Tag: ಜಗನ್ನಾಥ್ ಶೆಟ್ಟಿ

  • ಮಂಡ್ಯ ಹನಿಟ್ರ್ಯಾಪ್ ಕೇಸ್‍ಗೆ ಟ್ವಿಸ್ಟ್ – ರೂಮಿನಲ್ಲಿದ್ದ ಯುವತಿಯಿಂದಲೇ ಜಗನ್ನಾಥ ಶೆಟ್ಟಿಗೆ ಖೆಡ್ಡಾ

    ಮಂಡ್ಯ ಹನಿಟ್ರ್ಯಾಪ್ ಕೇಸ್‍ಗೆ ಟ್ವಿಸ್ಟ್ – ರೂಮಿನಲ್ಲಿದ್ದ ಯುವತಿಯಿಂದಲೇ ಜಗನ್ನಾಥ ಶೆಟ್ಟಿಗೆ ಖೆಡ್ಡಾ

    ಮಂಡ್ಯ: ಮಂಡ್ಯ ಚಿನ್ನದಂಗಡಿ ಮಾಲೀಕನ ಹನಿಟ್ರ್ಯಾಪ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇದೀಗ ಜಗನ್ನಾಥ್ ಶೆಟ್ಟಿ ಕೊಟ್ಟ ದೂರು ಸುಳ್ಳು, ವೀಡಿಯೋದಲ್ಲಿರುವುದು ಸುಳ್ಳು ಎಂದು ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.

    mandya honeytrap

    ಹೌದು. ಜಗನ್ನಾಥ್ ಶೆಟ್ಟಿಯನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಹಲವು ದಿನಗಳಿಂದ ಪ್ಲಾನ್ ನಡೆದಿದೆ. ಜಗನ್ನಾಥ್ ಶೆಟ್ಟಿ ಜೊತೆಗೆ ಲಾಡ್ಜ್‌ನಲ್ಲಿ ಸಿಕ್ಕಿಕೊಂಡಿದ್ದ ಯುವತಿ ಕೂಡ ಸಲ್ಮಾ ಭಾನು ಆಂಡ್ ಟೀಂನ ಸದಸ್ಯೆಯಾಗಿದ್ದಾಳೆ. ಆ ಯವತಿ ಮೂಲಕವೇ ಜಗನ್ನಾಥ್ ಶೆಟ್ಟಿಗೆ ಖೆಡ್ಡಾ ತೋಡಿದ್ದಾರೆ. ಇದನ್ನೂ ಓದಿ:  ಮಂಡ್ಯ ಹನಿಟ್ರ್ಯಾಪ್ ಕೇಸ್‍ಗೆ ಟ್ವಿಸ್ಟ್ – ದೂರು ಕೊಟ್ಟಿರೋದೇ ಬೇರೆ, ರೂಮ್ ಒಳಗಡೆ ನಡೆದಿದ್ದೇ ಬೇರೆ

    mandya honeytrap

    ಫೋನ್ ಮೂಲಕ ಯುವತಿ ಜಗನ್ನಾಥ ಶೆಟ್ಟಿ ಸ್ನೇಹ ಸಂಪಾದಿಸಿದ್ದಳು. ಯುವತಿಗೆ ತಾನು ಕೂಡ ಲೆಕ್ಚರ್ ಎಂದು ಜಗನ್ನಾಥ್ ಶೆಟ್ಟಿ ಹೇಳಿಕೊಂಡಿದ್ದನು. ಶೆಟ್ಟಿ ಹೇಳಿದ್ದ ಸುಳ್ಳನ್ನೇ ಈ ಗ್ಯಾಂಗ್ ತಮ್ಮ ಬಂಡವಾಳವಾಗಿ ಮಾಡಿಕೊಂಡಿತ್ತು. ಜಗನ್ನಾಥ ಶೆಟ್ಟಿ ಹಿನ್ನೆಲೆ ಗೊತ್ತೆ ಇಲ್ಲ ಎನ್ನುವಂತೆ ನಾಜುಕಾಗಿ ಮಾತನಾಡಿ ಯುವತಿ ಡ್ರಾಮಾ ಮಾಡಿ ಆತನನ್ನು ಲಾಕ್ ಮಾಡಿದ್ದಾಳೆ. ಇದನ್ನೂ ಓದಿ: ಹನಿಟ್ರ್ಯಾಪ್ ಸುಳಿಗೆ ಸಿಲುಕಿ 50 ಲಕ್ಷ ರೂ. ಕಳೆದುಕೊಂಡ ಚಿನ್ನದ ವ್ಯಾಪಾರಿ

    mandya honeytrap

    ಯುವತಿ ಜೊತೆಗೆ ಸಲುಗೆ ಬೆಳೆಯುತ್ತಿದ್ದಂತೆ ಜಗನ್ನಾಥ್ ಶೆಟ್ಟಿ ಲಾಡ್ಜ್‍ಗೆ ಕರೆದಿದ್ದನು. ಶೆಟ್ಟಿ ಆಹ್ವಾನ ಬಳಿಕ ಆತನನ್ನು ಲಾಡ್ಜ್‍ನಲ್ಲಿ ಲಾಕ್ ಮಾಡಲು ಪ್ಲಾನ್ ನಡೆದಿತ್ತು. ಯುವತಿ ರೂಮಿಗೆ ಹೋದ ಕೆಲವೇ ಕ್ಷಣಗಳಲ್ಲಿ ಸಲ್ಮಾ ಮತ್ತು ಟೀಂ ಎಂಟ್ರಿಕೊಟ್ಟಿದೆ. ನಂತರ ವ್ಯಕ್ತಿಯೋರ್ವ ಅವನ್ಯಾರು ಹೇಳು, ಇಲ್ಲಿಗೆ ಏಕೆ ಬಂದೆ ಎಂದು ಪ್ರಶ್ನಿಸಿದಾಗ “ಫ್ರೆಂಡ್ ಮನೆಗೆ ಅಂತ ಹೇಳಿ ಇಲ್ಲಿಗೆ ಬಂದೆ ಟ್ಯೂಷನ್ ಮುಗಿಸಿ ವಾಪಸ್ ಹೋಗುತ್ತೇನೆ. ಅವರು ನಮ್ಮ ಲೆಕ್ಚರ್, ಅವರಿಗೆ ಏನೂ ಮಾಡಬೇಡಿ ಚಿಕ್ಕಪ್ಪ, ಚಿಕ್ಕಪ್ಪ” ಎಂದು ಶೆಟ್ಟರ ಮುಂದೆ ಯುವತಿ ಹೈಡ್ರಾಮಾ ಮಾಡಿದ್ದಾಳೆ. ಜಗನ್ನಾಥ್ ಶೆಟ್ಟಿಗೆ ಹೊಡೆಯಲು ಮುಂದಾದಾಗ ತಡೆದು ತನ್ನ ಮೇಲೆ ಜಗನ್ನಾಥ್ ಶೆಟ್ಟಿಗೆ ಅನುಕಂಪ ಬರುವಂತೆ ಮಾಡಿದ್ದಾಳೆ. ಜೊತೆಗೆ ವ್ಯಕ್ತಿ ಯುವತಿಗೆ ಹೊಡೆದು, ಗದರಿಸಿ ಶೆಟ್ಟಿಗೆ ನಂಬಿಕೆ ಬರುವಂತೆ ನಟಿಸಿದ್ದ.

    ಯುವತಿ ಚಿಕ್ಕಪ್ಪ ಎಂದು ನಟಿಸಿ ಜಗನ್ನಾಥ ಶೆಟ್ಟಿಯನ್ನು ಗ್ಯಾಂಗ್ ಲಾಕ್ ಮಾಡಿದ್ದಲ್ಲದೇ ಈ ವೀಡಿಯೋವನ್ನು ರೆಕಾರ್ಡ್ ಮಾಡಿ ಹಣಕ್ಕಾಗಿ ಜಗನ್ನಾಥ್ ಶೆಟ್ಟಿ ಬಳಿ ಬೇಡಿಕೆ ಇಟ್ಟಿದೆ. ಇದರಿಂದ ಭಯಭೀತನಾಗಿ ನಿಜಕ್ಕೂ ಯುವತಿಯ ಚಿಕ್ಕಪ್ಪನೇ ಬಂದಿದ್ದಾನೆಂದು ನಂಬಿ ಲಕ್ಷ, ಲಕ್ಷ ಹಣಕೊಟ್ಟವನ್ನು ಗ್ಯಾಂಗ್‍ಗೆ ಜಗನ್ನಾಥ್ ಶೆಟ್ಟಿ ನೀಡಿದ್ದಾನೆ. ಆದರೆ ಎಷ್ಟೇ ಹಣ ಕೊಟ್ಟರೂ ಇವರ ಹಾವಳಿ ನಿಲ್ಲದೇ ಇದ್ದಾಗ ಜಗನ್ನಾಥ್ ಶೆಟ್ಟಿ ಪೊಲೀಸರ ಮೊರೆ ಹೋಗಿದ್ದಾನೆ. ಫೆಬ್ರುವರಿ 26ರಂದು ಈ ಘಟನೆ ನಡೆದಿದ್ದು, ಈ ಸಂಬಂಧ ಆಗಸ್ಟ್ 19 ರಂದು ಮರ್ಯಾದೆಗೆ ಅಂಜಿ ಅಪಹರಣ ಮತ್ತು ಬ್ಲಾಕ್ ಮೇಲ್ ದೂರನ್ನು ಜಗನ್ನಾಥ್ ಶೆಟ್ಟಿ ನೀಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಮಂಡ್ಯ ಹನಿಟ್ರ್ಯಾಪ್ ಕೇಸ್‍ಗೆ ಟ್ವಿಸ್ಟ್ – ದೂರು ಕೊಟ್ಟಿರೋದೇ ಬೇರೆ, ರೂಮ್ ಒಳಗಡೆ ನಡೆದಿದ್ದೇ ಬೇರೆ

    ಮಂಡ್ಯ ಹನಿಟ್ರ್ಯಾಪ್ ಕೇಸ್‍ಗೆ ಟ್ವಿಸ್ಟ್ – ದೂರು ಕೊಟ್ಟಿರೋದೇ ಬೇರೆ, ರೂಮ್ ಒಳಗಡೆ ನಡೆದಿದ್ದೇ ಬೇರೆ

    ಬೆಂಗಳೂರು: ಕೆಲವು ದಿನಗಳ ಹಿಂದೆ ಹನಿಟ್ರ್ಯಾಪ್(HoneyTrap) ಸುಳಿಗೆ ಸಿಲುಕಿದ ಪ್ರತಿಷ್ಠಿತ ಚಿನ್ನದ ವ್ಯಾಪಾರಿಯೊಬ್ಬರು 50 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದರು. ಈ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ಮಂಡ್ಯದ ಚಿನ್ನದ ವ್ಯಾಪಾರಿ ಹಾಗೂ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ(Jagananath Shetty) ಆಗಸ್ಟ್ 19ರಂದು ಮಂಡ್ಯದ ಪಶ್ಚಿಮ ಠಾಣೆಗೆ ಕಿಡ್ನಾಪ್(Kidnap) ಮತ್ತು ಹನಿಟ್ರ್ಯಾಪ್ ಕುರಿತಂತೆ ದೂರು ನೀಡಿದ್ದ. ಈ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ನಡೆಯುತ್ತಿರುವಾಗಲೇ ಆಡಿಯೋ ಹಾಗೂ ವೀಡಿಯೋ ದೊರೆತಿದ್ದು, ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದನ್ನೂ ಓದಿ: ಇಸ್ಲಾಂಗೆ ಮತಾಂತರವಾಗಿ ನನ್ನನ್ನು ಮದ್ವೆಯಾಗದಿದ್ರೆ ಆ್ಯಸಿಡ್ ಹಾಕ್ತಿನಿ- ವಿದ್ಯಾರ್ಥಿನಿಗೆ ಯುವಕನಿಂದ ಬೆದರಿಕೆ

    ವಿದ್ಯಾರ್ಥಿಯೊಬ್ಬಳನ್ನು ಲಾಡ್ಜ್‌ಗೆ ಕರೆಸಿಕೊಳ್ಳಲು ತಾನು ಲೆಕ್ಚರ್ ಎಂದು ಚಿನ್ನದ ವ್ಯಾಪಾರಿ ಜಗದೀಶ್ ಶೆಟ್ಟಿ ಪುಸಲಾಯಿಸಿದ್ದನು. ಮೈಸೂರಿನ ಲಾಡ್ಜ್‌ಗೆ ವಿದ್ಯಾರ್ಥಿನಿ ಕರೆಸಿಕೊಂಡ ವೇಳೆ ಅಲ್ಲಿಗೆ ಎಂಟ್ರಿಕೊಟ್ಟ ಆರೋಪಿ ಸಲ್ಮಾಭಾನು ಆಂಡ್ ಟೀಂ ಪಂಚೆ, ಬನಿಯನ್‌ನಲ್ಲಿದ್ದ ಜಗನಾಥ್ ಶೆಟ್ಟಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಜಗದೀಶ್ ಶೆಟ್ಟಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಎಳೆದಾಡಿ ಹೆದರಿಸಿದ್ದಾರೆ. ಈ ವೇಳೆ ತನ್ನದು ತಪ್ಪಾಯ್ತು ಎಂದು ಬಿಟ್ಟುಬಿಡಿ ಎಂದು ಜಗನ್ನಾಥ್ ಶೆಟ್ಟಿ ಕಾಲಿಗೆ ಬಿದ್ದಿದ್ದಾನೆ. ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ.

    ಫೆಬ್ರವರಿ 26ರಂದು ಮೈಸೂರಿನಲ್ಲಿ ಈ ಕೃತ್ಯ ನಡೆದಿದ್ದು, ಮಂಗಳೂರಿಗೆ ತೆರಳಲು ಆ ದಿನ ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಈ ವೇಳೆ ಮೈಸೂರಿಗೆ ಡ್ರಾಪ್ ಕೊಡುವುದಾಗಿ ತಿಳಿಸಿ ನಾಲ್ವರು ಕಾರಿನಲ್ಲಿ ಅವರನ್ನು ಕರೆದೊಯ್ದು ನಂತರ ಚಿನ್ನದ ಪರೀಕ್ಷೆಗೆಂದು ಅವರನ್ನು ಅಪಹರಿಸಿ ಲಾಡ್ಜ್ ರೂಮ್‍ಗೆ ಕರೆದೊಯ್ದಿದ್ದಾರೆ. ರೂಮ್‍ನಲ್ಲಿ ಯುವತಿ ಜೊತೆ ವೀಡಿಯೋ ಚಿತ್ರೀಕರಿಸಿಕೊಂಡು ಬಳಿಕ 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಜಗನ್ನಾಥ್ ಶೆಟ್ಟಿ ಆರೋಪಿಸಿದ್ದನು. ಇದನ್ನೂ ಓದಿ: ಹನಿಟ್ರ್ಯಾಪ್ ಸುಳಿಗೆ ಸಿಲುಕಿ 50 ಲಕ್ಷ ರೂ. ಕಳೆದುಕೊಂಡ ಚಿನ್ನದ ವ್ಯಾಪಾರಿ

    ಕೊನೆಗೆ 50 ಲಕ್ಷ ಕೊಟ್ಟು ಅಲ್ಲಿಂದ ತೆರಳಿದೆ. ಆದರೆ ಮತ್ತೆ ಹಣಕ್ಕಾಗಿ ಗ್ಯಾಂಗ್ ಬೇಡಿಕೆ ಇಟ್ಟಿದ್ದಲ್ಲದೇ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದೆ ಎಂದು ಜಗನ್ನಾಥ್ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇರೆಗೆ ಸಮಾಜ ಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಬಾನು ಎಂಬಾಕೆಯನ್ನು ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದರು.

    Live Tv
    [brid partner=56869869 player=32851 video=960834 autoplay=true]