Tag: ಜಗದೀಶ್

  • ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಲಂಚ ನಡೆಯುತ್ತೆ: ಸಿದ್ದರಾಮಯ್ಯ

    ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಲಂಚ ನಡೆಯುತ್ತೆ: ಸಿದ್ದರಾಮಯ್ಯ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಮೂಗಿನ ನೇರಕ್ಕೆ ಲಂಚ ನಡೆಯುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.

    ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಜಗದೀಶ್ ಬುಧವಾರ ವಿಧಾನಸೌಧದಲ್ಲಿ (Vidhanasoudha) ಅನಧಿಕೃತವಾಗಿ 10.50 ಲಕ್ಷ ರೂ. ಹಣವನ್ನು (Money) ಸಾಗಾಟ ಮಾಡುತ್ತಿದ್ದ ವಿಚಾರವಾಗಿ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ, ಅದರ ಅರ್ಥ ವಿಧಾನಸೌಧದಲ್ಲೇ ಲಂಚ ನಡೆಯುತ್ತದೆ. ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ಲಂಚ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

    ಆತ ವಿಧಾನಸೌಧಕ್ಕೆ ಯಾರಿಗೆ ಹಣ ಕೊಡಲು ಬಂದಿದ್ದ? ಪಿಡಬ್ಲ್ಯುಡಿ ಸಚಿವ ಸಿಸಿ ಪಾಟೀಲ್‌ಗೆ ಹಣ ಕೊಡಲು ಬಂದಿರಬೇಕು, ಇಲ್ಲವೇ ಮುಖ್ಯಮಂತ್ರಿಗಳಿಗೆ ಕೊಡೋದಕ್ಕೆ ಬಂದಿರಬೇಕು ಅಲ್ವಾ? ಎಂದು ಟಾಂಗ್ ನೀಡಿದರು.

    ಬುಧವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ಜಗದೀಶ್ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದರು. ಗೇಟ್‌ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಅವರ ಬ್ಯಾಗ್‌ನಲ್ಲಿ 10.50 ಲಕ್ಷ ರೂ. ಪತ್ತೆಯಾಗಿತ್ತು. ಅವರ ಬಳಿ ಇಷ್ಟೊಂದು ದೊಡ್ಡ ಮೊತ್ತದ ಹಣದ ಕುರಿತಾಗಿ ಮಾಹಿತಿ ಕೇಳಿದಾಗ ಅವರು ಸರಿಯಾಗಿ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆ ಪೊಲೀಸರು ಜಗದೀಶ್‌ನನ್ನು ಹಾಗೂ ಹಣವನ್ನು ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಿದ್ದರು. ಇದನ್ನೂ ಓದಿ: ನಾನು ಬಿಜೆಪಿ ಸೇರ್ಪಡೆ ಬಗ್ಗೆ ಯೋಚನೆ ಮಾಡಿಲ್ಲ: ಸುಮಲತಾ

    ಅವರು ಯಾವ ವಿಚಾರಕ್ಕೆ ಹಣ ತಂದಿದ್ದರು? ಯಾರಿಗೆ ಹಣ ಸಾಗಿಸಲಾಗುತ್ತಿತ್ತು? ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶುಕ್ರವಾರ ಜಗದೀಶ್ ಚೆಕ್ ಬೌನ್ಸ್ ಪ್ರಕರಕ್ಕೆ ಹಣ ಹಿಂತಿರುಗಿಸಲು ತಂದಿದ್ದಾಗಿ ಹೇಳಿಕೆ ನೀಡಿದ್ದಾರೆ.

    ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ದಂಡ ಸಮೇತ 12 ಲಕ್ಷ ರೂ. ಕಟ್ಟಲು ಹೇಳಿತ್ತು. ತನ್ನ ಸಂಬಂಧಿಕರ ಬಳಿಯಿಂದ 10.50 ಲಕ್ಷ ಹಣವನ್ನು ತಂದಿದ್ದೆ. ವಿಧಾನಸೌಧದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕರೆದಿದ್ದರು. ಹೀಗಾಗಿ ತನ್ನ ಊರು ಮಂಡ್ಯಕ್ಕೆ ಹೋಗುವುದಕ್ಕೂ ಮುನ್ನ ವಿಧಾನಸೌಧಕ್ಕೆ ಬಂದಿದ್ದಾಗಿ ಜಗದೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ನಡೆಯದೇ ಹೋಯ್ತಾ ವರುಣಾ ರಾಜಕೀಯ ಮಹಾಯುದ್ಧ – ವಿಜಯೇಂದ್ರ ವರುಣಾ ಪಥ ಬದಲು!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಮೂಲ್ಯಗೆ ‘ಅವಳಿ ಮಕ್ಕಳು’ ಎಂದು ವೈದ್ಯರು ಹೇಳಿದಾಗ ಖುಷಿಗಿಂತ ಕುಟುಂಬಕ್ಕೆ ಚಿಂತೆಯಾಗಿತ್ತಂತೆ

    ಅಮೂಲ್ಯಗೆ ‘ಅವಳಿ ಮಕ್ಕಳು’ ಎಂದು ವೈದ್ಯರು ಹೇಳಿದಾಗ ಖುಷಿಗಿಂತ ಕುಟುಂಬಕ್ಕೆ ಚಿಂತೆಯಾಗಿತ್ತಂತೆ

    ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯ (Amulya) ಸಿನಿಮಾ ರಂಗದಿಂದ ದೂರವಾದರೂ, ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ. ಸಿನಿಮಾ ಸಂಬಂಧಿ ವಿಷಯಗಳಿಗಿಂತಲೂ ತಮ್ಮ ಕುಟುಂಬದ ಬಗೆಗಿನ ಸಂಭ್ರಮಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಲ್ಲದೇ, ಈಗಂತೂ ತಮ್ಮ ಮುದ್ದಾದ ಮಕ್ಕಳ ಫೋಟೋಗಳನ್ನು ಆಗಾಗ್ಗೆ ಅಪ್ ಲೋಡ್ ಮಾಡುತ್ತಾರೆ.

    ಇಂತಹ ಅಮೂಲ್ಯ ಅಭಿಮಾನಿಗಳಿಗೆ ಒಂದು ಸುವರ್ಣಾವಕಾಶ ನೀಡಿದ್ದರು. ನನ್ನ ಬಗ್ಗೆ ಏನು ಬೇಕಾದರೂ ಪ್ರಶ್ನೆ ಕೇಳಿ, ಉತ್ತರಿಸುತ್ತೇನೆ ಎಂದು ಅಭಿಮಾನಿಗಳಿಗೆ ಹೇಳಿದ್ದರು. ಇಂತಹ ಅವಕಾಶವನ್ನು ಅಭಿಮಾನಿಗಳು ಕೂಡ ಸಖತ್ತಾಗಿಯೇ ಬಳಸಿಕೊಂಡಿದ್ದಾರೆ. ಅದರಲ್ಲೂ ಅಭಿಮಾನಿಯೊಬ್ಬ, ಮೊದಲ ಬಾರಿಗೆ ನಿಮಗೆ ಅವಳಿ ಮಕ್ಕಳು ಎಂದು ಗೊತ್ತಾದಾಗ ನಿಮ್ಮ ರಿಯಾಕ್ಷನ್ ಹೇಗಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೂ ಅಮೂಲ್ಯ ಉತ್ತರ ಕೊಟ್ಟಿದ್ದಾರೆ. ಆ ಉತ್ತರವೇ ಮಜವಾಗಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಈಗಲೂ ಅಮೌಲ್ಯ ಒಂದು ಪುಟ್ಟ ಮಗುವಿನ ರೀತಿಯಲ್ಲೇ ಇದ್ದಾರೆ. ಇಷ್ಟು ಬೇಗ ಅವರು ಮದುವೆ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸಡನ್ನಾಗಿ ಹೊಸ ಜೀವನಕ್ಕೆ ಕಾಲಿಡುವ ಮೂಲಕ ಅಸಂಖ್ಯಾತ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಮದುವೆಯ ನಂತರ ಮತ್ತೆ ಸಿನಿಮಾ ರಂಗಕ್ಕೆ ಬರುತ್ತಾರೆ ಎಂದು ಹೇಳಲಾಗಿತ್ತು. ಅದು ಆಗಲಿಲ್ಲ. ತಾವು ತಾಯಿ ಆಗುತ್ತಿರುವ ಕುರಿತು ಘೋಷಿಸಿದರು. ಈಗಲೂ ಅಭಿಮಾನಿಗಳು ಅವರು ಸಿನಿಮಾ ರಂಗಕ್ಕೆ ಬರುವುದಕ್ಕಾಗಿ ಕಾಯುತ್ತಿದ್ದಾರೆ.

    ಇದೀಗ ಅಮೂಲ್ಯ ಅವಳಿ (Twins) ಮಕ್ಕಳ ತಾಯಿ. ಮೊದಲ ಬಾರಿಗೆ ವೈದ್ಯರು ಈ ವಿಷಯವನ್ನು ತಿಳಿಸಿದಾಗ ಅಮೂಲ್ಯ ನಕ್ಕರಂತೆ. ಅವರ ಪತಿ ಜಗದೀಶ್ (Jagdish) ಟೆನ್ಷನ್ ಮಾಡಿಕೊಂಡರಂತೆ. ಇಡೀ ಫ್ಯಾಮಿಲಿಗೆ ಒಂದು ರೀತಿಯಲ್ಲಿ ಆತಂಕವಾಗಿತ್ತಂತೆ. ಅಮೂಲ್ಯ ಪುಟಾಣಿ ಹುಡುಗಿ. ಎರಡು ಮಕ್ಕಳನ್ನು ಹೇಗೆ ಮ್ಯಾನೇಜ್ ಮಾಡ್ತಾರೆ ಅನ್ನುವುದು ಕುಟುಂಬಕ್ಕೆ (Anxiety) ಚಿಂತೆಯಾಗಿತ್ತಂತೆ. ಇದೀಗ ಹಾಗೇನೂ ಇಲ್ಲ. ಎರಡೂ ಮಕ್ಕಳ ಜೊತೆ ಖುಷಿಯಾಗಿರುವೆ ಎಂದಿದ್ದಾರೆ ಅಮೂಲ್ಯ.

    Live Tv
    [brid partner=56869869 player=32851 video=960834 autoplay=true]

  • ಚಂದನವನದ ‘ಐಶೂ’ ಅಮೂಲ್ಯ ಬರ್ತ್‌ಡೇ: ಮತ್ತೆ ಸಿನಿಮಾ ಮಾಡುವಂತೆ ಫ್ಯಾನ್ಸ್ ಮನವಿ

    ಚಂದನವನದ ‘ಐಶೂ’ ಅಮೂಲ್ಯ ಬರ್ತ್‌ಡೇ: ಮತ್ತೆ ಸಿನಿಮಾ ಮಾಡುವಂತೆ ಫ್ಯಾನ್ಸ್ ಮನವಿ

    ಬಾಲನಟಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಅಮೂಲ್ಯ (Amulya), ಆ ನಂತರ ನಾಯಕಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದರು. ಮಾಡಿದ ಬಹುತೇಕ ಸಿನಿಮಾಗಳು ಹಿಟ್ ಆಗಿದ್ದರಿಂದ, ಸಾಕಷ್ಟು ಅಭಿಮಾನಿಗಳನ್ನು ಅವರು ಪಡೆದರು. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಮದುವೆಯಾದರು. ಇದೀಗ ಅಮೂಲ್ಯ ಅವಳಿ ಮಕ್ಕಳ ತಾಯಿ. ಆದರೂ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಅಭಿಮಾನಿಗಳ ಜೊತೆ ಮಾತನಾಡುತ್ತಲೇ ಇರುತ್ತಾರೆ.

    ಇಂತಹ ಲವಲವಿಕೆಯ ಅಮೂಲ್ಯ ಅವರಿಗೆ ಇಂದು ಹುಟ್ಟು ಹಬ್ಬದ (Birthday) ಸಂಭ್ರಮ. ಈ ಹುಟ್ಟು ಹಬ್ಬಕ್ಕೆ ವಿಶೇಷ ಅನ್ನುವಂತೆ ಎರಡು ಮಕ್ಕಳು ಜೊತೆಯಾಗಿವೆ. ಹೀಗಾಗಿ ಅಮೂಲ್ಯ ಬಾಳಲ್ಲಿ ಸಂಭ್ರಮ ಮನೆಮಾಡಿದೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅಮೂಲ್ಯ ಅವರಿಗೆ ಅವರ ಅಭಿಮಾನಿಗಳು ಎಂದಿನಂತೆ ಬೇಡಿಕೆ ಇಟ್ಟಿದ್ದಾರೆ. ಆದಷ್ಟು ಬೇಗ ಮತ್ತೆ ನೀವು ಸಿನಿಮಾ ರಂಗಕ್ಕೆ ಬರಬೇಕು (Come back) ಎಂದು ಮನವಿ ಮಾಡಿದ್ದಾರೆ. ಮದುವೆ ನಂತರ ಮತ್ತೆ ಅಮೂಲ್ಯ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅಭಿಮಾನಿಗಳ ಆಸೆ ಈಡೇರಲಿಲ್ಲ. ಇದನ್ನೂ ಓದಿ:ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ – ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ

    ಮದುವೆ, ಮಕ್ಕಳ ನಂತರವೂ ಅಮೂಲ್ಯ ಮತ್ತೆ ಸಿನಿಮಾ (Cinema) ರಂಗಕ್ಕೆ ಬರುತ್ತಾರೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ. ಕಳೆದ ವರ್ಷವಷ್ಟೇ ಅವರು ಸಿನಿಮಾ ರಂಗಕ್ಕೆ (Sandalwood) ಮರುಳುತ್ತಾರೆ ಎಂದು ಸುದ್ದಿಯಾಗಿತ್ತು. ತಾವು ತಾಯಿ ಆಗುತ್ತಿರುವ ವಿಷಯ ತಿಳಿಸಿ, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಈಗ ಮತ್ತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಅಮೂಲ್ಯ ಏನು ಮಾಡುತ್ತಾರೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಪುಸ್ತಕಗಳ ಮಧ್ಯ ತಮ್ಮ ಪುಟಾಣಿ ಮಕ್ಕಳ ಮಲಗಿಸಿ ‘ಹ್ಯಾಪಿ ಗಣೇಶ’ ಎಂದ ನಟಿ ಅಮೂಲ್ಯ

    ಪುಸ್ತಕಗಳ ಮಧ್ಯ ತಮ್ಮ ಪುಟಾಣಿ ಮಕ್ಕಳ ಮಲಗಿಸಿ ‘ಹ್ಯಾಪಿ ಗಣೇಶ’ ಎಂದ ನಟಿ ಅಮೂಲ್ಯ

    ಣೇಶನನ್ನು ವಿದ್ಯೆವಿನಾಯಕ ಅಂತಾನೂ ಕರೆಯುತ್ತಾರೆ. ವಿದ್ಯೆಗೆ ಅಧಿಪತಿ ವಿನಾಯಕ ಎನ್ನುವುದು ವಾಡಿಕೆ. ಹಾಗಾಗಿ ಗಣೇಶ ಹಬ್ಬದ ದಿನದಂದು ತಮ್ಮಿಬ್ಬರ ಮಕ್ಕಳ ಸುತ್ತಲೂ ಪುಸ್ತಕಗಳನ್ನು ಇಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ ನಟಿ ಅಮೂಲ್ಯ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.

    ಮೊನ್ನೆಯಷ್ಟೇ ತಮ್ಮ ಎರಡು ಪುಟಾಣಿ ಮಕ್ಕಳ ವಿಶೇಷ ಫೋಟೋ ಶೂಟ್ ಮಾಡಿಸಿದ್ದರು ಅಮೂಲ್ಯ. ಅವಳಿ ಜವಳಿ ಮಕ್ಕಳ ಫೋಟೋ ಶೂಟ್ ಗೆ ಒಂದು ಕಾನ್ಸೆಪ್ಟ್ ಕೂಡ ಮಾಡಿದ್ದಾರೆ. ಪತಿ ಜಗದೀಶ್ ಮತ್ತು ಅಮೂಲ್ಯ ಇಬ್ಬರೂ ಮಕ್ಕಳ ಜೊತೆಗೆ ಮಕ್ಕಳಂತೆಯೇ ಕ್ಯೂಟ್ ಆಗಿ ಕಂಡಿದ್ದರು. ಆ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಪುಟಾಣಿ ಮಕ್ಕಳಿಗೆ ಅಭಿಮಾನಿಗಳು ಶುಭ ಹಾರೈಸಿದ್ದರು. ಇದನ್ನೂ ಓದಿ: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಈಗ ಗಣೇಶ ಹಬ್ಬಕಾಗಿ ವಿಶೇಷ ಫೋಟೋ ಶೂಟ್ ಮಾಡಿಸಿದ್ದು, ವಿದ್ಯೆ ವಿನಾಯಕನನ್ನು ತಮ್ಮ ಮಕ್ಕಳು ಮೂಲಕ ನೆನೆದಿದ್ದಾರೆ ಅಮೂಲ್ಯ. ತಮ್ಮ ಮಕ್ಕಳ ಮೇಲೆ ಎಲ್ಲರ ಪ್ರೀತಿ, ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ. ಸಿನಿಮಾ ರಂಗದಿಂದ ಸದ್ಯ ದೂರವಾಗಿರುವ ಅಮೂಲ್ಯ, ಮಕ್ಕಳೊಂದಿಗೆ ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಫಸ್ಟ್‌ ಟೈಮ್ ಮುದ್ದಾದ ಎರಡೂ ಮಕ್ಕಳ ಮುಖ ತೋರಿಸಿದ ನಟಿ ಅಮೂಲ್ಯ

    ಫಸ್ಟ್‌ ಟೈಮ್ ಮುದ್ದಾದ ಎರಡೂ ಮಕ್ಕಳ ಮುಖ ತೋರಿಸಿದ ನಟಿ ಅಮೂಲ್ಯ

    ಟಿ ಅಮೂಲ್ಯ ಸಿನಿಮಾ ರಂಗದಿಂದ ದೂರವಿದ್ದರೂ, ಅಭಿಮಾನಿಗಳು ಮಾತ್ರ ಅವರನ್ನು ಮರೆತಿಲ್ಲ. ಹಾಗಾಗಿ ಅಮೂಲ್ಯ ತಮ್ಮ ಅಭಿಮಾನಿಗಳ ಜೊತೆ ನಿರಂತರವಾಗಿ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿ ಇರುತ್ತಾರೆ.

    ದಿಢೀರ್ ಅಂತ ಸಿನಿಮಾ ರಂಗದಿಂದ ದೂರ ಉಳಿದು, ಅವರು ಮದುವೆ ಆಗುತ್ತಾರೆ ಅಂದಾಗ ಅದೆಷ್ಟೊ ಅಭಿಮಾನಿಗಳು ನೊಂದುಕೊಂಡಿದ್ದೂ ಇದೆ. ಹಾಗಾಗಿ ಅಭಿಮಾನಿಗಳ ಮೇಲೆ ಇವರಿಗೂ ವಿಶೇಷ ಪ್ರೀತಿ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ಮದುವೆ ನಂತರ ನಿರಂತರವಾಗಿ ಅಭಿಮಾನಿಗಳಿಗೆ ಒಂದಿಲ್ಲೊಂದು ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ತಿಳಿಸುತ್ತಲೇ ಇರುವ ಅಮೂಲ್ಯ, ಈ ಬಾರಿ ತಮ್ಮ ಎರಡು ಮಕ್ಕಳ ಫೋಟೋವನ್ನು ಅಭಿಮಾನಿಗಳಿಗಾಗಿ ಅಪ್ ಲೋಡ್ ಮಾಡಿದ್ದಾರೆ. ಮೊದಲ ಬಾರಿಗೆ ಅವಳಿ ಮಕ್ಕಳ ಮುಖವನ್ನು ಅವರು ರಿವೀಲ್ ಮಾಡಿದ್ದಾರೆ.

    ಮಗು ಜನಿಸಿದಾಗ ಮತ್ತು ಇತ್ತೀಚೆಗಷ್ಟೇ ತಮ್ಮ ಪುಟ್ಟ ಮಕ್ಕಳ ಬೆರಳು, ಕಾಲುಗಳನ್ನಷ್ಟೇ ತೋರಿಸಿದ್ದ ಅಮೂಲ್ಯ ದಂಪತಿ, ಈ ಬಾರಿ ಮುಖವನ್ನೂ ತೋರಿಸಿದ್ದಾರೆ. ನಮ್ಮ ಕಂದಮ್ಮಗಳಿಗೆ ನಿಮ್ಮ ಹಾರೈಕೆಗಳು ಇರಲಿ ಎಂದು ಕೇಳಿಕೊಂಡಿದ್ದಾರೆ.

    ತಮ್ಮ ನೆಚ್ಚಿನ ನಟಿಯ ಮಕ್ಕಳನ್ನು ನೋಡಬೇಕು ಎನ್ನುವುದು ಅಮೂಲ್ಯ ಅಭಿಮಾನಿಗಳ ಆಸೆ ಆಗಿತ್ತು. ಅದನ್ನು ಈಗ ಅವರು ಈಡೇರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಲಯಾಳಂ ನಟ ಜಗದೀಶ್ ಪತ್ನಿ ವಿಧಿವಶ

    ಮಲಯಾಳಂ ನಟ ಜಗದೀಶ್ ಪತ್ನಿ ವಿಧಿವಶ

    ತಿರುವನಂತಪುರಂ: ಖ್ಯಾತ ನಟ ಜಗದೀಶ್ ಅವರ ಪತ್ನಿ ಪಿ.ರೆಮಾ (61) ಶುಕ್ರವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ವಿಧಿ ವಿಜ್ಞಾನ ಮೆಡಿಸಿನ್ ವಿಭಾಗದ ಮಾಜಿ ಮುಖ್ಯಸ್ಥೆ ರೆಮಾ ಅಪರೂಪದ ನರವೈಜ್ಞಾನಿಕ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಸ್ವಯಂ ನಿವೃತ್ತಿ ಪಡೆದಿದ್ದರು. ಫೋರೆನ್ಸಿಕ್ ತಜ್ಞರಾಗಿ, ಡಾ. ಪಿ ರೆಮಾ ಅವರು ಕೇರಳದ ಹಲವಾರು ಅಪರಾಧ ಪ್ರಕರಣಗಳ ತನಿಖೆಯಲ್ಲಿ ತೊಡಗಿದ್ದರು. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    ಪ್ರಮುಖ ನಟನ ಪತ್ನಿಯಾಗಿರುವ ರೆಮಾ ಅವರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಮತ್ತು ಸಾಮಾಜಿಕ ಜಾಲತಾಣದ ಚಾನೆಲ್‍ವೊಂದರಲ್ಲಿ ಜಗದೀಶ್ ಅವರೊಂದಿಗಿನ ಹಿಂದಿನ ಸಂದರ್ಶನದಲ್ಲಿ, ಅವರು ನಾನು ಗೌಪ್ಯತೆ ಕಾಪಾಡಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳುವ ಮೂಲಕ ತೆರೆದುಕೊಂಡಿದ್ದರು. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ರೆಮಾ ಅವರ ಪುತ್ರಿ ರಮ್ಯಾ ಜಗದೀಶ್ ನಾಗರಕೋಯಿಲ್ ಮೆಡಿಕಲ್ ಕಾಲೇಜಿನಲ್ಲಿ ಪ್ರೋಫೆಸರ್ ಆಗಿದ್ದು, ಮತ್ತೋರ್ವ ಪುತ್ರಿ ಸೌಮ್ಯ ಜಗದೀಶ್ ಮನೋವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ನರೇಂದ್ರನ್ ನಯ್ಯರ್ ಐಪಿಎಸ್ ಮತ್ತು ಡಾ. ಪ್ರವೀಣ್ ಪಣಿಕ್ಕರ್ ಇಬ್ಬರೂ ರೆಮಾ ಅವರ ಅಳಿಯಂದಿರಾಗಿದ್ದಾರೆ.

    ಕಾಮಿಡಿಯಲ್ಲಿ ಅಪ್ರತಿಮ ಒಲವು ಹೊಂದಿದ್ದ ನಟ ಜಗದೀಶ್ ಅವರು ‘ಮುತಾರಂಕುನ್ನು ಪಿಒ, ‘ಮಜ ಪೆಯ್ಯುನ್ನು ಮದ್ದಳೆ ಕೊಡುನ್ನು, ‘ಇನ್ ಹರಿಹರನಗರ’, ‘ಗಾಡ್‍ಫಾದರ್’, ಹೀಗೆ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಪಾದ ಮತ್ತು ದಿ ಪ್ರೀಸ್ಟ್ ಸೇರಿದಂತೆ ಇತ್ತೀಚಿನ ಕೆಲವು ಮಲಯಾಳಂ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

    ಅವರು ತಮ್ಮ ಪತಿ-ನಟ ಜಗದೀಶ್ ಮತ್ತು ಇಬ್ಬರು ಪುತ್ರಿಯರಾದ ರಮ್ಯಾ ಮತ್ತು ಸೌಮ್ಯ ಅವರನ್ನು ಅಗಲಿದ್ದಾರೆ. ಪಿ ರೆಮಾ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ತೈಕಾಡ್ ಶಾಂತಿ ಕವಚದಲ್ಲಿ ನಡೆಯಲಿದೆ.

     

  • ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಜಗದೀಶ್‌ ಅರ್ಜಿ

    ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಜಗದೀಶ್‌ ಅರ್ಜಿ

    ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ ಕೋರಿ ವಕೀಲ ಕೆ.ಎನ್.ಜಗದೀಶ್ ಕುಮಾರ್ ರಿಟ್ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ.

    ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿರುವ ರವಿ ಡಿ ಚೆನ್ನಣ್ಣ ಅವರ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿರುವ ವಕೀಲ ಜಗದೀಶ್ ಈ ಅರ್ಜಿ ಸಲ್ಲಿಕೆ ಮಾಡಿದ್ದು, ಸಂಬಂಧಿಕರ ಹೆಸರಿನಲ್ಲಿ ಅಕ್ರಮ‌ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಯೋಗಿ 2.0 ಆಡಳಿತ: 2 ಎನ್‍ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು

    ಅಷ್ಟೇ ಅಲ್ಲದೇ ಬೇನಾಮಿ ಹೆಸರಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ. ಜೊತೆಗೆ ಪೋಷಕರ ಹೆಸರಿನಲ್ಲೂ ಅಪಾರ ಆಸ್ತಿ ಖರೀದಿಸಲಾಗಿದೆ ಎಂದು ತಮ್ಮ ಅರ್ಜಿಯಲ್ಲಿ ದೂರಿದ್ದಾರೆ.

    ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಅರ್ಜಿಯನ್ನು ಬರೆದಿದ್ದು, ರವಿ ಚನ್ನಣ್ಣವರ್‌ ವಿರುದ್ಧ ಸರ್ಕಾರ ತನಿಖೆ ನಡೆಸಲು ಹಿಂದೇಟು ಹಾಕಿದೆ. ಹೀಗಾಗಿ ಸಿಬಿಐ, ಇಡಿ ಯಿಂದ ನಡೆಸುವಂತೆ ಮನವಿ ಮಾಡಿದ್ದಾರೆ. ವಕೀಲರ ಮೂಲಕ ಕೆ.ಎನ್.ಜಗದೀಶ್ ರಿಟ್ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ : ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

  • ವಕೀಲ ಜಗದೀಶ್ ಜತೆ ಸೇರಿಕೊಂಡ ಸ್ಯಾಂಡಲ್‌ವುಡ್‌  ನಿರ್ದೇಶಕ ಯಾರು?

    ವಕೀಲ ಜಗದೀಶ್ ಜತೆ ಸೇರಿಕೊಂಡ ಸ್ಯಾಂಡಲ್‌ವುಡ್‌ ನಿರ್ದೇಶಕ ಯಾರು?

    ತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುವ ವಕೀಲ ಜಗದೀಶ್ ಜತೆ ಮೊದ ಮೊದಲು ಕೇವಲ ವಕೀಲರು ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಸ್ಯಾಂಡಲ್ ವುಡ್ ನಿರ್ದೇಶಕರು ಕೂಡ ಜತೆಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ಜಗದೀಶ್ ಜತೆ ಇದ್ದ ವ್ಯಕ್ತಿ ಬೇರೆ ಯಾರೂ ಅಲ್ಲ, ಕನ್ನಡದಲ್ಲಿ ಎರಡು ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಶರತ್ ಕದ್ರಿ.

    2014 ರ ಹೊತ್ತಿಗೆ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡಿದವರು ಶರತ್. ಅದೇ ವರ್ಷದಲ್ಲೇ ಅವರು “ಸ್ಯಾಂಡಲ್ ವುಡ್ ಸರಿಗಮ” ಚಿತ್ರಕ್ಕೆ ನಿರ್ದೇಶನ ಮಾಡಿದರು. ಈ ಚಿತ್ರಕ್ಕೆ ಸಿಂಧು ಲೋಕನಾಥ್ ನಾಯಕಿ. ಅಷ್ಟೇನೂ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಲಿಲ್ಲ. ಆನಂತರ ಕ್ರೌಡ್ ಫಂಡೆಡ್ ಸಿನಿಮಾ ಮಾಡುತ್ತೇನೆ ಎಂದು ಓಡಾಡಿದರು. ಅದಕ್ಕಾಗಿ ಅವರು ಕೆಲವು ಯೋಜನೆಗಳನ್ನೂ ಹಾಕಿಕೊಂಡರು. ಜನರಿಂದ ಹಣ ಸಂಗ್ರಹಿಸಿ ಮಾಡಬೇಕಾಗಿದ್ದ ಚಿತ್ರಕ್ಕೆ “ಮರೆಯಲಾರೆ” ಎಂದು ಹೆಸರಿಟ್ಟರು. ಆ ಸಿನಿಮಾ ಕೂಡ ಅವರನ್ನು ಕೈ ಹಿಡಿಯಲಿಲ್ಲ. ಅಲ್ಲಿಂದ ಅವರು ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಸಿನಿಮಾ ರಂಗದಲ್ಲಿ ಅಷ್ಟೇನೂ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ವಕೀಲ ಜಗದೀಶ್ ಅವರ ಜತೆಯಾಗಿ ಹೋರಾಟಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು

    ಈ ಶರತ್ ಕದ್ರಿ ಸಿನಿಮಾ ರಂಗಕ್ಕೂ ಬರುವ ಮುನ್ನ ಕಾರ್ಪೋರೇಟ್ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದವರು. ವಾರದ ರಜಾ ದಿನಗಳಾದ ಶನಿವಾರ ಮತ್ತು ಭಾನುವಾರವನ್ನು ಹವ್ಯಾಸಕ್ಕೆ ಬಳಸಿಕೊಂಡವರು. ಮೊದ ಮೊದಲ ಕಿರುಚಿತ್ರ, ಜಾಹೀರಾತು ಚಿತ್ರಗಳನ್ನು ಮಾಡಿ ನಂತರ ಸಿನಿಮಾ ಮಾಡಲು ಮುಂದಾದರು. ಈಗಲೂ ಅವರಿಗೆ ಸಿನಿಮಾ ಮಾಡುವ ಆಸಕ್ತಿಯಿದೆ. ಅದಕ್ಕಾಗಿ ಅವರು ನಿರ್ಮಾಪಕರನ್ನು ಹುಡುಕತ್ತಲೇ ಇದ್ದಾರೆ. ಇದನ್ನೂ ಓದಿ: ಬಪ್ಪಿ ಲಹರಿ ಧರಿಸುತ್ತಿದ್ದ ಚಿನ್ನಾಭರಣ ಎಷ್ಟು?

  • ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

    ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದು ನಟಿ ಹರಿಪ್ರಿಯಾ ಅವರು ಶುಭಕೋರಿದ್ದಾರೆ.

    ತುಂಬು ಗರ್ಭಿಣಿ ಅಮೂಲ್ಯ ಜೊತೆಗಿನ ಫೋಟೋದೊಂದಿಗೆ ಇನ್ ಸ್ಟಾಗೆ ಅಪ್ಲೋಡ್ ಮಾಡಿರುವ ಹರಿಪ್ರಿಯಾ, ತಾಯಿಯಾಗುತ್ತಿರುವ ಅಮೂಲ್ಯಗೆ ಶುಭಾಶಯಗಳು. ಪುಟ್ಟ ಕಂದಮ್ಮನ ಆಗಮನಕ್ಕಾಗಿ ಕಾಯುತ್ತಿದ್ದು, ಮಗುವನ್ನು ನೋಡಲು ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Hariprriya (@iamhariprriya)

     

