Tag: ಜಕಾರ್ತ್

  • ತೈಲ ದಾಸ್ತಾನು ಕೇಂದ್ರದಲ್ಲಿ ಬೆಂಕಿ ಅವಘಡ – 19 ಮಂದಿ ಸಾವು

    ತೈಲ ದಾಸ್ತಾನು ಕೇಂದ್ರದಲ್ಲಿ ಬೆಂಕಿ ಅವಘಡ – 19 ಮಂದಿ ಸಾವು

    ಜಕಾರ್ತ: ತೈಲ ದಾಸ್ತಾನು ಕೇಂದ್ರದಲ್ಲಿ (Fuel Depot) ಸಂಭವಿಸಿದ ಬೆಂಕಿ (Fire) ಅವಘಡದಲ್ಲಿ ಕನಿಷ್ಠ 19 ಮಂದಿ ಮೃತಪಟ್ಟ ಘಟನೆ ಇಂಡೋನೇಷ್ಯಾ (Indonesia) ರಾಜಧಾನಿ ಜಕಾರ್ತದಲ್ಲಿ ನಡೆದಿದೆ.

    ತನ್ಹಾ ಮೆರಹ್ ಪ್ರದೇಶದ ಪ್ಲುಮ್‍ಪಾಂಗ್ ತೈಲ ಸಂಗ್ರಹ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಸುಟ್ಟ ಮನೆಗಳು ಹಾಗೂ ಕಟ್ಟಡಗಳ ಅವಶೇಷಗಳಡಿಯಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

    ದೇಶದ ಶೇ. 25ರಷ್ಟು ಇಂಧನ ಅಗತ್ಯವನ್ನು ಇದೇ ಕೇಂದ್ರ ಪೂರೈಸುತ್ತಿತ್ತು. ಘಟನೆ ವೇಳೆ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಕನಿಷ್ಠ 260 ಅಗ್ನಿಶಾಮಕ ಸಿಬ್ಬಂದಿ ಹಾಗೂ 52 ಅಗ್ನಿಶಾಮಕ ಇಂಜಿನ್‍ಗಳಿದ್ದವು. ಇದನ್ನೂ ಓದಿ: ಅಶೋಕ್‌ ಜೊತೆ ಇರುವವರೆಲ್ಲ ಕುಂಟ್ಕೊಂಡೆ ಓಡಾಡುತ್ತಾರೆ: ಡಿ.ಕೆ.ಸುರೇಶ್

    ಪಶ್ಚಿಮ ಜಾವಾ ಪ್ರಾಂತ್ಯದ ಪೆರ್ಟಮಿನಾದ ಬಲೋಂಗನ್ ರಿಫೈನರಿಯಿಂದ ಡಿಪೋ ಇಂಧನವನ್ನು ಪಡೆದಿದ್ದರು. ಇದರಿಂದಾಗಿ ಹೆಚ್ಚಿನ ಒತ್ತಡವಾಗಿ ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಲಮಿಶ್ರಿತ ನೀರು ಸೇವಿಸಿ ಮೂವರ ಸಾವು; 21 ದಿನ ಕಳೆದ್ರೂ ತಪ್ಪಿತಸ್ಥರ‌ ಮೇಲೆ ಇಲ್ಲ ಕ್ರಮ

  • ಚಂಡಮಾರುತದ ಹೊಡೆತಕ್ಕೆ ಪ್ರಯಾಣಿಕರ ಹಡಗು ಮುಳುಗಿ 31 ಸಾವು!

    ಚಂಡಮಾರುತದ ಹೊಡೆತಕ್ಕೆ ಪ್ರಯಾಣಿಕರ ಹಡಗು ಮುಳುಗಿ 31 ಸಾವು!

    ಜಕಾರ್ತ: ಚಂಡಮಾರತದ ಸಿಕ್ಕಿ ಪ್ರಯಾಣಿಕ ಹಡಗೊಂದು ಮುಳುಗಿ 31 ಜನ ಮಂದಿ ಸಾವಿಗೀಡಾದ ಧಾರುಣ ಘಟನೆ ಇಂಡೊನೇಷ್ಯಾದ ಸುಲಾವೆಸಿ ದ್ವೀಪದ ಬಳಿ ಸಂಭವಿಸಿದೆ.

    ಮಂಗಳವಾರ ಮಧ್ಯಾಹ್ನ ಪ್ರಯಾಣಿಕ ಹಡಗೊಂದು ಇಂಡೊನೇಷ್ಯಾದ ಬೀರಾ ಬಂದರಿನಿಂದ ಸೆಲಾಯಾರ್ ದ್ವೀಪಕ್ಕೆ ಸಂಚಾರ ಬೆಳೆಸಿತ್ತು. ಈ ವೇಳೆ ಸಮುದ್ರದಲ್ಲಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ 31 ಪ್ರಯಾಣಿಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಹಡಗಿನಲ್ಲಿ ಸಿಬ್ಬಂದಿಯೂ ಸೇರಿದಂತೆ ಒಟ್ಟು 164 ಮಂದಿ ಪ್ರಯಾಣ ಬೆಳೆಸುತ್ತಿದ್ದರು. ಅಲ್ಲದೇ ಹಡಗಿನಲ್ಲಿ 48 ವಾಹನಗಳನ್ನು ಸಾಗಿಸಲಾಗುತ್ತಿತ್ತು ಎಂದು ಇಂಡೊನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಪಡೆ ಅಧಿಕಾರಿಯಾದ ಅಮೀರುದ್ದೀನ್ ತಿಳಿಸಿದ್ದಾರೆ.

    ಹಡುಗು ಚಂಡಮಾರುತದ ದಾಳಿಗೆ ಸಿಲುಕುತ್ತಿದ್ದಂತೆ ಎಚ್ಚೆತ್ತುಕೊಂಡ ನಾವಿಕ ಹಡಗನ್ನು ಹತ್ತಿರದಲ್ಲಿದ್ದ ದಿಬ್ಬದ ಕಡೆ ಮುನ್ನಡೆಸಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅನುಕೂಲವಾಗಿದೆ. ನಾವಿಕನ ಸಮಯಪ್ರಜ್ಞೆಯಿಂದಾಗಿ ಆಗಬಹುದಾಗಿದ್ದ ಅತಿದೊಡ್ಡ ದುರಂತ ತಪ್ಪಿದೆ ಎಂದು ಅವರು ತಿಳಿಸಿದ್ದಾರೆ.

    ಇಂದು ಹಡಗಿನಲ್ಲಿದ್ದ 130 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರು ಹಡಗಿನಲ್ಲೇ ಸಿಲುಕಿದ್ದಾರೆಂದು ತಿಳಿದು ಬಂದಿದೆ. ನಾವಿಕನ ಸಮಯಪ್ರಜ್ಞೆಯಿಂದ ನೂರಾರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೇಂದ್ರ ಸಮುದ್ರಯಾನ ಸಾರಿಗೆ ಸಚಿವಾಲಯದ ಅಧಿಕಾರಿಯಾದ ಆಗಸ್ ಪುರ್ನೊಮೊ ತಿಳಿಸಿದ್ದಾರೆ.

    ಪ್ರತಿಕೂಲ ಹವಾಮಾನ ನಡುವೆಯೂ ಪ್ರಯಾಣ ಆರಂಭಿಸಿದ್ದಲ್ಲದೇ ನಿಗದಿಗಿಂತ ಹೆಚ್ಚಿನ ಭಾರವನ್ನು ಹಡಗು ಹೊಂದಿದ್ದರಿಂದ ಚಂಡಮಾರುತದ ಹೊಡೆತಕ್ಕೆ ಸಿಕ್ಕಿ ಈ ಅವಘಡ ಸಂಭವಿಸಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ.