ಮುಂಬೈ: ಮಹಾರಾಷ್ಟ್ರದಲ್ಲಿ ಕುಸಿದು ಬಿದ್ದ ಛತ್ರಪತಿ ಶಿವಾಜಿ(Chhatrapati Shivaji Maharaj) ಕಂಚಿನ ಪ್ರತಿಮೆ ನಿರ್ಮಿಸಿದ ಗುತ್ತಿಗೆದಾರ ಮತ್ತು ರಚನೆಗೆ ಸಲಹೆ ನೀಡಿದ ಸಲಹೆಗಾರನನ್ನು ಬಂಧಿಸಲಾಗಿದೆ.
ಡಿಸೆಂಬರ್ 4,2023 ರಂದು ನೌಕಾ ದಿನದಂದು (Navy Day) ಸಿಂಧುದುರ್ಗದಲ್ಲಿ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಅನಾವರಣ ಮಾಡಲಾಗಿತ್ತು. ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದರು. ಮರಾಠ ನೌಕಾಪಡೆ, ಛತ್ರಪತಿ ಶಿವಾಜಿ ಮಹಾರಾಜರ ಕಡಲ ರಕ್ಷಣೆ ಮತ್ತು ಭದ್ರತೆ, ಅದರ ಐತಿಹಾಸಿಕ ಪರಂಪರೆಯನ್ನು ಗೌರವಿಸುವ ಉದ್ದೇಶದಿಂದ ಕಂಚಿನ ಪ್ರತಿಮೆ ನಿರ್ಮಿಸಲಾಗಿತ್ತು. ಇದನ್ನೂ ಓದಿ: ಆಂಧ್ರ ಕಾಲೇಜಿನ ವಿದ್ಯಾರ್ಥಿನಿಯರ ವಾಶ್ ರೂಮ್‍ನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾರಾಟ – ಆರೋಪಿ ಅರೆಸ್ಟ್
ಪ್ರತಿಮೆ ಸೋಮವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಈ ಘಟನೆಯ ಬಳಿಕ ವಿಪಕ್ಷಗಳು ಆಡಳಿತರೂಢ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಮಾತ್ರವಲ್ಲದೇ ಶಿವಾಜಿ ವಂಶಸ್ಥರು ಈ ಘಟನೆಯ ಬಳಿಕ ಸರ್ಕಾರದ ಆಕ್ರೋಶ ಹೊರಹಾಕಿದ್ದಾರೆ.
ನವದೆಹಲಿ: ಶಿವನ ರಾಜಮನೆತನ ನೀಡುವ ಪ್ರತಿಷ್ಠಿತ ‘ಶಿವ ಸಮ್ಮಾನ್’ (Shiv Samman Award) ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಯ್ಕೆಯಾಗಿದ್ದಾರೆ.
ಈ ವಿಚಾರವನ್ನು ಮಹಾರಾಷ್ಟ್ರ (Maharashtra) ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿಯವರನ್ನು ನಾನು ಅಭಿನಂದಿಸುತ್ತೇನೆ. ಇದು ಎಲ್ಲಾ ಶಿವ ಭಕ್ತರಿಗೆ ಸಂತೋಷ ಮತ್ತು ಹೆಮ್ಮೆಯ ಕ್ಷಣ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಕಸಿತ ಭಾರತ್ ಬಜೆಟ್ – ಹಣಕಾಸು ಸಚಿವೆಗೆ ಪ್ರಧಾನಿ ಮೋದಿ ಶ್ಲಾಘನೆ
ಭಾರತದ ಶ್ರೇಷ್ಠ ಮತ್ತು ಆದರ್ಶ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನಲ್ಲಿ ರಾಜಮನೆತನದವರು ನೀಡುವ `ಶಿವ ಸಮ್ಮಾನ್ ಪ್ರಶಸ್ತಿ’ಯನ್ನು ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗುವುದು. ಇದು ಎಲ್ಲಾ ಶಿವಭಕ್ತರಿಗೆ ಸಂತೋಷ ಮತ್ತು ಹೆಮ್ಮೆಯ ಕ್ಷಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಅವರು ಪೊಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಯಾದಗಿರಿ: ಕಿಡಿಗೇಡಿಗಳು ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji) ತಿರುಚಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅವಮಾನ ಮಾಡಿರುವ ಘಟನೆ ಯಾದಗಿರಿಯಲ್ಲಿ (Yadagiri) ನಡೆದಿದೆ.
ದುಷ್ಕರ್ಮಿಗಳು ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಟಿಪ್ಪು ಸುಲ್ತಾನ್ (Tippu Sultan) ಫೋಟೋಗಳನ್ನು ಬಳಸಿಕೊಂಡಿದ್ದಾರೆ. ಟಿಪ್ಪುವಿನ ಕಾಲ ಬುಡದಲ್ಲಿ ಶಿವಾಜಿ ಇರುವಂತೆ ಫೋಟೋ ಎಡಿಟ್ ಮಾಡಿದ್ದಾರೆ. ಅಂಬಾಭವಾನಿ ದೇವಿಯ ಮುಂದೆ ಶಿವಾಜಿ ಮಂಡಿಯೂರಿ ಪ್ರಾರ್ಥಿಸುತ್ತಿರುವ ಚಿತ್ರವನ್ನು ಕತ್ತರಿಸಿ, ಟಿಪ್ಪು ಸುಲ್ತಾನ್‌ನ ಮುಂದೆ ಮಂಡಿಯೂರಿ ಕುಳಿತು ಪ್ರಾರ್ಥಿಸುತ್ತಿರುವಂತೆ ಕೂರಿಸಿ ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಯಾದಗಿರಿ ನಗರದ ಅರ್ಸನ್ ಶೇಕ್ ಹಾಗೂ ಶೇಕ್ ಇರ್ಫಾನ್ ಎಂಬ ಇಬ್ಬರು ಈ ಕೃತ್ಯ ಎಸಗಿದ್ದಾರೆ. ಮಾಹಿತಿ ತಿಳಿದ ಕೂಡಲೆ ನಗರ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ ನೂರಾರು ಹಿಂದೂ ಕಾರ್ಯಕರ್ತರು ಕೂಡಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ಎಡಿಟ್ ಮಾಡಿರುವ ಚಿತ್ರವನ್ನು ಯುವಕರು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹಾಕಿ ಅವಮಾನ ಮಾಡಿ ಅದರ ವೀಡಿಯೋ ಕೂಡ ಹರಿಬಿಟ್ಟಿದ್ದಾರೆ. ಈ ಮೂಲಕ ಹಿಂದೂ ಭಾವನೆಗೆ ಧಕ್ಕೆಯಾಗುವ ರೀತಿ ವರ್ತಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಒರಿಜಿನಲ್ ಅಂತ ಸಿಎಂ ಇಬ್ರಾಹಿಂ ಬೋರ್ಡ್ ಹಾಕಿಕೊಳ್ಳಲಿ: ಹೆಚ್‍ಡಿಕೆ
ಈ ಕುರಿತು ದೂರು ನೀಡಲು ಆಗಮಿಸಿದ ಹಿಂದೂ ಸಂಘಟನೆ ಯುವಕರು ತಡರಾತ್ರಿಯವರೆಗೂ ಯಾದಗಿರಿ ನಗರ ಠಾಣೆ ಮುಂದೆ ಜಮಾಯಿಸಿದರು. ಹಿಂದೂ ಕಾರ್ಯಕರ್ತ ಶಿವಕುಮಾರ್ ದೂರು ನೀಡಿದ್ದು, ಆರೋಪಿಗಳಾದ ಅರ್ಸನ್ ಶೇಕ್ ಹಾಗೂ ಶೇಕ್ ಇರ್ಫಾನ್ ವಿರುದ್ಧ ನಗರ ಠಾಣೆಯಲ್ಲಿ ಐಪಿಸಿ 295 (ಎ) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಆಸ್ಪತ್ರೆಗೆ ದಾಖಲು – ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಮಾಜಿ ಸಿಎಂ
ಬೆಳಗಾವಿ: ಮರಾಠಾ (Marathas) ಮತಗಳ ಓಲೈಕೆಯಲ್ಲಿ ಕನ್ನಡ ಮಹನೀಯರ (Kannadigas) ಮರೆತರಾ ಬೆಳಗಾವಿ (Belagavi) ರಾಜಕಾರಣಿಗಳು ಎಂಬುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಶುರುವಾಗಿದೆ. ಮರಾಠಾ ಮತಗಳ ಓಲೈಕೆಯಲ್ಲಿ ಕನ್ನಡ ಮಹನೀಯರನ್ನು ಮರಿಬೇಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಳಗಾವಿ ತಾಲೂಕಿನ 3 ಕ್ಷೇತ್ರದಲ್ಲಿ ಮರಾಠಾ ಮತಗಳ ಓಲೈಕೆಗೆ ‘ಪ್ರತಿಮೆ’ ಪಾಲಿಟಿಕ್ಸ್ ನಡೆಯುತ್ತಿದೆ. ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮರಾಠಾ ಮತಗಳನ್ನು ಸೆಳೆಯಲು ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು ನಾನಾ ಕಸರತ್ತು ನಡೆಸಿದ್ದಾರೆ. ಬಿಜೆಪಿ-ಕಾಂಗ್ರೆಸ್ ಮಧ್ಯೆ ಮರಾಠಾ ಮತಗಳ ಓಲೈಕೆಗೆ ಪೈಪೋಟಿ ನಡೆಯುತ್ತಿದ್ದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ರಾಜಹಂಸಗಡದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆಗೆ ಪೈಪೋಟಿ ನಡೆಯುತ್ತಿದೆ.
ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಮಧ್ಯೆ ಕ್ರೆಡಿಟ್ ಫೈಟ್ ಜೋರಾಗಿದೆ. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತಿಚೆಗೆ ಬಿಜೆಪಿ ಶಾಸಕ ಅನಿಲ್ ಬೆನಕೆ ಸಂಭಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಿದ್ದರು. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಿವಚರಿತ್ರೆ ಉದ್ಘಾಟನೆಗೆ ಬಿಜೆಪಿ ಶಾಸಕ ಅಭಯ್ ಪಾಟೀಲ್ ತಯಾರಿ ಮಾಡಿಕೊಂಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಕಲಾಕೃತಿ ಮೂಲಕ ಪರಿಚಯಿಸುವ ಧ್ವನಿ ಬೆಳಕಿನ ಕಾರ್ಯಕ್ರಮ ಶಿವಚರಿತ್ರೆ ಉದ್ದೇಶವನ್ನು ಶಾಸಕ ಅಭಯ್ ಪಾಟೀಲ್ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸರ್ಕಾರದಿಂದ ಖಡಕ್ ಸೂಚನೆ
ಪೀರನವಾಡಿಯಲ್ಲಿ ಹೋರಾಟ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆಗೆ ವರ್ಷಗಳೇ ಕಳೆದು ಹೋದವು. ಇತ್ತ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ವಿಶ್ವಗುರು ಬಸವಣ್ಣ ಅಶ್ವಾರೂಢ ಮೂರ್ತಿಯನ್ನು ಕಳೆದ 2008ರಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ ಈವರೆಗೂ ಅಧಿಕೃತವಾಗಿ ವಿಶ್ವಗುರು ಬಸವಣ್ಣ ಪುತ್ಥಳಿ ಅಧಿಕೃತವಾಗಿ ಲೋಕಾರ್ಪಣೆ ಕಂಡಿಲ್ಲ. 2008ರಲ್ಲಿ ಅಭಯ್ ಪಾಟೀಲ್ ಶಾಸಕರಾಗಿದ್ದಾಗ ಸ್ವಂತ ಖರ್ಚಿನಲ್ಲಿ ಬಸವಣ್ಣ ಮೂರ್ತಿ ಪ್ರತಿಷ್ಠಾನೆ ಮಾಡಿದ್ದರು. ರಾಷ್ಟ್ರೀಯ ಹೆದ್ದಾರಿ 4, ರಾಜ್ಯಹೆದ್ದಾರಿ ಮಧ್ಯೆ ವೃತ್ತದಲ್ಲಿ ವಿಶ್ವಗುರು ಬಸವಣ್ಣ ಅಶ್ವಾರೂಢ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಆದರೆ ಈವರೆಗೂ ಅಧಿಕೃತವಾಗಿ ಲೋಕಾರ್ಪಣೆಗೊಂಡಿಲ್ಲ.
ಬೆಳಗಾವಿ ರಾಜಕಾರಣಿಗಳ ನಡೆಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ‘ಜಾನಿ ಜಾನಿ ಎಸ್ ಪಪ್ಪಾ.. ಬೆಳಗಾವಿ ಅಭಿವೃದ್ಧಿ ನೋ ಪಪ್ಪಾ.. ಇಲ್ಲಿ ಬರೀ ಮರಾಠಿಗರ ಓಲೈಕೆ ಹಾ.. ಹಾ..’ ಎಂದು ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇದೆ. ಆದರೆ ಮರಾಠಾ ಮತಗಳ ಓಲೈಕೆಯಲ್ಲಿ ಕನ್ನಡ ಮಹನೀಯರ ಮರಿಬೇಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕುತೂಹಲಕ್ಕೆ ಕಾರಣವಾಯ್ತು ಕರಾವಳಿ ಸ್ವಾಮೀಜಿಗಳ ಜೊತೆಗಿನ ನಡ್ಡಾ ಸಭೆ
LIVE TV
[brid partner=56869869 player=32851 video=960834 autoplay=true]
ನವದೆಹಲಿ: ಭಾರತೀಯ ಕರೆನ್ಸಿಯ (Indian Currency) ನೋಟುಗಳ ಲಕ್ಷ್ಮೀದೇವಿ ಹಾಗೂ ಗಣೇಶನ ಚಿನ್ಹೆಗಳನ್ನು ಮುದ್ರಿಸಬೇಕು ಎನ್ನುವ ದೆಹಲಿ ಮುಖ್ಯಮಂತ್ರಿ (Delhi Chief Minister) ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸಲಹೆಗೆ ಬಿಜೆಪಿ (BJP) ನಾಯಕರೊಬ್ಬರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
200 ರೂ. ಮುಖಬೆಲೆಯ ನೋಟಿನ ಮೇಲೆ ಛತ್ರಪತಿ ಶಿವಾಜಿ ಚಿತ್ರವನ್ನು (Chhatrapati Shivaji Photo) ಫೋಟೋಶಾಪ್ (PhotoShop) ಮಾಡಿ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಿಜೆಪಿ (BJP) ನಾಯಕ ನಿತೇಶ್ ರಾಣೆ ಹಂಚಿಕೊಂಡು ವಿವಾದ ಹುಟ್ಟುಹಾಕಿದ್ದಾರೆ. ಇದನ್ನೂ ಓದಿ: ನೋಟುಗಳ ಮೇಲೆ ಲಕ್ಷ್ಮಿ, ಗಣೇಶನ ಫೋಟೋವನ್ನು ಮುದ್ರಿಸಿ – ಮೋದಿಗೆ ಕೇಜ್ರಿವಾಲ್ ಮನವಿ
ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯ ಎದುರಾಳಿಯಾಗಿ ಹೊರಹೊಮ್ಮಿರುವ ಕೇಜ್ರಿವಾಲ್, ಭಾರತೀಯ ಕರೆನ್ಸಿಯ (Indian Currency) ಮೇಲೆ ಲಕ್ಷ್ಮೀದೇವಿ ಮತ್ತು ಗಣೇಶನ ಚಿತ್ರಗಳನ್ನು ಮುದ್ರಿಸುವಂತೆ ಸೂಚಿಸಿದ್ದಾರೆ. ಇದು ಆರ್ಥಿಕತೆ ಹೆಚ್ಚಿಸುವ ಒಂದು ಮಾರ್ಗವಾಗಿದೆ. ಜೊತೆಗೆ ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿತವಾಗುವುದನ್ನು ತಡೆಯುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಸಲಹೆಯು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ತೀವ್ರ ವಾಗ್ದಾಳಿಗೆ ಮುಂದಾಗಿದ್ದಾರೆ. ಕೇಜ್ರಿವಾಲ್ ತಮ್ಮ ಸರ್ಕಾರದ ದೋಷಗಳು ಹಾಗೂ ಎಎಪಿ ವಿರೋಧಿ ಮನಸ್ಥಿತಿಯನ್ನು ಬೇರೆಡೆಗೆ ಸೆಳೆಯಲು ರಾಜಕೀಯ ನಾಟಕವಾಡುತ್ತಿದೆ ಎಂದು ಕಿಡಿಕಾರಿದೆ.
Live Tv
[brid partner=56869869 player=32851 video=960834 autoplay=true]
ನ್ಯಾಷನಲ್ ಸ್ಟಾರ್ ಯಶ್ `ಕೆಜಿಎಫ್ ಚಾಪ್ಟರ್ 2′ ಸಿನಿಮಾ ಸಕ್ಸಸ್ ನಂತರ ವರ್ಲ್ಡ್ ವೈಡ್ ಫ್ಯಾನ್ಸ್ ಇದ್ದಾರೆ. ಈ ಚಿತ್ರದ ನಂತರ ಯಶ್ ಮುಂದಿನ ನಡೆ ಏನು ಎಂಬುದರ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳ ಬಳಗ ಹೊಂದಿರುವ ಯಶ್‌ಗೆ ಮಹಾರಾಷ್ಟ್ರ ಫ್ಯಾನ್ಸ್ ಮನವಿಯೊಂದನ್ನ ಮಾಡಿದ್ದಾರೆ.
`ಕೆಜಿಎಫ್’ ಸಿನಿಮಾ ಭರ್ಜರಿ ಸಕ್ಸಸ್ ನಂತರ ಯಶ್ ರೇಂಜೇ ಬೇರೇ ಲೆವೆಲ್‌ಗೆ ಹೋಗಿದೆ. ಯಶ್ ಸಿನಿಮಾ ಅಂದ್ರೆ ಕಾತರದಿಂದ ಕಾಯುತ್ತಾರೆ ಅಭಿಮಾನಿಗಳು. ಗಾಂಧಿನಗರದಲ್ಲಿ ಒಂದೇ ಚರ್ಚೆ ಯಶ್ ಮುಂದಿನ ಸಿನಿಮಾ ಯಾವುದು, ರಾಕಿಭಾಯ್ ಯಾವ ಅವತಾರವೆತ್ತಿದ್ರೆ ಚೆನ್ನಾಗಿರುತ್ತೆ ಅಂತಾ ಅಭಿಮಾನಿಗಳೇ ಲೆಕ್ಕಚಾರ ಹಾಕ್ತಿದ್ದಾರೆ. ಮಹಾರಾಷ್ಟ್ರದ ಅಭಿಮಾನಿಗಳು, ತಮ್ಮ ನಾಯಕ ಛತ್ರಪತಿ ಶಿವಾಜಿ ಅವತಾರದಲ್ಲಿ ಕಾಣಿಸಿಕೊಳ್ಳುವಂತೆ ಯಶ್‌ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?
ಯಶ್ ಈಗ ಕನ್ನಡದ ನಟನಾಗಿ ಉಳಿದಿಲ್ಲ. ವಿಶ್ವದ ಎಲ್ಲೆಡೆ ಅಭಿಮಾನಿಗಳ ಪ್ರೀತಿ ಗಿಟ್ಟಿಸಿಕೊಂಡಿರುವ ಯಶ್‌ಗೆ ಛತ್ರಪತಿ ಶಿವಾಜಿ ಅವತಾರದಲ್ಲಿ ಕಾಣಿಸಿಕೊಳ್ಳುವಂತೆ ಮಹಾರಾಷ್ಟ್ರದ ಫ್ಯಾನ್ಸ್ ಕೇಳಿಕೊಂಡಿದ್ದಾರೆ. ಶಿವಾಜಿ ಅವರ ಬಯೋಪಿಕ್ ಮಾಡುವಂತೆ ಕೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಛತ್ರಪತಿ ಶಿವಾಜಿ ಲುಕ್‌ನಲ್ಲಿ ಯಶ್ ಫ್ಯಾನ್ ಮೇಡ್ ಪೋಸ್ಟರ್ ಮಾಡಿ ಬಿಟ್ಟಿದ್ದಾರೆ.
ಮುಂಬೈ: ಯೋಗಿ ಆದಿತ್ಯನಾಥ್ ಅವರ ಇತ್ತೀಚೆಗೆ ಪಾಲ್ಗರ್ ಭೇಟಿ ವೇಳೆ ಅವರ ಚಪ್ಪಲಿಯಿಂದಲೇ ಅವರಿಗೆ ಹೊಡೆಯಬೇಕು ಅಂತ ಅನ್ನಿಸಿತು ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಕಿಡಿ ಕಾರಿದ್ದಾರೆ.
ಯೋಗಿಯವರು ಚಪ್ಪಲಿ ಹಾಕಿಕೊಂಡೆ ಮರಾಠ ಯೋಧ ಛತ್ರಪತಿ ಶಿವಾಜಿಯವರ ಫೋಟೋಕ್ಕೆ ಹಾರವನ್ನು ಹಾಕಿದ್ದನ್ನು ನೋಡಿ ಅದೇ ಚಪ್ಪಲಿಯಿಂದ ಅವರ ಮುಖಕ್ಕೆ ಹೊಡೆಯುವ ಮನಸ್ಸಾಯಿತು. ಯೋಗಿಯವರು ಕಪಟವೇಷಧಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಆದಿತ್ಯನಾಥ್ ಯೋಗಿ ಅಲ್ಲ ಒಬ್ಬ ಭೋಗಿ. ಯೋಗಿ ಅಗಿದ್ದರೆ ಎಲ್ಲವನ್ನು ತ್ಯಜಿಸಿ ಗುಹೆಯಲ್ಲಿ ಕೂರಬೇಕಿತ್ತು. ಇವರು ಮುಖ್ಯಮಂತ್ರಿ ಗಾದಿಯಲ್ಲಿ ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಹಿಂದಿನ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು ತಮ್ಮ ದಾರಿಯಲ್ಲಿ ಬರುವವರನ್ನು ಬಿಜೆಪಿ ಕೊಲೆಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇವೆ. ನಾಸಿಕ್ ಮತ್ತು ಪರ್ಭಾನಿ ಹಾಗೂ ಪಾಲ್ಗರ್ ಲೋಕಸಭಾ ಉಪಚುನಾವಣೆ ಗೆಲುವು ವಿಜಯದ ಟ್ರೇಲರ್ ಅಷ್ಟೆ. ಮುಂದಿನ ನಮ್ಮ ಹೆಜ್ಜೆಗಳು ಮಹಾರಾಷ್ಟ್ರ ರಾಜಕಾರಣದ ದಿಶೆಯನ್ನೇ ಬದಲಾಯಿಸುತ್ತದೆ ಎಂದು ಗುಡುಗಿದರು.