    ಕೆಲ ದಿನಗಳ ಹಿಂದೆಯಷ್ಟೇ ಅಮೂಲ್ಯ ಹಾಗೂ ಪತಿ ಜಗದೀಶ್ ವಿಜಯನಗರದ ಆದಿಚುಂಚನಗಿರಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರಿಂದ ಭಗವದ್ಗೀತೆ ಗ್ರಂಥವನ್ನು ಪಡೆದಿದ್ದು, ಮನಸ್ಸಿಗೆ ಸಂತೋಷ ನೀಡಿತು ಎಂದು ನಟಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: ತುಂಬು ಗರ್ಭಿಣಿ ಅಮೂಲ್ಯಾ ಜೊತೆ ಗೋಲ್ಡನ್ ಸ್ಟಾರ್ ಪತ್ನಿ -ಫೋಟೋ ವೈರಲ್

    2017ರಲ್ಲಿ ಜಗದೀಶ್ ಜೊತೆ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಅವರು ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕುಟುಂಬದ ಕಡೆಗೆ ಜಾಸ್ತಿ ಗಮನ ನೀಡಿದ್ದರು. ಇದೀಗ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು, ತಮ್ಮನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲು ಬರುತ್ತಿರುವ ಗೆಳೆಯರ ಜೊತೆ ಫೋಟೋ ತೆಗೆಸಿಕೊಂಡು ಅದನ್ನು ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  • ಜ್ವರ, ಶೀತ, ಮೈಕೈ ನೋವನ್ನು ಅಸಡ್ಡೆ ಮಾಡ್ಬೇಡಿ: ಉಡುಪಿ ಡಿಸಿ

    ಜ್ವರ, ಶೀತ, ಮೈಕೈ ನೋವನ್ನು ಅಸಡ್ಡೆ ಮಾಡ್ಬೇಡಿ: ಉಡುಪಿ ಡಿಸಿ

    – ಜಿಲ್ಲೆಯ ಪರಿಸ್ಥಿತಿ ಕೈಮೀರುತ್ತಿದೆ

    ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿ ಕೈಮೀರುತ್ತಿದೆ. ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಉಡುಪಿ ಡಿಸಿಸಿ ಜಗದೀಶ್ ಮನವಿ ಮಾಡಿದ್ದಾರೆ.

    ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಭರ್ತಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ತುರ್ತು ಮನವಿಯೊಂದನ್ನು ಮಾಡಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ. ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸೋಂಕಿನ ಲಕ್ಷಣ ಇರುವವರು ನಿರ್ಲಕ್ಷ್ಯ ಮಾಡಬಾರದು. ಲಕ್ಷಣ ಇದ್ದರೂ ಹತ್ತು ಹದಿನೈದು ದಿನ ಮನೆಯಲ್ಲೇ ಇರುವುದು ಸರಿಯಲ್ಲ ಎಂದಿದ್ದಾರೆ.

    ಕೊರೊನಾ ಉಲ್ಬಣಿಸಿದ ಬಳಿಕ ನೇರ ಐಸಿಯೂಗೆ ಬರುವವರ ಸಂಖ್ಯೆ ಹೆಚ್ಚುತ್ತಲೆ ಇದೆ, ಹೀಗೆ ಮಾಡಬೇಡಿ. ತಕ್ಷಣ ಬಂದು ಟೆಸ್ಟ್ ಮಾಡಿಸಿ. ಸರಳ ಚಿಕಿತ್ಸೆ ಮಾಡದೆ ಆರೋಗ್ಯ ಸ್ಥಿತಿ ಗಂಭೀರವಾದ ಮೇಲೆ ಆಸ್ಪತ್ರೆಗೆ ಬರುವುದು ಬಹಳ ಅಪಾಯಕಾರಿ. ವೈದ್ಯರಿಗೂ ಜೀವರಕ್ಷಣೆ ಮಾಡುವ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.

    ಸಂಬಂಧಿಕರು ಮತ್ತು ಬಂಧುಗಳೇ ಮನೆಗೆ ಬಂದರೂ ಸಾಮಾಜಿಕ ಅಂತರ ಪಾಲಿಸಬೇಕು. ಈ ಸಮಯದಲ್ಲಿ ಸಂಬಂಧಿಕರು ಮನೆಯಲ್ಲಿದ್ದರೂ ಐಸೊಲೇಷನ್‍ನಲ್ಲಿರಲಿ. ಮನೆಯ ಒಬ್ಬರಿಗೆ ಬಂದರೆ ಎಲ್ಲರಿಗೂ ಸೋಂಕು ಹರಡುತ್ತದೆ. ಇದರಿಂದ ಸಮಸ್ಯೆ ಬಿಗಡಾಯಿಸುತ್ತದೆ. ಜ್ವರ, ಶೀತ ಮೈಕೈ ನೋವು ಕಫ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕ ಮಾಡಿ ಎಂದಿದ್ದಾರೆ.