Tag: ಛತ್ರಿ

  • ಛತ್ರಿ ಹೇಳಿಕೆ; ಕ್ಷಮೆಯಾಚಿಸದ ಡಿಸಿಎಂ – ಡಿಕೆಶಿ ಹೇಳಿಕೆ ಖಂಡಿಸಿ ಇಂದು ಬೃಹತ್ ಪ್ರೊಟೆಸ್ಟ್

    ಮಂಡ್ಯ: ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಮಂಡ್ಯದವರು ಛತ್ರಿಗಳು ಎಂದು ಒಂದು ವಾರ ಕಳೆದಿದೆ. ಇನ್ನೊಂದೆಡೆ ಮಂಡ್ಯದವರು ಡಿಕೆಶಿಗೆ ಕ್ಷಮೆಯಾಚನೆ ಮಾಡಬೇಕೆಂದು ನೀಡಿದ್ದ ಡೆಡ್ ಲೈನ್ ಸಹ ಮುಗಿದಿದೆ. ಇಂದು ಕನಕಪುರ ಬಂಡೆಯ ವಿರುದ್ಧ ಸಕ್ಕರೆ ನಾಡಿನ ಅನ್ನದಾತರು ಬೀದಿಗಿಳಿದು ಛತ್ರಿ ಚಳುವಳಿ ನಡೆಸಲು ಮುಂದಾಗಿದ್ದಾರೆ.

    ಮಂಡ್ಯ (Mandya) ಜನರು ಅತೀ ಹೆಚ್ಚು ರಾಜಕೀಯ ಕ್ಷೇತ್ರದ ಕಡೆ ಬಲವನ್ನು ಇಟ್ಟಿದ್ದಾರೆ. ಇದೇ ಕಾರಣಕ್ಕೆ ಚುನಾವಣೆಗಳು ಬಂದಾಗ ಇಡೀ ಇಂಡಿಯಾವೇ ಮಂಡ್ಯ ಕಡೆ ತಿರುಗಿ ನೋಡುತ್ತವೆ. ಇಂತಹ ಜಿಲ್ಲೆಯ ಹೆಸರನ್ನು ಬಳಸಿಕೊಂಡು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಛತ್ರಿಗಳು ಎಂಬ ಪದ ಬಳಕೆ ಮಾಡಿರುವುದು ಇದೀಗ ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಬಜೆಟ್‌ 5,259 ಕೋಟಿಗೆ ಹೆಚ್ಚಳ – ದೇವಾಲಯದಲ್ಲಿ ಅಡುಗೆ ಕೆಲಸಗಾರರ ವೇತನ ಹೆಚ್ಚಳಕ್ಕೆ ನಿರ್ಧಾರ

    ಡಿಕೆಶಿ ಛತ್ರಿ ಹೇಳಿಕೆಗೆ ಮಂಡ್ಯ ಜನ ಸಿಡಿದೆದ್ದಿದ್ದರು. ವಿಪಕ್ಷಗಳು ಕೂಡ ಡಿಕೆಶಿ ವಿರುದ್ಧ ಕಿಡಿಕಾರಿ ಕ್ಷಮೆಗೆ ಪಟ್ಟು ಹಿಡಿದಿದ್ದರು. ಅಧಿಕಾರದ ಮದದಿಂದಲೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂದು ವಿಪಕ್ಷ ವಾಗ್ದಾಳಿ ನಡೆಸಿತು. ಈ ಬಗ್ಗೆ ಮಾತನಾಡಿದ್ದ ಡಿಕೆಶಿ, ಹೌದು ನನಗೆ ಮದ ಇದೆ, ಕಡಿಮೆ ಮಾಡಿ ಎಂದು ಮತ್ತೆ ಸಮರ್ಥನೆ ಮಾಡಿಕೊಂಡಿದ್ದರು. ಈ ಹೇಳಿಕೆ ಮಂಡ್ಯ ಜನರ ಕಣ್ಣನ್ನು ಮತ್ತಷ್ಟು ಕೆಂಪಾಗಿಸಿತ್ತು. ಇದನ್ನೂ ಓದಿ: ಹೊಸ ವಾಹನ ಖರೀದಿದಾರರಿಗೆ ಶಾಕ್ – ಏಪ್ರಿಲ್‌ನಿಂದ ಆಟೋ, ಕಾರು, ಬೈಕ್ ದರ ಏರಿಕೆ

    ವಿಧಾನಸಭಾ ಚುನಾವಣೆ ವೇಳೆ ಡಿ.ಕೆ.ಶಿವಕುಮಾರ್, ನಾನು ಒಬ್ಬ ಒಕ್ಕಲಿಗ, ನಾನು ನಿಮ್ಮ ಮನೆಯ ಮಗ. ದೇವೇಗೌಡರಿಗೆ, ಎಸ್.ಎಂ.ಕೃಷ್ಣ ಅವರಿಗೆ, ಕುಮಾರಸ್ವಾಮಿಗೆ ಅಧಿಕಾರ ಕೊಟ್ಟಿದ್ದೀರಾ. ಈಗ ನಿಮ್ಮ ಮಗ ಕನಕಪುರದ ಡಿ.ಕೆ.ಶಿವಕುಮಾರ್‌ಗೂ ಒಂದು ಅವಕಾಶ ಕೊಡಿ. ನನಗೂ ಪೆನ್ನು ಪೇಪರ್ ಕೊಡಿ ಎಂದು ಮಂಡ್ಯ ಜನರಲ್ಲಿ ಡಿಕೆಶಿ ಕೇಳಿಕೊಂಡಿದ್ದರು. ಅದರಂತೆ ಮಂಡ್ಯ ಜನ ಕೂಡ ಕೈ ಹಿಡಿದಿದ್ದರು. ಸ್ವಾಭಿಮಾನಿ ಜನರಿಗೆ ಹೀಗೆ ಹೇಳೋದು ಎಷ್ಟು ಸರಿ ಎಂದು ಆಕ್ರೋಶ ಹೆಚ್ಚಾಗಿದೆ. ಇದನ್ನೂ ಓದಿ: ಬಾಗಲಕೋಟೆ | ಹಲವೆಡೆ ಬಿರುಗಾಳಿ ಸಹಿತ ಮಳೆ, ನೆಲಕ್ಕುರುಳಿದ ಬೆಳೆ

    ಮನೆ-ಮನೆಯಿಂದ ಛತ್ರಿ ತಂದು ಪ್ರತಿಭಟನೆ:
    ಡಿಕೆಶಿಗೆ ಇಷ್ಟೆಲ್ಲಾ ಮಾಡಿರುವ ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದು ಹೇಳಿರೋದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರು, ರೈತ ಸಂಘಟನೆ, ಪ್ರಗತಿಪರ ಸಂಘಟನೆ, ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಡಿಕೆಶಿ ಮಂಡ್ಯ ಜನರನ್ನು ಛತ್ರಿಗಳು ಎಂದಿದ್ದಾರೆ. ನಿಜವಾಗಿ ಡಿ.ಕೆ.ಶಿವಕುಮಾರ್ ಅಂತರರಾಜ್ಯ ಛತ್ರಿ. ಮಂಡ್ಯ ಜನರ ಬಳಿ ಡಿಕೆಶಿ ಕ್ಷಮೆ ಕೇಳಬೇಕು. ಇದಕ್ಕೆ ಸೋಮವಾರ ಸಂಜೆಯವರೆಗೆ ಡೆಡ್‌ಲೈನ್ ನೀಡಿದ್ದರು. ಆದರೆ ಇಲ್ಲಿಯವರೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷಮೆಯಾಚಿಸಿಲ್ಲ. ಹೀಗಾಗಿ ಇಂದು ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಮನೆ ಮನೆಯಿಂದ ಛತ್ರಿ ತಂದು ಮಂಡ್ಯದ ಸಂಜಯ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ನಾಗ್ಪುರ ಕೋಮು ಗಲಭೆ – ಮಾಸ್ಟರ್‌ಮೈಂಡ್‌ ಮನೆ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗ!

  • ರಸ್ತೆ ಕಾಂಕ್ರೀಟಿಕರಣ ತಡೆದ ಮಹಿಳೆ – ಛತ್ರಿಯ ಹಿಡಿಯಲ್ಲಿ ತಲೆ ಒಡೆದ ಪಂಚಾಯಿತಿ ಸದಸ್ಯ

    ರಸ್ತೆ ಕಾಂಕ್ರೀಟಿಕರಣ ತಡೆದ ಮಹಿಳೆ – ಛತ್ರಿಯ ಹಿಡಿಯಲ್ಲಿ ತಲೆ ಒಡೆದ ಪಂಚಾಯಿತಿ ಸದಸ್ಯ

    ಉಡುಪಿ: ನಮ್ಮ ಮನೆಯ ಮುಂದೆ ರಸ್ತೆ ಆಗಲಿ, ನಮ್ಮ ಊರು ಉದ್ಧಾರ ಆಗಲಿ ಅಂತ ಎಲ್ಲರೂ ಅಪೇಕ್ಷಿಸುತ್ತಾರೆ. ಆದರೆ ಉಡುಪಿಯ ಆತ್ರಾಡಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ನಮ್ಮ ಮನೆಯ ಮುಂದೆ ರಸ್ತೆ ಬೇಡ ಎಂದು ಮಹಿಳೆಯೊಬ್ಬರು ರಂಪಾಟ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪಂಚಾಯಿತಿ ಸದಸ್ಯ ಛತ್ರಿಯ ಹಿಡಿಯಲ್ಲಿ ಮಹಿಳೆಯ ತಲೆ ಒಡೆದಿದ್ದಾರೆ.

    ಉಡುಪಿ ಸಮೀಪದ ಆತ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಸಂಗ ನಡೆದಿದೆ. ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಿಸಲು ತಡೆಯೊಡ್ಡಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಹಲ್ಲೆ ನಡೆಸಲಾಗಿದೆ. ಆತ್ರಾಡಿ ಸಮೀಪದ ಪಡುಮನೆ ನಾಗಬನ ನಿವಾಸಿ ಆರತಿ(45) ಹಲ್ಲೆಗೊಳಗಾದ ಮಹಿಳೆ. ಆಕೆ ರಸ್ತೆ ಅಭಿವೃದ್ಧಿಗೆ ಅಡ್ಡಿಪಡಿಸಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ.

    ಆರತಿಯವರ ಪಟ್ಟಾ ಜಾಗದಲ್ಲಿ ವಿರೋಧದ ನಡುವೆಯೂ ಆತ್ರಾಡಿ ಗ್ರಾಮ ಪಂಚಾಯಿತಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಯಾರು ನಡೆಸಿತ್ತು. ಮನೆಯವರ ಆಕ್ಷೇಪ ಇದ್ದರೂ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿದ್ದ ಪಂಚಾಯಿತಿ ಸದಸ್ಯ ರತ್ನಾಕರ್ ಶೆಟ್ಟಿ ತಳ್ಳಿದ್ದಾರೆ. ಆರತಿ ತನ್ನ ಚಪ್ಪಲಿ ತೆಗೆದು ರತ್ನಾಕರ್ ಶೆಟ್ಟಿ ಮತ್ತು ಪಕ್ಕದಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗದಿದ್ದರೇ ಕೊಲೆ ಮಾಡುವುದಾಗಿ ಬೆದರಿಕೆ- ಇಬ್ಬರ ವಿರುದ್ಧ ಎಫ್‍ಐಆರ್

    ಕೋಪಗೊಂಡ ಚಂದ್ರಹಾಸ್ ಶೆಟ್ಟಿ ಹಾಗೂ ಸಂತೋಷ್ ಪೂಜಾರಿ ಆರತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ವಾಗ್ವಾದದ ಸಂದರ್ಭ ರತ್ನಾಕರ್ ಶೆಟ್ಟಿ ಛತ್ರಿಯ ಹಿಡಿಯಲ್ಲಿ ಹೊಡೆದು ಆರತಿಯವರನ್ನು ತಳ್ಳಿದ ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿದೆ. ಗಲಾಟೆಯನ್ನು ತಡೆಯಲು ಬಂದ ಆರತಿ ಅವರ ಮಗಳ ಮೇಲೂ ಹಲ್ಲೆ ನಡೆಸಲಾಗಿದೆ.

    ಇದೀಗ ಆರತಿ ಅವರು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ರತ್ನಾಕರ್ ಶೆಟ್ಟಿ ಮತ್ತು ತಂಡ ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಕೊಡಬೇಕಾಗಿದೆ. ಇದನ್ನೂ ಓದಿ: ಕೋರ್ಟ್ ಮುಂದೆಯೇ ರೌಡಿಶೀಟರ್ ಮೇಲೆ ಅಟ್ಯಾಕ್ – ದುಷ್ಕರ್ಮಿಗಳನ್ನು ಹಿಡಿದು ಠಾಣೆಗೆ ದಬ್ಬಿದ ಪೊಲೀಸ್ರು

    Live Tv
    [brid partner=56869869 player=32851 video=960834 autoplay=true]

  • ಎಸಿ ರೈಲಿನ ಒಳಗಡೆಯೇ ಛತ್ರಿ ಹಿಡಿದು ಕುಳಿತ ಪ್ರಯಾಣಿಕರು

    ಎಸಿ ರೈಲಿನ ಒಳಗಡೆಯೇ ಛತ್ರಿ ಹಿಡಿದು ಕುಳಿತ ಪ್ರಯಾಣಿಕರು

    ಮುಂಬೈ: ಪಂಚವಟಿ ಎಕ್ಸ್‌ಪ್ರೆಸ್‍ನ ಪ್ರಯಾಣಿಕರು ಎಸಿ ರೈಲಿನ ಒಳಗೆಯೇ ಛತ್ರಿ ಹಿಡಿದು ಕುಳಿತು ಪ್ರಯಾಣ ಮಾಡಿರುವ ಸುದ್ದಿ ಈಗ ಎಲ್ಲಕಡೆ ಚರ್ಚೆಗೆ ಗ್ರಾಸವಾಗುತ್ತಿದೆ.

    ಭಾನುವಾರ ಮುಂಬೈ-ಮನ್ಮಾಡ್ ಪಂಚವಟಿ ಎಕ್ಸ್‌ಪ್ರೆಸ್‍ನ ಮಾಸಿಕ ಸೀಸನ್ ಟಿಕೆಟ್(ಎಂಎಸ್‍ಟಿ) ಹೊಂದಿರುವವರಿಗೆ ಕಾಯ್ದಿರಿಸಿದ ಎಸಿ ಕೋಚ್‍ನ ಮೇಲ್ಛಾವಣಿ ಸೋರಿಕೆಯಾಗುತ್ತಿತ್ತು. ಈ ಪರಿಣಾಮ ಪ್ರಯಾಣಿಕರು ತಮ್ಮನ್ನು ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಛತ್ರಿ ಹಿಡಿದುಕೊಂಡಿದ್ದಾರೆ. ನಾಸಿಕ್‍ನಿಂದ ಮುಂಬೈವರೆಗೂ ಪ್ರಯಾಣಿಕರು ಛತ್ರಿಗಳನ್ನು ಹಿಡಿದು ಕುಳಿತುಕೊಂಡಿದ್ದರು. ಇದನ್ನೂ ಓದಿ: ಇತ್ತೀಚೆಗೆ ನಡೆಯುತ್ತಿರುವ ಕ್ಷುಲ್ಲಕ ಚರ್ಚೆ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ: ಮಸ್ಕ್ 

    Local train coach derails near Thane; no injury reported - BusinessToday

    ಪ್ರಯಾಣಿಕ ಸಂತೋಷ್ ಶೆವಾಲೆ ಈ ಕುರಿತು ಮಾತನಾಡಿದ್ದು, ಸಿ-2 ಹವಾನಿಯಂತ್ರಿತ ಕೋಚ್‍ನ ಮೇಲ್ಛಾವಣಿಯಿಂದ ನೀರು ಜಿನುಗುತ್ತಲೇ ಇತ್ತು.  ಆದರೆ ಇದೇ ಮೊದಲ ಬಾರಿಗೆ ಎಸಿ ಕೋಚ್‍ನಲ್ಲಿ ನೋಡಿದ್ದೇನೆ. ಕೋಚ್ ಮೇಲ್ಛಾವಣಿಯಿಂದ ನಿರಂತರವಾಗಿ ನೀರು ಬರುತ್ತಿತ್ತು. ಪ್ರಯಾಣಿಕರು ತಮ್ಮ ಛತ್ರಿಗಳನ್ನು ಬಳಸಬೇಕಾಯಿತು ಎಂದು ವಿವರಿಸಿದರು.

    File:12109 Panchavati Express - AC Chair Car coach.jpg - Wikimedia Commons

    ರೈಲು ಸಂಪೂರ್ಣ ಭರ್ತಿಯಾಗಿದ್ದರಿಂದ ಪ್ರಯಾಣಿಕರು ಬೇರೆ ಕಡೆ ಹೋಗಲು ಸಾಧ್ಯವಾಗಿರಲ್ಲ. ನಂತರ ನೊಂದ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಮನ್ಮಾಡ್‍ನಲ್ಲಿರುವ ಅಧಿಕಾರಿಗಳು ಸಮಸ್ಯೆಯಾಗಿರುವುದನ್ನು ಒಪ್ಪಿಕೊಂಡರು. ಇದನ್ನೂ ಓದಿ: ವಿಭಜನೆ ನೋವಿನಿಂದ ಕೂಡಿದೆ – ಪಾಕ್, ಬಾಂಗ್ಲಾದೇಶ, ಭಾರತ ಒಂದಾಗಬಹುದು: ಮನೋಹರ್ ಲಾಲ್ ಖಟ್ಟರ್ 

    ಅಧಿಕಾರಿಗಳು ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು, ವಿದ್ಯುತ್ ಪೈಪ್‌ನ ಸಮಸ್ಯೆಯಿಂದ ಈ ರೀತಿಯಾಗಿದೆ ಎಂದು ತಿಳಿಸಿದರು. ಪ್ರಯಾಣಿಕರು ಅಧಿಕಾರಿಗಳಿಗೆ ತಮಗಾದ ಸಮಸ್ಯೆ ಬಗ್ಗೆ ದೂರನ್ನು ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಸ್‍ನಲ್ಲಿ ಕೊಡೆ ಹಿಡಿದು ಕುಳಿತ ಪ್ರಯಾಣಿಕರು

    ಬಸ್‍ನಲ್ಲಿ ಕೊಡೆ ಹಿಡಿದು ಕುಳಿತ ಪ್ರಯಾಣಿಕರು

    ಧಾರವಾಡ: ರಾಜ್ಯದಲ್ಲೇ ಮಳೆ ಅಬ್ಬರ ಜೋರಾಗಿದ್ದು, ಎಲ್ಲೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸೊರುತಿದ್ದ ಬಸ್‍ನಲ್ಲಿ ಪ್ರಯಾಣಿಕರು ಕೊಡೆ ಹಿಡಿದು ಕುಳಿತ ಘಟನೆ ನಡೆದಿದೆ.

    ಧಾರವಾಡ ತಾಲೂಕಿನ ನಾಗಲಾವಿ ಗ್ರಾಮಕ್ಕೆ ಹೋಗುವ ಬಸ್‍ನ್ನು ಹತ್ತಿದ ಪ್ರಯಾಣಿಕರು, ಮಳೆ ನೀರಿಗೆ ಹೆದರಿದ್ದಾರೆ. ಯಾಕೆಂದರೆ ಬಸ್ ಸಂಪೂರ್ಣ ಸೊರುತ್ತಿತ್ತು. ಈ ಹಿನ್ನೆಲೆಯಲ್ಲಿ ಬಸ್‍ನಲ್ಲಿದ್ದ ಪ್ರಯಾಣಿಕರೆಲ್ಲರೂ ಛತ್ರಿ ಹಿಡಿದು ಕುಳಿತುಕೊಳ್ಳಬೇಕಾಯಿತು. ಇನ್ನೂ ಬಸ್ ಸೀಟ್‍ಗಳು ಕೂಡ ನೀರಿನಿಂದ ತೊಯ್ದಿದ್ದರಿಂದ ಕೆಲ ಪ್ರಯಾಣಿಕರು ಚಾಲಕನ ಪಕ್ಕದ ಎಂಜಿನ್ ಮೇಲೆ ಕುಳಿತುಕೊಂಡಿದ್ದರು.

    ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯು ಮಳೆ ಮುಂದುವರಿಯುವ ಸಾಧ್ಯತೆಯ ಮುನ್ಸೂಚನೆ ನೀಡಿದ ಹಿನ್ನೆಲೆ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಜನ ಹಾಗೂ ಜಾನುವಾರುಗಳ ಸುರಕ್ಷತೆಗೆ ಸಾರ್ವಜನಿಕರು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಇದನ್ನೂ ಓದಿ: ಪೆಗಾಸಸ್ ಮೂಲಕ ಗೂಢಚರ್ಯೆ – ಅಂತಿಮ ವರದಿ ಸಲ್ಲಿಕೆಗೆ ಕಾಲಾವಕಾಶ ವಿಸ್ತರಣೆ

    ಮಳೆಯಿಂದಾಗಿ ನಾವಳ್ಳಿ ಅಣ್ಣಿಗೇರಿ ರಸ್ತೆ ಸಂಪರ್ಕ ಕಡಿತವಾಗಿದ್ದುಮ ಹಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳದ ಅಕ್ಕ-ಪಕ್ಕ ಇರುವ ಜನತೆಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಕಂದಾಯ ಅಧಿಕಾರಿಗಳು ಹೊಲಗಳಿಗೆ ಹೋಗದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರ ಮುಂದೆ ಶರಣಾಗಲು ಹೆಚ್ಚಿನ ಸಮಯ ಕೇಳಿದ ಸಿಧು

  • ಟಾಪ್ 5 ಛತ್ರಿಗಳ ಡಿಸೈನ್‍ಗಳು

    ಟಾಪ್ 5 ಛತ್ರಿಗಳ ಡಿಸೈನ್‍ಗಳು

    ಭಾರತದಲ್ಲಿ ಮನ್ಸೂನ್ ಬಂದರೆ ಸಾಕು ಎಲ್ಲರಿಗೂ ತೊಂದರೆ ತಪ್ಪಿದ್ದಲ್ಲ. ಕಿರಿದಾದ ರಸ್ತೆಗಳು, ಗುಂಡಿಗಳು ಮತ್ತು ಕಷ್ಟಕರವಾದ ಹವಾಮಾನ. ಈ ವೇಳೆ ನಮ್ಮನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿಗಳನ್ನು ಉಪಯೋಗಿಸುತ್ತೇವೆ. ಛತ್ರಿಗಳಲ್ಲಿ ನಾನಾ ರೀತಿಯ ಮುದ್ರಣ ಹಾಗೂ ಬಣ್ಣದ ಛತ್ರಿಗಳಿದೆ. ಛತ್ರಿಗಳ ಡಿಸೈನ್ ಕುರಿತಂತೆ ಕೆಲವು ಮಾಹಿತಿ ಈ ಕೆಳಗಿನಂತಿದೆ.

    ಕೆಹ್ಕ್ಲೊ ಬಣ್ಣದ ಛತ್ರಿಗಳು
    ಕಲೆಯನ್ನು ಪ್ರೀತಿಸುವವರಿಗೆ ಈ ಛತ್ರಿ ಬಹಳ ಇಷ್ಟವಾಗುತ್ತದೆ. ಈ ಛತ್ರಿ ಜನಸಂದಣಿಯ ಮಧ್ಯೆ ಎದ್ದು ಕಾಣಿಸುತ್ತದೆ. ಈ ಛತ್ರಿ ಮೇಲೆ ಮನುಷ್ಯನ ಮುಖವನ್ನು ಚಿತ್ರಿಸಲಾಗಿದೆ.

    ಸ್ಟೇಜ್ ಡೂಡಲ್ ಮುದ್ರಿತ ಬಿಳಿ ಛತ್ರಿ
    ನಿಮಗೆ ಬಿಳಿ ಬಣ್ಣ ಎಂದರೆ ಇಷ್ಟನಾ? ಹಾಗಾದರೆ ಈ ಛತ್ರಿ ನಿಮಗೆ ಬಲು ಬೇಗ ಇಷ್ಟ ಆಗುತ್ತದೆ. ಈ ಬಿಳಿ ಛತ್ರಿ ಮೇಲೆ ಹಾಸ್ಯಕರವಾದ ಕೆಲವು ಚಮತ್ಕಾರಿ ವ್ಯಂಗ್ಯ ಡೂಡಲ್‍ಗಳನ್ನು ಮುದ್ರಿಸಲಾಗಿದೆ. ಇದು ನಿಮಗೆ ದಿನವಿಡೀ ಸ್ಫೂರ್ತಿ ನೀಡುತ್ತದೆ. ಖಂಡಿತವಾಗಿಯೂ ಈ ಛತ್ರಿ ಸಹ ಪ್ರಯಾಣಿಕನಾಗಿ ನಿಮಗೆ ಕಂಪನಿ ನೀಡುತ್ತದೆ.

    ಹೆಲ್ಮೆಟ್ ಛತ್ರಿ
    ಸಾಮಾನ್ಯವಾಗಿ ಕೆಲವು ಛತ್ರಿಗಳನ್ನು ಹಿಡಿದುಕೊಂಡರೂ, ಮಳೆಯಲ್ಲಿ ನಮ್ಮ ಬಟ್ಟೆಗಳು ಒದ್ದೆಯಾಗಿ ಬಹಳ ಕಿರಿಕಿರಿಯುಂಟಾಗುತ್ತದೆ. ಆದರೆ ಹೆಲ್ಮೆಟ್ ಛತ್ರಿ ಬಳಸುವುದರಿಂದ ತಲೆ ಹಾಗೂ ಬಟ್ಟೆ ಒದ್ದೆಯಾಗುವುದನ್ನು ತಡೆಗಟ್ಟಬಹುದು. ಈ ಛತ್ರಿ ಕೈಯಲ್ಲಿ ಹಿಡಿದುಕೊಳ್ಳಲು ಬಹಳ ಸುಲಭಕರವಾಗಿದೆ ಮತ್ತು ಮಳೆ ಜೊತೆಗೆ ಗಾಳಿಯಿಂದ ಕೂಡ ನಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ.

    ಕೆಹ್ಕ್ಲೋ ಗೇಮ್ ಆಫ್ ಥ್ರೋನ್ಸ್ ಛತ್ರಿ
    ಈ ಛತ್ರಿಯ ಹೆಸರನ್ನು ಕೇಳಿದಾಗ ನಿಮಗೆ ನಗು ಬರಬಹುದು. ಆದರೆ ಈ ಛತ್ರಿ ಎಲ್ಲರಿಗೂ ಬಹಳ ಇಷ್ಟವಾಗುತ್ತದೆ. ಈ ಛತ್ರಿಯಲ್ಲಿ ಹಾರ್ಟ್ ಸಿಂಬಲ್ ಇದ್ದು, ಸಾಮಾನ್ಯವಾಗಿ ಕಪಲ್‍ಗಳು ಹೆಚ್ಚಾಗಿ ಬಳಸುತ್ತಾರೆ. ಮೊದಲಿಗೆ ಕಾಡ್ರ್ಸ್, ಡೈರಿ ಹಾಗೂ ಪೆನ್‍ಗಳಲ್ಲಿ ಈ ಅಕ್ಷರವನ್ನು ಮುದ್ರಿಸಲಾಗುತ್ತಿತ್ತು. ಆದರೆ ಇದೀಗ ಛತ್ರಿ ಮೇಲೆ ಕೂಡ ಮುದ್ರಿಸಲಾಗಿದೆ.

