Tag: ಜಗಪತಿ ಬಾಬು

  • ‘ಸಲಾರ್’ ಪಾರ್ಟ್‌ 2 ಬರೋದು ಪಕ್ಕಾ- ಬಾಯ್ಬಿಟ್ಟ ಜಗಪತಿ ಬಾಬು

    ‘ಸಲಾರ್’ ಪಾರ್ಟ್‌ 2 ಬರೋದು ಪಕ್ಕಾ- ಬಾಯ್ಬಿಟ್ಟ ಜಗಪತಿ ಬಾಬು

    ನ್ನಡದ ಜಾಗ್ವರ್, ಮದಗಜ, ರಾಬರ್ಟ್ ಸಿನಿಮಾಗಳಲ್ಲಿ ಬಹುಭಾಷಾ ನಟ ಜಗಪತಿ ಬಾಬು ಅವರು ‘ಸಲಾರ್’ (Salaar) ಪ್ರಭಾಸ್ ಮುಂದೆ ಜಗಪತಿ ಬಾಬು (Jagapathi Babu) ಅಬ್ಬರಿಸಲಿದ್ದಾರೆ. ಪ್ರಭಾಸ್‌ಗೆ ಠಕ್ಕರ್ ಕೊಡಲು ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ. ಈ ಬಗ್ಗೆ ಟಿಟೌನ್‌ನಲ್ಲಿ ಭಾರೀ ಚರ್ಚೆ ಆಗುತ್ತಿದೆ. ಜೊತೆ ಸಲಾರ್‌ ಸಿನಿಮಾ ಬಗ್ಗೆ ಮೇಜರ್‌ ಅಪ್‌ಡೇಟ್‌ ಕೊಟ್ಟಿದ್ದಾರೆ.

    ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಜಗಪತಿ ಬಾಬು ಅವರಿಗೆ ಸಖತ್ ಡಿಮ್ಯಾಂಡ್‌ಯಿದೆ. ಸ್ಟಾರ್ ನಟರ ಸಿನಿಮಾಗಳಿಗೆ ಜಗಪತಿ ಬಾಬು ಅವರೇ ಬೇಕು ಎನ್ನುವಷ್ಟರ ಮಟ್ಟಿಗೆ ಹವಾ ಕ್ರಿಯೆಟ್ ಆಗಿದೆ. ಹೀಗಿರುವಾಗ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ನಟಿಸಿದ್ದಾರೆ. ಅವರ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ.

    ಖಡಕ್ ರೋಲ್‌ನಲ್ಲಿ ಜಗಪತಿ ಬಾಬು ‘ಸಲಾರ್’ನಲ್ಲಿ (Salaar) ನಟಿಸಿದ್ದಾರೆ. ಸಲಾರ್ ಮೊದಲ ಭಾಗದಲ್ಲಿ ಜಗಪತಿ ಬಾಬು (Jagapathi Babu) ಅವರ ಪಾತ್ರದ ಪರಿಚಯವಾಗುತ್ತದೆ. ಸಲಾರ್ ಎರಡನೇ ಭಾಗದಲ್ಲಿ ಜಗಪತಿ ಬಾಬು ಪೂರ್ಣ ಪ್ರಮಾಣದಲ್ಲಿ ಪ್ರಭಾಸ್ ಜೊತೆ ಕಾಣಿಸಿಕೊಳ್ಳುತ್ತಾರೆ. ರಾಜಮಾನಾರ್ ಎಂಬ ರೋಲ್‌ನಲ್ಲಿ ಜಗಪತಿ ಬಾಬು ನಟಿಸಿದ್ದಾರೆ ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಮೂಲಕ ಕೆಜಿಎಫ್‌ನಂತೆಯೇ ಸಲಾರ್‌ ಎರಡು ಭಾಗಗಳಲ್ಲಿ ಬರೋದಾಗಿ ಜಗಪತಿ ಬಾಬು ಬಾಯ್ಬಿಟ್ಟಿದ್ದಾರೆ. ಈ ಸುದ್ದಿ ಕೇಳ್ತಿದ್ದಂತೆ ಪ್ರಶಾಂತ್‌ ನೀಲ್‌- ಪ್ರಭಾಸ್‌ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

    ಪ್ರಭಾಸ್ ಮುಂದೆ ಅಬ್ಬರಿಸಲು ಜಗಪತಿ ಬಾಬು 4 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ. ಪಾತ್ರ ಯಾವುದೇ ಇರಲಿ, ಸಣ್ಣ ಪ್ರಾಜೆಕ್ಟ್ ಮತ್ತು ದೊಡ್ಡ ಬಜೆಟ್ ಸಿನಿಮಾ ಎಂಬುದೆಲ್ಲಾ ಏನು ಇಲ್ಲಾ. ಕಥೆ ಚೆನ್ನಾಗಿರಬೇಕು ಎನ್ನುತ್ತಾರೆ ಸಲಾರ್ ನಟ ಜಗಪತಿ ಬಾಬು. ಇದನ್ನೂ ಓದಿ:ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ‘ಪಠಾಣ್’ ಬೆಡಗಿ

    ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಾಣದ ಸಲಾರ್‌ನಲ್ಲಿ ಪ್ರಭಾಸ್ ಜೊತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಸೇರಿದಂತೆ ಹಲವರು ನಟಿಸಿದ್ದಾರೆ. ಕನ್ನಡದ ಕೆಜಿಎಫ್ 2 ನಿರ್ದೇಶಕ ಪ್ರಶಾಂತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇದೇ ಸೆಪ್ಟೆಂಬರ್ 28ಕ್ಕೆ ತೆರೆಗೆ ಬರಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದು ನನ್ನ ಅತ್ಯಂತ ಬೆಸ್ಟ್ ವರ್ಸ್ಟ್ ಲುಕ್: ಜಗಪತಿ ಬಾಬು

    ಇದು ನನ್ನ ಅತ್ಯಂತ ಬೆಸ್ಟ್ ವರ್ಸ್ಟ್ ಲುಕ್: ಜಗಪತಿ ಬಾಬು

    ಬೆಂಗಳೂರು: ಟಾಲಿವುಡ್ ಅಂಗಳದ ಬಹುನಿರೀಕ್ಷಿತ ಸಲಾರ್ ಸಿನಿಮಾದಲ್ಲಿ ನಟ ಜಗಪತಿ ಬಾಬು ಅವರ ಖಡಕ್ ಫಸ್ಟ್ ಲುಕ್ ರಿವೀಲ್ ಆಗಿದೆ. ಈ ಕುರಿತಾಗಿ ಜಗಪತಿ ಬಾಬು ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಲಾರ್ ಚಿತ್ರತಂಡ ಸಿನಿಮಾದ ಪ್ರಮುಖ ಅಪ್‍ಡೇಟ್‍ವೊಂದನ್ನು ಪ್ರೇಕ್ಷಕರ ಮುಂದಿಟ್ಟಿದ್ದು, ಬಹು ಭಾಷಾ ನಟ ಜಗಪತಿ ಬಾಬು ಅವರ ಫಸ್ಟ್‌ಲುಕ್‌ ರಿವೀಲ್ ಮಾಡಿದೆ. ಸಿನಿಮಾದಲ್ಲಿ ರಾಜಮನಾರ್ ಪಾತ್ರದಲ್ಲಿ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದು, ಪೋಸ್ಟರ್‌ನಲ್ಲಿ ಮೂಗಿಗೆ ರಿಂಗ್ ಹಾಕಿ ಕೋಪದಿಂದ ಖಡಕ್ ಆಗಿರುವ ನೋಟದೊಂದಿಗೆ ಭಯಂಕರವಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:  ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ಖಡಕ್ ಲುಕ್ ಧಗ ಧಗ!

    ಟ್ವೀಟ್‍ನಲ್ಲಿ ಏನಿದೆ?
    ಇದು ನನ್ನ ಅತ್ಯಂತ ಬೆಸ್ಟ್ ವರ್ಸ್ಟ್ ಲುಕ್, ಪ್ರಶಾಂತ್ ನೀಲ್ ನೆರವಿನಿಂದ ಮತ್ತು ಅತ್ಯುತ್ತಮ ನಟನೆಯಿಂದ ಉತ್ಸುಕನಾಗಿದ್ದೇನೆ. ನನ್ನ ಜೀವನದೊಂದಿಗೆ ನಾನು ಪ್ರೀತಿಗೆ ಬಿದ್ದಿದ್ದೇನೆ. ಪ್ರಭಾಸ್, ಹೊಂಬಾಳೆ ಸಂಸ್ಥೆ, ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ಎಂದು ಬರೆದುಕೊಂಡು  ಜಗಪತಿ ಬಾಬು ಟ್ವೀಟ್ ಮಾಡಿದ್ದಾರೆ.

    ಬಾಹುಬಲಿ ಪ್ರಭಾಸ್ ನಟನೆಯ ಹಾಗೂ ಕೆಜಿಎಫ್ ಸೂತ್ರದಾರ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಕುರಿತಾಗಿ ನಿರ್ದೇಶಕರು ಮತ್ತಷ್ಟು ಕ್ಯೂರಾಟಿಸಿ ಹುಟ್ಟಿಸುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಬಿಗ್ ಬಜೆಟ್‍ನಲ್ಲಿ ನಿರ್ಮಾಣ ಆಗುತ್ತಿರುವ ಸಲಾರ್ ಮೇಲೆ ಪ್ರಭಾಸ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  • ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ಖಡಕ್ ಲುಕ್ ಧಗ ಧಗ!

    ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ಖಡಕ್ ಲುಕ್ ಧಗ ಧಗ!

    ಹೈದರಾಬಾದ್: ಟಾಲಿವುಡ್ ಅಂಗಳದ ಬಹುನಿರೀಕ್ಷಿತ ಸಲಾರ್ ಸಿನಿಮಾದಲ್ಲಿ ನಟ ಜಗಪತಿ ಬಾಬು ಅವರ ಖಡಕ್ ಫಸ್ಟ್ ಲುಕ್ ರಿವೀಲ್ ಆಗಿದೆ.

    ಟಾಲಿವುಡ್ ಬಾಹುಬಲಿ ಪ್ರಭಾಸ್ ನಟನೆಯ ಹಾಗೂ ಕೆಜಿಎಫ್ ಸೂತ್ರದಾರ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಕುರಿತಾಗಿ ನಿರ್ದೇಶಕರು ಮತ್ತಷ್ಟು ಕ್ಯೂರಾಟಿಸಿ ಹುಟ್ಟಿಸುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಸಲಾರ್ ಸಿನಿಮಾ ಅಪ್‍ಡೇಟ್‍ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗ ಚಿತ್ರತಂಡ ರಾಜಮನಾರ್ ಪಾತ್ರವನ್ನು ಪರಿಚಯಿಸಿದೆ. ಇದರಲ್ಲಿ ಟಾಲಿವುಡ್‍ನ ಖ್ಯಾತ ನಟ ಜಗಪತಿ ಬಾಬು ನಟಿಸುತ್ತಿದ್ದಾರೆ. ಇವರ ಪಾತ್ರದ ಕುರಿತಾಗಿ ಪ್ರಶಾಂತ್ ನೀಲ್ ಪೋಸ್ಟರ್ ಟ್ವೀಟ್ ಮಾಡುವ ಮೂಲಕವಾಗಿ ಅಭಿಮಾನಿಗಳಿಗೆ ಸಿನಿಮಾದಲ್ಲಿರುವ ಖಡಕ್ ಪಾತ್ರದ ಕುರಿತಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.

    ಈಗ ಚಿತ್ರತಂಡ ರಾಜಮನಾರ್ ಪಾತ್ರವನ್ನು ಪರಿಚಯಿಸಿದೆ. ಇದರಲ್ಲಿ ಟಾಲಿವುಡ್‍ನ ಖ್ಯಾತ ನಟ ಜಗಪತಿ ಬಾಬು ಈ ಪಾತ್ರದಲ್ಲಿ ಖಡಖ್ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಬಿಡುಗಡೆಮಾಡಲಾಗಿದೆ. ಜಗಪತಿ ಬಾಬು ವಿಲನ್ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಬಿಗ್ ಬಜೆಟ್‍ನಲ್ಲಿ ನಿರ್ಮಾಣ ಆಗುತ್ತಿರುವ ಸಲಾರ್ ಮೇಲೆ ಪ್ರಭಾಸ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ:  ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟ – ಕಾಂಗ್ರೆಸ್, ಟಿಎಂಸಿ ಪ್ರಶ್ನೆ

    ಜಗಪತಿ ಬಾಬು ಸಲಾರ್ ಗೆ ವಿಲನ್ ಆಗುತ್ತಾರೆ ಎನ್ನುವ ವಿಚಾರ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅವರ ಖಡಕ್ ಲುಕ್ ನೋಡಿ ಫ್ಯಾನ್ಸ್ ಸಾಕಷ್ಟು ಖುಷಿಪಟ್ಟಿದ್ದಾರೆ. ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ಖಡಲ್ ಅವತಾರ ಹೇಗೆ ಇರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

  • ಹೌದು, ಆಕೆಯೊಂದಿಗೆ ನಾನು ಸಂಬಂಧ ಹೊಂದಿದ್ದೆ: ಜಗಪತಿ ಬಾಬು ಗರಂ

    ಹೌದು, ಆಕೆಯೊಂದಿಗೆ ನಾನು ಸಂಬಂಧ ಹೊಂದಿದ್ದೆ: ಜಗಪತಿ ಬಾಬು ಗರಂ

    ಹೈದರಾಬಾದ್: ನಾನು ನಟಿ ಸೌಂದರ್ಯ ಅವರ ಜೊತೆ ಸಂಬಂಧ ಹೊಂದಿದ್ದೆ ಎಂದು ಟಾಲಿವುಡ್‍ನ ಖ್ಯಾತ ಖಳನಟ ಜಗಪತಿ ಬಾಬು ಅವರು ಹೇಳಿದ್ದಾರೆ.

