Tag: ಜಕಾರ್ತಾ

  • ರೈಸ್ ಕುಕ್ಕರನ್ನೇ ಮದುವೆಯಾದ ಆಸಾಮಿ

    ರೈಸ್ ಕುಕ್ಕರನ್ನೇ ಮದುವೆಯಾದ ಆಸಾಮಿ

    ಜಕಾರ್ತಾ: ಹುಡುಗ, ಹುಡುಗಿ ಮದುವೆಯಾಗುವುದರಲ್ಲಿ ವಿಶೇಷತೆ ಏನು ಇಲ್ಲ. ಆದರೆ ಮದುವೆ ವಿಭಿನ್ನವಾಗಿ ನೀರಿನಲ್ಲೋ, ವಿಮಾನದಲ್ಲೋ ಆಗಿ ಸುದ್ದಿಯಾಗಿರುವ ಅನೇಕ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಆಸಾಮಿ ಅಡುಗೆ ಮಾಡುವ ಕುಕ್ಕರನ್ನೇ ಮದುವೆಯಾಗಿದ್ದಾನೆ.

    ಖೋಯಿರುಲ್ ಅನಾಮ್ ನನಗೆ ಮದುವೆಯಾಗಲು ಹೆಣ್ಣು ಬೇಡ ಎಂದು ಅನ್ನ ಮಾಡಲು ಬಳಸುವ ಕುಕ್ಕರೇ ನನ್ನ ಮಡದಿ ಎಂದು ನಿರ್ಧರಿಸಿ ಕುಕ್ಕರನ್ನು ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೇ ನಾಲ್ಕು ದಿನಗಳ ನಂತರ ಡಿವೋರ್ಸ್ ಮಾಡಿಕೊಂಡಿದ್ದಾನೆ.

    ಇಂಡೋನೇಷ್ಯಾದ ಖೋಯಿರುಲ್ ಅನಾಮ್ ರೈಸ್ ಕುಕ್ಕರ್ ಜೊತೆಗೆ ಮದುವೆ ಮಾಡಿಕೊಂಡಿದ್ದು, ಮಾತ್ರವಲ್ಲದೇ ನಾಲ್ಕು ದಿನಗಳ ನಂತರ ಡಿವೋರ್ಸ್ ಮಾಡಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ನೀನಿಲ್ಲದೇ ನನ್ನ ನನ್ನ ಅನ್ನ ಪೂರ್ಣ ಆಗೋದಿಲ್ಲ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ. ಇದನ್ನೂ ಓದಿ:  ಕಬ್ಬಿನ ಬಿಲ್ ಪಾವತಿ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು: ಮುನೇನಕೊಪ್ಪ

    ತಾನು ವರನ ಉಡುಪಿನಲ್ಲಿ ಮಿಂಚಿದ್ದಲ್ಲದೇ ರೈಸ್ ಕುಕ್ಕರ್‍ಗೂ ವೇಲ್ ಹಾಕಿ ವಧುವಂತೆ ಭಾವಿಸಿ ಕುಕ್ಕರ್‍ಗೆ ಮುತ್ತಿಟ್ಟಿದ್ದಾನೆ. ಸದ್ಯ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

  • ಪ್ರವಾಹದಿಂದ ಕೆಂಪು ಬಣ್ಣಕ್ಕೆ ತಿರುಗಿದ ನೀರು – ವೈರಲ್ ಫೋಟೋ

    ಪ್ರವಾಹದಿಂದ ಕೆಂಪು ಬಣ್ಣಕ್ಕೆ ತಿರುಗಿದ ನೀರು – ವೈರಲ್ ಫೋಟೋ

    ಜಕಾರ್ತಾ: ನಿನ್ನೆ ಆಗಿರುವ ಪ್ರವಾಹದ ನಂತರ ಇಂಡೋನೇಷ್ಯಾ ರಸ್ತೆಗಳಲ್ಲಿ ಕೆಂಪು ಬಣ್ಣದ ನೀರು ಹರಿದು ಬರುತ್ತಿರುವ ವಿಚಿತ್ರ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ.

    ಸೆಂಟ್ರಲ್ ಜಾವಾದ ಪೆಕಲಂಗಾನ್ ಸಮೀಪದ ಜೆನ್‍ಗಾಟ್ ಎಂಬ ಗ್ರಾಮದಲ್ಲಿ ಪ್ರವಾಹ ಅಪ್ಪಳಿಸಿದೆ. ಇಲ್ಲಿನ ಬಟೀಕ್ ಫ್ಯಾಕ್ಟರಿಯ ಡೈನೊಂದಿಗೆ ಬೆರೆತ ಪ್ರವಾಹದ ನೀರು ಕಡುಕೆಂಪು ಬಣ್ಣಕ್ಕೆ ತಿರುಗಿದೆ. ರಸ್ತೆಗಳ ಮೇಲೆ ಹರಿದು ಬಂದಿರುವ ನೀರು ರಕ್ತದಂತೆ ಭಾಸವಾಗಿದೆ. ಸಾವಿರಾರು ಮಂದಿ ಈ ಫೊಟೋ ಮತ್ತು ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಈ ನಗರದ ಸುತ್ತಮುತ್ತಲಿನ ನದಿಗಳು ಬೇರೆ ಬೇರೆ ಬಣ್ಣಗಳಿಗೆ ತಿರುಗುವುದು ಹೊಸ ವಿಚಾರವಲ್ಲ. ಕಳೆದ ತಿಂಗಳು ಉಂಟಾದ ಪ್ರವಾಹದಿಂದ ನದಿಯೊಂದು ಹಸಿರು ಬಣ್ಣಕ್ಕೆ ತಿರುಗಿತ್ತು. ಹೀಗೆ ಕೆಂಪು ಬಣ್ಣದ ನೀರು ರಕ್ತದಂತೆ ಕಾಣುತ್ತಿದೆ. ಈ ಫೋಟೋವನ್ನು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರಾ..? ಎಂದೆಲ್ಲಾ ಸಾಮಾಜಿಕಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

  • ಇಂಡೋನೇಷ್ಯಾದಲ್ಲಿ ಭೂಕಂಪ – ಮೂವರು ಸಾವು

    ಇಂಡೋನೇಷ್ಯಾದಲ್ಲಿ ಭೂಕಂಪ – ಮೂವರು ಸಾವು

    ಜಕಾರ್ತಾ: ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮೂವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

    ಭೂಕಂಪದಲ್ಲಿ ಖಾಸಗಿ ಆಸ್ಪತ್ರೆಯ ಬಿಲ್ಡಿಂಗ್ ಕುಸಿದಿದ್ದು, ಘಟನೆಯಲ್ಲಿ ಸುಮಾರು 12ಕ್ಕೂ ಹೆಚ್ಚು ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಭೂ ಕುಸಿತದಲ್ಲಿ ಸಿಲುಕಿದ್ದಾರೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಆಸ್ಪತ್ರೆಯು ಸಮತಟ್ಟಾಗಿರುವ ಕಾರಣ ಕಟ್ಟಡ ಕುಸಿದಿದೆ ಎಂದು ಮಾಮುಜು ನಗರದ ಪಾರುಗಾಣಿಕಾ ಸಂಸ್ಥೆಯ ಅರಿಯಾಂಟೋ ತಿಳಿಸಿದ್ದಾರೆ. ಭೂಕಂಪದಿಂದ ಕಟ್ಟಡದ ಅವಶೇಷಗಳಡಿ ಸಿಲುಕಿರುವ ರೋಗಿಗಳನ್ನು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.

  • ಕೊರೊನಾ ಹೆಂಡ್ತಿ ಇದ್ದಂತೆ, ಕಂಟ್ರೋಲ್ ಮಾಡೋದು ಕಷ್ಟ: ಸಚಿವ

    ಕೊರೊನಾ ಹೆಂಡ್ತಿ ಇದ್ದಂತೆ, ಕಂಟ್ರೋಲ್ ಮಾಡೋದು ಕಷ್ಟ: ಸಚಿವ

    – ನಿಯಂತ್ರಿಸಲು ಆಗದಿದ್ದಾಗ ಜೊತೆಯೇ ಬದುಕುತ್ತೀರಿ
    – ನೆಟ್ಟಿಗರಿಂದ ಸಚಿವರ ತರಾಟೆ

    ಜಕಾರ್ತಾ: ಇಡೀ ವಿಶ್ವವೇ ಕೊರೊನಾ ವೈರಸ್‍ಗೆ ಬೆಚ್ಚಿಬಿದ್ದಿದೆ. ಆದರೆ ಈ ನಡುವೆ ಇಂಡೋನೇಷ್ಯಾದ ರಕ್ಷಣಾ ಸಚಿವರು ಕೊರೊನಾ ವೈರಸ್ ಅನ್ನು ಪತ್ನಿಗೆ ಹೋಲಿಕೆ ಮಾಡಿ ಹೇಳಿಕೆಯೊಂದನ್ನು ನೀಡಿದ್ದಾರೆ. ಇದೀಗ ಇವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಂಡೋನೇಷ್ಯಾದ ಸಚಿವ ಮೊಹಮ್ಮದ್ ಮಹಫೂದ್ ಎಂ.ಡಿ ಕೊರೊನಾ ವೈರಸ್ ಅನ್ನು ಪತ್ನಿಗೆ ಹೋಲಿಕೆ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಜಕಾರ್ತದ ಸ್ಥಳೀಯ ವಿಶ್ವವಿದ್ಯಾಲಯವೊಂದು ಆಯೋಜಿಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಎಡವಟ್ಟು ಹೇಳಿಕೆ ನೀಡಿದ್ದಾರೆ.

    ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಕೊರೊನಾ ವೈರಸ್ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಮೀಮ್‍ವೊಂದನ್ನು ಪ್ರಸ್ತಾಪಿಸಿದ್ದರು. ಇದೀಗ ಆ ಮೀಮ್ ಟೀಕೆಗೆ ಕಾರಣವಾಗಿದೆ.

    ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡುವ ವೇಳೆ ಕೊರೊನಾ ವೈರಸ್ ಕುರಿತಂತೆ ಮೊಹಮ್ಮದ್ ಮಹಫೂದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮೊದಲಿಗೆ ಕೊರೊನಾ ಸಂದರ್ಭದಲ್ಲಿ ನಾವು ನಮ್ಮ ಆರೋಗ್ಯದ ಕಡೆ ಗಮನ ಹರಿಸುತ್ತಲೇ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

    ಒಂದು ದಿನ ನನ್ನ ಸಹೋದ್ಯೋಗಿವೊಬ್ಬರು ಮೀಮ್‍ವೊಂದನ್ನು ಕಳುಹಿಸಿದ್ದರು. “ಕೊರೊನಾ ನಿಮ್ಮ ಹೆಂಡತಿ ಇದ್ದಂತೆ. ಆರಂಭದಲ್ಲಿ ನೀವು ಅದನ್ನು ನಿಯಂತ್ರಿಸಲು ಪ್ರಯತ್ನಿಸುತ್ತೀರಿ. ಆದರೆ ಅದನ್ನು ನಿಯಂತ್ರಿಸಲು ಸಾಧ್ಯವಾಗಲ್ಲ ಎಂದು ತಿಳಿದುಕೊಳ್ಳುತ್ತೀರಿ. ನಂತರ ಅದರ ಜೊತೆಯೇ ಬದುಕಲು ಕಲಿಯುತ್ತೀರಿ. ಅದೇ ರೀತಿ ಕೊರೊನಾ ವೈರಸ್ ಜೊತೆಗೂ ಬದುಕಬೇಕು ಎಂಬುದು ಮೀಮ್‍ನಲ್ಲಿತ್ತು” ಎಂದು ಹೇಳಿದ್ದರು.

    ಸಚಿವ ಮೊಹಮ್ಮದ್ ಮಹಫೂದ್ ಈ ಹೇಳಿಕೆಯು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರು ಸಚಿವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಆದರೆ ಇದುವರೆಗೂ ಮಹಫೂದ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

  • ವರ್ಷಕ್ಕೆ 7 ದಿನ ಪರ ಪುರುಷರ ಜೊತೆ ಮಲಗ್ತಾರೆ ವಿವಾಹಿತ ಮಹಿಳೆಯರು!

    ವರ್ಷಕ್ಕೆ 7 ದಿನ ಪರ ಪುರುಷರ ಜೊತೆ ಮಲಗ್ತಾರೆ ವಿವಾಹಿತ ಮಹಿಳೆಯರು!

    ಜಕಾರ್ತಾ: ವಿಶ್ವಾದ್ಯಂತ ಚಿತ್ರ-ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಕೆಲವೊಂದು ಪದ್ಧತಿಗಳ ಆಚರಣೆ ನೋಡಿದರೆ ಈ ರೀತಿಯೂ ಇರುತ್ತಾ ಎಂದು ನಿಮಗೆ ಅನಿಸದೇ ಇರಲಾರದು. ಇದೇ ರೀತಿ ಇಂಡೋನೇಷ್ಯಾದಲ್ಲಿ ವಿಚಿತ್ರ ಉತ್ಸವ ನಡೆಯುತ್ತೆ. ಇಲ್ಲಿ ವಿವಾಹಿತ ಮಹಿಳೆಯರು ಪರ ಪುರುಷರೊಟ್ಟಿಗೆ ಮಲಗುತ್ತಾರೆ.

    ಹೌದು. ಇದ್ಯಾವುದಪ್ಪ ವಿಚಿತ್ರ ಪದ್ಧತಿ ಎಂದು ಅಚ್ಚರಿಯಾಗಬಹುದು. ಆದರೆ ಇಂತಹದೊಂದು ಪದ್ಧತಿ 16 ನೇ ಶತಮಾನದಿಂದಲೂ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ದ್ವೀಪದಲ್ಲಿ ಇರುವ ವಿವಾಹಿತ ಮಹಿಳೆಯರು ವರ್ಷದಲ್ಲಿ 7 ದಿನ ಪರಪುರುಷನ ಜೊತೆ ಲೈಂಗಿಕ ಸಂಬಂಧ ಬೆಳೆಸುತ್ತಾರೆ.

    ಬಾಲಿ ದ್ವೀಪದಲ್ಲಿ ಪ್ರತಿ ವರ್ಷ ಉತ್ಸವವೊಂದು ನಡೆಯುತ್ತದೆ. ಇದಕ್ಕೆ ಪೋನ್ ಉತ್ಸವ ಎನ್ನುತ್ತಾರೆ. ದ್ವೀಪದ ಪರ್ವತಗಳ ಮೇಲೆ ನಡೆಯುವ ಈ ಉತ್ಸವ ಹಳೆ ಸಂಪ್ರದಾವಾಗಿದ್ದರೂ ಈಗಲೂ ಇಲ್ಲಿನ ಮಹಿಳೆಯರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಉತ್ಸವದಲ್ಲಿ ಮದುವೆಯಾದ ಮಹಿಳೆಯರು ಅಪರಿಚಿತ ಪುರುಷನ ಜೊತೆ ಸಂಬಂಧ ಬೆಳೆಸುತ್ತಾರೆ. ಆದರೆ ಮಹಿಳೆಯರ ಗಂಡಂದಿರು ಇದಕ್ಕೆ ಅಡ್ಡಿಪಡಿಸುವುದಿಲ್ಲ.

    16ನೇ ಶತಮಾನದಿಂದಲೂ ಈ ಪದ್ಧತಿ ರೂಢಿಯಲ್ಲಿದೆ. ಮಹಿಳೆ ಹಾಗೂ ಪರಪುರುಷನ ಜೀವನ ಈ ಪದ್ಧತಿ ಅನುಸರಿಸುವುದರಿಂದ ಸುಖಕರವಾಗಿರುತ್ತದೆ. ಕುಟುಂಬದ ಸುಖ-ಸಂತೋಷಕ್ಕೆ ಇದು ಕಾರಣವಾಗುತ್ತದೆ ಎಂದು ಇಲ್ಲಿನ ಜನರು ನಂಬಿದ್ದಾರೆ.

    16ನೇ ಶತಮಾನದಲ್ಲಿ ಇಲ್ಲಿದ್ದ ರಾಜನಿಗೆ ಮಲತಾಯಿಯ ಮೇಲೆ ಪ್ರೀತಿ ಹುಟ್ಟಿತ್ತಂತೆ. ಇಬ್ಬರೂ ಲೈಂಗಿಕ ಸಂಬಂಧ ಬೆಳೆಸಿದ್ದರು. ಬಂಧದಲ್ಲಿ ತಾಯಿ-ಮಗನಾಗಿದ್ದವರು ಸಂಬಂಧ ಬೆಳೆಸಿ ಪಾಪ ಮಾಡಿದ್ದಾರೆ ಎಂದು ಇಬ್ಬರನ್ನೂ ಹತ್ಯೆ ಮಾಡಲಾಗಿತ್ತು. ಆದರೆ ಅವರಿಬ್ಬರು ಅತೃಪ್ತ ಆತ್ಮಗಳಾಗಿದ್ದಾರೆ. ಹೀಗಾಗಿ ವಿವಾಹಿತ ಮಹಿಳೆ ಪರಪುರುಷನ ಜೊತೆ ಮಲಗುವುದು ಪಾಪವಾದರೂ ಕೂಡ ಹೀಗೆ ಮಾಡುವುದರಿಂದ ರಾಜ ಹಾಗೂ ಆತನ ಮಲತಾಯಿ ಆತ್ಮಕ್ಕೆ ಶಾಂತಿ ಸಿಗುತ್ತದೆ. ಆಗ ಅವರಿಬ್ಬರು ಆಶೀರ್ವಾದ ಮಾಡುತ್ತಾರೆ. ಇದರಿಂದ ದಾಂಪತ್ಯ ಜೀವನದಲ್ಲಿ ಸುಖ-ಸಂತೋಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಈಗಲೂ ಮಹಿಳೆಯರು ಅಪರಿಚಿತ ಪುರುಷನ ಜೊತೆ ಸಂಬಂಧ ಬೆಳೆಸುತ್ತಾರೆ.

  • ಬಾಯಿ ಬಿಡಿಸಲು ಕಳ್ಳನಿಗೆ ಹಾವು ಬಿಟ್ಟ ಪೊಲೀಸರು – ವಿಡಿಯೋ ವೈರಲ್

    ಬಾಯಿ ಬಿಡಿಸಲು ಕಳ್ಳನಿಗೆ ಹಾವು ಬಿಟ್ಟ ಪೊಲೀಸರು – ವಿಡಿಯೋ ವೈರಲ್

    ಜಕಾರ್ತಾ: ಪೊಲೀಸರು ಕಳ್ಳರ ಬಾಯಿ ಬಿಡಿಸಲು ಲಾಠಿಯಲ್ಲಿ ಹೊಡೆಯುತ್ತಾರೆ ಅಥವಾ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಆದರೆ ಇಂಡೋನೇಷ್ಯಾ ಪೊಲೀಸರು ದೇಹದ ಮೇಲೆ ಹಾವನ್ನು ಬಿಟ್ಟು ಬಾಯಿ ಬಿಡಿಸಿದ್ದಾರೆ.

    ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಪೊಲೀಸರು ಹಾವನ್ನು ಬಿಟ್ಟು ವಿಭಿನ್ನವಾಗಿ ಕಳ್ಳನಿಂದ ಸತ್ಯ ಹೇಳಿಸಲು ಮಾಡಿದ್ದ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ಮೊಬೈಲ್ ಕಳ್ಳತನದ ಆರೋಪದಲ್ಲಿ ಒಬ್ಬಾತ ಬಂಧನಕ್ಕೆ ಒಳಗಾಗಿದ್ದ. ಬಂಧನಕ್ಕೆ ಒಳಗಾಗಿದ್ದ ಆತ ವಿಚಾರಣೆ ವೇಳೆ ಸರಿಯಾದ ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಬಾಯಿ ಬಿಡಿಸಲು ಪೊಲೀಸರು ಆತನ ಎರಡು ಕೈಗಳನ್ನು ಕಟ್ಟಿ ಹಾಕಿ ಅವನ ಕುತ್ತಿಗೆಯ ಸುತ್ತ ಹಾವನ್ನು ಬಿಟ್ಟಿದ್ದಾರೆ. ಇದರಿಂದ ಕಳ್ಳ ಭಯದಿಂದ ಕುಳಿತಿದ್ದ. ಬಳಿಕ ಅಧಿಕಾರಿಯೊಬ್ಬರು ಬಂದು ಹಾವಿನ ಬಾಲ ಹಿಡಿದು ಕಳ್ಳನ ಬಾಯಿ ಹತ್ತಿರ ತೆಗೆದುಕೊಂಡು ಹೋಗಿ ಹಿಂಸೆ ಕೊಟ್ಟಿದ್ದಾರೆ. ಇದರಿಂದ ಭಯಗೊಂಡ ಕಳ್ಳ ಚೀರಾಡಿದ್ದಾನೆ.

    ಅಷ್ಟಕ್ಕೂ ಸುಮ್ಮನಾಗದ ಪೊಲೀಸರ ಹಾವಿನ ಎಡೆಯನ್ನು ಹಿಡಿದುಕೊಂಡು ಕಳ್ಳನ ಮುಖದ ಬಳಿ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕಳ್ಳ ತುಂಬಾ ಭಯಪಟ್ಟು ಕೂಗಾಡಿ, ಒದ್ದಾಡಿದ್ದಾನೆ. ಆದರೆ ಪೊಲೀಸ್ ಅಧಿಕಾರಿ ಮಾತ್ರ ನಗುತ್ತಾ ಮನರಂಜನೆ ರೀತಿಯಲ್ಲಿ ಕಳ್ಳನಿಗೆ ಹಿಂಸೆ ಕೊಟ್ಟಿದ್ದಾರೆ. ಇದೆಲ್ಲವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ಕೇಳಿಬಂದಿದೆ. ಬಳಿಕ ಇಂಡೋನೇಷ್ಯಾದ ಪೊಲೀಸರು ನೆಟ್ಟಿಗರ ಬಳಿ ಕ್ಷಮೆ ಯಾಚಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ, ಪಪುವಾ ಪೊಲೀಸ್ ವಕ್ತಾರರು, ಅಧಿಕಾರಿಗಳಿಗೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ಸಹ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್ಲಿಕ್ ಪ್ಲೇಸ್‍ನಲ್ಲಿ ಹಗ್ ಮಾಡಿದಕ್ಕೆ ಜೈಲು ಸೇರಿದ್ರು ಪ್ರೇಮಿಗಳು..!

    ಪಬ್ಲಿಕ್ ಪ್ಲೇಸ್‍ನಲ್ಲಿ ಹಗ್ ಮಾಡಿದಕ್ಕೆ ಜೈಲು ಸೇರಿದ್ರು ಪ್ರೇಮಿಗಳು..!

    ಜಕಾರ್ತಾ: ಸಾರ್ವಜನಿಕ ಸ್ಥಳದಲ್ಲಿ ತಬ್ಬಿಕೊಂಡಿದ್ದಕ್ಕೆ ಯುವ ಪ್ರೇಮಿಗಳಿಗೆ 17 ಬಾರಿ ಥಳಿಸಿ ಜೈಲಿಗಟ್ಟಿದ ಘಟನೆ ಇಂಡೋನೇಷ್ಯಾದ ಏಸೆ ಪ್ರಾಂತ್ಯದಲ್ಲಿ ನಡೆದಿದೆ.

    ಏಸೆ ಪ್ರಾಂತ್ಯದ ಮಹಿಳಾ ವಿಶ್ವವಿದ್ಯಾನಿಲಯದ 18 ವರ್ಷದ ವಿದ್ಯಾರ್ಥಿನಿ ಹಾಗೂ ಯುವಕನೊಬ್ಬನು ಸಾರ್ವಜನಿಕ ಸ್ಥಳದಲ್ಲಿ ತಬ್ಬಿಕೊಂಡಿದ್ದರು. ಆದರಿಂದ ಪ್ರೇಮಿಗಳು ಏಸೆ ಪ್ರಾಂತ್ಯದ ಕಾನೂನನ್ನು ಉಲ್ಲಂಘಸಿ ಕಾನೂನಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿದೆ.

    ಏಸೆ ಪ್ರಾಂತ್ಯದ ರಾಜಧಾನಿಯಾದ ಬಾಂಡಾ ಏಸೆಯಲ್ಲಿ ಪ್ರೇಮಿಗಳಿಬ್ಬರಿಗೂ ಮಸೀದಿಯ ಮುಂದೆ ಕೂರಿಸಿ ಸಾರ್ವಜನಿಕರ ಎದುರೇ ಅಲ್ಲಿನ ಧಾರ್ಮಿಕ ಮುಖಂಡರು 17 ಬಾರಿ ಬಿದಿರಿನ ಕೋಲಿನಿಂದ ಹೊಡೆದಿದ್ದಾರೆ. ಬಳಿಕ ಕಾನೂನನ್ನು ಉಲ್ಲಂಘಿಸಿದಕ್ಕೆ ಇಬ್ಬರಿಗೂ 1 ತಿಂಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲು ಆದೇಶ ಹೊರಡಿಸಿದ್ದಾರೆ.

    ಏಸೆ ಪ್ರಾಂತ್ಯದಲ್ಲಿ ಇಸ್ಲಾಂ ಧರ್ಮವನ್ನು ಪಾಲಿಸುವ ಜನರ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿನ ಸರ್ಕಾರ ಹಾಗೂ ಧಾರ್ಮಿಕ ಮುಖಂಡರು ಮಾಡಿರುವ ಕಾನೂನನ್ನು ಎಲ್ಲರೂ ಚಾಚು ತಪ್ಪದೇ ಪಾಲಿಸುತ್ತಾರೆ. ಅಷ್ಟೇ ಅಲ್ಲದೆ ಇಲ್ಲಿ ಕಾನೂನನ್ನು ಉಲ್ಲಂಘಿಸಿದರೆ ಷರಿಯಾ ಕಾನೂನಿನ ಪ್ರಕಾರ ಕಠಿಣ ಹಾಗೂ ಕ್ರೂರ ಶಿಕ್ಷೆಯನ್ನು ನೀಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 8 ಅಡಿಯ ಗೋಡೆ ಹಾರಿ ವಿಜ್ಞಾನಿಯನ್ನು ಎಳೆದು ತಿಂದ ಮೊಸಳೆ!

    8 ಅಡಿಯ ಗೋಡೆ ಹಾರಿ ವಿಜ್ಞಾನಿಯನ್ನು ಎಳೆದು ತಿಂದ ಮೊಸಳೆ!

    ಜಕಾರ್ತಾ: ಆಹಾರ ನೀಡುತ್ತಿದ್ದ ಮಹಿಳಾ ವಿಜ್ಞಾನಿಯನ್ನು ಮೊಸಳೆ ಜೀವಂತವಾಗಿ ತಿಂದಿರುವ ಘಟನೆ ಇಂಡೋನೇಷ್ಯಾದ ನಾರ್ಥ್ ಸುಲಾವೆಸಿಯಲ್ಲಿ ನಡೆದಿದೆ.

    44 ವರ್ಷದ ಡೀಸಿ ಟುವೋ ಮೃತಪಟ್ಟ ವಿಜ್ಞಾನಿ. ಟುವೋ ಎಂದಿನಂತೆ ತಾನು ಕೆಲಸ ಮಾಡುತ್ತಿದ್ದ ಲ್ಯಾಬೋರೆಟರಿಯಲ್ಲಿ ಮೊಸಳೆಗೆ ಆಹಾರ ನೀಡುವ ವೇಳೆ ಬಲಿಯಾಗಿದ್ದಾರೆ.

    ಮೊಸಳೆಯನ್ನು 8 ಅಡಿ ಎತ್ತರದ ಟ್ಯಾಂಕ್‍ವೊಂದರಲ್ಲಿ ಇರಿಸಿ ಪೋಷಣೆ ಮಾಡಲಾಗುತ್ತಿದ್ದು, ಆದರೆ ಶುಕ್ರವಾರ ಬೆಳಗ್ಗೆ ಆಹಾರ ನೀಡುವ ವೇಳೆ ಗೋಡೆಯ ಎತ್ತರಕ್ಕೆ ಹಾರಿದ ಮೊಸಳೆ ಟುವೋರನ್ನ ಒಳಗೆ ಎಳೆದುಕೊಂಡು ಜೀವಂತವಾಗಿ ತಿಂದು ಹಾಕಿದೆ. ಲ್ಯಾಬ್ ಸಿಬ್ಬಂದಿ ನೀರಿನಲ್ಲಿ ದೇಹದ ತುಂಡು ಹಾಗೂ ಮೊಸಳೆ ಬಾಯಿಯಲ್ಲಿ ಇತರೇ ಅಂಗಾಂಗಳು ಕಂಡಾಗ ಘಟನೆ ಬೆಳಕಿಗೆ ಬಂದಿದೆ.

    ಪ್ರತಿದಿನ ಮೊಸಳೆಗೆ ಚಿಕನ್, ಮಟನ್ ಆಹಾರವನ್ನು ನೀಡಲಾಗುತ್ತಿತ್ತು. ಅಲ್ಲದೇ ಎಲ್ಲವೂ ಫ್ರೆಶ್ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಏಕೆಂದರೆ ಮೊಸಳೆ ಫ್ರೀಜ್ ಮಾಡಿದ ಅಥವಾ 2 ಮೂರು ದಿನಗಳ ಹಿಂದೆ ಸತ್ತ ಪ್ರಾಣಿಗಳನ್ನು ಸೇವಿಸುತ್ತಿರಲಿಲ್ಲ. ಪರಿಣಾಮ ಮೊಸಳೆಯ ಪುಲ್ ಅನ್ನು ಸ್ವಚ್ಛವಾಗಿ ನೋಡಿಕೊಳ್ಳಲಾಗುತ್ತಿತ್ತು. ಆದರೆ ದುರ್ಘಟನೆ ಹೇಗೆ ನಡೆದಿದೆ ಎಂದು ತಿಳಿದು ಬಂದಿಲ್ಲ ಎಂದು ಲ್ಯಾಬ್ ಸಿಬ್ಬಂದಿ ತಿಳಿಸಿದ್ದಾರೆ.

    ಮೃತ ಟುವೋ ಪ್ರಾಣಿಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಅಲ್ಲದೇ ಲ್ಯಾಬ್ ಮುಖ್ಯಸ್ಥರು ಕೂಡ ಅವರೇ ಆಗಿದ್ದು, ಘಟನೆ ಹೇಗೆ ನಡೆದಿದೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಟುವೋ ಜೊತೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆಕ್ಸ್ ಮಾಡಿದ್ದಾರೆಂದು ರೂಮಿನಿಂದ ಹೊರಗೆಳೆದು ಜೋಡಿಯ ಮೇಲೆ ಚರಂಡಿ ನೀರು ಹಾಕಿದ್ರು- ವಿಡಿಯೋ ವೈರಲ್

    ಸೆಕ್ಸ್ ಮಾಡಿದ್ದಾರೆಂದು ರೂಮಿನಿಂದ ಹೊರಗೆಳೆದು ಜೋಡಿಯ ಮೇಲೆ ಚರಂಡಿ ನೀರು ಹಾಕಿದ್ರು- ವಿಡಿಯೋ ವೈರಲ್

    ಜಕಾರ್ತಾ: ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ಆತನ ರೂಮಿಗೆ ಹೋಗಿದಾಗ ಅಲ್ಲಿದ್ದ ಸಾರ್ವಜನಿಕರು ಅವರಿಬ್ಬರು ದೈಹಿಕ ಸಂಬಂಧ ಬೆಳೆಸಿದ್ದಾರೆಂದು ಅನುಮಾನಗೊಂಡು ಅವರನ್ನು ರೂಮಿನಿಂದ ಎಳೆದು ತಂದು ಚರಂಡಿ ನೀರನ್ನು ಹಾಕಿದ ಘಟನೆ ಸುಮಾತ್ರಾ ದ್ವೀಪದ ಕೇಯಿ ಲೀ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಮಾರ್ಚ್ 7ರಂದು ನಡೆದಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯುವಕ ಕಂದು ಬಣ್ಣದ ಶರ್ಟ್, ಜಿನ್ಸ್ ಧರಿಸಿ ಚರಂಡಿ ಮುಂದೆ ತಲೆ ತಗ್ಗಿಸಿ ನಿಂತಿದ್ದು, ಯುವತಿ ಆತನ ಪಕ್ಕದಲ್ಲೇ ಕುಳಿತಿದ್ದಾಳೆ.

    ನಂತರ ವ್ಯಕ್ತಿಯೊಬ್ಬ ಇವರ ಮೇಲೆ ಚರಂಡಿ ನೀರನ್ನು ಹಾಕಿ ನೀನು ಮಾಡಿದ್ದು ಇಸ್ಲಾಂ ಧರ್ಮಕ್ಕೆ ವಿರುದ್ಧ. ಇದು ನಿನಗೆ ತಕ್ಕ ಪಾಠ ಎಂದು ಗುಂಪಿನಲ್ಲಿ ಸಾರ್ವಜನಿಕರು ಹೇಳಿದ್ದಾರೆ. ಸ್ವಲ್ಪ ಸಮಯದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆ ಜೋಡಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು ಎಂದು ಪ್ರತಿಕೆಯೊಂದರಲ್ಲಿ ವರದಿಯಾಗಿದೆ.

    18 ವರ್ಷದ ಯುವತಿ ತನ್ನ ಪ್ರಿಯಕರನನ್ನು ಭೇಟಿ ಮಾಡಲು ಯಾರೂ ಇಲ್ಲದ ವೇಳೆ ಆತನ ರೂಮಿಗೆ ಹೋಗಿದ್ದಳು. ಅಕ್ಕಪಕ್ಕದ ಮನೆಯವರ ಪ್ರಕಾರ ಅವರಿಬ್ಬರು ಅಲ್ಲಿ ಸೆಕ್ಸ್ ಮಾಡಲು ಯೋಚಿಸುತ್ತಿದ್ದರು. ನಂತರ ಸಾರ್ವಜನಿಕರು ಅವರನ್ನು ಎಳೆದು ತಂದು ಶಿಕ್ಷೆ ನೀಡಿದ್ದಾರೆ ಎಂದು ಇಂಗಿನ್ ಜಯಾ ಪೊಲೀಸ್ ಅಧಿಕಾರಿಯಾದ ನಜರುಲ್ ಪಿತ್ರಾ ತಿಳಿಸಿದ್ದಾರೆ.

    ಸದ್ಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಈ ಜೋಡಿಯ ಮೇಲಿರುವ ಆರೋಪ ನಿಜವಾದರೆ 100 ಹೊಡೆತ ಹಾಗೂ 15 ತಿಂಗಳ ಬಂಧನ ಅಥವಾ 150 ಗ್ರಾಂ ಚಿನ್ನಕ್ಕೆ ಸಮನಾದ ಹಣವನ್ನು ನೀಡಬೇಕೆಂದು ಪಿತ್ರಾ ಹೇಳಿದ್ದಾರೆ.

    https://www.youtube.com/watch?v=LBtKc85tZBE