Tag: ಛತ್ತೀಸಗಡ

  • ಲೀಟರ್‌ ಗೋಮೂತ್ರಕ್ಕೆ 4 ರೂ. – ರೈತರಿಂದ ಖರೀದಿಗೆ ಮುಂದಾದ ಸರ್ಕಾರ

    ಲೀಟರ್‌ ಗೋಮೂತ್ರಕ್ಕೆ 4 ರೂ. – ರೈತರಿಂದ ಖರೀದಿಗೆ ಮುಂದಾದ ಸರ್ಕಾರ

    ರಾಯ್ಪುರ: ರೈತರು ಹೆಚ್ಚಿನ ಆದಾಯ ಗಳಿಸುವಂತೆ ಮಾಡಿ ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೋಮೂತ್ರವನ್ನು ಖರೀದಿಸಲು ಛತ್ತೀಸಗಡದ ಕಾಂಗ್ರೆಸ್‌ ಸರ್ಕಾರ ಯೋಜನೆ ರೂಪಿಸಿದೆ.

    ʼಗೋದಾನ ನ್ಯಾಯ ಯೋಜನೆʼ ಅಂಗವಾಗಿ ಪ್ರತಿ ಲೀಟರ್‌ಗೆ 4 ರೂ. ದರದಲ್ಲಿ ಗೋಮೂತ್ರ ಖರೀದಿಸಲು ಸರ್ಕಾರ ಮುಂದಾಗಿದೆ. ರಾಜ್ಯಾದ್ಯಂತ ಸುಸ್ಥಿರ ಗೋಸಂರಕ್ಷಣೆ ಉತ್ತೇಜಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ದೇಶದಲ್ಲಿ ಮಂಕಿಪಾಕ್ಸ್‌ ಭೀತಿ – ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆಗೆ ಕೇಂದ್ರ ಸೂಚನೆ

    Bhupesh Baghel

    ಜುಲೈ 28 ರಂದು ನಡೆಯಲಿರುವ ‘ಹರೇಲಿ ತಿಹಾರ್’ ಹಬ್ಬದ ಸಂದರ್ಭದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು. ನಮ್ಮ ಸರ್ಕಾರವು ಗೋದಾನ್‌ ನ್ಯಾಯ ಯೋಜನೆಯಡಿ ಗೋಮೂತ್ರ ಖರೀದಿ ಪ್ರಕ್ರಿಯೆಯನ್ನು ಮೊದಲ ಬಾರಿಗೆ ಆರಂಭಿಸಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರ ಹೇಳಿದೆ.

    ಗೋದಾನ್ ನ್ಯಾಯ ಮಿಷನ್ ನಿರ್ದೇಶಕ ಅಯ್ಯಾಜ್ ತಾಂಬೋಳಿ ಅವರು, ಈ ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಬ್ರಾಗಳನ್ನು ತೆಗೆದುಹಾಕಲು ಒತ್ತಾಯ – ತನಿಖೆಗೆ ಆದೇಶ

    ಜಿಲ್ಲಾ ಕೇಂದ್ರಗಳಲ್ಲಿರುವ ಗೋಠಾಣೆಗಳು (ಗೋಶಾಲೆ) ಗೋಮೂತ್ರ ಖರೀದಿಸಲಿವೆ. ಆಯಾ ಜಿಲ್ಲೆಯ ರೈತರು ಸಂಗ್ರಹಿಸಿ ಗೋಮೂತ್ರವನ್ನು ಈ ಗೋಠಾಣೆಗಳಿಗೆ ತಂದು ನೀಡಬೇಕು. ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಗಳಿಂದ ಗೋಮೂತ್ರ ಖರೀದಿಗೆ ಕನಿಷ್ಠ ಬೆಲೆ ಲೀಟರ್‌ಗೆ 4 ರೂ.ಗೆ ಪ್ರಸ್ತಾವಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಂಗ್ರಹಿಸಿದ ಗೋಮೂತ್ರವನ್ನು ಸ್ವ-ಸಹಾಯ ಮಹಿಳಾ ಗುಂಪುಗಳ ಸಹಾಯದಿಂದ ಕೀಟ ನಿಯಂತ್ರಣ ಉತ್ಪನ್ನಗಳು ಮತ್ತು ನೈಸರ್ಗಿಕ ದ್ರವ ಗೊಬ್ಬರವನ್ನು ತಯಾರಿಸಲು ಬಳಸಲಾಗುತ್ತದೆ. ಇದರಿಂದ ಬೇಸಾಯದಲ್ಲಿ ರಸಗೊಬ್ಬರದ ವೆಚ್ಚ ಮತ್ತು ಹೊಲಗಳಲ್ಲಿ ದ್ರವ ಗೊಬ್ಬರಗಳ ಬಳಕೆ ಕಡಿಮೆಯಾಗುತ್ತದೆ. ಇದನ್ನೂ ಓದಿ: ಮುಗೀತು ರಾಷ್ಟ್ರಪತಿ ಚುನಾವಣೆ, 21ಕ್ಕೆ ಫಲಿತಾಂಶ – ದ್ರೌಪದಿ ಮುರ್ಮು ಪ್ರಥಮ ಪ್ರಜೆ ಆಗೋದು ಖಚಿತ

    Live Tv
    [brid partner=56869869 player=32851 video=960834 autoplay=true]

  • ಪತ್ನಿಯೊಂದಿಗೆ ಕಾರು ಕದ್ದ ಖದೀಮರು – ಪೊಲೀಸರಿಗೆ ದೂರು ನೀಡಿದ ಪತಿ

    ಪತ್ನಿಯೊಂದಿಗೆ ಕಾರು ಕದ್ದ ಖದೀಮರು – ಪೊಲೀಸರಿಗೆ ದೂರು ನೀಡಿದ ಪತಿ

    ಛತ್ತೀಸ್‍ಗಡ: ವ್ಯಕ್ತಿಯೊಬ್ಬನ ಪತ್ನಿ ಮತ್ತು ಆತನ ಟಾಟಾ ಟಿಗೋ ಕಾರನ್ನು ಅಪರಿಚಿತ ವ್ಯಕ್ತಿಗಳಿಬ್ಬರು ಕದ್ದು ಬಳಿಕ ಮಹಿಳೆಯನ್ನು ಹೆದ್ದಾರಿಯೊಂದರಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿರುವ ಘಟನೆ ಪಂಜಾಬ್ ಡೇರಾ ಬಸ್ಸಿ ಸಮೀಪದ ಛತ್ತೀಸ್‍ಗಡದಲ್ಲಿ ನಡೆದಿದೆ.

    ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ರಾಜೀವ್ ಚಂದ್ ಮತ್ತು ಅವರ ಪತ್ನಿ ರಿತು ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ತಮ್ಮ ಮಕ್ಕಳ ಶಾಲೆಯ ಫೀಸ್ ಕಟ್ಟಲು ಹೋಗಿದ್ದರು. ಈ ವೇಳೆ ರಿತು ಕಾರಿನಲ್ಲಿಯೇ ಕಾಯುವುದಾಗಿ ರಾಜೀವ್‍ಗೆ ತಿಳಿಸಿದ್ದಾರೆ. ಹೀಗಾಗಿ ರಾಜೀವ್ ಕಾರು ಕೀಯನ್ನು ವಾಹನದಲ್ಲಿಯೇ ಬಿಟ್ಟು ಫೀಸ್ ಕಟ್ಟಲು ಶಾಲೆಯೊಳಗೆ ಹೋಗಿದ್ದಾರೆ.

    ಅದೇ ವೇಳೆ ಇದ್ದಕ್ಕಿದ್ದಂತೆ ಮಾಸ್ಕ್ ಇಲ್ಲದೆ ಬಂದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಕುಳಿತುಕೊಂಡಿದ್ದಾರೆ. ಅವರಲ್ಲಿ ಒಬ್ಬ ಡ್ರೈವರ್ ಸೀಟಿನಲ್ಲಿ ಕುಳಿತರೆ ಮತ್ತೊಬ್ಬ ಹಿಂದಿನ ಸೀಟಿನಲ್ಲಿ ಕುಳಿತಿದ್ದ ರಿತುವನ್ನು ಆಕ್ರಮಿಸಿ ಅವಳ ಮುಖವನ್ನು ಮುಚ್ಚಿದರು. ಬಳಿಕ ಸುಮಾರು 5 ಕಿಮೀವರೆಗೂ ವಾಹನವನ್ನು ಚಲಾಯಿಸಿ ರಾಷ್ಟ್ರೀಯ ಹೆದ್ದಾರಿಯ ಅಂಬಾಲಾ ಟೋಲ್ ಪ್ಲಾಜಾದಲ್ಲಿ ರಿತುವನ್ನು ಕಾರಿನಿಂದ ಹೊರಕ್ಕೆ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾರೆ.

    ನಂತರ ದಂಪತಿ ಪೊಲೀಸರನ್ನು ಸಂಪರ್ಕಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ವಿಚಾರವಾಗಿ ಪೊಲೀಸರು ತನಿಖೆ ಆರಂಭಿಸಿದ್ದೇವೆ. ಟೋಲ್ ಪ್ಲಾಜಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಾಗಿದ್ದು, ದರೋಡೆಕೋರರನ್ನು ಗುರುತಿಸಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

  • ಛತ್ತೀಸ್‍ಗಡ ಮುಖ್ಯಮಂತ್ರಿಯಾಗಿ ಭೂಪೇಶ್ ಬಘೇಲ್ ಆಯ್ಕೆ

    ಛತ್ತೀಸ್‍ಗಡ ಮುಖ್ಯಮಂತ್ರಿಯಾಗಿ ಭೂಪೇಶ್ ಬಘೇಲ್ ಆಯ್ಕೆ

    ರಾಯ್‍ಪುರ: ತೀವ್ರ ಪೈಪೋಟಿ ಹೊಂದಿದ್ದ ಛತ್ತೀಸ್‍ಗಡ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಅಂತಿಮವಾಗಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಘೇಲ್ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ.

    ಮಂಗಳವಾರ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತಕ್ಕೆ 45 ಸ್ಥಾನಗಳು ಬೇಕಾಗಿತ್ತು. ಕಾಂಗ್ರೆಸ್ ಈ ಬಾರಿ ಬರೋಬ್ಬರಿ 68 ಸ್ಥಾನಗಳನ್ನು ಗೆಲ್ಲುವ ಮೂಲಕ ಸುಲಭವಾಗಿ ಬಹುಮತ ಸಾಧಿಸಿತ್ತು.

    ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಹೈಕಮಾಂಡ್‍ಗೆ ಮುಖ್ಯಮಂತ್ರಿ ಆಯ್ಕೆ ವಿಚಾರ ನಿದ್ದೆಗೆಡಿಸಿತ್ತು. ಏಕೆಂದರೆ ವಿಧಾನಸಭಾ ವಿರೋಧ ಪಕ್ಷ ನಾಯಕರಾಗಿದ್ದ ಟಿ.ಎಸ್.ಸಿಂಗ್ದೇವ್ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಭೂಪೇಶ್ ಬಘೇಲ್ ನಡುವೆ ತೀವ್ರ ಸ್ಪರ್ಧೆ ಏರ್ಪಟಿತ್ತು. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಕಾಂಗ್ರೆಸ್ – ಬಿಜೆಪಿ ಸೋಲಿಗೆ ಕಾರಣಗಳೇನು?

    ಭಾನುವಾರ ನವದೆಹಲಿಯ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯ ಕೈ ನಾಯಕರ ಸಭೆ ನಡೆದಿತ್ತು. ಬಳಿಕ ರಾಜಧಾನಿಯ ರಾಯ್‍ಪುರದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಒಮ್ಮತ ನಿರ್ಧಾರ ತೆಗೆದುಕೊಂಡು, ಅಂತಿಮವಾಗಿ ಹೈಕಮಾಂಡ್ ಹಾಗೂ ಸಭೆಯ ತೀರ್ಮಾನದಂತೆ ಭೂಪೇಶ್ ರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ನೂತನ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೋಮವಾರ ಛತ್ತೀಸ್ ಗಡ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಯಾರಿದು ಭೂಪೇಶ್ ಬಘೇಲ್?
    ಭೂಪೇಶ್ ಹಿಂದುಳಿದ ವರ್ಗದ ಕುರ್ಮಿ ಸಮುದಾಯಕ್ಕೆ ಸೇರಿದ ನಾಯಕ. ಈ ಹಿಂದೆ ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್ ಕ್ಯಾಬಿನೆಟ್‍ನಲ್ಲಿ ಹಾಗೂ 2000ನೇ ಇಸವಿಯಲ್ಲಿ ಅಜಿತ್ ಜೋಗಿ ನೇತೃತ್ವದ ಛತ್ತೀಸ್‍ಗಡ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2008 ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಇವರು, 2013ರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ರಾಜ್ಯದಲ್ಲಿ 15 ವರ್ಷಗಳ ಬಳಿಕ ಕಾಂಗ್ರೆಸ್ ಅನ್ನು ಅಧಿಕಾರದ ಗದ್ದುಗೆಗೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಾರಿ ಪಟನ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರು, ಬಿಜೆಪಿಯ ಮೋತಿಲಾಲ್ ಸಾಹು ವಿರುದ್ಧ 27,477 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಛತ್ತೀಸ್‍ಗಢದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಕಾಂಗ್ರೆಸ್ – ಬಿಜೆಪಿ ಸೋಲಿಗೆ ಕಾರಣಗಳೇನು?

    ಛತ್ತೀಸ್‍ಗಢದಲ್ಲಿ ಪ್ರಚಂಡ ಗೆಲುವು ಸಾಧಿಸಿದ ಕಾಂಗ್ರೆಸ್ – ಬಿಜೆಪಿ ಸೋಲಿಗೆ ಕಾರಣಗಳೇನು?

    ರಾಯ್‍ಪುರ: ಬಿಜೆಪಿಯ ಕೋಟೆಯಾದ ಛತ್ತೀಸ್‍ಗಢದಲ್ಲಿ 15 ವರ್ಷಗಳ ಬಳಿಕ ಮತದಾರ ‘ಕೈ’ ಕುಲುಕಿದ್ದಾನೆ.

    ಮೂರು ಬಾರಿ ಮುಖ್ಯಮಂತ್ರಿ ಆಗಿದ್ದ ರಮಣ್ ಸಿಂಗ್ ಕೆಳಗಿಳಿದಿದ್ದಾರೆ. 15 ವರ್ಷಗಳಿಂದ ಅಧಿಕಾರ ಬರ ಅನುಭವಿಸಿದ್ದ ಕಾಂಗ್ರೆಸ್ ಈ ಬಾರಿ ಚಿಗುರಿದೆ. ಮತ ಎಣಿಕೆ ಆರಂಭದಿಂದಲೂ ಕಾಂಗ್ರೆಸ್ ನಾಗಾಲೋಟದಲ್ಲೇ ಮುಂದುವರಿದಿತ್ತು.

    ಛತ್ತೀಸಗಡದ ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮಕ್ಕೆ 45 ಸ್ಥಾನಗಳು ಬೇಕು. ಇದರಲ್ಲಿ ಕಾಂಗ್ರೆಸ್ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದು, ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಆಡಳಿತರೂಢ ಬಿಜೆಪಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಇತರರು ಈ ಬಾರಿ 8 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದಾರೆ

    2013ರ ಚುನಾವಣೆಯಲ್ಲಿ ಬಿಜೆಪಿ 49 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 39 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇತರರು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರು.

    ಬಿಜೆಪಿ ಸೋಲಿಗೆ ಕಾರಣಗಳೇನು?
    – 10 ವರ್ಷದ ರಮಣ್‍ಸಿಂಗ್ ಆಡಳಿತಕ್ಕೆ ಬೇಸತ್ತು ಬಂದಿರುವ ತೀರ್ಪು ಇದಾಗಿದೆ. ಏಕೆಂದರೆ ಚಾವಲ್ ಬಾಬಾ ಎಂದೇ ಹಾಲಿ ಸಿಎಂ ರಮಣ್ ಸಿಂಗ್ ಮೇಲೆ 36 ಸಾವಿರ ಕೋಟಿ ರೂಪಾಯಿ ಪಡಿತರ ಅಕ್ಕಿ ಹಗರಣ ಹಾಗೂ 5 ಸಾವಿರ ಕೋಟಿ ರೂ. ಚಿಟ್ ಫಂಡ್ ಹಗರಣ ಆರೋಪ ಕೇಳಿಬಂದಿತ್ತು. ಅಲ್ಲದೇ ಅವರ ಪತ್ನಿ, ನಾದಿನಿಯರು ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದರು ಎನ್ನುವ ಆರೋಪ ಇದೆ.

    – ಬಿಜೆಪಿಯ ಸಂಘಟನೆ ಅಥವಾ ಪ್ರಧಾನಿ ನರೇಂದ್ರ ಮೋದಿ ಅಲೆ ಛತ್ತೀಸಗಢದಲ್ಲಿ ವಿಫಲವಾಗಿತ್ತು. ಸರ್ಕಾರದ ಮೇಲೆ ಮೊದಲೇ ಆಕ್ರೋಶಗೊಂಡಿದ್ದರಿಂದ ಮೋದಿ ಪ್ರಚಾರ ಮಾಡಿದ್ದ ಕ್ಷೇತ್ರಗಳಲ್ಲೂ ನಿರೀಕ್ಷಿತ ಮತ ಬೀಳಲಿಲ್ಲ.

    – ಬುಡಕಟ್ಟು ಪಾರ್ಟಿ ಎನ್ನುವ ಪಟ್ಟದಿಂದ ಹೊರ ಬಂದ ಕಾಂಗ್ರೆಸ್ ಈ ಬಾರಿ ಒಬಿಸಿ ಮುಖಂಡರನ್ನೇ ಅಗ್ರನಾಯಕರನ್ನಾಗಿ ನೇಮಿಸಿತ್ತು. ಬಗೇಲ್ ಕುರ್ಮಿ, ಸಾಹು, ವಿಪಕ್ಷ ನಾಯಕ, ಕಾಂಗ್ರೆಸ್ ಅಧ್ಯಕ್ಷ ಎಲ್ಲರೂ ಒಬಿಸಿ ನಾಯಕರು ಆಗಿದ್ದ ಕಾರಣ ಕಾಂಗ್ರೆಸ್‍ಗೆ ಜಾಕ್‍ಪಾಟ್ ಹೊಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv