Tag: ಛಲವಾದಿ ನಾರಾಯಣ ಸ್ವಾಮಿ

  • ಕೋರ್ಟ್‌ ಅಂಗಳ ತಲುಪಿದ ಡಿಕೆಸು ಭಾರತ ವಿಭಜನೆ ಹೇಳಿಕೆ

    ಕೋರ್ಟ್‌ ಅಂಗಳ ತಲುಪಿದ ಡಿಕೆಸು ಭಾರತ ವಿಭಜನೆ ಹೇಳಿಕೆ

    ಬೆಂಗಳೂರು: ಸಂಸದ ಡಿಕೆ ಸುರೇಶ್ (DK Suresh) ಭಾರತ ವಿಭಜನೆ ಹೇಳಿಕೆ ಈಗ ಕೋರ್ಟ್ ಅಂಗಳ ತಲುಪಿದೆ. ಬಂಟ್ವಾಳ ಮೂಲದ ವಿಕಾಸ್ ಪಿ ಎಂಬುವವರು ಡಿಕೆಸು ವಿರುದ್ಧ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ.

    ಡಿ ಕೆ ಸುರೇಶ್ ಅವರ ಹೇಳಿಕೆ ದೇಶ ವಿರೋಧಿ ಮತ್ತು ಪ್ರಚೋದನಕಾರಿ ಹೇಳಿಕೆಯಾಗಿದೆ. ಐಪಿಸಿ ಸೆಕ್ಷನ್ 124(ಎ) ಪ್ರಕಾರ ಡಿಕೆಸು ಹೇಳಿಕೆ ಶಿಕ್ಷಾರ್ಹ ಅಪರಾಧ ಆಗಲಿದೆ. ದೇಶದ ನಾಗರೀಕರಿಗೆ ಡಿಕೆಸು ಹೇಳಿಕೆ ಮಾನಸಿಕ ಆಘಾತ ತಂದಿದೆ. ಹೀಗಾಗಿ ನ್ಯಾಯಾಲಯವು ಈ ಹೇಳಿಕೆ ಕುರಿತ ಮುಂದಿನ ತನಿಖೆಯನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ನಿರ್ದೇಶಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ: ಹೈಕೋರ್ಟ್ ಮೆಟ್ಟಿಲೇರಿದ ನಿಖಿಲ್ ಕುಮಾರಸ್ವಾಮಿ

     

    ಇನ್ನೊಂದು ಕಡೆ ಸಂಸದ ಡಿಕೆಸು ಹೇಳಿಕೆ ವಿರುದ್ಧ ಲೋಕಸಭೆ ಸ್ಪೀಕರ್ ಅವರಿಗೂ ದೂರು ಸಲ್ಲಿಸಲಾಗಿದೆ. ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ಅವರು ಲೋಕಸಭೆ ಸ್ಪೀಕರ್‌ಗೆ ಎರಡು ಪುಟಗಳ‌ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೋದಿ ಜೊತೆ ಹೋದರೂ ನಾನು ಕೇಸರಿ ಶಾಲು ಹಾಕಲ್ಲ, ಕುಮಾರಸ್ವಾಮಿಯೂ ಹಾಕಬಾರದಿತ್ತು – ಹೆಚ್‌ಡಿಡಿ

    ಸಂವಿಧಾನದ ಪ್ರಮಾಣ ವಚನ ಸ್ವೀಕಾರ ಮಾಡಿರುವ ಡಿಕೆಸು ತಮ್ಮ ಹೇಳಿಕೆ ಮೂಲಕ ಉಲ್ಲಂಘಿಸಿದ್ದಾರೆ. ಸಂವಿಧಾನಕ್ಕೆ ಅಪಚಾರ ಮಾಡಿರುವ ಡಿಕೆಸು ಸಂಸದ ಸ್ಥಾನದಲ್ಲಿ ಮುಂದುವರೆಯುವ ಹಕ್ಕನ್ನು ಕಳೆದುಕೊಂಡಿದ್ದಾರೆ.‌ ಡಿಕೆಸು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಸಭೆ ಸ್ಪೀಕರ್‌ಗೆ ಛಲವಾದಿ ನಾರಾಯಣ ಸ್ವಾಮಿ ಪತ್ರ ಬರೆದಿದ್ದಾರೆ.

     

  • ರಾಮನ ಪೋಸ್ಟರ್ ಹಾಕಿದ್ರೆ ಕತ್ತರಿ, ಕೊಟ್ಟ ಮಂತ್ರಾಕ್ಷತೆ ಬೀಸಾಡ್ತಿದ್ದಾರೆ- ಕೈ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆರೋಪ

    ರಾಮನ ಪೋಸ್ಟರ್ ಹಾಕಿದ್ರೆ ಕತ್ತರಿ, ಕೊಟ್ಟ ಮಂತ್ರಾಕ್ಷತೆ ಬೀಸಾಡ್ತಿದ್ದಾರೆ- ಕೈ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆರೋಪ

    ಬೆಂಗಳೂರು: ರಾಮನ ಪೋಸ್ಟರ್ ಹಾಕಿದರೆ ಕಾಂಗ್ರೆಸ್ (Congress) ಕತ್ತರಿ ಹಾಕುತ್ತದೆ. ಇನ್ನು ಕೊಟ್ಟ ಮಂತ್ರಾಕ್ಷತೆನ್ನು (Mantrakshate) ಬಿಸಾಡುತ್ತಿದ್ದಾರೆ ಎಂದು ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಗಂಭೀರ ಆರೋಪ ಮಾಡಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ (BJP Office) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನ ಕಾಂಗ್ರೆಸ್ ಮನಬಂದಂತೆ ಟೀಕಿಸ್ತಿದೆ. ಕಾಂಗ್ರೆಸ್‍ನ ಈ ನಿಲುವನ್ನ ಖಂಡಿಸುತ್ತೇನೆ. ಸಿದ್ದರಾಮಯ್ಯ ಮೊದಲು ವಿರೋಧಿಸಿದರು. ಜನ ಉತ್ತರ ಕೊಡಲು ಆರಂಭಿಸಿದ ಮೇಲೆ ಬದಲಾದರು, ಇದನ್ನ ಮೆಚ್ಚುತ್ತೇನೆ ಎಂದರು.

    ಕೆ.ಎನ್ ರಾಜಣ್ಣ (KN Rajanna), ಪ್ರಿಯಾಂಕ್ ಖರ್ಗೆ ಮನಬಂದಂತೆ ಮಾತಾಡಿದ್ದಾರೆ. ಜನರೇ ಇದಕ್ಕೆ ಉತ್ತರ ಕೊಡ್ತಾರೆ. ಶ್ರೀರಾಮನನ್ನ ಅವಹೇಳನ ಮಾಡಿದಾಕ್ಷಣ ದೊಡ್ಡ ನಾಯಕರಾಗ್ತಾರೆ ಎಂಬ ತಪ್ಪು ಭಾವನೆಯಲ್ಲಿದ್ದಾರೆ. ಪೋಸ್ಟರ್ ಹಾಕಿದರೆ ಅದನ್ನ ಕತ್ತರಿಸ್ತಾರೆ. ಮಂತ್ರಾಕ್ಷತೆ ಎಲ್ಲಾ ಕಡೆ ಹಂಚಿಕೆ ಮಾಡಲಾಗ್ತಿದೆ. ಆದರೆ ಕಾಂಗ್ರೆಸ್‍ನವರು ಅದನ್ನ ಬಿಸಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಜನರಿಗೆ ಕೊಡ್ತಿರೋದು ಮೋದಿ ಕೊಡ್ತಿರೋ ಅಕ್ಕಿ: ಜನರಿಗೆ ಕೊಡುತ್ತಿರುವುದು ರಾಜ್ಯದ ಅಕ್ಕಿಯಲ್ಲ, ಮೋದಿ ಕೊಡುತ್ತಿರುವ ಅಕ್ಕಿ. ಡಿಕೆಶಿಯವರೇ ಜನರ ಕಿವಿ ಮೇಲೆ ಹೂವು ಇಡಬೇಡಿ. ಪ್ರಿಯಾಕೃಷ್ಣ ಅವರು 80 ಅಡಿ ರಾಮನ ಪೋಸ್ಟರ್ ಹಾಕಿದ್ದಾರೆ. ಅದಕ್ಕೆ ಕತ್ತರಿ ಹಾಕಿದ್ದೀರಾ?. ಎಲ್ಲರ ಹೃದಯದಲ್ಲಿ ರಾಮನಿದ್ದಾನೆ. ಪ್ರಿಯಾಕೃಷ್ಣ ಅವರ ಪೋಸ್ಟರ್ ಇದಕ್ಕೆ ಸಾಕ್ಷಿ. ಪ್ರಿಯಾಂಕ್ ಖರ್ಗೆ (Priyank Kharge) ಮನೆಯಲ್ಲಿ ರಾಮನಾಮ, ಹೊರಗಡೆ ರಹೀಮ ನಾಮ. ಕಾಂಗ್ರೆಸ್ ಪಕ್ಷದ ಭವಿಷ್ಯ ಅಲ್ಪಸಂಖ್ಯಾತರ ಕೈಯಲ್ಲಿ ಇದೆ ಎಂದುಕೊಂಡು ಹಿಂದೂಗಳನ್ನ ನಿಂದಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಗೃಹಜ್ಯೋತಿ ನಿಯಮದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವೇನು?

    ಸಂವಿಧಾನದಲ್ಲೂ ರಾಮ ಇದ್ದಾನೆ. ಅಂಬೇಡ್ಕರ್ ಅವರ ಹೆಸರಲ್ಲೂ ರಾಮ ಇದ್ದಾನೆ. ದೇವಸ್ಥಾನಕ್ಕೆ ಯಾಕೆ ನಮ್ಮನ್ನ ಬಿಡಲ್ಲ ಎಂದು ಅಂಬೇಡ್ಕರ್ ಕೇಳಿದ್ರು. ದೇವರ ಮೇಲೆ ನಂಬಿಕೆ ಇದ್ದಿದ್ದರಿಂದಲೇ ಕೇಳಿದರು. ಹಿಂದೂ ಧರ್ಮದಲ್ಲಿರುವ ನ್ಯೂನತೆ ಸರಿಪಡಿಸಲು ಬೌದ್ಧ ಧರ್ಮಕ್ಕೆ ಹೋದರು. ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಹೋಗಿಲ್ಲ ಅವರು. ರಾಮಮಂದಿರದ ಅರ್ಚಕರಲ್ಲಿ 24 ಜನರ ಪೈಕಿ ಇಬ್ಬರು ದಲಿತರಿದ್ದಾರೆ. ಹಿಂದೂ ಧರ್ಮ ಬದಲಾಗುತ್ತಿದೆ ಎಂದು ಅವರು ಹೇಳಿದರು.