Tag: ಛತ್ತೀಸ್ ಗಡ

  • ರಾಹುಲ್ ಕಂಗೆಡಿಸಿದೆ ರಾಜಸ್ಥಾನ ಸಿಎಂ ಆಯ್ಕೆ

    ರಾಹುಲ್ ಕಂಗೆಡಿಸಿದೆ ರಾಜಸ್ಥಾನ ಸಿಎಂ ಆಯ್ಕೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ನೆಲೆಯಿಲ್ಲದೇ ಕಂಗಾಲಾಗಿದ್ದ ಕಾಂಗ್ರೆಸ್ ಪಂಚರಾಜ್ಯಗಳ ಚುನಾವಣೆ ಬಳಿಕ ಚೇತರಿಕೆ ಕಂಡಿದೆ. ಬಿಜೆಪಿ ಭದ್ರಕೋಟೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಡದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ಪಕ್ಷದಲ್ಲೀಗ ಸಿಎಂ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದೆ.

    ಸಿಎಂ ಆಯ್ಕೆ ಕುರಿತು ನವದೆಹಲಿ ತುಘಲಕ್ ರಸ್ತೆಯ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸಿತ್ತು. ಈ ಸಂಬಂಧ ಮಧ್ಯಪ್ರದೇಶದ ನೂತನ ಸಿಎಂ ಆಗಿ ಕಮಲ್‍ನಾಥ್‍ರನ್ನು ಅಧಿಕೃತವಾಗಿ ಆಯ್ಕೆ ಮಾಡಿ ಹೈಕಮಾಂಡ್ ಘೋಷಣೆ ಹೊರಡಿಸಿ ಹೊಸ ಯುಗ ಆರಂಭವಾಗಲಿ ಅಂತ ಶುಭಕೋರಿದೆ.

    ಆದ್ರೆ ರಾಜಸ್ಥಾನ ಸಿಎಂ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ ನಾಯಕರಿಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ತೀವ್ರ ಪೈಪೋಟಿ ಇದ್ದು, ಮಧ್ಯರಾತ್ರಿ 12 ಗಂಟೆವರೆಗೆ ಸಭೆ ನಡೆಸಿದ್ರೂ ಅಂತಿಮವಾಗಿಲ್ಲ. ಉನ್ನತ ಮೂಲಗಳ ಪ್ರಕಾರ ಅಶೋಕ್ ಗೆಹ್ಲೋಟ್ ಅವರಿಗೆ ಸಿಎಂ ಪಟ್ಟ ನೀಡಲು ಸೋನಿಯಾ, ರಾಹುಲ್ ನಿರ್ಧರಿಸಿದ್ದಾರೆ. ಆದ್ರೆ ಸಚಿನ್ ಪೈಲಟ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜೈಪುರದಲ್ಲಿ ಸಚಿನ್ ಪೈಲಟ್ ಪರವಾಗಿ ಪ್ರತಿಭಟನೆಗಳು ಜೋರಾಗಿದ್ದು, ರಾಹುಲ್ ಗಾಂಧಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಛತ್ತೀಸ್‍ಗಡ ಸಿಎಂ ಆಯ್ಕೆ ಸಂಬಂಧ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಘೇಲಾ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಟಿ.ಎಸ್. ಸಿಂಗ್ದೇವ್, ಚರಣ್ ದಾಸ್ ಮಹಾಂತ್‍ಗೆ ರಾಹುಲ್ ಗಾಂಧಿ ಬುಲಾವ್ ನೀಡಿದ್ದಾರೆ. ಮೂವರು ನಾಯಕರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದು ಇಂದು ಬಹುತೇಕ ಎರಡು ರಾಜ್ಯಗಳಿಗೆ ಸಿಎಂ ಆಯ್ಕೆ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಂಚ ಫಲಿತಾಂಶದ Live Updates

    ಪಂಚ ಫಲಿತಾಂಶದ Live Updates

    ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದ್ದು, ಮತ ಎಣಿಕೆ ಆರಂಭವಾಗಿದೆ. ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಹಲವು ಹಂತಗಳಲ್ಲಿ ಚುನಾವಣೆ ಎದುರಿಸಿದ್ದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ, ತೆಲಂಗಾಣ, ಮಿಜೋರಾಂ ಜನಾದೇಶ ಏನೆಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.

    ಮಧ್ಯಾಹ್ನ 1.23: ಮಧ್ಯಪ್ರದೇಶದಲ್ಲಿ ನೆಕ್ ಟು ನೆಕ್ ಫೈಟ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್

    ಮಧ್ಯಾಹ್ನ 12.38: ತೆಲಂಗಾಣ ಸಿಎಂ 2ನೇ ಬಾರಿಗೆ ಆಗಿ ಚಂದ್ರಶೇಖರ್ ರಾವ್ ಅವರು ನಾಳೆ ಪ್ರಮಾಣ ವಚನ ಸ್ವೀಕಾರ

    ಮಧ್ಯಾಹ್ನ 12.09: ಮಧ್ಯಪ್ರದೇಶದಲ್ಲಿ ಬಿಜೆಪಿ 111, ಕಾಂಗ್ರೆಸ್ 106 ಹಾಗೂ ಇತರೆ 13- ರಾಜಸ್ಥಾನದಲ್ಲಿ ಬಿಜೆಪಿ 73, ಕಾಂಗ್ರೆಸ್ 102 ಹಾಗೂ ಇತರೆ 24- ತೆಲಂಗಾಣದಲ್ಲಿ ಟಿಆರ್ ಎಸ್ 84, ಕಾಂಗ್ರೆಸ್ 26, ಬಿಜೆಪಿ 2 ಹಾಗೂ ಇತರೆ 7- ಮಿಜೋರಾಂನಲ್ಲಿ ಕಾಂಗ್ರೆಸ್ 6, ಎಂಎನ್‍ಎಫ್ 26, ಬಿಜೆಪಿ 1 ಹಾಗೂ ಇತರೆ 7- ಛತ್ತೀಸ್ ಗಡದಲ್ಲಿ ಬಿಜೆಪಿ 19, ಕಾಂಗ್ರೆಸ್ 64, ಬಿಎಸ್‍ಪಿ 5 ಹಾಗೂ ಇತರೆ 2 .

    ಬೆಳಗ್ಗೆ 11.38: ಮಧ್ಯಪ್ರದೇಶದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ

    ಬೆಳಗ್ಗೆ 11.30: ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಇಂದಿಗೆ ಒಂದು ವರ್ಷ. ಹೀಗಾಗಿ ಇಂದಿನ ಈ ಜಯ ಅವರಿಗೆ ಉಡುಗೊರೆ ಅಂತ ರಾಜಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲೆಟ್ ಹೇಳಿಕೆ

    ಬೆಳಗ್ಗೆ 11.10: ತೆಲಂಗಾಣದಲ್ಲಿ ಕೆಸಿಆರ್ ಗೆ 17 ಸಾವಿರ ಮತಗಳ ಲೀಡ್, ಮಿಜೋರಾಂನಲ್ಲಿ ಎಂಎನ್‍ಎಫ್ ಗೆ ಜಯ

    ಬೆಳಗ್ಗೆ 10:39: ಅಧಿವೇಶನಕ್ಕೆ ಸಂಬಂಧಿಸಿದಂತೆ ಮಾತನಾಡಿ, ಗೆದ್ದವರಿಗೆ ಶುಭಾಶಯ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ರು.

    ಬೆಳಗ್ಗೆ 10.20: ರಾಜಸ್ಥಾನದಲ್ಲಿ ಬಿಜೆಪಿ 81, ಕಾಂಗ್ರೆಸ್ 97, ಇತರೆ 16. ಮಧ್ಯಪ್ರದೇಶದಲ್ಲಿ ಬಿಜೆಪಿ 102, ಕಾಂಗ್ರೆಸ್ 104 ಹಾಗೂ ಇತರೆ 14 ಇದೆ. ಮಿಜೋರಾಂನಲ್ಲಿ ಕಾಂಗ್ರೆಸ್ 10, ಎಂಎನ್ ಎಫ್ 26, ಬಿಜೆಪಿ 1 ಹಾಗೂ ಇತರೆ 2. ತೆಲಂಗಾಣದಲ್ಲಿ ಟಿಆರ್ ಎಸ್ 76 ಕಾಂಗ್ರೆಸ್ 33, ಬಿಜೆಪಿ 3 ಹಾಗೂ ಇತರೆ 6. ಛತ್ತೀಸ್ ಗಡದಲ್ಲಿ ಬಿಜೆಪಿ 27, ಕಾಂಗ್ರೆಸ್ 58 ಬಿಎಸ್‍ಪಿ 3

    ಬೆಳಗ್ಗೆ 9.57: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 107, ಛತ್ತೀಸ್ ಗಡದಲ್ಲಿ ಕಾಂಗ್ರೆಸ್ 46, ರಾಜಸ್ಥಾನದಲ್ಲಿ ಕಾಂಗ್ರೆಸ್ 92, ಹಾಗೂ ಮಿಜೋರಾಂನಲ್ಲಿ ಕಾಂಗ್ರೆಸ್ 14, ತೆಲಂಗಾಣದಲ್ಲಿ ಟಿಆರ್ ಎಸ್ 65 ಮುನ್ನಡೆ ಗಳಿಸಿದೆ.

    ಬೆಳಗ್ಗೆ 9.37: ಮಧ್ಯಪ್ರದೇಶ, ಛತ್ತೀಸ್ ಗಡ, ರಾಜಸ್ಥಾನ, ಮಿಜೋರಾಂನಲ್ಲಿ ಕಾಂಗ್ರೆಸ್, ತೆಲಂಗಾಣದಲ್ಲಿ ಟಿಆರ್ ಎಸ್ ಮುನ್ನಡೆ

    ಬೆಳಗ್ಗೆ 9.28: ಛತ್ತಿಸ್ ಗಡದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ

    ಬೆಳಗ್ಗೆ 9.10: ಆರಂಭಿಕ ಮುನ್ನಡೆ ಸಂತೋಷ ತಂದಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಾವೇ ಸರ್ಕಾರ ರಚನೆ ಮಾಡಲಿದ್ದೇವೆ: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್

    ಬೆಳಗ್ಗೆ 9.05: ಬೆಳಗ್ಗೆ 9.05: ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ-ತೆಲಂಗಾಣದಲ್ಲಿಯೂ TRS ಮುನ್ನಡೆ

    ಬೆಳಗ್ಗೆ 8:45: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ , ತೆಂಗಾಣದಲ್ಲಿ ಕಾಂಗ್ರೆಸ್ ಗೆ ಮುನ್ನಡೆ, ಮಿಜೋರಾಂನಲ್ಲಿ ಬಿಜೆಪಿ ಮುನ್ನಡೆ, ಛತ್ತೀಸ್ ಗಡದಲ್ಲಿ  ಕಾಂಗ್ರೆಸ್ ಮುನ್ನಡೆ.

    ಬೆಳಗ್ಗೆ 8: ಚುನಾವಣಾ ಮತ ಎಣಿಕೆ ಪ್ರಾರಂಭ