Tag: ಛಾಯಾಗ್ರಾಹಕ

  • ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಇನ್ನಿಲ್ಲ

    ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಇನ್ನಿಲ್ಲ

    ಬೆಂಗಳೂರು: ಕನ್ನಡ ಸಿನಿಮಾ ಪತ್ರಿಕೋದ್ಯಮದ ಹಿರಿಯ ಛಾಯಾಗ್ರಾಹಕ ಡಿಸಿ ನಾಗೇಶ್ (66) ನಿಧನರಾಗಿದ್ದಾರೆ.

    ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಡಿ.ಸಿ. ನಾಗೇಶ್ ಅವರು ಇಂದು ಬೆಳಗ್ಗೆ 5.30ಕ್ಕೆ ವಿಧಿವಶರಾಗಿದ್ದಾರೆ. ಸುಮಾರು 40ಕ್ಕಿಂತಲೂ ಹೆಚ್ಚು ವರ್ಷಗಳಿಂದ ಡಿ.ಸಿ.ನಾಗೇಶ್ ಅವರು ಸಿನಿಮಾ/ಸಾಂಸ್ಕೃತಿಕ ವಿಭಾಗದ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆಯನ್ನು ಸಮರ್ಥಿಸಲು ಬಂದಿಲ್ಲ: ಕಂಗನಾ ರಣಾವತ್

    ಸಿನಿಮಾ ಪತ್ರಿಕಾ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಡಿ.ಸಿ.ನಾಗೇಶ್ ಅವರ ನಿಧನಕ್ಕೆ ಇದೀಗ ಸಂಸದೆ ಸುಮಲತಾ ಸೇರಿದಂತೆ ಚಿತ್ರರಂಗದ ಕಲಾವಿದರು ಸೇರಿದಂತೆ ನಾಡಿದ ಪತ್ರಕರ್ತರು ಸಹ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ, ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ: ಶಿವಣ್ಣ

    ಇಂದು ಸಂಜೆ 4 ಗಂಟೆ ಸುಮಾರಿಗೆ ವಿಲ್ಸನ್ ಗಾರ್ಡನ್ ಕ್ರಿಮಿಟೋರಿಯಂನಲ್ಲಿ ಡಿ.ಸಿ.ನಾಗೇಶ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೀಗ ನಾಗೇಶ್ ಅವರ ಅಂತಿಮ ದರ್ಶನ ಪಡೆಯಲು ಸಿನಿಮಾ ಗಣ್ಯರ ದಂಡೇ ಹರಿದು ಬರುತ್ತಿದೆ.

  • ಸಾಧನೆಯ ಹಾದಿಯಲ್ಲಿ ಛಾಯಾಗ್ರಾಹಕ ಸುರೇಶ್ ಬಾಬು..!

    ಸಾಧನೆಯ ಹಾದಿಯಲ್ಲಿ ಛಾಯಾಗ್ರಾಹಕ ಸುರೇಶ್ ಬಾಬು..!

    ಸುರೇಶ್ ಬಾಬು (ಅರುಣ್ ಸುರೇಶ್), ಚಂದನವನದಲ್ಲಿ ಹೆಸರು ಮಾಡುತ್ತಿರುವ ಪ್ರತಿಭಾವಂತ ಛಾಯಾಗ್ರಾಹಕ. ಜಸ್ಟ್ ಲವ್ ಸಿನಿಮಾ ಮೂಲಕ ಸ್ವತಂತ್ರ ಛಾಯಾಗ್ರಾಹಕನಾಗಿ ಗುರುತಿಸಿಕೊಂಡ ಸುರೇಶ್ ಬಾಬು ಕೈ ತುಂಬಾ ಈಗ ಅವಕಾಶಗಳ ಸಾಲು. ತಂತ್ರಜ್ಞನಾಗಿ ಚಿತ್ರರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಹೊಸತನದ ಹಾದಿಯಲ್ಲಿ ಸಾಗುತ್ತಿರುವ ಸುರೇಶ್ ಬಾಬು ಆರಂಭಿಕ ದಿನಗಳು ಶುರುವಾಗಿದ್ದೇ ಒಂದು ರೋಚಕ ಕಥೆ.

    ಹೌದು, ಸುರೇಶ್ ಬಾಬು ಆರಂಭಿಕ ಜೀವನ ಶುರುವಾಗಿದ್ದು ಹತ್ತೊಂಬತ್ತು ವರ್ಷಗಳ ಹಿಂದೆ ಚಿತ್ರರಂಗದಲ್ಲಿ ಜನರೇಟರ್ ಕ್ಲೀನರ್ ಆಗಿ. ಅಂದು ಊಟ, ಸಂಬಳ ಸಿಕ್ಕಿದ್ರೆ ಸಾಕು ಎಂಬ ಪರಿಸ್ಥಿತಿಯಲ್ಲಿದ್ದ ಸುರೇಶ್ ಬಾಬು ಇಂದು ಛಾಯಾಗ್ರಾಹಕನಾಗಿ ಹೆಸರು ಮಾಡುವುದರ ಜೊತೆಗೆ ಒಂದಿಷ್ಟು ಪ್ರತಿಭೆಗಳಿಗೆ ಕೆಲಸ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಇದೆಲ್ಲದರ ಹಿಂದೆ ಇದ್ದಿದ್ದು ಅವರ ಪರಿಶ್ರಮ ಹಾಗೂ ಛಲ. ಜನರೇಟರ್ ಕ್ಲೀನಿಂಗ್ ಕೆಲಸ ಮಾಡುತ್ತಲೇ ಕ್ಯಾಮೆರಾ ಸೆಳೆತಕ್ಕೆ ಒಳಗಾಗಿ ಕ್ಯಾಮೆರಾ ನಿರ್ವಹಣೆಯ ಒಳ ಹೊರಗನ್ನು ಕಲಿತುಕೊಂಡ ಸುರೇಶ್ ಬಾಬು ನಂತರ ಸಿನಿಮಾ, ಧಾರಾವಾಹಿಗಳಲ್ಲಿ ಲೈಟ್ ಬಾಯ್ ಆಗಿ, ಕ್ಯಾಮೆರಾ ಅಸಿಸ್ಟೆಂಟ್ ಆಗಿ ದುಡಿದಿದ್ದಾರೆ.

    ಕ್ಯಾಮೆರಾ ನಿರ್ವಹಣೆ ಕುರಿತಂತೆ ಕೆಲವೊಂದನ್ನು ನೋಡಿ, ಕೆಲವೊಂದನ್ನು ಬೇರೆಯವರಿಂದ ಕೇಳಿ ಕಲಿಯುತ್ತಾ ಇಂದು ಸಿನಿಮಾ ಛಾಯಾಗ್ರಾಹಕನಾಗಿ ಬೆಳೆದಿದ್ದಾರೆ. ಜೆಕೆ ಅಭಿನಯದ ‘ಜಸ್ಟ್ ಲವ್’ ಸಿನಿಮಾ ಮೂಲಕ ಛಾಯಾಗ್ರಾಹಕನಾಗಿ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟ ಸುರೇಶ್ ಬಾಬು, ಚಂದ್ರಿಕಾ, ವಜ್ರ, ದೇವರಂತ ಮನುಷ್ಯ, ಗಿರ್ ಗಿಟ್ಲೆ ಸಿನಿಮಾಗಳಿಗೆ ಕ್ಯಾಮೆರಾ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಸದ್ಯ ವಾವ್ ಹಾಗೂ ನಕ್ಷೆ ಸಿನಿಮಾಗಳನ್ನು ಸೆರೆಹಿಡಿಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಇವುಗಳ ಜೊತೆ ಹಲವು ಸಿನಿಮಾಗಳ ಆಫರ್ ಗಳೂ ಸುರೇಶ್ ಬಾಬು ಅವರನ್ನರಸಿ ಬರುತ್ತಿವೆ.

    19 ವರ್ಷಗಳ ಪಯಣದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಸುರೇಶ್ ಬಾಬು ಇಂದು ತಮ್ಮದೇ ಆದ ಸಿನಿಮಾ ಕ್ಯಾಮೆರಾ, ಯೂನಿಟ್‍ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ `ಬಾನವಿ ಕ್ಯಾಪ್ಚರ್’ ಎಂಬ ಸಂಸ್ಥೆಯನ್ನು ತೆರೆದಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಅಪಾರ ಆಸಕ್ತಿ ಇಟ್ಟುಕೊಂಡಿರುವ ಸುರೇಶ್ ಬಾಬು ಪ್ರೊಡಕ್ಷನ್ ಹೌಸ್ ತೆರೆಯುವ ಯೋಜನೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟಿರುವ ಇವರು ಪಬ್ಲಿಕ್ ಟಾಯ್ಲೆಟ್ ಎಂಬ ಕಿರುಚಿತ್ರ ನಿರ್ಮಾಣವನ್ನೂ ಮಾಡಿದ್ದಾರೆ. ಹೀಗೆ ಸ್ವಂತ ಪರಿಶ್ರಮ, ಛಲ, ಸ್ನೇಹಿತರು, ಕುಟುಂಬಸ್ಥರ ಸಹಕಾರದಿಂದ ಸಾಧನೆಯ ಹಾದಿಯಲ್ಲಿ ಗೆಲುವಿನ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದಾರೆ ಛಾಯಾಗ್ರಾಹಕ ಸುರೇಶ್ ಬಾಬು.

  • ಹೊಸ, ವಿಭಿನ್ನ ಕ್ಯಾಲೆಂಡರ್ ಹೊರ ತಂದ ಪೈಲ್ವಾನ್ ಕೃಷ್ಣ

    ಹೊಸ, ವಿಭಿನ್ನ ಕ್ಯಾಲೆಂಡರ್ ಹೊರ ತಂದ ಪೈಲ್ವಾನ್ ಕೃಷ್ಣ

    – ಹೊಸ ಕ್ಯಾಲೆಂಡರ್ ನಲ್ಲಿ ಏನಿದೆ?

    ಬೆಂಗಳೂರು: ಹೊಸ ವರ್ಷಕ್ಕೆ ನಿರ್ದೇಶಕ ಕೃಷ್ಣವರು 2021ರ ಕ್ಯಾಲೆಂಡರ್ ವಿಭಿನ್ನವಾರಿಗಬೇಕು ಎಂಬ ದೃಷ್ಟಿಯಿಂದ ಕ್ಯಾಲೆಂಡರ್‍ವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಕ್ಯಾಲೆಂಡರ್ ಹೊಂದಿರುವ ವಿಶೇಷತೆಯಿಂದ ಸುದ್ದಿಯಲ್ಲಿದೆ.

    ಕ್ಯಾಲೆಂಡರ್ ಎಂದರೆ ಫೋಟೋ, ಚಿತ್ತಾರಗಳು ತುಂಬಿರುತ್ತವೆ. ಆದರೆ ಈ ಕ್ಯಾಲೆಂಡರ್ ಸ್ಫೂರ್ತಿದಾಯಕ ಕ್ಯಾಲೆಂಡರ್ ಆಗಿದೆ. ವಿಕಲಚೇತನರ ವಿಶಿಷ್ಟ ಸಾಧನೆಯನ್ನು ಪರಿಚಯಿಸುವ ಉತ್ತಮವಾದ ಒಂದು ಆಲೋಚನೆಯಿಂದ ಈ ಕ್ಯಾಲೆಂಡರ್ ರೂಪಿಸಿದ್ದಾರೆ.

    ಬೇರೆ ಬೇರೆ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ವಿಕಲಚೇತನ ಕ್ರೀಡಾಪಟುಗಳು, ಮಾಡೆಲ್ ಅವರ ಕಿರುಪರಿಚಯವನ್ನು 2021ರ ಕ್ಯಾಲೆಂಡರ್ ಒಳಗೊಂಡಿದೆ. ಇದರಿಂದ ತಿಂಗಳಿಗೆ ಒಬ್ಬೊಬ್ಬರ ಕಿರುಪರಿಚಯ ಹಾಗೂ ಅವರ ಸಾಧನೆಗಳ ಕುರಿತಾಗಿ ತಿಳಿದರೆ ಅವರೆಗೆ ಸ್ಫೂರ್ತಿ ನೀಡುತ್ತದೆ ಎಂಬ ಉತ್ತಮ ದೃಷ್ಟಿಕೋನದಿಂದ ಈ ಕ್ಯಾಲೆಂಡರ್ ನಿರ್ಮಾಣವಾಗಿದೆ.

    ಬ್ಲೇಡ್ ರನ್ನರ್ ಶಾಲಿನಿ ಸರಸ್ವತಿ, ಪ್ಯಾರಾ ಒಲಂಪಿಕ್ ಶರತ್ ಗಾಯಾಕ್ವಾಡ್, ಅಡ್ವೆಂಚರ್ ಟೂರಿಸ್ಟ್, ಮಂಜುನಾಥ್ ಚಿಕ್ಕಯ್ಯ, ಫಿಟ್ನೆಸ್ ಶ್ರೀನಿವಾಸ್ ಗೌಡ, ಈಜುಪಟು ಮತ್ತು ಡಾನ್ಸ್ರ್ ಜಯಂತ್, ಕ್ರಿಕೆಟರ್ಸ್ ಅಶ್ವಿನಿ ಸಾಗರ್, ಬಾಸ್ಕೆಟ್ ಬಾಲ್ ಪ್ಲೇಯರ್ ಗೌಸಿಯಾ ತಾಜ್ ಸೆರಿಂದೆ ಇನ್ನು ಅನೇಕರ ಸಾಧನೆಯ ಕುರಿತಾಗಿ ಈ ಕ್ಯಾಲೆಂಡರ್ ಒಳಗೊಂಡಿದೆ.

    ಇಂಥಹ ಒಂದು ಉತ್ತಮ ಆಲೋಚನೆಯೊಂದಿಗೆ ಕ್ಯಾಲೆಂಡರ್ ಅನ್ನು ಇನ್ವೋಕ್ ಫೌಂಡೇಶನ್ ಮಾಡಿದೆ. ಈ ಸಂಸ್ಥೆಯ ಸಾಗರ್ ಗೆ ಅಪಘಾತದಲ್ಲಿ ಬಲವಾದ ಪೆಟ್ಟ ಬಿದ್ದಿತ್ತು. ಈ ಹಿನ್ನೆಯಲ್ಲಿ ಸಂಸ್ಥೆಯು ಹುಟ್ಟಿಕೊಂಡಿತ್ತು. ಈ ಸಂಸ್ಥೆಯಿಂದ ಈ ಕ್ಯಾಲೆಂಡರ್‍ ಛಾಯಾಗ್ರಾಹಕ ಮತ್ತು ನಿರ್ದೇಶಕ ಕೃಷ್ಣ ಬಿಡುಗಡೆ ಮಾಡಿದ್ದಾರೆ. ಸಾಗರ್ ಪರಿಶ್ರಮದ ಕುರಿತಾಗಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

  • ಛಾಯಾಗ್ರಾಹಕ ಪುನೀಕ್ ಶೆಟ್ಟಿಯ ಕೈಚಳಕ – ನವದುರ್ಗೆಯಾದ ಬಂಟ್ವಾಳದ ಬಾಲಕಿ

    ಛಾಯಾಗ್ರಾಹಕ ಪುನೀಕ್ ಶೆಟ್ಟಿಯ ಕೈಚಳಕ – ನವದುರ್ಗೆಯಾದ ಬಂಟ್ವಾಳದ ಬಾಲಕಿ

    ಮಂಗಳೂರು: ನವರಾತ್ರಿ ಅಥವಾ ದಸರಾ ಬಂತೆಂದರೆ ಸಾಕು, ನಾನಾ ಬಗೆಯ ಸಂಭ್ರಮಗಳು ಕಳೆಗಟ್ಟುತ್ತವೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ವಿಶೇಷ ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ವಿವಿಧ ಬಗೆಯ ವೇಷಗಳಲ್ಲಿ ಮಿಂಚುವ ಟ್ರೆಂಡ್‍ನ್ನು ಕೂಡ ನಾವು ನೋಡುತ್ತಿದ್ದೇವೆ. ಇದೀಗ ಮಂಗಳೂರಿನಲ್ಲಿ ನವರಾತ್ರಿ ಸಂದರ್ಭದಲ್ಲಿ ಇಂತಹುದೇ ಒಂದು ಪ್ರಯತ್ನ ನಡೆದಿದೆ.

    ನವರಾತ್ರಿಗೆ ನವವಿಧ ವಸ್ತ್ರ ವೈವಿಧ್ಯ, ಪೂಜೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ನವದುರ್ಗೆಯ ರೂಪದಲ್ಲೇ ದೇವತೆ ಪ್ರತ್ಯಕ್ಷವಾದರೆ ಅದರ ಸೊಬಗು ಹೇಗಿರಬಹುದು? ಇಂತಹ ಒಂದು ಪರಿಕಲ್ಪನೆ ಮಂಗಳೂರಿನಲ್ಲಿ ಸಾಕಾರಗೊಂಡಿದೆ. ಇದಕ್ಕೆ ಸಾಕಾರ ನೀಡಿರುವುದು ಬಾಲಕಿ ವಿಷ್ಣುಪಿಯಾ ಮತ್ತು ಛಾಯಾಗ್ರಾಹಕ ಪುನೀಕ್ ಶೆಟ್ಟಿ.

    ವಿಷ್ಣುಪ್ರಿಯಾ ಎನ್ನುವ ಹೆಸರು ಕೇಳಿದೊಡನೆ ಆ ಮಗು ಭಗವಾನ್ ವಿಷ್ಣು ಆರಾಧಕರ ಕುಟುಂಬದಿಂದ ಬಂದಿರಬೇಕು ಎನ್ನುವ ಕಲ್ಪನೆ ಬರಬಹುದು. ಆದರೆ ಈ ಮಗುವಿಗೆ ವಿಷ್ಣುಪಿಯ ಎನ್ನುವ ಹೆಸರು ಬರಲು ಕಾರಣ ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್ ಎಂದರೆ ನೀವು ನಂಬಲೇಬೇಕು.

    ವಿಷ್ಣುವರ್ಧನ್ ಅವರ ಯಜಮಾನ ಸಿನಿಮಾ ನೋಡಿ ಅದೇ ಹೆಸರಿನ “ಯಜಮಾನ ಉಪ್ಪಿನಕಾಯಿ” ಸಂಸ್ಥೆ ಮಾಡಿ ಹೆಸರಾದ ಬಂಟ್ವಾಳದ ವರದರಾಯ ಪೈಯವರ ಕತೆ ನಿಮಗೆ ತಿಳಿದಿರಬಹುದು. ಅವರ ಪುತ್ರಿಯೇ ಈ ವಿಷ್ಣುಪ್ರಿಯಾ. ಮೂಡುಬಿದ್ರೆಯ ರೋಟರಿ ಇಂಗ್ಲಿಷ್ ಮೀಡಿಯಂ ಸೆಂಟ್ರಲ್ ಸ್ಕೂಲ್‍ನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯಗಿರುವ ಈಕೆ ಕೊಯಂಬತ್ತೂರಿನಲ್ಲಿ ನಡೆದ ಸ್ಪಲ್ ‘ಬಿ’ ಎನ್ನುವ ರಾಷ್ಟ್ರ ಮಟ್ಟದ ಮಕ್ಕಳ ಸ್ಪರ್ಧೆಯಲ್ಲಿ 47ನೇ ರ್ಯಾಂಕ್ ಪಡೆದಿದ್ದಾಳೆ. ವೆಂಕಟಕೃಷ್ಣ ಭಟ್ ಅವರ ಬಳಿ ಕರ್ನಾಟಕ ಸಂಗೀತ ಮತ್ತು ಬಾಲಕೃಷ್ಣ ಮಂಜೇಶ್ವರ ಅವರಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿರುವ ವಿಷ್ಣುಪ್ರಿಯಾ ತಂದೆಯ ಬಳಿಯಲ್ಲೇ ಇಲೆಕ್ಟ್ರಿಕಲ್ ಆರ್ಗನ್ ಕಲಿಯುತ್ತಿದ್ದಾಳೆ.

    ಇಂಥ ಮುದ್ದು ಕಂದನನ್ನು ಇರಿಸಿಕೊಂಡು ನವದುರ್ಗೆಯರ ರೂಪ ನೀಡಿ ನೋಡುವ ಆಕಾಂಕ್ಷೆ ಮಾತಾಪಿತರಲ್ಲಿ ಮೂಡಿದೆ. ಶ್ರದ್ದಾ ಅಶ್ವಿನ್ ಪ್ರಭು ಅವರು ನಡೆಸಿದ ನವದುರ್ಗೆಯರ ಮೇಕಪ್‍ಗೆ ಸ್ಥಿರಚಿತ್ರ ರೂಪ ನೀಡಲು ಮಂಗಳೂರಿನ ಖ್ಯಾತ ಛಾಯಾಗ್ರಾಹಕ ಪುನೀಕ್ ಶೆಟ್ಟಿ ಕೈ ಜೋಡಿಸಿದ್ದಾರೆ. ಸಿನಿಮಾ ನಿರ್ದೇಶಕರು ಕೂಡ ಆಗಿರುವ ಪುನೀಕ್ ಶೆಟ್ಟಿ, ಎರಡೇ ದಿನದಲ್ಲಿ ನವದುರ್ಗೆಯರ ರೂಪದಲ್ಲಿ ಮಗುವನ್ನು ಫೋಟೋಗಳಲ್ಲಿ ಚಿತ್ರಿಸಿದ್ದಾರೆ.

  • ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ಕೊಪ್ಪಳ: ತುಂಗಭದ್ರಾ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಾದ್ಯಂತ ಹರಿದಿರುವ ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೇರಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಸೆಳೆಯುತ್ತಿದೆ.

    ಗಂಗಾವತಿ ತಾಲೂಕಿನಾದ್ಯಂತ ಹರಿದಿರುವ ತುಂಗಭದ್ರಾ ನದಿಯ ದೃಶ್ಯಗಳು ಛಾಯಾಗ್ರಾಹಕ ಚರಣ್ ಬೊಲೆಂಪಲ್ಲಿ ಅವರು ತಮ್ಮ ಡ್ರೋನ್ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಿಡಿದಿದ್ದಾರೆ. ಗಂಗಾವತಿಯ ಚಿಕ್ಕ ಜಂತಕಲ್ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯು ನೀರಿನಲ್ಲಿ ಮುಳುಗಿರುವ ದೃಶ್ಯ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಕಳೆದ ವರ್ಷವಷ್ಟೇ ಉದ್ಘಾಟನೆ ಆದ ತಾಲೂಕಿನ ಬುಕ್ಕಸಾಗರ-ಕಡೆಬಾಗಿಲು ಬಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯ ದೃಶ್ಯ ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ.

    ಜಿಲ್ಲೆಯ ಜನರು ಇದು ನಮ್ಮ ಸೇತುವೆನಾ ಎಂದುಕೊಳ್ಳುವಂತೆ ಮಾಡಿದೆ. ಇನ್ನೂ ಇತ್ತೀಚೆಗಷ್ಟೆ ರಾಜ್ಯಾದ್ಯಂತ ಸುದ್ದಿ ಮಾಡಿದ ವಿರುಪಾಪುರ ಗಡ್ಡಿ ಬಳಿಯ ದೃಶ್ಯವಂತೂ ಒಂದು ಕ್ಷಣ ಮೈಮರೆಯುವಂತೆ ಮಾಡುತ್ತದೆ. ಶ್ರೀ ಕೃಷ್ಣ ದೇವರಾಯ ಕಾಲದ ಸೇತುವೆಯ ಒಳಗಿಂದ ನೀರು ಧುಮ್ಮಿಕ್ಕಿ ಹರಿಯತ್ತಿರುವ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಕಂಡ ಜನರು ಛಾಯಾಗ್ರಾಹಕ ಕಾರ್ಯಕ್ಕೆ ಹೊಗುಳಿಕೆಯ ಸುರಿಮಳೆಗೈದಿದ್ದಾರೆ.

    ತುಂಗಭದ್ರಾ ನದಿ ಹುಕ್ಕಿ ಹರಿಯುವ ವೇಳೆ ಡ್ರೋನ್ ಕ್ಯಾಮೆರಾದ ಮೂಲಕ ಅದ್ಭುತವಾದ ದೃಶ್ಯಗಳನ್ನು ಸೆರೆಹಿಡಿದು ಜನರಿಗೆ ಹೆಲಿಕಾಪ್ಟರ್ ಮೇಲೆ ಕುಳಿತು ನೊಡಿದಂತೆ ಮಾಡಿದ ಚರಣ್ ಬೊಲೆಂಪಲ್ಲಿ ಅವರಿಗೆ ಜನರು ಮೆಚ್ವುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಸ್ಯಾಂಡಲ್‍ವುಡ್‍ನ ಖ್ಯಾತ ಸಿನಿಮಾ ಛಾಯಾಗ್ರಾಹಕ ಕೆ.ಎಂ.ವಿಷ್ಣುವರ್ಧನ್ ವಿಧಿವಶ

    ಸ್ಯಾಂಡಲ್‍ವುಡ್‍ನ ಖ್ಯಾತ ಸಿನಿಮಾ ಛಾಯಾಗ್ರಾಹಕ ಕೆ.ಎಂ.ವಿಷ್ಣುವರ್ಧನ್ ವಿಧಿವಶ

    ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಸಿನಿಮಾ ಛಾಯಾಗ್ರಾಹಕ ಕೆ.ಎಂ.ವಿಷ್ಣುವರ್ಧನ್ ಕೊನೆಯುಸಿರೆಳೆದಿದ್ದಾರೆ.

    ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ. ತುಮಕೂರಿನ ಕುದೂರಿನಲ್ಲಿ ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ಭಾನುವಾರ ಸಂಜೆ ನೆರವೇರಿತು.

    ವಿಷ್ಣುವರ್ಧನ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ತಾಂತ್ರಿಕ ವರ್ಗ ಸಂತಾಪ ಸೂಚಿಸಿದೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಕ್ಯಾಮೆರಾ ನಿರ್ದೇಶಕರಾಗಿ ಕೆ.ಎಂ.ವಿಷ್ಣುವರ್ಧನ್ ಕೆಲಸ ಮಾಡಿದ್ದರು. ಕಿಚ್ಚ ಸುದೀಪ್ ಅಭಿನಯದ ಹುಬ್ಬಳ್ಳಿ, ಹ್ಯಾಟ್ರಿಕ್ ಹಿರೋ ಶಿವಣ್ಣನ ನಟನೆಯ ಸುಗ್ರೀವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯೋಧ, ರಾಕಿಂಗ್ ಸ್ಟಾರ್ ಯಶ್‍ನ ರಾಜಾಹುಲಿ ಸೇರಿದಂತೆ ಕನ್ನಡದ ಅನೇಕ ಚಿತ್ರಗಳಿಗೆ ಕ್ಯಾಮೆರಾ ಕೈಚಳಕ ತೋರಿದ್ದಾರೆ.

    ಓಂಪ್ರಕಾಶ್ ರಾವ್ ನಿರ್ದೇಶನದ ಬಹುತೇಕ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ವಿಷ್ಣುವರ್ಧನ್, ಸುನಿಲ್ ಕುಮಾರ್ ದೇಸಾಯಿಯವರ ಮುಂಬರುವ ಉದ್ಘರ್ಷ ಸಿನಿಮಾಗೆ ಛಾಯಗ್ರಾಹಕರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv