ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಜಗದೀಶ್‌ನನ್ನು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ವಹಿಸಿ 1ನೇ ಎಸಿಜೆಎಂ ಕೋರ್ಟ್ ಆದೇಶಿಸಿದೆ.
ಜಗದೀಶ್‌ನನ್ನು (Jagga) ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಡಿ ವಶಕ್ಕೆ ಪಡೆಯಿತು. 1 ನೇ ಎಸಿಜೆಎಂ ಕೋರ್ಟ್‌ಗೆ ಆರೋಪಿಯನ್ನು ಹಾಜರುಪಡಿಸಲಾಗಿತ್ತು. 10 ದಿನ ಸಿಐಡಿ ಕಸ್ಟಡಿಗೆ ಪಡೆದಿದೆ. ಕೊಲೆ ಕೇಸ್ ಹಾಗೂ ಕೋಕಾ ಕಾಯ್ದೆಯಡಿ ಜಗ್ಗನನ್ನ ಸಿಐಡಿ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಬಿಕ್ಲು ಶಿವ ಹತ್ಯೆ ಕೇಸ್ – ಎ1 ಆರೋಪಿ ಜಗ್ಗ ಅರೆಸ್ಟ್
ಜು.15 ರಂದು ಭಾರತಿನಗರದಲ್ಲಿ ಬಿಕ್ಲು ಶಿವನ ಕೊಲೆಯಾಗಿತ್ತು. ರೌಡಿಶೀಟರ್ ಕೊಲೆ ಕೇಸ್‌ನಲ್ಲಿ ಜಗದೀಶ್ ಎ1 ಆರೋಪಿಯಾಗಿದ್ದ. ಕೊಲೆಯ ನಂತರ ಚೆನ್ನೈ ಏರ್‌ಪೋರ್ಟ್‌ನಿಂದ ದುಬೈಗೆ ಎಸ್ಕೇಪ್ ಆಗಿದ್ದ.
– ಹತ್ಯೆಗೆ ಹೋಟೆಲ್‌ನಲ್ಲೇ ನಡೆದಿತ್ತು ಪ್ಲ್ಯಾನ್; 2 ಗಂಟೆ 38 ನಿಮಿಷ ಮಾತುಕತೆ
– ಹತ್ಯೆಗೂ ಮುನ್ನ ಭರ್ಜರಿ ಬಾಡೂಟ
ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ (Biklu shiva) ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ಎ1 ಆರೋಪಿ ಜಗ್ಗ @ ಜಗದೀಶ್ (Jagga) ಕುರಿತು ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಹೌದು. ಬಿಕ್ಲು ಶಿವನ ಹತ್ಯೆಯಾದ ಕೇವಲ ಹದಿನೈದೇ ನಿಮಿಷಕ್ಕೆ ಜಗ್ಗ ಮನೆಯಿಂದ ಎಸ್ಕೇಪ್ ಆಗಿದ್ದಾನೆ ಅನ್ನೋದು ಸಿಸಿಟಿವಿ ದೃಶ್ಯವಾಳಿಯಿಂದ ಬೆಳಕಿಗೆ ಬಂದಿದೆ. ಅಂದು ರಾತ್ರಿ 8 ಗಂಟೆಗೆ ಶಿವಪ್ರಕಾಶ್‌ನ ಕೊಲೆಯಾಗಿದೆ. ರಾತ್ರಿ 8:15 ಗಂಟೆಗೆ ಜಗ್ಗ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ತನ್ನ ಆಡಿ ಕಾರ್ ಮೂಲಕ ಹೆಣ್ಣೂರಿನ ಕ್ಯಾನೋಪಿ ಅಪಾರ್ಟ್ಮೆಂಟ್ ನಿಂದ ನೇರ ಚೆನೈಗೆ ಎಸ್ಕೇಪ್ ಆಗಿದ್ದಾನೆ. ಜಗ್ಗ ಮನೆಯಿಂದ ಎಸ್ಕೇಪ್ ಆಗುತ್ತಿರುವ ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯಾವಳಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.
2 ಗಂಟೆ 38 ನಿಮಿಷ – ಹೋಟೆಲ್‌ನಲ್ಲಿ ನಡೆದಿತ್ತು ಪ್ಲ್ಯಾನ್
ಇನ್ನೂ ಬಿಕ್ಲು ಶಿವ ಹತ್ಯೆಗೂ ಮುನ್ನ ಹಂತಕರು ಹೋಟೆಲ್‌ನಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿದ್ದರು ಅನ್ನೋದು ಸಿಸಿಟಿವಿ ದೃಶ್ಯಗಳಿಂದ ಗೊತ್ತಾಗಿದೆ. ಕಿರಣ್ ಸಾರಥ್ಯದಲ್ಲಿ ಹೋಟೆಲ್‌ಗೆ ಬಂದಿದ್ದ ಹಂತಕರು ಸುಮಾರು 2 ಗಂಟೆ 38 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಇಲ್ಲಿಯೇ ಶಿವನ ಹತ್ಯೆಗೆ ಪ್ಲ್ಯಾನ್ ನಡೆದಿತ್ತು. ಹತ್ಯೆ ಬಳಿಕ ಹೇಗೆ ಎಸ್ಕೇಪ್ ಆಗಬೇಕು? ಅನ್ನೋ ಮಾತುಕತೆಯೂ ಆಗಿತ್ತು ಅನ್ನೋದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದೆಲ್ಲದರ ಎಕ್ಸ್‌ಕ್ಲೂಸಿವ್ ದೃಶ್ಯಾವಳಿಗಳು ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.
ಬಂಧಿತ ಹಂತಕರಲ್ಲಿ ಕಿರಣ್, ಮದನ್ ಪ್ರದೀಪ್, ವಿಮಲ್, ಸೇರಿ ಒಟ್ಟು 9 ಮಂದಿ ಒಂದೇ ಟೇಬಲ್‌ನಲ್ಲಿ ಕೂತು ಪ್ಲ್ಯಾನ್ ಮಾಡಿದ್ದರು. ಸಂಜೆ 4 ಗಂಟೆಗೆ ಹೋಟೆಲ್‌ಗೆ ಎಂಟ್ರಿ ಆಗಿದ್ದ ಹಂತಕರು 2 ಗಂಟೆಗೂ ಹೆಚ್ಚುಕಾಲ ಒಂದೇ ಟೇಬಲ್‌ನಲ್ಲಿ ಕೂತು ಸ್ಕೆಚ್ ಹಾಕಿದ್ದರು. ಮೆನು ತರಿಸಿಕೊಂಡು ಭರ್ಜರಿ ಊಟ ಕೂಟ ಮಾಡಿದ್ದರು ಅನ್ನೋ ತನಿಖಾಧಿಕಾರಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಉಡುಪಿಯಲ್ಲಿ ಭಾರೀ ಮಳೆ – ಬೈಂದೂರು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವು ಕಡೆಗಳಲ್ಲಿ ಜಗದೀಶ್ ಅಲಿಯಾಸ್ ಜಗ್ಗನ ಹುಡುಕಾಟಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಇದೇ ವೇಳೆ ಆರೋಪಿ ಜಗ್ಗ ವಿದೇಶಕ್ಕೆ ಎಸ್ಕೇಪ್ ಆಗುವ ಬಗ್ಗೆ ಮಾಹಿತಿಗಳು ಸಿಕ್ಕ ಹಿನ್ನೆಲೆಯಲ್ಲಿ ಬುಧವಾರ ಆತನ ಪತ್ತೆಗಾಗಿ ಲುಕ್‌ಔಟ್ ನೋಟಿಸ್ ಜಾರಿ ಮಾಡಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಇಂದು, ನಾಳೆ ಹಾಲು ಮಾರಾಟ ಬಂದ್ – ಟೀ, ಕಾಫಿ ಇಲ್ಲ.. ಓನ್ಲಿ ಲೆಮನ್, ಬ್ಲ್ಯಾಕ್ ಟೀ ಸಿಗುತ್ತೆ ಅಂತ ಬೋರ್ಡ್
ಏನಿದು ಲುಕ್ ಔಟ್ ನೋಟಿಸ್?
ಕ್ರಿಮಿನಲ್ ಪ್ರಕರಣಗಳಲ್ಲಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಜಾರಿಗೊಳಿಸಲಾಗುವ ವಿಶೇಷವಾದ ನೋಟಿಸ್ ಇದಾಗಿದೆ. ಇದನ್ನು ಲುಕ್ ಔಟ್ ಸರ್ಕ್ಯೂಲರ್ (LOC) ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದನ್ನು ವಿದೇಶಾಂಗ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಬ್ಯೂರೋ ಆಫ್ ಇಮಿಗ್ರೇಷನ್ (BOI) ಜಾರಿಗೊಳಿಸುತ್ತದೆ. ಯಾವುದೇ ರಾಜ್ಯಗಳಲ್ಲಿ ಸಂಭವಿಸಿದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆ ಹಚ್ಚಲು, ಆಯಾ ರಾಜ್ಯ ಸರ್ಕಾರಗಳ ಅಧೀನ ಕಾರ್ಯದರ್ಶಿ ಹಾಗೂ ಅದಕ್ಕೆ ತತ್ಸಮಾನ ಹುದ್ದೆಗಳಲ್ಲಿರುವ ಅಧಿಕಾರಿಗಳು ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ಮನವಿ ಸಲ್ಲಿಸಿದ್ರೆ ಮಾತ್ರ ಇಂಥ ನೋಟಿಸ್ ಜಾರಿಗೊಳಿಸುತ್ತದೆ. ಇದನ್ನೂ ಓದಿ: ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣ – ಓವರ್ ಸ್ಪೀಡ್‌ನಿಂದ ಡಿವೈಡರ್‌ಗೆ ಡಿಕ್ಕಿ; ಓರ್ವ ಸಾವು
ಇದಲ್ಲದೆ, ರಾಜ್ಯ ಸರ್ಕಾರಗಳು ರಚನೆ ಮಾಡುವ ವಿಶೇಷ ತನಿಖಾ ತಂಡಗಳಿಗೂ (SIT) ಇಂಥ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಅವಕಾಶವಿದೆ. ಇದು ಜಾರಿಯಾಗುತ್ತಲೇ ಆ ಆರೋಪಿಯ ಬಗೆಗಿನ ಎಲ್ಲಾ ವಿವರಗಳು, ಯಾವುದೇ ದೇಶವನ್ನು ಪ್ರವೇಶಿಸಲು ಇರುವ ಮಾರ್ಗಗಳಾದ ವಿಮಾನ ನಿಲ್ದಾಣಗಳು, ಬಂದರುಗಳು, ಅಂತಾರಾಷ್ಟ್ರೀಯ ಹೆದ್ದಾರಿಗಳ ಚೆಕ್ ಪಾಯಿಂಟ್ ಗಳನ್ನು ತಲುಪುತ್ತವೆ. ವಿದೇಶದಲ್ಲಿರುವ ಆರೋಪಿಯು ತನ್ನ ವೀಸಾ ಅವಧಿ ಮುಗಿದ ನಂತರ ಇಮಿಗ್ರೇಷನ್ ವಿಭಾಗವನ್ನು ಸಂಪರ್ಕಿಸಲೇಬೇಕು. ಆಗ ಆತನನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ.
‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಸ್ಪರ್ಧಿ ಭವ್ಯಾ ಗೌಡ (Bhavya Gowda) ಅವರು ಬಿಗ್ ಬಾಸ್ ಆಟ ಮುಗಿದ್ಮೇಲೆ ಮದುವೆ, ವೃತ್ತಿ ಜೀವನದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇನ್ನೂ ‘ಚೆಲುವಿನ ಚಿತ್ತಾರ’ ಖ್ಯಾತಿಯ ನಟಿ ಅಮೂಲ್ಯ ಜೊತೆಗಿನ ಬಾಂಧವ್ಯದ ಬಗ್ಗೆ ಭವ್ಯಾ ಮಾತನಾಡಿದ್ದಾರೆ. ಅಮೂಲ್ಯ (Amulya) ಅತ್ತಿಗೆ ಸಖತ್ ಸ್ವೀಟ್ ಎಂದಿದ್ದಾರೆ.
ಬಿಗ್ ಬಾಸ್‌ಗೆ ಹೋಗುವಾಗ ಜಗದೀಶ್ ಅಣ್ಣ ಮತ್ತು ಅಮೂಲ್ಯ ಅತ್ತಿಗೆ ಆಲ್ ದಿ ಬೆಸ್ಟ್ ಹೇಳಿದ್ರು. ನಾನ್ ಬಿಗ್ ಬಾಸ್‌ಗೆ ಹೋದ್ಮೇಲೆಯೂ ಅಮೂಲ್ಯ ಅತ್ತಿಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. 2 ದಿನದಿಂದ ಅಂದುಕೊಳ್ಳುತ್ತೇಲೆ ಇದ್ದೇನೆ. ಅವರ ಮನೆಗೆ ಅಮೂಲ್ಯ ಅತ್ತಿಗೆ ಹಾಗೂ ಅಣ್ಣನ್ನು ಭೇಟಿಯಾಗಬೇಕು ಅಂತ. ಸದ್ಯದಲ್ಲೇ ಅವರನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ನಾನೊಬ್ಬರಿಗೆ ಪಾರ್ಟ್ನರ್ ಆಗಿದ್ದೇನೆ: ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ
ಇನ್ನೂ ಅಮೂಲ್ಯ ಅತ್ತಿಗೆ ಯಾವಾತ್ತೂ ಆ್ಯಕ್ಟಿಂಗ್ ಹಾಗೇ ಮಾಡು ಹೀಗೆ ಎಂದು ಸಜೇಷನ್ ಕೊಟ್ಟಿಲ್ಲ. ಆದರೆ ನೀನು ಏನು ಮಾಡುತ್ತಿದ್ದಿಯೋ ಅದು ನಿನಿಗೆ ಗೊತ್ತಿರಬೇಕು. ಕೆಲಸದಲ್ಲಿ 100% ಕೊಡು ಒಂದಿಷ್ಟು ಸಲಹೆ ಕೊಟ್ಟಿದ್ದಾರೆ. ಅಮೂಲ್ಯ ಅತ್ತಿಗೆ ಸಖತ್ ಸ್ವೀಟ್, ಅದು ಎಲ್ಲರಿಗೂ ಗೊತ್ತು. ಅವರು ಸಖತ್ ಹಂಬಲ್, ಯಾರೇ ಮನೆಗೆ ಬಂದ್ರೂ ಖುಷಿಯಿಂದ ಮಾತನಾಡಿಸುತ್ತಾರೆ. ಜಗದೀಶ್ ಅಣ್ಣ ಹೇಳ್ತಾರೆ, ನಿಮಗೆ ಏನು ಹೇಳೋದು. ನಿಮ್ಮ ಮನೆಗೆ ನೀವೇ 4 ಜನ ಗಂಡು ಮಕ್ಕಳು ಅಂತ. ನೀವು ಬೆಳೆಯುತ್ತಿರುವ ರೀತಿ ಖುಷಿಯಿದೆ ಎಂದು ಸಾಕಷ್ಟು ಬಾರಿ ಹೇಳಿದ್ದಾರೆ. ನಮ್ಮ ಒಳ್ಳೆಯದನ್ನೇ ಅವರು ಬಯಸುತ್ತಾರೆ ಎಂದು ಭವ್ಯಾ ಹೇಳಿದ್ದಾರೆ.
ಇನ್ನೂ ಭವ್ಯಾಗೆ ಸಂಬಂಧದಲ್ಲಿ ಜಗದೀಶ್ ಅವರು ಅಣ್ಣ ಆಗಬೇಕು, ದೊಡ್ಡಪ್ಪನ ಮಗ. ಅಮೂಲ್ಯ ಅವರು ಅತ್ತಿಗೆ ಆಗುತ್ತಾರೆ.
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ (Renukaswamy Murder Case) ‘ಡಿ’ ಗ್ಯಾಂಗ್‌ನೊಂದಿಗೆ ಅಂದರ್ ಆಗಿರುವ ಎ6 ಜಗದೀಶ್‌ಗೆ ಜಾಮೀನು (Bail) ಸಿಕ್ಕರೂ ಸಹ ಈವರೆಗೆ ಬಿಡುಗಡೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಹೀಗಾಗಿ ವಯಸ್ಸಾದ ಜಗದೀಶ್ ತಾಯಿ ಸುಲೋಚನಮ್ಮ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮಗನ ಬೇಲ್‌ಗಾಗಿ ಜಾಮೀನುದಾರರನ್ನು ಒದಗಿಸಲಾಗದೇ ಸುಲೋಚನಮ್ಮ ಕಂಗಾಲಾಗಿದ್ದಾರೆ.
ಈ ವೇಳೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಕೋರ್ಟ್ ಮಗನ ಬಿಡುಗಡೆಗಾಗಿ ಇಬ್ಬರು ಜಾಮೀನುದಾರರನ್ನು ಕೇಳಿದೆ. ಆದರೆ ಜಗದೀಶ್‌ಗೆ ಜಾಮೀನು ನೀಡಲು ಸ್ನೇಹಿತರು ಹಾಗೂ ಸಂಬಂಧಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅಭಿಮಾನದಿಂದ ನಟರನ್ನು ನಂಬಿ ಯಾರೂ ಮೋಸಹೋಗಬಾರದು. ನನ್ನ ಮಗ ದರ್ಶನ್ ನಂಬಿ ಹೋಗಿ ಜೈಲುಸೇರಿದ್ದಾನೆ. ಮುಂದೆ ಯಾವ ಯುವಕರು ಸಹ ಇಂಥವರನ್ನು ನಂಬಿ ಮೋಸಹೋಗಬಾರದು. ಈವರೆಗೆ ದರ್ಶನ್ (Darshan) ಅವರಿಂದ ಯಾವ ಸಹಾಯವು ಆಗಿಲ್ಲ ಎಂದು ಮನನೊಂದ ಜಗದೀಶ್ ತಾಯಿ ಸುಲೋಚನಮ್ಮ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ
ನಟ ದರ್ಶನ್ ಅವರನ್ನು ನಂಬಿ ನನ್ನ ಮಗ ಹೋಗಿದ್ದಾನೆ. ಅವರೇ ಬಿಡುಗಡೆ ಮಾಡಿಸಬೇಕು. ಜೊತೆಗೆ ಬೆಂಗಳೂರಿನ ವಕೀಲರು ನಮ್ಮ ಪರಿಸ್ಥಿತಿ ಅರ್ಥೈಸಿಕೊಂಡು ವಾದ ಮಂಡಿಸಿ ಬೇಲ್ ಕೊಡಿಸಿದ್ದಾರೆ. ಹೀಗಾಗಿ ನಟ ದರ್ಶನ್ ಅವರು ಶ್ಯೂರಿಟಿ ಕೊಟ್ಟು ನನ್ನ ಮಗನನ್ನು ಬಿಡಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್
ಬೆಂಗಳೂರು: ಕೆಎಂಎಫ್ ಎಂಡಿ ಜಗದೀಶ್‌ಗೆ ಸ್ಥಾನ ತೋರಿಸದೇ ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಡಿಸೆಂಬರ್ 2ರಂದೇ ವರ್ಗಾವಣೆ ಮಾಡಲಾಗಿದೆ. ನಂದಿನಿಯ ಬ್ರ‍್ಯಾಂಡ್‌ನ ಇಡ್ಲಿ, ದೋಸೆ ಹಿಟ್ಟನ್ನು ತರಲು ಜಗದೀಶ್ ಅವರು ದೊಡ್ಡಮಟ್ಟದ ಪ್ಲ್ಯಾನ್ ಮಾಡಿದ್ದರು. ನಂದಿನಿಯ ಹೊಸ ಪ್ರಾಡೆಕ್ಟ್ ರೂಪುರೇಷೆ ಟೆಂಡರ್ ಹಂತದಲ್ಲಿದೆ. ಅದರೆ, ಅಷ್ಟರಲ್ಲಿ ಸ್ಥಳ ನಿಯುಕ್ತಿ ಮಾಡದೇ ದಿಢೀರ್ ವರ್ಗಾವಣೆ ಮಾಡಲಾಗಿದೆ.
ಕೆಎಂಎಫ್ ಎಂಡಿಯಾಗಿ ಸಿಎಂ ಜಂಟಿ ಕಾರ್ಯದರ್ಶಿಯಾಗಿದ್ದ ಬಿ.ಶಿವಸ್ವಾಮಿಯವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಕ್ಸ್ ಖಾತೆಯಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಅಮುಲ್, ನಂದಿನಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದ ಇದೇ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದೆ. ‘ನಂದಿನಿ’ಯನ್ನು ಒಳಗಿನಿಂದ ನಾಶಪಡಿಸುತ್ತಿದೆ.
ನಂದಿನಿಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಕೆಎಂಎಫ್ ಎಂಡಿ ಎಂಕೆ ಜಗದೀಶ್, ಇಡ್ಲಿ/ದೋಸೆ ಹಿಟ್ಟಿನಂತಹ ನವೀನ ಉತ್ಪನ್ನಗಳ ಬಿಡುಗಡೆಗೆ ಮುಂಚಿತವಾಗಿ ಹಠಾತ್ ವರ್ಗಾವಣೆಯಾಗಿದ್ದಾರೆ. ಅವರ ನಾಯಕತ್ವದಲ್ಲಿ ನಂದಿನಿ ದೆಹಲಿ, ದುಬೈ ಮತ್ತು ತಿರುಪತಿಯೊಂದಿಗೆ ಸಂಬAಧವನ್ನು ಪುನರುಜ್ಜೀವನಗೊಳಿಸುವಾಗ ಐಎಸ್‌ಎಲ್, ಪ್ರೊ ಕಬಡ್ಡಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ತಂಡಗಳನ್ನು ಪ್ರಾಯೋಜಿಸುವ ಮೂಲಕ ಹೊಸ ಎತ್ತರಗಳನ್ನು ಏರಿದರು.
ಇದೀಗ ಕೇರಳದ ಲಾಬಿಗೆ ಕೈಜೋಡಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಖಾಸಗಿ ಬ್ರಾಂಡ್‌ಗಳನ್ನು ರಕ್ಷಿಸಲು ನಂದಿನಿಯನ್ನು ಹಾಳು ಮಾಡಿದ್ದಾರೆ. ಸಮರ್ಪಿತ ಅಧಿಕಾರಿಯೊಬ್ಬರು ತಮ್ಮ ಕೆಲಸವನ್ನು ಚೆನ್ನಾಗಿ ಮಾಡಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಈ ಸರ್ಕಾರದಲ್ಲಿ ಸ್ವೀಕಾರಾರ್ಹವಲ್ಲ! ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ? ಕರ್ನಾಟಕದ ಜನತೆ ಉತ್ತರ ಕೇಳುತ್ತಾರೆ ಎಂದು ವಿಜಯೇಂದ್ರ ಪೋಸ್ಟ್ ಹಾಕಿದ್ದಾರೆ.
ಪುಷ್ಪ (Pushpa) ಸಿನಿಮಾದಲ್ಲಿ ನಾಯಕ ಪುಷ್ಪರಾಜನ ಸ್ನೇಹಿತನಾಗಿ ನಟಿಸಿದ್ದ ಜಗದೀಶ್ ಪ್ರತಾಪ್ ಭಂಡಾರಿಯನ್ನು (Jagadish) ಪೊಲೀಸರು ಬಂಧಿಸಿದ್ದಾರೆ. ನಟಿಯೊಬ್ಬರ ಆತ್ಮಹತ್ಯೆಯ (Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.
ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಜಗದೀಶ್, ಅವರೊಂದಿಗೆ ಸಲುಗೆಯಿಂದ ಇದ್ದರಂತೆ. ಇದೇ ಸಲುಗೆಯನ್ನು ಬಳಸಿಕೊಂಡು ಆಕೆಯ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ತನ್ನೊಂದಿಗೆ ಸಹಕರಿಸದೇ ಇದ್ದರೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕುವುದಾಗಿ ಬೆದರಿಸಿದ್ದಾರೆ.
ಜಗದೀಶ್ ಬೆದರಿಕೆಗೆ ಮನನೊಂದು ನಟಿ (Actress) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜಗದೀಶ್ ಅವರನ್ನು ಬಂಧಿಸಿರುವ ಪೊಲೀಸರು, ಈ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ. ಜಗದೀಶ್ ಅರೆಸ್ಟ್ ಆಗುವಾಗ ಪುಷ್ಪ 2 ಸಿನಿಮಾದ ಚಿತ್ರೀಕರಣದಲ್ಲಿ ಇದ್ದರು ಎಂದು ತಿಳಿದು ಬಂದಿದೆ.
ಮಂಡ್ಯ: ಕೆಎಸ್‍ಆರ್ ಟಿಸಿ ಬಸ್ ಚಾಲಕ ಕಂ ನಿರ್ವಾಹಕನ ಆತ್ಮಹತ್ಯೆ ಯತ್ನಕ್ಕೆ ಕಾಂಗ್ರೆಸ್ ಶಾಸಕ ಚಲುವರಾಯಸ್ವಾಮಿ (Chaluvarayaswamy) ಕಾರಣ ಎಂದು ಜಗದೀಶ್ ಸ್ನೇಹಿತರು ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಚಲುವರಾಯಸ್ವಾಮಿ ತನ್ನ ಚೇಲಾಗಳ ಮಾತು ಕೇಳಿ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಜಗದೀಶ್ ಕುಟುಂಬ ಜೆಡಿಎಸ್ ಪರ ಗುರುತಿಸಿಕೊಂಡಿತ್ತು. ಸುರೇಶ್ ಗೌಡ ಪರ ಜಗದೀಶ್ (KSRTC Bus Driver Jagadeesh) ಕುಟುಂಬ ಚುನಾವಣೆಯಲ್ಲಿ ಕೆಲಸ ಮಾಡಿತ್ತು. ಅಲ್ಲದೇ ಜಗದೀಶ್ ಹೆಂಡತಿ ಜೆಡಿಎಸ್ (JDS) ಬೆಂಬಲಿತ ಗ್ರಾ.ಪಂ ಸದಸ್ಯೆ. ಅವರಿಗೆ ಗ್ರಾ.ಪಂ ಅಧ್ಯಕ್ಷೆ ಆಗುವ ಅವಕಾಶ ಇತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ (Congress) ಮುಖಂಡರು ನಮ್ಮ ಪಕ್ಷಕ್ಕೆ ಬನ್ನಿ ಇಲ್ಲವೇ ನಿನ್ನ ಗಂಡನ ಕೆಲಸಕ್ಕೆ ತೊಂದರೆ ಮಾಡ್ತೀವಿ ಎಂದಿದ್ದರು. ಹಾಗಿದ್ದರೂ ಜಗದೀಶ್ ಪತ್ನಿ ಕಾಂಗ್ರೆಸ್ ಹೋಗಲು ನೀರಾಕರಿಸಿದ್ದರು. ಹೀಗಾಗಿ ತನ್ನ ಬೆಂಬಲಿಗರ ಮಾತು ಕೇಳಿ ಚಲುವರಾಯಸ್ವಾಮಿ ದ್ವೇಷದ ರಾಜಕೀಯ ಮಾಡಿದ್ದಾರೆ. ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣರಾಗಿದ್ದಾರೆ. ಜಗದೀಶ್ ಜೀವಕ್ಕೆ ಹೆಚ್ಚು ಕಡಿಮೆ ಆದ್ರೆ ಅವರ ಕುಟುಂಬ ನೋಡಿಕೊಳ್ಳೋರು ಯಾರು ಎಂದು ಸ್ನೇಹಿತರು ಕಿಡಿಕಾರಿದ್ದಾರೆ. ಇದನ್ನೂ ಓದಿ: JDS ಪರ ಪ್ರಚಾರ ಮಾಡಿದ್ದಕ್ಕೆ ಮಗನ ವರ್ಗಾವಣೆ- ಆತ್ಮಹತ್ಯೆಗೆ ಯತ್ನಿಸಿದ ಜಗದೀಶ್ ತಂದೆ ಬೇಸರ
ವಿಷ ಸೇವಿಸಿದ ಚಾಲಕ ಜಗದೀಶ್ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬುಧವಾರ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಜಗದೀಶ್ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಬಗ್ಗೆ ಏನೂ ಹೇಳು ಆಗಲ್ಲ. ಬದುಕಿಸಲು ಪ್ರಯತ್ನ ಮಾಡ್ತೇವೆ ಎಂದು ವೈದ್ಯರು ಹೇಳಿದ್ದಾರೆ.
ಮಂಡ್ಯ: ಜೆಡಿಎಸ್ ಪರ ಚುನಾವಣೆ ಮಾಡಿದ್ದೇವೆ ಎಂಬ ಕಾರಣಕ್ಕೆ ನನ್ನ ಮಗನನ್ನು ವರ್ಗಾವಣೆ ಮಾಡಲಾಗಿದೆ. ಇದರಿಂದ ಬೇಸರಗೊಂಡು ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಕೆಎಸ್‍ಆರ್ ಸಿ ನಾಗಮಂಗಲ ಡಿಪೋದ ಡ್ರೈವರ್ ಕಂ ಕಂಡಕ್ಟರ್ ಜಗದೀಶ್ (KSRTC Bus Driver Jagadeesh) ತಂದೆ ರಾಜೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆದ್ದು ಒಂದೂವರೆ ತಿಂಗಳ ಕಳೆದಿಲ್ಲ. ಆಗಲೇ ಚಲುವರಾಯಸ್ವಾಮಿ (Chaluvaraswamy) ದ್ವೇಷದ ರಾಜಕಾರಣ ಆರಂಭಿಸಿದ್ದಾರೆ. ಜೆಡಿಎಸ್ ಪರ ಚುನಾವಣೆ ಮಾಡಿದ್ದೇವೆ ಎಂಬ ಕಾರಣಕ್ಕೆ ನನ್ನ ಮಗನನ್ನು ಬೇರೆ ಕಡೆ ವರ್ಗಾಯಿಸಿದ್ದಾರೆ. ಇಲ್ಲಸಲ್ಲದ ಸುಳ್ಳು ಕಾರಣಗಳನ್ನು ನೀಡಿ ವರ್ಗಾವಣೆ ಮಾಡಿದ್ದಾರೆ. ಇದರಿಂದ ಮನನೊಂದ ನನ್ನ ಮಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚಲುವರಾಯಸ್ವಾಮಿ ನೆರಳಲ್ಲಿ ವರ್ಗಾವಣೆ ಆರೋಪ- KSRTC ಸಿಬ್ಬಂದಿ ಆತ್ಮಹತ್ಯೆಗೆ ಯತ್ನ
ಈಗ ಮಗನ ಪರಿಸ್ಥಿತಿ ಚಿಂತಾಜನಕವಾಗಿದೆ. ಆತ ಬದುಕುಳಿಯುವುದು ಕಷ್ಟಕರವಾಗಿದೆ. ನಾವು ಅಪ್ಪಟ ಜೆಡಿಎಸ್ ಬೆಂಬಲಿಗರು, ಹಲವು ವರ್ಷಗಳಿಂದ ಕುಮಾರಸ್ವಾಮಿ ಬೆಂಬಲಿಸಿದ್ದೇವೆ. ಸೊಸೆ ಕೂಡ (ಜಗದೀಶ್ ಪತ್ನಿ) ಜೆಡಿಎಸ್ ಬೆಂಬಲಿತ ಗ್ರಾ.ಪಂ ಸದಸ್ಯೆಯಾಗಿದ್ದಾರೆ. ಇದಲ್ಲೆವನ್ನು ಸಹಿಸಲಾರದೆ ನನ್ನ ಮಗನಿಗೆ ವರ್ಗಾವಣೆ ಕಿರುಕುಳ ನೀಡಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ ಮುಖಂಡರಾದ ಬಸವರಾಜು ಹಾಗೂ ಮಹದೇವು ಕಾರಣ. ಸಚಿವ ಚಲುವರಾಯಸ್ವಾಮಿಗೆ ಒತ್ತಡ ಹೇರಿ ಮಗನನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ರಾಜೇಗೌಡ ದೂರಿದ್ದಾರೆ.
ಆತ್ಮಹತ್ಯೆಗೆ ಯತ್ನ: ಆತ್ಮಹತ್ಯೆ ಯತ್ನಕ್ಕೂ ಮುನ್ನ ಜಗದೀಶ್ ಡೆತ್‍ನೋಟ್ ಬರೆದಿದ್ದು, ಅದರಲ್ಲಿ ನನ್ನ ವರ್ಗಾವಣೆಗೆ ಕಾರಣ ಏನೆಂದು ಡಿಪೆÇೀ ಮ್ಯಾನೇಜರ್ ಕೇಳಿದೆ. ನಿಯಂತ್ರಣಾಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ ಎಂದರು. ಅವರನ್ನ ಕೇಳಿದಾಗ ಕೃಷಿ ಸಚಿವರ ಆದೇಶದ ಮೇರೆಗೆ ವರ್ಗಾವಣೆ ಎಂದರು. ನನ್ನ ಮೇಲೆ ಸಚಿವರಿಗೆ ಯಾಕಿಷ್ಟು ಕೋಪವೆಂದು ತಿಳಿಯದೆ ನೊಂದಿದ್ದೇನೆ. ಈ ಒತ್ತಡ, ಅವಮಾನ ಸಹಿಸಲು ನನ್ನಿಂದ ಆಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡುವಂತೆ ತಿಳಿಸಿದ್ದಾರೆ.
ಸದ್ಯ ತೀವ್ರ ಅಸ್ವಸ್ಥಗೊಂಡಿರುವ ಜಗದೀಶ್ ಅವರನ್ನು ಮಣಿಪಾಲ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಪರಿಸ್ಥಿತಿ ಚಿಂತಾನಕವಾಗಿದೆ. ಇತ್ತ ಈ ಸಂಬಂಧ ಕರ್ತವ್ಯಕ್ಕೆ ಹಾಜರಾಗದೆ ಸಾರಿಗೆ ಸಿಬ್ಬಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ನಾಗಮಂಗಲದ ಡಿಪೋದಿಂದ ಯಾವುದೇ ಕೆಎಸ್‍ಆರ್ ಟಿಸಿ ಬಸ್‍ಗಳು ಇನ್ನೂ ಹೊರಟಿಲ್ಲ. ಹೀಗಾಗಿ 60ಕ್ಕೂ ಹೆಚ್ಚು ಬಸ್‍ಗಳು ನಿಂತಲ್ಲೇ ನಿಂತಿವೆ. ಬಸ್ ಸಂಚಾರ ಸ್ಥಗಿತ ಹಿನ್ನೆಲೆಯ್ಲಲಿ ನಿಲ್ದಾಣ ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಎನಿಸುತ್ತಿದೆ.
ಬೆಂಗಳೂರು: ವಿಧಾನಸೌಧದಲ್ಲಿ (Vidhana Soudha) ಪತ್ತೆಯಾದ 10 ಲಕ್ಷ ರೂ. ಹಣ ನನ್ನದೇ. ನ್ಯಾಯಾಲಯಕ್ಕೆ ಪಾವತಿಸಲು ಆ ಹಣವನ್ನು ಸಂಗ್ರಹಿಸಿದ್ದೆ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಜಗದೀಶ್ (PWD Engineer Jagadish) ತಿಳಿಸಿದ್ದಾರೆ.
10 ಲಕ್ಷ ರೂ. ಹಣ ಸಿಕ್ಕಿದ ಪ್ರಕರಣದಲ್ಲಿ ಆರೋಪಿ ಜಗದೀಶ್‌ಗೆ ಜಾಮೀನು (Bail) ಸಿಕ್ಕಿದೆ. ಮೆಯೋಹಾಲ್ ಕೋರ್ಟ್ 1 ರ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದು, ಜಾಮೀನು ಪಡೆದ ಬಳಿಕ ಎಂಜಿನಿಯರ್ ಜಗದೀಶ್ ಹಣದ ಮೂಲದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಜಗದೀಶ್ ಹೇಳಿದ್ದು ಏನು?
ಸ್ವಂತ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಚೆಕ್ ಬೌನ್ಸ್ (Cheque Bounce) ಆಗಿದ್ದ ಹಿನ್ನೆಲೆಯಲ್ಲಿ ಕೋರ್ಟ್ (Court) ಮುಖಾಂತರ ದಂಡವಾಗಿ ಹಣವನ್ನು ಪಾವತಿ ಮಾಡಬೇಕಿತ್ತು. ಸಂಬಂಧಿಕರಿಂದ ಹಣವನ್ನು ಸಂಗ್ರಹಿಸಿದ್ದೆ. ಈ ಬಗ್ಗೆ ಎಲ್ಲಾ ದಾಖಲಾತಿಗಳನ್ನು ಪೊಲೀಸರಿಗೆ ಮತ್ತು ನ್ಯಾಯಾಲಯಕ್ಕೆ ಕೊಟ್ಟಿದ್ದೇನೆ. ನಾನು ಮಂಡ್ಯಕ್ಕೆ ಹೋಗಬೇಕಿತ್ತು. ಆಗ ನನಗೆ ವಿಧಾನಸೌಧಕ್ಕೆ ಹೋಗಬೇಕಾಗಿ ಬಂತು. ಇದನ್ನೂ ಓದಿ: ದಶಪಥದಲ್ಲಿ ಬೈಕ್‌ಗಳ ಓಡಾಟಕ್ಕೆ ಅನುಮತಿ ಇಲ್ಲ- ಪ್ರತಾಪ್ ಸಿಂಹ
ಸಂಜೆ 6 ಗಂಟೆಯಾಗಿ ಕತ್ತಲಾಗಿದ್ದರಿಂದ ನಾನು ವಾಪಸ್ ಬಂದೆ. ಆಗ ಪೊಲೀಸರು ಉದ್ಧೇಶಪೂರ್ವಕವಾಗಿ ನನ್ನನ್ನು ತಪಾಸಣೆ ಮಾಡಿದಾಗ ಹಣ ಸಿಕ್ಕಿದೆ. ಕಾರು ತೆಗೆದುಕೊಂಡು ಹೋಗಿದ್ದರೆ ಅದರಲ್ಲಿಯೇ ಇಡುತ್ತಿದ್ದೆ. ಆದರೆ ಹಣದ ರಕ್ಷಣೆಗಾಗಿ ಕೈಯಲ್ಲೇ ಇಟ್ಟುಕೊಂಡಿದ್ದೆ. ಕೆಲವರು ಇದರ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಇದು ನನ್ನು ಸ್ವಂತ ಹಣ ಆಗಿರುವುದರಿಂದ ಇದರಲ್ಲಿ ಅರೆಸ್ಟ್ ಏನು ಬರುವುದಿಲ್ಲ. ತಕ್ಷಣವೇ ನನ್ನನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಮಾಧ್ಯಮದಲ್ಲಿಯೂ ಸಹ ಸಿಕ್ಕಾಪಟ್ಟೆ ಪ್ರಚಾರ ಆಗಿದೆ. ಆ ಹಣವನ್ನು ನಾನು ವಾಪಸ್ ಮಂಡ್ಯಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ರಾಜಕೀಯ ಅದು ಇದು ಆರೋಪ ಕೇಳಿ ಬಂತು. ಹೀಗಾಗಿ ನನಗೂ ಸಹ ತುಂಬಾ ನೋವಾಗಿದೆ. ಎಲ್ಲಾ ದಾಖಲಾತಿಗಳನ್ನು ನಾನು ಮರು ದಿನವೇ ಕೊಟ್ಟಿದ್ದೇನೆ. ಮೂರನೇ ಮಹಡಿಯಲ್ಲಿ ನಮ್ಮ ಆಫೀಸ್ ಬಿಲ್ಡಿಂಗ್ ಇದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
Live Tv
[brid partner=56869869 player=32851 video=960834 autoplay=true]