Tag: ಜಗದಾಂಬಿಕಾ ಪಾಲ್

  • ವಕ್ಫ್‌ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ

    ವಕ್ಫ್‌ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ

    ನವದೆಹಲಿ: ಜಂಟಿ ಸಂಸದೀಯ ಸಮಿತಿ ನೀಡಿದ ವರದಿ ಮೇರೆಗೆ ವಕ್ಫ್ (ತಿದ್ದುಪಡಿ) ಮಸೂದೆಗೆ (Waqf Amendment Bill) ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದೆ.

    ಫೆ.13ರಂದು ಸಂಸತ್ತಿನಲ್ಲಿ ಮಂಡಿಸಲಾದ ಜಂಟಿ ಸಂಸದೀಯ ಸಮಿತಿ (JPC) ವರದಿ ಆಧರಿಸಿ ಫೆ.19ರ ಸಭೆಯಲ್ಲಿ ಸಂಪುಟ ತಿದ್ದುಪಡಿಗಳನ್ನು ಅಂಗೀಕರಿಸಿದ ಬಳಿಕ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶ್ರೀಶೈಲಂ ಸುರಂಗ ಕುಸಿತ – 5ನೇ ದಿನವೂ ರಕ್ಷಣಾ ಕಾರ್ಯ, 10,000 ಘನ ಮೀಟ‌ರ್ ಕೆಸರು ತೆಗೆಯುವುದೇ ಸವಾಲು!

    ಸಂಸತ್ತಿನಲ್ಲಿ 2025ರ ಬಜೆಟ್ ಅಧಿವೇಶನದ (2025 Budget Session) ಮೊದಲಾರ್ಧದಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆ ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಈ ವೇಳೆ ವಿಕ್ಷಗಳು ಗದ್ದಲದಿಂದಾಗಿ ಸ್ವಲ್ಪ ಸಮಯದ ವರೆಗೆ ಕಲಾಪವನ್ನು ಮುಂದೂಡಲಾಯಿತು. ಅಲ್ಲದೇ ವಿಪಕ್ಷ ಸಂಸದರು ತಮ್ಮ ಭಿನ್ನಾಭಿಪ್ರಾಯವನ್ನು ಜೆಪಿಸಿ ವರದಿಯಲ್ಲಿ ತಿರುಚಲಾಗಿದೆ ಎಂದು ದೂರಿದರು. ಆದ್ರೆ ಕೇಂದ್ರವು ಈ ಆರೋಪವನ್ನು ನಿರಾಕರಿಸಿತು.

    ಕಳೆದ ವಾರವಷ್ಟೇ ಮಸೂದೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಈ ಮೂಲಕ ಮಾರ್ಚ್ 10 ರಂದು ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ವಕ್ಫ್ ಆಸ್ತಿಗಳ ನೋಂದಣಿಯನ್ನು ಸುಗಮಗೊಳಿಸುವ ಗುರಿ ಹೊಂದಿತ್ತು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಂಡ್ಯ | KSRTC ಬಸ್ ಚಕ್ರಕ್ಕೆ ತಲೆಕೊಟ್ಟು ಯುವಕ ಆತ್ಮಹತ್ಯೆ

    ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ (Jagdambika Pal) ನೇತೃತ್ವದ ಜೆಪಿಸಿ, ಪ್ರತಿಪಕ್ಷಗಳ ಭಿನ್ನಾಭಿಪ್ರಾಯದ ನಡುವೆ ಶಾಸನಕ್ಕೆ ಹಲವು ತಿದ್ದುಪಡಿಗಳನ್ನು ಸೂಚಿಸಿದೆ. ಕಳೆದ ಜನವರಿಯಲ್ಲಿ ಜೆಪಿಸಿ ಸಭೆಯಲ್ಲಿ ವಿಪಕ್ಷ ಸಂಸದರು ಸೇರಿ ಇತರರು 44 ತಿದ್ದುಪಡಿಗಳಿಗೆ ಸೂಚಿಸಿದ್ರು. ಈ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳನ್ನು ಮಾತ್ರವೇ ಜಂಟಿ ಸಂಸದೀಯ ಸಮಿತಿ ಅಂಗೀಕರಿಸಿತು. ಇದನ್ನೂ ಓದಿ: ರಾಜ್ಯದಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ಏರಿಕೆ – ಇಂದು ಕರಾವಳಿಗೆ ಬಿಸಿಗಾಳಿ ಎಚ್ಚರಿಕೆ

  • ವಕ್ಫ್ ವಿವಾದ; ಹುಬ್ಬಳ್ಳಿಗೆ ವಕ್ಫ್ ಜಂಟಿ ಸಂಸದೀಯ ಮಂಡಳಿ ಅಧ್ಯಕ್ಷ ಭೇಟಿ – ರೈತರಿಂದ ಅಹವಾಲು ಸ್ವೀಕಾರ

    ವಕ್ಫ್ ವಿವಾದ; ಹುಬ್ಬಳ್ಳಿಗೆ ವಕ್ಫ್ ಜಂಟಿ ಸಂಸದೀಯ ಮಂಡಳಿ ಅಧ್ಯಕ್ಷ ಭೇಟಿ – ರೈತರಿಂದ ಅಹವಾಲು ಸ್ವೀಕಾರ

    ಹುಬ್ಬಳ್ಳಿ: ವಕ್ಫ್ ಬೋರ್ಡ್ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ಸಂಸದೀಯ ಜಂಟಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಹುಬ್ಬಳ್ಳಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.

    ಹುಬ್ಬಳ್ಳಿಗೆ ಆಗಮಿಸಿದ ಪಾಲ್ ನೇತೃತ್ವದ ಸಮಿತಿಗೆ ಶಾಸಕ ಮಹೇಶ್ ಟೆಂಗಿನಕಾಯಿ ಸ್ವಾಗತ ಕೋರಿದರು. ವಿವಾದದ ಕುರಿತು ಮಾತನಾಡಿದ ಜಗದಾಂಬಿಕಾ ಪಾಲ್, ವಕ್ಫ್ ಬೋರ್ಡ್ ಆಸ್ತಿ ಕಬಳಿಸುವ ಆರೋಪ ಕೇಳಿಬಂದಿದೆ. ಕರ್ನಾಟಕ ಜನರ ಸಮಸ್ಯೆಗಳ ಆಲಿಸಲು ಬಂದಿದ್ದೇನೆ. ಇದರ ವಿಸ್ತೃತ ವರದಿ ಸಿದ್ಧಪಡಿಸಿ ಸ್ವೀಕಾರಕ್ಕೆ ನೀಡಲಾಗುವುದು. ಕರ್ನಾಟಕದ ರೈತರು, ಜನಸಾಮಾನ್ಯರ ಆಸ್ತಿಗಳನ್ನು ಕಬಳಿಕೆ ಮಾಡಿದ್ದಾರೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಸುಮಾರು 50 ರಿಂದ 60 ವರ್ಷಗಳಿಂದ ಉಳಿಮೆ ಮಾಡಿದ ಜಮೀನು. ದೇವಸ್ಥಾನಗಳ ಕಬಳಿಸಲಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ಹುಬ್ಬಳ್ಳಿ, ವಿಜಯಪುರ, ಬೀದರ್ ರೈತರ ಹಾಗೂ ಜನರ ಅಹವಾಲು ಸ್ವೀಕರಿಸುತ್ತೇನೆ. ಸದ್ಯ ಹುಬ್ಬಳ್ಳಿಯಲ್ಲಿ ಅದ್ವೈತ್ ಪರಿಷತ್ ಉತ್ತರ ಕರ್ನಾಟಕ ಹಾಗೂ ರತ್ನ ಭಾರತ ರೈತ ಸಮಾಜದವರು ಮನವಿ ಸಲ್ಲಿಸಿದ್ದಾರೆ. ಇದನ್ನು ಸಹ ಪರಿಗಣಿಸಲಾಗುವುದು ಎಂದು ಪಾಲ್ ತಿಳಿಸಿದರು.

    ವಕ್ಫ್ ಜಂಟಿ ಸಂಸದೀಯ ಸಮಿತಿಯಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಸಲಾಯಿತು. ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆ ವೇಳೆ ರೈತರಿಂದ ಮನವಿ ಸ್ವೀಕರಿಸಲಾಯಿತು. ಸಂಸದ ತೇಜಸ್ವಿ ಸೂರ್ಯ, ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್, ಗೋವಿಂದ ಕಾರಜೋಳ, ಶಾಸಕ ಮಹೇಶ್ ಟೆಂಗಿನಕಾಯಿ, ಛಲವಾದಿ ನಾರಾಯಣಸ್ವಾಮಿ ಸಾಥ್ ನೀಡಿದರು. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲಾ ರೈತರ ಮುಖಂಡರು, ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.

    ಸತ್ಯ ಶೋಧನಾ ಸಮಿತಿಯಿಂದ ಜಂಟಿ ಸಂಸದೀಯ ಕಮಿಟಿಗೆ ವರದಿ ಸಲ್ಲಿಕೆ ಮಾಡಲಾಯಿತು. ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆದಿದ್ದ ವಕ್ಫ್ ಬೋರ್ಡ್ ಆಸ್ತಿ ನೋಟಿಸ್ ತನಿಖೆ. ವಿಜಯಪುರ ಜಿಲ್ಲೆಯ ಸೇರಿದಂತೆ ವಿವಿಧ ಕಡೆ ತೆರಳಿ ವರದಿ ಸಲ್ಲಿಸಿರುವ ಬಿಜೆಪಿ ಸತ್ಯ ಶೋಧನಾ ಸಮಿತಿಯ ಪದಾಧಿಕಾರಿಗಳು ಭಾಗಿಯಾಗಿದ್ದರು.

  • ನ.7 ರಂದು ಕರ್ನಾಟಕಕ್ಕೆ ವಕ್ಫ್‌ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಭೇಟಿ

    ನ.7 ರಂದು ಕರ್ನಾಟಕಕ್ಕೆ ವಕ್ಫ್‌ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಭೇಟಿ

    ನವದೆಹಲಿ: ವಕ್ಫ್‌ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕ ಪಾಲ್‌ (Jagdambika Pal) ಅವರು ನ.7 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.

    ಕರ್ನಾಟಕದಲ್ಲಿ ವಕ್ಫ್‌ ವಿವಾದ ಜೋರಾಗಿದೆ. ಇದರ ಬೆನ್ನಲ್ಲೇ ಜಗದಾಂಬಿಕ ಪಾಲ್‌ ಅವರು ಹುಬ್ಬಳ್ಳಿ ಭೇಟಿ ನೀಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಪತ್ರ ಬರೆದಿದ್ದರು. ರೈತರ ಅಹವಾಲು ಆಲಿಸಲು, ರೈತರನ್ನು ವಕ್ಫ್ ನಿಯಮಗಳ ತಿದ್ದುಪಡಿಗೆ ಸಾಕ್ಷ್ಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

    ಅಂದು ವಕ್ಫ್ ಬೋರ್ಡ್‌ನಿಂದ ಸಮಸ್ಯೆಗೆ ಒಳಗಾದ ರೈತರು, ಮಠ, ದೇವಸ್ಥಾನಗಳ ಪ್ರಮುಖರ ಜೊತೆ ಜೆಪಿಸಿ ಅಧ್ಯಕ್ಷ ಪಾಲ್ ಅವರು ಸಭೆ ನಡೆಸಿದ್ದರು.

    ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ವಿಜಯಪುರ ರೈತರಿಗೆ ವಕ್ಫ್‌ ಬೋರ್ಡ್‌ ನೋಟಿಸ್‌ ನೀಡಿದಾಗಿನಿಂದ ರಾಜ್ಯದಲ್ಲಿ ವಿವಾದ ಹುಟ್ಟುಕೊಂಡಿದೆ. ಇದೇ ರೀತಿ ಕರ್ನಾಟಕದ ಕೆಲವು ಭಾಗಗಳಲ್ಲಿ ಜಾಗ ತಮ್ಮದೆಂದು ವಕ್ಫ್‌ ಬೋರ್ಡ್‌ ನೋಟಿಸ್‌ ಹೊರಡಿಸಿದೆ. ಇದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.

    ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್‌ ಸರ್ಕಾರ ವಕ್ಫ್‌ ಬೋರ್ಡ್‌ ಹೊರಡಿಸಿದ್ದ ನೋಟಿಸ್‌ ಹಿಂಪಡೆಯಲು ನಿರ್ಧರಿಸಿದೆ.

  • ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ದೆಹಲಿ ವಕ್ಫ್ ಬೋರ್ಡ್‌ನಿಂದ ವರದಿ – ಜೆಪಿಸಿ ಅಧ್ಯಕ್ಷರಿಗೆ ಸಿಎಂ ಅತಿಶಿ ಪತ್ರ

    ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ದೆಹಲಿ ವಕ್ಫ್ ಬೋರ್ಡ್‌ನಿಂದ ವರದಿ – ಜೆಪಿಸಿ ಅಧ್ಯಕ್ಷರಿಗೆ ಸಿಎಂ ಅತಿಶಿ ಪತ್ರ

    – ವಿಪಕ್ಷಗಳಿಂದ ಸಭೆ ಬಹಿಷ್ಕಾರ

    ನವದೆಹಲಿ: ದೆಹಲಿ ಸರ್ಕಾರದ ಅನುಮತಿ ಪಡೆಯದೇ ವರದಿ ಸಲ್ಲಿಸಿರುವ ಹಿನ್ನೆಲೆ ದೆಹಲಿ ವಕ್ಫ್ ಬೋರ್ಡ್ ಸಲ್ಲಿಸಿದ ವರದಿಯನ್ನು ‘ಶೂನ್ಯ ಮತ್ತು ಅನೂರ್ಜಿತ’ ಎಂದು ಪರಿಗಣಿಸಬೇಕು ಎಂಬುದಾಗಿ ಮುಖ್ಯಮಂತ್ರಿ ಅತಿಶಿ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

    ದೆಹಲಿ ವಕ್ಫ್ ಮಂಡಳಿಯ ನಿರ್ವಾಹಕರು ಐಎಎಸ್ ಅಶ್ವಿನಿ ಕುಮಾರ್ ಅವರು ದೆಹಲಿಯ ಸರ್ಕಾರದ ಅನುಮೋದನೆಯಿಲ್ಲದೆ ವರದಿಯನ್ನು ಸಲ್ಲಿಸಿದ್ದಾರೆ. ಹೀಗಾಗಿ ಆ ವರದಿಯನ್ನು ಅನೂರ್ಜಿತ ಎಂದು ಪರಿಗಣಿಸಬಹುದು. ಅದರ ಬಗ್ಗೆ ಯಾವುದೇ ಪ್ರಸ್ತುತಿಯನ್ನು ಪರಿಗಣಿಸಬಾರದು ಎಂದು ಪತ್ರದಲ್ಲಿ ಅತಿಶಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:  ದೀಪಾವಳಿಗೂ ಮುನ್ನವೇ ಗ್ಯಾಸ್ ಚೇಂಬರಾಗುವ ಭೀತಿಯಲ್ಲಿ ದೆಹಲಿ

    ಈ ನಡುವೆ ದೆಹಲಿ ವಕ್ಫ್ ಮಂಡಳಿಯ ವರದಿಯನ್ನು ವಿರೋಧಿಸಿ ಹಲವು ವಿರೋಧ ಪಕ್ಷದ ನಾಯಕರು ಇಂದು ಜೆಪಿಸಿ ಸಭೆಯಿಂದ ಹೊರನಡೆದರು. ಎಎಪಿ ಸದಸ್ಯ ಸಂಜಯ್ ಸಿಂಗ್, ಡಿಎಂಕೆಯ ಮೊಹಮ್ಮದ್ ಅಬ್ದುಲ್ಲಾ, ಕಾಂಗ್ರೆಸ್‌ನ ನಾಸೀರ್ ಹುಸೇನ್ ಮತ್ತು ಮೊಹಮ್ಮದ್ ಜಾವೇದ್ ಸೇರಿದಂತೆ ಇತರರು ಸಭೆಯಿಂದ ಹೊರನಡೆದರು. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದ ಮೂವರು ಉಗ್ರರನ್ನು ಬೇಟೆಯಾಡಿದ ಸೇನೆ

    ಎಂಸಿಡಿ ಕಮಿಷನರ್ ಮತ್ತು ದೆಹಲಿ ವಕ್ಫ್ ಬೋರ್ಡ್ ನಿರ್ವಾಹಕರು ಮುಖ್ಯಮಂತ್ರಿಯವರ ಒಪ್ಪಿಗೆಯನ್ನು ತೆಗೆದುಕೊಳ್ಳದೆ ಪ್ರಾಥಮಿಕ ವರದಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ ಎಂದು ಅವರು ಆರೋಪಿಸಿದರು. ಇದನ್ನೂ ಓದಿ: MUDA SCAM| ಇಡಿ ದಾಳಿ ಬೆನ್ನಲ್ಲೇ ವಾಕಿಂಗ್‌ ಮಾಡುತ್ತಿದ್ದ ಮುಡಾ ಮಾಜಿ ಆಯುಕ್ತ ಪರಾರಿ

    ಆ.8ರಂದು ಕೇಂದ್ರ ಸರ್ಕಾರವು ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಲೋಕಸಭೆಯಲ್ಲಿ ಮಂಡಿಸಿತು, ಕಾನೂನು ವಕ್ಫ್ ಮಂಡಳಿಯ ಕೆಲಸವನ್ನು ಸುಗಮಗೊಳಿಸಲು ಮತ್ತು ವಕ್ಫ್ ಆಸ್ತಿಗಳ ಸಮರ್ಥ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿದೆ ಎಂದು ಹೇಳಿತ್ತು. ಇದನ್ನೂ ಓದಿ: ಸಂಸದ ಪಪ್ಪು ಯಾದವ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ

    ಮಸೂದೆಯು ಸಮುದಾಯದ ವಿರುದ್ಧ ಉದ್ದೇಶಿತ ಕ್ರಮವಾಗಿದೆ ಮತ್ತು ಅದರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳು ಕಳವಳ ವ್ಯಕ್ತಪಡಿಸಿದ ನಂತರ ಅದನ್ನು ತಕ್ಷಣವೇ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಯಿತು. ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರದಿಂದ ಲ್ಯಾಂಡ್‌ ಜಿಹಾದ್‌, ಜಮೀರ್ ಒಬ್ಬ ಆಧುನಿಕ ಟಿಪ್ಪು ಸುಲ್ತಾನ್: ಆರ್.ಅಶೋಕ್