಗೆ ಕ್ಲಾಸ್: ನಿನಗೇನು ಪ್ರಾಬ್ಲಂ ಎಂದ ಜಾವೇದ್

    ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಉರ್ಫಿ ಜಾವೇದ್ (Urfi Javed) ಅರೆಬರೆ ಬಟ್ಟೆ ಹಾಕಿಕೊಂಡು ಮುಂಬೈ (Mumbai) ವಿಮಾನ ನಿಲ್ದಾಣದಲ್ಲಿ (Airport) ಕಾಣಿಸಿಕೊಂಡಿದ್ದಾರೆ. ಪೂರ್ತಿ ಬೆನ್ನು ಕಾಣುವಂತೆ ಹಾಕಿದ್ದ ಕಾಸ್ಟ್ಯೂಮ್ ಕಂಡ ವ್ಯಕ್ತಿಯೊಬ್ಬ ‘ನೀನು ನಮ್ಮ ದೇಶದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದೀಯಾ. ಇಂತಹ ಬಟ್ಟೆಗಳನ್ನು ನೀವು ಧರಿಸೋದು ಯಾಕೆ?’ ಎಂದು ವ್ಯಕ್ತಿಯು ಪ್ರಶ್ನೆ ಮಾಡುತ್ತಾರೆ.

    ಇದನ್ನು ಕೇಳಿಸಿಕೊಂಡ ಉರ್ಫಿ ತಕ್ಷಣವೇ ಆವ್ಯಕ್ತಿಯೊಂದಿಗೆ ಜಗಳಕ್ಕೆ ಇಳಿಯುತ್ತಾರೆ. ‘ನಾನು ಈ ರೀತಿಯ ಬಟ್ಟೆ ಹಾಕುವುದರಿಂದ ನಿನಗೆ, ನಿನ್ನ ತಂದೆಗೆ ಏನಾದರೂ ತೊಂದರೆಯಾ?’ ಎನ್ನುತ್ತಾ ಹರಿಹಾಯ್ತಾಳೆ. ಆ ಸನ್ನಿವೇಶವನ್ನು ಕಂಡ ಮಹಿಳೆಯೊಬ್ಬರು ಉರ್ಫಿ ಮತ್ತು ಆವ್ಯಕ್ತಿಯ ನಡುವಿನ ಮಾತುಕತೆ ನಿಲ್ಲಿಸಲು ಪ್ರಯತ್ನಿಸುತ್ತಾರೆ. ಉರ್ಫಿಯನ್ನೂ ಸಮಾಧಾನ ಮಾಡಿ ಕಳಿಸ್ತಾರೆ. ಇದನ್ನೂ ಓದಿ:ಕಾಲ್‌ಶೀಟ್‌ ಕದನಕ್ಕೆ ಬ್ರೇಕ್‌ ಬೀಳುವ ಮುಂಚೆಯೇ ‘K46’ ಸಿನಿಮಾಗೆ ಸಜ್ಜಾದ ಕಿಚ್ಚ ಸುದೀಪ್

    ಈ ವಿಡಿಯೋವನ್ನು ಶೂಟ್ ಮಾಡದಂತೆ ಉರ್ಫಿ ನಂತರ ಮನವಿ ಮಾಡುತ್ತಾರೆ. ಆದರೂ, ಈ ವಿಡಿಯೋ ಶೂಟ್ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉರ್ಫಿ ಜಾವೇದ್ ಅವರಿಗೆ ಈ ರೀತಿ ಕಾಮೆಂಟ್ ಮಾಡುವುದು ಮೊದಲೇನೂ ಅಲ್ಲ. ಹಲವಾರು ಬಾರಿ ಇಂತಹ ಸನ್ನಿವೇಶವನ್ನು ಅವರು ಎದುರಿಸಿದ್ದಾರೆ.

     

    ಕೇವಲ ಜನರು ನಿಂದಿಸುವುದು ಮಾತ್ರವಲ್ಲ, ಉರ್ಫಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಹಲವಾರು ಜನರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಹಾಗಂತ ಉರ್ಫಿ ಹೆದರಿಕೊಂಡಿಲ್ಲ, ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಂತೆ ಮಹಿಳಾ ಆಯೋಗಕ್ಕೆ ಪತ್ರವನ್ನು ಬರೆದಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ವಾಹಕನ ಶರ್ಟ್ ಹಿಡಿದೆಳೆದು ರೌದ್ರಾವತಾರ ತೋರಿದ ಮಹಿಳೆಯರು – ವಿಡಿಯೋ ವೈರಲ್

    ನಿರ್ವಾಹಕನ ಶರ್ಟ್ ಹಿಡಿದೆಳೆದು ರೌದ್ರಾವತಾರ ತೋರಿದ ಮಹಿಳೆಯರು – ವಿಡಿಯೋ ವೈರಲ್

    ಬೆಳಗಾವಿ: ಬಸ್ ನಿರ್ವಾಹಕನ (Bus Conductor) ವಿರುದ್ಧ ಸಿಡಿದೆದ್ದ ಮಹಿಳಾ (Women) ಪ್ರಯಾಣಿಕರು ಕರ್ತವ್ಯದಲ್ಲಿದ್ದ ನಿರ್ವಾಹಕನ ಶರ್ಟ್ (Shirt) ಹಿಡಿದೆಳೆದು ರೌದ್ರಾವತಾರ ತೋರಿದ ಘಟನೆ ಸವದತ್ತಿ (Savadatti) ಯಲ್ಲಮ್ಮನ ಗುಡ್ಡದಲ್ಲಿ ನಡೆದಿದೆ.

    ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀರೇಣುಕಾ ದೇವಿ ಯಲ್ಲಮ್ಮನ ಗುಡ್ಡದಲ್ಲಿ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಸವದತ್ತಿ ಡಿಪೋಗೆ ಸೇರಿದ ಬಸ್‌ನಲ್ಲಿ ನಿರ್ವಾಹಕ ಹಾಗೂ ಮಹಿಳಾ ಪ್ರಯಾಣಿಕರು ಕೈ ಕೈ ಮಿಲಾಯಿಸಿದ್ದಾರೆ. KA 22 F 1863 ಸಂಖ್ಯೆಯ NWKRTC ಬಸ್‌ನಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಶಿವಕುಮಾರ್‌ ನೀವು ಏನು ಸೂಪರ್‌ಮ್ಯಾನಾ: ಅಶ್ವಥ್ ನಾರಾಯಣ ವಾಗ್ದಾಳಿ

    ಕ್ಷುಲ್ಲಕ ಕಾರಣಕ್ಕೆ ನಿರ್ವಾಹಕ ಬಿ.ಎಸ್.ಭದ್ರಣ್ಣವರ್ ಮತ್ತು ಮಹಿಳಾ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಮಹಿಳೆಯ ಮೇಲೆ ಕೈ ಮಾಡಲು ನಿರ್ವಾಹಕ ಮುಂದಾಗಿದ್ದಾನೆ. ಈ ವೇಳೆ ನಿರ್ವಾಹಕನ ಮೇಲೆ ಮಹಿಳಾ ಪ್ರಯಾಣಿಕರು ತಿರುಗಿ ಬಿದ್ದಿದ್ದಲ್ಲದೇ ಪರಸ್ಪರ ಬಸ್ ನಿರ್ವಾಹಕ ಮತ್ತು ಮಹಿಳಾ ಪ್ರಯಾಣಿಕರು ಹೊಡೆದಾಡಿಕೊಂಡಿದ್ದಾರೆ. ನಿರ್ವಾಹಕ ಮತ್ತು ಮಹಿಳೆಯರ ಈ ಜಟಾಪಟಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಹಸಿದವರ ಕೂಗಿಗೆ ಸಿದ್ದರಾಮಯ್ಯರ ಕಿವಿ ಯಾವಾಗಲೂ ತೆರೆದಿರುತ್ತದೆ: ನಾಡೋಜ ಹಂಪನಾ

  • ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಲಾಂಗ್‌ನಿಂದ ಹಲ್ಲೆ

    ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಲಾಂಗ್‌ನಿಂದ ಹಲ್ಲೆ

    ಹಾಸನ: ಜಗಳ (Uproar) ಬಿಡಿಸಲು ಹೋದ ಪೊಲೀಸ್ ಪೇದೆ (Police Constable) ಮೇಲೆ ಕಲ್ಲು ಹಾಗೂ ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ (Attack) ನಡೆಸಿರುವ ಘಟನೆ ಹಾಸನ (Hassan) ಜಿಲ್ಲೆಯ ಹೊಳೆನರಸೀಪುರ (Holenarasipura) ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಮಳಲಿ ದೇವಸ್ಥಾನದಲ್ಲಿ ಘಟನೆ ನಡೆದಿದ್ದು, ಯಸಳೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶರತ್ ಹಲ್ಲೆಗೊಳಗಾಗಿದ್ದಾರೆ. ಶರತ್ ಹೊಳೆನರಸೀಪುರ ತಾಲೂಕಿನ ಕುಂದೂರು ಹೋಬಳಿಯ ಎಸ್.ಹೊನ್ನೇನಹಳ್ಳಿ ಗ್ರಾಮದವರಾಗಿದ್ದು, ಜೂ.15ರಂದು ಸಾಂದರ್ಭಿಕ ರಜೆ ಪಡೆದು ತಮ್ಮ ಗ್ರಾಮದ ದೀಪಕ್ ಎಂಬವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಮಳಲಿ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ದೇವಸ್ಥಾನದ ಬಳಿಯಿರುವ ಸೋನಾ ಶ್ರೇಯ ಕನ್ವೆನ್ಷನ್ ಹಾಲ್ ಮುಂಭಾಗ ಚೇತನ್ ಎಂಬ ಯುವಕನಿಗೆ ಶರತ್ ಅವರ ಗ್ರಾಮಕ್ಕೆ ಸೇರಿದ ಯುವಕರ ಗುಂಪೊಂದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡುತ್ತಿದ್ದರು. ಇದನ್ನೂ ಓದಿ: ಚಿಪ್ಸ್ ಕರೆಯುವ ಎಣ್ಣೆ ಬಾಣಲೆಗೆ ಬಿದ್ದಿದ್ದ 25 ರ ಯುವಕ ಸಾವು

    ಈ ಸಂದರ್ಭ ಶರತ್ ಜಗಳ ಬಿಡಿಸಲು ಹೋಗಿದ್ದು, ಮಿಥುನ್, ಲೋಹಿತ್, ನಟರಾಜ ಹಾಗೂ ಇತರರು ಶರತ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ನಟರಾಜ ಎಂಬ ಆರೋಪಿ ಶರತ್ ತಲೆಗೆ ಕಲ್ಲಿನಿಂದ ಹೊಡೆದು ಕಾರಿನಿಂದ ಲಾಂಗ್ ತಂದಿದ್ದು, ಇದನ್ನು ನೋಡಿದ ಶರತ್ ಕನ್ವೆನ್ಷನ್ ಹಾಲ್ ಒಳಗೆ ಓಡಿದ್ದಾರೆ. ಈ ವೇಳೆ ಪುಂಡರೂ ಸಹ ಕನ್ವೆನ್ಷನ್ ಹಾಲ್ ಒಳಗೆ ನುಗ್ಗಿ ಶರತ್ ಮೇಲೆ ಮನಬಂದಂತೆ ಲಾಂಗ್‌ನಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕೋಮು ಸಂಘರ್ಷದಲ್ಲಿ ಬಲಿಯಾದ ನಾಲ್ವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

    ಹಲ್ಲೆಯಿಂದಾಗಿ ಶರತ್ ಹಾಲ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಈ ಕುರಿತು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶರತ್ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರಯಾಗಿದ್ದು, ಸದ್ಯ ಗಾಯಾಳು ಶರತ್ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಊರಿಗೆ ಹೋಗೋಣವೆಂದು ಕರ್ಕೊಂಡು ಬಂದು ಮಕ್ಕಳೆದುರೇ ದಾರಿ ಮಧ್ಯೆ ಪತ್ನಿಯನ್ನ ಹೊಡೆದು ಕೊಂದ!