    ಬಾಳೆಹಣ್ಣು ಮಾದರಿಯ ಛತ್ರಿ
    ಈ ಛತ್ರಿ ಹಳದಿ ಬಣ್ಣವನ್ನು ಹೊಂದಿದ್ದು, ಪ್ರಕಾಶಮಾನವಾದ ಬಿಸಿಲಿನಲ್ಲಿ ಎದ್ದು ಕಾಣುತ್ತದೆ ಮತ್ತು ಈ ಛತ್ರಿಯನ್ನು ಬಾಳೆಹಣ್ಣಿನ ರೀತಿ ಇರುವ ಪೆಟ್ಟಿಗೆಯಲ್ಲಿ ಮಡಚಿ ಇಡಲಾಗುತ್ತದೆ. ಈ ಛತ್ರಿ ನೋಡಲು ಮುದ್ದಾಗಿರುವುದರಿಂದ ಚಿಕ್ಕ ಮಕ್ಕಳಿಗೆ ಬೇಗ ಇಷ್ಟವಾಗುತ್ತದೆ. ಇದನ್ನೂ ಓದಿ:ಕೇರಳದಲ್ಲಿ 20 ಸಾವಿರಕ್ಕೂ ಹೆಚ್ಚು ಕೇಸ್ – ಗಡಿ ಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಿಎಂ ಸಭೆ

  • ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನಕ್ಕೆ ಛತ್ರಿ ಹಿಡಿದ ಬಾಲಕಿ – ವೀಡಿಯೋ ವೈರಲ್

    ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನಕ್ಕೆ ಛತ್ರಿ ಹಿಡಿದ ಬಾಲಕಿ – ವೀಡಿಯೋ ವೈರಲ್

    ಳೆಯಲ್ಲಿ ನೆನೆಯುತ್ತಿದ್ದ ಶ್ವಾನವನ್ನು ಪುಟ್ಟ ಬಾಲಕಿ ತನ್ನ ಛತ್ರಿಯ ಸಹಾಯದಿಂದ ರಕ್ಷಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    12 ಸೆಕೆಂಡುಗಳಿರುವ ಈ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಸಂತಾ ನಂದ ಎಂಬವರು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಪುಟ್ಟ ಬಾಲಕಿ, ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನವನ್ನು ತನ್ನ ಛತ್ರಿಯನ್ನು ಬಳಸಿ ರಕ್ಷಿಸುತ್ತಾಳೆ. ಅಲ್ಲದೇ ಶ್ವಾನ ಎಲ್ಲಿಯೇ ಹೋದರೂ ಅದನ್ನು ಹಿಂಬಾಲಿಸುತ್ತಾಳೆ. ಆದರೆ ಶ್ವಾನ ಮಾತ್ರ ಛತ್ರಿಯನ್ನು ನಿರಾಕರಿಸುವುದನ್ನು ನೋಡಬಹುದಾಗಿದೆ.

    ಈ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಾಲಕಿಯ ನಿಸ್ವಾರ್ಥ ಮನಸ್ಸಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ‘ದಯೆಯೊಂದಿದ್ದರೆ ಬೇರೆಯವರಿಗೆ ಪ್ರತಿಯೊಬ್ಬರು ಸಣ್ಣಪುಟ್ಟ ಕೆಲಸವನ್ನು ಮಾಡುತ್ತಾರೆ. ಏಕೆಂದರೆ ನಿಮಗೆ ಅದನ್ನು ಮಾಡುವ ಶಕ್ತಿ ಇರುತ್ತದೆ’ ಎಂದು ಐಎಫ್‍ಎಸ್ ಅಧಿಕಾರಿ ವೀಡಿಯೋ ಜೊತೆಗೆ ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ.

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದ್ದು, ಲೈಕ್ಸ್‌ಗಳ ಸುರಿ ಮಳೆ ಬರುತ್ತಿದೆ. ಬಾಲಕಿ ಚಿನ್ನದಂತ ಮನಸ್ಸು ಹೊಂದಿದ್ದಾಳೆ, ಬಾಲಕಿ ಸಹಾಯ ಮಾಡುವ ಗುಣ ಹೊಂದಿದ್ದಾಳೆ. ಹೀಗೆ ಹಲವಾರು ಕಾಮೆಂಟ್‍ಗಳು ಹರಿದು ಬರುತ್ತಿದೆ.

  • ಶಾಸಕಿ ಅನಿತಾ ಕುಮಾರಸ್ವಾಮಿಗೆ ಛತ್ರಿ ಸೇವೆ ನೀಡಿದ ಶಾಲಾ ಸಿಬ್ಬಂದಿ

    ಶಾಸಕಿ ಅನಿತಾ ಕುಮಾರಸ್ವಾಮಿಗೆ ಛತ್ರಿ ಸೇವೆ ನೀಡಿದ ಶಾಲಾ ಸಿಬ್ಬಂದಿ

    ರಾಮನಗರ: ನಗರದ ಖಾಸಗಿ ಶಾಲೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿಯವರಿಗೆ ಸಿಬ್ಬಂದಿ ಛತ್ರಿ ಸೇವೆ ನೀಡಿದ್ದಾರೆ.

    ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿ ಬಂದ ಅನಿತಾ ಕುಮಾರಸ್ವಾಮಿಯವರು ಬಿಸಿಲಿಗೆ ಅಂಜಿ, ಸಿಬ್ಬಂದಿಯಿಂದ ಛತ್ರಿ ಸೇವೆ ಪಡೆದುಕೊಂಡಿದ್ದಾರೆ. ಅನಿತಾರವರು ನಗರದ ಖಾಸಗಿ ಶಾಲೆಯ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮ ಶಾಲಾ ಆವರಣದಲ್ಲೇ ನಡೆಯುತ್ತಿದ್ದರಿಂದ ಬಿಸಿಲ ಝಳ ನೇರವಾಗಿ ಅವರನ್ನು ಕುಟುಕುತ್ತಿತ್ತು.

    ಈ ವೇಳೆ ಇದನ್ನು ಗಮನಿಸಿದ ಶಾಲಾ ಆಡಳಿತ ಸಿಬ್ಬಂದಿ ಮೊದಲು ತಾವೇ ಛತ್ರಿ ಹಿಡಿದಿದ್ದರು, ಬಳಿಕ ಅನಿತಾರವರ ಗನ್ ಮ್ಯಾನ್ ಛತ್ರಿ ಹಿಡಿದು ಕಾರ್ಯಕ್ರಮ ಮುಗಿಯುವವರೆಗೂ ಬಿಸಿಲಿನಿಂದ ರಕ್ಷಿಸಿದ್ದಾರೆ. ನಂತರ ಅನಿತಾರವರು ಭಾಷಣ ಮಾಡುವ ವೇಳೆಯು ಸಿಬ್ಬಂದಿ ಛತ್ರಿ ಹಿಡಿದೇ ನಿಂತಿದ್ದರು. ವಿಪರ್ಯಾಸವೆಂದರೇ ಮಕ್ಕಳು ಹಾಗೂ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಎಲ್ಲರೂ ಸುಡು ಬಿಸಿಲಿನಲ್ಲೇ ಕುಳಿತಿದ್ದರೇ, ಶಾಸಕರು ಮಾತ್ರ ತಮ್ಮ ಸಿಬ್ಬಂದಿಯಿಂದ ಛತ್ರಿ ಸೇವೆ ಪಡೆದುಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ಯಕ್ರಮದಲ್ಲಿ ಸರಳತೆ ಪ್ರದರ್ಶಿಸಿದ್ರು ಯದುವೀರ್ ಒಡೆಯರ್!

    ಕಾರ್ಯಕ್ರಮದಲ್ಲಿ ಸರಳತೆ ಪ್ರದರ್ಶಿಸಿದ್ರು ಯದುವೀರ್ ಒಡೆಯರ್!

    ಮೈಸೂರು: ಸಾಮಾನ್ಯವಾಗಿ ಗಣ್ಯರಿಗೆ ಮಳೆ ಬಂದಾಗ ಛತ್ರಿ ಹಿಡಿದು ಕೊಂಡು ಹಿಂಬಾಲಕರು ಅಥವಾ ಸಹಾಯಕರು ನಿಂತಿರುತ್ತಾರೆ. ತಮಗೆ ತಾವೇ ಛತ್ರಿ ಹಿಡಿದು ಕೊಳ್ಳುವುದು ಘನತೆ ಕಡಿಮೆ ಮಾಡಿಕೊಂಡಂತೆ ಅಂತಾ ಕೆಲವರು ಭಾವಿಸುತ್ತಾರೆ.

    ಇಂತಹದರ ನಡುವೆ ಮೈಸೂರಿನ ಯದುವಂಶದ ಮಹಾರಾಜ ತಮ್ಮ ಛತ್ರಿಯನ್ನು ತಾವೇ ಹಿಡಿದುಕೊಂಡು ಸರಳತೆ ಪ್ರದರ್ಶಿಸಿದರು. ಮೈಸೂರಿನಲ್ಲಿ ಯದುವೀರ್ ಒಡೆಯರ್ ಇವತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಯಿತು.

    ಆಗ ಅವರಿಗೆ ಛತ್ರಿ ಹಿಡಿಯಲು ಆಯೋಜಕರು ಮುಂದಾದರು. ಆಗ ಅದನ್ನು ನಿರಾಕರಿಸಿದ ಯದುವೀರ್ ತಾವೇ ಛತ್ರಿ ಹಿಡಿದುಕೊಂಡು ಸರಳತೆ ಮೆರೆದರು. ಮಳೆ ಬಂದರು ಯದುವೀರ್ ಕಾರ್ಯಕ್ರಮದಿಂದ ನಿರ್ಗಮಿಸದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.