Tag: ಜಗನ್ನಾಥ್ ಸಿಂಗ್ ರಘುವಂಶಿ

  • ವಿದ್ಯುತ್ ಬಿಲ್ 4 ಲಕ್ಷ ರೂ. ಕಟ್ಟಿ ಅಂದ ಅಧಿಕಾರಿಗಳಿಗೆ ಬಿಜೆಪಿ ಮುಖಂಡನ ಅವಾಜ್

    ವಿದ್ಯುತ್ ಬಿಲ್ 4 ಲಕ್ಷ ರೂ. ಕಟ್ಟಿ ಅಂದ ಅಧಿಕಾರಿಗಳಿಗೆ ಬಿಜೆಪಿ ಮುಖಂಡನ ಅವಾಜ್

    ಮಧ್ಯಪ್ರದೇಶ: ವಿದ್ಯುತ್ ಇಲಾಖೆ ಸರ್ಕಾರಿ ನೌಕರರಿಗೆ ಬಿಜೆಪಿ ನಾಯಕರೊಬ್ಬರು ಅವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಜಗನ್ನಾಥ್ ಸಿಂಗ್ ರಘುವಂಶಿ ಎಂಬವರೇ ಅವಾಜ್ ಹಾಕಿದ ಬಿಜೆಪಿ ನಾಯಕ. ಸರ್ಕಾರಿ ನೌಕರರು 4 ಲಕ್ಷ ರೂ.ಬಿಲ್ ಬಾಕಿ ಇದೆ ಬೇಗ ಕಟ್ಟಿ ಎಂದು ಹೇಳಿದ್ದಕ್ಕೆ ಗರಂ ಆದ ಬಿಜೆಪಿ ನಾಯಕ ಅವಾಜ್ ಹಾಕಿದ್ದಾರೆ.

    ವಿಡಿಯೋದಲ್ಲಿ ಏನಿದೆ?: 4 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಇದೆ ಎಂದು ನೌಕರ ಬಿಜೆಪಿ ಮುಖಂಡ ರಘುವಂಶಿ ಅವ್ರಿಗೆ ಹೇಳುತ್ತಾರೆ. ಇದರಿಂದ ಕೋಪಗೊಂಡ ರಘುವಂಶಿ ನೀನು ನನ್ನ ದಯೆಯಿಂದ ಇದ್ದೀಯ, ಮುಖಕ್ಕೆ ಮಸಿ ಬಳಿದು ಶೂ ನಿಂದ ಹೊಡೆಯುತ್ತೇನೆ ಎಂದು ಅವಾಜ್ ಹಾಕಿದ್ದಾರೆ.

    ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ ಎಂದು ನೌಕರ ಹೇಳಿದರು ರಘುವಂಶಿಯವರು ಸಿಟ್ಟಿನಲ್ಲೇ ಮತ್ತೆ ನೀನು ಇಲ್ಲಿ ಕೆಲಸ ಮಾಡಬೇಕು ಅಂತಾ ಇದ್ದೀಯಾ ಇಲ್ಲವೋ ಎಂದು ಮತ್ತೆ ಬೆದರಿಸಿದ್ದಾರೆ.