    ಕನ್ನಡ, ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸೌಂದರ್ಯ ಅವರು 2004ರಲ್ಲಿ ಅಗಲಿದ್ದಾರೆ. ಆದರೆ ನಟಿ ಸೌಂದರ್ಯ ಜಗಪತಿ ಬಾಬು ಜೊತೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳು ಹರಿದಾಡುತ್ತಿವೆ. ಇದೀಗ ಸ್ವತಃ ಜಗಪತಿ ಬಾಬು ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಇತ್ತೀಚೆಗೆ ಮಾಧ್ಯಮಗಳ ಸಂವಾದದ ವೇಳೆ ಮಾತನಾಡಿದ ನಟ ಜಗಪತಿ, ಸೌಂದರ್ಯ ಅವರ ಜೊತೆ ಸಂಬಂಧ ಇರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

    “ಹೌದು, ನನಗೆ ಸೌಂದರ್ಯ ಅವರೊಂದಿಗೆ ಸಂಬಂಧವಿತ್ತು. ನಾನು ಮತ್ತು ಸೌಂದರ್ಯ ಅವರ ಸಹೋದರ ಉತ್ತಮ ಸ್ನೇಹಿತರಾಗಿದ್ದೆವು. ಆದ್ದರಿಂದ ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದೆ. ಈ ವೇಳೆ ಸೌಂದರ್ಯ ಅವರನ್ನ ಭೇಟಿ ಮಾಡುತ್ತಿದ್ದೆ. ಆದರೆ ಜನರು ಅವರ ಬಗ್ಗೆ ತಪ್ಪಾದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರು ನಮ್ಮ ಸಂಬಂಧದ ಬಗ್ಗೆ ಎಂದಿಗೂ ಅರ್ಥಮಾಡಿಕೊಳ್ಳಲಿಲ್ಲ” ಎಂದು ಬೇಸರದಿಂದ ಹೇಳಿದ್ದಾರೆ.

    ಸಾಮಾನ್ಯವಾಗಿ ಜನರು ಸಂಬಂಧವನ್ನು ದೈಹಿಕ ಸಂಬಂಧವೆಂದು ಭಾವಿಸುತ್ತಾರೆ. ಆದರೆ ನಮ್ಮಿಬ್ಬರ ಸಂಬಂಧ ವಿಭಿನ್ನವಾಗಿತ್ತು. ನಮ್ಮಿಬ್ಬರ ಮಧ್ಯೆ ಉತ್ತಮ ಭಾಂದವ್ಯವಿತ್ತು. ಅದು ಅವರೊಂದಿಗಿನ ನನ್ನ ಸಂಬಂಧ” ಎಂದು ಸ್ಪಷ್ಟ ಪಡಿಸಿದ್ದಾರೆ.

    ‘ರೈತು ಭಾರತಂ’ ಸಿನಿಮಾದ ಮೂಲಕ ಸೌಂದರ್ಯ ಟಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಸೌಂದರ್ಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಜೊತೆ ಹಿಂದಿ ಸಿನಿಮಾದಲ್ಲೂ ಅಭಿನಯಸಿದ್ದಾರೆ. ಅವರು2004ರಲ್ಲಿ ಬಿಡುಗಡೆಯಾದ ‘ಆಪ್ತಮಿತ್ರ’ ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು. ಸದ್ಯಕ್ಕೆ ನಟ ಜಗಪತಿ ಬಾಬು ಸ್ಯಾಂಡಲ್‍ವುಡ್‍ನ ‘ರಾಬರ್ಟ್’ ಮತ್ತು ಉಪ್ಪಿ ರೂಪೀ’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

  • ಸೈರಾದಲ್ಲಿ ಕಿಚ್ಚ ಸುದೀಪ್ ಅಬ್ಬರ ನೋಡಿ!

    ಸೈರಾದಲ್ಲಿ ಕಿಚ್ಚ ಸುದೀಪ್ ಅಬ್ಬರ ನೋಡಿ!

    – ಕನ್ನಡ ಟ್ರೇಲರಲ್ಲಿ ಮೊಳಗಿತು ಸ್ವಾತಂತ್ರ್ಯ ಸಂಗ್ರಾಮದ ರಣಕಹಳೆ!

    ಬೆಂಗಳೂರು: ಕೇವಲ ದಕ್ಷಿಣ ಭಾರತ ಮಾತ್ರವಲ್ಲ; ಭಾರತೀಯ ಸಿನಿ ಪ್ರೇಕ್ಷಕರೆಲ್ಲ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿರೋ ಚಿತ್ರ ಸೈರಾ ನರಸಿಂಹ ರೆಡ್ಡಿ. ಏಕಕಾಲದಲ್ಲಿಯೇ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಲಿರೋ ಈ ಚಿತ್ರದ ಟ್ರೇಲರ್ ಇಂದು ಕನ್ನಡದಲ್ಲಿಯೂ ಬಿಡುಗಡೆಯಾಗಿದೆ. `ನರಸಿಂಹ ರೆಡ್ಡಿ ಸಾಮಾನ್ಯನಲ್ಲ. ಅವನು ಇತಿಹಾಸವನ್ನು ಸೃಷ್ಟಿಸಲು ಹೊರಟವನು. ಅವನೊಬ್ಬ ಯೋಗಿ. ಅವನೊಬ್ಬ ಯೋಧ. ಅವನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂಬ ಖಡಕ್ ಹಿನ್ನೆಲೆ ಧ್ವನಿಯೊಂದಿಗೆ ಬಿಚ್ಚಿಕೊಳ್ಳೋ ಸೈರಾ ಟ್ರೇಲರ್ ಮೇಕಿಂಗ್ ಮೂಲಕ, ಪಾತ್ರಗಳ ಅಬ್ಬರದ ಲಕ್ಷಣಗಳ ಮೂಲಕ ಕನ್ನಡದ ಪ್ರೇಕ್ಷಕರನ್ನೆಲ್ಲ ಥ್ರಿಲ್ ಆಗುವಂತೆ ಮಾಡಿದೆ.

    ಈ ಕಥೆ ಬ್ರಿಟಿಷರ ವಿರುದ್ಧ ನಡೆದ ಸಂಗ್ರಾಮದ ಕಥೆಯನ್ನಾಧರಿಸಿದೆ. ಮೆಗಾ ಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿಯಾಗಿ ದೇಶ ಭಕ್ತಿಯನ್ನು ನರನಾಡಿಗಳಲ್ಲಿಯೂ ತುಂಬಿಕೊಂಡಿರೋ ಪಾತ್ರದ ಮೂಲಕ ಅಬ್ಬರಿಸಿದ್ದಾರೆ. ಈ ಟ್ರೇಲರ್ ಮಾತ್ರವಲ್ಲದೇ ಇಡೀ ಸಿನಿಮಾ ಕನ್ನಡ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗಲು ಸುದೀಪ್ ಅದರಲ್ಲೊಂದು ಪಾತ್ರವನ್ನು ನಿರ್ವಹಿಸಿರೋದೂ ಕಾರಣ. ಅವುಕು ಪ್ರಾಂತ್ಯದ ರಾಜನಾಗಿ ಸುದೀಪ್ ಇಲ್ಲಿ ಸೈರಾ ನರಸಿಂಹ ರೆಡ್ಡಿಗೆ ಸಾಥ್ ನೀಡಿದ್ದಾರೆ. ಅವರ ಪಾತ್ರದ ಚಹರೆಗಳೂ ಕೂಡಾ ಈ ಟ್ರೇಲರ್‍ನಲ್ಲಿ ಸ್ಪಷ್ಟವಾಗಿಯೇ ಕಾಣಿಸಿದೆ.

    ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ನಟನಟಿಯರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿಯೂ ಅಮಿತಾಭ್ ಬಚ್ಚನ್ ವೀರ ಸೇನಾನಿ ಸೈರಾ ನರಸಿಂಹ ರೆಡ್ಡಿಯ ಗುರು ಗೋಸಾಯಿ ವೆಂಕಣ್ಣನಾಗಿ, ಶಿಷ್ಯನನ್ನು ಬ್ರಿಟೀಷರ ವಿರುದ್ಧ ತಿರುಗಿ ಬಿದ್ದು ಸೆಣಸಲು ಪ್ರೋತ್ಸಾಹಿಸೋ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ಸಿದ್ದಮ್ಮನ ಪಾತ್ರದಲ್ಲಿ ನಯನತಾರಾ, ಲಕ್ಷ್ಮಿಯ ಪಾತ್ರದಲ್ಲಿ ತಮನ್ನಾ, ರಾಜಪಾಂಡಿಯಾಗಿ ವಿಜಯ್ ಸೇತುಪತಿ, ವೀರರೆಡ್ಡಿಯಾಗಿ ಜಗಪತಿ ಬಾಬು ನಟಿಸಿದ್ದಾರೆ. ಈ ಎಲ್ಲ ಪಾತ್ರಗಳ ಪರಿಚಯವೂ ಈ ಟ್ರೇಲರ್ ಮೂಲಕವೇ ಆಗಿದೆ. ವಿಶೇಷವಾಗಿ ಕಿಚ್ಚ ಸುದೀಪ್ ಪಾತ್ರದ ಕನ್ನಡದ ಡೈಲಾಗ್ ಮೂಲಕವೇ ಸೈರಾ ಚಿತ್ರ ಕನ್ನಡಿಗರನ್ನು ಮತ್ತಷ್ಟು ಸೆಳೆದುಕೊಂಡಿದೆ.

    ಈ ಟ್ರೇಲರ್ ನಲ್ಲಿ ಪ್ರಧಾನವಾಗಿ ಕಾಣಿಸಿರೋದು ಮೇಕಿಂಗ್‍ನ ಅಬ್ಬರ. ಅದ್ಭುತವೆಂಬಂಥಾ ಮೇಕಿಂಗ್, ದೃಷ್ಯಾವಳಿಗಳೇ ಒಟ್ಟಾರೆಯಾಗಿ ಈ ಸಿನಿಮಾ ಮೂಡಿಬಂದಿರೋ ರೀತಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ಸೈರಾ ನರಸಿಂಹ ರೆಡ್ಡಿ ಕನ್ನಡಿಗರನ್ನು ಸೆಳೆದಿರೋದಕ್ಕೆ ಮತ್ತೊಂದು ಪ್ರಧಾನ ಕಾರಣವೂ ಇದೆ. ಅದು ಈ ಸಿನಿಮಾದಲ್ಲಿ ಕನ್ನಡದ ಹೆಮ್ಮೆಯ ಆಡಿಯೋ ಸಂಸ್ಥೆ ಲಹರಿ ಕೂಡಾ ಪ್ರಮುಖ ಭಾಗವಾಗಿರೋದು. ಲಹರಿ ಸಂಸ್ಥೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಹೆಗ್ಗಳಿಕೆ ಹೊಂದಿರುವಂಥಾದ್ದು. ಈಗಾಗಲೇ ದಕ್ಷಿಣ ಭಾರತೀಯ ದೊಡ್ಡ ಚಿತ್ರಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಖರೀದಿಸಿತ್ತು. ಆದರೀಗ ಸೈರಾ ನರಸಿಂಹ ರೆಡ್ಡಿಯ ಎಲ್ಲ ಭಾಷೆಗಳ ಆಡಿಯೋ ಹಕ್ಕುಗಳನ್ನೂ ಲಹರಿ ಸಂಸ್ಥೆ ಪಡೆದುಕೊಂಡಿದ್ದು ಈ ಮೂಲಕ ಈ ಬಹುನಿರೀಕ್ಷಿತ ಚಿತ್ರದ ಭಾಗವಾಗಿದೆ.

  • ಜಗಪತಿ ಬಾಬುರಿಂದ ಡಾ. ರಾಜ್, ಅಂಬಿ ಸಮಾಧಿಗೆ ಪೂಜೆ

    ಜಗಪತಿ ಬಾಬುರಿಂದ ಡಾ. ರಾಜ್, ಅಂಬಿ ಸಮಾಧಿಗೆ ಪೂಜೆ

    ಬೆಂಗಳೂರು: ಟಾಲಿವುಡ್ ನಟ ಜಗಪತಿ ಬಾಬು ಅವರು ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದಾರೆ.

    ಈ ವೇಳೆ ಜಗಪತಿ ಬಾಬು ಅವರು ಡಾ. ರಾಜ್ ಕುಮಾರ್, ಅಂಬರೀಶ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಶೂಟಿಂಗ್‍ಗೆ ಬೆಂಗಳೂರಿಗೆ ಆಗಮಿಸಿರೋ ಜಗಪತಿ ಬಾಬು, ಮೊದಲ ಬಾರಿಗೆ ಕಂಠೀರವ ಸ್ಟುಡಿಯೋಗೆ ತೆರಳಿದ್ದಾರೆ.

    ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಟಾಲಿವುಡ್‍ನ ಕಲಾವಿದನಿಗೆ ಜೊತೆಯಾಗಿದ್ದಾರೆ. ನಾಲ್ಕು ದಿನ ಕಂಠೀರವದಲ್ಲಿ ನಡೆಯುವ ಶೂಟಿಂಗ್‍ನಲ್ಲಿ ಜಗಪತಿ ಬಾಬು ಭಾಗಿಯಾಗಲಿದ್ದಾರೆ.

  • ರಾಬರ್ಟ್ ವಿರುದ್ಧ ಅಖಾಡಕ್ಕಿಳಿಯುತ್ತಾರಾ ಜಗಪತಿ ಬಾಬು?

    ರಾಬರ್ಟ್ ವಿರುದ್ಧ ಅಖಾಡಕ್ಕಿಳಿಯುತ್ತಾರಾ ಜಗಪತಿ ಬಾಬು?

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ಚಿತ್ರೀಕರಣ ಚಾಲೂ ಆಗಿದೆ. ಆದರೂ ಕೂಡಾ ಈ ಚಿತ್ರದ ತಾರಾಗಣದ ವಿಚಾರ ಮಾತ್ರ ನಿಗೂಢವಾಗಿಯೇ ಉಳಿದುಕೊಂಡಿದೆ. ಆದರೀಗ ರಗಡ್ ವಿಲನ್ ಒಬ್ಬರು ರಾಬರ್ಟ್ ವಿರುದ್ಧ ಅಬ್ಬರಿಸಲು ಆಗಮಿಸುತ್ತಿರೋ ವಿಚಾರವನ್ನು ಖುದ್ದು ನಿರ್ದೇಶಕ ತರುಣ್ ಸುಧೀರ್ ಜಾಹೀರು ಮಾಡಿದ್ದಾರೆ.

    ಈ ಬಗ್ಗೆ ತರುಣ್ ಸಾಮಾಜಿಕ ಜಾಲತಾಣಗಳ ಮೂಲಕ ಜಗಪತಿ ಬಾಬು ರಾಬರ್ಟ್ ಚಿತ್ರದಲ್ಲಿ ನಟಿಸಲಿರೋದನ್ನು ಬಹಿರಂಗಗೊಳಿಸಿದ್ದಾರೆ. ತರುಣ್ ಸುಧೀರ್ ಜಗಪತಿ ಬಾಬು ಅವರನ್ನು ರಾಬರ್ಟ್ ಚಿತ್ರತಂಡಕ್ಕೆ ಸ್ವಾಗತಿಸುವ ಮೂಲಕ ಈ ಸುದ್ದಿ ಅಧಿಕೃತಗೊಂಡಂತಾಗಿದೆ.

    ಜಗಪತಿ ಬಾಬು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಬಹು ಬೇಡಿಕೆ ಹೊಂದಿರುವ ನಟ. ಇತ್ತೀಚಿನ ದಿನಗಳಲ್ಲಿ ವಿಲನ್ ರೋಲ್‍ಗಳಲ್ಲಿಯೇ ಮಿಂಚುತ್ತಿರೋ ಜಗಪತಿ ಬಾಬು ಪಾಲಿಗೆ ರಾಬರ್ಟ್ ಕನ್ನಡದಲ್ಲಿ ಮೂರನೇ ಚಿತ್ರ. ಅವರು ಕಿಚ್ಚ ಸುದೀಪ್ ಅಭಿನಯದ ಬಚ್ಚನ್ ಚಿತ್ರದ ಮೂಲಕವೇ ಕನ್ನಡದಲ್ಲಿ ಮೊದಲ ಸಲ ಕಾಣಿಸಿಕೊಂಡಿದ್ದರು. ಆದರೆ, ರಾಬರ್ಟ್ ಚಿತ್ರದಲ್ಲಿನ ಅವರ ಪಾತ್ರ ಕನ್ನಡಕ್ಕೆ ಮಾತ್ರವಲ್ಲದೇ ಜಗಪತಿ ಬಾಬು ಅಭಿಮಾನಿ ಪಡೆಗೂ ಹೊಸತಾಗಿರಲಿದೆಯಂತೆ.

    ಜಗಪತಿ ಬಾಬು ಅಡಿಯಿಡುತ್ತಿರೋ ವಿಚಾರವೀಗ ಜಾಹೀರಾಗಿದೆಯಾದರೂ ನಾಯಕಿಯೂ ಸೇರಿದಂತೆ ಉಳಿಕೆ ತಾರಾಗಣದ ವಿವರವನ್ನ ಚಿತ್ರತಂಡ ಗೌಪ್ಯವಾಗಿಟ್ಟಿದೆ. ನಾಯಕಿ ಯಾರಾಗುತ್ತಾರೆಂಬ ಸುತ್ತಲಂತೂ ಥರ ಥರದ ಸುದ್ದಿಗಳು ಹಬ್ಬಿಕೊಂಡಿದ್ದು, ಎಲ್ಲವೂ ಇನ್ನಷ್ಟೇ ಪಕ್ಕಾ ಆಗಬೇಕಿದೆ.

  • ಕ್ರೇಜಿ ಪುತ್ರನ ‘ಚಿಲ್ಲಂ’ಗೆ ಜಗಪತಿ ಬಾಬು ಎಂಟ್ರಿ!

    ಕ್ರೇಜಿ ಪುತ್ರನ ‘ಚಿಲ್ಲಂ’ಗೆ ಜಗಪತಿ ಬಾಬು ಎಂಟ್ರಿ!

    ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಚಿಲ್ಲಂ ಚಿತ್ರ ತನ್ನ ತಾರಾಗಣದಿಂದಲೇ ಕ್ಯೂರಿಯಾಸಿಟಿ ಕೆರಳಿಸುತ್ತಾ ಸಾಗುತ್ತಿದೆ. ಈ ಬಾರಿ ಡಿಫರೆಂಟಾದ ಕಥಾ ಹಂದರದ ಮೂಲಕ ನೆಲೆ ನಿಲ್ಲುವ ತೀರ್ಮಾನ ಮಾಡಿರುವ ಮನೋರಂಜನ್ ಗೆ ಚಿಲ್ಲಂ ಚಿತ್ರದ ಬಗೆಗೆ ದಿನೇ ದಿನೇ ಹುಟ್ಟಿಕೊಳ್ಳುತ್ತಿರುವ ನಿರೀಕ್ಷೆಗಳು ಮತ್ತಷ್ಟು ಬಲ ತುಂಬಿವೆ.

    ಕೆಲ ದಿನಗಳ ಹಿಂದಷ್ಟೇ ರಾಘವೇಂದ್ರ ರಾಜ್ ಕುಮಾರ್ ಅವರು ಈ ಚಿತ್ರದ ತಾರಾಗಣ ಸೇರಿಕೊಂಡಿರೋ ಬಗ್ಗೆ ಭಾರೀ ಸುದ್ದಿಯಾಗಿತ್ತು. ಈಗ ಅದರ ಬೆನ್ನಲ್ಲಿಯೇ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಚಿಲ್ಲಂ ಚಿತ್ರ ತಂಡ ಸೇರಿಕೊಂಡಿರುವ ಸುದ್ದಿ ಬಂದಿದೆ!

    ಜಗಪತಿ ಬಾಬು ಖದರ್ ಹೊಂದಿರೋ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಕಥೆ ಮತ್ತು ತಮ್ಮ ಪಾತ್ರದ ಆವೇಗವನ್ನು ಕಂಡು ಖುಷಿಯಾಗಿಯೇ ಬಾಬು ಮನೋರಂಜನ್ ಜೊತೆ ನಟಿಸಲು ಒಪ್ಪಿಕೊಂಡಿದ್ದಾರಂತೆ. ಪ್ರತೀ ಪಾತ್ರಗಳಿಗೂ ಕೂಡಾ ಚಿತ್ರ ತಂಡ ಅಳೆದೂ ತೂಗಿ ಅದಕ್ಕೆ ಸೂಟು ಆಗುವಂಥಾ ನಟ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ. ಇನ್ನುಳಿದ ಒಂದಷ್ಟು ಪಾತ್ರಗಳಿಗೂ ಕೂಡಾ ಇಷ್ಟರಲ್ಲಿಯೇ ಆಯ್ಕೆ ಕಾರ್ಯ ಪೂರ್ಣ ಗೊಳ್ಳಲಿದೆಯಂತೆ.

    ಅಂತೂ ಚಿಲ್ಲಂ ಚಿತ್ರದ ಮೂಲಕ ಮನೋರಂಜನ್ ಅವರು ಚಿಂದಿ ಉಡಾಯಿಸುವಂಥಾ ಪಾತ್ರದಲ್ಲಿ ಈ ಸಲ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ!