Tag: ಛಾವಾ

  • ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ನನಗೆ ವಯಸ್ಸು 29 ಆಗ್ತಿದೆ: ಬರ್ತ್‌ಡೇ ಆಚರಿಸುವ ಸಂಭ್ರಮ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅನಿಮಲ್, ಪುಷ್ಪ 2, ಛಾವಾ ಈ 3 ಚಿತ್ರಗಳು ಬ್ಯಾಕ್ ಟು ಬ್ಯಾಕ್ ಸಕ್ಸಸ್ ಆದ ಖುಷಿಯಲ್ಲಿದ್ದಾರೆ. ಇದರ ನಡುವೆ ನಟಿಯ ಬರ್ತ್‌ಡೇ ಆಚರಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹುಟ್ಟುಹಬ್ಬದ ಬಗ್ಗೆ ಉತ್ಸುಕರಾಗಿರೋ ನಟಿ, ಇದೀಗ ನನಗೆ 29 ವರ್ಷ ಆಗ್ತಿದೆ ಎಂದರೆ ನಂಬೋಕೆ ಆಗ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಗೋಲ್ಡ್ ರಾಣಿಗೆ ಮತ್ತೆ ಶಾಕ್ ಕೊಟ್ಟ ಪತಿ – ವಿಚ್ಛೇದನಕ್ಕೆ ಅರ್ಜಿ

    ನನ್ನ ಹುಟ್ಟುಹಬ್ಬದ ತಿಂಗಳು ಬಂದಿದೆ. ನಾನು ತುಂಬಾ ಎಕ್ಸೈಟ್ ಆಗಿದ್ದೇನೆ. ವಯಸ್ಸು ಆದಂತೆಲ್ಲ ನಿಮಗೆ ಹುಟ್ಟುಹಬ್ಬ ಆಚರಣೆ ಮಾಡುವ ಆಸಕ್ತಿ ಕಡಿಮೆ ಆಗುತ್ತದೆ ಎಂದು ಕೇಳಿದ್ದೇನೆ. ಆದರೆ ನನ್ನ ವಿಚಾರದಲ್ಲಿ ಹಾಗಾಗಿಲ್ಲ. ವಯಸ್ಸು ಜಾಸ್ತಿ ಆದಂತೆಲ್ಲ ನನಗೆ ಬರ್ತ್‌ಡೇ ಆಚರಣೆ ಮಾಡುವ ಉತ್ಸಾಹ ಜಾಸ್ತಿ ಆಗುತ್ತಿದೆ ಎಂದು ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಏ.16ಕ್ಕೆ ಕಾದಿದೆ ಕಿಚ್ಚನಿಂದ ಬಿಗ್‌ ಸರ್ಪ್ರೈಸ್-‌ ಸುದೀಪ್‌ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್‌ ಫಿದಾ

    ನಾನು ಈಗ 29ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂದು ನಂಬೋಕೆ ಆಗುತ್ತಿಲ್ಲ. ಖುಷಿಯಾಗಿ, ಆರೋಗ್ಯಕರವಾಗಿ, ಸುರಕ್ಷಿತವಾಗಿ ಇನ್ನೊಂದು ವರ್ಷ ಕಳೆದಿದ್ದೇನೆ. ಇದನ್ನು ಆಚರಿಸುವ ಸಮಯ ಎಂದು ರಶ್ಮಿಕಾ ಮಂದಣ್ಣ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಈಗಾಗಲೇ ನಟಿಗೆ ಬರ್ತ್‌ಡೇ (Birthday) ವಿಶ್ಸ್ ತಿಳಿಸಲು ಪ್ರಾರಂಭಿಸಿದ್ದಾರೆ.

    ಅಂದಹಾಗೆ, ಇದೇ ಏ.5ರಂದು ರಶ್ಮಿಕಾ ಮಂದಣ್ಣ 29ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಈಗಿನಿಂದಲೇ ಅಭಿಮಾನಿಗಳ ಕಡೆಯಿಂದ ನಟಿಯ ಬರ್ತ್‌ಡೇ ಸೆಲೆಬ್ರೇಶನ್‌ಗೆ ಜೋರಾಗಿ ತಯಾರಿ ನಡೆಯುತ್ತಿದೆ.

  • ಮಾ.27ಕ್ಕೆ ಸಂಸತ್ತಿನಲ್ಲಿ `ಛಾವಾ’ ಸಿನಿಮಾ ವೀಕ್ಷಿಸಲಿರುವ ಪ್ರಧಾನಿ ಮೋದಿ

    ಮಾ.27ಕ್ಕೆ ಸಂಸತ್ತಿನಲ್ಲಿ `ಛಾವಾ’ ಸಿನಿಮಾ ವೀಕ್ಷಿಸಲಿರುವ ಪ್ರಧಾನಿ ಮೋದಿ

    ನವದೆಹಲಿ: ಇದೇ ಮಾ.27 ರಂದು ಸಂಸತ್ತಿನಲ್ಲಿ ಪ್ರಧಾನಿ ಮೋದಿ (PM Modi) ಸೇರಿದಂತೆ ಕೇಂದ್ರ ಸಚಿವರು ವಿಕ್ಕಿ ಕೌಶಲ್ (Vicky Kaushal)  ನಟನೆಯ `ಛಾವಾ’ (Chhaava) ಸಿನಿಮಾ ವೀಕ್ಷಿಸಲಿದ್ದಾರೆ.

    ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ (Sambhaji Maharaj) ಜೀವನಾಧಾರಿತ `ಛಾವಾ’ ಸಿನಿಮಾವನ್ನು ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿರುವ ಬಾಲಯೋಗಿ ಸಭಾಂಗಣದಲ್ಲಿ ಪ್ರದರ್ಶಿಸಲಾಗುವುದು ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ಬಜೆಟ್‌ 5,259 ಕೋಟಿಗೆ ಹೆಚ್ಚಳ – ದೇವಾಲಯದಲ್ಲಿ ಅಡುಗೆ ಕೆಲಸಗಾರರ ವೇತನ ಹೆಚ್ಚಳಕ್ಕೆ ನಿರ್ಧಾರ

    ಛಾವಾ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್  (Amit Shah) ಸೇರಿದಂತೆ ಎಲ್ಲಾ ಕೇಂದ್ರ ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೊತೆಗೆ ಛಾವಾ ಸಿನಿಮಾದಲ್ಲಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಕ್ಕಿ ಕೌಶಲ್ ಹಾಗೂ ಇಡೀ ಸಿನಿಮಾ ತಂಡವು ಹಾಜರಾಗುವ ನಿರೀಕ್ಷೆಯಿದೆ.

    ಇದೇ ಫೆ.14 ರಂದು ಲಕ್ಷ್ಮಣ್‌ ಉಟೇಕರ್ (Laxman Utekar) ನಿರ್ದೇಶನದ ಛಾವಾ ಸಿನಿಮಾ ದೇಶ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಅವರ ಧೈರ್ಯ ಮತ್ತು ಔರಂಗಜೇಬನಿಂದಾಗಿ ಅನುಭವಿಸಿದ ಹಿಂಸೆಯನ್ನು ವಿವರಿಸುತ್ತದೆ.

    ದೇಶ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಈ ಸಿನಿಮಾ ಕುರಿತು ಕಳೆದ ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ (Akhila Bharatiya Marathi Sahitya Sammelana) ಭಾಷಣದಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಇದನ್ನೂ ಓದಿ:ಹೊಸ ವಾಹನ ಖರೀದಿದಾರರಿಗೆ ಶಾಕ್ – ಏಪ್ರಿಲ್‌ನಿಂದ ಆಟೋ, ಕಾರು, ಬೈಕ್ ದರ ಏರಿಕೆ

  • ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?

    ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಬೇಡಿಕೆಯಲ್ಲಿದ್ದಾರೆ. ಸದ್ಯ ‘ಛಾವಾ’ (Chhavva) ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ, ಪುಟ್ಟ ತಂಗಿ ಶಿಮನ್ ಮಂದಣ್ಣ ಬಗ್ಗೆ ನಟಿ ಮಾತನಾಡಿದ್ದಾರೆ. ನನ್ನ ತಂಗಿಗೆ ಐಷಾರಾಮಿ ಸವಲತ್ತು ಸಿಗಬಾರದು ಎಂದು ನಟಿ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ.

    ರಶ್ಮಿಕಾ ಮಂದಣ್ಣ ಮಾತನಾಡಿ, ನನ್ನ ಮತ್ತು ತಂಗಿ ಮಧ್ಯೆ 16 ವರ್ಷಗಳ ಅಂತರ ಇದೆ. ಇದು ನಿನ್ನ ಜೀವನ. ನಿನ್ನ ಜೀವನದಲ್ಲಿ ನಮ್ಮನ್ನು ಸೇರಿಸಿಕೊಳ್ಳಬೇಡ ಎಂದು ನನ್ನ ಪೋಷಕರು ಹೇಳಿದ್ದರು. ನನ್ನ ತಂಗಿ ಕೇಳಿದ್ದನ್ನು ಪಡೆದುಕೊಳ್ಳಬಹುದು. ಬಾಲ್ಯದಲ್ಲಿ ನಾನು ಹೇಗೆ ಇದ್ದೆನೋ ಅದೇ ವಾತಾವರಣ ಅವಳಿಗೂ ಸಿಗಬೇಕು. ಆ ವಾತಾವರಣ ಸಿಕ್ಕಿದ್ದರಿಂದಲೇ ನಾನು ಈಗ ಹೀಗೆ ಇದ್ದೇನೆ. ನಾನು ಭದ್ರತೆ, ಕಂಫರ್ಟ್ ಕೊಡಬಹುದು. ಆದರೆ ಐಷಾರಾಮಿ ಸವಲತ್ತುಗಳನ್ನು ಕೊಡುವುದಿಲ್ಲ. ಅವಳು ಕೂಡ ಕಷ್ಟಪಟ್ಟು ಮುಂದೆ ಬರಬೇಕು ಎಂಬರ್ಥದಲ್ಲಿ ನಟಿ ಮಾತನಾಡಿದ್ದಾರೆ.

    ಸದ್ಯ ನಟಿ ‘ಪುಷ್ಪ 2’ (Pushpa 2) ಮತ್ತು ‘ಛಾವಾ’ ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ರಶ್ಮಿಕಾ ಮುಟ್ಟಿದೆಲ್ಲಾ ಚಿನ್ನ ಆಗುತ್ತಿದೆ. ಸಾಲು ಸಾಲು ಸಿನಿಮಾಗಳು ಸಕ್ಸಸ್ ಕಾಣುತ್ತಿದೆ. ಹಾಗಾಗಿ ಸಹಜವಾಗಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

    ಇನ್ನೂ ಕುಬೇರ, ರೈನ್‌ಬೋ, ದಿ ಗರ್ಲ್‌ಫ್ರೆಂಡ್, ಅನಿಮಲ್ 2‌, ಪುಷ್ಪ ಪಾರ್ಟ್‌ 3 ಸೇರಿದಂತೆ ಹಲವು ಚಿತ್ರಗಳು ನಟಿಯ ಕೈಯಲ್ಲಿವೆ.

  • ನಾನೊಬ್ಬರಿಗೆ ಪಾರ್ಟ್ನರ್ ಆಗಿದ್ದೇನೆ: ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ

    ನಾನೊಬ್ಬರಿಗೆ ಪಾರ್ಟ್ನರ್ ಆಗಿದ್ದೇನೆ: ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದ್ಯ ‘ಛಾವಾ’ (Chhaava) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ತಾವು ರಿಲೇಷನ್‌ಶಿಪ್‌ನಲ್ಲಿ ಸುಳಿವು ನೀಡಿದ್ದಾರೆ. ನಟಿ ಕೊಟ್ಟಿರುವ ಹಿಂಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ಯಶ್ ನನ್ನ ಗೆಳೆಯ – ದುಬೈ ಅಭಿಮಾನಿಗಳ ಮುಂದೆ ಶಾರುಖ್ ಖಾನ್ ಮಾತು

    ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಮಾತನಾಡಿ, ನನಗೆ ನನ್ನ ಮನೆಯೇ ಖುಷಿಯ ಸ್ಥಳ. ಯಶಸ್ಸು ಇಂದು ಬಂದು ಮುಂದೊಂದು ದಿನ ಹೋಗಬಹುದು. ಅದು ಎಂದಿಗೂ ಶಾಶ್ವತವಲ್ಲ. ಎಷ್ಟೇ ಸಿಕ್ಕರೂ ಕೂಡ ನಾನು ನಟಿ ಮಾತ್ರವಲ್ಲದೇ ಮಗಳು, ಸಹೋದರಿ, ಓರ್ವ ಪಾರ್ಟ್ನರ್ ಕೂಡ ಹೌದು ಎಂದು ಹೇಳಿದ್ದಾರೆ. ಎಲ್ಲೂ ಕೂಡ ಸಂಗಾತಿ ಯಾರು ಎಂದು ಹೆಸರನ್ನು ಅವರು ರಿವೀಲ್‌ ಮಾಡಿಲ್ಲ. ಪಾರ್ಟ್ನರ್ ಎಂದು ಪದ ಬಳಸಿದ ರಶ್ಮಿಕಾ, ತಾವು ರಿಲೇಷನ್‌ಶಿಪ್‌ನಲ್ಲಿರೋದಾಗಿ ಅಧಿಕೃತಪಡಿಸಿದರೇ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

    ಇನ್ನೂ ಇನ್ನೂ ಸಾಕಷ್ಟು ವರ್ಷಗಳಿಂದ ರಶ್ಮಿಕಾ ಹೆಸರು ವಿಜಯ್ ದೇವರಕೊಂಡ (Vijay Devarakonda) ಜೊತೆ ತಳುಕು ಹಾಕಿಕೊಂಡಿದೆ. ಆದರೆ ಇದುವರೆಗೂ ಇಬ್ಬರೂ ರಿಲೇಷನ್‌ಶಿಪ್ ಇದ್ದಾರಾ? ಇಲ್ವಾ? ಎಂಬುದರ ಬಗ್ಗೆ ಕ್ಲ್ಯಾರಿಟಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಸಿಗುತ್ತಾ? ಎಂದು ಕಾದುನೋಡಬೇಕಿದೆ.

    ‘ಅನಿಮಲ್’ ಹಾಗೂ ‘ಪುಷ್ಪ 2’ ಸಿನಿಮಾದ ಸಕ್ಸಸ್ ನಂತರ ‘ಛಾವಾ’ ಚಿತ್ರದ ಬಿಡುಗಡೆಗಾಗಿ ಅವರು ಎದುರು ನೋಡುತ್ತಿದ್ದಾರೆ. ಮೊದಲ ಬಾರಿಗೆ ಐತಿಹಾಸಿಕ ಚಿತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಮಹಾರಾಣಿಯ ಪಾತ್ರಕ್ಕೆ ನಟಿ ಜೀವತುಂಬಿದ್ದಾರೆ. ಛಾವಾ ಇದೇ ಫೆ.14ರಂದು ರಿಲೀಸ್ ಆಗಲಿದೆ.

  • ವ್ಹೀಲ್ ಚೇರ್‌ನಲ್ಲಿ ರಶ್ಮಿಕಾ ಮಂದಣ್ಣ- ವಿಡಿಯೋ ವೈರಲ್‌

    ವ್ಹೀಲ್ ಚೇರ್‌ನಲ್ಲಿ ರಶ್ಮಿಕಾ ಮಂದಣ್ಣ- ವಿಡಿಯೋ ವೈರಲ್‌

    ಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಜಿಮ್‌ನಲ್ಲಿ ಕಾಲಿಗೆ ಪೆಟ್ಟಾದ ಹಿನ್ನೆಲೆ ನಡೆಯಲು ಕಷ್ಟಪಡುತ್ತಿರುವ ಸ್ಥಿತಿಯಲ್ಲಿ ಇಂದು (ಜ.22) ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕುಂಟುತ್ತಾ ವ್ಹೀಲ್ ಚೇರ್‌ನಲ್ಲಿ ನಟಿ ಕುಳಿತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.‌ ಇದನ್ನೂ ಓದಿ:BBK 11: ಒಳ್ಳೆಯ ಸಂಗಾತಿ ಸಿಗುತ್ತಾಳೆ- ಮಂಜು ಮದುವೆ ಬಗ್ಗೆ ಭವಿಷ್ಯ ನುಡಿದ ಗುರೂಜಿ

    ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಕುಂಟುತ್ತಾ ಕಾರಿನಿಂದ ಇಳಿದು ವ್ಹೀಲ್ ಚೇರ್‌ನಲ್ಲಿ ಕೂರಲು ಹರಸಾಹಸ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಾಲು ನೋವಿನ ನಡುವೆಯೂ ಒಪ್ಪಿಕೊಂಡಿರುವ ಸಿನಿಮಾ ಕೆಲಸ ಮಾಡಲು ಹೈದರಾಬಾದ್‌ನಿಂದ ಮುಂಬೈಗೆ ಅವರು ತೆರಳಿದ್ದಾರೆ. ‘ಛಾವಾ’ ಸಿನಿಮಾಗೆ ಡಬ್ಬಿಂಗ್ ಮಾಡೋದ್ರಲ್ಲಿ ಅವರು ಬ್ಯುಸಿಯಾಗಿದ್ದಾರೆ. ಅದೇನೇ ಇರಲಿ ಶ್ರೀವಲ್ಲಿ ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.

     

    View this post on Instagram

     

    A post shared by Manav Manglani (@manav.manglani)

    ಇತ್ತೀಚೆಗೆ ಜಿಮ್‌ನಲ್ಲಿ ಕಾಲಿಗೆ ಪೆಟ್ಟಾಗಿರುವ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಜಿಮ್‌ನಲ್ಲಿ ನಾನು ಗಾಯಗೊಂಡಿದ್ದೇನೆ. ಮುಂದಿನ ಕೆಲ ವಾರ ಅಥವಾ ತಿಂಗಳ ಕಾಲ ನಾನು ವಿಶ್ರಾಂತಿಯಲ್ಲಿರುತ್ತೇನೆ. ಚೇತರಿಕೆಯಾಗಲು ಎಷ್ಟು ಸಮಯ ಬೇಕಾಗಬಹುದು ಎನ್ನುವುದು ದೇವರಿಗೆ ಮಾತ್ರ ತಿಳಿದಿದೆ. ನನ್ನ ಕಾಲಿನ ನೋವು ಗುಣವಾದ ಬಳಿಕ ನಾನು ಥಾಮ, ಸಿಕಂದರ್ ಮತ್ತು ಕುಬೇರ ಸೆಟ್‌ಗೆ ಮರಳುತ್ತೇನೆ. ಈ ವಿಳಂಬಕ್ಕೆ ಕ್ಷಮೆ ಕೋರುತ್ತೇನೆ ಎಂದಿದ್ದರು.

    ಇನ್ನೂ ಸಿಖಂದರ್, ದಿ ಗರ್ಲ್‌ಫ್ರೆಂಡ್, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ.