Tag: ಜಂಬೂಸವಾರಿ

  • ಬರದ ನಡುವೆಯೂ ಬತ್ತದ ಜನೋತ್ಸಾಹ; ಲಕ್ಷಾಂತರ ಮಂದಿ ಸಾಕ್ಷಿಯಾದ ದಸರಾಗೆ ತೆರೆ

    ಬರದ ನಡುವೆಯೂ ಬತ್ತದ ಜನೋತ್ಸಾಹ; ಲಕ್ಷಾಂತರ ಮಂದಿ ಸಾಕ್ಷಿಯಾದ ದಸರಾಗೆ ತೆರೆ

    – 4ನೇ ಬಾರಿ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್‌ ಅಭಿಮನ್ಯು

    ಮೈಸೂರು: ರಾಜ್ಯದಲ್ಲಿ ಮಳೆ ಅಭಾವದಿಂದ ಬರದ ಛಾಯೆ ಆವರಿಸಿದೆ. ಹೀಗಾಗಿ ಈ ಬಾರಿ ಐತಿಹಾಸಿಕ ಮೈಸೂರು ದಸರಾವನ್ನು (Mysuru Dasara) ಅದ್ಧೂರಿಯಾಗಿ ಆಚರಿಸುವ ಬದಲು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಬರದ ನಡುವೆಯೂ ಈ ಬಾರಿ ಲಕ್ಷಾಂತರ ಮಂದಿ ಭಾಗಿಯಾಗಿ ದಸರಾ ಜಂಬೂಸವಾರಿ (Dasara Jamboo Savari) ವೈಭವವನ್ನು ಕಣ್ತುಂಬಿಕೊಂಡಿದ್ದಾರೆ. ಲಕ್ಷಾಂತರ ಮಂದಿ ಸಾಕ್ಷಿಯಾಗಿ ದಸರಾ ಸಂಪನ್ನಗೊಂಡಿದೆ.

    ಇಂದು (ಮಂಗಳವಾರ) ಮೈಸೂರಿನಲ್ಲಿ (Mysuru) ನಾಡಹಬ್ಬ ದಸರಾ ವೈಭವ ಕಳೆಗಟ್ಟಿತ್ತು. ದಸರಾ ಪ್ರಮುಖ ಆಕರ್ಷಣೆಯಾದ ದಸರಾ ಜಂಬೂಸವಾರಿಯನ್ನು ಬಿಸಿಲನ್ನೂ ಲೆಕ್ಕಿಸದೇ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನ ಕಣ್ತುಂಬಿಕೊಂಡು ಧನ್ಯತಾ ಭಾವ ಮೆರೆದರು. ಜನ ಬೆಳಗ್ಗೆಯಿಂದಲೇ ಅರಮನೆ ಮೈದಾನದಿಂದ ಹಿಡಿದು ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಬನ್ನಿಮಂಟಪದ ವರೆಗೆ ಕಿಕ್ಕಿರಿದು ಸೇರಿದ್ದರು. ಅರಮೆಯಲ್ಲಿ ಹಲವು ಕಾರ್ಯಕ್ರಮಗಳು ನಡೆದವು. ವಜ್ರಮುಷ್ಠ ಕಾಳಗ ಕೂಡ ನಡೆಯಿತು. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ – ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗಿದ ಅಭಿಮನ್ಯು

    ಮಧ್ಯಾಹ್ನದ ವೇಳೆ ಸಿಎಂ ಸಿದ್ದರಾಮಯ್ಯ ಅವರು ನಂದಿಧ್ವಜ ಪೂಜೆ ನೆರವೇರಿಸಿದರು. ನಂತರ ಸ್ತಬ್ಧಚಿತ್ರ ಹಾಗೂ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ ಸಾಗಿದ ಚಿನ್ನದ ಅಂಬಾರಿ ಮೆರವಣಿಗೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಈ ಬಾರಿ ಪೊಲೀಸ್‌ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ನಿಗದಿಗಿಂತ 15 ನಿಮಿಷ ತಡವಾಗಿ ಮೆರವಣಿಗೆಗೆ ಚಾಲನೆ ದೊರೆಯಿತು. ಈ ವೇಳೆ ಸಿಎಂಗೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್‌.ಸಿ.ಮಹದೇವಪ್ಪ, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಮೇಯರ್‌ ಶಿವಕುಮಾರ್‌ ಸಾಥ್‌ ನೀಡಿದರು.

    ದಸರಾ ಜಂಬೂಸವಾರಿಗೆ ಸ್ತಬ್ಧಚಿತ್ರ ಹಾಗೂ ವಿವಿಧ ಕಲಾತಂಡಗಳು ಮೆರುಗು ನೀಡಿದವು. ರಾಜ್ಯದ ವಿವಿಧ ಜಿಲ್ಲೆಗಳ 31 ಹಾಗೂ ವಿವಿಧ ಇಲಾಖೆಗಳ 18 ಸೇರಿದಂತೆ ಒಟ್ಟು 49 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. ಇಸ್ರೋ ಯಶಸ್ವಿ ಚಂದ್ರಯಾನ-3 ಯೋಜನೆಗೆ ಸಂಬಂಧಿಸಿದ ಸ್ತಬ್ಧಚಿತ್ರ ಗಮನ ಸೆಳೆಯಿತು. ಅಲ್ಲದೇ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತ ಸ್ತಬ್ಧಚಿತ್ರ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು. ಜೊತೆಗೆ ಡೊಳ್ಳು ಕುಣಿತ, ವೀರಗಾಸೆ, ಪಟ ಕುಣಿತ ಹೀಗೆ ಅನೇಕ ಜನಪದ ಕಲಾತಂಡಗಳು ಮೆರವಣಿಗೆ ಉದ್ದಕ್ಕೂ ಸಾಗಿ ಜನರನ್ನು ರಂಜಿಸಿದವು. ಇದನ್ನೂ ಓದಿ: ದಸರಾ ಜಂಬೂ ಸವಾರಿಗೆ ಮೆರಗು ನೀಡಲಿವೆ 49 ವಿಶೇಷ ಸ್ತಬ್ಧ ಚಿತ್ರಗಳು – ಯಾವ್ಯಾವ ಜಿಲ್ಲೆಯಿಂದ ಏನೇನು?

    ಕ್ಯಾಪ್ಟನ್‌ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊತ್ತು ಸಾಗಿದ್ದು ಇದು ನಾಲ್ಕನೇ ಬಾರಿ. ಸಂಜೆ 5:23 ಕ್ಕೆ ಅರಮನೆ ಬಿಟ್ಟಿದ್ದ ಅಭಿಮನ್ಯು. ರಾತ್ರಿ 7:25 ರ ಹೊತ್ತಿಗೆ ಬನ್ನಿಮಂಟಪ ತಲುಪಿದ. ಮೆರವಣಿಗೆಯಿಂದ ಅರಮನೆಯಿಂದ ಹೊರಟು, ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಸಯ್ಯಾಜಿರಾವ್‌ ರಸ್ತೆ, ಆಯುರ್ವೇದ ಕಾಲೇಜು ವೃತ್ತ. ನ್ಯೂ ಸಯ್ಯಾಜಿರಾವ್‌ ರಸ್ತೆ, ಹೈವೆ ವೃತ್ತದ ಮೂಲಕ ಐದು ಕಿ.ಮೀ. ದೂರದ ಬನ್ನಿಮಂಟಪವನ್ನು ತಲುಪಿತು.

    ಮೆರವಣಿಗೆ ಹಾದಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು, ಚಿನ್ನದ ಅಂಬಾರಿಯ ಮೇಲೆ ವಿರಾಜಮಾನವಾಗಿ ದರ್ಶನ ನೀಡಿದ ತಾಯಿಯನ್ನು ಕಂಡು ಕೈಮುಗಿದು ಭಕ್ತಿ-ಭಾವ ಪ್ರದರ್ಶಿಸಿದರು. ‘ಜೈ ಚಾಮುಂಡಿ’ ಎಂದು ಕೂಗಿದರು. ಅನೇಕರು ತಮ್ಮ ಮೊಬೈಲ್‌ಗಳಲ್ಲಿ ಜಂಬೂಸವಾರಿ ಮೆರವಣಿಗೆ ದೃಶ್ಯವನ್ನು ಸೆರೆ ಹಿಡಿದರು. ಜಂಬೂಸವಾರಿ ಮುಂದೆ ಸಾಗುತ್ತಿದ್ದ ಸ್ತಬ್ಧಚಿತ್ರಗಳು ಹಾಗೂ ಕಲಾತಂಡಗಳ ವೈಶಿಷ್ಟ್ಯವನ್ನು ಕಣ್ತುಂಬಿಕೊಂಡರು. ಇದನ್ನೂ ಓದಿ: ಐತಿಹಾಸಿಕ ಮೈಸೂರು ದಸರಾ ಮಹೋತ್ಸವ- ಜಂಬೂಸವಾರಿ ಕಣ್ತುಂಬಿಕೊಳ್ಳಲು ಕಾತುರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐತಿಹಾಸಿಕ ಮೈಸೂರು ದಸರಾ ಮಹೋತ್ಸವ- ಜಂಬೂಸವಾರಿ ಕಣ್ತುಂಬಿಕೊಳ್ಳಲು ಕಾತುರ

    ಐತಿಹಾಸಿಕ ಮೈಸೂರು ದಸರಾ ಮಹೋತ್ಸವ- ಜಂಬೂಸವಾರಿ ಕಣ್ತುಂಬಿಕೊಳ್ಳಲು ಕಾತುರ

    ಮೈಸೂರು: 414 ನೇ ನಾಡಹಬ್ಬ ದಸರಾ (Mysuru Dasara 2023) ಮೆರವಣಿಗೆ ಇಂದು ವೈಭವಯುತವಾಗಿ ನಡೆಯಲಿದೆ. ಇದಕ್ಕಾಗಿ ಇಡೀ ಮೈಸೂರು ಸಜ್ಜಾಗಿದೆ. ಇಡೀ ನಾಡಿನ ದೃಷ್ಟಿ ಇವತ್ತು ಮೈಸೂರಿನ ಮೇಲಿದೆ.

    ವಿಶ್ವವಿಖ್ಯಾತ ನಾಡಹಬ್ಬ ದಸರಾ ಮೆರವಣಿಗೆಗೆ ಕೆಲ ಗಂಟೆಗಳು ಬಾಕಿ ಉಳಿದಿದೆ. 414ನೇ ನಾಡಹಬ್ಬ ದಸರಾ ಮೆರವಣಿಗೆ ಇಂದು ವೈಭವಯುತವಾಗಿ ನಡೆಯಲಿದೆ. ಇದಕ್ಕಾಗಿ ಇಡೀ ಮೈಸೂರು ಸಜ್ಜಾಗಿದೆ. ಇಡೀ ನಾಡಿನ ದೃಷ್ಟಿ ಇವತ್ತು ಮೈಸೂರಿನ ಮೇಲಿದೆ. ಜಂಬೂಸವಾರಿ (Jambu Savari) ಕಣ್ತುಂಬಿಕೊಳ್ಳಲು ಕರುನಾಡು ಕಾತರದಿಂದ ಕಾಯ್ತಿದೆ. ಇದನ್ನೂ ಓದಿ: ಸಿಡಿಮದ್ದು ತಾಲೀಮು ವೇಳೆ ಅವಘಡ- ವ್ಯಕ್ತಿ ಆಸ್ಪತ್ರೆಗೆ ದಾಖಲು

    ಐತಿಹಾಸಿಕ `ದಸರಾ’: ದಸರಾ ಮೆರವಣಿಗೆ ಆರಂಭಕ್ಕೂ ಮುನ್ನ ಮೈಸೂರಿನ ಅರಮನೆಯಲ್ಲಿ (Mysuru Darasa) ಖಾಸಗಿ ದರ್ಬಾರ್ ಭಾಗವಾಗಿ ವಿಜಯಯಾತ್ರೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಅರಮನೆಯ ಕಲ್ಯಾಣ ಮಂಟಪದ ಮುಂಭಾಗ ಜಟ್ಟಿ ಸಮುದಾಯದವರು ಜಟ್ಟಿ ಕಾಳಗ ನಡೆಸಿ ಮಹಾರಾಜರಿಗೆ ತಮ್ಮ ನಿಷ್ಠೆ ಪ್ರದರ್ಶಿಸಲಿದ್ದಾರೆ. ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ನಡೆಯರ್ ವಿಜಯಾ ಯಾತ್ರೆ ನಡೆಸಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 1.46ರಿಂದ 2.08ರಲ್ಲಿ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜದ ಪೂಜೆ ನೆರವೇರಲಿದೆ. ನಂತರ ನಾಡಿನ ಕಲೆ ಸಂಸ್ಕೃತಿ, ಪರಂಪರೆಯನ್ನು ಸಾರುವ ಸ್ತಬ್ಧಚಿತ್ರಗಳು, ಕಲಾತಂಡಗಳ ಅದ್ದೂರಿ ಮೆರವಣಿಗೆ ಆರಂಭವಾಗಲಿದೆ. ಸಂಜೆ 4.40ರಿಂದ 5 ಗಂಟೆಯವರೆಗೆ ಸಲ್ಲುವ ಶುಭ ಮೀನ ಮಹೂರ್ತದಲ್ಲಿ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಲಿದ್ದಾರೆ.

    750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆ ಚಾಮುಂಡಿ ಮೂರ್ತಿಯನ್ನು ಹೊತ್ತ ಅಭಿಮನ್ಯು ಆನೆ ರಾಜಬೀದಿಯಲ್ಲಿ ಸಾಗಲಿದೆ. ಕ್ಯಾಪ್ಟನ್ ಅಭಿಮನ್ಯುಗೆ 14 ಆನೆಗಳು ಸಾಥ್ ನೀಡಲಿವೆ. ಈ ಕ್ಷಣಕ್ಕೆ ಅಂದಾಜು 5 ಲಕ್ಷಕ್ಕೂ ಹೆಚ್ಚು ಮಂದಿ ಸಾಕ್ಷಿಯಾಗಲಿದ್ದಾರೆ.

    ದಸರಾಗೆ ಖಾಕಿ ಕಣ್ಗಾವಲು ದೊಡ್ಡ ಮಟ್ಟದಲ್ಲಿ ಇದೆ. ಭದ್ರತೆಗೆ ಸಾವಿರಾರು ಪೊಲೀಸರ ನಿಯೋಜನೆ ಮಾಡಲಾಗಿದೆ. ಲಕ್ಷಾಂತರ ಜನ ದಸರಾ ಕಣ್ತುಂಬಿಕೊಳ್ಳಲು ಮೈಸೂರಿಗೆ ಬಂದಿದ್ದು ಸುರಕ್ಷಿತವಾಗಿ ದಸರಾ ನಡೆಸಲು ಪೊಲೀಸರ ಸಕಲ ರೀತಿಯಲ್ಲೂ ಸಿದ್ಧರಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 20 ನಿಮಿಷದಲ್ಲಿ ವಿಶ್ವವಿಖ್ಯಾತ ಮೈಸೂರಿನ ಜಂಬೂಸವಾರಿ ಮುಕ್ತಾಯ

    20 ನಿಮಿಷದಲ್ಲಿ ವಿಶ್ವವಿಖ್ಯಾತ ಮೈಸೂರಿನ ಜಂಬೂಸವಾರಿ ಮುಕ್ತಾಯ

    ಮೈಸೂರು: ವಿಶ್ವ ವಿಖ್ಯಾತ ಮೈಸೂರಿನ ಜಂಬೂ ಸವಾರಿ ಕೇವಲ  20 ನಿಮಿಷದಲ್ಲಿ ಮುಕ್ತಾಯಗೊಂಡಿದೆ.

    ಸಂಜೆ 4:32 ರ ಮೀನ ಲಗ್ನದಲ್ಲಿ ಮುಖ್ಯಮಂತ್ರಿಗಳು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಇದಾದ ಬಳಿಕ ಸಂಜೆ 5:25ಕ್ಕೆ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಜಂಬೂ ಸವಾರಿ ಆರಂಭವಾಯಿತು.

    ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಮಾತ್ರ ಜಂಬೂ ಸವಾರಿ ನಡೆಯಿತು.  2ನೇ ಬಾರಿ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತು ಸಾಗಿದ್ದ.  ಇದನ್ನೂ ಓದಿ: ದಸರಾ ಸಂಭ್ರಮ – 16 ಕೆ.ಜಿ ಸೀರೆ ಉಡಿಸಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ

    ಅರಮನೆ ವೀಕ್ಷಣೆಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದ್ದರೂ ಅರಮನೆ ವೀಕ್ಷಣೆಗೆ ಸಾವಿರಾರು ಮಂದಿ ಆಗಮಿಸಿದ್ದರು. ಹೀಗಾಗಿ ಅರಮನೆ ಆವರಣದಿಂದಲೇ ಜನರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ವಿದ್ಯುತ್ ದೀಪಾಲಂಕಾರ ಇನ್ನೂ 9 ದಿನ ವಿಸ್ತರಣೆ: ಬೊಮ್ಮಾಯಿ

    ಈ ಬಾರಿಯ ಸರಳ ದಸರಾಗೆ ಕೇವಲ 6 ಟ್ಯಾಬ್ಲೋಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಾಗಿ ಜಂಬೂ ಸವಾರಿ ವೇಳೆ 6 ಸ್ತಬ್ಧಚಿತ್ರಗಳು ಮಾತ್ರ  ಭಾಗಿ ಆಗಿತ್ತು.

  • ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ

    ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ

    ಮೈಸೂರು: ಅರಮನೆಯಲ್ಲಿ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ. ಮುಂಜಾನೆ 4.40ರಿಂದ ಅರಮನೆಯಲ್ಲಿ ಹೋಮ ಆರಂಭವಾಗಿದೆ.

    ಹೋಮಕ್ಕೆ ಯದುವೀರ್ ಒಡೆಯರ್ ಅವರಿಂದ ಪೂರ್ಣಾಹುತಿ. 5.45ಕ್ಕೆ ಆನೆ ಕುದುರೆ ಹಸುಗಳ ಆಗಮನವಾಗಿದೆ. 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನೇರವೇರಿದೆ. ಖಾಸಾ ಆಯುಧಗಳಿಗೆ ಯದುವೀರ್ ರಿಂದ ಉತ್ತರ ಪೂಜೆ. ಉತ್ತರ ಪೂಜೆ ನಂತರ ಶಮಿ ಪೂಜೆ ನಂತರ ಚಾಮುಂಡಿ ದೇವಿ ವಿಗ್ರಹ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡಲಾಗಿದೆ.

    ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್: ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಜಯಯಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಮುಂಜಾನೆ 5.45ಕ್ಕೆ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸುಗಳಿಗೆ ಪೂಜೆ ನೆರವೇರಿಸಲಾಯಿತು. ಬಳಿಕ ಬೆಳಗ್ಗೆ 7.20ರಿಂದ 7.40ರವರೆಗೆ ಅರಮನೆ ರಾಜಪುರೋಹಿತರ ಸಮ್ಮುಖದಲ್ಲಿ ವಿಜಯದಶಮಿ ಮೆರವಣಿಗೆ ನಡೆಸಿದ ಯದುವೀರ್ ಒಡೆಯರ್, ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ಮೂಲಕ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.

    ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2021 ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಕೆಂಪು ಸೀರೆಯುಡಿಸಿ ಅಲಂಕಾರ ಮಾಡಲಾಗಿದೆ. ಬೆಳ್ಳಿ ರಥದ ಮೂಲಕ ತಾಯಿ ಚಾಮುಂಡೇಶ್ವರಿಯನ್ನು ಕರೆದೊಯ್ಯುಲಾಗಿದೆ. ಸಚಿವ ಎಸ್.ಟಿ.ಸೋಮಶೇಖರ್‌ ಪುಷ್ಪಾರ್ಚನೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಶಾಸಕರಾದ ರಾಮದಾಸ್, ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದರು. 8 ಗಂಟೆಗೆ ಚಾಮುಂಡಿ ಬೆಟ್ಟದಿಂದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಅರಮನೆಗೆ ಬರಲಿದೆ. ತಾಯಿಯನ್ನು ಸ್ವಾಗತಿಸಲು ಭಕ್ತರು ಉತ್ಸುಕರಾಗಿದ್ದಾರೆ. ಬೆಟ್ಟದ ಪಾದದಿಂದ ಅರಮನೆಯ ರಸ್ತೆಯ ವರೆಗೆ ಬಣ್ಣ-ಬಣ್ಣದ ರಂಗೋಲಿಯನ್ನು ಹಾಕಲಾಗಿದೆ. ದೇವರ ನೈವೇದ್ಯಕ್ಕೆ ನವಧಾನ್ಯ ಉಸ್ಲಿ ನವರಾತ್ರಿ ಸ್ಪೆಷಲ್

    ಜನಪದ ಕಲಾತಂಡಗಳೊಂದಿಗೆ ಸ್ಟೆಪ್ ಹಾಕಿದ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಜಾನಪದ ಕಲಾ ತಂಡಗಳ ಜೊತೆಗೆ ನೃತ್ಯ ಮಾಡಿ ಕಂಸಾಳೆ ಬಡಿದು ಹುರುಪು ತುಂಬಿದ್ದಾರೆ. ಅರಮನೆಯಂಗಳದಲ್ಲಿರುವ ಜಾನಪದ ಕಲಾ ತಂಡದ ಜೊತೆಗೆ ವೀರಗಾಸೆ ಕತ್ತು ಗುರಾಣಿ ಹಿಡಿದು ಉಸ್ತುವಾರಿ ಸಚಿವರು ಕುಣಿದ ಕುಪ್ಪಳಿಸಿದ್ದಾರೆ. ಸರಳ ದಸರಾದಲ್ಲಿ ಅದ್ದೂರಿ ಸ್ಟಪ್ ಹಾಕಿದ ಸೋಮಶೇಖರ್ ಎಲ್ಲಾ ಜಾನಪದ ಕಲಾ ತಂಡಗಳೊಂದಿಗೆ  ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಎಸ್‍ಟಿಎಸ್ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ ಸಾಥ್ ನೀಡಿದ್ದಾರೆ.

    ಜಯಮಾರ್ತಂಡ ದ್ವಾರದ ಮೂಲಕ ಚಾಮುಂಡೇಶ್ವರಿ ಉತ್ಸವ ಮೂರ್ತಿ ಅರಮನೆ ಆವರಣ ಪ್ರವೇಶಿಸಿದೆ. ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ತಾಯಿ ಉತ್ಸವ ಮೂರ್ತಿಗೆ ಪೂರ್ಣ ಕುಂಭ ಸ್ವಾಗತ ಮಾಡಲಾಗಿದೆ. ಅಂಬಾವಿಲಾಸ ಅರಮನೆ ದ್ವಾರ ಪ್ರವೇಶಿಸಿದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಾಂಪ್ರದಾಯ ಪೂಜೆ ವಿಧಿವಿಧಾನ ಮೂಲಕ ಉತ್ಸವ ಮೂರ್ತಿ ಬರ ಮಾಡಿಕೊಂಡ ಅರಮನೆ ಅರ್ಚಕರು ಉತ್ಸವ ಮೂರ್ತಿ ಅಂಬಾವಿಲಾಸ ಅರಮನೆಗೆ ಶಿಫ್ಟ್ ಮಾಡಲಾಗಿದೆ. ದಸರಾ ಕಾರ್ಯಕ್ರಮಗಳು ಸಂಪ್ರದಾಯ ಬದ್ಧವಾಗಿ  ನಡೆಯುತ್ತಿವೆ.

  • ಮೊಟ್ಟ ಮೊದಲ ಬಾರಿಗೆ ಚಾಮುಂಡಿಬೆಟ್ಟದಿಂದ ಅರಮನೆಗೆ ಮೆರವಣಿಗೆಯಲ್ಲಿ ಬರಲಿದೆ ಅಂಬಾರಿ ಉತ್ಸವ ಮೂರ್ತಿ

    ಮೊಟ್ಟ ಮೊದಲ ಬಾರಿಗೆ ಚಾಮುಂಡಿಬೆಟ್ಟದಿಂದ ಅರಮನೆಗೆ ಮೆರವಣಿಗೆಯಲ್ಲಿ ಬರಲಿದೆ ಅಂಬಾರಿ ಉತ್ಸವ ಮೂರ್ತಿ

    -ಪೂಜೆ ಸಲ್ಲಿಸಿ ಚಾಲನೆ ನೀಡಲಿರುವ ಎಸ್.ಟಿ.ಸೋಮಶೇಖರ್

    ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಈ ಬಾರಿ ಚಾಮುಂಡಿಬೆಟ್ಟದಿಂದ ಅಲಂಕೃತ ವಾಹನದಲ್ಲಿ ವಿವಿಧ ಕಲಾತಂಡಗಳ ಜೊತೆಗೆ ಮೆರವಣಿಗೆ ಮೂಲಕ ಅರಮನೆಗೆ ತರಲಾಗುತ್ತಿದೆ.

    ವಿಜಯದಶಮಿಯ ದಿನವಾದ ಶುಕ್ರವಾರ ಬೆಳಗ್ಗೆ 8:00 ಗಂಟೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸೋಮಶೇಖರ್

    ಚಾಮುಂಡೇಶ್ವರಿ ಉತ್ಸವ ಮೂರ್ತಿ ತರುವ ಅಲಂಕೃತ ವಾಹನದೊಂದಿಗೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡ, ವೇದಘೋಷ, ಚಂಡೆ, ನವದುರ್ಗೆಯರು ಸಾಗಲಿದ್ದು, ತಾವರಕಟ್ಟೆ, ಇಟ್ಟಿಗೆಗೂಡು, ಹಾಡಿರ್ಂಚ್ ವೃತ್ತದ ಮೂಲಕ ಅರಮನೆ ಪ್ರವೇಶಿಸಲಾಗುತ್ತದೆ.

    ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್. ನಾಗೇಂದ್ರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಮೈಸೂರು ಮಹಾನಗರ ಪಾಲಿಕೆಯ ಸದಸ್ಯರುಗಳು, ಮತ್ತಿತರ ಗಣ್ಯರು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ನಾಡಿನೆಲ್ಲೆಡೆ ಆಯುಧಪೂಜೆಯ ಸಂಭ್ರಮ – ರಾಜವಂಶಸ್ಥರ ಆಯುಧಗಳಿಗೆ ಪೂಜೆ ಸಲ್ಲಿಸಲಿರುವ ಯದುವೀರ್

  • ಜಂಬೂಸವಾರಿ ವೇಳೆ ವಾಲಿದ ಅಂಬಾರಿ- ಕೈಸನ್ನೆ ಮಾಡಿದ ಪ್ರಮೋದಾದೇವಿ

    ಜಂಬೂಸವಾರಿ ವೇಳೆ ವಾಲಿದ ಅಂಬಾರಿ- ಕೈಸನ್ನೆ ಮಾಡಿದ ಪ್ರಮೋದಾದೇವಿ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂಸವಾರಿ ನಡೆಯುತ್ತಿದ್ದ ವೇಳೆ ಅಂಬಾರಿ ವಾಲಿದ್ದು, ಅದನ್ನು ಸರಿ ಮಾಡಲು ರಾಜಮಾತೆ ಪ್ರಮೋದಾದೇವಿ ಕೈಸನ್ನೆ ಮಾಡಿದ್ದರು.

    ಮಂಗಳವಾರ ಗಜಪಡೆ ನಾಯಕ ಅರ್ಜುನ ಅಂಬಾರಿ ಹೊತ್ತು ಜಂಬೂಸವಾರಿ ಆರಂಭಿಸಿದ ವೇಳೆ ಅಂಬಾರಿ ಕೊಂಚ ವಾಲಿತ್ತು. ಈ ವೇಳೆ ಅರಮನೆಯಿಂದ ಜಂಬೂಸವಾರಿ ವೀಕ್ಷಿಸಲು ನಿಂತಿದ್ದ ರಾಜಮಾತೆ ಪ್ರಮೋದಾದೇವಿ ಗಜಪಡೆ ಬಳಿ ಇದ್ದ ಸಿಬ್ಬಂದಿಗೆ ಅದನ್ನು ಸರಿ ಮಾಡುವಂತೆ ಕೈಸನ್ನೆ ಮಾಡಿದ್ದರು. ಈ ದೃಶ್ಯಾವಳಿಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ನಂತರ ಹಗ್ಗದ ಸಹಾಯದಿಂದ ಆರಂಭದಿಂದ ಕೊನೆಯವರೆಗೂ ಜಂಬೂಸವಾರಿ ನಡೆದು ಯಶಸ್ವಿಯಾಗಿ ಪೂರ್ಣಗೊಂಡಿತು. ಸಿಎಂ ಯಡಿಯೂರಪ್ಪ ಅವರು ಪುಷ್ಪಾರ್ಚನೆ ಮಾಡುತ್ತಿದ್ದ ವೇಳೆಯೂ ಅಂಬಾರಿಗೆ ಹಗ್ಗದ ಸಪೋರ್ಟ್ ನೀಡಲಾಗಿತ್ತು. ನಾಡಹಬ್ಬ ದಸರಾದಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಅಂಬಾರಿ ವಾಲಿದರೆ ನಾಡಿಗೆ ಕೆಡಕಾಗುತ್ತಾ ಎಂಬ ಆತಂಕ ಇದೀಗ ಶುರುವಾಗಿದೆ.

    750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ನಾಯಕ ಅರ್ಜುನ ಗಜಪಡೆ ಜೊತೆ ಹೆಜ್ಜೆ ಹಾಕಿ ದಸರಾವನ್ನು ಯಶಸ್ವಿಯಾಗಿದ್ದಾನೆ. ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.09ಕ್ಕೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಸಂಜೆ 4.17ರ ಶುಭ ಕುಂಬ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು.

    ಜಂಬೂ ಸವಾರಿಯಲ್ಲಿ 8ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಸಾಗಿದ್ದನು. ಈ ಜಂಬೂಸವಾರಿಯಲ್ಲಿ 39 ಸ್ತಬ್ಧ ಚಿತ್ರಗಳು, ವಿವಿಧ ಜಾನಪದ ಕಲಾತಂಡಗಳು, 100ಕ್ಕೂ ಹೆಚ್ಚು ಕಲಾ ತಂಡಗಳು, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ, 1,675 ಕಲಾವಿದರು ಸೇರಿದಂತೆ ಒಟ್ಟು 2 ಸಾವಿರ ಮಂದಿ ಭಾಗಿಯಾಗಿದ್ದವು.

    ಸಂಜೆ 4.30ಕ್ಕೆ ಹೊರಟ ಅಂಬಾರಿ ಸಂಜೆ 7 ಗಂಟೆಗೆ ಬನ್ನಿ ಮಂಟಪ ತಲುಪಿ, ಇತ್ತ ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತಿನ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಂಜನ್ನು ಹಿಡಿದು ಸಾಹಸ ಪ್ರದರ್ಶಿಸಿದರು. ಈ ಪಂಜಿನ ಕವಾಯತಿನ ಬಳಿಕ ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸೋ ಮೂಲಕ ದಸರಾ ಯಶಸ್ವಿ ತೆರೆಕಂಡಿದೆ.

  • ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಆರಂಭ

    ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಆರಂಭ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿದೆ. 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ಅರ್ಜುನ ಬನ್ನಿ ಮಂಟಪದತ್ತ ಹೆಜ್ಜೆ ಹಾಕುತ್ತಿದ್ದಾನೆ.

    ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.09ಕ್ಕೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಸಂಜೆ 4.17ರ ಶುಭ ಕುಂಬ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.

    ಜಂಬೂ ಸವಾರಿಯಲ್ಲಿ 8ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಸಾಗುತ್ತಿದ್ದಾನೆ. ಈ ಜಂಬೂಸವಾರಿಯಲ್ಲಿ 39 ಸ್ತಬ್ಧ ಚಿತ್ರಗಳು, ವಿವಿಧ ಜಾನಪದ ಕಲಾತಂಡಗಳು, 100ಕ್ಕೂ ಹೆಚ್ಚು ಕಲಾ ತಂಡಗಳು, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ, 1,675 ಕಲಾವಿದರು ಸೇರಿದಂತೆ ಒಟ್ಟು 2 ಸಾವಿರ ಮಂದಿ ಭಾಗಿಯಾಗಿದ್ದಾರೆ.

    ಸಂಜೆ 4.30ಕ್ಕೆ ಹೊರಟ ಅಂಬಾರಿ ಸಂಜೆ 7 ಗಂಟೆಗೆ ಬನ್ನಿ ಮಂಟಪ ತಲುಪುತ್ತದೆ. ಇತ್ತ ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಆರಂಭವಾಗುತ್ತದೆ. ನೂರಾರು ಮಂದಿ ಪಂಜನ್ನು ಹಿಡಿದು ಸಾಹಸ ಪ್ರದರ್ಶಿಸುತ್ತಾರೆ. ಈ ಪಂಜಿನ ಕವಾಯತಿನ ಬಳಿಕ ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸೋ ಮೂಲಕ ದಸರಾಕ್ಕೆ ತೆರೆ ಬೀಳುತ್ತದೆ.

  • ಕಾಡಿನತ್ತ ಹೊರಟ ದಸರಾ ಗಜಪಡೆ-ವಿಶೇಷ ಗೌರವದೊಂದಿಗೆ ಆನೆಗಳಿಗೆ ಬೀಳ್ಕೊಟ್ಟ ಅರಮನೆ ಸಿಬ್ಬಂದಿ

    ಕಾಡಿನತ್ತ ಹೊರಟ ದಸರಾ ಗಜಪಡೆ-ವಿಶೇಷ ಗೌರವದೊಂದಿಗೆ ಆನೆಗಳಿಗೆ ಬೀಳ್ಕೊಟ್ಟ ಅರಮನೆ ಸಿಬ್ಬಂದಿ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಜಂಬೂಸವಾರಿಯ ಆನೆಗಳು ಕಾಡಿನತ್ತ ಪ್ರಯಾಣ ಬೆಳೆಸಿವೆ.

    ಅದ್ಧೂರಿಯಾಗಿ ದಸರಾ ಜಂಬೂಸವಾರಿಯನ್ನು ನಡೆಸಿಕೊಟ್ಟಿದ್ದ ಕ್ಯಾಪ್ಟನ್ ಅರ್ಜುನ್ ಅಂಡ್ ಟೀಂನ ಆನೆಗಳು ಇಂದು ಕಾಡಿನತ್ತ ಪ್ರಯಾಣ ಬೆಳೆಸಿವೆ. ಆನೆಗಳಿಗೆ ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ವತಿಯಿಂದ ಅರಮನೆ ಆವರಣದಲ್ಲಿ ವಿಶೇಷ ಪೂಜೆ ನೇರವೇರಿದ್ದು, ಮಾವುತರು ಸೇರಿದಂತೆ ಕಾವಾಡಿಗರಿಗೆ ವಿಶೇಷ ಗೌರವ ನೀಡಿ ಬೀಳ್ಕೊಡಲಾಯಿತು.

    ಸೋಮವಾರ ಅರಮನೆಯಲ್ಲಿ ರಾಜಮನೆತನದ ದಸರಾದ ಅಂತಿಮ ಆಚರಣೆ ಹಿನ್ನೆಲೆಯಲ್ಲಿ ಮೂರು ಆನೆಗಳನ್ನು ಅರಮನೆಯಲ್ಲೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ ವಿಕ್ರಂ, ಗೋಪಿ ಹಾಗೂ ವಿಜಯ ಆನೆಗಳು ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಫ್ ಸಿದ್ದರಾಮಪ್ಪ, ರಾಜಮನೆತನದವರಿಂದ ಪೂಜಾ ಕಾರ್ಯಕ್ರಮದ ನಿಮಿತ್ತ ಮೂರು ಆನೆಗಳನ್ನು ಅರಮನೆಯಲ್ಲೇ ಉಳಿಸಿಕೊಂಡು, ಇನ್ನುಳಿದ 9 ಆನೆಗಳು ವಿಶೇಷ ಲಾರಿಗಳಲ್ಲಿ ಕಾಡಿನತ್ತ ಪ್ರಯಾಣ ಬೆಳಸಲಿವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಂಬೂಸವಾರಿ ಆರಂಭ: ರಾಜಗಾಂಭೀರ್ಯದಿಂದ ಹಜ್ಜೆ ಹಾಕುತ್ತಿದ್ದಾನೆ ಅರ್ಜುನ

    ಜಂಬೂಸವಾರಿ ಆರಂಭ: ರಾಜಗಾಂಭೀರ್ಯದಿಂದ ಹಜ್ಜೆ ಹಾಕುತ್ತಿದ್ದಾನೆ ಅರ್ಜುನ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿದೆ. 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ಅರ್ಜುನ ಬನ್ನಿ ಮಂಟಪದತ್ತ ಹೆಜ್ಜೆ ಹಾಕುತ್ತಿದ್ದಾನೆ.

    ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ಶುಭ ಕುಂಭ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಸಂಜೆ 4.14ರ ಸಮಯದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

    ಜಂಬೂ ಸವಾರಿಯಲ್ಲಿ 7 ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಸಾಗುತ್ತಿದ್ದಾನೆ. ಅರ್ಜುನನಿಗೆ ಕಾವೇರಿ ಮತ್ತು ವರಲಕ್ಷ್ಮಿ ಆನೆಗಳು ಸಾಥ್ ನೀಡಿವೆ. ನಿಶಾನೆ ಮತ್ತು ನೌಪತ್ ಆನೆಗಳಾಗಿ ಅಭಿಮನ್ಯು, ಬಲರಾಮ, ಕ್ರಮ, ದ್ರೋಣ, ಕಾವೇರಿ, ವಿಜಯ, ಚೈತ್ರ, ಗೋಪಿ ಪ್ರಶಾಂತ, ನಂಜಯ ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿವೆ.

    ಈ ಜಂಬೂಸವಾರಿಯಲ್ಲಿ 42 ಸ್ತಬ್ಧ ಚಿತ್ರಗಳು, 40 ವಿವಿಧ ಜಾನಪದ ಕಲಾತಂಡಗಳು, 10 ವಿಶೇಷ ಕಲಾ ತಂಡ, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ, 1, 675 ಕಲಾವಿದರು ಸೇರಿದಂತೆ ಒಟ್ಟು 2 ಸಾವಿರ ಮಂದಿ ಭಾಗಿಯಾಗಿದ್ದಾರೆ.

    ಖಾಕಿ ಕಣ್ಣು:
    ಅರಮನೆ ಹಾಗೂ ಜಂಬೂ ಸವಾರಿ ಮೆರವಣಿಗೆ 70 ಮಂದಿ ಕಮಾಂಡೋಗಳ ನಿಯೋಜನೆ ಮಾಡಲಾಗಿದ್ದು, ಮೆರವಣಿಗೆ ಮಾರ್ಗದಲ್ಲಿ 86 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. 11 ಎಸ್‍ಪಿ, ಡಿಸಿಪಿ, 43 ಎಸಿಪಿ, 131 ಪೊಲೀಸ್ ಇನ್ಸ್ ಪೆಕ್ಟರ್, 328 ಸಬ್ ಇನ್ಸ್ ಪೆಕ್ಟರ್, 521 ಸಹಾಯಕ ಸಬ್ ಇನ್ಸ್ ಪೆಕ್ಟರ್, 304 ಮಹಿಳಾ ಪೊಲೀಸರು, 1,600 ಹೋಂ ಗಾರ್ಡ್, 3,944 ಮಂದಿ ಪೊಲೀಸ್ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಯುಧಪೂಜೆ, ಜಂಬೂಸವಾರಿ: ಮೈಸೂರು ಅರಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪೂರ್ಣ ಪಟ್ಟಿ ಇಲ್ಲಿದೆ

    ಆಯುಧಪೂಜೆ, ಜಂಬೂಸವಾರಿ: ಮೈಸೂರು ಅರಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪೂರ್ಣ ಪಟ್ಟಿ ಇಲ್ಲಿದೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಎರಡು ದಿನ ಬಾಕಿ ಇದ್ದು, ಇದಕ್ಕಾಗಿ ಮೈಸೂರಿನಲ್ಲಿ ಸಕಲ ರೀತಿಯ ಸಿದ್ಧತೆ ನಡೆಯುತ್ತಿದೆ.

    ಗುರುವಾರ ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ಆಯಧ ಪೂಜೆ ನಡೆಯಲಿದೆ. ಇದಕ್ಕಾಗಿ ಇಂದು ಅರಮನೆಯಲ್ಲಿದ್ದ ಬೆಳ್ಳಿರಥವನ್ನ ಹೊರತೆಗೆದು ಸ್ವಚ್ಛಗೊಳಿಸಲಾಯಿತು.

    ಗುರುವಾರದ ಕಾರ್ಯಕ್ರಮಗಳು
    – ಬೆಳಗ್ಗೆ 5.30ಕ್ಕೆ ಚಂಡಿ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಆರಂಭವಾಗಲಿದೆ.
    – ಬೆಳಗ್ಗೆ 7ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮನ.
    – ಬೆಳಗ್ಗೆ 7.45ಕ್ಕೆ ಖಾಸ್ ಆಯುಧಗಳು ಅರಮನೆಯಿಂದ ಜಯ ಮಾರ್ತಾಂಡ ದ್ವಾರದ ಮಾರ್ಗವಾಗಿ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕಳುಹಿಸಿ ಪೂಜೆ. ಆಯುಧಗಳೊಂದಿಗೆ ಹೆಜ್ಜೆ ಹಾಕಲಿರುವ ಪಟ್ಟದ ಆನೆ, ಕುದುರೆ, ಹಸು.
    – ಬೆಳಗ್ಗೆ 8.15ರಿಂದ 8.30ಕ್ಕೆ ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಲ್ಯಾಣ ಮಂಟಪಕ್ಕೆ ಆಯುಧಗಳ ಆಗಮನ.
    – ಬೆಳಗ್ಗೆ 9ಕ್ಕೆ ಚಂಡಿಕಾ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಪೂರ್ಣಾಹುತಿ.
    – ಬೆಳಗ್ಗೆ 10ರಿಂದ 10.25 ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ. ಕತ್ತಿ, ಖಡ್ಗ, ಗುರಾಣಿ, ಯುದ್ಧೋಪಕರಣ, ವಾಹನ ಸೇರಿದಂತೆ ಅರಮನೆಯ ಆಯುಧಗಳಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಪೂಜೆ.
    – ಸಾಯಂಕಾರ ಅಂಬಾವಿಲಾಸ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ವಿಸರ್ಜನೆ.
    – ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ.

    ಶುಕ್ರವಾರದ ಕಾರ್ಯಕ್ರಮಗಳು
    – ಬೆಳಗ್ಗೆ 8.45 ಕ್ಕೆ ಅರಮನೆಗೆ ಪಟ್ಟದ ಆನೆ, ಕುದುರೆ, ಹಸು, ಆಗಮನ ಮತ್ತು ಪೂಜೆ
    – 9.10 ರಿಂದ 10.15 ರ ಒಳಗೆ ವಜ್ರಮುಷ್ಠಿ ಕಾಳಗ
    – ಕಾಳಗ ಮುಗಿದ ಮೇಲೆ ಬೆಳ್ಳಿ ರಥದಲ್ಲಿ ಯದುವೀರ್ ವಿಜಯಯಾತ್ರೆ
    – ಅರಮನೆಯ ಒಳಗಿನ ಭುವನೇಶ್ವರಿ ದೇವಾಲಯದಲ್ಲಿ ಯದುವೀರ್ ಪೂಜೆ
    – ಪೂಜೆ ನಂತರ ಮೆರವಣಿಗೆ ಮೂಲಕ ಯದುವೀರ್ ಅರಮನೆಗೆ ವಾಪಸ್
    – ಅಲ್ಲಿಗೆ ಖಾಸಗಿ ದರ್ಬಾರ್ ಮುಕ್ತಾಯ.
    – ಮಧ್ಯಾಹ್ನ 2.30 ರಿಂದ 3.16 ರ ಕುಂಭ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ.
    – 3.40 ರಿಂದ 4.10 ರ ಲಗ್ನದಲ್ಲಿ ವಿಜಯದಶಮಿಯ ಮೆರವಣಿಗೆಗೆ ಪುಷ್ಪಾರ್ಚನೆ.
    – ಮೆರವಣಿಗೆ ಮುಗಿದ ಮೇಲೆ 7ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಆರಂಭ.

    ಇಂದು ಶಸ್ತ್ರ ಸಹಿತ ಪೊಲೀಸ್ ಸಿಬ್ಬಂದಿಗಳು, ಗಜಪಡೆ ಹಾಗೂ ಅಶ್ವಪಡೆಗಳು ಕೊನೆ ಹಂತದ ತಾಲೀಮಿನಿಲ್ಲಿ ಭಾಗಿಯಾಗಿದ್ದವು. ಆನೆಗಳಿಗೆ ಪುಷ್ಪರ್ಚನೆ ಮಾಡಿ ಗೌರವ ವಂದನೆ ಸ್ವೀಕರಿಸಿದ ನಗರ ಪೊಲೀಸ್ ಆಯುಕ್ತರು, ಶುಕ್ರವಾರ ನಡೆಯಲಿರುವ ಜಂಬೂಸವಾರಿಗೆ ಎಲ್ಲ ಸಿದ್ಧತೆ ನಡೆದಿದೆ. ಯಶಸ್ವಿ ಜಂಬೂಸವಾರಿಗೆ ಪೊಲೀಸ್ ಇಲಾಖೆ ಸಜ್ಜಾಗಿದೆ. ಜಂಬೂಸವಾರಿ ಸಮಯದಲ್ಲಿ ಪಾರಂಪರಿಕ ಹಳೆ ಕಟ್ಟಡಗಳ ಮೇಲೆ ಹತ್ತಬಾರದು ಅಂತ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸೂಚನೆ ನೀಡಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದ್ದಾರೆ.

    ಜಂಬೂಸವಾರಿಯಲ್ಲಿ ಗಮನ ಸೆಳೆಯುವ ಸ್ತಬ್ಧ ಚಿತ್ರಗಳಿಗೆ ಕೊನೆ ಹಂತದ ಸ್ಪರ್ಶ ನೀಡಲಾಗುತ್ತಿದೆ. ಈ ಬಾರಿ 42 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಭಾಗಿಯಾಗುತ್ತಿವೆ. 30 ಜಿಲ್ಲೆಗಳ ಜೊತೆ 12 ಇಲಾಖೆಯ ಸ್ತಬ್ಧ ಚಿತ್ರಗಳು. ಭಿನ್ನ ವಿಭಿನ್ನ ಸಂದೇಶ ಸಾರುತ್ತಿದ್ದು ಈ ಬಾರಿ ಜನರಿಗೆ ಸ್ತಬ್ಧ ಚಿತ್ರಗಳು ಮುದ ನೀಡಲಿದೆ ಎಂದು ಹಾವೇರಿ ಸ್ತಬ್ಧ ಚಿತ್ರ ಅಧಿಕಾರಿ ಪ್ರಕಾಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv